ಕಾಂಪ್ರೆಹೆನ್ಸಿವ್ vs ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್

ಆನ್‌ಲೈನ್‌ನಲ್ಲಿ ಬೈಕ್ ಇನ್ಶೂರೆನ್ಸ್ ಕೋಟ್ ಪಡೆಯಿರಿ

Third-party premium has changed from 1st June. Renew now

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ನಡುವಿನ ವ್ಯತ್ಯಾಸವೇನು?

ಥರ್ಡ್-ಪಾರ್ಟಿ ಮತ್ತು ಕಾಂಪ್ರೆಹೆನ್ಸಿವ್  ಬೈಕ್ ಇನ್ಶೂರೆನ್ಸ್ ನಡುವಿನ ಪ್ರಾಥಮಿಕ ವ್ಯತ್ಯಾಸವೆಂದರೆ ಕವರೇಜ್ ಪ್ರಯೋಜನಗಳು. ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಕೇವಲ ಥರ್ಡ್-ಪಾರ್ಟಿ ಸಂಬಂಧಿತ ಹೊಣೆಗಾರಿಕೆಗಳಿಗೆ ಮಾತ್ರ ರಕ್ಷಣೆ ನೀಡಿದರೆ, ಕಾಂಪ್ರೆಹೆನ್ಸಿವ್  ಬೈಕ್ ಇನ್ಶೂರೆನ್ಸ್, ನಿಮ್ಮ ಬೈಕ್‌ನ ಸ್ವಂತ ಹಾನಿಗಳಿಗೂ ರಕ್ಷಣೆ ನೀಡುತ್ತದೆ ಮತ್ತು ನಿಮ್ಮ ಕವರೇಜ್ ಅನ್ನು, ಆಡ್ಆನ್‌ಗಳು ಹಾಗೂ ಕವರ್‌ಗಳ ಮೂಲಕ ಮೂಲಭೂತ ಪ್ರಯೋಜನಗಳನ್ನು ಮೀರಿ ವಿಸ್ತರಿಸುತ್ತದೆ.

ನಿಮ್ಮ ಟು-ವೀಲರ್'ಗಾಗಿ ಉತ್ತಮ ರೀತಿಯ ಬೈಕ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡುವುದು ತುಂಬಾ ಮುಖ್ಯವಾಗಿದೆ. ಏಕೆಂದರೆ, ನಗರಗಳಲ್ಲಿ ಟು-ವೀಲರ್ ಓಡಿಸುವಾಗ ಸಂಭವಿಸಬಹುದಾದ ಅಪಾಯಗಳ ವ್ಯಾಪ್ತಿಯನ್ನು ಗಮನದಲ್ಲಿಟ್ಟುಕೊಂಡು, ಬೈಕ್ ಇನ್ಶೂರೆನ್ಸ್ ಅನ್ನು ಖರೀದಿಸಬೇಕಾಗುತ್ತದೆ. ಇದಲ್ಲದೆ ಹೊಸ ಟ್ರಾಫಿಕ್ ಕಾನೂನುಗಳು ಬಂದ ನಂತರ ಮತ್ತು ವ್ಯಾಲಿಡ್ ಬೈಕ್ ಇನ್ಶೂರೆನ್ಸ್ ಇಲ್ಲದಿದ್ದರೆ ನೀವು ಭಾರೀ ದಂಡವನ್ನು ಪಾವತಿಸಬೇಕಾಗುತ್ತದೆ. ಹಾಗಾಗಿ ಬೈಕ್ ಇನ್ಶೂರೆನ್ಸ್ ಅನ್ನು ಪಡೆಯದೇ ಇರುವುದು  ನಿಮಗೆ ಸಾಧ್ಯವಿಲ್ಲ.

ಸರಿಯಾದ ಬೈಕ್ ಇನ್ಶೂರೆನ್ಸ್ ಖರೀದಿಸುವ ನಿಮ್ಮ ನಿರ್ಧಾರವನ್ನು ಸುಲಭಗೊಳಿಸಲು, ನಾವು ನಿಮಗೆ ಥರ್ಡ್ ಪಾರ್ಟಿ ಮತ್ತು ಕಾಂಪ್ರೆಹೆನ್ಸಿವ್  ಬೈಕ್ ಇನ್ಶೂರೆನ್ಸಿನ ಪ್ರಯೋಜನಗಳು ಮತ್ತು ಮಿತಿಗಳನ್ನು ನೀಡಿದ್ದೇವೆ. ಆದ್ದರಿಂದ ನೀವು ನಿಮ್ಮ ಆಯ್ಕೆಗಳನ್ನು ಮೌಲ್ಯಮಾಪನ ಮಾಡಬಹುದು ಮತ್ತು ಅದಕ್ಕನುಗುಣವಾಗಿ ತಿಳುವಳಿಕೆಯುತ ನಿರ್ಧಾರವನ್ನು ತೆಗೆದುಕೊಳ್ಳಬಹುದು.

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ನಡುವಿನ ವ್ಯತ್ಯಾಸ

ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್
ಏನಿದು? ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಪಾಲಿಸಿಯು, ಥರ್ಡ್ ಪಾರ್ಟಿ ಲೈಬಿಲಿಟಿ ಇನ್ಶೂರೆನ್ಸ್ ಮತ್ತು ಓನ್-ಡ್ಯಾಮೇಜ್ ಕವರ್ ಎರಡರ ಸಂಯೋಜನೆಯೊಂದಿಗೆ ಎಲ್ಲ ಆಡ್ಸ್ ವಿರುದ್ಧ ನಿಮಗೆ ಸಂಪೂರ್ಣ ಕವರೇಜ್ ಅನ್ನು ನೀಡುತ್ತದೆ! ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್, ಥರ್ಡ್-ಪಾರ್ಟಿಗೆ ಉಂಟಾಗುವ ಹಾನಿಗಳಿಗೆ ರಕ್ಷಣೆ ನೀಡುವ ಖಡ್ಡಾಯ ಪಾಲಿಸಿಯಾಗಿದೆ. ಇದು ಮೋಟಾರ್ ವೆಹಿಕಲ್ಸ್ ಆಕ್ಟ್, 1988 ರ ಪ್ರಕಾರ ಭಾರತದಲ್ಲಿ ಕಾನೂನಿನ್ವಯ ಖಡ್ಡಾಯವಾಗಿದೆ.
ಕವರೇಜ್ ವಿವರ ಈ ಪಾಲಿಸಿಯು ವ್ಯಾಪಕ ಕವರೇಜ್ ಅನ್ನು ನೀಡುತ್ತದೆ. ಪಾಲಿಸಿಯು, ನಿಮ್ಮ ಬೈಕ್‌ಗೆ ಕಳ್ಳತನ, ನಷ್ಟ ಮತ್ತು ಹಾನಿಯ ವಿರುದ್ಧ ರಕ್ಷಣೆ ನೀಡುತ್ತದೆ. ಇದು ನಿಮ್ಮ ಬೈಕ್‌ಗೆ ಹಾಗೂ ಇನ್ನೊಬ್ಬ ವ್ಯಕ್ತಿಯ ವಾಹನ ಅಥವಾ ಆಸ್ತಿಗೆ ಉಂಟಾದ ಎಲ್ಲಾ ರೀತಿಯ ಹಾನಿಗಳ ವಿರುದ್ಧ ವಿತ್ತೀಯ (monetary) ಬೆಂಬಲವನ್ನು ನೀಡುತ್ತದೆ. ಈ ಪಾಲಿಸಿಯು ಸೀಮಿತ ವ್ಯಾಪ್ತಿಯನ್ನು ನೀಡುತ್ತದೆ. ಥರ್ಡ್-ಪಾರ್ಟಿ ಲೈಬಿಲಿಟಿ ಬೈಕ್ ಇನ್ಶೂರೆನ್ಸ್ ಎನ್ನುವುದು ಥರ್ಡ್ ಪಾರ್ಟಿಯ ಹಾನಿ/ನಷ್ಟದಿಂದ ಮಾತ್ರ ನಿಮ್ಮನ್ನು ರಕ್ಷಿಸುತ್ತದೆ.
ಆಡ್-ಆನ್‌ಗಳು ಈ ಪಾಲಿಸಿಯೊಂದಿಗೆ, ಝೀರೋ ಡೆಪ್ರಿಸಿಯೇಷನ್ ಕವರ್, ರಿಟರ್ನ್ ಟು ಇನ್‌ವಾಯ್ಸ್ ಕವರ್‌, ರಸ್ತೆಬದಿಯ ಸಹಾಯ ಮತ್ತು ಇತರ ಕನ್ಸ್ಯೂಮೇಬಲ್ ಕವರ್‌ನಂತಹ ಪ್ರಯೋಜನಕಾರಿ ಆಡ್-ಆನ್‌ಗಳನ್ನು ನೀವು ಆರಿಸಿಕೊಳ್ಳಬಹುದು ಈ ಪಾಲಿಸಿಯು, ಪರ್ಸನಲ್ ಆಕ್ಸಿಡೆಂಟ್ ಕವರ್ ಅನ್ನು ಮಾತ್ರ ಒದಗಿಸುತ್ತದೆ.
ನೀವು ಏನನ್ನು ಖರೀದಿಸಬೇಕು? ಆಡ್-ಆನ್‌ಗಳ ಜೊತೆಗೆ ನಿಮ್ಮ ಬೈಕ್‌ಗೆ ಸಂಪೂರ್ಣ ಕವರೇಜ್ ಅಗತ್ಯವಿದ್ದಲ್ಲಿ ಈ ಪಾಲಿಸಿಯನ್ನು ಶಿಫಾರಸ್ಸು ಮಾಡಲಾಗಿದೆ. ಒಂದುವೇಳೆ ನೀವು ನಿಮ್ಮ ಬೈಕ್ ಅನ್ನು ಅಪರೂಪಕ್ಕೆ ಓಡಿಸುತ್ತಿದ್ದರೆ, ಅಥವಾ ಅದು ಈಗಾಗಲೇ ತುಂಬಾ ಹಳೆಯದಾಗಿದ್ದರೆ ಈ ಪಾಲಿಸಿಯನ್ನು ಶಿಫಾರಸ್ಸು ಮಾಡಲಾಗಿದೆ .
ಪ್ರೀಮಿಯಂ ಬೆಲೆ ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಪಾಲಿಸಿಯ ಪ್ರೀಮಿಯಂ ಥರ್ಡ್ ಪಾರ್ಟಿ ಇನ್ಶೂರೆನ್ಸಿಗಿಂತ ಹೆಚ್ಚಾಗಿರುತ್ತದೆ. ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಪಾಲಿಸಿಯು ಕಡಿಮೆ ವೆಚ್ಚದ್ದಾಗಿದೆ.

ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಎಂದರೇನು?

ಥರ್ಡ್-ಪಾರ್ಟಿ ಕವರ್ ಮತ್ತು ಓನ್ ಡ್ಯಾಮೇಜ್ ಕವರ್ ಎರಡರ ಸಂಯೋಜನೆಯೇ, ಕಾಂಪ್ರೆಹೆನ್ಸಿವ್  ಬೈಕ್ ಇನ್ಶೂರೆನ್ಸ್. ಇದು ನೈಸರ್ಗಿಕ ವಿಕೋಪಗಳು, ಘರ್ಷಣೆಗಳು, ಅಪಘಾತ, ಇತ್ಯಾದಿಗಳಂತಹ ಅನಿರೀಕ್ಷಿತ ಸಂದರ್ಭಗಳಲ್ಲಿ ನಿಮ್ಮ ಸ್ವಂತ ಬೈಕ್‌ಗೆ ಉಂಟಾಗುವ ಎಲ್ಲ ಹಾನಿಗಳನ್ನು ಥರ್ಡ್ ಪಾರ್ಟಿ ಸಂಬಂಧಿತ ಹೊಣೆಗಾರಿಕೆಗಳಿಂದ ಕವರ್ ಮಾಡುತ್ತದೆ. ಆ ಮೂಲಕ ನಿಮ್ಮ ಬೈಕ್‌ಗೆ ವಿಶಾಲ ವ್ಯಾಪ್ತಿಯನ್ನು ನೀಡುತ್ತದೆ.

ಹೆಚ್ಚುವರಿಯಾಗಿ, ನಿಮ್ಮ ಟು-ವೀಲರ್ ಗೆ ಉತ್ತಮ ಕವರೇಜ್ ನೀಡಲು ನೀವು ಒಂದು ಅಥವಾ ವಿವಿಧ ಆಡ್-ಆನ್‌ಗಳ ಸಂಯೋಜನೆಯನ್ನು ಆರಿಸಿಕೊಳ್ಳಬಹುದು. ಉದಾಹರಣೆಗೆ;  ಕಾಂಪ್ರೆಹೆನ್ಸಿವ್  ಬೈಕ್ ಇನ್ಶೂರೆನ್ಸ್ ಅನ್ನು ಖರೀದಿಸುವಾಗ ನೀವು ರೋಡ್ ಸೈಡ್ ಅಸಿಸ್ಟೆನ್ಸ್ ಕವರ್ ಅನ್ನು ಸಹ  ಆರಿಸಿಕೊಳ್ಳಬಹುದು ಮತ್ತು ಅಗತ್ಯವಿದ್ದಾಗ ಬ್ರೇಕ್ ಡೌನ್ ಸಂಬಂಧಿತ ಅಸಿಸ್ಟೆನ್ಸ್ ಸಹ ಪಡೆಯಬಹುದು.

ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸಿನ ಪ್ರಯೋಜನಗಳು

ನಿಮ್ಮ ಬೈಕ್‌ನ ಹಾನಿಗಳನ್ನು ಕವರ್ ಮಾಡುತ್ತದೆ

ಜನರು ಕಾಂಪ್ರೆಹೆನ್ಸಿವ್  ಬೈಕ್ ಇನ್ಶೂರೆನ್ಸ್ ಆಯ್ಕೆ ಮಾಡಿಕೊಳ್ಳಲು #1 ಕಾರಣವೆಂದರೆ ಅದು ಒಬ್ಬರ ಸ್ವಂತ ಬೈಕ್‌ನ ಹಾನಿ ಮತ್ತು ನಷ್ಟಗಳಿಗೆ ರಕ್ಷಣೆ ನೀಡುತ್ತದೆ. ಹೀಗಾಗಿ ದುರದೃಷ್ಟಕರ ಘಟನೆಯ ಸಂದರ್ಭದಲ್ಲಿ ಈ ಪಾಲಿಸಿಯು ನಿಮ್ಮನ್ನು ಟನ್‌ಗಳಷ್ಟು ಹಣದ ತೊಂದರೆಯಿಂದ ಉಳಿಸುತ್ತದೆ!

ಥರ್ಡ್ ಪಾರ್ಟಿ ಹೊಣೆಗಾರಿಕೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ

ಥರ್ಡ್-ಪಾರ್ಟಿ ಕವರ್‌ನಂತೆ, ಕಾಂಪ್ರೆಹೆನ್ಸಿವ್  ಬೈಕ್ ಇನ್ಶೂರೆನ್ಸ್ ಕೂಡ ನಿಮ್ಮ ಬೈಕ್ ಅನ್ನು ಥರ್ಡ್ ಪಾರ್ಟಿ ಸಂಬಂಧಿತ ಹೊಣೆಗಾರಿಕೆಗಳಿಂದ ಮತ್ತು ನಷ್ಟಗಳಿಂದ ರಕ್ಷಿಸುತ್ತದೆ. ಉದಾಹರಣೆಗೆ; ನಿಮ್ಮ ಬೈಕ್ ಬೇರೊಬ್ಬರ ಕಾರಿಗೆ ಢಿಕ್ಕಿ ಹೊಡೆದರೆ, ನಿಮ್ಮ ಕಾಂಪ್ರೆಹೆನ್ಸಿವ್  ಬೈಕ್ ಇನ್ಶೂರೆನ್ಸ್ ನಿಮ್ಮನ್ನು ರಕ್ಷಿಸುತ್ತದೆ!

ನಿಮ್ಮ ಐಡಿವಿ (IDV) ಅನ್ನು ನೀವೇ ಕಸ್ಟಮೈಸ್ ಮಾಡುವ ಆಯ್ಕೆ!

ನೀವು ಡಿಜಿಟ್‌ನೊಂದಿಗೆ ಕಾಂಪ್ರೆಹೆನ್ಸಿವ್  ಬೈಕ್ ಇನ್ಶೂರೆನ್ಸ್ ಅನ್ನು ಖರೀದಿಸಲು ಆಯ್ಕೆ ಮಾಡಿದಾಗ, ನಿಮ್ಮ ಬೈಕ್‌ನ ಐಡಿವಿ (IDV)  ಅಥವಾ ನಿಮ್ಮ ಬೈಕ್‌ನ ಪ್ರಸ್ತುತ ಮಾರುಕಟ್ಟೆ ಮೌಲ್ಯವನ್ನು ಕಸ್ಟಮೈಸ್ ಮಾಡುವ ಆಯ್ಕೆಯನ್ನು ನಾವು ನಿಮಗೇ ನೀಡುತ್ತೇವೆ ಏಕೆಂದರೆ ನಿಮ್ಮ ಬೈಕ್ ಅನ್ನು ಎಲ್ಲರಿಗಿಂತ ಸರಿಯಾಗಿ ನೀವು ತಿಳಿದಿರುತ್ತೀರಿ ಎಂದು ಎಂದು ನಾವು ನಂಬುತ್ತೇವೆ!

ನೈಸರ್ಗಿಕ ವಿಕೋಪಗಳ ಸಮಯದಲ್ಲಿ ರಕ್ಷಣೆ

ಕಾಂಪ್ರೆಹೆನ್ಸಿವ್  ಬೈಕ್ ಇನ್ಶೂರೆನ್ಸ್, ಅಪಘಾತಗಳು ಮತ್ತು ಘರ್ಷಣೆಗಳ ಸಮಯದಲ್ಲಿ ಉಂಟಾಗುವ ಹಾನಿಗಳಿಂದ ನಿಮ್ಮ ಬೈಕ್ ಅನ್ನು ರಕ್ಷಿಸುವುದಲ್ಲದೆ, ಪ್ರವಾಹ, ಚಂಡಮಾರುತ ಮತ್ತು ಮುಂತಾದ ನೈಸರ್ಗಿಕ ವಿಕೋಪದಿಂದ ಉಂಟಾಗುವ ಯಾವುದೇ ಹಾನಿಗಳಿಂದಲೂ ನಿಮ್ಮ ಬೈಕ್ ಅನ್ನು ರಕ್ಷಿಸುತ್ತದೆ.

ಬೈಕ್ ಕಳ್ಳತನಕ್ಕೆ ಪರಿಹಾರ

ಕಾಂಪ್ರೆಹೆನ್ಸಿವ್  ಬೈಕ್ ಇನ್ಶೂರೆನ್ಸಿನ ಮತ್ತೊಂದು ದೊಡ್ಡ ಪ್ರಯೋಜನವೆಂದರೆ, ದುರದೃಷ್ಟಕರ ಸಂದರ್ಭದಲ್ಲಿ ನಿಮ್ಮ ಬೈಕ್ ಕಳ್ಳತನವಾದರೆ , ನಿಮ್ಮ ಕಾಂಪ್ರೆಹೆನ್ಸಿವ್  ಬೈಕ್ ಇನ್ಶೂರೆನ್ಸ್, ಅದರ ನಷ್ಟವನ್ನು ಸರಿದೂಗಿಸುತ್ತದೆ. ಹೆಚ್ಚುವರಿಯಾಗಿ, ನೀವು ರಿಟರ್ನ್ ಟು ಇನ್‌ವಾಯ್ಸ್ ಕವರ್‌ ಅನ್ನು ಆಯ್ಕೆಮಾಡಿದರೆ, ಕೊನೆಯ ಇನ್‌ವಾಯ್ಸ್ ಮೌಲ್ಯದ ಪ್ರಕಾರ, ನಿಮಗೆ ರಸ್ತೆ ತೆರಿಗೆಯೊಂದಿಗೆ ಪರಿಹಾರವನ್ನು ನೀಡಲಾಗುತ್ತದೆ.

ವೆಚ್ಚ ಪರಿಣಾಮಕಾರಿ ಆಯ್ಕೆ

ಮೇಲ್ನೋಟಕ್ಕೆ, ಕಾಂಪ್ರೆಹೆನ್ಸಿವ್  ಬೈಕ್ ಇನ್ಶೂರೆನ್ಸ್ ಹೆಚ್ಚು ದುಬಾರಿ ಎಂದು  ಭಾವಿಸಬಹುದು. ಆದರೆ ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸಿಗೆ ಹೋಲಿಸಿದರೆ ಇದು ಹೆಚ್ಚು ವೆಚ್ಚ ಪರಿಣಾಮಕಾರಿಯಾಗಿದೆ. ಇದಲ್ಲದೆ, ಮನುಷ್ಯರಾದ ನಾವು ಬೇರೆಯವರಿಗಿಂತ ನಮ್ಮ ಸ್ವಂತ ಬೈಕ್‌ಗೆ ಆಗುವ ಹಾನಿಯ ಬಗ್ಗೆಯೇ ಹೆಚ್ಚು ಕಾಳಜಿ ವಹಿಸುತ್ತೇವೆ, ಅಲ್ಲವೇ?

ವೈಯಕ್ತಿಕ ಹಾನಿಗಳಿಗೂ ಕವರ್!

ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಮತ್ತು ಕಾಂಪ್ರಹೆನ್ಸಿವ್ ಬೈಕ್ ಇನ್ಶೂರೆನ್ಸ್ ಇವೆರಡು, ಪರ್ಸನಲ್ ಆಕ್ಸಿಡೆಂಟ್ ಕವರ್ ಅನ್ನು ವೈಯಕ್ತಿಕ ಹಾನಿಗಳ ವಿರುದ್ಧ ಕವರ್ ಮಾಡಲು ಸಹ ಬಳಸಬಹುದು! ನೀವು ಟು-ವೀಲರ್ ಅನ್ನು ಹೊಂದಿರುವುದರಿಂದ, ಪರ್ಸನಲ್ ಆಕ್ಸಿಡೆಂಟ್ ಕವರ್ ಅನ್ನು ನಿಮ್ಮ ಬೈಕ್ ಇನ್ಶೂರೆನ್ಸಿನ ಭಾಗವಾಗಿ ಹೊಂದುವುದು ಅತೀ ಮುಖ್ಯವಾಗಿದೆ. (ಮತ್ತು ಕಾನೂನಿನ ಮೂಲಕ ಖಡ್ಡಾಯವಾಗಿದೆ).

ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸಿನ ಮಿತಿಗಳು

  • ನಿಮ್ಮ ಬೈಕ್‌ನ ನೈಸರ್ಗಿಕ ಹಾನಿಗಳನ್ನು ಕವರ್ ಮಾಡುವುದಿಲ್ಲ
  • ಇದು ನಿಮ್ಮ ಬೈಕ್ ಅನ್ನು ಕಾಲಾನಂತರದಲ್ಲಿ, ಬೈಕಿನ ಸಕಾಲಿಕ ಸವಕಳಿಯಿಂದ ಕವರ್ ಮಾಡಲು ಸಾಧ್ಯವಿಲ್ಲ
  • ಸಾಮಾನ್ಯವಾಗಿ, ನೀವು ನಿರ್ದಿಷ್ಟ ಆಡ್-ಆನ್ ಅನ್ನು ತೆಗೆದುಕೊಳ್ಳದ ಹೊರತು, ನಿಮ್ಮ ಬೈಕ್‌ನ ಫೈಬರ್ ಮತ್ತು ರಬ್ಬರ್ ಭಾಗಗಳು ಸ್ಟ್ಯಾಂಡರ್ಡ್ ಬೈಕ್ ಇನ್ಶೂರೆನ್ಸಿನಲ್ಲಿ ಸಂಪೂರ್ಣವಾಗಿ ಕವರ್ ಆಗುವುದಿಲ್ಲ.
  • ಸ್ಟ್ಯಾಂಡರ್ಡ್ ನಿಯಮದಂತೆ, ಯಾವುದೇ ಬೈಕ್ ಇನ್ಶೂರೆನ್ಸ್, ಪರಮಾಣು ದಾಳಿ/ಯುದ್ಧದಿಂದ ಉಂಟಾದ ನಷ್ಟಗಳು ಅಥವಾ ಹಾನಿಗಳನ್ನು ಕವರ್ ಮಾಡುವುದಿಲ್ಲ.

ಒಳಗೊಳ್ಳದಿರುವುದು

  • ಕುಡಿದು ವಾಹನ ಚಾಲನೆ  ಇದು ಕಾನೂನಿಗೆ ವಿರುದ್ಧವಾಗಿರುವುದರಿಂದ, ನೀವು ಮದ್ಯದ ಅಮಲಿನಲ್ಲಿ ವಾಹನ ಚಾಲನೆ ಮಾಡಿದ್ದೀರಿ ಎಂದು ಕಂಡುಬಂದಲ್ಲಿ, ಆಗ ನೀವು ಯಾವುದೇ ಕ್ಲೇಮ್‌ಗಳನ್ನು  ಮಾಡಲಾಗುವುದಿಲ್ಲ.
  • ಟು-ವೀಲರ್ ಲೈಸೆನ್ಸ್ ಇಲ್ಲದೆ ವಾಹನ ಚಾಲನೆ ಹೇಗಾದರೂ ಸರಿ,  ನೀವು ಲೈಸೆನ್ಸ್ ಇಲ್ಲದೆ ವಾಹನ ಚಾಲನೆ ಮಾಡಬಾರದು! ಆದರೆ ನೀವು ಕ್ಲೇಮ್ ಮಾಡುವಾಗ, ನೀವು ಲೈಸೆನ್ಸ್ ಇಲ್ಲದೆ ವಾಹನ ಚಾಲನೆ ಮಾಡಿದ್ದೀರಿ ಎಂದು ಕಂಡುಬಂದಲ್ಲಿ - ಸಂಬಂಧಿತ ಬೈಕ್ ಇನ್ಶೂರೆನ್ಸ್ ಕ್ಲೇಮ್ ಅನ್ನು ಕವರ್ ಮಾಡಲಾಗುವುದಿಲ್ಲ.
  • ವ್ಯಾಲಿಡ್ ಲೈಸೆನ್ಸ್ ಹೋಲ್ಡರ್ ಇಲ್ಲದಿದ್ದಾಗ ವಾಹನ ಚಾಲನೆ ಕಾನೂನಿನ ಪ್ರಕಾರ, ನೀವು ಕಲಿಕಾ ಪರವಾನಗಿಯೊಂದಿಗೆ ಚಾಲನೆ ಮಾಡುತ್ತಿದ್ದರೆ ಹಾಗೂ ಮುಂಭಾಗದ ಪ್ರಯಾಣಿಕರ ಸೀಟಿನಲ್ಲಿ ವ್ಯಾಲಿಡ್ ಆಗಿರುವ ಲೈಸೆನ್ಸ್ ಹೋಲ್ಡರ್ ಇಲ್ಲದಿದ್ದರೆ ಪಾಲಿಸಿಯು ನಿಮ್ಮನ್ನು ಕವರ್ ಮಾಡುವುದಿಲ್ಲ. 
  • ಪರಿಣಾಮದ ಹಾನಿಗಳು- ಅಪಘಾತದ ಪರಿಣಾಮವಾಗಿ ಉಂಟಾಗುವ ಯಾವುದೇ ಹಾನಿಗಳು ಮತ್ತು ನಷ್ಟಗಳನ್ನು ಪರಿಣಾಮದ ಹಾನಿಗಳು ಎನ್ನುತ್ತೇವೆ. ಆದ್ದರಿಂದ, ನೀವು ಇಂತಹ ಹಾನಿಗಳನ್ನು ಕವರ್ ಮಾಡುವ ನಿರ್ದಿಷ್ಟ ಆಡ್-ಆನ್‌ಗಳನ್ನು ಖರೀದಿಸದಿದ್ದರೆ, ನಿಮ್ಮ ಬೈಕ್ ಇನ್ಶೂರೆನ್ಸ್ ಕ್ಲೇಮ್‌ನಲ್ಲಿ ಪರಿಣಾಮದ ಹಾನಿಗಳನ್ನು ಕವರ್ ಮಾಡಲಾಗುವುದಿಲ್ಲ!  
  • ಕೊಡುಗೆ ನಿರ್ಲಕ್ಷ್ಯ - ಸರಳವಾಗಿ ಹೇಳುವುದಾದರೆ, ನೀವು ಮಾಡಬಾರದ ಕೆಲಸಗಳನ್ನು ಮಾಡಬೇಡಿ! ಇದರರ್ಥ, ನಿಮ್ಮ ಸ್ವಂತ ನಿರ್ಲಕ್ಷ್ಯದ ಕಾರಣದಿಂದ ಉಂಟಾದ ಹಾನಿ ಅಥವಾ ನಷ್ಟಕ್ಕೆ ನೀವು ಕ್ಲೇಮ್ ಮಾಡಿದರೆ, ಪಾಲಿಸಿಯು ಅದನ್ನು ಕವರ್ ಮಾಡುವುದಿಲ್ಲ.
  • ಆಡ್-ಆನ್‌ಗಳನ್ನು ಖರೀದಿಸಲಾಗಿಲ್ಲ- ನೀವು ನಿರ್ದಿಷ್ಟ ಆಡ್-ಆನ್‌ಗಳನ್ನು ಖರೀದಿಸದಿದ್ದರೆ, ನಿಸ್ಸಂಶಯವಾಗಿ ಅದರ ಪ್ರಯೋಜನಗಳನ್ನು ಪಡೆಯಲು ನೀವು ಕ್ಲೇಮ್ ಮಾಡಲಾಗುವುದಿಲ್ಲ! ಆದ್ದರಿಂದ, ಪರಿಸ್ಥಿತಿಯು ಉದ್ಭವಿಸುವ ಮೊದಲೇ  ಉಪಯುಕ್ತ ಆಡ್-ಆನ್‌ಗಳನ್ನು ಯಾವಾಗಲೂ ಆರಿಸಿಕೊಳ್ಳಿ! ಏಕೆಂದರೆ, ನಿಮಗೆ ಅದು ಯಾವಾಗ ಬೇಕಾಗಬಹುದೆಂದು ನಿಮಗೂ ತಿಳಿದಿರುವುದಿಲ್ಲ.

ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಎಂದರೇನು?

ಹೆಸರೇ ಸೂಚಿಸುವಂತೆ, ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಎನ್ನುವುದು ಥರ್ಡ್-ಪಾರ್ಟಿ ಹೊಣೆಗಾರಿಕೆಗಳಿಗೆ ಸಂಬಂಧಿಸಿದ ನಷ್ಟಗಳು ಮತ್ತು ಹಾನಿಗಳನ್ನು ಕವರ್ ಮಾಡುವ ಪಾಲಿಸಿಯಾಗಿದೆ. ಇದು ಕನಿಷ್ಠ, ಖಡ್ಡಾಯ ಅವಶ್ಯಕತೆಗಳನ್ನು ಮಾತ್ರ ಕವರ್ ಮಾಡುವ ಬೈಕ್ ಇನ್ಶೂರೆನ್ಸಿನ ವಿಧವಾಗಿದೆ.

ಉದಾಹರಣೆಗೆ; ನೀವು ಇನ್ನೊಂದು ಬೈಕ್‌ನೊಂದಿಗೆ ಅಪಘಾತಕ್ಕೆ ಸಿಲುಕಿದರೆ, ನಿಮ್ಮ ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಥರ್ಡ್ ಪಾರ್ಟಿಗೆ ಉಂಟಾದ ನಷ್ಟಗಳಿಗೆ ಮಾತ್ರ ರಕ್ಷಣೆ ನೀಡುತ್ತದೆ. ಆದಾಗ್ಯೂ, ಈ ಪಾಲಿಸಿಯು ನಿಮ್ಮ ಸ್ವಂತ ಬೈಕ್‌ಗೆ ಉಂಟಾದ ಹಾನಿಗಳನ್ನು ಮತ್ತು ನಷ್ಟಗಳನ್ನು ಕವರ್ ಮಾಡಲು ಸಾಧ್ಯವಿಲ್ಲ.

ಥರ್ಡ್-ಪಾರ್ಟಿ ಬೈಕ್‌ ಇನ್ಶೂರೆನ್ಸಿನ ಪ್ರಯೋಜನಗಳು

ಥರ್ಡ್ ಪಾರ್ಟಿ ಹೊಣೆಗಾರಿಕೆಗಳನ್ನು ಕವರ್ ಮಾಡುತ್ತವೆ

ಈ ಬೈಕ್ ಇನ್ಶೂರೆನ್ಸಿನ ಮುಖ್ಯ ಉದ್ದೇಶವು ಯಾವುದೇ ಥರ್ಡ್ ಪಾರ್ಟಿ ಸಂಬಂಧಿತ ನಷ್ಟಗಳು ಮತ್ತು ಹಾನಿಗಳಿಂದ ನಿಮ್ಮನ್ನು ರಕ್ಷಿಸುವುದಾಗಿದೆ ಮತ್ತು ಅದನ್ನು ಒದಗಿಸುವುದಾಗಿದೆ.

ಕಾನೂನಿನ ಅನ್ವಯ ನಿಮ್ಮನ್ನು ಕವರ್ ಮಾಡುತ್ತದೆ

ಮೋಟಾರ್ ವೆಹಿಕಲ್ ಆಕ್ಟ್ ಪ್ರಕಾರ, ರಸ್ತೆಯಲ್ಲಿ ಕಾನೂನುಬದ್ಧವಾಗಿ ವಾಹನ ಚಾಲನೆ ಮಾಡಲು ನಿಮಗೆ ಕನಿಷ್ಠ ಥರ್ಡ್ ಪಾರ್ಟಿ ಪಾಲಿಸಿಯ ಅಗತ್ಯವಿದೆ. ಪಾಲಿಸಿಯನ್ನು ಹೊಂದಿಲ್ಲದಿದ್ದರೆ, ನೀವು ಭಾರೀ ಟ್ರಾಫಿಕ್ ದಂಡಕ್ಕೆ ಹೊಣೆಗಾರರಾಗಬಹುದು!

ದಂಡದಿಂದ ನಿಮ್ಮ ಪಾಕೆಟ್ ಅನ್ನು ರಕ್ಷಿಸುತ್ತದೆ

ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್‌ನಂತಹ ಕನಿಷ್ಠ ಇನ್ಶೂರೆನ್ಸ್ ಅನ್ನು ಖರೀದಿಸುವ ವೆಚ್ಚವು, ನಿಮ್ಮ ಜೇಬಿಗೆ ಹಾನಿ ಮಾಡುವ ಟ್ರಾಫಿಕ್ ಪೆನಾಲ್ಟಿಗಳಿಗಿಂತಲೂ ಅಗ್ಗವಾಗಿದೆ! ಮೇಲೆ ತಿಳಿಸಿದಂತೆ, ಕನಿಷ್ಠ ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಹೊಂದುವುದರಿಂದ ಅದು ನಿಮ್ಮ ಜೇಬನ್ನು ದಂಡಗಳಿಂದ ರಕ್ಷಿಸುತ್ತದೆ.

ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್‌ನ ಮಿತಿಗಳು

  • ಇದು ನಿಮ್ಮ ಬೈಕ್‌ನ ಸ್ವಂತ ಹಾನಿ ಅಥವಾ ನಷ್ಟಗಳನ್ನು ಕವರ್ ಮಾಡುವುದಿಲ್ಲ; ಅದು ಅಪಘಾತ, ಘರ್ಷಣೆ, ಬೆಂಕಿ ಅಥವಾ ನೈಸರ್ಗಿಕ ವಿಕೋಪದಿಂದ ಉಂಟಾಗಿರಬಹುದು.
  • ಆಡ್-ಆನ್‌ಗಳು ಅಥವಾ ಕವರ್‌ಗಳೊಂದಿಗೆ ನಿಮ್ಮ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ನೀವು ಕಸ್ಟಮೈಸ್ ಮಾಡಲು ಸಾಧ್ಯವಿಲ್ಲ.
  • ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸಿನಲ್ಲಿ ನಿಮ್ಮ ಐಡಿವಿ (IDV) ಅನ್ನು ನೀವು ಕಸ್ಟಮೈಸ್ ಮಾಡಲು ಸಾಧ್ಯವಿಲ್ಲ
  • ಈ ಪಾಲಿಸಿಯು ನಿಮ್ಮ ಬೈಕ್‌ನ ಕಳ್ಳತನಕ್ಕೆ ಪರಿಹಾರ ನೀಡುವುದಿಲ್ಲ.

ಹೊರಗಿಡುವಿಕೆಗಳು

  • ಬೈಕಿನ ಸ್ವಂತ ಹಾನಿಗಳು- ಮೇಲೆ ತಿಳಿಸಿದಂತೆ, ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಎನ್ನುವುದು ಥರ್ಡ್ ಪಾರ್ಟಿಯ ಹಾನಿ ಮತ್ತು ನಷ್ಟಗಳಿಗೆ ಮಾತ್ರ ರಕ್ಷಣೆ ನೀಡುತ್ತದೆ ಮತ್ತು ನಿಮ್ಮ ಬೈಕ್‌ನ ಸ್ವಂತ ಹಾನಿ ಮತ್ತು ನಷ್ಟಗಳಿಗೆ ರಕ್ಷಣೆ ನೀಡುವುದಿಲ್ಲ.
  • ಕುಡಿದು ವಾಹನ ಚಾಲನೆ - ಕಾನೂನಿಗೆ ಬದ್ಧರಾಗಿ, ನೀವು ಕುಡಿದು ವಾಹನ ಚಾಲನೆ ಮಾಡಿದ್ದರೆ, ಆಗ ನಿಮ್ಮ ಬೈಕ್ ಇನ್ಶೂರೆನ್ಸ್ ಕ್ಲೇಮ್ ಅನ್ನು ಇತ್ಯರ್ಥಗೊಳಿಸಲು ಯಾವುದೇ ಇನ್ಶೂರೆನ್ಸ್ ಪೂರೈಕೆದಾರರಿಗೆ ಸಾಧ್ಯವಾಗುವುದಿಲ್ಲ.
  • ವ್ಯಾಲಿಡ್ ಲೈಸೆನ್ಸ್ ಇಲ್ಲದೆ ವಾಹನ ಚಾಲನೆ ಮಾಡುವುದು- ಕಾನೂನು ಹೇಳುತ್ತದೆ, ನೀವು ವ್ಯಾಲಿಡ್ ಲೈಸೆನ್ಸ್ ಇಲ್ಲದೆ ವಾಹನ ಚಾಲನೆ ಮಾಡುತ್ತಿದ್ದರೆ ನಿಮ್ಮ ಕ್ಲೇಮ್ ಅನ್ನು ಇತ್ಯಾರ್ಥಗೊಳಿಸಲಾಗುವುದಿಲ್ಲ.

ನೀವು ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್‌ಗೆ ಏಕೆ ಅಪ್‌ಗ್ರೇಡ್ ಆಗಬೇಕು?

  • ನಿಮ್ಮ ಪ್ರೀತಿಯ ಬೈಕ್ ಅನ್ನು ರಕ್ಷಿಸಲು: ನಿಮ್ಮ ಬೈಕಿನ ಕಂಡೀಷನ್ ಬಗ್ಗೆ ನೀವು ನಿಜವಾಗಿಯೂ ಕಾಳಜಿ ವಹಿಸುವುದಾದರೆ, ಕಾಂಪ್ರೆಹೆನ್ಸಿವ್  ಬೈಕ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಿಕೊಳ್ಳುವುದು ಜಾಣತನದ ಹೆಜ್ಜೆಯಾಗಿದೆ.  ಅಪಘಾತ, ನೈಸರ್ಗಿಕ ವಿಪತ್ತು ಅಥವಾ ಇತರ ಯಾವುದೇ ದುರದೃಷ್ಟಕರ ಘಟನೆಯ ಸಂದರ್ಭದಲ್ಲಿ ನೀವು ಆಕಸ್ಮಿಕವಾಗಿ ನಿಮ್ಮ ಬೈಕ್ ಅನ್ನು ಹಾನಿಗೊಳಿಸಿದರೆ, ನಿಮ್ಮ ಕಾಂಪ್ರೆಹೆನ್ಸಿವ್   ಬೈಕ್ ಇನ್ಶೂರೆನ್ಸ್ ನಿಮಗೆ ರಕ್ಷಣೆ ನೀಡುತ್ತದೆ.
  • ಒಂದೇ ಬೈಕ್ ಇನ್ಶೂರೆನ್ಸ್ ಪಾಲಿಸಿಯೊಳಗೆ, ಸ್ವಂತ ಹಾನಿ ಮತ್ತು ಥರ್ಡ್ ಪಾರ್ಟಿ ಹೊಣೆಗಾರಿಕೆಗಳನ್ನು ಕವರ್ ಮಾಡಲು : ಕಾಂಪ್ರೆಹೆನ್ಸಿವ್  ಬೈಕ್ ಇನ್ಶೂರೆನ್ಸ್ ಬಗ್ಗೆ ಇರುವ ಒಂದು ಉತ್ತಮವಾದ ವಿಷಯವೆಂದರೆ, ನೀವು ಮತ್ತು ನಿಮ್ಮ ಬೈಕ್ ಒಂದೇ ಪಾಲಿಸಿಯಲ್ಲಿ ಸ್ವಂತ ಹಾನಿ ಮತ್ತು ಥರ್ಡ್ ಪಾರ್ಟಿ ಹೊಣೆಗಾರಿಕೆ ಎರಡರಿಂದಲೂ ರಕ್ಷಣೆ ಪಡೆಯುತ್ತೀರಿ.
  • ಹೆಚ್ಚುವರಿ ಕವರ್‌ಗಳಿಂದ ಪ್ರಯೋಜನ ಪಡೆಯಲು: ಕಾಂಪ್ರೆಹೆನ್ಸಿವ್  ಬೈಕ್ ಇನ್ಶೂರೆನ್ಸ್ ಪಾಲಿಸಿ ಮತ್ತು ಸ್ವಂತ ಹಾನಿಯ ಬೈಕ್ ಇನ್ಶೂರೆನ್ಸ್‌ನಲ್ಲಿ ಮಾತ್ರ, ನಿಮಗೆ ಅಗತ್ಯವಿರುವ ಕವರೇಜ್‌ಗಾಗಿ ನಿಮ್ಮ ಪಾಲಿಸಿಯನ್ನು, ನೀವು ಇಷ್ಟಪಡುವ ರೀತಿಯಲ್ಲಿ ಕಸ್ಟಮೈಸ್ ಮಾಡಲು ವಿವಿಧ ಆಡ್-ಆನ್‌ಗಳನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು.

ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಅನ್ನು ಖರೀದಿಸುವ ಮೊದಲು ನೀವು ಪರಿಗಣಿಸಬೇಕಾದ ಅಂಶಗಳು

  • ಖರೀದಿ ಮತ್ತು ಕ್ಲೇಮ್ ಮಾಡುವ ಪ್ರಕ್ರಿಯೆ:ಇನ್ಶೂರೆನ್ಸ್ ಎಂದೊಡನೆ ಜನರನ್ನು ಹಿಮ್ಮೆಟ್ಟಿಸುವ ಒಂದು ವಿಷಯವೆಂದರೆ ಪ್ರಕ್ರಿಯೆಗಳು. ಆದ್ದರಿಂದ ನೀವು ನೋಡಬೇಕಾದ ಪ್ರಮುಖ ಅಂಶಗಳಲ್ಲಿ 'ಪ್ರಕ್ರಿಯೆಗಳು' ಒಂದಾಗಿರಬೇಕು. ಡಿಜಿಟ್‌ ನ ವಿಷಯದಲ್ಲಿ, ನಮ್ಮ ಎಲ್ಲಾ ಪ್ರಕ್ರಿಯೆಗಳು ಆನ್‌ಲೈನ್‌ನಲ್ಲಿ ತ್ವರಿತವಾಗಿರುತ್ತವೆ ಮತ್ತು ಎಲ್ಲವೂ  ಕೆಲವೇ ಕ್ಲಿಕ್‌ಗಳಲ್ಲಿ ಆಗುತ್ತವೆ.
  • ಸೇವಾ ಪ್ರಯೋಜನಗಳು:ಒಂದು ಬೈಕ್ ಇನ್ಶೂರೆನ್ಸ್ ಪೂರೈಕೆದಾರರು, ಬೇರೆ ಇನ್ಶೂರೆನ್ಸ್ ಪೂರೈಕೆದಾರರಿಂದ ವಿಭಿನ್ನವಾಗಿ ಕಾಣುವಂತೆ ಮಾಡುವುದೇ ಅವರು ನೀಡುವ ವಿಶಿಷ್ಟ ಸೇವಾ ಪ್ರಯೋಜನಗಳಿಂದ. ಸೇವೆಯ ಪ್ರಯೋಜನಗಳನ್ನು ಗಮನಿಸಿ ಮತ್ತು ಯಾವುದು ಹೆಚ್ಚು ಅರ್ಥಪೂರ್ಣವಾಗಿದೆ ಎಂಬುದನ್ನು ನೋಡಿ.
  • ಕ್ಲೇಮ್ ಸೆಟಲ್‌ಮೆಂಟ್ ವೇಗ ಮತ್ತು ಅನುಪಾತ :ಇನ್ಶೂರೆನ್ಸ್ ಕಂಪನಿಯ ಕ್ಲೇಮ್‌ ಸೆಟಲ್‌ಮೆಂಟ್ ಅನುಪಾತವು, ಅವರು ಕ್ಲೇಮ್‌ಗಳನ್ನು ಎಷ್ಟು ಯಶಸ್ವಿಯಾಗಿ ಪೂರೈಸುತ್ತಾರೆ ಎನ್ನುವುದರ ಬಗ್ಗೆ ನಿಮಗೊಂದು ಕಲ್ಪನೆಯನ್ನು ನೀಡುತ್ತದೆ. ಡಿಜಿಟ್‌ನಲ್ಲಿ, ಪ್ರಸ್ತುತ  ಟು-ವೀಲರ್ ವಾಹನಗಳಿಗೆ, ನಮ್ಮ ಕ್ಲೇಮ್ ಸೆಟಲ್‌ಮೆಂಟ್ 92% ಆಗಿದೆ.
  • ಸರಿಯಾದ ಐಡಿವಿ :ಐಡಿವಿ (IDV) ಎಂದರೆ ಘೋಷಿತ ಇನ್ಶೂರೆನ್ಸ್ ಮೌಲ್ಯವಾಗಿದೆ. (Insured Declared Value) ನಿಮ್ಮ ಬೈಕ್ ಸಂಪೂರ್ಣವಾಗಿ ಹಾನಿಗೊಳಗಾದರೆ ಅಥವಾ ಕಳ್ಳತನವಾದರೆ ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರು ನಿಮಗೆ ನೀಡುವ ಗರಿಷ್ಠ ಮೊತ್ತವೇ ಐಡಿವಿ (IDV). ಕಡಿಮೆ ಪ್ರೀಮಿಯಂಗಳು ನಿಮ್ಮನ್ನು ಸೆಳೆಯುತ್ತವೆ ಎಂದು ನಮಗೆ ತಿಳಿದಿದೆ, ಆದರೆ ಅವು ನಿಮಗೆ ಗರಿಷ್ಠ ಆರ್ಥಿಕ ಲಾಭವನ್ನು ನೀಡುವುದಿಲ್ಲ. ನೀವು ಪ್ರೀಮಿಯಂ ಮಾತ್ರವಲ್ಲದೇ ಅದರ ಜೊತೆಗೆ ನಿಮಗೆ ನೀಡುತ್ತಿರುವ ಐಡಿವಿ (IDV) ಅನ್ನು ಯಾವಾಗಲೂ ಪರಿಶೀಲಿಸಿ. ನಾವು ನಿಮಗೆ ಹೆಚ್ಚಿನ ಐಡಿವಿ (IDV) ಅನ್ನು ಆಯ್ಕೆ ಮಾಡಲು ಸಲಹೆ ನೀಡುತ್ತೇವೆ, ಏಕೆ ಎಂದು ನಿಮಗೆ ತಿಳಿದಿದೆಯೇ? ನಿಮ್ಮ ಬೈಕ್‌ನ ಒಟ್ಟು ನಷ್ಟದ ಸಂದರ್ಭದಲ್ಲಿ, ಹೆಚ್ಚಿನ ಐಡಿವಿ (IDV) ಇದ್ದರೆ, ಅದು ಹೆಚ್ಚಿನ ಮರುಪಾವತಿಗೆ ಕಾರಣವಾಗುತ್ತದೆ. ಅಂದರೆ ನೀವು ಹೆಚ್ಚು ಮರುಪಾವತಿಯನ್ನು ಪಡೆಯುತ್ತೀರಿ.  ಅದಕ್ಕಾಗಿಯೇ ನಾವು ನಿಮ್ಮ ಐಡಿವಿ (IDV)ಅನ್ನು ಕಸ್ಟಮೈಸ್ ಮಾಡುವ ಆಯ್ಕೆಯನ್ನು ಸ್ವತಃ ನಿಮಗೇ ನೀಡುತ್ತೇವೆ. ಏಕೆಂದರೆ ನೀವು ಯಾವುದೇ ರಾಜಿ ಮಾಡಿಕೊಳ್ಳದೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಬೇಕೆಂದು ನಾವು ಬಯಸುತ್ತೇವೆ.
  • 24x7 ಬೆಂಬಲ :ನಿಮಗೆ ಯಾವಾಗ ಸಹಾಯ ಬೇಕಾಗಬಹುದೆಂದು ನಿಮಗೆ ತಿಳಿದಿರುವುದಿಲ್ಲ, ಆದ್ದರಿಂದ ನಿಮ್ಮ ಬೈಕ್ ಇನ್ಶೂರೆನ್ಸ್ ಪೂರೈಕೆದಾರರು ಯಾವಾಗಲೂ ನಿಮಗೆ ಲಭ್ಯವಿರುತ್ತಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ