ಮಾರುತಿ ಸುಜುಕಿ ವ್ಯಾಗನ್ ಆರ್ ಇನ್ಶೂರೆನ್ಸ್

Third-party premium has changed from 1st June. Renew now

ಮಾರುತಿ ಸುಜುಕಿ ವ್ಯಾಗನ್ ಆರ್ ಕಾರ್ ಇನ್ಶೂರೆನ್ಸ್ ಖರೀದಿಸಿ ಅಥವಾ ರಿನ್ಯೂ ಮಾಡಿ.

ಜಪಾನಿನ ತಯಾರಕ ಸುಜುಕಿಯ ಭಾರತೀಯ ಅಂಗಸಂಸ್ಥೆಯು 1999 ರಿಂದ ಮಾರುತಿ ಸುಜುಕಿ ವ್ಯಾಗನ್ ಆರ್ ಅನ್ನು ತಯಾರಿಸುತ್ತಿದೆ. ಭಾರತೀಯ ಪ್ರಯಾಣಿಕರ ಮಾರ್ಕೆಟ್ ನಲ್ಲಿ ಬಿಡುಗಡೆಯಾದ ನಂತರ, ಈ ಮಾಡೆಲ್ ಗೆ ಸಂಬಂಧಿಸಿದಂತೆ ಹಲವಾರು ಅಪ್‌ಗ್ರೇಡ್ ಗಳನ್ನು ಪರಿಚಯಿಸಲಾಯಿತು.

ಇದಲ್ಲದೆ, ಡಿಸೆಂಬರ್ 2019 ರ ಹೊತ್ತಿಗೆ, ಕಂಪನಿಯು ಭಾರತದಾದ್ಯಂತ 2.4 ಮಿಲಿಯನ್ ಯುನಿಟ್ ವ್ಯಾಗನ್ ಆರ್ ಅನ್ನು ಮಾರಾಟ ಮಾಡಿದೆ. ಈ ಹ್ಯಾಚ್‌ಬ್ಯಾಕ್‌ನ ದೃಢವಾದ ವಿನ್ಯಾಸ, ಗಟ್ಟಿಮುಟ್ಟಾದ ಹಾರ್ಟೆಕ್ಟ್ ಪ್ಲಾಟ್‌ಫಾರ್ಮ್, ವಿಶಾಲವಾದ ಕ್ಯಾಬಿನ್ ಮತ್ತು ಸುಗಮ ಎಜಿಎಸ್ ಕಾರಣದಿಂದಾಗಿ, ಈ ಕಾರು ಭಾರತೀಯ ಗ್ರಾಹಕರಲ್ಲಿ ತ್ವರಿತವಾಗಿ ಜನಪ್ರಿಯತೆಯನ್ನು ಗಳಿಸಿತು.

ನೀವು ಈ ಮಾರುತಿ ಕಾರಿನ ಮಾಲೀಕರಾಗಿದ್ದರೆ, ಅದು ಒಳಗಾಗಬಲ್ಲ ಅಪಾಯಗಳು ಮತ್ತು ಹಾನಿಗಳನ್ನು ನೀವು ಪರಿಗಣಿಸಬೇಕು. ಅಂತಹ ನಿದರ್ಶನಗಳನ್ನು ಪರಿಗಣಿಸಿ, ಯಾವುದೇ ಡಿಲೇ ಇಲ್ಲದೆ ನಿಮ್ಮ ಮಾರುತಿ ಸುಜುಕಿ ವ್ಯಾಗನ್ ಆರ್ ಇನ್ಶೂರೆನ್ಸ್ ಅನ್ನು ರಿನ್ಯೂ ಮಾಡಲು ನೀವು ಪರಿಗಣಿಸಬಹುದು.

ನಿಮ್ಮ ವ್ಯಾಗನ್ ಆರ್ ಗಾಗಿ ಒಂದು ಪರಿಪೂರ್ಣ ಇನ್ಶೂರೆನ್ಸ್ ಪಾಲಿಸಿಯು, ಅಪಘಾತದ ಸಮಯದಲ್ಲಿ ಉಂಟಾಗುವ ಹಾನಿಗಳ ವೆಚ್ಚವನ್ನು ಕವರ್ ಮಾಡುತ್ತದೆ. ಇದಲ್ಲದೆ, ಇದು ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರನ್ನು ಅವಲಂಬಿಸಿ ಇತರ ಹಲವಾರು ಪ್ರಯೋಜನಗಳೊಂದಿಗೆ ಬರುತ್ತದೆ.

ಕೆಳಗಿನ ವಿಭಾಗದಲ್ಲಿ, ಡಿಜಿಟ್‌ನಂತಹ ಹೆಸರಾಂತ ಇನ್ಶೂರರ್ ಗಳಿಂದ ಕಾರ್ ಇನ್ಶೂರೆನ್ಸ್ ಪಡೆಯುವ ಪ್ರಯೋಜನಗಳ ಕುರಿತು ನೀವು ವಿವರಗಳನ್ನು ಕಾಣಬಹುದು. ಇನ್ನಷ್ಟು ತಿಳಿಯಲು ಓದುವುದನ್ನು ಮುಂದುವರಿಸಿ.

ಮಾರುತಿ ವ್ಯಾಗನ್ ಆರ್ ಕಾರ್ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್ ಆಗಿರುತ್ತದೆ

ನೀವು ಡಿಜಿಟ್‌ನ ಮಾರುತಿ ವ್ಯಾಗನ್ ಆರ್ ಕಾರ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ಮಾರುತಿ ಸುಜುಕಿ ವ್ಯಾಗನ್ ಆರ್ ಕಾರ್ ಇನ್ಶೂರೆನ್ಸ್ ಪ್ಲಾನ್ ಗಳು

ಥರ್ಡ್-ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದಿಂದಾಗಿ ಸ್ವಂತ ಕಾರಿಗೆ ಹಾನಿ/ನಷ್ಟ

×

ಬೆಂಕಿಯಿಂದಾಗಿ ಸ್ವಂತ ಕಾರಿಗೆ ಹಾನಿ/ನಷ್ಟ

×

ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರಿಗೆ ಹಾನಿ/ನಷ್ಟಗಳು

×

ಥರ್ಡ್-ಪಾರ್ಟಿ ವಾಹನಕ್ಕೆ ಹಾನಿ

×

ಥರ್ಡ್-ಪಾರ್ಟಿ ಆಸ್ತಿಗೆ ಹಾನಿ

×

ವೈಯಕ್ತಿಕ ಅಪಘಾತ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಯ ಗಾಯಗಳು/ಸಾವು

×

ನಿಮ್ಮ ಕಾರಿನ ಕಳ್ಳತನ

×

ಡೋರ್ ಸ್ಟೆಪ್ ಪಿಕಪ್ ಮತ್ತು ಡ್ರಾಪ್

×

ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ

×

ಕಸ್ಟಮೈಸ್ ಮಾಡಲಾದ ಆ್ಯಡ್-ಆನ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ

×
Get Quote Get Quote

 ಕಾಂಪ್ರೆಹೆನ್ಸಿವ್ ಮತ್ತು ಥರ್ಡ್-ಪಾರ್ಟಿ ಇನ್ಶೂರೆನ್ಸ್ ನಡುವಿನ ವ್ಯತ್ಯಾಸದ ಬಗ್ಗೆ ಇನ್ನಷ್ಟು ತಿಳಿಯಿರಿ

ಕ್ಲೈಮ್ ಅನ್ನು ಫೈಲ್ ಮಾಡುವುದು ಹೇಗೆ?

ನಮ್ಮ ಕಾರ್ ಇನ್ಶೂರೆನ್ಸ್ ಪ್ಲಾನ್ ಅನ್ನು ನೀವು ಖರೀದಿಸಿದ ನಂತರ ಅಥವಾ ರಿನ್ಯೂ ಮಾಡಿದ ನಂತರ, ನಾವು 3-ಸ್ಟೆಪ್, ಸಂಪೂರ್ಣ ಡಿಜಿಟಲ್ ಆದ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿರುವುದರಿಂದ ನೀವು ಚಿಂತೆಯಿಲ್ಲದೆ ಹಾಯಾಗಿ ಬದುಕುತ್ತೀರಿ!

ಹಂತ 1

1800-258-5956 ಗೆ ಕರೆ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ.

ಹಂತ 2

ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ ನಲ್ಲಿ ಸ್ವತಪಾಸಣೆಗಾಗಿ ಲಿಂಕ್ ಅನ್ನು ಪಡೆಯಿರಿ. ಮಾರ್ಗದರ್ಶನವಿರುವ ಸ್ಟೆಪ್- ಬೈ- ಸ್ಟೆಪ್ ಪ್ರಕ್ರಿಯೆಯಿಂದ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವಾಹನಕ್ಕಾದ ಡ್ಯಾಮೇಜ್ ಗಳನ್ನು ಶೂಟ್ ಮಾಡಿ.

ಹಂತ 3

ನೀವು ಆಯ್ಕೆ ಮಾಡಲು ಬಯಸುವ ರಿಪೇರಿ ವಿಧಾನವನ್ನು ಆರಿಸಿ, ಅಂದರೆ, ರಿಇಂಬರ್ಸ್‌ಮೆಂಟ್ ಅಥವಾ ನಮ್ಮ ಗ್ಯಾರೇಜ್ ಗಳ ನೆಟ್‌ವರ್ಕ್ ಮೂಲಕ ಕ್ಯಾಶ್‌ಲೆಸ್ ರಿಪೇರಿ.

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳ ಇತ್ಯರ್ಥ ಎಷ್ಟು ಬೇಗ ಆಗುತ್ತದೆ? ನಿಮ್ಮ ಇನ್ಶೂರೆನ್ಸ್ ಕಂಪೆನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವು ಅದನ್ನೇ ಮಾಡುತ್ತಿದ್ದೀರಿ! ಡಿಜಿಟ್‌ನ ಕ್ಲೈಮ್ ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿ

ಡಿಜಿಟ್‌ನ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರ್ ಇನ್ಶೂರೆನ್ಸ್ ಅನ್ನು ಏಕೆ ಆಯ್ಕೆ ಮಾಡಬೇಕು?

ಸುಜುಕಿ ವ್ಯಾಗನ್ ಆರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವ ಮೊದಲು, ನೀವು ಹಲವಾರು ಅಂಶಗಳನ್ನು ಪರಿಗಣಿಸಬೇಕು ಮತ್ತು ಆನ್‌ಲೈನ್‌ನಲ್ಲಿ ವಿವಿಧ ಇನ್ಶೂರರ್ ಗಳ ಪ್ಲಾನ್ ಗಳನ್ನು ಹೋಲಿಕೆ ಮಾಡಬೇಕು. ಈ ನಿಟ್ಟಿನಲ್ಲಿ, ಕೆಳಗಿನವುಗಳಂತಹ ಇದರ ಹಲವಾರು ಪ್ರಯೋಜನಗಳಿಂದಾಗಿ ನೀವು ಡಿಜಿಟ್ ಅನ್ನು ಆಯ್ಕೆ ಮಾಡಬಹುದು:

1. ತ್ವರಿತ ಕ್ಲೈಮ್ ಪ್ರಕ್ರಿಯೆ

ಡಿಜಿಟ್‌ನ ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಸ್ವತಪಾಸಣೆಯ ವೈಶಿಷ್ಟ್ಯವು ಮಾರುತಿ ಸುಜುಕಿ ವ್ಯಾಗನ್ ಆರ್‌ಗಾಗಿ ಕಾರ್ ಇನ್ಶೂರೆನ್ಸ್ ನ ವಿರುದ್ಧ ಕ್ಲೈಮ್ ಅನ್ನು ಸಲೀಸಾಗಿ ರೈಸ್ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ. ಈ ವೈಶಿಷ್ಟ್ಯವು ನಿಮ್ಮ ಸ್ಮಾರ್ಟ್‌ಫೋನ್ ಮೂಲಕ ನಿಮ್ಮ ಮಾರುತಿ ಕಾರಿನ ಹಾನಿಯನ್ನು ಶೂಟ್ ಮಾಡಲು ಮತ್ತು ಕೆಲವೇ ನಿಮಿಷಗಳಲ್ಲಿ ನಿಮ್ಮ ಆದ್ಯತೆಯ ರಿಪೇರಿ ಮೋಡ್ ಅನ್ನು ಆಯ್ಕೆ ಮಾಡಲು ಅನುಮತಿಸುತ್ತದೆ.

2. ಕ್ಯಾಶ್‌ಲೆಸ್ ರಿಪೇರಿ ವಿಧಾನ

ಮಾರುತಿ ಸುಜುಕಿ ವ್ಯಾಗನ್ ಆರ್‌ಗಾಗಿ ನಿಮ್ಮ ಇನ್ಶೂರೆನ್ಸ್ ವಿರುದ್ಧ ಕ್ಲೈಮ್ ಅನ್ನು ಸಲ್ಲಿಸುವಾಗ ನೀವು ಡಿಜಿಟ್‌ನಿಂದ ಕ್ಯಾಶ್‌ಲೆಸ್ ಸೌಲಭ್ಯವನ್ನು ಆರಿಸಿಕೊಳ್ಳಬಹುದು. ಈ ಸೌಲಭ್ಯದ ಅಡಿಯಲ್ಲಿ, ಡಿಜಿಟ್ ಅಧಿಕೃತ ಗ್ಯಾರೇಜ್‌ನಲ್ಲಿ ನೀವು ಪಡೆದುಕೊಳ್ಳುವ ರಿಪೇರಿ ಸರ್ವಿಸ್ ಗಳಿಗೆ ನೀವು ಯಾವುದೇ ಹಣವನ್ನು ಪಾವತಿಸುವ ಅಗತ್ಯವಿರುವುದಿಲ್ಲ. ನಿಮ್ಮ ಇನ್ಶೂರರ್ ನಿಮ್ಮ ಪರವಾಗಿ ಶುಲ್ಕಗಳನ್ನು ಕವರ್ ಮಾಡುತ್ತಾರೆ ಹಾಗೂ ಇದು, ಭವಿಷ್ಯದ ಅವಶ್ಯಕತೆಗಳಿಗಾಗಿ ಹಣವನ್ನು ಉಳಿಸಲು ನಿಮಗೆ ಸಾಧ್ಯವಾಗುವಂತೆ ಮಾಡುತ್ತದೆ.

3. ಡಿಜಿಟ್ ಗ್ಯಾರೇಜ್ ಗಳ ವಿಶಾಲ ನೆಟ್ವರ್ಕ್

ಭಾರತದಾದ್ಯಂತ, ನೀವು ನಿಮ್ಮ ಮಾರುತಿ ಕಾರಿಗಾಗಿ ಪ್ರೊಫೆಷನಲ್ ರಿಪೇರಿ ಸರ್ವಿಸ್ ಗಳನ್ನು ಪಡೆಯಬಹುದಾದಂತಹ ಹಲವಾರು ಡಿಜಿಟ್ ನೆಟ್‌ವರ್ಕ್ ಗ್ಯಾರೇಜ್‌ಗಳಿವೆ. ಇದಲ್ಲದೆ, ಈ ರಿಪೇರಿ ಕೇಂದ್ರಗಳಿಂದ ನೀವು ಕ್ಯಾಶ್‌ಲೆಸ್ ರಿಪೇರಿಗಳನ್ನು ಪಡೆಯಬಹುದು.

4. ವಿವಿಧ ಇನ್ಶೂರೆನ್ಸ್ ಆಯ್ಕೆಗಳು

ಮಾರುತಿ ಸುಜುಕಿ ವ್ಯಾಗನ್ ಆರ್ ಇನ್ಶೂರೆನ್ಸ್ ರಿನೀವಲ್ ಗಾಗಿ ನೀವು ಡಿಜಿಟ್ ಅನ್ನು ಆರಿಸಿದರೆ, ನೀವು ಈ ಕೆಳಗಿನ ಯಾವುದೇ ಇನ್ಶೂರೆನ್ಸ್ ವಿಧಗಳನ್ನು ಆರಿಸಬಹುದು:

  • ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್

ಈ ಬೇಸಿಕ್ ಇನ್ಶೂರೆನ್ಸ್ ಪ್ಲಾನ್ ನಿಮ್ಮ ಮಾರುತಿ ಕಾರ್‌ನಿಂದ ವ್ಯಕ್ತಿ, ಆಸ್ತಿ ಅಥವಾ ವಾಹನಕ್ಕೆ ಉಂಟಾಗುವ ಥರ್ಡ್-ಪಾರ್ಟಿ ಹಾನಿಗಳ ವಿರುದ್ಧ ಕವರೇಜ್ ಪ್ರಯೋಜನಗಳನ್ನು ನೀಡುತ್ತದೆ. ಈ ಪ್ಲಾನ್ ಅಡಿಯಲ್ಲಿ ಅಪಘಾತದಿಂದ ಉಂಟಾಗುವ ಮೊಕದ್ದಮೆ ಸಮಸ್ಯೆಗಳನ್ನು ಸಹ ನೀವು ಕವರ್ ಮಾಡಬಹುದು. ಮೋಟಾರು ವಾಹನಗಳ ಕಾಯಿದೆ, 1988, ಪ್ರತಿ ಕಾರು ಮಾಲೀಕರು ಥರ್ಡ್-ಪಾರ್ಟಿ ಮಾರುತಿ ಸುಜುಕಿ ವ್ಯಾಗನ್ ಆರ್ ಇನ್ಶೂರೆನ್ಸ್ ಪ್ಲಾನ್ ಪಡೆಯುವುದನ್ನು ಕಡ್ಡಾಯಗೊಳಿಸಿದೆ.

  • ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್

ಥರ್ಡ್-ಪಾರ್ಟಿ ಮತ್ತು ಓನ್ ಕಾರ್ ಡ್ಯಾಮೇಜ್ ಗಳ ವಿರುದ್ಧ ಒಟ್ಟಾರೆ ಕವರೇಜ್‌ಗಾಗಿ, ನೀವು ಡಿಜಿಟ್‌ನಿಂದ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪ್ಲಾನ್ ಅನ್ನು ಖರೀದಿಸಲು ಬಯಸಬಹುದು. ಈ ಪ್ಲಾನ್, ಬೆಂಕಿ, ಕಳ್ಳತನ, ನೈಸರ್ಗಿಕ ಅಥವಾ ಮಾನವ ನಿರ್ಮಿತ ವಿಪತ್ತುಗಳ ಸಂದರ್ಭದಲ್ಲಿ ನಿಮ್ಮ ಮಾರುತಿ ವ್ಯಾಗನ್ ಆರ್‌ಗೆ ಉಂಟಾಗುವ ಹಾನಿಯನ್ನು ಸಹ ಕವರ್ ಮಾಡುತ್ತದೆ. ಈ ಪಾಲಿಸಿಯು ವ್ಯಾಪಕವಾದ ರಕ್ಷಣೆ ಮತ್ತು ಇತರ ಪ್ರಯೋಜನಗಳನ್ನು ಒದಗಿಸುವುದರಿಂದ, ಮಾರುತಿ ಸುಜುಕಿ ವ್ಯಾಗನ್ ಆರ್ ಇನ್ಶೂರೆನ್ಸ್ ರಿನೀವಲ್ ಬೆಲೆಯು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪ್ಲಾನ್ ಗೆ ಹೋಲಿಸಿದರೆ ಸ್ವಲ್ಪ ಹೆಚ್ಚಿರಬಹುದು.

5. ಐಡಿವಿ ಕಸ್ಟಮೈಸೇಶನ್

ನಿಮ್ಮ ಮಾರುತಿ ಕಾರ್ ಇನ್ಶೂರೆನ್ಸ್ ಪಾಲಿಸಿ ಪ್ರೀಮಿಯಂ ಅದರ ಇನ್ಶೂರ್ಡ್ ಡಿಕ್ಲೇರ್ಡ್ ಮೌಲ್ಯವನ್ನು (ಐಡಿವಿ) ಅವಲಂಬಿಸಿರುತ್ತದೆ. ಇನ್ಶೂರರ್ ಗಳು ಈ ಮೌಲ್ಯವನ್ನು ಅದರ ತಯಾರಕರ ಮಾರಾಟದ ಬೆಲೆಯಿಂದ ಕಾರಿನ ಡೆಪ್ರಿಸಿಯೇಶನ್ ಅನ್ನು ಕಳೆಯುವ ಮೂಲಕ ಮೌಲ್ಯಮಾಪನ ಮಾಡುತ್ತಾರೆ. ಆದಾಗ್ಯೂ, ಡಿಜಿಟ್‌ನಂತಹ ಇನ್ಶೂರೆನ್ಸ್ ಪೂರೈಕೆದಾರರು ಈ ಮೌಲ್ಯವನ್ನು ಕಸ್ಟಮೈಸ್ ಮಾಡುವ ಆಯ್ಕೆಯನ್ನು ನಿಮಗೆ ನೀಡುತ್ತಾರೆ. ಇದರರ್ಥ ನಿಮ್ಮ ಮಾರುತಿ ಕಾರು ಕಳ್ಳತನವಾಗಿದ್ದರೆ ಅಥವಾ ರಿಪೇರಿಗೆ ಮೀರಿ ಹಾನಿಗೊಳಗಾಗಿದ್ದರೆ, ಡಿಜಿಟ್ ನೀವು ಆಯ್ಕೆ ಮಾಡಿದ ಐಡಿವಿ ಗೆ ಸಂಬಂಧಿಸಿದಂತೆ ರಿಟರ್ನ್ ಮೊತ್ತವನ್ನು ನೀಡುತ್ತದೆ. ಆದ್ದರಿಂದ, ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಮೌಲ್ಯವನ್ನು ಆರಿಸುವ ಮೂಲಕ ನಿಮ್ಮ ಪ್ರಯೋಜನಗಳನ್ನು ನೀವು ಗರಿಷ್ಠಗೊಳಿಸಬಹುದು.

6. ಹಲವಾರು ಆ್ಯಡ್-ಆನ್ ಪಾಲಿಸಿಗಳು

ನಿಮ್ಮ ಮಾರುತಿ ಸುಜುಕಿ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪ್ಲಾನ್ ಕೆಲವು ಕವರ್‌ಗಳನ್ನು ಹೊರತುಪಡಿಸಬಹುದು. ಆದಾಗ್ಯೂ, ಹೆಚ್ಚುವರಿ ಕವರೇಜ್‌ಗಾಗಿ ಸ್ವಲ್ಪ ಹೆಚ್ಚಿನ ಶುಲ್ಕಗಳನ್ನು ಪಾವತಿಸಿ ನಿಮ್ಮ ಬೇಸಿಕ್ ಪ್ಲಾನ್ ಮೇಲೆ ಕೆಲವು ಆ್ಯಡ್-ಆನ್ ಕವರ್‌ಗಳನ್ನು ಸೇರಿಸಲು ಡಿಜಿಟ್ ನಿಮಗೆ ಅವಕಾಶವನ್ನು ನೀಡುತ್ತದೆ. ಆದ್ದರಿಂದ, ಕಾಂಪ್ರೆಹೆನ್ಸಿವ್ ಮಾರುತಿ ಸುಜುಕಿ ವ್ಯಾಗನ್ ಆರ್ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಆಯ್ಕೆಮಾಡುವಾಗ, ನೀವು ಈ ಕೆಳಗಿನ ಆ್ಯಡ್-ಆನ್ ಪಾಲಿಸಿಗಳಿಂದ ಆಯ್ಕೆ ಮಾಡಬಹುದು:

  • ಝೀರೋ ಡೆಪ್ರಿಸಿಯೇಷನ್ ಕವರ್
  • ರೋಡ್ಸೈಡ್ ಅಸಿಸ್ಟೆನ್ಸ್
  • ರಿಟರ್ನ್ ಟು ಇನ್‌ವಾಯ್ಸ್ ಕವರ್
  • ಎಂಜಿನ್ ಮತ್ತು ಗೇರ್‌ಬಾಕ್ಸ್ ಪ್ರೊಟೆಕ್ಷನ್ ಕವರ್
  • ಕನ್ಸ್ಯೂಮೆಬಲ್ ಕವರ್

7. 24x7 ಕಸ್ಟಮರ್ ಸರ್ವಿಸ್

ಮಾರುತಿ ಸುಜುಕಿ ವ್ಯಾಗನ್ ಆರ್ ಇನ್ಶೂರೆನ್ಸ್ ವೆಚ್ಚದ ಬಗ್ಗೆ ಯಾವುದೇ ಸಂದೇಹವಿದ್ದಲ್ಲಿ, ನೀವು ಡಿಜಿಟ್‌ನ ಸ್ಪಂದಿಸುವ ಕಸ್ಟಮರ್ ಸರ್ವಿಸ್ ಅನ್ನು ಸಂಪರ್ಕಿಸಬಹುದು ಮತ್ತು ನಿಮ್ಮ ಪ್ರಶ್ನೆಗಳನ್ನು ಸಲೀಸಾಗಿ ಪರಿಹರಿಸಬಹುದು. ಅವರು ರಾಷ್ಟ್ರೀಯ ರಜಾದಿನಗಳಲ್ಲಿಯೂ ಸಹ 24x7 ಲಭ್ಯವಿರುತ್ತಾರೆ.

8. ಸರಳ ಆನ್‌ಲೈನ್‌ ಖರೀದಿ

ಹಲವಾರು ಡಾಕ್ಯುಮೆಂಟ್ ಗಳನ್ನು ಒದಗಿಸುವ ಅಗತ್ಯವಿಲ್ಲದೇ ತಮ್ಮ ಸ್ಮಾರ್ಟ್‌ಫೋನ್‌ಗಳ ಮೂಲಕ ಕಾರ್ ಇನ್ಶೂರೆನ್ಸ್ ಪ್ಲಾನ್ ಗಳನ್ನು ಆನ್‌ಲೈನ್‌ನಲ್ಲಿ ಪಡೆಯಲು ಡಿಜಿಟ್ ತನ್ನ ಗ್ರಾಹಕರಿಗೆ ಅನುವು ಮಾಡಿಕೊಡುತ್ತದೆ. ಆದ್ದರಿಂದ, ಆನ್‌ಲೈನ್‌ನಲ್ಲಿ ಮಾರುತಿ ಸುಜುಕಿ ವ್ಯಾಗನ್ ಆರ್ ಇನ್ಶೂರೆನ್ಸ್ ಬೆಲೆಯ ಕೊಟೇಶನ್ ಪಡೆದ ನಂತರ, ಅದರ ತಂತ್ರಜ್ಞಾನ-ಚಾಲಿತ ಪ್ರಕ್ರಿಯೆಯ ಕಾರಣದಿಂದಾಗಿ ನೀವು ಈ ಪೂರೈಕೆದಾರರಿಂದ ಕೆಲವೇ ನಿಮಿಷಗಳಲ್ಲಿ ಇನ್ಶೂರೆನ್ಸ್ ಅನ್ನು ಪಡೆಯಬಹುದು.

ಹೆಚ್ಚುವರಿಯಾಗಿ, ನಿಮ್ಮ ಪಾಲಿಸಿ ಟರ್ಮ್ ಒಳಗೆ ಕ್ಲೈಮ್ ಮಾಡದ ವರ್ಷಗಳನ್ನು ಇಟ್ಟುಕೊಳ್ಳುವ ಮೂಲಕ ಡಿಜಿಟ್‌ನಿಂದ ನಿಮ್ಮ ಇನ್ಶೂರೆನ್ಸ್ ಪ್ಲಾನ್ ನಲ್ಲಿ ನೀವು ರಿಯಾಯಿತಿಗಳು ಮತ್ತು ಬೋನಸ್‌ಗಳನ್ನು ಪಡೆಯಬಹುದು.

ಈಗ ನಿಮ್ಮ ಮಾರುತಿ ಸುಜುಕಿ ವ್ಯಾಗನ್ ಆರ್ ಇನ್ಶೂರೆನ್ಸ್ ಪ್ಲಾನ್ ಅಡಿಯಲ್ಲಿ ಡಿಜಿಟ್‌ನ ಪ್ರಯೋಜನಗಳ ಬಗ್ಗೆ ನಿಮಗೆ ಎಲ್ಲವೂ ತಿಳಿದಿರುವುದರಿಂದ, ನಿಮ್ಮ ಆಯ್ಕೆಗಳನ್ನು ನೀವು ಸುಗಮಗೊಳಿಸಬಹುದು ಮತ್ತು ತಿಳುವಳಿಕೆಯುಳ್ಳ ನಿರ್ಧಾರವನ್ನು ತೆಗೆದುಕೊಳ್ಳಬಹುದು.

ಮಾರುತಿ ಸುಜುಕಿ ವ್ಯಾಗನ್ ಆರ್ ಕಾರ್ ಇನ್ಶೂರೆನ್ಸ್ ಖರೀದಿಸುವುದು ಏಕೆ ಮುಖ್ಯ?

ಮಾರುತಿ ಸುಜುಕಿ ವ್ಯಾಗನ್ ಆರ್ ನಂತಹ ಯಾವುದೇ ಕಾರು ದೈನಂದಿನ ಪ್ರಯಾಣಕ್ಕಾಗಿ ವ್ಯಾಪಕವಾಗಿ ಬಳಸಲ್ಪಡುತ್ತದೆ ಹಾಗೂ ಇದನ್ನು ರಸ್ತೆ ನಿಯಮಗಳಿಗೆ ಅನುಗುಣವಾಗಿಸಲು ಮಾತ್ರವಲ್ಲದೆ ವಿವಿಧ ಅಪಾಯಗಳಿಂದ ರಕ್ಷಿಸಲು ಕಾರ್ ಇನ್ಶೂರೆನ್ಸ್ ಹೊಂದುವುದು ಮುಖ್ಯವಾಗುತ್ತದೆ.

ಮಾರುತಿ ಸುಜುಕಿ ವ್ಯಾಗನ್ ಆರ್ ಬಗ್ಗೆ ಇನ್ನಷ್ಟು ತಿಳಿಯಿರಿ

ಚಿಕ್ಕದು ಒಳ್ಳೆಯದು ಆದರೆ ದೊಡ್ಡದು ಇನ್ನೂ ಉತ್ತಮ. ಮನುಷ್ಯನಿಗೆ ಡ್ರೈವಿಂಗ್ ಎಂದರೆ, ಸ್ಥಳ, ಪರಿಕರಗಳು ಮತ್ತು ಒಳಾಂಗಣದ ವಿಷಯದಲ್ಲಿ ಒಂದು ಆರಾಮದಾಯಕ ಡ್ರೈವ್ ಎಂದಾಗಿದೆ. ಮಾರುತಿ ಸುಜುಕಿ ವ್ಯಾಗನ್ ಆರ್ ಬಹಳ ಹಿಂದೆಯೇ ಕಂಪನಿಯ ಹೊಸ ಪ್ರಯತ್ನವಾಗಿತ್ತು. ಇದು 998 ಸಿಸಿ ಯಿಂದ 1197 ಸಿಸಿ ವರೆಗಿನ ತುಲನಾತ್ಮಕವಾಗಿ ಉತ್ತಮವಾದ ಎಂಜಿನ್ ಸಾಮರ್ಥ್ಯದ ಪ್ರತಿಪಾದನೆಯಾಗಿತ್ತು.

ಮಾರುತಿ ಸುಜುಕಿ ವ್ಯಾಗನ್ ಆರ್ ಎರಡು ಫ್ಯೂಯೆಲ್ ಪ್ರತಿಪಾದನೆಗಳಲ್ಲಿ ಬರುತ್ತದೆ - ಪೆಟ್ರೋಲ್ ಮತ್ತು ಸಿಎನ್‌ಜಿ. ಇದು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್‌ನೊಂದಿಗೆ ಲಭ್ಯವಿದೆ. ಇದು ಅದರ ಗಾತ್ರ, ಗುಣಲಕ್ಷಣಗಳು ಮತ್ತು ಶೈಲಿಯಲ್ಲಿ ಬದಲಾವಣೆಗಳನ್ನು ಹೊಂದಿರುವ ಥರ್ಡ್ ಜನರೇಷನ್ ಕಾರ್ ಆಗಿದೆ.

ನೀವು ಮಾರುತಿ ಸುಜುಕಿ ವ್ಯಾಗನ್ ಆರ್ ಅನ್ನು ಏಕೆ ಖರೀದಿಸಬೇಕು?

ಮಾರುತಿ ಸುಜುಕಿ ವ್ಯಾಗನ್ ಆರ್ ನಿಮ್ಮ ದೈನಂದಿನ ಪ್ರಯಾಣಕ್ಕೆ ಉತ್ತಮ ಆಯ್ಕೆಯಾಗಿದೆ. ಇದು ಸಾಕಷ್ಟು ವಿಶಾಲವಾದ ಕಾರಾಗಿದ್ದು ಇದರ ಹೊಸ ಹೆಡ್‌ಲ್ಯಾಂಪ್ ಕ್ಲಸ್ಟರ್, ಕ್ಲೀನ್ ಮೆಟಲ್‌ವರ್ಕ್ ಮತ್ತು ಫ್ರಂಟ್ ಗ್ರಿಲ್‌ನೊಂದಿಗೆ ಪರಿಷ್ಕರಿಸಿದ ಲುಕ್ ಅನ್ನು ಹೊಂದಿದೆ. ಅದರ ಎತ್ತರದಲ್ಲಿ ಹೆಚ್ಚಳದೊಂದಿಗೆ ಟೈಲ್-ಲೈಟ್ ಗಳನ್ನು ಉತ್ತಮವಾಗಿ ನಿರ್ಮಿಸಲಾಗಿದೆ.

ರೂ.4.34 ಲಕ್ಷದಿಂದ ರೂ.5.91 ಲಕ್ಷದವರೆಗಿನ ಬೆಲೆಯ ವ್ಯಾಪ್ತಿಯಲ್ಲಿ ಕಾರನ್ನು ಹುಡುಕುತ್ತಿರುವವರಿಗೆ, ಮಾರುತಿ ಸುಜುಕಿ ವ್ಯಾಗನ್ ಆರ್ ಸೂಕ್ತ ಆಯ್ಕೆಯಾಗಿರಬಹುದು. ನಿಮ್ಮ ಆಯ್ಕೆಯಾಗಿ ಸುಮಾರು ಹನ್ನೆರಡು ರೂಪಾಂತರಗಳಿವೆ. ಸೌಕರ್ಯವನ್ನು ಪರಿಗಣಿಸಿ, ಜನರು ಎಲ್ಲಾ ವಿಭಾಗಗಳಲ್ಲಿ ಆಟೋಮ್ಯಾಟಿಕ್ ಕಾರುಗಳನ್ನು ಹುಡುಕುತ್ತಿದ್ದಾರೆ. ಈ ಅಗತ್ಯವನ್ನು ಪೂರೈಸುವ ಮೂಲಕ, ಮಾರುತಿ ವ್ಯಾಗನ್ ಆರ್ 5-ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್‌ಬಾಕ್ಸ್ ಅನ್ನು ನೀಡುತ್ತದೆ. ನೀವು ಸುರಕ್ಷತಾ ವೈಶಿಷ್ಟ್ಯಗಳನ್ನು ಪರಿಗಣಿಸಿದರೆ, ಹೊಸ ಮಾರುತಿ ವ್ಯಾಗನ್ ಆರ್ ಇತರವುಗಳಿಗಿಂತ ಉತ್ತಮ ಆಯ್ಕೆಯಾಗಿದೆ. ಇದು ಏರ್‌ಬ್ಯಾಗ್, ಇಬಿಡಿಯೊಂದಿಗಿನ ಎಬಿಎಸ್, ಸ್ಪೀಡ್ ಅಲರ್ಟ್ ಸಿಸ್ಟಮ್, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಲೋಡ್ ಲಿಮಿಟರ್‌ಗಳಿರುವ ಮುಂಭಾಗದ ಸೀಟ್ ಬೆಲ್ಟ್‌ಗಳೊಂದಿಗೆ ಬರುತ್ತದೆ.

 

ಪರಿಶೀಲಿಸಿ : ಮಾರುತಿ ಕಾರ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ

ಮಾರುತಿ ಸುಜುಕಿ ವ್ಯಾಗನ್ ಆರ್ ವೆರಿಯಂಟ್ ಗಳ ಬೆಲೆ ಪಟ್ಟಿ

ಮಾರುತಿ ಸುಜುಕಿ ವ್ಯಾಗನ್ ಆರ್ ವೆರಿಯಂಟ್ ಗಳು ಬೆಲೆ (ಮುಂಬೈನಲ್ಲಿ, ನಗರಗಳಲ್ಲಿ ಬದಲಾಗಬಹುದು)
LXI ₹5.74 ಲಕ್ಷಗಳು
LXI ಆಪ್ಟ್ ₹5.81 ಲಕ್ಷಗಳು
VXI ₹6.11 ಲಕ್ಷಗಳು
VXI ಆಪ್ಟ್ ₹6.19 ಲಕ್ಷಗಳು
ಸಿಎನ್‌ಜಿ LXI ₹6.54 ಲಕ್ಷಗಳು
VXI 1.2 ₹6.57 ಲಕ್ಷಗಳು
ಸಿಎನ್‌ಜಿ LXI ಆಪ್ಟ್ ₹6.60 ಲಕ್ಷಗಳು
VXI ಆಪ್ಟ್ 1.2 ₹6.65 ಲಕ್ಷಗಳು
VXI AMT ₹6.68 ಲಕ್ಷಗಳು
VXI AMT ಆಪ್ಟ್ ₹6.76 ಲಕ್ಷಗಳು
ZXI 1.2 ₹6.97 ಲಕ್ಷಗಳು
VXI AMT 1.2 ₹7.14 ಲಕ್ಷಗಳು
VXI AMT ಆಪ್ಟ್ 1.2 ₹7.22 ಲಕ್ಷಗಳು
ZXI AMT 1.2 ₹7.54 ಲಕ್ಷಗಳು

[1]

ಪದೇ ಪದೇ ಕೇಳಲಾದ ಪ್ರಶ್ನೆಗಳು

ನಾನು ಕಾಂಪ್ರೆಹೆನ್ಸಿವ್ ಮಾರುತಿ ಸುಜುಕಿ ವ್ಯಾಗನ್ ಆರ್ ಇನ್ಶೂರೆನ್ಸ್ ಪ್ಲಾನ್ ಅಡಿಯಲ್ಲಿ ಟೈರ್ ಹಾನಿಯನ್ನು ಕವರ್ ಮಾಡಬಹುದೇ?

ಒಂದು ಸ್ಟ್ಯಾಂಡರ್ಡ್ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪ್ಲ್ಯಾನ್ ಟೈರ್ ಹಾನಿಯನ್ನು ಕವರ್ ಮಾಡುವುದಿಲ್ಲ. ಆದಾಗ್ಯೂ, ನಿಮ್ಮ ಮಾರುತಿ ವ್ಯಾಗನ್ ಆರ್ ಟೈರ್‌ಗಳಿಗೆ ಹೆಚ್ಚುವರಿ ರಕ್ಷಣೆಗಾಗಿ ನಿಮ್ಮ ಅಸ್ತಿತ್ವದಲ್ಲಿರುವ ಕಾಂಪ್ರೆಹೆನ್ಸಿವ್ ಪ್ಲಾನ್ ಮೇಲೆ ನೀವು ಟೈರ್ ಪ್ರೊಟೆಕ್ಟ್ ಕವರ್ ಅನ್ನು ಸೇರಿಸಬಹುದು.

ಸೆಕೆಂಡ್ ಹ್ಯಾಂಡ್ ವ್ಯಾಗನ್ ಆರ್ ಗೆ ಇನ್ಶೂರೆನ್ಸ್ ಪಡೆಯುವುದು ಕಡ್ಡಾಯವೇ?

ಸೆಕೆಂಡ್ ಹ್ಯಾಂಡ್ ಕಾರಿನ ಹಿಂದಿನ ಇನ್ಶೂರೆನ್ಸ್ ಪಾಲಿಸಿ ಅವಧಿ ಮುಗಿದಿದ್ದರೆ, ಅಪಘಾತಗಳಿಂದ ಉಂಟಾಗುವ ಆರ್ಥಿಕ ಲಯಬಿಲಿಟಿಗಳನ್ನು ತಪ್ಪಿಸಲು ನೀವು ಅದನ್ನು ರಿನ್ಯೂ ಮಾಡಬೇಕಾಗುತ್ತದೆ.