ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್

ಪ್ರಯೋಜನಗಳನ್ನು ಪರಿಶೀಲಿಸಿ ಮತ್ತು ಕೇವಲ 2 ನಿಮಿಷಗಳಲ್ಲಿ ಆನ್‌ಲೈನ್‌ನಲ್ಲಿ ಇನ್ಸ್ಟಂಟ್ ಪ್ರೀಮಿಯಂ ಪಡೆಯಿರಿ

ಹೆಲ್ತ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ಬಗ್ಗೆ ಎಲ್ಲವನ್ನೂ ವಿವರಿಸಲಾಗಿದೆ

ಇಂಡಿಯಾ ಟುಡೆಯಲ್ಲಿ ಪ್ರಕಟವಾದ ಇತ್ತೀಚಿನ ವರದಿಗಳ ಪ್ರಕಾರ, 2018-19 ರಲ್ಲಿ ಭಾರತದಲ್ಲಿನ ಎವರೇಜ್ ರಿಟೇಲ್ ಹೆಲ್ತ್ ಇನ್ಫ್ಲೇಶನ್  7.14% ಆಗಿದೆ. ಇದು ಹಿಂದಿನ ವರ್ಷಗಳ 4.39% ಕ್ಕಿಂತ ಹೆಚ್ಚಿನ ಏರಿಕೆಯನ್ನು ಗುರುತಿಸಿದೆ. ಇದು ಆರೋಗ್ಯ ಸಂಬಂಧಿ ಉತ್ಪನ್ನಗಳ ಬೆಲೆಯಲ್ಲಿನ ತ್ವರಿತ ಹೆಚ್ಚಳವನ್ನು ಸೂಚಿಸುತ್ತದೆ. (1)

ಈ ಸನ್ನಿವೇಶದಲ್ಲಿ, ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು ಇನ್ನು ಮುಂದೆ ಕೇವಲ ಮುನ್ನೆಚ್ಚರಿಕೆಯಾಗಿ ಮಾತ್ರ ಉಳಿದಿಲ್ಲ. ಬದಲಿಗೆ ಇದೊಂದು ಸಮರ್ಥ ವೈದ್ಯಕೀಯ ಆರೈಕೆಯ ವಿರುದ್ಧ, ದೊಡ್ಡ ಹಣಕಾಸಿನ ನಷ್ಟವನ್ನು ತಪ್ಪಿಸಲು  ಅವಶ್ಯವಾಗಿದೆ.

ಈಗ, ನೀವು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುತ್ತಿದ್ದೀರಿ ಎಂದು ಊಹಿಸಿ. ಪಾಲಿಸಿಯ ಬಗ್ಗೆ ಮೊದಲಿಗೆ ನೀವು ತಿಳಿದುಕೊಳ್ಳಬೇಕಾದ ಸಂಪೂರ್ಣ ವಿಷಯ ಯಾವುದು?

ಖಂಡಿತವಾಗಿ, ಇದು ಪ್ರೀಮಿಯಂನ ಪಾವತಿಯಾಗಿರುತ್ತದೆ!

ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಹೇಗೆ ಲೆಕ್ಕ ಹಾಕಬಹುದು? ಅದರ ಮೇಲೆ ಪರಿಣಾಮ ಬೀರುವ ಅಂಶಗಳು ಯಾವುವು? ಮತ್ತು ನೀವು ಅದನ್ನು ಹೇಗೆ ಕಡಿಮೆ ಮಾಡಬಹುದು ಎಂಬುದರ ಕುರಿತು ಈ ಕೆಳಗಿನ ವಿವರಣೆಯಿದೆ!

ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ಎಂದರೇನು?

ತಂತ್ರಜ್ಞಾನ ಬಂದಾಗಿನಿಂದ, ಹೆಚ್ಚಿನ ಇನ್ಶೂರೆನ್ಸ್ ಕಂಪನಿಗಳು ತಮ್ಮ ಪ್ರಕ್ರಿಯೆಯನ್ನು ಆನ್‌ಲೈನ್‌ಗೆ ಬದಲಾಯಿಸಿವೆ. ನಂತರ  ತಮ್ಮ ಪಾಲಿಸಿದಾರರಿಗೆ ಪಾಲಿಸಿಗೆ ಸಂಬಂಧಿಸಿದ ವಿಷಯಗಳನ್ನು ಗಮನಾರ್ಹವಾಗಿ ಸುಲಭಗೊಳಿಸಲು, ವಿವಿಧ ಉಪಯುಕ್ತ ಆನ್‌ಲೈನ್ ಪರಿಕರಗಳನ್ನು ಪರಿಚಯಿಸಿದ್ದಾರೆ!

ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ಎನ್ನುವುದು, ನಿಮ್ಮ ಇನ್ಶೂರೆನ್ಸ್ ಪ್ರೀಮಿಯಂನ ಮೊತ್ತವನ್ನು ಕ್ಷಣಾರ್ಧದಲ್ಲಿ ಲೆಕ್ಕಾಚಾರ ಮಾಡಲು ನಿಮ್ಮನ್ನು ಅನುಮತಿಸುವ ಒಂದು ಸಾಧನವಾಗಿದೆ!

ಪ್ರೀಮಿಯಂ ಮೊತ್ತವನ್ನು ಲೆಕ್ಕಾಚಾರ ಮಾಡುವುದು ತೊಡಕಿನ ಕೆಲಸವಾಗಿರುವುದರಿಂದ, ಹೆಚ್ಚಿನ ಜನರು ಸರಳವಾಗಿ, ತಮ್ಮ ಇನ್ಶೂರೆನ್ಸ್ ಪೂರೈಕೆದಾರರು ಸೂಚಿಸಿದ ಮೊತ್ತವನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಆನ್‌ಲೈನ್ ಕ್ಯಾಲ್ಕುಲೇಟರ್‌ನ ಸಹಾಯದಿಂದ, ಕೆಲವು ಅಗತ್ಯ ವಿವರಗಳನ್ನು ನಮೂದಿಸುವ ಮೂಲಕ, ಪ್ರೀಮಿಯಂ ಮೊತ್ತವನ್ನು ನಿಮಿಷಗಳಲ್ಲಿ ಲೆಕ್ಕಾಚಾರ ಮಾಡಬಹುದು.

ಇದು ಹೇಗೆ ಕೆಲಸ ಮಾಡುತ್ತದೆ?

ಪ್ರೀಮಿಯಂ ಕ್ಯಾಲ್ಕುಲೇಟರ್ ಅನ್ನು ಬಳಸುವುದು ತುಂಬಾ ಸರಳವಾಗಿದೆ. ಇದನ್ನು ಬಳಸಲು, ನಿಮ್ಮ ಜನ್ಮ ದಿನಾಂಕ, ಸಂಪರ್ಕ ವಿವರಗಳು, ನಿಮ್ಮ ಆದ್ಯತೆಯ ಆಡ್-ಆನ್‌ಗಳು, ಮುಂತಾದ ಕೆಲವು ವಿವರಗಳನ್ನು ಮಾತ್ರ ನೀವು ಒದಗಿಸಬೇಕಾಗುತ್ತದೆ. ಜೊತೆಗೆ ಇನ್ಶೂರೆನ್ಸ್ ಮೊತ್ತವನ್ನು ಆಯ್ಕೆ ಮಾಡಲು ನಿಮ್ಮನ್ನು ಕೇಳಲಾಗುತ್ತದೆ.

ಅದರ ಆಧಾರದ ಮೇಲೆ, ಕ್ಯಾಲ್ಕುಲೇಟರ್ ನಿಮ್ಮ ಪ್ರೀಮಿಯಂ ಮೊತ್ತ ಮತ್ತು ಅದರ ಬ್ರೇಕ್ ಡೌನ್ ಅನ್ನು ನಿಮಗೆ ಒದಗಿಸುತ್ತದೆ.

ಇದು ಅಷ್ಟು ಸರಳವಾಗಿದೆ!

 

ಇವುಗಳ  ಇನ್ನಷ್ಟು ತಿಳಿಯಿರಿ

 

ನೀವು ಆನ್‌ಲೈನ್‌ನಲ್ಲಿ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಏಕೆ ಲೆಕ್ಕ ಹಾಕಬೇಕು?

ಇದು ನಿಮಗೆ ಸ್ವಲ್ಪ ಸಮಯ ಮತ್ತು ಸಂಪನ್ಮೂಲಗಳನ್ನು ಉಳಿಸಲು ಅನುವು ಮಾಡಿಕೊಡುತ್ತದೆ. ಪ್ರಾಮಾಣಿಕವಾಗಿ, ಇದು ತೊಡಕಿನ ಕೆಲಸವನ್ನು ಮತ್ತಷ್ಟು ಸರಳಗೊಳಿಸುತ್ತದೆ.

ಇನ್ಶೂರೆನ್ಸ್ ಪಾಲಿಸಿಗಳು ಕೆಲವೊಮ್ಮೆ ಸಾಕಷ್ಟು ಸಂಕೀರ್ಣವಾಗಿರಬಹುದು ಮತ್ತು ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದು. ಏಕೆಂದರೆ ಅವುಗಳು, ಹಲವಾರು ನಿಯಮ ಮತ್ತು ಷರತ್ತುಗಳೊಂದಿಗೆ ಬರುತ್ತವೆ. ಆಗಾಗ, ಜನರು ಪ್ರತಿ ಪದಗಳ ನಿರ್ದಿಷ್ಟ ಅರ್ಥವನ್ನು ತಿಳಿಯದೆ ಮುಂದುವರಿಯುತ್ತಾರೆ ಹಾಗೂ ಅವರು ನಿರೀಕ್ಷಿಸುವುದಕ್ಕಿಂತ ಹೆಚ್ಚಿನ ಹಣವನ್ನು ಪಾವತಿಸುತ್ತಾರೆ. ಆನ್‌ಲೈನ್‌ನಲ್ಲಿ ಪ್ರೀಮಿಯಂ ಮೊತ್ತವನ್ನು ಮುಂಚಿತವಾಗಿ ಲೆಕ್ಕಾಚಾರ ಮಾಡುವುದರಿಂದ ಇನ್ಶೂರೆನ್ಸ್ ಯೋಜನೆಗಾಗಿ, ನಿಮ್ಮ ಪಾವತಿ ಹೊಣೆಗಾರಿಕೆಗಳ ಬಗ್ಗೆ ನೀವು ಚೆನ್ನಾಗಿ ತಿಳಿದಿರುತ್ತೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಈ ಕ್ಯಾಲ್ಕುಲೇಟರ್ ನಿಮ್ಮನ್ನು ಅನುಮತಿಸುತ್ತದೆ.

ಇದಲ್ಲದೆ, ನಿಖರವಾದ ವಿವರಗಳನ್ನು ನಮೂದಿಸುವ ಮೂಲಕ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಲೆಕ್ಕಾಚಾರ ಮಾಡುವಾಗ  ಸಾಮಾನ್ಯ ತಪ್ಪುಗಳಾಗುವ ಸಾಧ್ಯತೆಯನ್ನು ಇದು ನಿವಾರಿಸುತ್ತದೆ.

ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್‌ನ 5 ಪ್ರಯೋಜನಗಳು

ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಪ್ರೀಮಿಯಂ ಕ್ಯಾಲ್ಕುಲೇಟರ್ ಅನ್ನು ಬಳಸುವುದರಿಂದ ಹಲವಾರು ಪ್ರಯೋಜನಗಳಿವೆ. ನಿಮ್ಮ ಪ್ರೀಮಿಯಂ ಮೊತ್ತವನ್ನು ಲೆಕ್ಕಾಚಾರ ಮಾಡಲು ನೀವು ಆನ್‌ಲೈನ್ ಹೆಲ್ತ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ಅನ್ನು ಬಳಸಿದರೆ ನೀವು ಪಡೆಯಬಹುದಾದ ಪ್ರಯೋಜನಗಳ ಪಟ್ಟಿಯು ಈ ಕೆಳಗಿನಂತಿದೆ:

  • ಸುಲಭವಾದ ಹಣಕಾಸು ಯೋಜನೆಗೆ ದಾರಿ ಮಾಡಿಕೊಡುತ್ತದೆ  -  ಈ ಕ್ಯಾಲ್ಕುಲೇಟರ್ ಅನ್ನು ಬಳಸುವ ಮೂಲಕ, ನಿಮ್ಮ ಪಾಲಿಸಿಯನ್ನು ಖರೀದಿಸುವ ಮೊದಲು ನೀವು ನಿಮ್ಮ ಪ್ರೀಮಿಯಂ ಮೊತ್ತದ ನಿಖರವಾದ ಅಂದಾಜನ್ನು  ಪಡೆಯುತ್ತೀರಿ. ಈ ರೀತಿಯಾಗಿ ನೀವು ಭವಿಷ್ಯಕ್ಕಾಗಿ ನಿಮ್ಮ ಹಣಕಾಸನ್ನು ಹೆಚ್ಚು ಪರಿಣಾಮಕಾರಿಯಾಗಿ ಯೋಜಿಸಬಹುದು.
  • ಪ್ರೀಮಿಯಂ ಪಾವತಿಗಳನ್ನು ಡೀಫಾಲ್ಟ್ ಮಾಡುವ ಅಪಾಯಗಳನ್ನು ಕಡಿಮೆ ಮಾಡಿ  -  ಪ್ರೀಮಿಯಂ ಮೊತ್ತವನ್ನು ಮೊದಲೇ ತಿಳಿದುಕೊಳ್ಳುವುದರಿಂದ, ಭವಿಷ್ಯದಲ್ಲಿ ಪ್ರೀಮಿಯಂ ಪಾವತಿಗಳಲ್ಲಿ ಡೀಫಾಲ್ಟ್ ಆಗುವ ಸಾಧ್ಯತೆಗಳನ್ನು ಈ ಕ್ಯಾಲ್ಕುಲೇಟರ್ ನಿವಾರಿಸುತ್ತದೆ. ನಿಮಗೆ ಕೈಗೆಟುಕುವ ಪ್ರೀಮಿಯಂ ಮೊತ್ತವನ್ನು ತಿಳಿದ ನಂತರವೇ ನೀವು ಪಾಲಿಸಿಯನ್ನು ಪಡೆಯುತ್ತೀರಿ.
  • ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಇನ್ಶೂರೆನ್ಸ್ ಯೋಜನೆಯನ್ನು ಪಡೆದುಕೊಳ್ಳಿ - ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್‌ನೊಂದಿಗೆ, ನೀವು ಕೈಗೆಟುಕುವ ಮತ್ತು ನಿಮ್ಮ ಕವರೇಜ್ ಅಗತ್ಯತೆಗಳಿಗೆ ಸುಲಭವಾಗಿ ಸರಿಹೊಂದುವ ಯೋಜನೆಯನ್ನು ನೋಡುವವರೆಗೂ, ನೀವು ಕ್ಯಾಲ್ಕುಲೇಟರ್'ನ ಅಡಿಯಲ್ಲಿ ವಿವಿಧ ಪ್ಯಾರಾಮೀಟರ್'ಗಳನ್ನು ಹೊಂದಿಸಬಹುದು.
  • ಆಡ್-ಆನ್‌ಗಳನ್ನು ಆಯ್ಕೆ ಮಾಡುವುದನ್ನು ಸುಲಭಗೊಳಿಸುತ್ತದೆ - ಮೆಡಿಕಲ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ನಿಮಗೆ ನಿಮ್ಮ ಹಣಕಾಸಿನ ಅಗತ್ಯತೆಗಳನ್ನು ಪೂರೈಸುವ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಾಗಿ ಎಲ್ಲ ಆಡ್-ಆನ್ ಕವರ್‌ಗಳನ್ನು  ತೋರಿಸುತ್ತದೆ. ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ನೀವು ಆಡ್-ಆನ್ ಕವರ್‌ಗಳನ್ನು ಪಡೆದರೆ, ಇವು ನಿಮಗೆ ಪಾವತಿಸಬೇಕಾದ ಪ್ರೀಮಿಯಂ ಅನ್ನು ಲೆಕ್ಕಾಚಾರ ಮಾಡಲು ಸಹಾಯ ಮಾಡುತ್ತದೆ.
  • ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಲು ನಿಮಗೆ ಸಹಾಯ ಮಾಡುತ್ತದೆ  - ಪ್ರೀಮಿಯಂ ಕ್ಯಾಲ್ಕುಲೇಟರ್ ನಿಮಗೆ ವಿವಿಧ ಇನ್ಶೂರೆನ್ಸ್ ಪೂರೈಕೆದಾರರಿಂದ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳನ್ನು ತೋರಿಸುತ್ತವೆ ಮತ್ತು ಅವುಗಳ ನಡುವೆ ಹೋಲಿಕೆ ಮಾಡಲು ನಿಮ್ಮನ್ನು ಅನುಮತಿಸುತ್ತದೆ. ಇದು ಸೂಕ್ತವಾದ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುವ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸುತ್ತದೆ.

ಹೀಗಾಗಿ, ಜನರಿಗೆ ಸರಿಯಾದ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಲು ಆನ್‌ಲೈನ್ ಕ್ಯಾಲ್ಕುಲೇಟರ್ ಸಹಾಯ ಮಾಡುತ್ತದೆ.


ಭಾರತದಲ್ಲಿ ಬೆಸ್ಟ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಹುಡುಕುವುದು ಹೇಗೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ

ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ಅನ್ನು ಬಳಸುವುದು ಹೇಗೆ?

ಆನ್‌ಲೈನ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ಅನ್ನು ಬಳಸಿಕೊಂಡು ಪಾವತಿಸುವ ಪ್ರೀಮಿಯಂ  ಅನ್ನು ಲೆಕ್ಕಾಚಾರ ಮಾಡುವುದು ತುಂಬಾ ಸರಳವಾಗಿದೆ!

ನೀವು ಕೇವಲ ಕೆಲವೇ ಹಂತಗಳನ್ನು ಅನುಸರಿಸಬೇಕು. ನಿಮ್ಮ ವಿವರಗಳನ್ನು ಸರಿಯಾಗಿ ನಮೂದಿಸಿ. ಅಷ್ಟೇ! ಹೆಲ್ತ್ ಇನ್ಶೂರೆನ್ಸ್ ರಕ್ಷಣೆಗಾಗಿ ನೀವು ಪಾವತಿಸಬೇಕಾದ ಪ್ರೀಮಿಯಂ ಅನ್ನು ಪಡೆಯುತ್ತೀರಿ.

ಉದಾಹರಣೆಗೆ, ನೀವು ಡಿಜಿಟ್ ಇನ್ಶೂರೆನ್ಸಿನಿಂದ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಹುಡುಕುತ್ತಿದ್ದರೆ,  ಪ್ರೀಮಿಯಂ ಪಾವತಿ ಹೊಣೆಗಾರಿಕೆಯನ್ನು ನೀವು ಸುಲಭವಾಗಿ ಲೆಕ್ಕಾಚಾರ ಮಾಡಬಹುದು.

ಒಮ್ಮೆ ನೋಡಿ!

 

  • ಹಂತ  1: ನಮ್ಮ ಹೆಲ್ತ್  ಇನ್ಶೂರೆನ್ಸ್  ಪುಟಕ್ಕೆ ಭೇಟಿ ನೀಡಿ ಮತ್ತು ಗೊತ್ತುಪಡಿಸಿದ ಜಾಗದಲ್ಲಿ, ನಿಮ್ಮ ಪಿನ್ ಕೋಡ್ ಮತ್ತು ಮೊಬೈಲ್ ಸಂಖ್ಯೆಯನ್ನು ಎಂಟರ್ ಮಾಡಿ .

  • ಹಂತ 2: ಮುಂದಿನ ಪುಟದಲ್ಲಿ, ನೀವು ಇನ್ಶೂರೆನ್ಸ್ ಮಾಡಲು ಬಯಸುವ ನಿಮ್ಮ ಕುಟುಂಬದ ಸದಸ್ಯರ ವಿವರಗಳನ್ನು ಮತ್ತು ಹಿರಿಯ ಸದಸ್ಯರ ವಯಸ್ಸನ್ನು ಎಂಟರ್ ಮಾಡಿ.

  • ಹಂತ 3:  “ಮುಂದುವರಿಸಿ" ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಪ್ಲ್ಯಾನ್ ಅನ್ನು  ನೀವು ಕಸ್ಟಮೈಸ್ ಮಾಡಬಹುದಾದ ಪುಟಕ್ಕೆ ನಿಮ್ಮನ್ನು ಕರೆದೊಯ್ಯಲಾಗುತ್ತದೆ.

  • ಹಂತ 4: ನಿಮ್ಮ ಇನ್ಶೂರ್ಡ್  ಮೊತ್ತ ಮತ್ತು ನಿಮ್ಮ ಪ್ಲ್ಯಾನ್ ಅನ್ನು ಆಯ್ಕೆಮಾಡಿ. ಇಲ್ಲಿ ನಿಮಗೆ ವಿವಿಧ ಪ್ಲ್ಯಾನುಗಳ ಅಡಿಯಲ್ಲಿ ವೈಶಿಷ್ಟ್ಯಗಳ ಪಟ್ಟಿಯನ್ನು ಸಹ ಒದಗಿಸಲಾಗುತ್ತದೆ.

  • ಹಂತ 5: ಮುಂದೆ ನಮ್ಮ ವಿಶೇಷ ಡಿಸ್ಕೌಂಟ್ ಗಳನ್ನು ಪಟ್ಟಿ ಮಾಡಿರುವುದನ್ನು ನೀವು ನೋಡುತ್ತೀರಿ. ನೀವು ಎಂಟರ್ ಮಾಡಿದ  ಪಿನ್ ಕೋಡ್ ಅರ್ಹ ವರ್ಗಕ್ಕೆ ಸೇರಿದರೆ ಸಿಟಿ ಡಿಸ್ಕೌಂಟ್ ಅನ್ನು ಸ್ವಯಂಚಾಲಿತವಾಗಿ ಅನ್ವಯಿಸಲಾಗುತ್ತದೆ. ಉತ್ತಮ ಹೆಲ್ತ್  ಡಿಸ್ಕೌಂಟ್ ಗಾಗಿ, ನಿಮ್ಮ ಆರೋಗ್ಯಕರ ಅಭ್ಯಾಸದ ವಿವರಗಳನ್ನು ನೀವು ನೀಡಬೇಕಾಗುತ್ತದೆ. ಉಪಭೋಗ್ಯದ ಕವರ್‌ನಂತಹ ಯಾವುದೇ ಹೆಚ್ಚುವರಿ ಪ್ರಯೋಜನಗಳನ್ನು ಸಹ ನೀವು ಆಯ್ಕೆ ಮಾಡಬಹುದು.

  • ಹಂತ 6: ನೀವು ಇನ್ಶೂರೆನ್ಸ್  ಮಾಡಲು ಮುನ್ನೋಡುತ್ತಿರುವ ಸದಸ್ಯರ ಸಂಪೂರ್ಣ ವಿವರಗಳನ್ನು ಮತ್ತು ನಿಮ್ಮ ಸಂಪೂರ್ಣ ಸಂಪರ್ಕ ವಿವರಗಳನ್ನು ಎಂಟರ್ ಮಾಡಿ.

ನೀವು ಆಯ್ಕೆ ಮಾಡಿದ ಆಯ್ಕೆಗಳ ಆಧಾರದ ಮೇಲೆ; ಹೆಲ್ತ್  ಇನ್ಶೂರೆನ್ಸ್ ಕವರ್ ಪಡೆಯಲು ನಿಮ್ಮ ವಾರ್ಷಿಕ ಪ್ರೀಮಿಯಂ ಪಾವತಿಯ ಮೊತ್ತವನ್ನು ನಿಮಗೆ ಒದಗಿಸಲಾಗುತ್ತದೆ.

ಹೌದು, ಅದು ಅಷ್ಟು ಸರಳವಾಗಿದೆ!

ಯಾವುದೇ ವೆಚ್ಚವಿಲ್ಲ, ತೊಂದರೆಯಿಲ್ಲ - ನಿಮ್ಮ ಸಮಯದ ಕೆಲವೇ ನಿಮಿಷಗಳು ಸಾಕಷ್ಟೇ! ಮತ್ತು ಹೆಲ್ತ್ ಇನ್ಶೂರೆನ್ಸ್ ಯೋಜನೆಯನ್ನು ಖರೀದಿಸಲು ನೀವು ಪಾವತಿಸಬೇಕಾದ ಮೊತ್ತವು ನಿಮಗೆ ತಕ್ಷಣವೇ ತಿಳಿಯುತ್ತದೆ!

ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಅಂಶಗಳು ಯಾವುವು?

ಕ್ಯಾಲ್ಕುಲೇಟರ್ ಅನ್ನು ಬಳಸಿಕೊಂಡು ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಮೊತ್ತವನ್ನು ಹೇಗೆ ಲೆಕ್ಕ ಹಾಕುವುದು ಎಂಬುದರ ಕುರಿತು ನೀವೀಗ ಕಲಿತಿದ್ದೀರಿ. ಈಗ ನಿಮ್ಮ ಪಾವತಿ ಹೊಣೆಗಾರಿಕೆಯ ಮೇಲೆ ಪರಿಣಾಮ ಬೀರುವ ಅಂಶಗಳನ್ನು ನೋಡೋಣ -

1. ಮಾರ್ಕೆಟಿಂಗ್ ಮತ್ತು ಆಡಳಿತಕ್ಕೆ ತಗಲುವ ವೆಚ್ಚಗಳು

ಇನ್ಶೂರೆನ್ಸ್ ಕಂಪನಿಗಳು ತಮ್ಮ ಉತ್ಪನ್ನಗಳ ನಿರ್ವಹಣೆ ಮತ್ತು ಮಾರಾಟದ ಅಡಿಯಲ್ಲಿ ಭಾರಿ ವೆಚ್ಚವನ್ನು ಭರಿಸುತ್ತವೆ. ಈ ವೆಚ್ಚಗಳು ಪಾಲಿಸಿದಾರರಿಗೆ ಹಿಂತಿರುಗುತ್ತವೆ ಮತ್ತು ಅವರ ಪ್ರೀಮಿಯಂ ಪಾವತಿಗಳ ಮೇಲೆ ರಿಫ್ಲೆಕ್ಟ್ ಆಗುತ್ತದೆ.

2. ನೀವು ಆಯ್ಕೆ ಮಾಡಿಕೊಳ್ಳುವ ಯೋಜನೆಯ ಪ್ರಕಾರ

ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಾಗಿ ನಿಮ್ಮ ಪ್ರೀಮಿಯಂ ಪಾವತಿಯು, ನೀವು ಪಡೆಯಲು ಆಯ್ಕೆ ಮಾಡಿಕೊಳ್ಳುವ ಯೋಜನೆಯ ಪ್ರಕಾರವನ್ನು ಅವಲಂಬಿಸಿರುತ್ತದೆ.

ಉದಾಹರಣೆಗೆ, ವೈಯುಕ್ತಿಕ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳು, ಫ್ಯಾಮಿಲಿ ಫ್ಲೋಟರ್ ಯೋಜನೆಗಳಿಗಿಂತ ಹೆಚ್ಚು ದುಬಾರಿಯಾಗಿವೆ ಮತ್ತು ಮೊದಲಿನ ಪ್ರೀಮಿಯಂ ಪಾವತಿಗಳಲ್ಲಿ ನೀವು ಹೆಚ್ಚಿನ ಮೊತ್ತವನ್ನು ಪಾವತಿಸಬೇಕಾಗುತ್ತದೆ.

ಇದರ ಬಗ್ಗೆ ಇನ್ನಷ್ಟು ತಿಳಿಯಿರಿ:

3. ಸಹ-ಪಾವತಿಯ ಷರತ್ತುಗಳು ಮತ್ತು ಡಿಡಕ್ಟಿಬಲ್ಸ್

ಕೆಲವು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು ಖಡ್ಡಾಯ ಅಥವಾ ಸ್ವಯಂಪ್ರೇರಿತ ಸಹ-ಪಾವತಿ ಮತ್ತು ಡಿಡಕ್ಟಿಬಲ್ಸ್ ಷರತ್ತುಗಳೊಂದಿಗೆ ಬರುತ್ತವೆ. ಡಿಡಕ್ಟಿಬಲ್ಸ್'ಗಳೊಂದಿಗೆ, ಪಾಲಿಸಿದಾರರು ತಮ್ಮ ಇನ್ಶೂರೆನ್ಸ್ ಪಾಲಿಸಿಯು ಪ್ರಾರಂಭವಾಗುವ ಮೊದಲು, ಚಿಕಿತ್ಸಾ ವೆಚ್ಚದ ಒಂದು ಭಾಗವನ್ನು ಭರಿಸಬೇಕು.

ಸಹ-ಪಾವತಿ ಷರತ್ತಿನೊಂದಿಗೆ, ನೀವು ಒಟ್ಟು ಚಿಕಿತ್ಸಾ ವೆಚ್ಚದ ಶೇಕಡಾವಾರು ಮೊತ್ತವನ್ನು ಕವರ್ ಮಾಡಬೇಕು. ಉಳಿದ ಶೇಕಡಾವಾರು ಭಾಗವನ್ನು, ಇನ್ಶೂರೆನ್ಸ್ ಪೂರೈಕೆದಾರರು ಕವರ್ ಮಾಡುತ್ತಾರೆ. ಆದರೆ ಸಹ-ಪಾವತಿ ಮತ್ತು ಡಿಡಕ್ಟಿಬಲ್ಸ್'ಗಳೊಂದಿಗೆ, ಇನ್ಶೂರೆನ್ಸ್ ಪಾಲಿಸಿಯ ಪ್ರೀಮಿಯಂ ಪಾವತಿಯು ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ಹೀಗಾಗಿ, ಇವು ನಿಮ್ಮ ಪಾಲಿಸಿ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಕೆಲವು ಅಂಶಗಳಾಗಿವೆ.

ಕೋ-ಪೇ, ಕೋ-ಇನ್ಶೂರೆನ್ಸ್, ಮತ್ತು ಡಿಡಕ್ಟಿಬಲ್ಸ್ ನಡುವಿನ ವ್ಯತ್ಯಾಸದ ಕುರಿತು ಇನ್ನಷ್ಟು ತಿಳಿಯಿರಿ

4. ಆಡ್-ಆನ್ ಕವರ್‌ಗಳು

ಪ್ರೀಮಿಯಂ ಮೊತ್ತವನ್ನು ಲೆಕ್ಕಾಚಾರ ಮಾಡಲು, ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್‌ನಲ್ಲಿ ನೀವು ಒದಗಿಸಬೇಕಾದ ಪ್ಯಾರಾಮೀಟರ್ಗಳಲ್ಲಿ ಆಡ್-ಆನ್ ಕವರ್‌ಗಳು ಸಹ ಒಂದಾಗಿವೆ.

ಏಕೆಂದರೆ, ನೀವು ಹೆಲ್ತ್ ಇನ್ಶೂರೆನ್ಸ್ ಯೋಜನೆಯಿಂದ ಈಗಾಗಲೇ ಅಸ್ತಿತ್ವದಲ್ಲಿರುವ ಪ್ರಯೋಜನಗಳ ಮೇಲೆ ಆಡ್-ಆನ್ ಕವರ್‌ಗಳನ್ನು ಆರಿಸಿದಾಗ, ಪಾಲಿಸಿಗೆ ಸಂಬಂಧಿಸಿದ ನಿಮ್ಮ ಪ್ರೀಮಿಯಂ ಪಾವತಿಯು ಸ್ವಯಂಚಾಲಿತವಾಗಿ ಹೆಚ್ಚಾಗುತ್ತದೆ.

5. ಹೂಡಿಕೆ ಮತ್ತು ಉಳಿತಾಯ

ಹೆಚ್ಚಿನ ಇನ್ಶೂರೆನ್ಸ್ ಕಂಪನಿಗಳು ತಮ್ಮ ಬಂಡವಾಳವನ್ನು ವಿವಿಧ ಸಾರ್ವಜನಿಕ ವಲಯದ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತವೆ. ಈ ಹೂಡಿಕೆಗಳು, ನಂತರದಲ್ಲಿ ಯಾವುದೇ ಅನುಸರಣೆಯ ಸಮಸ್ಯೆಗಳಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಲು IRDA ಯಿಂದ ಸೂಚಿಸಲ್ಪಟ್ಟ ಮಾರ್ಗಸೂಚಿಯನ್ನು ಅನುಸರಿಸುತ್ತವೆ.

ಇನ್ಶೂರೆನ್ಸ್ ಪಾಲಿಸಿಗಳಿಗೆ ನೀವು ಪಾವತಿಸಬೇಕಾದ ಪ್ರೀಮಿಯಂ, ಒಂದು ಹಂತದಲ್ಲಿ ಮಾರ್ಕೆಟ್ ಕ್ಯಾಪಿಟಲೈಸೇಷನ್ ಇಂದ ಇನ್ಶೂರೆನ್ಸ್ ಪೂರೈಕೆದಾರರು ಗಳಿಸಿದ ಲಾಭವನ್ನು ಅವಲಂಬಿಸಿರುತ್ತದೆ.

6. ಬ್ರೋಕರ್ ಮೂಲಕ ಇನ್ಶೂರೆನ್ಸ್ ಅನ್ನು ಖರೀದಿಸುವುದು

ಒಳ್ಳೆಯದು, ಇದು ನಿಮ್ಮ ಪ್ರೀಮಿಯಂ ಪಾವತಿಯನ್ನು ಹೆಚ್ಚಿಸದಿದ್ದರೂ ಸಹ, ಪಾಲಿಸಿಗಾಗಿ ನೀವು ಪಾವತಿಸುವ ಒಟ್ಟು ಮೊತ್ತವನ್ನು ಖಂಡಿತ ಹೆಚ್ಚಿಸುತ್ತದೆ. ಏಕೆಂದರೆ ಅವರು ಒದಗಿಸುವ ಸೇವೆಗಳಿಗೆ ಬ್ರೋಕರ್ ವಿಧಿಸುವ ಶುಲ್ಕವನ್ನು ನೀವು ಪಾವತಿಸಬೇಕಾಗುತ್ತದೆ.

7. ಮೊದಲೇ ಅಸ್ತಿತ್ವದಲ್ಲಿರುವ ಖಾಯಿಲೆ ಕವರೇಜ್'ಗಾಗಿ

ಮೊದಲೇ ಅಸ್ತಿತ್ವದಲ್ಲಿರುವ ಖಾಯಿಲೆಗಳನ್ನು ಕವರ್ ಮಾಡಲು ನೀವು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುತ್ತಿದ್ದರೆ, ನಿಮಗೆ ಸಾಮಾನ್ಯವಾಗಿ ವೇಟಿಂಗ್ ಪಿರೀಡ್ ಅನ್ನು ಒದಗಿಸಲಾಗುತ್ತದೆ. ಅದರ ನಂತರ ನೀವು ಪಾಲಿಸಿಯ ಪ್ರಯೋಜನಗಳನ್ನು ಪಡೆಯಬಹುದು.

ಆದರೆ ಈ ವೈಟಿಂಗ್ ಪಿರೇಡಿನಲ್ಲಿ ಕೆಲಸ ಮಾಡಲು ಒಂದು ಮಾರ್ಗವಿದೆ - ಅದು ಹೆಚ್ಚುವರಿ ಪ್ರೀಮಿಯಂ ಮೊತ್ತವನ್ನು ಪಾವತಿಸುವ ಮೂಲಕ. ಹೀಗಾಗಿ, ನಿಮ್ಮ ಪ್ರೀಮಿಯಂನ ಪಾವತಿಯು, ನೀವು  ಮೊದಲೇ ಅಸ್ತಿತ್ವದಲ್ಲಿರುವ ಖಾಯಿಲೆ ಕವರ್ ಅನ್ನು ಪಡೆಯುತ್ತಿರುವಿರಾ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

8. ಮರಣ ಪ್ರಮಾಣ

ಪ್ರೀಮಿಯಂ ಪಾವತಿಯು ಮರಣದ ದರವನ್ನು ಅವಲಂಬಿಸಿರುತ್ತದೆ. ಏಕೆಂದರೆ ಇದು ಯಾವುದೇ ಗ್ರಾಹಕನಿಗೆ, ಯಾವುದೇ ಘಟನೆಯ ಸಂದರ್ಭದಲ್ಲಿ ಇನ್ಶೂರೆನ್ಸ್ ಪೂರೈಕೆದಾರರು ಭರಿಸಬೇಕಾದ ವೆಚ್ಚವಾಗಿದೆ.

ಪರಿಣಾಮವಾಗಿ, ಪ್ರೀಮಿಯಂ ಪಾವತಿಯು ವಿವಿಧ ವಯೋಮಾನದವರಿಗೆ ಭಿನ್ನವಾಗಿರುತ್ತದೆ. ಇದು ಸಾಮಾನ್ಯವಾಗಿ ಹಿರಿಯ ಮತ್ತು ಅತಿ ಹಿರಿಯ ನಾಗರಿಕರಿಗೆ ಹೆಚ್ಚಾಗಿರುತ್ತದೆ.

9. ವೈದ್ಯಕೀಯ ಅಂಡರ್ರೈಟಿಂಗ್

ಪ್ರತಿಯೊಂದು ಇನ್ಶೂರೆನ್ಸ್ ಕಂಪನಿಗಳು ವೈಯಕ್ತಿಕ ಪಾಲಿಸಿಗಳು, ಗ್ರೂಪ್ ಇನ್ಶೂರೆನ್ಸ್ ಪಾಲಿಸಿಗಳು, ಫ್ಯಾಮಿಲಿ ಫ್ಲೋಟರ್ ಪಾಲಿಸಿಗಳು ಮುಂತಾದ ಹಲವಾರು ರೀತಿಯ ಉತ್ಪನ್ನಗಳನ್ನು ನೀಡುತ್ತವೆ.

ಈ ಪಾಲಿಸಿಗಳಿಗೆ ಅಂಡರ್‌ರೈಟಿಂಗ್‌ಗಳನ್ನು ಎಷ್ಟೊಂದು ಸೊಗಸಾಗಿ ಮಾಡುತ್ತಾರೆ ಎಂದರೆ ಈ ಪ್ರತಿಯೊಂದು ಪಾಲಿಸಿಗಳಿಂದ ಅಪಾಯಗಳನ್ನು ಸಮತೋಲನಗೊಳಿಸಲಾಗುತ್ತದೆ ಮತ್ತು ಇನ್ಶೂರೆನ್ಸ್ ಪೂರೈಕೆದಾರರ ಹೊಣೆಗಾರಿಕೆಗಳನ್ನು ಮ್ಯಾನೇಜ್ ಮಾಡಲಾಗುತ್ತದೆ.

ಹೀಗಾಗಿ, ಇನ್ಶೂರೆನ್ಸ್ ಪಾಲಿಸಿಗಳ ಪ್ರೀಮಿಯಂಗಳು, ಒಬ್ಬ ವ್ಯಕ್ತಿಯ ವೈದ್ಯಕೀಯ ಮಾಹಿತಿಯ ಆಧಾರದ ಮೇಲೆ ಅವರು ಪಾಲಿಸಿದಾರರಾಗಿ ಎಷ್ಟು ಅಪಾಯಕಾರಿ (risky) ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

10. ಬೇಸ್ ರೇಟಿಂಗ್

ಇನ್ಶೂರೆನ್ಸ್ ಪೂರೈಕೆದಾರರು ಲಿಂಗ, ವಯಸ್ಸು, ಕುಟುಂಬದ ಗಾತ್ರ, ಭೌಗೋಳಿಕ ಪ್ರದೇಶ, ಅವರ ವೃತ್ತಿ ಇತ್ಯಾದಿಗಳಂತಹ ಒಂದೇ ರೀತಿಯ ಗುಣಲಕ್ಷಣಗಳನ್ನು ಹೊಂದಿರುವ ನಿರ್ದಿಷ್ಟ ವ್ಯಕ್ತಿಗಳಿಗೆ ವಿಧಿಸುವ, ಮೂಲ ದರವನ್ನು ನಿಗದಿಪಡಿಸುವುದೇ ಈ ಬೇಸ್ ರೇಟ್.

ಉದಾಹರಣೆಗೆ, ಬೇಸ್ ರೇಟ್ ಅನ್ನು 40 ರಿಂದ 50 ವರ್ಷಗಳ ನಡುವಿನ ವಯಸ್ಸಿನ ವ್ಯಕ್ತಿಗಳು, 25-35 ವರ್ಷ ವಯಸ್ಸಿನವರಿಗಿಂತ ಹೆಚ್ಚಿನ ಪ್ರೀಮಿಯಂಗಳಲ್ಲಿ ಪಾವತಿಸುವಂತೆ ಹೊಂದಿಸಲಾಗಿದೆ.

 

ಇವು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯಲು ವ್ಯಕ್ತಿಯೊಬ್ಬನ ಪ್ರೀಮಿಯಂ ಪಾವತಿಯ ಮೇಲೆ ಪರಿಣಾಮ ಬೀರುವ ಕೆಲವು ಅಂಶಗಳಾಗಿವೆ.

ಆದರೆ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂನ ಪಾವತಿಯನ್ನು ಕಡಿಮೆ ಮಾಡಲು ಯಾವುದಾದರೂ ಮಾರ್ಗವಿದೆಯೇ?

ಹೌದು, ಖಂಡಿತ ಇದೆ!

ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಹೇಗೆ ಕಡಿಮೆ ಮಾಡುವುದು?

ಸರಿ, ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕಡಿಮೆ ಮಾಡಲು ಕೆಲವು ಸುಲಭ ಮಾರ್ಗಗಳಿವೆ! ಉದಾಹರಣೆಗೆ:

1. ಚಿಕ್ಕ ವಯಸ್ಸಿನಲ್ಲಿ ಪಾಲಿಸಿಯನ್ನು ಪಡೆದುಕೊಳ್ಳಿ

ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳಿಗಾಗಿ ನಿಮ್ಮ ಪ್ರೀಮಿಯಂ ಪಾವತಿಯನ್ನು ಉಳಿಸುವ ಅತ್ಯಂತ ಶ್ರೇಷ್ಠ ವಿಧಾನವೆಂದರೆ ಕಿರಿಯ ವಯಸ್ಸಿನಲ್ಲಿ ಪಾಲಿಸಿಯನ್ನು ಪಡೆದುಕೊಳ್ಳುವುದು.

ಹೆಚ್ಚಿನ ಇನ್ಶೂರೆನ್ಸ್ ಕಂಪನಿಗಳು, ವ್ಯಕ್ತಿಗೆ ವಯಸ್ಸಾದಂತೆ, ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಹೆಚ್ಚು ಮಾಡುತ್ತಾರೆ. ಏಕೆಂದರೆ ವಯಸ್ಸಾಗುತ್ತಿದ್ದಂತೆ ಜನರು ಹೆಚ್ಚು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಅದಕ್ಕಾಗಿಯೇ ನೀವು ಕಿರಿಯ ವಯಸ್ಸಿನಲ್ಲಿಮತ್ತು ಆರೋಗ್ಯಕರವಾಗಿರುವಾಗ ಇನ್ಶೂರೆನ್ಸ್ ಅನ್ನು ಪಡೆಯುವುದು ಉತ್ತಮ.

ಅಲ್ಲದೆ, ನಿಮ್ಮ ಪೋಷಕರಿಗೆ ನೀವು ಪಾಲಿಸಿಯನ್ನು ಖರೀದಿಸುತ್ತಿದ್ದರೆ, ಸೀನಿಯರ್ ಸಿಟಿಜನ್ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂನ ಪಾವತಿಯು ಹೆಚ್ಚಿರುವುದರಿಂದ, ನಿಮ್ಮ ಪೋಷಕರಿಗೆ 60 ವರ್ಷಗಳು ತುಂಬುವ ಮೊದಲೇ ನೀವು ಪಾಲಿಸಿಯನ್ನು ಪಡೆದುಕೊಳ್ಳುತ್ತೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

2. ಡಿಡಕ್ಟಿಬಲ್ಸ್ /ಕೋ-ಪೇಮೆಂಟ್ ಅನ್ನು ಆಯ್ಕೆಮಾಡಿ

ಡಿಡಕ್ಟಿಬಲ್ಸ್ ಮತ್ತು ಕೋ-ಪೇಮೆಂಟ್ ಅನ್ನು ಆಯ್ಕೆ ಮಾಡಿಕೊಳ್ಳುವುದರಿಂದ ನಿಮ್ಮ ಇನ್ಶೂರೆನ್ಸ್ ಪಾಲಿಸಿಯ ಪ್ರೀಮಿಯಂ ಅನ್ನು ಕಡಿಮೆ ಮಾಡಲು ನಿಮಗೆ ಅವಕಾಶವಿದೆ. ಡಿಡಕ್ಟಿಬಲ್ಸ್ ಮತ್ತು ಕೋ-ಪೇಮೆಂಟಿನ ಷರತ್ತುಗಳು ನಿಮ್ಮ ಚಿಕಿತ್ಸಾ ವೆಚ್ಚದ ಒಂದು ಭಾಗವನ್ನು ನೀವು ಪಾವತಿಸುವ ಅಗತ್ಯವಿದ್ದಾಗ, ತದನಂತರ ಅವರು ನಿಮ್ಮ ಇನ್ಶೂರೆನ್ಸ್ ಪಾಲಿಸಿಗೆ ಪಾವತಿಸಿದ ಪ್ರೀಮಿಯಂ ಅನ್ನು ಕಡಿಮೆ ಮಾಡಲಾಗಿದೆ ಎಂದು ಖಚಿತಪಡಿಸುತ್ತಾರೆ.

3. ಟಾಪ್-ಅಪ್ ಯೋಜನೆಗಳನ್ನು ಆಯ್ಕೆಮಾಡಿ

ಹೆಚ್ಚಿನ ಕವರೇಜ್ ಮೊತ್ತವನ್ನು ಆರಿಸುವುದರಿಂದ ಹೆಚ್ಚಿನ ಪ್ರೀಮಿಯಂ ಅನ್ನು ಪಾವತಿ ಮಾಡಬೇಕು ಎಂದರ್ಥ. ಅದಕ್ಕಾಗಿ ನೀವು ಕಡಿಮೆ ಕವರೇಜ್ ಹೊಂದಿರುವ ಪಾಲಿಸಿಯನ್ನು ಪಡೆಯಬಹುದು.

ಇದಲ್ಲದೆ, ಚಿಕಿತ್ಸೆಯನ್ನು ಪಡೆಯಲು ನಿಮ್ಮ ಹಣಕಾಸಿನ ಹೊಣೆಗಾರಿಕೆಗಳು ಕಡಿಮೆಯಾಗಿರುವುದನ್ನು ಖಚಿತಪಡಿಸಿಕೊಳ್ಳಲು, ನಿಮ್ಮ ಇನ್ಶೂರೆನ್ಸ್ ಯೋಜನೆಯಲ್ಲಿ ನೀವು ಟಾಪ್-ಅಪ್ ಅನ್ನು ಪಡೆಯಬಹುದು. ಇದು ಇನ್ಶೂರೆನ್ಸಿನ ಮೂಲ ಮೊತ್ತವು (base-sum) ಖಾಲಿಯಾದಾಗ ಜಾರಿಗೆ ಬರುತ್ತದೆ.

4. ಆಡ್-ಆನ್ ಕವರ್‌ಗಳನ್ನು ಆಯ್ಕೆಮಾಡುವಾಗ ಜಾಗರೂಕರಾಗಿರಿ

ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗೆ ನೀವು ಹೆಚ್ಚು ಪಾವತಿಸುತ್ತಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಲು, ನಿಮ್ಮ ಆಡ್-ಆನ್ ಕವರ್‌ಗಳನ್ನು ಆಯ್ಕೆಮಾಡುವಾಗ ಆದಷ್ಟು ಜಾಗರೂಕರಾಗಿರಿ.

ನಿಮಗೆ ಅಗತ್ಯವಿಲ್ಲದವುಗಳನ್ನು  ನೀವು ಆಯ್ಕೆ ಮಾಡುವುದರಿಂದ ನಿಮ್ಮ ಇನ್ಶೂರೆನ್ಸ್ ಕವರ್'ನ ಅಗತ್ಯಕ್ಕಿಂತ ಹೆಚ್ಚಿನ ವೆಚ್ಚವನ್ನು ನೀವು ಅನುಭವಿಸಬಹುದು.

5. ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರಿಂದ ನೇರವಾಗಿ ಖರೀದಿಸಿ

ನಿಮ್ಮ ಇನ್ಶೂರೆನ್ಸ್ ಪಾಲಿಸಿಯನ್ನು ಬ್ರೋಕರ್ ಮೂಲಕ ಖರೀದಿಸುವುದರಿಂದ ಅದು ನಿಮ್ಮ ಇನ್ಶೂರೆನ್ಸ್ ಪಾಲಿಸಿಯನ್ನು ಹೆಚ್ಚು ದುಬಾರಿಯನ್ನಾಗಿ ಮಾಡುತ್ತದೆ. ಏಕೆಂದರೆ ಬ್ರೋಕರ್ ಒದಗಿಸುವ ಸೇವೆಗೆ ನೀವು ಶುಲ್ಕವನ್ನು ಪಾವತಿಸಲು ಜವಾಬ್ದಾರರಾಗಿರುತ್ತೀರಿ. ಇದನ್ನು ತಪ್ಪಿಸಲು, ನೀವು ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರಿಂದ ನೇರವಾಗಿ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಬಹುದು.

6. ನಿಮ್ಮ ಝೋನ್ ಪ್ರಕಾರ ಯೋಜನೆಯನ್ನು ಆಯ್ಕೆಮಾಡಿ

ನೀವು ಝೋನ್ C ನಗರದಲ್ಲಿ ವಾಸಿಸುತ್ತಿದ್ದೀರಿ ಎಂದು ಭಾವಿಸೋಣ, ಅಲ್ಲಿನ ಚಿಕಿತ್ಸೆಯ ವೆಚ್ಚವು ಝೋನ್ A ಅಥವಾ ಝೋನ್ B ನಗರಗಳಿಗಿಂತ ತುಂಬಾ ಕಡಿಮೆಯಿರಬಹುದು . ಝೋನ್ C ನಗರದಲ್ಲಿ ಚಿಕಿತ್ಸಾ ವೆಚ್ಚವನ್ನು ಕವರ್ ಮಾಡಲು, ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗೆ ನೀವು ಪಾವತಿಸುವ ಪ್ರೀಮಿಯಂ ಇತರ ಎರಡಕ್ಕಿಂತ ಕಡಿಮೆಯಿರಬೇಕು.

ಡಿಜಿಟ್‌ನಲ್ಲಿ, ನಾವು ಎರಡು ಝೋನ್  ಹೊಂದಿದ್ದೇವೆ: ಝೋನ್ A (ಗ್ರೇಟರ್ ಹೈದರಾಬಾದ್, ದೆಹಲಿ ಎನ್ಸಿಆರ್, ಗ್ರೇಟರ್ ಮುಂಬೈ) ಮತ್ತು ಝೋನ್ B (ಭಾರತದ ಉಳಿದ ಭಾಗ). ನೀವು ಝೋನ್ B  ಯಲ್ಲಿ ನೆಲೆಗೊಂಡಿದ್ದರೆ ನೀವು ಪ್ರೀಮಿಯಂನಲ್ಲಿ ಹೆಚ್ಚುವರಿ ಡಿಸ್ಕೌಂಟ್ ಅನ್ನು ಪಡೆಯುತ್ತೀರಿ. ಅಷ್ಟೇ ಅಲ್ಲ, ನಾವು ಯಾವುದೇ ಝೋನ್ -ಆಧಾರಿತ ಸಹ-ಪಾವತಿಯನ್ನು ಹೊಂದಿಲ್ಲ.

ಅದಕ್ಕಾಗಿಯೇ, ನಿಮ್ಮ ನಗರದಲ್ಲಿ ಚಿಕಿತ್ಸೆ ಪಡೆಯಲು ನೀವು ಯೋಜಿಸುತ್ತಿದ್ದರೆ, ನಿಮ್ಮ ಪ್ರೀಮಿಯಂ ಪಾವತಿಯಲ್ಲಿ ಉಳಿಸಲು ನೀವು ಪ್ಲ್ಯಾನ್ ಅನ್ನು  ಆಯ್ಕೆ ಮಾಡಿಕೊಂಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.

7. ನೋ ಕ್ಲೈಮ್ ಬೋನಸ್ ಪಾಲಿಸಿಯನ್ನು ಪರಿಶೀಲಿಸಿ

ಪಾಲಿಸಿ ವರ್ಷದಲ್ಲಿ ಯಾವುದೇ ಕ್ಲೈಮ್‌ಗಳಿಲ್ಲವೇ? ನೀವು ಬೋನಸ್ ಅನ್ನು ಪಡೆಯುತ್ತೀರಿ - ಆರೋಗ್ಯವಾಗಿರಲು ಮತ್ತು ಉಚಿತವಾಗಿ ಕ್ಲೈಮ್ ಮಾಡಲು ನಿಮ್ಮ ಒಟ್ಟು ಇನ್ಶೂರಡ್  ಮೊತ್ತದಲ್ಲಿ ಹೆಚ್ಚುವರಿ ಮೊತ್ತ!

ಸಂಚಿತ ಬೋನಸ್ ಎಂದೂ ಕರೆಯಲ್ಪಡುವ ಈ ಬೋನಸ್, ಪ್ರತಿ ಕ್ಲೈಮ್ ಉಚಿತ ವರ್ಷಕ್ಕೆ ಬೇಸ್ ಮೊತ್ತದ ಒಂದು ನಿರ್ದಿಷ್ಟ ಶೇಕಡಾವಾರು.

ಡಿಜಿಟ್ ನಲ್ಲಿ , ನಿಮ್ಮ ಪ್ಲ್ಯಾನ್ ಅನ್ನು ಆಧರಿಸಿ ಇದು 10% ಅಥವಾ 50%, ಗರಿಷ್ಠ 100%.

ಪರಿಣಾಮವಾಗಿ, ನಿಮ್ಮ ಒಟ್ಟು  ಇನ್ಶೂರ್ಡ್ ಮೊತ್ತವು ಹೆಚ್ಚಾಗುತ್ತದೆ. ಆದಾಗ್ಯೂ, ನಿಮ್ಮ ಇನ್ಶೂರೆನ್ಸ್ ಪಾಲಿಸಿಯ ಅವಧಿ ಮುಗಿದ ನಂತರ ರಿನ್ಯೂ ಮಾಡಲು ನೀವು ವಿಫಲವಾದರೆ ಈ ಬೋನಸ್ ಅನ್ನು ರದ್ದುಗೊಳಿಸಲಾಗುತ್ತದೆ.

8. ಫ್ಯಾಮಿಲಿ ಫ್ಲೋಟರ್ ಯೋಜನೆಗಳನ್ನು ಆಯ್ದುಕೊಳ್ಳಿ

ವೈಯಕ್ತಿಕ ಯೋಜನೆಗಳ ಬದಲಿಗೆ ಫ್ಯಾಮಿಲಿ ಫ್ಲೋಟರ್ ಯೋಜನೆಯನ್ನು ಆರಿಸಿಕೊಳ್ಳುವುದು ಉತ್ತಮ. ಅದರಲ್ಲಿ ಎರಡು ಅಥವಾ ಹೆಚ್ಚಿನ ಜನರು ಒಂದೇ ಯೋಜನೆಯಡಿಯಲ್ಲಿ ಕವರ್ ಆಗುತ್ತಾರೆ. ಅದು ನಿಮ್ಮ ವೆಚ್ಚವನ್ನು ಕಡಿಮೆ ಮಾಡಲು ನಿಮಗೆ ಸಹಕಾರಿಯಾಗುತ್ತದೆ.

 

ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳಿಗಾಗಿ ನಿಮ್ಮ ಪ್ರೀಮಿಯಂ ಪಾವತಿಯನ್ನು ಕಡಿಮೆ ಮಾಡಲು ಇವು ಅತ್ಯಂತ ಪರಿಣಾಮಕಾರಿ ಮಾರ್ಗಗಳಾಗಿವೆ.

ಈಗ, ಮತ್ತೇನು?

ನಿಮ್ಮ ಹೆಲ್ತ್ ಇನ್ಶೂರೆನ್ಸ್ ಯೋಜನೆಯಿಂದ ನೀವು ಪಡೆಯಬಹುದಾದ ತೆರಿಗೆ ಪ್ರಯೋಜನಗಳನ್ನು ನೋಡೋಣ.

ಹೆಲ್ತ್ ಇನ್ಶೂರೆನ್ಸ್ ತೆರಿಗೆ ಪ್ರಯೋಜನಗಳು

ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 80D ಅಡಿಯಲ್ಲಿ, ನಿಬಂಧನೆಗಳ ಮೂಲಕ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಮೇಲೆ, ನೀವು ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು.

ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ನೀವು ಪಡೆಯಬಹುದಾದ ತೆರಿಗೆ ಪ್ರಯೋಜನಗಳನ್ನು ವಿವರಿಸುವ ಟೇಬಲ್ ಕೆಳಗಿನಂತಿದೆ:

ಅರ್ಹತೆ ವಿನಾಯಿತಿ ಮಿತಿ
ಸ್ವಂತಕ್ಕೆ ಮತ್ತು ಕುಟುಂಬಕ್ಕಾಗಿ (ಸಂಗಾತಿ, ಅವಲಂಬಿತ ಮಕ್ಕಳು) ₹25,000 ವರೆಗೆ
ಸ್ವಂತಕ್ಕೆ, ಕುಟುಂಬ + ಪೋಷಕರಿಗೆ (60 ವರ್ಷಕ್ಕಿಂತ ಕಡಿಮೆ ವಯಸ್ಸಿನವರು) (₹25,000 + ₹25,000) = ₹50,000 ವರೆಗೆ
ಸ್ವಂತಕ್ಕೆ ಮತ್ತು ಕುಟುಂಬಕ್ಕಾಗಿ (ಹಿರಿಯ ಸದಸ್ಯರು 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರು) + ಪೋಷಕರು (60 ವರ್ಷಕ್ಕಿಂತ ಮೇಲ್ಪಟ್ಟವರು) (₹25,000 + ₹50,000) = ₹75,000 ವರೆಗೆ
ಸ್ವಂತಕ್ಕೆ ಮತ್ತು ಕುಟುಂಬಕ್ಕಾಗಿ (ಹಿರಿಯ ಸದಸ್ಯರು 60 ವರ್ಷಕ್ಕಿಂತ ಮೇಲ್ಪಟ್ಟವರು) + ಪೋಷಕರು (60 ವರ್ಷಕ್ಕಿಂತ ಮೇಲ್ಪಟ್ಟವರು) (₹50,000 + ₹50,000) = ₹1,00,000 ವರೆಗೆ

ಆದ್ದರಿಂದ, ನೀವು ಇನ್ನೂ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಲು ಯೋಚಿಸುತ್ತಿದ್ದರೆ, ಈಗಲೇ ನಿಲ್ಲಿಸಿ! ಇಂದೇ ಒಂದು ಪಾಲಿಸಿಯನ್ನು ಖರೀದಿಸಿ!

ಆದರೆ ಪಾಲಿಸಿಗಾಗಿ ಅರ್ಜಿ ಸಲ್ಲಿಸುವ ಮೊದಲು ಮೆಡಿಕ್ಲೇಮ್ ಇನ್ಶುರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ಅನ್ನು ಬಳಸಿಕೊಂಡು ನಿಮ್ಮ ಪ್ರೀಮಿಯಂ ಮೊತ್ತವನ್ನು ಲೆಕ್ಕಾಚಾರ ಮಾಡಲು ಮರೆಯಬೇಡಿ!

ಇವುಗಳ ಬಗ್ಗೆ ಇನ್ನಷ್ಟು ತಿಳಿಯಿರಿ:

ಹೆಲ್ತ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ಬಗ್ಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳು.

ಡಿಡಕ್ಟಿಬಲ್ಸ್ ಎಂದರೇನು?

ಡಿಡಕ್ಟಿಬಲ್ಸ್ ಎನ್ನುವುದು ಚಿಕಿತ್ಸಾ ವೆಚ್ಚಗಳ ಒಂದು ಭಾಗವಾಗಿದ್ದು, ಅದನ್ನು ಪಾಲಿಸಿದಾರನು/ಪಾಲಿಸಿದಾರಳು ಸ್ವತಃ ತಾವೇ ಪಾವತಿಸಬೇಕಾಗುತ್ತದೆ. ಅದರ ನಂತರ ಪಾಲಿಸಿದಾರರ ಇನ್ಶೂರೆನ್ಸ್ ಪಾಲಿಸಿಯು ಪ್ರಾರಂಭಗೊಳ್ಳುತ್ತದೆ.

ನೀವು ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ GST ಪಾವತಿಸಬೇಕೇ?

ಹೌದು, ಹೆಲ್ತ್ ಇನ್ಶೂರೆನ್ಸಿಗೆ ಪಾವತಿಸಬೇಕಾದ ಪ್ರೀಮಿಯಂ ಮೇಲೆ 18% ರಷ್ಟು GST ಅನ್ನು ವಿಧಿಸಲಾಗುತ್ತದೆ.

ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳ ಪ್ರೀಮಿಯಂ, ಒಂದು ಇನ್ಶೂರೆನ್ಸ್ ಕಂಪನಿಯಿಂದ ಮತ್ತೊಂದು ಇನ್ಶೂರೆನ್ಸ್ ಕಂಪನಿಗೆ ಬದಲಾಗುತ್ತದೆಯೇ?

ಹೌದು, ಖಂಡಿತ. ಪಾವತಿಸಬೇಕಾದ ಪ್ರೀಮಿಯಂ ಒಂದು ಇನ್ಶೂರೆನ್ಸ್ ಕಂಪನಿಯಿಂದ ಇನ್ನೊಂದಕ್ಕೆ ಬದಲಾಗುತ್ತದೆ.