ನಿಸ್ಸಾನ್ ಮೋಟಾರ್ ಕಾರ್ಪೊರೇಶನ್ ಡಿಸೆಂಬರ್ 1933ರಲ್ಲಿ ಸ್ಥಾಪನೆಯಾದ ಜಪಾನಿನ ಬಹುರಾಷ್ಟ್ರೀಯ ಆಟೋಮೊಬೈಲ್ ತಯಾರಕಾ ಕಂಪನಿಯಾಗಿದೆ. 2013ರಲ್ಲಿ ವಿಶ್ವದ ಆರನೇ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿದ್ದ ಈ ಕಂಪನಿ ಏಪ್ರಿಲ್ 2018ರ ಹೊತ್ತಿಗೆ ಎಲೆಕ್ಟ್ರಿಕ್ ವೆಹಿಕಲ್ಸ್ (ಇವಿ)ನ ಅತಿದೊಡ್ಡ ತಯಾರಕರಾದರು. ಕಂಪನಿಯು ವಿಶ್ವಾದ್ಯಂತ 3,20,000 ಯುನಿಟ್ ಗಳಿಗೂ ಹೆಚ್ಚು ಆಲ್-ಎಲೆಕ್ಟ್ರಿಕ್ ವಾಹನಗಳು ಮಾರಾಟವಾಯಿತು..
ಈ ಉತ್ಪಾದನಾ ಕಂಪನಿಯ ಭಾರತೀಯ ಅಂಗಸಂಸ್ಥೆಯಾದ ನಿಸ್ಸಾನ್ ಮೋಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅನ್ನು 2005ರಲ್ಲಿ ಸ್ಥಾಪಿಸಲಾಯಿತು. ಇದು ಹ್ಯಾಚ್ಬ್ಯಾಕ್, ಎಂಯುವಿ, ಎಸ್ಯುವಿಗಳು ಮತ್ತು ಸೆಡಾನ್ಗಳ ಸರಣಿಯಿಂದಾಗಿ ಭಾರತೀಯ ಖರೀದಿದಾರರಲ್ಲಿ ಬಹುವರ್ಷಗಳಿಂದ ನೆಚ್ಚಿನ ಕಾರು ತಯಾರಕಾ ಕಂಪನಿಯಾಗಿದೆ.
ಇದಲ್ಲದೆ, ಈ ಕಂಪನಿಯು ನಿಸ್ಸಾನ್ ಮತ್ತು ಡಾಟ್ಸನ್ ಎಂಬ ಎರಡು ಬ್ರಾಂಡ್ಗಳ ಪೋರ್ಟ್ಫೋಲಿಯೊವನ್ನು ಹೊಂದಿದೆ. ನಿಸ್ಸಾನ್ ಕಿಕ್ಸ್, ನಿಸ್ಸಾನ್ ಮ್ಯಾಗ್ನೈಟ್, ಡಾಟ್ಸನ್ ಗೋ, ಡಾಟ್ಸನ್ ಗೋ+ ಮತ್ತು ಡಾಟ್ಸನ್ ರೆಡಿ-ಗೋ ಸೇರಿದಂತೆ ಕೆಲವು ಇತ್ತೀಚಿನ ಮಾಡೆಲ್ ಗಳು ಭಾರತೀಯ ಪ್ರಯಾಣಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ.
ನಿಸ್ಸಾನ್ನ ಇತ್ತೀಚಿನ ವರದಿಗಳ ಪ್ರಕಾರ, ಇದು ಭಾರತದಾದ್ಯಂತ 2021ರ ಏಪ್ರಿಲ್-ಡಿಸೆಂಬರ್ ನಲ್ಲಿ ಸುಮಾರು 27,000 ಯುನಿಟ್ಗಳನ್ನು ಮಾರಾಟ ಮಾಡಿದೆ. ನೀವು ನಿಸ್ಸಾನ್ ಕಾರಿನ ಮಾಲೀಕರಾಗಿದ್ದರೆ ಅಥವಾ ಮುಂಬರುವ ವರ್ಷದಲ್ಲಿ ಆ ಕಾರನ್ನು ಖರೀದಿಸಲು ಪ್ಲಾನ್ ಮಾಡುತ್ತಿದ್ದರೆ, ಅಪಘಾತದ ಸಮಯದಲ್ಲಿ ಅದು ಒಳಗಾಗುವ ಅಪಾಯಗಳು ಮತ್ತು ಡ್ಯಾಮೇಜ್ ಗಳ ಬಗ್ಗೆ ನೀವು ತಿಳಿದಿರಬೇಕು. ಅಂತಹ ಹಾನಿಗಳನ್ನು ಸರಿಪಡಿಸುವುದು ನಿಮಗೆ ಕಷ್ಟವನ್ನು ನೀಡುತ್ತದೆ ಮತ್ತು ನಿಮ್ಮ ಆರ್ಥಿಕ ಹೊರೆಯನ್ನು ಹೆಚ್ಚಿಸುತ್ತದೆ.
ಆದಾಗ್ಯೂ, ನೀವು ಹೆಸರಾಂತ ಇನ್ಸೂರರ್ ರಿಂದ ನಿಸ್ಸಾನ್ ಕಾರ್ ಇನ್ಶೂರೆನ್ಸ್ ಪ್ಲಾನ್ ಅನ್ನು ಆರಿಸಿಕೊಳ್ಳಬಹುದು ಮತ್ತು ಅಂತಹ ವೆಚ್ಚಗಳಿಗೆ ಕವರೇಜ್ ಪಡೆಯಬಹುದು. ಭಾರತದಲ್ಲಿನ ಇನ್ಶೂರೆನ್ಸ್ ಕಂಪನಿಗಳು ನಿಮ್ಮ ನಿಸ್ಸಾನ್ ಕಾರಿಗೆ ಥರ್ಡ್ ಪಾರ್ಟಿ ಮತ್ತು ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿಗಳನ್ನು ನೀಡುತ್ತವೆ.
ಮೋಟಾರ್ ವೆಹಿಕಲ್ಸ್ ಆಕ್ಟ್, 1988ರ ಪ್ರಕಾರ, ನಿಸ್ಸಾನ್ ಕಾರುಗಳಿಗೆ ಥರ್ಡ್ ಪಾರ್ಟಿ ಲಯಬಿಲಿಟಿಗಳೊಂದಿಗೆ ಟ್ರಾಫಿಕ್ ಪೆನಲ್ಟಿಗಳನ್ನು ತಪ್ಪಿಸಲು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಅನ್ನು ಪಡೆಯುವುದು ಕಡ್ಡಾಯವಾಗಿದೆ. ಅದೇನೇ ಇದ್ದರೂ, ಓನ್ ಕಾರ್ ಮತ್ತು ಥರ್ಡ್ ಪಾರ್ಟಿ ಡ್ಯಾಮೇಜ್ ಗಳು ಎರಡನ್ನೂ ಕವರ್ ಮಾಡುವ ಸುಸಜ್ಜಿತ, ಕಾಂಪ್ರೆಹೆನ್ಸಿವ್ ಪ್ಲಾನ್ ಅನ್ನು ಆಯ್ಕೆ ಮಾಡುವುದು ಪ್ರಾಯೋಗಿಕ ನಡೆಯಾಗಿದೆ.
ಈ ನಿಟ್ಟಿನಲ್ಲಿ, ನಿಸ್ಸಾನ್ ಕಾರ್ ಇನ್ಶೂರೆನ್ಸ್ ಅನ್ನು ಆನ್ಲೈನ್ನಲ್ಲಿ ಪಡೆಯಲು ನೀವು ಡಿಜಿಟ್ನಂತಹ ಇನ್ಶೂರರ್ ರನ್ನು ಆಯ್ಕೆ ಮಾಡಬಹುದು. ಈ ಇನ್ಶೂರೆನ್ಸ್ ಪೂರೈಕೆದಾರರು ಸುಲಭವಾದ ಕ್ಲೈಮ್ ಪ್ರೊಸೆಸ್, ನೆಟ್ವರ್ಕ್ ಗ್ಯಾರೇಜ್ಗಳ ಶ್ರೇಣಿ, ಕ್ಯಾಶ್ ಲೆಸ್ ರಿಪೇರಿ ಮತ್ತು ಇತ್ಯಾದಿಗಳಂತಹ ಹಲವಾರು ಪ್ರಯೋಜನಗಳನ್ನು ಒದಗಿಸುತ್ತಾರೆ. ಹೆಚ್ಚುವರಿಯಾಗಿ, ಇದು ಹಣಕಾಸಿನ ಲಯಬಿಲಿಟಿಯನ್ನು ಕಡಿಮೆ ಮಾಡಲು ಸಹಾಯ ಮಾಡುವ ಕೈಗೆಟುಕುವ ಬೆಲೆಯಲ್ಲಿ ನಿಸ್ಸಾನ್ ಕಾರ್ ಇನ್ಶೂರೆನ್ಸ್ ಅನ್ನು ನೀಡುತ್ತದೆ.
ಹೀಗಾಗಿ, ನಿಸ್ಸಾನ್ಗೆ ಕಾರ್ ಇನ್ಶೂರೆನ್ಸ್ ಅನ್ನು ಪಡೆಯುವ ಮೊದಲು, ನೀವು ಡಿಜಿಟ್ ಅನ್ನು ಪರಿಗಣಿಸಬಹುದು ಮತ್ತು ಹೆಚ್ಚು ಪ್ರಯೋಜನಗಳನ್ನು ಪಡೆಯಬಹುದು.