ಭವಿಷ್ಯಕ್ಕಾಗಿ ಈಗಿಂದಲೇ ಪ್ಲ್ಯಾನಿಂಗ್ ಮಾಡುವುದನ್ನು ನೀವು ನಂಬುತ್ತೀರಾ? ಹೌದು ಎಂದಾದರೆ, ಲೈಫ್ ಮತ್ತು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳನ್ನು ಖರೀದಿಸುವುದು ನಿಮ್ಮ ಮುಂದಿನ ಹೆಜ್ಜೆಯಾಗಿರಲಿ. ಈ ಪಾಲಿಸಿಗಳ ಬಗ್ಗೆ ಎಲ್ಲವನ್ನೂ ಅರ್ಥಮಾಡಿಕೊಳ್ಳಲು ಬಯಸುವಿರಾ? ಓದಿ ಹಾಗೂ ನಮ್ಮೊಂದಿಗೆ ನಿಮ್ಮ ಜ್ಞಾನವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಿ.
ಲೈಫ್ ಇನ್ಶೂರೆನ್ಸ್ ಎನ್ನುವುದು ನಿಮ್ಮ ವೈಯಕ್ತಿಕ ಸುರಕ್ಷತೆಯಂತೆ ಇರುತ್ತದೆ. ನಿಮ್ಮ ಕುಟುಂಬದ ಅಗತ್ಯಗಳನ್ನು ಪೂರೈಸಲು ನೀವು ಅವರೊಂದಿಗೆ ಇಲ್ಲದಿದ್ದಾಗ ಉಪಯೋಗಕ್ಕೆ ಬರುತ್ತದೆ. ಇದು ಇನ್ಶೂರೆನ್ಸ್ ಹೊಂದಿದ ಅವನು/ಅವಳು ಪ್ರೀಮಿಯಂಗಳನ್ನು ಪಾವತಿಸಿದ ಲೈಫ್ ಇನ್ಸೂರೆನ್ಸ್, ಇನ್ಶೂರ್ಡ್ ಮರಣದಂತಹ ದುರದೃಷ್ಟಕರ ಸಂದರ್ಭದಲ್ಲಿ ಫಲಾನುಭವಿ/ನಾಮಿನಿಗೆ ಆರ್ಥಿಕ ಪ್ರಯೋಜನಗಳನ್ನು ಒದಗಿಸುವ ವಿಚಾರದಲ್ಲಿ ಇನ್ಶೂರ್ಡ್ ಮತ್ತು ಇನ್ಶೂರೆನ್ಸ್ ಕಂಪನಿಯ ನಡುವೆ ಆಗಿರುವ ಕರಾರು.
ಹೆಚ್ಚಿನ ಸಂದರ್ಭಗಳಲ್ಲಿ ಮರಣ ಪ್ರಯೋಜನಗಳು ಇನ್ ಕಮ್ ಟ್ಯಾಕ್ಸ್-ಮುಕ್ತವಾಗಿರುತ್ತವೆ. ಆದ್ದರಿಂದ, ಸಮ್ ಅಶ್ಯೂರ್ಡ್ ಕುಟುಂಬವರ್ಗಕ್ಕೆ ಯಾವುದೇ ಗಣನೀಯ ಕಡಿತವಿಲ್ಲದೆ ತಲುಪುತ್ತದೆ. ಲೈಫ್ ಇನ್ಶೂರೆನ್ಸ್ ನಿಮ್ಮ ಸಂಪೂರ್ಣ ಜೀವನಕ್ಕೆ ಇನ್ಶೂರೆನ್ಸ್ ರಕ್ಷಣೆಯನ್ನು ನೀಡುತ್ತದೆ. ಇದನ್ನು ನಿಮ್ಮ ಕುಟುಂಬಕ್ಕಾಗಿ ಮಾಡುವ ಭವಿಷ್ಯದ ಸಂಪೂರ್ಣ ಉಳಿತಾಯ ಯೋಜನೆ ಎಂದು ಭಾವಿಸಬಹುದು.
ಹೆಲ್ತ್ ಇನ್ಶೂರೆನ್ಸ್ ಎಂದರೆ ವೈದ್ಯಕೀಯ ಅಗತ್ಯಗಳ ಸಂದರ್ಭದಲ್ಲಿ ನಿಮಗೆ ಹಣಕಾಸಿನ ರಕ್ಷಣೆ ಒದಗಿಸಲು ಇನ್ಶೂರ್ಡ್ ಮತ್ತು ಇನ್ಶೂರೆನ್ಸ್ ಕಂಪನಿಯ ನಡುವೆ ಆಗಿರುವ ಒಪ್ಪಂದ. ಇನ್ಶೂರ್ಡ್ ಅವನ/ಅವಳ ಆರೋಗ್ಯ ರಕ್ಷಣೆಗಾಗಿ ನಿಗದಿತ ಪ್ರೀಮಿಯಂ ಅನ್ನು ಪಾವತಿಸುತ್ತಾರೆ.
ನೀವು ಹೆಲ್ತ್ ಇನ್ಶೂರೆನ್ಸ್ ಅನ್ನು ಹೊಂದಿದ್ದರೆ, ನಿಮ್ಮ ಜೇಬಿನಿಂದ ಹೋದ ವೈದ್ಯಕೀಯ ವೆಚ್ಚವನ್ನು ನೀವು ಮರುಪಾವತಿ ಮೂಲಕ ಪಡೆಯಬಹುದು ಅಥವಾ ಇನ್ಶೂರೆನ್ಸ್ ಕಂಪನಿಯು ನಿಮ್ಮ ಪರವಾಗಿ ನೇರವಾಗಿ ವೈದ್ಯಕೀಯ ವೆಚ್ಚವನ್ನು ಪಾವತಿಸುತ್ತದೆ. ಆದರೆ ಇವೆರಡೂ ಇನ್ಶೂರ್ಡ್ ಆಯ್ಕೆ ಮಾಡಿದ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಅವಲಂಬಿಸಿರುತ್ತದೆ. ಕೆಲವು ಹೆಲ್ತ್ ಪ್ಲ್ಯಾನ್ಗಳು ನಿಮ್ಮ ಪ್ರಿಸ್ಕ್ರಿಪ್ಷನ್ ಔಷಧಿಗಳ ವೆಚ್ಚವನ್ನು ಸಹ ಒಳಗೊಂಡಿರುತ್ತವೆ.
ಇಂಡಿವಿಜುವಲ್ ಹೆಲ್ತ್ ಇನ್ಶೂರೆನ್ಸ್ - ಒಬ್ಬ ವ್ಯಕ್ತಿಯ ಜೀವಿತಾವಧಿಯಲ್ಲಿ ಎದುರಾಗಬಹುದಾದ ವಿವಿಧ ಕಾಯಿಲೆಗಳು, ಅಪಘಾತಗಳು, ಆಸ್ಪತ್ರೆ ದಾಖಲಾತಿ ವೆಚ್ಚಗಳು ಮತ್ತು ಇತರ ವೈದ್ಯಕೀಯ ತುರ್ತುಸ್ಥಿತಿಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವ ಸಲುವಾಗಿ ವ್ಯಕ್ತಿಯೊಬ್ಬನಿಗೆ ಕಸ್ಟಮೈಸ್ ಮಾಡಿದ ಪಾಲಿಸಿಯೇ ಇಂಡಿವಿಜುವಲ್ ಹೆಲ್ತ್ ಇನ್ಶೂರೆನ್ಸ್ ಆಗಿದೆ. ಹೆಚ್ಚುವರಿಯಾಗಿ, ಇಂಡಿವಿಜುವಲ್ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳು ಹೆರಿಗೆ ಪ್ರಯೋಜನ, ಓಪಿಡಿ(OPD) ವೆಚ್ಚಗಳು, ಕ್ರಿಟಿಕಲ್ ಇಲ್ ನೆಸ್ ಕವರ್, ಆಯುಷ್ ಇತ್ಯಾದಿ ಹೆಚ್ಚುವರಿ ಪ್ರಯೋಜನಗಳನ್ನು ಸಹ ಒದಗಿಸುತ್ತವೆ.
ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್ - ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್ ಎನ್ನುವುದು ಒಂದೇ ಪ್ರೀಮಿಯಂ ಅಡಿಯಲ್ಲಿ ಇಡೀ ಕುಟುಂಬಕ್ಕೆ ಸರಿಹೊಂದುವಂತೆ ಕಸ್ಟಮೈಸ್ ಮಾಡಲಾದ ಒಂದು ವಿಧದ ಪಾಲಿಸಿಯಾಗಿದೆ. ಒಬ್ಬ ವ್ಯಕ್ತಿಯ ಜೀವಿತಾವಧಿಯಲ್ಲಿ ಆತನಿಗೆ ಮತ್ತು ಆತನ ಕುಟುಂಬ ವರ್ಗಕ್ಕೆ ಎದುರಾಗಬಹುದಾದ ವಿವಿಧ ಕಾಯಿಲೆಗಳು, ಅಪಘಾತಗಳು, ಹಾಸ್ಪಿಟಲೈಸೇಷನ್ ಮತ್ತು ಇತರ ವೈದ್ಯಕೀಯ ಅಗತ್ಯಗಳನ್ನು ಕವರ್ ಮಾಡಿಕೊಂಡು ಕುಟುಂಬದ ರಕ್ಷಣೆ ಮಾಡುತ್ತದೆ.
ಸೀನಿಯರ್ ಸಿಟಿಜನ್ಸ್ ಹೆಲ್ತ್ ಇನ್ಶೂರೆನ್ಸ್ - ಹೆಸರೇ ಸೂಚಿಸುವಂತೆ, ಸೀನಿಯರ್ ಸಿಟಿಜನ್ಸ್ ಹೆಲ್ತ್ ಇನ್ಶೂರೆನ್ಸ್ 60 ವರ್ಷಕ್ಕಿಂತ ಮೇಲ್ಪಟ್ಟ ಜನರಿಗಾಗಿ ವಿನ್ಯಾಸಗೊಳಿಸಲಾದ ಒಂದು ರೀತಿಯ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಾಗಿದೆ. ಹಿರಿಯ ನಾಗರಿಕರ ವಿವಿಧ ದೈಹಿಕ ಮತ್ತು ಮಾನಸಿಕ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ಕಸ್ಟಮೈಸ್ ಮಾಡಲಾಗಿದೆ ಮತ್ತು ಡೊಮಿಸಿಲಿಯರಿ ಕೇರ್, ಆಯುಷ್, ಅಂಗಾಂಗ ದಾನ ವೆಚ್ಚಗಳು ಮತ್ತಿತರ ತೀವ್ರ ಕ್ರಿಟಿಕಲ್ ಇಲ್ ನೆಸ್ ಗಳು ಮುಂತಾದವುಗಳಿಗೆ ಪ್ರಯೋಜನಗಳನ್ನು ನೀಡುತ್ತದೆ.
ಇನ್ನಷ್ಟು ಓದಿ: ಭಾರತದಲ್ಲಿ ಕೋವಿಡ್ 19 ಇನ್ಶೂರೆನ್ಸ್ ಪಾಲಿಸಿಯ ಪ್ರಯೋಜನಗಳ ಕುರಿತು ಇನ್ನಷ್ಟು ತಿಳಿಯಿರಿ
ಲೈಫ್ ಇನ್ಶೂರೆನ್ಸ್ |
ಹೆಲ್ತ್ ಇನ್ಶೂರೆನ್ಸ್ |
ಲೈಫ್ ಇನ್ಸೂರೆನ್ಸ್ ನಿಮ್ಮ ಜೀವಿತಾವಧಿಯಲ್ಲಿ ಸಂಪೂರ್ಣ ಇನ್ಶೂರೆನ್ಸ್ ಅನ್ನು ಒದಗಿಸುವ ಸಮಗ್ರ ಕವರ್ ಆಗಿದ್ದು, ಇದು ನಿರ್ದಿಷ್ಟ ವೆಚ್ಚಕ್ಕೆ ಸೀಮಿತವಾಗಿಲ್ಲ. ಇದು ಸಾಮಾನ್ಯವಾಗಿ ಇನ್ಶೂರ್ಡ್ ಮರಣದ ಸಂದರ್ಭದಲ್ಲಿ ಸಮ್ ಅಶ್ಯೂರ್ಡ್ ಫಲಾನುಭವಿಗೆ ತಲುಪುವ ಕವರ್ ಆಗಿದೆ. |
ಹೆಲ್ತ್ ಇನ್ಶೂರೆನ್ಸ್ ಸಾಮಾನ್ಯವಾಗಿ ನಿಮ್ಮ ವೈದ್ಯಕೀಯ/ಶಸ್ತ್ರಚಿಕಿತ್ಸಾ/ಆಸ್ಪತ್ರೆಯ ಅಗತ್ಯಗಳನ್ನು ಪೂರೈಸಲು ಮಾತ್ರ ಸೀಮಿತವಾಗಿರುತ್ತದೆ. ಅಗತ್ಯವಿದ್ದಾಗ ವೈದ್ಯಕೀಯ ತುರ್ತು ರಕ್ಷಣೆಯನ್ನು ಒದಗಿಸುತ್ತದೆ. ಇದು ನಿಮ್ಮ ವೈದ್ಯಕೀಯ ಆರೈಕೆಯ ವೆಚ್ಚವನ್ನು ಮೀರಿ ಹೋಗುವುದಿಲ್ಲ. |
ಆಯ್ಕೆ ಮಾಡಿದ ಲೈಫ್ ಇನ್ಶೂರೆನ್ಸ್ ಪ್ರಕಾರವನ್ನು ಅವಲಂಬಿಸಿ ಪ್ರೀಮಿಯಂಗಳು ಒಂದೋ ಸ್ಥಿರವಾಗಿರುತ್ತವೆ ಅಥವಾ ಫ್ಲೆಕ್ಸಿಬಲ್ ಆಗಿರುತ್ತವೆ. ಕೆಲವು ಲೈಫ್ ಇನ್ಶೂರೆನ್ಸ್ ಯೋಜನೆಗಳು ಉತ್ತಮ ನಗದು ಮೌಲ್ಯ ಹೊಂದಿರುವ ಭವಿಷ್ಯದ ಹೂಡಿಕೆಯ ಮೌಲ್ಯದ ಪಾಲಿಸಿ ರೂಪದಂತೆ ಬರುತ್ತವೆ. |
ಪ್ರೀಮಿಯಂಗಳು ಬಹುತೇಕ ನಿಗದಿಯಾಗಿರುತ್ತದೆ. ಹೆಲ್ತ್ ಇನ್ಶೂರೆನ್ಸ್ ನಿಮ್ಮ ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಉಂಟಾಗುವ ವೆಚ್ಚಗಳನ್ನು ನಿಭಾಯಿಸಲು ಕವರೇಜನ್ನು ನೀಡುತ್ತದೆ. ಹೂಡಿಕೆಯೇ ಈ ಯೋಜನೆಗಳ ಉದ್ದೇಶವಲ್ಲ, ಬದಲಿಗೆ ರಕ್ಷಣೆ ನೀಡುವುದಾಗಿದೆ. ಕೆಲವು ಸಂದರ್ಭಗಳಲ್ಲಿ ನೋ-ಕ್ಲೈಮ್ ಬೋನಸ್ ಅನ್ನು ಪಾಲಿಸಿದಾರರು ಕ್ಲೈಮ್ ಮಾಡಬಹುದು. |
ಲೈಫ್ ಇನ್ಶೂರೆನ್ಸ್ ಎನ್ನುವುದು ದೀರ್ಘಾವಧಿಯ ಯೋಜನೆಯಾಗಿದೆ. |
ಹೆಲ್ತ್ ಇನ್ಶೂರೆನ್ಸ್ ಎನ್ನುವುದು ಅಲ್ಪಾವಧಿಯ ಯೋಜನೆಯಾಗಿದೆ. |
ಲೈಫ್ ಇನ್ಶೂರೆನ್ಸ್ ಸಾಮಾನ್ಯವಾಗಿ ಸ್ಥಿರ ಅವಧಿಗೆ ಇರುತ್ತದೆ. ಇನ್ಶೂರೆನ್ಸ್ ಅವಧಿ ಮುಗಿದ ನಂತರ ಇದನ್ನು ಸಾಮಾನ್ಯವಾಗಿ ಕೊನೆಗೊಳಿಸಲಾಗುತ್ತದೆ. |
ಈ ರೀತಿಯ ಇನ್ಶೂರೆನ್ಸಿಗೆ ಕಾಲಾವಧಿಯನ್ನು ನಿಗದಿಪಡಿಸಲಾಗಿಲ್ಲ. ಸಾಮಾನ್ಯ ಸನ್ನಿವೇಶದಲ್ಲಿ, ಇನ್ಶೂರ್ಡ್ ವಾರ್ಷಿಕವಾಗಿ ಪಾಲಿಸಿಯನ್ನು ರಿನೀವ್ ಮಾಡುವುದರ ಮೂಲಕ ಅವನು/ಅವಳು ಪಾಲಿಸಿಯು ನೀಡುವ ರಕ್ಷಣೆ ಪಡೆಯುವುದನ್ನು ಮುಂದುವರೆಸಬಹುದು. |
ಲೈಫ್ ಇನ್ಶೂರೆನ್ಸ್ ಮುಖ್ಯವಾಗಿ ಇನ್ಶೂರ್ಡ್ ಮರಣದ ಸಂದರ್ಭದಲ್ಲಿ ನಿಮ್ಮ ಕುಟುಂಬ/ಫಲಾನುಭವಿ/ನಾಮಿನಿಯನ್ನು ಆರ್ಥಿಕವಾಗಿ ರಕ್ಷಿಸುತ್ತದೆ. |
ಹೆಲ್ತ್ ಇನ್ಶೂರೆನ್ಸ್ ಹಣಕಾಸಿನ ಸಂಕಷ್ಟಗಳಿಂದಾಗಿ ಜೀವಹಾನಿಯಾಗುವಂತಹ ಯಾವುದೇ ದುರದೃಷ್ಟಕರ ಘಟನೆಗಳನ್ನು ತಪ್ಪಿಸುವ ಮೂಲಕ ಸ್ವಯಂ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ರಕ್ಷಣೆ ಒದಗಿಸುತ್ತದೆ. |
ಲೈಫ್ ಇನ್ಶೂರೆನ್ಸ್, ನೀವು ಆಯ್ಕೆಮಾಡಿದ ಇನ್ಶೂರೆನ್ಸಿನ ಆಧಾರದ ಮೇಲೆ ಇನ್ಶೂರೆನ್ಸ್ ಅವಧಿಯ ಕೊನೆಯಲ್ಲಿ ಸರ್ವೈವಲ್ ಮತ್ತು ಮರಣ ಪ್ರಯೋಜನಗಳನ್ನು ನೀಡುತ್ತದೆ. |
ಹೆಲ್ತ್ ಇನ್ಶೂರೆನ್ಸ್ ಯಾವುದೇ ಸರ್ವೈವಲ್ ಅಥವಾ ಮರಣ ಪ್ರಯೋಜನದೊಂದಿಗೆ ಬರುವುದಿಲ್ಲ, ಬದಲಿಗೆ ಇದು ನಿಮ್ಮ ಪ್ರಸ್ತುತ ಮೆಡಿಕಲ್ ಅಗತ್ಯ ಮತ್ತು ಚಿಕಿತ್ಸೆ ವೆಚ್ಚವನ್ನು ಮಾತ್ರ ಪೂರೈಸುತ್ತದೆ. |
ಕೆಲವು ಸಂದರ್ಭಗಳಲ್ಲಿ, ನೀವು ಪಾಲಿಸಿ ಅವಧಿಯನ್ನು ಮೀರಿದರೆ ಸ್ವಲ್ಪ ಹೆಚ್ಚುವರಿ ಪ್ರೀಮಿಯಂ ಅನ್ನು ಪಾವತಿಸಿದರೆ ನೀವು ಹೂಡಿಕೆ ಮಾಡಿದ ಹಣವು ಮೆಚ್ಯೂರಿಟಿಯ ನಂತರ ಟ್ಯಾಕ್ಸ್-ಮುಕ್ತವಾಗಿ ನಿಮಗೆ ಹಿಂತಿರುಗುತ್ತದೆ. |
ಪಾಲಿಸಿಯ ಅವಧಿಯ ಕೊನೆಯಲ್ಲಿ ಯಾವುದೇ ಅಮೌಂಟ್ ಅನ್ನು ರಿಫಂಡ್ ಮಾಡಲಾಗುವುದಿಲ್ಲ. ಈ ಅಮೌಂಟ್ ರಿಇಂಬರ್ಸ್ ಮೆಂಟ್ ಆಗಿ ಮಾತ್ರ ಬರುತ್ತದೆ. ಅದೂ ಸಹ ನಿಮ್ಮ ಅನಾರೋಗ್ಯದ ಅವಧಿಯಲ್ಲಿ ಅಥವಾ ಯಾವುದೇ ಇತರ ಮೆಡಿಕಲ್ ವೆಚ್ಚಕ್ಕಾಗಿ ನೀವು ಮಾಡಿದ ವೆಚ್ಚಗಳು ಮಾತ್ರ. |
ಹೆಲ್ತ್ ಇನ್ಶೂರೆನ್ಸ್ ನ ಮುಖ್ಯ ಉದ್ದೇಶವೆಂದರೆ ನಿಮ್ಮ ಹಣಕಾಸಿನ ಕುರಿತ ಯಾವುದೇ ಒತ್ತಡವಿಲ್ಲದೆ ಅತ್ಯುತ್ತಮ ವೈದ್ಯಕೀಯ ಆರೈಕೆಯನ್ನು ಪಡೆಯುವುದು. ಹೆಲ್ತ್ ಇನ್ಶೂರೆನ್ಸ್ ಯೋಜನೆಗಳು ಅನಿರೀಕ್ಷಿತ ಮೆಡಿಕಲ್ ತುರ್ತುಸ್ಥಿತಿಗಳ ವಿರುದ್ಧ ರಕ್ಷಣೆ ನೀಡುತ್ತವೆ.
ಒಂದೇ ಬಾರಿಗೆ ಪಾವತಿಸಿದ ಪ್ರೀಮಿಯಂಗಳು ಇನ್ಶೂರೆನ್ಸ್ ಪಾಲಿಸಿಯ ಕವರೇಜ್ ವರ್ಷಗಳವರೆಗೆ ಟ್ಯಾಕ್ಸ್ ಪ್ರಯೋಜನಗಳನ್ನು ಒದಗಿಸುತ್ತವೆ. ಇದು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಯಿಂದ ಸಿಗುವ ಏಕೈಕ ಪ್ರಯೋಜನ. ಜೀವನದ ಎಲ್ಲಾ ಅನಿಶ್ಚಿತ ಸಂದರ್ಭಗಳನ್ನು ನಿಭಾಯಿಸಲು ಗ್ರಾಹಕರಿಗೆ ನೆರವಾಗಲು ಇನ್ಶೂರೆನ್ಸ್ ಪೂರೈಕೆದಾರರು ಹಲವಾರು ಇತರ ಪ್ರಯೋಜನಗಳನ್ನು ಮತ್ತು ಆ್ಯಡ್-ಆನ್ಗಳನ್ನು ನೀಡುತ್ತಾರೆ.
ತಮ್ಮ ಹಾಗೂ ತಮ್ಮ ಕುಟುಂಬವರ್ಗದ ಭವಿಷ್ಯದ ಕುರಿತು ಚಿಂತಿಸುವ ಪ್ರತಿಯೊಬ್ಬರಿಗೂ ಲೈಫ್ ಇನ್ಶೂರೆನ್ಸ್ ಮತ್ತು ಹೆಲ್ತ್ ಇನ್ಶೂರೆನ್ಸ್ ಒದಗಿಬರುತ್ತದೆ. ಹೆಲ್ತ್ ಇನ್ಶೂರೆನ್ಸ್ ನಿಮ್ಮ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡುತ್ತದೆ ಮತ್ತು ಲೈಫ್ ಇನ್ಶೂರೆನ್ಸ್ ನಿಮ್ಮ ಅನುಪಸ್ಥಿತಿಯಲ್ಲಿ ನಿಮ್ಮ ಕುಟುಂಬವನ್ನು ರಕ್ಷಿಸುತ್ತದೆ.
ಜೀವನ ಅನಿಶ್ಚಿತ. ಹಾಗಾಗಿ ತಡವಾಗುವ ಮೊದಲು ನಿಮ್ಮನ್ನು ಮತ್ತು ನಿಮ್ಮ ಪ್ರೀತಿಪಾತ್ರರನ್ನು ರಕ್ಷಿಸಿಕೊಳ್ಳುವುದು ಉತ್ತಮ. ಈ ಎರಡೂ ಇನ್ಶೂರೆನ್ಸ್ ಪಾಲಿಸಿಗಳು ನಮ್ಮಲ್ಲಿ ಪ್ರತಿಯೊಬ್ಬರಿಗೂ ಮುಖ್ಯವಾಗಿವೆ. ನೀವು ಏನನ್ನು ಆಯ್ಕೆ ಮಾಡುತ್ತೀರಿ ಎನ್ನುವುದು ಈಗ ನಿಮ್ಮ ವೈಯಕ್ತಿಕ ಆಯ್ಕೆಯಾಗಿದೆ.