ಮಹಿಳೆಯರಲ್ಲಿ, ಕಾರಣಗಳು ಇವುಗಳಾಗಿರಬಹುದು
ಓವುಲೇಷನ್ ಡಿಸಾರ್ಡರ್, ಅಥವಾ ವಿರಳವಾದ ಓವುಲೇಟಿಂಗ್, ಕಾರಣದಿಂದ
ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಒಎಸ್) . ಪಿಸಿಓಎಸ್ ಹಾರ್ಮೋನ್ ಅಸಮತೋಲನವನ್ನು ಉಂಟುಮಾಡುತ್ತದೆ, ಇದು ಓವುಲೇಷನ್ ಮೇಲೆ ಪರಿಣಾಮ ಬೀರುತ್ತದೆ.
ಹೈಪೋಥಾಲಾಮಿಕ್ ಡಿಸ್ ಫಂಕ್ಷನ್ .
ಪ್ರೀ-ಮೆಚ್ಯೂರ್ ಓವೇರಿಯನ್ ಫೇಯಿಲ್ಯೂರ್ . ಪ್ರೈಮರಿ ಓವೇರಿಯನ್ ಇನ್ ಸಫಿಷಿಯನ್ಸ್ ಎಂದೂ ಕರೆಯಲ್ಪಡುವ ಈ ಅಸ್ವಸ್ಥತೆಯು ಸಾಮಾನ್ಯವಾಗಿ ಸ್ವಯಂ ನಿರೋಧಕ ಪ್ರತಿಕ್ರಿಯೆಯಿಂದ ಅಥವಾ ನಿಮ್ಮ ಓವರಿಯಲ್ಲಾಗುವ (ಬಹುಶಃ ವಂಶೀಯ ಅಥವಾ ಕೀಮೊಥೆರಪಿಯಿಂದ) ಅಕಾಲಿಕ ಎಗ್ ಗಳ ನಷ್ಟದಿಂದ ಉಂಟಾಗುತ್ತದೆ.
ಅತಿಯಾದ ಪ್ರೊಲ್ಯಾಕ್ಟಿನ್ . ಪಿಟ್ಯುಟರಿ ಗ್ರಂಥಿಯು ಅಧಿಕ ಪ್ರಮಾಣದಲ್ಲಿ ಪ್ರೊಲ್ಯಾಕ್ಟಿನ್ ನ ಉತ್ಪಾದನೆಯನ್ನು ಮಾಡಬಹುದು (ಹೈಪರ್ಪ್ರೊಲ್ಯಾಕ್ಟಿನೆಮಿಯಾ), ಇದು ಈಸ್ಟ್ರೊಜೆನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ ಮತ್ತು ಇನ್ಫರ್ಟಿಲಿಟಿಗೆ ಕಾರಣವಾಗಬಹುದು.
ಫಾಲೋಪಿಯನ್ ಟ್ಯೂಬ್ಗಳಿಗೆ ಡ್ಯಾಮೇಜ್ (ಟ್ಯೂಬಲ್ ಇನ್ಫರ್ಟಿಲಿಟಿ), ಕಾರಣದಿಂದ
ಪೆಲ್ವಿಕ್ ಇನ್ ಫ್ಲೇಮಟರಿ ಡಿಸೀಸ್, ಗರ್ಭಾಶಯ ಮತ್ತು ಫಾಲೋಪಿಯನ್ ಟ್ಯೂಬ್ ಗಳ ಸೋಂಕು
ಅಬ್ಡಮಿನ್ ಅಥವಾ ಪೆಲ್ವಿಸ್ ನಲ್ಲಿ ಹಿಂದೆ ಆಗಿರುವ ಶಸ್ತ್ರಚಿಕಿತ್ಸೆ
ಪೆಲ್ವಿಕ್ ಟ್ಯುಬರ್ ಕುಲೋಸಿಸ್
ಎಂಡೊಮೆಟ್ರಿಯೊಸಿಸ್ - ಎಂಡೊಮೆಟ್ರಿಯೊಸಿಸ್ ಸಾಮಾನ್ಯವಾಗಿ ಗರ್ಭಾಶಯದಲ್ಲಿ ಬೆಳೆಯುವ ಅಂಗಾಂಶವು ಬೇರೆಡೆ ಸೇರಿ ಇತರ ಸ್ಥಳಗಳಲ್ಲಿ ಬೆಳೆಯುವಾಗ ಸಂಭವಿಸುತ್ತದೆ. ಈ ಹೆಚ್ಚುವರಿ ಅಂಗಾಂಶ ಬೆಳವಣಿಗೆ - ಮತ್ತು ಅದನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕುವುದು - ಗುರುತುಗಳನ್ನು ಉಂಟುಮಾಡಬಹುದು, ಹಾಗು ಈ ಗುರುತುಗಳು ಫಾಲೋಪಿಯನ್ ಟ್ಯೂಬ್ಗಳನ್ನು ನಿರ್ಬಂಧಿಸಿ, ಮೊಟ್ಟೆ ಮತ್ತು ವೀರ್ಯವನ್ನು ಒಂದಾಗದಂತೆ ತಡೆಯಬಹುದು.
ಗರ್ಭಾಶಯದ ಅಥವಾ ಗರ್ಭಕಂಠದ ಕಾರಣಗಳು - ಅದೃಷ್ಟವಶಾತ್, ಮೆಡಿಕಲ್ ವಿಜ್ಞಾನಗಳ ಪ್ರಗತಿಯೊಂದಿಗೆ ಇನ್ಫರ್ಟಿಲಿಟಿಗೆ ಚಿಕಿತ್ಸೆ ಇದೆ ಮತ್ತು ಪ್ರಪಂಚದಾದ್ಯಂತ ಜನರು ಇಂತಹ ಚಿಕಿತ್ಸೆಗಳನ್ನು ಆರಿಸಿಕೊಳ್ಳುತ್ತಿದ್ದಾರೆ.