ಆನ್‌ಲೈನ್‌ನಲ್ಲಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ

ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಗಿ

ಮೆಡಿಕಲ್ ಇನ್ಶೂರೆನ್ಸ್ ಪಾಲಿಸಿಗಳ ವಿಧಗಳ ವಿವರಣೆ

ನಿಮ್ಮ ಪ್ರೀತಿಪಾತ್ರರನ್ನು ಕಳೆದುಕೊಳ್ಳುವುದಕ್ಕಿಂತ ಹೆಚ್ಚು ನೋವು ಕೊಡುವ ಸಂಗತಿ ಮತ್ತೊಂದಿಲ್ಲ ಮತ್ತು ನೀವು ಅವರ ಚಿಕಿತ್ಸೆಯನ್ನು ಭರಿಸಲು ಸಾಧ್ಯವಾಗದ ಕಾರಣಕ್ಕೆ, ಅವರನ್ನು ಕಳೆದುಕೊಂಡರೆ ಅದು ಇನ್ನೂ ಕೆಟ್ಟದ್ದು. ದುಃಖದ ಸಮಯದಲ್ಲಿ ಕೇವಲ ನಮ್ಮವರು ಮಾತ್ರ ನಮಗೆ ಆಗುತ್ತಾರೆ. ಸರಿ ತಾನೇ? ನೀವೆಲ್ಲರೂ ಇದನ್ನು ಕೇಳಿರುವುದು ಮಾತ್ರವಲ್ಲದೇ ಜೀವನದಲ್ಲಿ ಹಲವಾರು ಬಾರಿ ಅನುಭವಿಸಿರುತ್ತೀರಿ.

ಭಾರತದಲ್ಲಿನ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು, ಹೆಲ್ತಕೇರ್ ಸೌಲಭ್ಯಗಳ ವೆಚ್ಚದಲ್ಲಿನ ಏರಿಕೆಯನ್ನು ಪರಿಗಣಿಸಿ ಬೇರೆಲ್ಲ ವಿಷಯಗಳಿಗಿಂತ ಉತ್ತಮ ಸಂರಕ್ಷಕವಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸಲು ವಿವಿಧ ರೀತಿಯ ಇನ್ಶೂರೆನ್ಸ್ ಪಾಲಿಸಿಗಳು ಲಭ್ಯ ಇವೆ. ಭಾರತದಲ್ಲಿ ಲಭ್ಯವಿರುವ ವಿವಿಧ ರೀತಿಯ ಹೆಲ್ತ್ ಇನ್ಶೂರೆನ್ಸಗಳನ್ನು ನಾವು ಚರ್ಚಿಸೋಣ.

ಭಾರತದಲ್ಲಿ 7 ವಿಧದ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು

1. ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್

ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು ನಿಮಗೆ, ನಿಮ್ಮ ಸಂಗಾತಿಗೆ, ಮಕ್ಕಳಿಗೆ ಮತ್ತು ಪೋಷಕರಿಗೆ ರಕ್ಷಣೆ ನೀಡಲು ನೀವು ಖರೀದಿಸಬಹುದಾದ ಪಾಲಿಸಿಯಾಗಿದೆ. ಈ ವಿಧದ ಇನ್ಶೂರೆನ್ಸ್ ಪಾಲಿಸಿಯು, ಗಾಯ ಮತ್ತು ಅನಾರೋಗ್ಯಕ್ಕೆ ಸಂಬಂಧಿಸಿದ ಚಿಕಿತ್ಸೆಗಳು, ಶಸ್ತ್ರಚಿಕಿತ್ಸೆಯ ವೆಚ್ಚಗಳು, ಕೊಠಡಿ ಬಾಡಿಗೆ, ಡೇಕೇರ್ ಕಾರ್ಯವಿಧಾನಗಳು ಮತ್ತು ಹೆಚ್ಚಿನವುಗಳಿಗೆ ಸಂಬಂಧಿಸಿದಂತೆ ನಿಮ್ಮ ವೈದ್ಯಕೀಯ ವೆಚ್ಚಗಳನ್ನು ಒಳಗೊಂಡಿದೆ.

ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಯೋಜನೆಯಡಿಯಲ್ಲಿ ಕವರ್ ಆಗುವ ಪ್ರತಿಯೊಬ್ಬ ಸದಸ್ಯರು ವೈಯಕ್ತಿಕ ಇನ್ಶೂರೆನ್ಸ್ ಮೊತ್ತವನ್ನು ಹೊಂದಿರುತ್ತಾರೆ. ಉದಾಹರಣೆಗೆ, ನಿಮ್ಮ ಸಂಗಾತಿ, 2 ಮಕ್ಕಳು ಮತ್ತು ನಿಮ್ಮನ್ನು ಒಳಗೊಂಡಂತೆ 3 ಲಕ್ಷ ರೂಗಳ ಇನ್ಶೂರೆನ್ಸ್ ಮೊತ್ತದ ವೈಯಕ್ತಿಕ ಹೆಲ್ತ್ ಪಾಲಿಸಿಯನ್ನು ನೀವು ತೆಗೆದುಕೊಂಡರೆ, ಕವರ್ ಆಗುವ ಪ್ರತಿಯೊಬ್ಬ ವ್ಯಕ್ತಿಯು ₹3 ಲಕ್ಷಗಳ ವೈಯಕ್ತಿಕ ಮೊತ್ತವನ್ನು ಹೊಂದಿರುತ್ತಾನೆ. ಇದು ಪ್ರೀಮಿಯಂ ಅನ್ನು ತುಲನಾತ್ಮಕವಾಗಿ ಹೆಚ್ಚು ಮಾಡುತ್ತದೆ.

ನಿಮ್ಮಂತಹ 18 ವರ್ಷದಿಂದ 70 ವರ್ಷಗಳ ವಯೋಮಿತಿಯಲ್ಲಿರುವ ವ್ಯಕ್ತಿಗಳು ಈ ಯೋಜನೆಯನ್ನು ಖರೀದಿಸಲು ಆಯ್ಕೆ ಮಾಡಿಕೊಳ್ಳಬಹುದು. ವೈಯಕ್ತಿಕ ಪಾಲಿಸಿಯನ್ನು ಖರೀದಿಸುವ ಬೆಸ್ಟ್ ಪಾರ್ಟ್ ಏನು ಗೊತ್ತೆ? ಅದು ಪ್ರತಿ ಪಾಲಿಸಿಯಡಿಯಲ್ಲಿ ಕವರ್ ಆಗುವ ಸದಸ್ಯರಿಗೆ ವೈಯಕ್ತಿಕ ಮೊತ್ತದ ಇನ್ಶೂರೆನ್ಸ್ ಮಿತಿಯನ್ನು ನೀಡುತ್ತದೆ.

2. ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್

ನಿಮ್ಮ ಕುಟುಂಬದ ಎಲ್ಲಾ ಸದಸ್ಯರಿಗೆ ಕೈಗೆಟುಕುವ ಬೆಲೆಯ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಲು ನೀವು ಬಯಸಿದರೆ, ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್ ನಿಮ್ಮ ಆಯ್ಕೆಯಾಗಿರಬೇಕು.

ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್ ಅಡಿಯಲ್ಲಿ, ಪಾಲಿಸಿಯಲ್ಲಿ ಕವರ್ ಆಗುವ ಎಲ್ಲಾ ಸದಸ್ಯರಿಗೆ ಒಂದೇ ಇನ್ಶೂರೆನ್ಸ್ ಮೊತ್ತವು ಫ್ಲೋಟ್ ಆಗುತ್ತದೆ. ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್ ಯೋಜನೆಯು ಪ್ರಯೋಜನಕಾರಿಯಾಗಿದೆ ಏಕೆಂದರೆ ಇದರ ಪ್ರೀಮಿಯಂ, ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಿಂತ ತುಲನಾತ್ಮಕವಾಗಿ ಕಡಿಮೆಯಾಗಿದೆ.

ಈ ಪಾಲಿಸಿಯು ನಿಮ್ಮನ್ನು, ನಿಮ್ಮ ಸಂಗಾತಿಯನ್ನು, ನಿಮ್ಮ ಮಕ್ಕಳನ್ನು ಮತ್ತು ಪೋಷಕರನ್ನು ಒಳಗೊಳ್ಳಬಹುದು.

 ನೀವು, ನಿಮ್ಮ ಕುಟುಂಬದ ಸದಸ್ಯರಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರನ್ನು ಪಾಲಿಸಿಗೆ ಸೇರಿಸಲು ಪರಿಗಣಿಸಬಾರದು. ಅವರು ಹೆಚ್ಚು ಅನಾರೋಗ್ಯಕ್ಕೆ ಒಳಗಾಗುತ್ತಾರೆ ಆದ್ದರಿಂದ ಅದು ಪ್ರೀಮಿಯಂ ಮೇಲೆ ಪರಿಣಾಮ ಬೀರುತ್ತದೆ.

ನೀವು ಅಥವಾ ನಿಮ್ಮ ಕುಟುಂಬದ ಹಿರಿಯ ಸದಸ್ಯರು 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ನೀವು ಫ್ಯಾಮಿಲಿ ಫ್ಲೋಟರ್ ಪಾಲಿಸಿಯನ್ನು ಖರೀದಿಸಬೇಕು.

3. ಗ್ರೂಪ್ ಹೆಲ್ತ್ ಇನ್ಶೂರೆನ್ಸ್

ಒಂದು ಗ್ರೂಪ್‌ ಹೆಲ್ತ್ ಇನ್ಶೂರೆನ್ಸ್  ಪಾಲಿಸಿಯನ್ನು, ಒಟ್ಟಿಗೆ ಕೆಲಸ ಮಾಡುವ ಉದ್ಯೋಗಿಗಳ ಗ್ರೂಪ್‌ಗಾಗಿ ವಿನ್ಯಾಸಗೊಳಿಸಲಾಗಿದೆ. ಆದ್ದರಿಂದ ನೀವು ಸ್ಟಾರ್ಟ್-ಅಪ್ ಅಥವಾ ಕಾರ್ಪೊರೇಟ್ ಮನೆಯನ್ನು ಹೊಂದಿದ್ದರೆ, ನಿಮ್ಮ ಉದ್ಯೋಗಿಗಳಿಗಾಗಿ ನೀವು ಅಂತಹ ಯೋಜನೆಗಳನ್ನು ಖರೀದಿಸಬೇಕು. ಇದು ಉದ್ಯೋಗಿಗಳಿಗೆ ನೀವು ನೀಡುವ ಒಂದು ರೀತಿಯ ಪ್ರಯೋಜನವಾಗಿದೆ. ಉದ್ಯೋಗದಾತರಾಗಿ, ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಅವರಿಗಾಗಿ ನೀವು ಈ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಕವರ್ ಅನ್ನು ಖರೀದಿಸಬಹುದು.

ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಯೋಜನೆ ಕಡಿಮೆ ವೆಚ್ಚದ ಪ್ರೀಮಿಯಂನೊಂದಿಗೆ ಬರುತ್ತದೆ. ಒಂದುವೇಳೆ ಇನ್ಶೂರೆನ್ಸ್ ಮೊತ್ತ ಖಾಲಿಯಾಗಿದ್ದರೆ, ಕೆಲವು ಇನ್ಶೂರೆನ್ಸ್ ಕಂಪನಿಗಳು ಇನ್ಶೂರೆನ್ಸ್ ಮೊತ್ತವನ್ನು ರಿಫಿಲ್ ಮಾಡಲು ಅವಕಾಶ ನೀಡುತ್ತವೆ, ಅದು ಕೂಡ ಲೆಕ್ಕವಿಲ್ಲದಷ್ಟು ಬಾರಿ. ಒಂದು ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಯೋಜನೆಯು ಅಪಘಾತ, ಅನಾರೋಗ್ಯ, ಗಂಭೀರ ಕಾಯಿಲೆ, ಮನೋವೈದ್ಯಕೀಯ ಕಾಯಿಲೆ ಮತ್ತು ಹೆರಿಗೆಯ ಕಾರಣದಿಂದಾಗಿ ನೀವು ಚಿಕಿತ್ಸೆ ಪಡೆದರೆ, ನಿಮ್ಮನ್ನು ಕವರ್ ಮಾಡುತ್ತದೆ.

ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು ನಿಮ್ಮ ಉದ್ಯೋಗಿಗಳಿಗೆ ಕವರೇಜ್ ನೀಡುವುದಷ್ಟೇ ಅಲ್ಲದೇ, ನಿಮ್ಮ ಕಂಪನಿಯ ಖ್ಯಾತಿಯನ್ನು ಸಹ ಹೆಚ್ಚಿಸುತ್ತದೆ. ಇಲ್ಲಿ ಬಹಳ ಮುಖ್ಯವಾದ ಅಂಶವೆನೆಂದರೆ ಉದ್ಯೋಗಿಗಳು ನಿಮ್ಮ ಕಂಪನಿಯಲ್ಲಿ ಕೆಲಸ ಮಾಡುವವರೆಗೆ ಮಾತ್ರ ಕವರ್ ಆಗಿರುತ್ತಾರೆ.

4. ಹಿರಿಯ ನಾಗರಿಕರ ಹೆಲ್ತ್ ಇನ್ಶೂರೆನ್ಸ್

60 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರಿಗಾಗಿ ಮೀಸಲಿಟ್ಟ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಹಿರಿಯ ನಾಗರಿಕರ ಹೆಲ್ತ್ ಇನ್ಶೂರೆನ್ಸ್ ಯೋಜನೆ ಎಂದು ಕರೆಯಲಾಗುತ್ತದೆ. ನಿಮ್ಮ ಪೋಷಕರು ಅಥವಾ ಅಜ್ಜ-ಅಜ್ಜಿಯರು 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ, ಈ ಕವರ್ ನಿಮಗೆ ಅತ್ಯುತ್ತಮ ಆಯ್ಕೆಯಾಗಿದೆ.

ಹಿರಿಯ ನಾಗರಿಕರ ಪಾಲಿಸಿಯು, ಔಷಧಿಗಳ ವೆಚ್ಚ, ಅಪಘಾತ ಅಥವಾ ಅನಾರೋಗ್ಯದ ಕಾರಣದಿಂದ ಬೇಕಿರುವ ಚಿಕಿತ್ಸೆ, ಚಿಕಿತ್ಸಾ ಪೂರ್ವ-ಚಿಕಿತ್ಸಾ ನಂತರ ಹಾಗೂ ಆರೈಕೆಯ ಕವರೇಜ್ ಅನ್ನು ನೀಡುತ್ತದೆ. ಇವುಗಳ ಜೊತೆಗೆ, ಮನೆಯಲ್ಲಿನ ಚಿಕಿತ್ಸೆ ಮತ್ತು ಸೈಕಿಯಾಟ್ರಿಕ್ ಪ್ರಯೋಜನಗಳಂತಹ ಇತರ ಕೆಲವು ಪ್ರಯೋಜನಗಳನ್ನು ಸಹ ಕವರ್ ಮಾಡುತ್ತದೆ.

ಕೆಲವು ಇನ್ಶೂರೆನ್ಸ್ ಕಂಪನಿಗಳು ಹಿರಿಯ ನಾಗರಿಕರ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಮಾರಾಟ ಮಾಡುವ ಮೊದಲು ಸಂಪೂರ್ಣ ದೇಹ ತಪಾಸಣೆಗಾಗಿ ಕೇಳಬಹುದು. ಜೀವಿತಾವಧಿಯ ನವೀಕರಣದೊಂದಿಗೆ ಗರಿಷ್ಠ ಪ್ರವೇಶದ ವಯಸ್ಸಿನ ಮಿತಿಯನ್ನು 70 ವರ್ಷಗಳಿಗೆ ಏರಿಸಲಾಗಿದೆ. ಮತ್ತು, ನಮಗೆ ತಿಳಿದಿರುವಂತೆ, ಹಿರಿಯ ನಾಗರಿಕರು ಹೆಚ್ಚು ಅನಾರೋಗ್ಯಕ್ಕೆ ಒಳಗಾಗುತ್ತಾರೆ, ಈ ಯೋಜನೆಗಳು, ಇತರ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳಿಗಿಂತ ಹೆಚ್ಚು ದುಬಾರಿಯಾಗಿದೆ.

5. ಮೆಟರ್ನಿಟಿ ಹೆಲ್ತ್ ಇನ್ಶೂರೆನ್ಸ್

ಬೇಸಿಕ್ ಹೆಲ್ತ್ ಇನ್ಶೂರೆನ್ಸ್ ಯೋಜನೆಯೊಂದಿಗೆ ಹೆರಿಗೆ ಕವರ್ ಅನ್ನು ರೈಡರ್ ಆಗಿ ಖರೀದಿಸಬಹುದು. ಪ್ರಸವಪೂರ್ವ ಹಂತ, ಹೆರಿಗೆ ಮತ್ತು ಪ್ರಸವಾ ನಂತರದ ಹಂತಗಳಲ್ಲಿ ಉಂಟಾಗುವ ಎಲ್ಲಾ ವೆಚ್ಚಗಳನ್ನು ಕವರ್ ಮಾಡಲಾಗುತ್ತದೆ.

ಮುಂಬರುವ ವರ್ಷಗಳಲ್ಲಿ ಮಗುವನ್ನು ಪಡೆಯಲು ಯೋಜಿಸುತ್ತಿರುವ ದಂಪತಿಗಳು ಅಥವಾ ಹೊಸದಾಗಿ ಮದುವೆಯಾದ ದಂಪತಿಗಳು ಈ ಪಾಲಿಸಿಯನ್ನು ಖರೀದಿಸಬೇಕು. ಇದು ನವಜಾತ ಶಿಶುವಿನ ಮೊದಲ 90 ದಿನಗಳವರೆಗೆ ಹೆರಿಗೆ (ವೈದ್ಯಕೀಯವಾಗಿ ಅಗತ್ಯವಾದ ಅವಧಿಯು ಸೇರಿದಂತೆ), ಬಂಜೆತನದ ವೆಚ್ಚಗಳು ಮತ್ತು ಕವರೇಜ್ ಅನ್ನು ಒಳಗೊಂಡಿದೆ. ಹೆರಿಗೆ ಕವರ್, ಕನಿಷ್ಠ 2 ವರ್ಷಗಳ ವೈಟಿಂಗ್ ಪಿರೀಡ್ ಹೊಂದಿದೆ.

6. ಕ್ರಿಟಿಕಲ್ ಇಲ್‌ನೆಸ್ ಇನ್ಶೂರೆನ್ಸ್

ಜೀವನಶೈಲಿ ಸಂಬಂಧಿತ ಕಾಯಿಲೆಗಳ ಸಂಭಾವ್ಯತೆ  ಹೆಚ್ಚುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಇನ್ಶೂರೆನ್ಸ್ ಕಂಪನಿಗಳು ಕ್ರಿಟಿಕಲ್ ಇಲ್‌ನೆಸ್ ಪಾಲಿಸಿಯನ್ನು ನೀಡುತ್ತಿವೆ.

 

ಮಧ್ಯಮ ವರ್ಗದ ಕುಟುಂಬಗಳಿಗಾಗಿ ಮೀಸಲಿಟ್ಟ ಈ ಆರೋಗ್ಯ ಯೋಜನೆಯು ಈ ರೀತಿಯ ರೋಗಗಳನ್ನು ಒಳಗೊಂಡಿದೆ:

  • ಕ್ಯಾನ್ಸರ್
  • ಸ್ಟ್ರೋಕ್
  • ಮೂತ್ರಪಿಂಡ ವೈಫಲ್ಯ
  • ಪಾರ್ಶ್ವವಾಯು
  • ಕೊರೊನರಿ ಆರ್ಟರಿ ಬೈಪಾಸ್ ಸರ್ಜರಿ
  • ಮೊದಲ ಹೃದಯಾಘಾತ
  • ಪಲ್ಮನರಿ ಅರ್ಟರಿಯಲ್ ಹೈಪರ್‌ಟೆನ್ಶನ್
  • ಬಹು ಅಂಗಾಂಶ ಗಟ್ಟಿಯಾಗುವ ರೋಗ
  • ಮಹಾಪಧಮನಿಯ ಗ್ರಾಫ್ಟ್ ಶಸ್ತ್ರಚಿಕಿತ್ಸೆ

ಈ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುವುದು ದುಬಾರಿಯಾಗಿದೆ. ಕ್ರಿಟಿಕಲ್ ಇಲ್‌ನೆಸ್ ಪ್ಲಾನ್ ಅಡಿಯಲ್ಲಿ ನೀವು ರೋಗವನ್ನು ಪತ್ತೆಹಚ್ಚಿದ ತಕ್ಷಣ, ಇದು ಚಿಕಿತ್ಸೆಗಾಗಿ ನಿಮಗೆ ತಗಲುವ ನಿಜವಾದ ವೆಚ್ಚವನ್ನು ಲೆಕ್ಕಿಸದೆ ಪೂರ್ವನಿರ್ಧರಿತ ಮೊತ್ತವನ್ನು ಪಾವತಿಸುತ್ತದೆ.

ಕ್ರಿಟಿಕಲ್ ಇಲ್‌ನೆಸ್ ಪಾಲಿಸಿಯನ್ನು ಖರೀದಿಸುವುದಕ್ಕಿಂತ ಉತ್ತಮವಾದ ಕ್ರಮವು ಇನ್ನೊಂದಿಲ್ಲ, ಏಕೆಂದರೆ ಅದು ನಿಮ್ಮ ಉಳಿತಾಯದ ಮೇಲೆ ಯಾವುದೇ ರೀತಿಯ ಪರಿಣಾಮವನ್ನು ತಡೆಯುತ್ತದೆ. ಪಾಲಿಸಿಯು ಜೀವಮಾನದ ರಿನೀವಲ್ ಅನ್ನು ಹೊಂದಿದೆ. ನೀವು ಕ್ರಿಟಿಕಲ್ ಇಲ್‌ನೆಸ್ ಪಾಲಿಸಿಯನ್ನು ತೆಗೆದುಕೊಂಡರೆ, ಅನಾರೋಗ್ಯದ ರೋಗನಿರ್ಣಯವಾದ ನಂತರ ನೀವು 30 ದಿನಗಳವರೆಗೆ ಬದುಕಬೇಕು.

ನೀವು ಕೆಲವು ಕಾಯಿಲೆಗಳ ಕುಟುಂಬ ಇತಿಹಾಸವನ್ನು ಹೊಂದಿದ್ದರೆ ಈ ಪಾಲಿಸಿಯನ್ನು ಖರೀದಿಸುವುದು ಒಂದು ಬುದ್ಧಿವಂತ ಹೆಜ್ಜೆಯಾಗಿದೆ. ಒಟ್ಟು ಮೊತ್ತವನ್ನು ಹೊರತುಪಡಿಸಿ, ಕ್ರಿಟಿಕಲ್ ಇಲ್‌ನೆಸ್ ಪಾಲಿಸಿಯು ನಿಮಗೆ ಆರೈಕೆಯ ವೆಚ್ಚ ಮತ್ತು ಚಿಕಿತ್ಸೆಯ ವೆಚ್ಚವನ್ನು ಮರುಪಾವತಿ ಮಾಡುತ್ತದೆ. ಇದರೊಂದಿಗೆ ಕಾಂಪ್ಲಿಮೆಂಟರಿ ಹೆಲ್ತ್ ಚೆಕಪ್ ಪ್ರಯೋಜನವನ್ನು ಸಹ ನೀವು ಪಡೆಯಬಹುದು.

ಆದರೆ ಒಮ್ಮೆ ಕ್ಲೈಮ್ ಸಲ್ಲಿಸಿದ ಮೇಲೆ , ಇನ್ಶೂರೆನ್ಸ್ ಮೊತ್ತವನ್ನು ಒಟ್ಟು ಮೊತ್ತದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. ಇನ್ಶೂರೆನ್ಸ್ ಮೊತ್ತ ಬಿಡುಗಡೆಯಾದ ನಂತರ, ಪಾಲಿಸಿ ಕೊನೆಗೊಳ್ಳುತ್ತದೆ.

7. ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್

ನೀವು ಹೆಚ್ಚಿನ ಮೊತ್ತಕ್ಕೆ ಕವರೇಜ್ ಅನ್ನು ಬಯಸಿದರೆ, ನೀವು ಟಾಪ್-ಅಪ್ ಪಾಲಿಸಿಯನ್ನು ಖರೀದಿಸಬಹುದು. ಆದರೆ ಅಂತಹ ಯೋಜನೆಗಳು "ಡಿಡಕ್ಟಿಬಲ್ ಕ್ಲಾಸ್" ದೊಂದಿಗೆ ಬರುತ್ತವೆ. ಆದ್ದರಿಂದ, ಕ್ಲೈಮ್‌ನ ಸಂದರ್ಭದಲ್ಲಿ ಪಾಲಿಸಿಯಲ್ಲಿ ನಮೂದಿಸಲಾದ ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಪಾವತಿಯನ್ನು ಮಾಡಲಾಗುತ್ತದೆ.

ನೀವು 15 ಲಕ್ಷಕ್ಕೆ ಕವರ್ ತೆಗೆದುಕೊಂಡಿದ್ದರೆ ಮತ್ತು ಅದು ₹3 ಲಕ್ಷಗಳ ಡಿಡಕ್ಟಿಬಲ್ ಅನ್ನು ಹೊಂದಿದ್ದರೆ, ನೀವು ₹3 ಲಕ್ಷದವರೆಗೆ ಕ್ಲೈಮ್ ಅನ್ನು ಭರಿಸಬೇಕಾಗುತ್ತದೆ. ಇದಕ್ಕಿಂತ ಹೆಚ್ಚಿನ ಮೊತ್ತವನ್ನು ಇನ್ಶೂರೆನ್ಸ್ ಕಂಪನಿಯವರು ಪಾವತಿಸುತ್ತಾರೆ.

ಆದ್ದರಿಂದ, ನಿಮ್ಮ ಬೇಸಿಕ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಿಂತ ಹೆಚ್ಚಿನ ಕವರ್ ಅನ್ನು ನೀವು ಬಯಸಿದರೆ, ನೀವು ಈ ಪ್ಲ್ಯಾನ್ ಅನ್ನು ಖರೀದಿಸಬಹುದು.

ಹೆಲ್ತ್ ಇನ್ಶೂರೆನ್ಸ್ ಯೋಜನೆಗಳ ಅಡಿಯಲ್ಲಿ, ನೀವು ಇನ್ಶೂರೆನ್ಸ್ ಕಂಪನಿಯು ನೀಡುವ ದೈನಂದಿನ ನಗದು ಭತ್ಯೆಯನ್ನು ಸಹ ಪಡೆಯುತ್ತೀರಿ. ಇವುಗಳು 30-45 ದಿನಗಳವರೆಗೆ ಮರುಪಾವತಿಸಲಾದ ದೈನಂದಿನ ವೆಚ್ಚಗಳಾಗಿವೆ ಮತ್ತು ಇವು ಚಿಕಿತ್ಸಾ ವೆಚ್ಚಗಳಿಂದ ಪ್ರತ್ಯೇಕವಾಗಿರುತ್ತವೆ.

ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳಿಗೆ ಬೇಡಿಕೆ ಹೆಚ್ಚಾದಂತೆ, ಇನ್ಶೂರೆನ್ಸ್ ಕಂಪನಿಗಳು ಮತ್ತು ಅವುಗಳ ಪ್ರಾಡಕ್ಟ್‌ಗಳ ಸಂಖ್ಯೆ ಹೆಚ್ಚಾಗಿದೆ. ವೈದ್ಯಕೀಯ ವೆಚ್ಚಗಳು ಗಗನಕ್ಕೇರುತ್ತಿವೆ ಮತ್ತು ಈಗ ವಿವರಿಸಿರುವ ಮೇಲಿನ ಯಾವುದೇ ಪಾಲಿಸಿಗಳನ್ನು ಖರೀದಿಸುವುದು ಬುದ್ಧಿವಂತ ಹೆಜ್ಜೆಯಾಗಿದೆ.

ಹೆಲ್ತ್ ಇನ್ಶೂರೆನ್ಸ್ ಅನ್ನು ಹೊಂದುವುದು ಏಕೆ ಮುಖ್ಯ?

ಜೀವನದಲ್ಲಿ ಸಾಧ್ಯವಾದಷ್ಟು ಬೇಗ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸುವ ಬಗ್ಗೆ ನೀವು ತುಂಬಾ ಓದಿರಬೇಕು ಮತ್ತು ಕೇಳಿರಬೇಕು. ರೋಗಗಳನ್ನು ಆಕರ್ಷಿಸುವ ಸಾಧ್ಯತೆಗಳು ಕಡಿಮೆಯಾದರೆ, ನಿಮ್ಮ ಜೀವನದ ಆರಂಭಿಕ ಹಂತದಲ್ಲಿ ವೈಟಿಂಗ್ ಪಿರೀಡ್ ಅನ್ನು ತೊಡೆದುಹಾಕಲು ನೀವು ಉತ್ತಮ ಮೊತ್ತದ ಸಂಚಿತ ಬೋನಸ್ (cumulative bonus) ಅನ್ನು ಗಳಿಸುವಿರಿ ಮತ್ತು ವರ್ಷಗಳಲ್ಲಿ ನೀವು ಇನ್ಶೂರೆನ್ಸ್ ಮೊತ್ತವನ್ನು ಹೆಚ್ಚಿಸಬಹುದು.

ಆದರೆ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದುವ ಇತರ ಪ್ರಮುಖ ಅಂಶಗಳನ್ನು ಸಹ ನೀವು ತಿಳಿದಿರಬೇಕು:

  • ಇದು ನಿಮ್ಮ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ.
  • ನೀವು ಉತ್ತಮ ಆರೋಗ್ಯ ಸೌಲಭ್ಯಗಳನ್ನು ಪಡೆಯುತ್ತೀರಿ. ಏಕೆಂದರೆ, ವೆಚ್ಚವನ್ನು ಇನ್ಶೂರೆನ್ಸ್ ಕಂಪನಿಯು ಭರಿಸಲಿದೆ.
  • ಹೆಲ್ತ್ ಇನ್ಶೂರೆನ್ಸ್ ಎನ್ನುವುದು ನಿಮ್ಮ ಉದ್ಯೋಗದಾತರಿಂದ ಗ್ರೂಪ್ ಇನ್ಶೂರೆನ್ಸ್ ಮೂಲಕ ದೊರೆತರೆ, ನೀವು ನಿಮ್ಮ ಉಳಿತಾಯವನ್ನು ಸುಧಾರಿಸಿಕೊಳ್ಳಬಹುದು.
  • ಕೆಲವು ಹೆಲ್ತ್ ಇನ್ಶೂರೆನ್ಸ್ ಕಂಪನಿಗಳು ಪೂರಕ ವಾರ್ಷಿಕ ಆರೋಗ್ಯ ತಪಾಸಣೆಗಳನ್ನು ನೀಡುತ್ತವೆ.
  • ಇದು ನಿಮ್ಮ ಸಂಕಷ್ಟದ ಸಮಯದಲ್ಲಿ ಉಳಿತಾಯವಾಗಿ ಕಾರ್ಯನಿರ್ವಹಿಸುತ್ತದೆ. ನೀವು ಪ್ರೀಮಿಯಂ ಪಾವತಿಸುವಿರಿ ಆದರೆ ನೀವು ಪಡೆಯುವ ಹಣಕಾಸಿನ ಸಹಾಯದ ಮೊತ್ತವು ಅದಕ್ಕಿಂತಲೂ ಹೆಚ್ಚು.
  • ತೆರಿಗೆ ಪ್ರಯೋಜನ: ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು ನಿಮಗೆ ಆದಾಯ ತೆರಿಗೆಯ ಸೆಕ್ಷನ್ 80D ಅಡಿಯಲ್ಲಿ ತೆರಿಗೆ ಪ್ರಯೋಜನವನ್ನು ನೀಡುತ್ತದೆ.

ನಿಮ್ಮ ಹೆಲ್ತ್ ಇನ್ಶೂರೆನ್ಸ್ ಯೋಜನೆಯನ್ನು ಅಂತಿಮಗೊಳಿಸುವ ಮೊದಲು ಪರಿಶೀಲಿಸಲು, ನಿಮಗೆ ಕೆಲವು ಸಲಹೆಗಳು

ಮಾರುಕಟ್ಟೆಯಲ್ಲಿ ಅನೇಕ ಹೆಲ್ತ್ ಇನ್ಶೂರೆನ್ಸ್ ಕಂಪನಿಗಳು ಇರುವಾಗ, ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಒಂದು ಹೆಲ್ತ್ ಇನ್ಶೂರೆನ್ಸ್ ಯೋಜನೆಯನ್ನು ಆಯ್ಕೆ ಮಾಡುವುದು ನಿಜಕ್ಕೂ ಸವಾಲಿನ ಸಂಗತಿಯಾಗಿದೆ. ಆದರೆ ನಿಮ್ಮ ಇನ್ಶೂರೆನ್ಸ್ ಪ್ರಾಡಕ್ಟ್ ಅನ್ನು ಅಂತಿಮಗೊಳಿಸುವ ಮೊದಲು ನೀವು ಪರಿಗಣಿಸಬೇಕಾದ ಕೆಲವು ಅಂಶಗಳು ಇಲ್ಲಿವೆ.

  • ಆಯ್ಕೆಮಾಡಿದ ಇನ್ಶೂರೆನ್ಸ್ ಮೊತ್ತವನ್ನು ಖಚಿತಪಡಿಸಿಕೊಳ್ಳಿ. ಇದು ನಿಮಗೆ ಅಥವಾ ನಿಮ್ಮ ಕುಟುಂಬ ಸದಸ್ಯರಿಗೆ ಸಾಕಾಗುತ್ತದೆಯೇ ಎಂದು ಯೋಚಿಸಿ.
  • ನಿಮ್ಮ ಅವಲಂಬಿತ ಪೋಷಕರಿಗೆ ಸರಿಯಾದ ಇನ್ಶೂರೆನ್ಸ್ ಮೊತ್ತದ ಮಿತಿಯನ್ನು ಹೊಂದಿಸಿ.
  • ಕನಿಷ್ಠ ವೈಟಿಂಗ್ ಪಿರೀಡ್ ಇರುವ ಯೋಜನೆಯನ್ನು ಆಯ್ಕೆ ಮಾಡಿ.
  • ಗರಿಷ್ಠ ವಯಸ್ಸು-ರಿನೀವಲ್ ಅನ್ನು ಪರಿಶೀಲಿಸಿ.
  • ತ್ವರಿತ ಕ್ಲೈಮ್ ಸೆಟಲ್ಮೆಂಟ್ ಅನುಪಾತವನ್ನು ಹೊಂದಿರುವ ಕಂಪನಿಗಳಿಂದ, ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿ.
  • ತಮ್ಮ ಪಟ್ಟಿಯಲ್ಲಿ ಆಸ್ಪತ್ರೆಗಳ ಬೃಹತ್ ಜಾಲವನ್ನು ಹೊಂದಿರುವ ಇನ್ಶೂರೆನ್ಸ್ ಕಂಪನಿಯನ್ನು ಆಯ್ಕೆಮಾಡಿ.