ಭಾರತದಲ್ಲಿನ ಪ್ರಮುಖ ಟೂ-ವೀಲರ್ ಕಂಪನಿಗಳಲ್ಲಿ ಒಂದಾದ ಹೋಂಡಾ, ತನ್ನ ಹಾರ್ನೆಟ್ ಸಿರೀಸ್ನ ಆರಂಭಿಕ ಮಾಡೆಲ್ ಅನ್ನು ಡಿಸೆಂಬರ್ 2015 ರಲ್ಲಿ ಬಿಡುಗಡೆ ಮಾಡಿತು. ಅಂದಿನಿಂದ, ಗ್ರಾಹಕರ ಅವಶ್ಯಕತೆಗಳನ್ನು ಪೂರೈಸಲು ಈ ಮೋಟಾರ್ಸೈಕಲ್ಗೆ ಸಂಬಂಧಿಸಿದಂತೆ ನಿರಂತರ ಅಪ್ಗ್ರೇಡ್ಗಳು ನಡೆದಿವೆ.
ನೀವು ಈ ಕಮ್ಯುಟರ್ನ ಮಾಲೀಕರಾಗಿದ್ದರೆ, ಅದಕ್ಕೆ ಎದುರಾಗುವ ಅಪಾಯ ಮತ್ತು ಹಾನಿಗಳನ್ನು ನೀವು ಮುಖ್ಯವಾಗಿ ಪರಿಗಣಿಸಬೇಕು. ನೀವು ವ್ಯಾಲಿಡ್ ಆಗಿರುವ ಹೋಂಡಾ ಹಾರ್ನೆಟ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿಲ್ಲದಿದ್ದರೆ, ಈ ಮಾಡೆಲ್ನ ಹಾನಿಗಾಗಿ ಪಾವತಿಸುವ ರಿಪೇರಿ ವೆಚ್ಚವು ನಿಮ್ಮ ಜೇಬಿಗೆ ಹೊರೆಯಾಗಬಹುದು.
ಟೂ-ವೀಲರ್ ಇನ್ಶೂರೆನ್ಸ್ ಪ್ಲ್ಯಾನ್ ಬೈಕ್ ಮಾಲೀಕರ ಪರವಾಗಿ ಕೆಲಸ ಮಾಡುವ ಪ್ರಯೋಜನಗಳ ರಾಶಿಯೊಂದಿಗೆ ಬರುತ್ತದೆ. ಜೊತೆಗೆ, ಭಾರತದಲ್ಲಿನ ಇನ್ಶೂರೆನ್ಸ್ ಕಂಪನಿಗಳು ವಾಹನ ಚಾಲಕರ (ಮೋಟರಿಸ್ಟ್ಗಳ) ಅಗತ್ಯಗಳಿಗೆ ತಕ್ಕಂತೆ ಡೀಲ್ಗಳನ್ನು ನೀಡುತ್ತವೆ. ಅವುಗಳಲ್ಲಿ, ಡಿಜಿಟ್ ಇನ್ಶೂರೆನ್ಸ್ ಕಂಪನಿಯು ತಮ್ಮ ಟೆಕ್ನಾಲಜಿ-ಡ್ರೈವನ್ ಪ್ರಕ್ರಿಯೆಗಳು ಮತ್ತು ಇತರ ಪರ್ಕ್ಗಳಿಂದಾಗಿ ಎಲ್ಲರಿಗಿಂತ ವಿಭಿನ್ನವಾಗಿ ಕಾಣುತ್ತಾರೆ.
ಈ ಸೆಗ್ಮೆಂಟ್ನಲ್ಲಿ, ಡಿಜಿಟ್ನಿಂದ ನೀಡಲಾದ ಪ್ರಯೋಜನಗಳ ವಿವರಗಳು, ಹೋಂಡಾ ಹಾರ್ನೆಟ್ ಇನ್ಶೂರೆನ್ಸ್ ಪಾಲಿಸಿ ರಿನೀವಲ್ ಅನ್ನು ಆಯ್ಕೆ ಮಾಡುವುದರ ಪ್ರಾಮುಖ್ಯತೆ ಮತ್ತು ಇತರ ವಿವರಗಳನ್ನು ನೀವು ನೋಡಬಹುದು.