ಎಚ್ ಎಮ್ ಎಸ್ ಐ, ಹೋಂಡಾ ಮೋಟಾರ್ ಕಂಪನಿ ಲಿಮಿಟೆಡ್, ಜಪಾನ್ ನ, ಒಂದು ನೇರ ಉಪ ಸಂಸ್ಥೆಯಾಗಿದ್ದು,. 1999 ನೇ ಇಸವಿಯಲ್ಲಿ ಭಾರತದಲ್ಲಿ ತನ್ನ ವಿಭಾಗವನ್ನು ಸ್ಥಾಪಿಸಿತ್ತು ಹಾಗೂ ಇದರ ಮುಖ್ಯ ಉತ್ಪಾದನಾ ಕಾರ್ಖಾನೆ ಹರ್ಯಾಣಾದ ಗುರ್ಗಾವ್ ಜಿಲ್ಲೆಯ ಮನೆಸರ್ ನಲ್ಲಿತ್ತು. ಅದರ ಜಪಾನಿ ಪರಂಪರೆಯಂತೆಯೇ ತನ್ನ ಸಾಮರ್ಥ್ಯ ಹಾಗೂ ಮೈಲೇಜ್ ನಿಂದ ತನ್ನನ್ನು ತಾನು ದೃಢಪಡಿಸಿಕೊಂಡ ಹೋಂಡಾ, ಶೀಘ್ರವೇ ತನ್ನ ಎರಡನೇ ಉತ್ಪಾದನಾ ಘಟಕವನ್ನು ರಾಜಸ್ಥಾನದ ಅಲವಾರ್ ಜಿಲ್ಲೆಯ ತಾಪುಕಾರದಲ್ಲಿ ಸ್ಥಾಪಿಸಿತು.
ಹೋಂಡಾ, ಹೀರೋ ಮೊಟೋಕಾರ್ಪ್ ಜೊತೆಗಿನ ಸಹಯೋಗದೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದರೂ, 2014 ನೇ ಇಸವಿಯಲ್ಲಿ ಅದು ತನ್ನನ್ನು ತಾನು ಸಂಪೂರ್ಣವಾಗಿ ಸ್ವತಂತ್ರವಾಗಿ ಸ್ಥಾಪಿಸಿತು. ಪ್ರಸ್ತುತ, ಇದು ಭಾರತದ ಟು ವೀಲರ್ ವಾಹನ ತಯಾರಕರಲ್ಲಿ ಅತೀ ದೋಡ್ಡ ಸ್ಥಾನದಲ್ಲಿದೆ.
ಹೋಂಡಾ ನೀಡುವ ಕೆಲವು ಮಾದರಿಗಳನ್ನು ಈ ಕೆಳಗೆ ಉಲ್ಲೇಖಿಸಲಾಗಿದೆ:
- ಹೋಂಡಾ ಆಕ್ಟಿವಾ ಐ
- ಹೋಂಡಾ ಆಕ್ಟಿವಾ 5G
- ಹೋಂಡಾ ಎಕ್ಸ್-ಬ್ಲೇಡ್
- ಹೋಂಡಾ ಹಾರ್ನೆಟ್ 160ಆರ್
- ಹೋಂಡಾ ಸಿಬಿಆರ್ 250ಆರ್
ಹೋಂಡಾ ಇತ್ತೀಚಿಗಷ್ಟೇ ಕೆಲವು ಹೈ ಎಂಡ್ ಮಾದರಿಗಳನ್ನು ಪರಿಚಯಿಸಿದೆ.
- ಹೋಂಡಾ ಸಿಬಿಆರ್ 300ಆರ್
- ಹೋಂಡಾ ಸಿಬಿಆರ್ 650ಆರ್
- ಹೋಂಡಾ ಸಿಬಿ1000ಆರ್
- ಹೋಂಡಾ ಗೋಲ್ಡ್ ವಿಂಗ್
ರೋಚಕ ವಿಷಯ ಏನೆಂದರೆ, ಪಟ್ಟಿಯಲ್ಲಿರುವ ಕೊನೆಯ ಮಾದರಿ-ಹೋಂಡಾ ಗೋಲ್ಡ್ ವಿಂಗ್, ಒಂದು ಅನನ್ಯ ರೀತಿಯ ಕ್ರೂಸರ್ ಆಗಿದೆ. ಈ ನವಿನತೆಯಲ್ಲಿ ರಿವರ್ಸ್ ಗೇರ್ ಮಾತ್ರವಲ್ಲದೆ ಐಚ್ಛಿಕ ಏರ್ ಬ್ಯಾಗ್ ಕೂಡಾ ಸೇರಿದ್ದು, ಇವರ ತಾಂತ್ರಿಕ ಚಾಣಾಕ್ಷತೆಯ ಒಂದು ಪರಿಚಯವಾಗಿದೆ.
ಹೋಂಡಾದ ಜನಪ್ರಿಯತೆಯ ಕಾರಣವೇನು?
ಹೋಂಡಾ ಟು ವೀಲರ್ ವಾಹನಗಳು ಎಲ್ಲಾ ವರ್ಗದ ಜನರ ಮಧ್ಯೆ ಜನಪ್ರಿಯವಾಗಲು ಹಲವು ಅಂಶಗಳು ಕಾರಣವಾಗಿವೆ. ಇದರ ಜೊತೆ, ಹೋಂಡಾದ ಇಲ್ಲಿಯವರೆಗಿನ ಸಾಧನೆಗಳೂ ಈ ಕಂಪನಿ ಪ್ರತೀ ವರ್ಷ ಹೊರತರುವ ಶ್ರೇಷ್ಠ ಟು ವೀಲರ್ ವಾಹನಗಳ ಸಾಕ್ಷಿಯಾಗಿದೆ.
ಇಲ್ಲಿ ಕೆಲವು ಅಂಶಗಳನ್ನು ನೋಡೋಣ:
- ಗುಜರಾತಿನ ವಿಠಲಪುರದಲ್ಲಿರುವ ಇದರ ಉತ್ಪಾದನಾ ಘಟಕ ಅತೀ ದೊಡ್ಡದಾಗಿದ್ದು, ಕೇವಲ ಸ್ಕೂಟರ್ ಉತ್ಪಾದನೆಗೆಂದೇ ಮೀಸಲಾಗಿದೆ.
- ಹೋಂಡಾದ ತಂತ್ರಜ್ಞಾನ ಉನ್ನತ ದರ್ಜೆಯದಾಗಿದ್ದು, ವಿಶ್ವದ ಕೇವಲ ಬೆರಳೆಣಿಕೆಯ ಟು ವೀಲರ್ ವಾಹನ ಉತ್ಪಾದಕರು ಇದಕ್ಕೆ ಸರಿಸಾಟಿಯಾಗಬಲ್ಲರು. ಯಮಹಾ ಹಾಗೂ ಡುಕಾಟಿಯ ನಂತರ, ಎಲ್ಲಾ ವಿಭಾಗಗಳಲ್ಲಿ, ಮೋಟೋಜಿಪಿಯಲ್ಲಿಯ ಮೂರನೇ ಅತೀ ಯಶಸ್ವೀ ಉತ್ಪಾದಕರು ಎಂಬ ಹೆಗ್ಗಳಿಕೆ ಇವರಿಗಿದೆ.
- 2004 ರೊಳಗೆ, ಹೋಂಡಾ ಅದರ ಇಂಧನ ಕೋಶ(ಫ಼್ಯುಯೆಲ್ ಸೆಲ್) ಶಕ್ತ ಮೋಟರ್ ಬೈಕುಗಳ ಮೂಲಮಾದರಿಯನ್ನು ನಿರ್ಮಿಸಿತ್ತು.
- 249 ಸಿಸಿ ಸಿಂಗಲ್- ಸಿಲಿಂಡರ್ ಎಂಜಿನ್ ಹೊಂದಿರುವ ಸಿಬಿಆರ್ 250ಆರ್, ಹೋಂಡಾ ಪರಿಚಯಿಸಿದ ಅತೀ ಸಣ್ಣ ರೇಸಿಂಗ್ ವರ್ಗದ ಮೋಟರ್ ಬೈಕ್ ಆಗಿದೆ.
ತನ್ನ ಗಡಿಗಳನ್ನು ತಳ್ಳುವುದು ಒಂದು ಕಂಪನಿಯನ್ನು ಜನಪ್ರಿಯಗೊಳಿಸಿದರೂ ಸಹ, ಯಶಸ್ಸನ್ನು ಖಚಿತಪಡಿಸದರೆ ಮಾತ್ರ ಅದು ಮುಂದೆ ಸಾಗಬಹುದು.ಟು ವೀಲರ್ ವಾಹನ ಉತ್ಪಾದನೆಯಲ್ಲಿ ಮಾತ್ರವಲ್ಲದೇ ತನ್ನ ಇತರ ಉದ್ಯಮಗಳಲ್ಲೂ ಕೂಡಾ, ಹೋಂಡಾದ ದೋಷರಹಿತ ಸಾಧನಾ ದಾಖಲೆಯು, ಇದನ್ನು ವಿಶ್ವದ ಚಿರಪರಿಚಿತ ತಯಾರಿಕರಲ್ಲಿ ಒಂದಾಗಿಸಿದೆ.
ಆದಾಗ್ಯೂ, ಟು ವೀಲರ್ ವಾಹನ ಉತ್ಪಾದನಾ ಉದ್ಯಮದಲ್ಲಿ ಹೋಂಡಾ ಅಡೆತಡೆಗಳನ್ನು ಮುರಿಯುತ್ತಿದ್ದರೂ ಸಹ, ಅದರಡಿಯಲ್ಲಿ ತಯಾರಾಗುವ ಮಾದರಿಗಳು ರಸ್ತೆ ಅಪಘಾತದ ಸಂದರ್ಭದಲ್ಲಿ ಇತರ ಟು ವೀಲರ್ ವಾಹನಗಳಷ್ಟೇ ಗಾಸಿಗೊಳಗಾಗುತ್ತವೆ. ಇಂತಹ ಪರಿಸ್ಥಿತಿಗಳು ನಿಮ್ಮನ್ನು, ನಿಮ್ಮ ಸ್ವಂತ ವಾಹನಕ್ಕೆ ಅಥವಾ ಅಪಘಾತಕ್ಕೆ ಸಿಲುಕಿದ ಥರ್ಡ್ ಪಾರ್ಟೀಗಾದ ಹಾನಿಗಳಿಗೆ ತೆರಬೇಕಾದ ಭಾರಿ ವೆಚ್ಚಗಳನ್ನು ಭರಿಸುವಂತೆ ಮಾಡುತ್ತವೆ.
ಇಂತಹ ಸಂದರ್ಭಗಳಲ್ಲಿ ಉತ್ಪನ್ನವಾಗುವ ಆರ್ಥಿಕ ಹೊಣೆಗಾರಿಕೆಗಳನ್ನು ಕಡಿಮೆಗೊಳಿಸಲು, ನೀವು ಹೋಂಡಾ ಟು ವೀಲರ್ ವಾಹನ ಇನ್ಶೂರೆನ್ಸ್ ಪಾಲಿಸಿ ಖರೀದಿಸುವುದು ಬಹಳ ಮುಖ್ಯವಾಗುತ್ತದೆ.