3 ವರ್ಷಗಳಿಗೆ ಲಾಂಗ್ ಟರ್ಮ್ ಟು-ವೀಲರ್ ಇನ್ಶೂರೆನ್ಸ್

ಆನ್‌ಲೈನ್‌ನಲ್ಲಿ ಬೈಕ್ ಇನ್ಶೂರೆನ್ಸ್ ಕೋಟ್ ಪಡೆಯಿರಿ

Third-party premium has changed from 1st June. Renew now

ಲಾಂಗ್ ಟರ್ಮ್ ಟು ವೀಲರ್ ಇನ್ಶೂರೆನ್ಸ್ ಬಗ್ಗೆ ವಿವರವಾದ ಮಾರ್ಗದರ್ಶಿ

ನೀವು ಟು-ವೀಲರ್ ವೆಹಿಕಲ್ ಅನ್ನು ಹೊಂದಿದ್ದರೆ, ಮೋಟಾರ್ ವೆಹಿಕಲ್ ಆಕ್ಟ್, 1988 ರ ಪ್ರಕಾರ, ನಿಮ್ಮ ಟು-ವೀಲರ್‌ಗೆ ಥರ್ಡ್ ಪಾರ್ಟಿ ಲೈಬಿಲಿಟಿ ಇನ್ಶೂರೆನ್ಸ್  ಖರೀದಿಸುವುದು ಖಡ್ಡಾಯವಾಗಿದೆ ಎನ್ನುವುದನ್ನು ನೀವು ಚೆನ್ನಾಗಿ ತಿಳಿದಿರಬೇಕು. 

ಆದರೆ, ಇಲ್ಲಿ ಎಚ್ಚರಿಕೆಯಿದೆ!

ಭಾರತದಲ್ಲಿ, ರಸ್ತೆಯಲ್ಲಿರುವ ಒಟ್ಟು ಟು-ವೀಲರ್‌ಗಳಲ್ಲಿ ಸುಮಾರು 75% ರಷ್ಟು ವೆಹಿಕಲ್‌ಗಳು ಯಾವುದೇ ವ್ಯಾಲಿಡ್ ಇನ್ಶೂರೆನ್ಸ್ ಕವರ್ ಅನ್ನು ಹೊಂದಿಲ್ಲ. ಆಘಾತಕಾರಿ, ಅಲ್ಲವೇ? ಅಲ್ಲದೆ, ಹೆಚ್ಚಿನ ರೈಡರ್‌ಗಳು ತಮ್ಮ ಟು-ವೀಲರ್ ಅನ್ನು ಶೋರೂಮ್‌ನಿಂದ ಹೊರಕ್ಕೆ ತರುವಾಗ ತಮ್ಮ ಬೈಕ್‌ಗೆ ಇನ್ಶೂರೆನ್ಸ್ ಖರೀದಿಸುವುದರ ಮಹತ್ವವನ್ನು ಕಡೆಗಣಿಸುತ್ತಾರೆ ಎಂಬ ಅಂಶವನ್ನು ಪರಿಗಣಿಸಿದರೆ , ಈ ಅಂಕಿಅಂಶಗಳು ಹೆಚ್ಚೇನು ಆಶ್ಚರ್ಯವೆನಿಸುವುದಿಲ್ಲ .

ಆದಾಗ್ಯೂ, ಪಾಲಿಸಿಗಳನ್ನು ರಿನೀವಲ್ ಮಾಡಿಸದಿರುವ ಸಮಸ್ಯೆಯನ್ನು ಪರಿಹರಿಸಲು, ಇನ್ಶೂರೆನ್ಸ್ ಪೂರೈಕೆದಾರರು

ದೇಶಾದ್ಯಂತ ಮಲ್ಟಿ-ಇಯರ್ ಅಥವಾ ಲಾಂಗ್ ಟರ್ಮ್ ಟು-ವೀಲರ್ ವೆಹಿಕಲ್ ಇನ್ಶೂರೆನ್ಸ್  ಪಾಲಿಸಿಗಳನ್ನು ಪರಿಚಯಿಸಿದ್ದಾರೆ. ಮೊದಲಿಗೆ, ಈ ಮಲ್ಟಿ-ಇಯರ್ ಇನ್ಶೂರೆನ್ಸ್ ಪಾಲಿಸಿಗಳನ್ನು 3 ವರ್ಷಗಳ ಅವಧಿಗೆ ಪ್ರಾರಂಭಿಸಲಾಯಿತು. ಈಗ, ಅವುಗಳನ್ನು 5 ವರ್ಷಗಳವರೆಗೆ ವಿಸ್ತರಿಸಬಹುದು.

3 ವರ್ಷಗಳವರೆಗೆ ಬೈಕ್ ಇನ್ಶೂರೆನ್ಸ್ ಅನ್ನು  ಖರೀದಿಸುವುದರಿಂದ ಆಗುವ ಪ್ರಯೋಜನಗಳು ಮತ್ತು ನೀವು ಹಾಗೆ ಮಾಡುವುದು ಏಕೆ ಸೂಕ್ತ ಎಂಬುದರ ಕುರಿತು ಕೆಳಗೆ ವಿವರಿಸಲಾಗಿದೆ.

3 ವರ್ಷಗಳಿಗೆ ಟು-ವೀಲರ್ ವೆಹಿಕಲ್ ಇನ್ಶೂರೆನ್ಸಿನ ಅರ್ಥವೇನು?

3 ವರ್ಷಗಳ ಟು-ವೀಲರ್ ಇನ್ಶೂರೆನ್ಸ್ ಪಾಲಿಸಿಯು, ವಾಹನ-ಮಾಲೀಕರನ್ನು ಪ್ರತಿ ವರ್ಷ ತಮ್ಮ ಇನ್ಶೂರೆನ್ಸ್ ಪಾಲಿಸಿಯನ್ನು ರಿನೀವಲ್ ಮಾಡಿಸಬೇಕಾದ ಅಗತ್ಯದಿಂದ ಮುಕ್ತಗೊಳಿಸುತ್ತದೆ.

ಇನ್ಶೂರೆನ್ಸ್ ರೆಗ್ಯುಲೇಟರಿ ಅಂಡ್ ಡೆವಲಪ್'ಮೆಂಟ್ ಅಥಾರಿಟಿಯು (IRDA)  ಮಲ್ಟಿ-ಇಯರ್ ಇನ್ಶೂರೆನ್ಸ್ ಪಾಲಿಸಿಗಳ ಈ ಸೌಲಭ್ಯವನ್ನು 'ಸ್ಟ್ಯಾಂಡ್‌ಲೋನ್ ಥರ್ಡ್-ಪಾರ್ಟಿ ಲೈಬಿಲಿಟಿ ಕವರ್‌ಗಳಿಗೆ' ಮತ್ತು ಟು-ವೀಲರ್ ವೆಹಿಕಲ್‌ಗಳಿಗೆ ಓನ್-ಡ್ಯಾಮೇಜ್ ಕವರ್‌ಗಳೊಂದಿಗೆ ಸಂಯೋಜಿಸಿದೆ.

ಇವು ಏನನ್ನು ಒಳಗೊಳ್ಳುತ್ತವೆ?

ಕವರ್‌ನ ವಿಧಗಳು ಅರ್ಥ
ಥರ್ಡ್ ಪಾರ್ಟಿ ಲೈಬಿಲಿಟಿ ಕವರ್ ಈ ಇನ್ಶೂರೆನ್ಸ್ ಪಾಲಿಸಿಯು, ನಿಮ್ಮ ಟು-ವೀಲರ್‌ನಿಂದ ಉಂಟಾಗುವ ದೈಹಿಕ ಗಾಯ ಅಥವಾ ಥರ್ಡ್ ಪಾರ್ಟಿಯ ಮರಣ ಅಥವಾ ಥರ್ಡ್ ಪಾರ್ಟಿ ವೆಹಿಕಲ್‌ಗಳಿಗೆ ಉಂಟಾಗುವ ಯಾವುದೇ ಹಾನಿಯ ಹೊಣೆಗಾರಿಕೆಗಳನ್ನು ಕವರ್ ಮಾಡುತ್ತದೆ.
ಓನ್ ಡ್ಯಾಮೇಜ್ ಕವರ್ ನೈಸರ್ಗಿಕ ಅಥವಾ ಮಾನವ ನಿರ್ಮಿತ ಕಾರಣಗಳಿಂದ ನಿಮ್ಮ ಸ್ವಂತ ವಾಹನಕ್ಕೆ ಉಂಟಾದ ಯಾವುದೇ ನಷ್ಟ ಅಥವಾ ಹಾನಿಯ ಹೊಣೆಗಾರಿಕೆಗಳನ್ನು ಕವರ್ ಮಾಡುತ್ತದೆ

ನೀವು 3 ವರ್ಷಗಳ ಥರ್ಡ್-ಪಾರ್ಟಿ ಲೈಬಿಲಿಟಿ ಕವರ್ + 1 ವರ್ಷದ ಓನ್ ಡ್ಯಾಮೇಜ್ ಕವರ್ ಸೇರಿದಂತೆ, ಬಂಡಲ್ ಪಾಲಿಸಿಯಾಗಿ ಟು-ವೀಲರ್ ವೆಹಿಕಲ್‌ಗಳಿಗೆ, 3 ವರ್ಷಗಳ ಇನ್ಶೂರೆನ್ಸ್ ಪಾಲಿಸಿಯನ್ನು ಸಹ  ಪಡೆಯಬಹುದು.

ಕಾಂಪ್ರೆಹೆನ್ಸಿವ್ ಮೂರು ವರ್ಷಗಳ ಇನ್ಶೂರೆನ್ಸ್ ಕವರ್‌ಗಳಿಗೆ ಸಂಬಂಧಿಸಿದಂತೆ, 1ನೇ ಸೆಪ್ಟೆಂಬರ್ 2018 ರ ನಂತರ ಖರೀದಿಸಿದ ಟು-ವೀಲರ್ ವೆಹಿಕಲ್‌ಗಳಿಗೆ ಮಾತ್ರ ಇವುಗಳನ್ನು ಪಡೆಯಬಹುದು.

ಕಾಂಪ್ರೆಹೆನ್ಸಿವ್ ಟು-ವೀಲರ್ ವೆಹಿಕಲ್ ಇನ್ಶೂರೆನ್ಸ್ ಕುರಿತು ಇನ್ನಷ್ಟು ತಿಳಿಯಿರಿ.

3 ವರ್ಷಗಳ ಪಾಲಿಸಿಗಾಗಿ ಟು-ವೀಲರ್ ವೆಹಿಕಲ್ ಇನ್ಶೂರೆನ್ಸಿನ ನಿಮ್ಮ ಪ್ರೀಮಿಯಂ ಎಷ್ಟಾಗುತ್ತದೆ ?

3-ವರ್ಷದ ಟು-ವೀಲರ್ ವೆಹಿಕಲ್ ಇನ್ಶೂರೆನ್ಸಿನ ಪ್ರೀಮಿಯಂ ಅನ್ನು, ವಾರ್ಷಿಕ ಥರ್ಡ್ ಪಾರ್ಟಿ ಪ್ರೀಮಿಯಂ ಪಾವತಿಯ, ಮೂರು ಪಟ್ಟು ಎಂದು ಲೆಕ್ಕಹಾಕಲಾಗುತ್ತದೆ. ನೀವು ಈ ಪಾವತಿಯನ್ನು ಒಂದೇ ಕಂತಿನಲ್ಲಿ ಪಾವತಿಸಬೇಕಾಗುತ್ತದೆ. ನೀವಿದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು:

  • ಈ ಪ್ರೀಮಿಯಂ ಮೊತ್ತವನ್ನು, ಸಂಪೂರ್ಣ 3 ವರ್ಷಗಳ ಪಾಲಿಸಿ ಅವಧಿಯಲ್ಲಿ ಬದಲಾಯಿಸಲು ಅಥವಾ ಪರಿಷ್ಕರಣೆ ಮಾಡಲು ಆಗುವುದಿಲ್ಲ.
  •  ನೀವು ಸ್ಟ್ಯಾಂಡ್‌ಲೋನ್ 3-ವರ್ಷದ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಅನ್ನು ಹೊಂದಿದ್ದರೆ, ಪಾಲಿಸಿ ಅವಧಿಯಲ್ಲಿ (ವಾಹನದ ಒಟ್ಟು ನಷ್ಟದ ಸಂದರ್ಭವನ್ನು ಹೊರತುಪಡಿಸಿ) ಅದನ್ನು ರದ್ದುಗೊಳಿಸಲಾಗುವುದಿಲ್ಲ. ವಾಹನದ ಒಟ್ಟು ನಷ್ಟದ ಸಂದರ್ಭದಲ್ಲಿ, ಅವಧಿ ಮೀರಿದ ವರ್ಷಗಳವರೆಗೆ ಪಾವತಿಸಿದ ಪ್ರೀಮಿಯಂ ಅನ್ನು ಮರುಪಾವತಿಸಲಾಗುತ್ತದೆ.

ಈ ಪ್ರೀಮಿಯಂ ಪಾವತಿ ವ್ಯವಸ್ಥೆಯು ಪಾಲಿಸಿದಾರರಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.  ಏಕೆಂದರೆ ಇದು ಇನ್ಶೂರೆನ್ಸ್ ಪೂರೈಕೆದಾರರು ವಿಧಿಸುವ ವಾರ್ಷಿಕ ಪ್ರೀಮಿಯಂ ದರದ ಹೆಚ್ಚಳದಿಂದ ಪಾಲಿಸಿದಾರರನ್ನು ರಕ್ಷಿಸುತ್ತದೆ.

ಮತ್ತೊಂದೆಡೆ , ಇನ್ಶೂರೆನ್ಸ್ ಪೂರೈಕೆದಾರರಿಗೆ ಇದು ಅನುಕೂಲಕರವಾಗಿದೆ. ಏಕೆಂದರೆ ಇದು ಏಕಕಾಲದಲ್ಲಿ 3 ವರ್ಷಗಳವರೆಗೆ ಪ್ರೀಮಿಯಂ ಅನ್ನು ಸಂಗ್ರಹಿಸಲು ಅನುವು ಮಾಡಿಕೊಡುತ್ತದೆ. ಇದು ಅವರಿಗೆ ಆಡಳಿತಾತ್ಮಕ ಶುಲ್ಕಗಳನ್ನು ಉಳಿಸುವಲ್ಲಿ ಸಹಾಯ ಮಾಡುತ್ತದೆ.

ಇದರ ಹೊರತಾಗಿ, ವಾಹನ ಮಾಲೀಕರಿಗೆ 3 ವರ್ಷಗಳ ಟು-ವೀಲರ್ ವೆಹಿಕಲ್ ಇನ್ಶೂರೆನ್ಸ್ ಪ್ರಯೋಜನಕಾರಿ ಎನ್ನಲು ಇನ್ನೂ ಹಲವಾರು ಕಾರಣಗಳಿವೆ.

ಒಮ್ಮೆ ನೋಡಿ!

ಲಾಂಗ್ ಟರ್ಮ್ ಟು-ವೀಲರ್ ಇನ್ಶೂರೆನ್ಸ್‌ಗಾಗಿ ಪ್ರೀಮಿಯಂ ಲೆಕ್ಕಾಚಾರ

ಅವಧಿ ಪ್ರೀಮಿಯಂ ಮೊತ್ತ (OD+TP) ಜಿ.ಎಸ್.ಟಿ ಹೊರತುಪಡಿಸಿ
3 ವರ್ಷಗಳು ₹2,497
2 ವರ್ಷಗಳು ₹1,680
1 ವರ್ಷಗಳು ₹854

ಪರಿಶೀಲಿಸಿ : ಟು-ವೀಲರ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ಮತ್ತು ನಿಮ್ಮ ವೆಹಿಕಲ್‌ನ ಪ್ರೀಮಿಯಂ ಅನ್ನು ಲೆಕ್ಕಾಚಾರ ಮಾಡಿ.

3 ವರ್ಷಗಳ ಲಾಂಗ್ ಟರ್ಮ್ ಟು-ವೀಲರ್ ಇನ್ಶೂರೆನ್ಸ್ ಅನ್ನು ಪಡೆಯುವ ಪ್ರಯೋಜನಗಳು

3 ವರ್ಷಗಳ ಟು-ವೀಲರ್ ಇನ್ಶೂರೆನ್ಸ್, ಸಾಮಾನ್ಯವಾದ ಇನ್ಶೂರೆನ್ಸ್‌ಗಳಿಗಿಂತ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ನೀವು ಯಾವುದಾದರು ಒಂದನ್ನು ಆಯ್ಕೆ ಮಾಡಲು ಸುಲಭವಾಗುವಂತೆ, ಅವುಗಳಲ್ಲಿ ಪ್ರಮುಖವಾದವುಗಳನ್ನು ನಾವು ಕೆಳಗೆ ಪಟ್ಟಿ ಮಾಡಿದ್ದೇವೆ:

1. ನಾನ್-ರಿನೀವಲ್‌ನ ಪರಿಣಾಮಗಳನ್ನು ತಪ್ಪಿಸುವುದು

ನಿಮ್ಮ ಇನ್ಶೂರೆನ್ಸ್ ಪಾಲಿಸಿಯ ಲ್ಯಾಪ್ಸ್ ಮತ್ತು ಅದರ ರಿನೀವಲ್‌ಗಳ ನಡುವಿನ ಅವಧಿಯು, ನಿಮ್ಮನ್ನು ಹಲವಾರು ಅಪಾಯಗಳಿಗೆ ಒಡ್ಡಬಹುದು. ಉದಾಹರಣೆಗೆ, ಟ್ರಾಫಿಕ್ ಉಲ್ಲಂಘನೆಯ ಕಾರಣದಿಂದಾಗಿ ಭಾರಿ ದಂಡಕ್ಕೆ ಕಾರಣವಾಗಬಹುದು ಮತ್ತು ಪಾಲಿಸಿಯ ಅವಧಿಯಲ್ಲಿ ಯಾವುದೇ ಅಪಘಾತದಿಂದ, ಹಣಕಾಸಿನ ಹೊಣೆಗಾರಿಕೆಗಳು ನಿಮ್ಮನ್ನು ಭಾರಿ ನಷ್ಟಕ್ಕೆ ನೂಕಬಹುದು.

3 ವರ್ಷಗಳ ಬೈಕ್ ಇನ್ಶೂರೆನ್ಸ್‌ನೊಂದಿಗೆ ನೀವು ಕನಿಷ್ಠ 3 ವರ್ಷಗಳ ಪಾಲಿಸಿಯ ಅವಧಿಯವರೆಗೆ ಈ ಅಪಾಯಗಳನ್ನು ಸಾಕಷ್ಟು ಮಟ್ಟಿಗೆ ಕಡಿಮೆ ಮಾಡಬಹುದು.

2. ಅನುಕೂಲತೆ

ಹೆಚ್ಚಿನ ಸಂದರ್ಭಗಳಲ್ಲಿ, ಟು-ವೀಲರ್ ಮಾಲೀಕರು ತಮ್ಮ 1-ವರ್ಷದ ಪಾಲಿಸಿಯ ಅವಧಿ ಮುಗಿದ ನಂತರ, ತಮ್ಮ ಇನ್ಶೂರೆನ್ಸ್ ಪಾಲಿಸಿಗಳನ್ನು ರಿನೀವ್ ಮಾಡುವುದನ್ನು ಮರೆತುಬಿಡುತ್ತಾರೆ. 3-ವರ್ಷದ ಪ್ಲ್ಯಾನ್‌ನೊಂದಿಗೆ, ನೀವು ಯಾವುದೇ ಪರಿಣಾಮಗಳಿಲ್ಲದೆ 3 ವರ್ಷಗಳವರೆಗೆ ನಿಮ್ಮ ಪಾಲಿಸಿಯನ್ನು ರಿನೀವಲ್ ಮಾಡಿಸುವುದನ್ನು ಮರೆಯಬಹುದು.

ಅದಕ್ಕಾಗಿಯೇ ಈ ಪ್ಲ್ಯಾನ್‌ಗಳು ಹೆಚ್ಚು ಅನುಕೂಲಕರವಾಗಿವೆ. ಏಕೆಂದರೆ ಅವು ನಿಮ್ಮ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪಾಲಿಸಿಯನ್ನು ವಾರ್ಷಿಕವಾಗಿ ರಿನೀವ್ ಮಾಡುವ ಅಗತ್ಯವನ್ನು ತಡೆಯುತ್ತವೆ.

3. ದೀರ್ಘಾವಧಿಯಲ್ಲಿ ಕಡಿಮೆ ವೆಚ್ಚದಾಯಕವಾದುದು

3 ವರ್ಷಗಳ ಇನ್ಶೂರೆನ್ಸ್ ಪಾಲಿಸಿಯಲ್ಲಿ, ನೀವು 3 ವರ್ಷಗಳ ಪ್ರೀಮಿಯಂ ಪಾವತಿಯನ್ನು ಏಕಕಾಲದಲ್ಲಿ ಪಾವತಿಸಬೇಕಾಗುತ್ತದೆ. ಆದರೆ ಈ ಒಟ್ಟು ವೆಚ್ಚದ ಬದಲಾಗಿ, ದೀರ್ಘಾವಧಿಯಲ್ಲಿ ನಿಮ್ಮ ಪ್ರೀಮಿಯಂ ಪಾವತಿಗಳಲ್ಲಿ ನೀವು ಸಾಕಷ್ಟು ಉಳಿತಾಯ ಮಾಡುತ್ತೀರಿ.

ಏಕೆಂದರೆ ಇನ್ಶೂರೆನ್ಸ್ ಪೂರೈಕೆದಾರರು ತಮ್ಮ ಇನ್ಶೂರೆನ್ಸ್ ಪಾಲಿಸಿಗಳಿಗಾಗಿ,

ಪ್ರೀಮಿಯಂ ದರಗಳನ್ನು ವಾರ್ಷಿಕವಾಗಿ  ಪರಿಷ್ಕರಿಸುತ್ತಾರೆ ಹಾಗೂ ಹೆಚ್ಚಳ ಮಾಡುತ್ತಾರೆ. ಹಣದುಬ್ಬರದಿಂದಾಗಿ, ಪ್ರೀಮಿಯಂ ದರಗಳಲ್ಲಿ ಈ ಹೆಚ್ಚಳವು 10-15% ವರೆಗೆ ಹೋಗಬಹುದು.

ನೀವು 3 ವರ್ಷಗಳ ಪಾಲಿಸಿಯನ್ನು ಹೊಂದಿದ್ದರೆ, ಪಾಲಿಸಿಯ ಅವಧಿ ಮುಗಿಯುವವರೆಗೆ ಹೆಚ್ಚಿನ ಪ್ರೀಮಿಯಂಗಳನ್ನು ಪಾವತಿಸುವುದರಿಂದ  ನಿಮ್ಮನ್ನು ನೀವು ಉಳಿಸಿಕೊಳ್ಳಬಹುದು. ಈ ರೀತಿಯಾಗಿ, ದೀರ್ಘಾವಧಿಯಲ್ಲಿ ನಿಮ್ಮ ಪಾಲಿಸಿಯು ತುಂಬಾ ಅಗ್ಗವಾಗುತ್ತದೆ.

4. ಹೆಚ್ಚಿನ ಐಡಿವಿ(IDV)ಯನ್ನು ಪಡೆದುಕೊಳ್ಳಿ

ಇನ್ಶೂರೆನ್ಸ್‌ನ ಘೋಷಿತ ಮೌಲ್ಯ ಅಥವಾ ಐಡಿವಿ ಎನ್ನುವುದು ವಾಹನದ ಒಟ್ಟು ನಷ್ಟದ ವಿರುದ್ಧ, ಇನ್ಶೂರೆನ್ಸ್ ಕಂಪನಿಯು ಭರವಸೆ ನೀಡಿದ ಒಟ್ಟು ಮೊತ್ತವಾಗಿದೆ.

 

ಐಡಿವಿ ಅನ್ನು = ತಯಾರಕರ ರಿಜಿಸ್ಟರ್ಡ್ ಬೆಲೆಯಿಂದ - ವೆಹಿಕಲ್‌ನ ಡೆಪ್ರಿಸಿಯೇಷನ್ ಮಾಡಿ ನೀಡಲಾಗಿದೆ. ನಿಮ್ಮ ಟು-ವೀಲರ್ ವೆಹಿಕಲ್‌ನ ಡೆಪ್ರಿಸಿಯೇಷನ್ ಅನ್ನು ಗಣನೆಗೆ ತೆಗೆದುಕೊಂಡು, ನಿಮ್ಮ ಇನ್ಶೂರೆನ್ಸ್ ಪಾಲಿಸಿಯನ್ನು ನೀವು ರಿನೀವ್ ಮಾಡಿಸಿದಾಗ, ಐಡಿವಿ ಮೌಲ್ಯವನ್ನು ಪರಿಷ್ಕರಿಸಲಾಗುತ್ತದೆ.

ಈಗ, ನೀವು 3-ವರ್ಷದ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆದಾಗ, ಆ ಮೂರು ವರ್ಷಗಳ ಅವಧಿಗೆ, ನಿಮ್ಮ ಐಡಿವಿ ಬದಲಾಗದೆ ಹಾಗೇ ಉಳಿಯುತ್ತದೆ. ಇದು ನಿಮ್ಮ ವೆಹಿಕಲ್‌ನ ಒಟ್ಟು ನಷ್ಟದ ವಿರುದ್ಧ ಹೆಚ್ಚಿನ ಇನ್ಶೂರೆನ್ಸ್ ಮೊತ್ತವನ್ನು ಪಡೆಯಲು, ನಿಮಗೆ ಸಹಾಯ ಮಾಡುತ್ತದೆ.

5. ಅಧಿಕ ನೋ ಕ್ಲೇಮ್ ಬೋನಸ್ - ಎನ್‌ಸಿಬಿ

ನೋ ಕ್ಲೇಮ್ ಬೋನಸ್ ಎಂದರೆ ನೀವು ಹಿಂದಿನ ವರ್ಷದಲ್ಲಿ ಯಾವುದೇ ಕ್ಲೇಮ್‌ಗಳನ್ನು ಮಾಡದೇ ಇದ್ದಲ್ಲಿ, ನಿಮ್ಮ ಇನ್ಶೂರೆನ್ಸ್ ಪಾಲಿಸಿಗೆ ನೀವು ಪಾವತಿಸಿದ ಪ್ರೀಮಿಯಂನಲ್ಲಿ ಪಡೆದುಕೊಳ್ಳಬಹುದಾದ ರಿಯಾಯಿತಿ.

ಮೂರು ವರ್ಷಗಳ ಟು-ವೀಲರ್ ಇನ್ಶೂರೆನ್ಸ್ ಪಾಲಿಸಿಗಳೊಂದಿಗೆ, ನೀವೀಗ ಒಂದು-ವರ್ಷದ ಪಾಲಿಸಿಗಳ ಮೇಲೆ ನಿಮ್ಮ ನೋ ಕ್ಲೇಮ್ ಬೋನಸ್‌ನ ಪ್ರಯೋಜನವನ್ನು ಆನಂದಿಸಬಹುದು.

ಉದಾಹರಣೆಗೆ, ನೀವು 3-ವರ್ಷದ ಪಾಲಿಸಿಯನ್ನು ಪಡೆದುಕೊಳ್ಳುವಾಗ, ನಿಮ್ಮ ಹಿಂದಿನ ಪಾಲಿಸಿಯಿಂದ ನೀವು 20% ಎನ್‌ಸಿಬಿ ಅನ್ನು ಹೊಂದಿದ್ದರೆ, ಮುಂದೆ ನೀವು ಪಾವತಿಸಲಿರುವ ಎಲ್ಲಾ 3 ವರ್ಷಗಳ  ಪ್ರೀಮಿಯಂಗಳ ಮೇಲೆ ಈ 20% ಎನ್‌ಸಿಬಿ ಅನ್ವಯವಾಗುತ್ತದೆ.

ಇದಲ್ಲದೆ, ಈ ನಿಟ್ಟಿನಲ್ಲಿ ಕೆಲವು ಇನ್ಶೂರೆನ್ಸ್ ಪೂರೈಕೆದಾರರು, ಒಂದೇ ವರ್ಷದ ಪಾಲಿಸಿಗಳಿಗೆ ಹೋಲಿಸಿದರೆ, ಲಾಂಗ್ ಟರ್ಮ್ ಪಾಲಿಸಿಗಳ ಕೊನೆಯಲ್ಲಿ, ತಮ್ಮ ಪಾಲಿಸಿದಾರರನ್ನು ಪ್ರೋತ್ಸಾಹಿಸಲು  ಹೆಚ್ಚಿನ ಎನ್‌ಸಿಬಿ ಅನ್ನು ಸಹ ನೀಡುತ್ತಾರೆ.

6. ಲಾಭದಾಯಕ ರಿಯಾಯಿತಿಗಳು

ಟು-ವೀಲರ್ ಮಾಲೀಕರು ಲಾಂಗ್ ಟರ್ಮ್ ಇನ್ಶೂರೆನ್ಸ್ ಪಾಲಿಸಿಗಳನ್ನು ಅಗತ್ಯವೆಂದು ಪರಿಗಣಿಸಬೇಕು. ಈ ನಿಟ್ಟಿನಲ್ಲಿ ಹೆಚ್ಚಿನ ಟು-ವೀಲರ್ ಮಾಲೀಕರನ್ನು ಪ್ರೇರೇಪಿಸಲು, ಇನ್ಶೂರೆನ್ಸ್ ಕಂಪನಿಗಳು ತಾವು ನೀಡುವ ಪಾಲಿಸಿಗಳ ಮೇಲೆ ಆಕರ್ಷಕ ರಿಯಾಯಿತಿಗಳನ್ನು ನೀಡುತ್ತಾರೆ. ಇಂತಹ ರಿಯಾಯಿತಿಗಳು ವಾಹನ ಮಾಲೀಕರಿಗೆ, ಇನ್ಶೂರೆನ್ಸ್ ಪಾಲಿಸಿಗಳನ್ನು ಹೊಂದಲು ಸಾಕಷ್ಟು ಅನುಕೂಲ ಮಾಡಿಕೊಡಬಹುದು.

7. ಇನ್ಶೂರೆನ್ಸ್ ರಿನೀವಲ್‌ಗಾಗಿ ಬ್ರೇಕ್-ಇನ್ ಪಾಲಿಸಿ

ಕೆಲವೊಮ್ಮೆ, ನಿಮ್ಮ ಇನ್ಶೂರೆನ್ಸ್ ರಿನೀವಲ್‌ಗಳ ನಡುವಿನ ಅಂತರವು, ನಿಮ್ಮ ಪಾಲಿಸಿಯನ್ನು ರಿನೀವಲ್ ಮಾಡಲು ಇನ್ಶೂರೆನ್ಸ್ ಪೂರೈಕೆದಾರರು ಒಪ್ಪುವ ಮೊದಲು, ನಿಮ್ಮ ಟು-ವೀಲರ್ ವೆಹಿಕಲ್‌ ಅನ್ನು ತಪಾಸಣೆ ಮಾಡುವ ಭರವಸೆ ನೀಡಬಹುದು. ಇದನ್ನು ಬ್ರೇಕ್-ಇನ್ ಪಾಲಿಸಿ ಎಂದು ಕರೆಯಲಾಗುತ್ತದೆ ಮತ್ತು  ಮುಂದೆ ಇದು ಹೆಚ್ಚಿನ ಪ್ರೀಮಿಯಂ ಪಾವತಿಗೆ ಕಾರಣವಾಗಬಹುದು.

ನೀವು 3 ವರ್ಷಗಳ ಲಾಂಗ್ ಟರ್ಮ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆದಾಗ, ನಿಮ್ಮ ಪಾಲಿಸಿಯೊಂದಿಗೆ ಬ್ರೇಕ್-ಇನ್‌ಗಳನ್ನು ತಪ್ಪಿಸಬಹುದು ಹಾಗೂ ನಂತರದಲ್ಲಿ ನಿಮ್ಮ ಪ್ರೀಮಿಯಂಗೆ ಯಾವುದೇ ಹೆಚ್ಚುವರಿ ಸೇರ್ಪಡೆಯಿಲ್ಲದೆ ಪಾಲಿಸಿಯನ್ನು ಮುಂದುವರಿಸಬಹುದು.

ಇಂತಹ ಪ್ರಯೋಜನಗಳು ಮತ್ತು ಹೆಚ್ಚಿನವುಗಳೊಂದಿಗೆ, ನಿಮ್ಮ ಟು-ವೀಲರ್‌ಗೆ ಸಂಭವಿಸಬಹುದಾದ ಯಾವುದೇ ಅನಿರೀಕ್ಷಿತ ಹಣಕಾಸಿನ ಅಪಾಯಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು, ಈ ಮಲ್ಟಿ-ಇಯರ್ ಟು-ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಗಳು ಹೆಚ್ಚು ಉತ್ತಮವಾದ ಆಯ್ಕೆಯಾಗಿದೆ.

ಭಾರತದಲ್ಲಿನ ಹೆಚ್ಚಿನ ಪ್ರಮುಖ ಇನ್ಶೂರೆನ್ಸ್ ಪೂರೈಕೆದಾರರು, ಲಾಂಗ್ ಟರ್ಮ್ ಇನ್ಶೂರೆನ್ಸ್ ಕವರ್‌ಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ IRDA ಯ ಈ ಕ್ರಮವನ್ನು ಸ್ವಾಗತಿಸಿರುವುದರಿಂದ, ನೀವು ಪಾಲಿಸಿಯನ್ನು ಖರೀದಿಸಲು ಹಲವಾರು ಆಯ್ಕೆಗಳನ್ನು ಪಡೆಯಬಹುದು.

ಆದ್ದರಿಂದ ನಿಲ್ಲುವುದನ್ನು ಬಿಟ್ಟುಬಿಡಿ! ಇಂದೇ ನಿಮ್ಮ ಟು-ವೀಲರ್ ವಾಹನಕ್ಕೆ 3 ವರ್ಷಗಳ ಪಾಲಿಸಿಯಡಿಯಲ್ಲಿ ಇನ್ಶೂರೆನ್ಸ್ ಪಡೆಯಿರಿ!

3 ವರ್ಷಗಳ ಟು-ವೀಲರ್ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು

ಲಾಂಗ್ ಟರ್ಮ್ ಇನ್ಶೂರೆನ್ಸ್ ಪಾಲಿಸಿಯನ್ನು 3 ವರ್ಷಗಳಿಗಿಂತ ಹೆಚ್ಚು ಸಮಯದವರೆಗೆ ಪಡೆಯಬಹುದೇ?

ಹೌದು, ಐಆರ್‌ಡಿಎ ಇನ್ಶೂರೆನ್ಸ್ ಪೂರೈಕೆದಾರರಿಗೆ ಈ ಪಾಲಿಸಿಗಳನ್ನು 5 ವರ್ಷಗಳವರೆಗೆ ನೀಡಲು ಅವಕಾಶ ಮಾಡಿಕೊಟ್ಟಿದೆ.

ಕಾಂಪ್ರೆಹೆನ್ಸಿವ್ ಇನ್ಶೂರೆನ್ಸಿಗಾಗಿ ಮೂರು ವರ್ಷಗಳ ಇನ್ಶೂರೆನ್ಸ್ ಕವರ್ ಅನ್ನು ಪಡೆಯಬಹುದೇ?

ಹೌದು. 1ನೇ ಸೆಪ್ಟೆಂಬರ್ 2018 ರ ನಂತರ ಖರೀದಿಸಿದ ಹೊಸ ಟು-ವೀಲರ್‌ಗಳಿಗೆ, ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಲಭ್ಯವಿದೆ.

ಓನ್ ಡ್ಯಾಮೇಜ್ ಕವರ್‌ಗಾಗಿ, ಮೂರು ವರ್ಷಗಳ ಪ್ಲ್ಯಾನ್ ಅನ್ನು ಪ್ರತ್ಯೇಕವಾಗಿ ಪಡೆಯಬಹುದೇ?

ಇಲ್ಲ, ಇದು ಓನ್ ಡ್ಯಾಮೇಜ್ ಕವರ್‌ಗಳಿಗೆ ಪ್ರತ್ಯೇಕವಾಗಿ ಲಭ್ಯವಿಲ್ಲ.