ಹೆಲ್ತ್ ಇನ್ಶೂರೆನ್ಸ್ ಆನ್‌ಲೈನ್‌ನಲ್ಲಿ ಖರೀದಿಸಿ

ಡಿಜಿಟ್ ಹೆಲ್ತ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಸೆಕ್ಷನ್ 80D ಅಡಿಯಲ್ಲಿ ಸೀನಿಯರ್ ಸಿಟಿಜನ್‌ಗಳಿಗೆ ಹೆಲ್ತ್ ಇನ್ಶೂರೆನ್ಸ್ ಟ್ಯಾಕ್ಸ್ ಪ್ರಯೋಜನಗಳು

ವೈದ್ಯಕೀಯ ವೆಚ್ಚಗಳು ಹೆಚ್ಚುತ್ತಿರುವ ಈ ಯುಗದಲ್ಲಿ, ಹೆಲ್ತ್ ಇನ್ಶೂರೆನ್ಸ್ ಅನ್ನು ಪಡೆಯದೇ ಇದ್ದರೆ, ಅದು ನಿಮ್ಮ ಉಳಿತಾಯವನ್ನು ಪ್ರೀತಿಯಿಂದ ಉರುಳಿಸಬಹುದು. ಹಾಗೂ ಹೆಲ್ತ್ ಇನ್ಶೂರೆನ್ಸ್ ಅನ್ನು ಪಡೆಯಲು ಇದೊಂದೇ ಕಾರಣವಿಲ್ಲ. ಹೆಲ್ತ್ ಇನ್ಶೂರೆನ್ಸ್ ನಿಮ್ಮ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ನಿಮ್ಮ ಉಳಿತಾಯವನ್ನು ರಕ್ಷಿಸುವುದರ ಜೊತೆಗೆ, ಇನ್ಕಮ್ ಟ್ಯಾಕ್ಸ್ ಆ್ಯಕ್ಟ್ 1961 ರ ಸೆಕ್ಷನ್ 80D ಅಡಿಯಲ್ಲಿ, ಪಾಲಿಸಿಹೋಲ್ಡರ್‌ಗಳಿಗೆ ಟ್ಯಾಕ್ಸ್ ಪ್ರಯೋಜನಗಳನ್ನು ಸಹ ನೀಡುತ್ತದೆ.

ಸೀನಿಯರ್ ಸಿಟಿಜನ್ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಈ ಪ್ರಯೋಜನಗಳನ್ನು ಇನ್ನೂ ಒಂದು ಹೆಜ್ಜೆ ಮುಂದೆ ತೆಗೆದುಕೊಂಡು ಹೋಗುತ್ತದೆ. ಸೀನಿಯರ್ ಸಿಟಿಜನ್‌ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳಿಗೆ ನೀವು ಪಡೆದುಕೊಳ್ಳಬಹುದಾದ ಅನೇಕ ಟ್ಯಾಕ್ಸ್ ಪ್ರಯೋಜನಗಳ ಕುರಿತು ಇನ್ನಷ್ಟು ತಿಳಿಯಲು ಮುಂದೆ ಓದಿ.

ಸೀನಿಯರ್ ಸಿಟಿಜನ್ ಎಂದರೆ ಯಾರು?

ಹಣಕಾಸು ವರ್ಷದ ಯಾವುದೇ ಸಮಯದಲ್ಲಿ, 60 ವರ್ಷಕ್ಕಿಂತ ಹೆಚ್ಚು ಆದರೆ 80 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಯನ್ನು ಆ ನಿರ್ದಿಷ್ಟ ವರ್ಷದ ಟ್ಯಾಕ್ಸ್ ಉದ್ದೇಶಗಳಿಗಾಗಿ ಸೀನಿಯರ್ ಸಿಟಿಜನ್ ಎಂದು ಪರಿಗಣಿಸಲಾಗುತ್ತದೆ. ಇದಲ್ಲದೆ,

ವರ್ಷದ ಯಾವುದೇ ಸಮಯದಲ್ಲಿ, 80 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಯನ್ನು ಆ ವರ್ಷದ ಸೂಪರ್ ಸೀನಿಯರ್ ಸಿಟಿಜನ್ ಎಂದು ಪರಿಗಣಿಸಲಾಗುತ್ತದೆ.

ಸೀನಿಯರ್ ಸಿಟಿಜನ್‌ಗಳಿಗಾಗಿ ಸೆಕ್ಷನ್ 80D ಅಡಿಯಲ್ಲಿ ಹೆಲ್ತ್ ಇನ್ಶೂರೆನ್ಸ್‌ನೊಂದಿಗೆ ಇರುವ ಟ್ಯಾಕ್ಸ್ ಪ್ರಯೋಜನಗಳು ಯಾವುವು?

ಸೀನಿಯರ್ ಸಿಟಿಜನ್‌ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಾಗಿ ಸೆಕ್ಷನ್ 80D ಅಡಿಯಲ್ಲಿ ಇರುವ ಟ್ಯಾಕ್ಸ್ ಪ್ರಯೋಜನಗಳನ್ನು ಈ ಕೆಳಗೆ ನೀಡಲಾಗಿದೆ:

  1. ನಿಮ್ಮ ಹೆಲ್ತ್ ಇನ್ಶೂರೆನ್ಸ್‌ಗೆ ನೀವು ಪಾವತಿಸುವ ಪ್ರೀಮಿಯಂಗೆ, ಇನ್ಕಮ್ ಟ್ಯಾಕ್ಸ್‌ನ ಸೆಕ್ಷನ್ 80D ಅಡಿಯಲ್ಲಿ ತೆರಿಗೆ ವಿನಾಯಿತಿ ಇದೆ. ಈ ಡಿಡಕ್ಷನ್ ಮಿತಿಯು ₹25000/- ಆಗಿದ್ದು, ಪ್ರೀಮಿಯಂ ಪಾವತಿಸುವವರು ಸೀನಿಯರ್ ಸಿಟಿಜನ್ ಆಗಿದ್ದರೆ ಈ ಮಿತಿಯನ್ನು ₹50,000 ವರೆಗೆ ವಿಸ್ತರಿಸಬಹುದು.
  2. ಇಬ್ಬರೂ ಪೋಷಕರು ಸೀನಿಯರ್ ಸಿಟಿಜನ್‌ಗಳಾಗಿದ್ದರೆ, ಈ ಪ್ರಯೋಜನದೊಂದಿಗೆ ಒಬ್ಬ ವ್ಯಕ್ತಿಯು ₹75000 ವರೆಗಿನ ವಿನಾಯಿತಿಯನ್ನು ಆನಂದಿಸಬಹುದು.
  3. ಕೆಲವೊಮ್ಮೆ ಅಪರೂಪಕ್ಕೆ, ಪಾಲಿಸಿಹೋಲ್ಡರ್‌ಗಳು ಸಹ 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ಮತ್ತು ಅವರ ಪೋಷಕರಿಗೂ ಹೆಲ್ತ್ ಇನ್ಶೂರೆನ್ಸ್‌ನ ಅಡಿಯಲ್ಲಿ ಇನ್ಶೂರೆನ್ಸ್ ಪಡೆದಿದ್ದರೆ, ಅಂತಹವರಿಗೆ ಡಿಡಕ್ಟಿಬಲ್ ಮೊತ್ತವು ₹1,00,000 ವರೆಗೆ ಇರುತ್ತದೆ (ಪಾಲಿಸಿಹೋಲ್ಡರ್‌ಗಳಿಗೆ ₹50000 + ಪೋಷಕರಿಗೆ ₹50000, ಇಬ್ಬರೂ ಸೀನಿಯರ್ ಸಿಟಿಜನ್‌ಗಳು).

ಸೀನಿಯರ್ ಸಿಟಿಜನ್‌ಗಳಿಗೆ ಸೆಕ್ಷನ್ 80D ಡಿಡಕ್ಷನ್‌ಗಳ ಅಡಿಯಲ್ಲಿ ಟ್ಯಾಕ್ಸ್ ಉಳಿತಾಯದ ಸಂದರ್ಭಗಳು

80D ಅಡಿಯಲ್ಲಿ ಟ್ಯಾಕ್ಸ್ ಡಿಡಕ್ಷನ್‌ಗಳಿಗಾಗಿ ವಿವಿಧ ಅರ್ಹತಾ ಪ್ರಕರಣಗಳನ್ನು ಪರಿಗಣಿಸುವ ವಿಭಿನ್ನ ಸಂದರ್ಭಗಳು ಸಾಧ್ಯ ಇವೆ. ಕೆಳಗಿನ ಟೇಬಲ್‌ನಲ್ಲಿ ಹೈಲೈಟ್ ಮಾಡಿದಂತೆ, ಸೀನಿಯರ್ ಸಿಟಿಜನ್‌ಗಳು ಹೆಚ್ಚುವರಿ ಪ್ರಯೋಜನವನ್ನು ಪಡೆಯುತ್ತಾರೆ:

ಸಂದರ್ಭಗಳು 80D ಅಡಿಯಲ್ಲಿ ಡಿಡಕ್ಷನ್
ಸ್ವತಃ ತನಗೆ ಮತ್ತು ಕುಟುಂಬಕ್ಕೆ (60 ವರ್ಷಕ್ಕಿಂತ ಕೆಳಗಿನ ಎಲ್ಲಾ ಸದಸ್ಯರು) ₹25,000
ಸ್ವತಃ ತನಗೆ ಮತ್ತು ಕುಟುಂಬಕ್ಕೆ + ಪೋಷಕರಿಗೆ (60 ವರ್ಷಕ್ಕಿಂತ ಕೆಳಗಿನ ಎಲ್ಲಾ ಸದಸ್ಯರು) ₹25,000 + ₹25,000) = ₹50,000
ಸ್ವತಃ ತನಗೆ ಮತ್ತು ಕುಟುಂಬಕ್ಕೆ (60 ವರ್ಷಕ್ಕಿಂತ ಕೆಳಗಿನ ಎಲ್ಲಾ ಸದಸ್ಯರು) + ಸೀನಿಯರ್ ಸಿಟಿಜನ್ ಪೋಷಕರು ₹25,000 + ₹50,000 = ₹75,000
ಸ್ವತಃ ತನಗೆ ಮತ್ತು ಕುಟುಂಬಕ್ಕೆ (60 ವರ್ಷ ಮೇಲ್ಪಟ್ಟ ಹಿರಿಯ ಸದಸ್ಯರೊಂದಿಗೆ) + ಸೀನಿಯರ್ ಸಿಟಿಜನ್ ಪೋಷಕರು ₹50,000 + ₹50,000) = ₹1,00,000

ಸೆಕ್ಷನ್ 80D ಅಡಿಯಲ್ಲಿ, ಸೀನಿಯರ್ ಸಿಟಿಜನ್‌ಗಳಿಗೆ ಟ್ಯಾಕ್ಸ್ ಡಿಡಕ್ಷನ್‌ಗಳನ್ನು ಪಡೆಯಲು ಅಗತ್ಯವಿರುವ ಡಾಕ್ಯುಮೆಂಟ್‌ಗಳು

80D ಅಡಿಯಲ್ಲಿ ಟ್ಯಾಕ್ಸ್ ಡಿಡಕ್ಷನ್‌ಗಳನ್ನು ಪಡೆಯಲು, ನೀವು ಈ ಕೆಳಗಿನ ಡಾಕ್ಯುಮೆಂಟ್‌ಗಳನ್ನು ಸಬ್ಮಿಟ್ ಮಾಡಬೇಕು:

  1. ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗೆ ಪಾವತಿಸಿದ ಪ್ರೀಮಿಯಂನ ರಿಸಿಪ್ಟ್.
  2. ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಡಾಕ್ಯುಮೆಂಟ್‌ನಲ್ಲಿ ತಿಳಿಸಲಾದ ಇನ್ಶೂರೆನ್ಸ್ ಮಾಡಿಸಲಾದ ಕುಟುಂಬದ ಸದಸ್ಯರ ಹೆಸರು, ಅವರ ವಯಸ್ಸು ಮತ್ತು ಅವರ ಸಂಬಂಧ.
  3. ಪೋಷಕರು ಕವರ್ ಆಗಿದ್ದರೆ, ಹೆಲ್ತ್ ಇನ್ಶೂರೆನ್ಸ್ ಪೂರೈಕೆದಾರರಿಂದ 80D ಸರ್ಟಿಫಿಕೇಟ್ ಅನ್ನು ಚೆಕ್ ಮಾಡಿ.

ಸೀನಿಯರ್ ಸಿಟಿಜನ್‌ಗಳು ಸೆಕ್ಷನ್ 80D ಅಡಿಯಲ್ಲಿ ವೈದ್ಯಕೀಯ ಬಿಲ್‌ಗಳೊಂದಿಗೆ ಟ್ಯಾಕ್ಸ್ ಉಳಿಸಬಹುದೇ?

ವ್ಯಕ್ತಿಯ ಜೀವನದ ಸುವರ್ಣ ವರ್ಷಗಳು ಅತೀ ಅಮೂಲ್ಯವಾದವು ಮತ್ತು ಈ ಸಮಯವನ್ನು ಯಾವುದೇ ಹಣಕಾಸಿನ ಪರಿಣಾಮಗಳ ಬಗ್ಗೆ ಚಿಂತಿಸದೇ ಕಳೆಯಬೇಕು, ವಿಶೇಷವಾಗಿ ವೈದ್ಯಕೀಯ ತುರ್ತುಸ್ಥಿತಿಯ ವಿಷಯದಲ್ಲಿ.


ಹೀಗಾಗಿ, ಯಾವುದೇ ವೈದ್ಯಕೀಯ ಬಿಲ್‌ಗಳು ಅಥವಾ ಸೀನಿಯರ್ ಸಿಟಿಜನ್‌ಗಳಿಗೆ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗೆ ಪಾವತಿಸಿದ ಪ್ರೀಮಿಯಂಗಳು, ಸೆಕ್ಷನ್ 80D ಅಡಿಯಲ್ಲಿ ಟ್ಯಾಕ್ಸ್ ಡಿಡಕ್ಷನ್‌ಗಳಿಗೆ ಅರ್ಹವಾಗಿರುತ್ತದೆ.

ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಮೇಲೆ ಚರ್ಚಿಸಲಾದ ಟ್ಯಾಕ್ಸ್ ಪ್ರಯೋಜನಗಳನ್ನು ಹೊರತುಪಡಿಸಿ, ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮೂಲಕ ನೀವು ಟ್ಯಾಕ್ಸ್ ಅನ್ನು ಉಳಿಸಬಹುದಾದ ಕೆಲವು ಸಂದರ್ಭಗಳು ಇಲ್ಲಿವೆ.

  1. ₹5000/- ವರೆಗಿನ ಆ್ಯನುವಲ್ ಪ್ರಿವೆಂಟಿವ್ ಚೆಕ್-ಅಪ್ಸ್ ಮೇಲೆ ನೀವು ಟ್ಯಾಕ್ಸ್ ಪ್ರಯೋಜನಗಳನ್ನು ಕ್ಲೈಮ್ ಮಾಡಬಹುದು.
  2. ಕ್ರಿಟಿಕಲ್ ಇಲ್ನೆಸ್‌ಗಳ ಚಿಕಿತ್ಸೆಗೆ ತಗಲುವ ವೆಚ್ಚವನ್ನು ₹1,00,000 ವರೆಗಿನ ಟ್ಯಾಕ್ಸ್ ಡಿಡಕ್ಷನ್‌ಗೆ ಅನುಮತಿಸಲಾಗಿದೆ.
  3. ನೀವು ಕ್ರಿಟಿಕಲ್ ಇಲ್ನೆಸ್‌ ಅಥವಾ ಯಾವುದೇ ಹೆಲ್ತ್-ರಿಲೇಟೆಡ್ ರೈಡರ್ ಜೊತೆ ಲೈಫ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿದರೆ, ನೀವು ಎರಡು ಟ್ಯಾಕ್ಸ್ ಪ್ರಯೋಜನಗಳನ್ನು ಪಡೆಯಬಹುದು- ಲೈಫ್ ಇನ್ಶೂರೆನ್ಸ್‌ಗೆ ಪಾವತಿಸಿದ ಪ್ರೀಮಿಯಂ ಅನ್ನು ಸೆಕ್ಷನ್ 80C ಅಡಿಯಲ್ಲಿ ಡಿಡಕ್ಟ್ ಮಾಡಲಾಗುತ್ತದೆ ಮತ್ತು ರೈಡರ್‌ಗೆ ಪಾವತಿಸಿದ ಪ್ರೀಮಿಯಂಗೆ ಸೆಕ್ಷನ್ 80D ಅಡಿಯಲ್ಲಿ ಟ್ಯಾಕ್ಸ್ ವಿನಾಯಿತಿ ಇದೆ.
  4. ಅವರ ಸ್ಥಿತಿಯ ತೀವ್ರತೆಗೆ ಅನುಗುಣವಾಗಿ, ವಿಕಲಚೇತನರು 40% ಅಥವಾ ಅದಕ್ಕಿಂತ ಹೆಚ್ಚಿನ ಅಂಗವೈಕಲ್ಯವನ್ನು ಹೊಂದಿದ್ದರೆ, ಆಗ ಅವರು ವಾರ್ಷಿಕ ₹75000 ವರೆಗಿನ ರಿಯಾಯಿತಿಯನ್ನು ಪಡೆಯಬಹುದು. 80% ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿದ್ದಲ್ಲಿ, ಈ ರಿಯಾಯಿತಿಯು ₹1,25,000 ವರೆಗೆ ಹೋಗಬಹುದು. ಅವಲಂಬಿತರು, ಈ ಸಂದರ್ಭದಲ್ಲಿ, ಈ ಟ್ಯಾಕ್ಸ್ ಪ್ರಯೋಜನವನ್ನು ಈಗಾಗಲೇ ಪಡೆಯದ ಕಾರಣ, ಅಂಗವಿಕಲ ಅವಲಂಬಿತರ ಆರೈಕೆಯನ್ನು ಮೇಲ್ವಿಚಾರಣೆ ಮಾಡುವ ವ್ಯಕ್ತಿಗಳು ಸಹ ಈ ಡಿಡಕ್ಷನ್‌ಗಳನ್ನು ಪಡೆಯಬಹುದು.
  5. ಇನ್ಕಮ್ ಟ್ಯಾಕ್ಸ್‌ನ ಸೆಕ್ಷನ್ 80DDB ಯು, ವ್ಯಕ್ತಿಗಳು ತಮಗಾಗಿ ಅಥವಾ ತಮ್ಮ ಅವಲಂಬಿತರಿಗಾಗಿ ಮಾಡಿದ ಚಿಕಿತ್ಸೆಯಿಂದ ಅಥವಾ ವೈದ್ಯಕೀಯ ವೆಚ್ಚದಿಂದ, ಆ ವ್ಯಕ್ತಿಗಳು ಅಥವಾ ಹೆಚ್.ಯು.ಎಫ್ ಗಳು (ಹಿಂದೂ ಅವಿಭಜಿತ ಕುಟುಂಬ) ವಿನಾಯಿತಿ ಪಡೆಯುತ್ತವೆ.

ಈ ಸಂದರ್ಭದಲ್ಲಿ, ಕ್ಲೈಮ್ ಮಾಡಬಹುದಾದ ಡಿಡಕ್ಷನ್‌ನ ಮೊತ್ತವು ಈ ಕೆಳಗಿನಂತಿರುತ್ತದೆ:

ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುವ ವ್ಯಕ್ತಿಯ ವಯಸ್ಸು ಟ್ಯಾಕ್ಸ್ ಡಿಡಕ್ಷನ್ ಮೊತ್ತ
60 ವರ್ಷಕ್ಕಿಂತ ಕಡಿಮೆ ₹40000/- ಅಥವಾ ನಿಜವಾದ ವೆಚ್ಚಗಳು, ಯಾವುದು ಕಡಿಮೆಯೋ ಅದು
ಸೀನಿಯರ್ ಸಿಟಿಜನ್‌ಗಳು- 60 ವರ್ಷ ಮತ್ತು ಅದಕ್ಕೂ ಮೇಲ್ಪಟ್ಟವರು ₹100000/- ಅಥವಾ ನಿಜವಾದ ವೆಚ್ಚಗಳು, ಯಾವುದು ಕಡಿಮೆಯೋ ಅದು
ಸೂಪರ್ ಸೀನಿಯರ್ ಸಿಟಿಜನ್‌ಗಳು- 80 ವರ್ಷ ಮತ್ತು ಅದಕ್ಕೂ ಮೇಲ್ಪಟ್ಟವರು ₹100000/- ಅಥವಾ ನಿಜವಾದ ವೆಚ್ಚಗಳು, ಯಾವುದು ಕಡಿಮೆಯೋ ಅದು

ಸೀನಿಯರ್ ಸಿಟಿಜನ್‌ಗಳ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್, ಕೇವಲ ಟ್ಯಾಕ್ಸ್ ಪ್ರಯೋಜನಗಳನ್ನು ಮಾತ್ರವಲ್ಲದೆ ಆರೋಗ್ಯಕರ ಕವರೇಜನ್ನು ನೀಡುವುದು, ಡೇ ಕೇರ್ ವೆಚ್ಚಗಳು, ಮನೆಯಲ್ಲಿನ ಚಿಕಿತ್ಸಾ ವೆಚ್ಚಗಳು, ಆ್ಯಡ್-ಆನ್‌ಗಳ ಶ್ರೇಣಿಯನ್ನು ನೀಡುವುದು ಮತ್ತು ಸಾಕಷ್ಟು ಇತರ ಪ್ರಯೋಜನಗಳಂತಹ ಇತರ ಪ್ರಯೋಜನಗಳನ್ನು ನೀಡುತ್ತದೆ. ಇದು ನೀವು ಕಷ್ಟಪಟ್ಟು ಗಳಿಸಿದ ಹಣವನ್ನು ಉಳಿಸಲು ಸಹಾಯ ಮಾಡುತ್ತದೆ. ಜೊತೆಗೆ ಉತ್ತಮ ಹೆಲ್ತ್‌ಕೇರ್‌ಗೆ ನಿಮ್ಮ ಆ್ಯಕ್ಸೆಸ್ ಅನ್ನು ಇನ್ನಷ್ಟು ಸುಲಭಗೊಳಿಸುತ್ತದೆ.

ಸೀನಿಯರ್ ಸಿಟಿಜನ್‌ಗಳಿಗೆ ಹೆಲ್ತ್ ಇನ್ಶೂರೆನ್ಸ್ ಟ್ಯಾಕ್ಸ್ ಪ್ರಯೋಜನಗಳ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು

ಸೂಪರ್ ಸೀನಿಯರ್ ಸಿಟಿಜನ್‌ಗಳಿಗೆ ಅಂದರೆ 80 ವರ್ಷ ಮೇಲ್ಪಟ್ಟ ವ್ಯಕ್ತಿಗಳಿಗೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದಾದರೂ ಟ್ಯಾಕ್ಸ್ ಪ್ರಯೋಜನಗಳು ಲಭ್ಯ ಇವೆಯೇ?

80 ಮತ್ತು ಅದಕ್ಕಿಂತ ಮೇಲ್ಪಟ್ಟವರು ಮತ್ತು ತಮ್ಮದೇ ಆದ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರದ ವ್ಯಕ್ತಿಗಳು ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 80D ಅಡಿಯಲ್ಲಿ, ವೈದ್ಯಕೀಯ ಚಿಕಿತ್ಸೆಗಳು ಮತ್ತು ಹೆಲ್ತ್ ಚೆಕಪ್‌ಗಳನ್ನು ಪಡೆದುಕೊಳ್ಳುವಾಗ ₹50,000 ವರೆಗಿನ ಡಿಡಕ್ಷನ್‌ಗಳನ್ನು ಕ್ಲೈಮ್ ಮಾಡಬಹುದು.

ಹೊಸ ಟ್ಯಾಕ್ಸ್ ರೆಜಿಮ್‌ನಡಿಯಲ್ಲಿ 80D ಡಿಡಕ್ಷನ್‌ಗಳು ಲಭ್ಯ ಇವೆಯೇ?

ಇಲ್ಲ. ಹೊಸ ಟ್ಯಾಕ್ಸ್ ರೆಜಿಮ್‌ ಯಾವುದೇ 80D ಟ್ಯಾಕ್ಸ್ ವಿನಾಯಿತಿಯನ್ನು ನೀಡುವುದಿಲ್ಲ.

ಸೀನಿಯರ್ ಸಿಟಿಜನ್‌ಗಳಿಗೆ 80D ಗಾಗಿ ಪುರಾವೆಯ ಅಗತ್ಯವಿದೆಯೇ?

ವರ್ಷದಲ್ಲಿ ಮಾಡಿದ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಪಾವತಿಗಳು, ವೈದ್ಯಕೀಯ ಬಿಲ್‌ಗಳು, ವೈದ್ಯಕೀಯ ವೆಚ್ಚಗಳು, ಟೆಸ್ಟ್ ರಿಸಲ್ಟ್‌ಗಳು ಮುಂತಾದ ಎಲ್ಲಾ ವೆಚ್ಚಗಳ ದಾಖಲೆಯನ್ನು ಇರಿಸಿಕೊಳ್ಳುವುದು ಇನ್ಕಮ್ ಟ್ಯಾಕ್ಸ್ ಆ್ಯಕ್ಟ್ ಡಿಪಾರ್ಟ್‌ಮೆಂಟ್‌ನ ಕಡೆಯಿಂದ ಅಗತ್ಯವಿಲ್ಲದಿದ್ದರೂ, ಅದನ್ನು ಮಾಡುವಂತೆ ಜನರಿಗೆ ಸಲಹೆ ನೀಡಲಾಗುತ್ತದೆ.

ಸೀನಿಯರ್ ಸಿಟಿಜನ್‌ಗಳಿಗೆ 80D ವೈದ್ಯಕೀಯ ವೆಚ್ಚದ ಲಿಮಿಟ್ ಎಷ್ಟಿರುತ್ತದೆ?

ಒಂದು ಹಣಕಾಸು ವರ್ಷದಲ್ಲಿ, ಸೆಕ್ಷನ್ 80D ಅಡಿಯಲ್ಲಿ 25,000 ರೂಪಾಯಿಗಳ ಡಿಡಕ್ಷನ್‌ಗಳನ್ನು ಅನುಮತಿಸಲಾಗಿದೆ. ಸೀನಿಯರ್ ಸಿಟಿಜನ್‌ಗಳು ₹50,000

ವರೆಗಿನ ಡಿಡಕ್ಷನ್‌ಗಳಿಗೆ ಅರ್ಹರಾಗಿರುತ್ತಾರೆ.