ಸಬ್-ಲಿಮಿಟ್ಗಳನ್ನು ನೀಡದ ಪಾಲಿಸಿಗಳಿಗಾಗಿ ನೀವು ಹುಡುಕಾಟ ನಡೆಸಬಹುದಾದರೂ, ಇವುಗಳು ಹೆಚ್ಚಿನ ಪ್ರೀಮಿಯಂಗಳನ್ನು ಹೊಂದಿರುತ್ತವೆ. ಸಬ್-ಲಿಮಿಟ್ಗಳನ್ನು ಇನ್ಶೂರೆನ್ಸ್ ಕಂಪನಿಯು ನಿರ್ಧರಿಸುವುದರಿಂದ, ಈ ಷರತ್ತುಗಳನ್ನು ಹೊಂದಿರುವ ಪಾಲಿಸಿಯನ್ನು ನೀವು ಆರಿಸಿದರೆ, ಮೊತ್ತಗಳನ್ನು ಬದಲಾಯಿಸಲು ನಿಮಗೆ ಸಾಧ್ಯವಾಗುವುದಿಲ್ಲ.
ಹೀಗಾಗಿ, ನೀವು ಪಾಲಿಸಿಯನ್ನು ಖರೀದಿಸುವ ಮೊದಲು, ಪಾಲಿಸಿ ಡಾಕ್ಯುಮೆಂಟ್ಗಳಲ್ಲಿ ಉಲ್ಲೇಖಿಸಲಾದ ಸಬ್-ಲಿಮಿಟ್ಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಿ ಮತ್ತು ಸೇರ್ಪಡೆಗಳು, ಹೊರಗಿಡುವಿಕೆಗಳು, ಡಿಡಕ್ಟಿಬಲ್ಸ್ ಮತ್ತು ಸಹ-ಪಾವತಿಗಳಂತಹ ಇತರ ಪ್ರಮುಖ ಅಂಶಗಳನ್ನು ಪರಿಶೀಲಿಸಿ. ಪಾಲಿಸಿಯಲ್ಲಿ ನೀಡಲಾದ ಕವರೇಜ್ ನಿಮ್ಮ ನಿರ್ದಿಷ್ಟ ಅವಶ್ಯಕತೆಗಳು ಅಥವಾ ಹೆಲ್ತ್ ಕೇರ್ ವೆಚ್ಚಗಳಿಗಿಂತ ಕಡಿಮೆಯಿದೆ ಎಂದು ನೀವು ಭಾವಿಸಿದರೆ, ನಿಮ್ಮ ಸಮ್ ಇನ್ಶೂರ್ಡ್ ಅನ್ನು ನೀವು ಹೆಚ್ಚಿಸಬಹುದು ಅಥವಾ ನಿಮ್ಮ ಇನ್ಶೂರರ್ ಅನ್ನು ಬದಲಾಯಿಸುವ ಆಯ್ಕೆ ಸಹ ಮಾಡಿಕೊಳ್ಳಬಹುದು.
ಹೆಲ್ತ್ ಇನ್ಶೂರೆನ್ಸ್ ಸಬ್-ಲಿಮಿಟ್ಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ, ಏಕೆಂದರೆ ಪಾಲಿಸಿಯು ನಿಮ್ಮ ಅವಶ್ಯಕತೆಗಳಿಗೆ ಸರಿಹೊಂದುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವಲ್ಲಿ ಇದು ಒಂದು ಅಂಶವಾಗಬಹುದು. ಸಬ್-ಲಿಮಿಟ್ ಅನ್ನು ಹೊಂದಿರುವ ಹೆಲ್ತ್ ಇನ್ಶೂರೆನ್ಸ್ ಯೋಜನೆಯು ಸಬ್-ಲಿಮಿಟ್ಗಳಿಲ್ಲದ ಯೋಜನೆಗಳಿಗಿಂತ ಕಡಿಮೆ ಪ್ರೀಮಿಯಂ ಅನ್ನು ಹೊಂದಿದ್ದರೂ, ದೀರ್ಘಾವಧಿಯಲ್ಲಿ ಅವು ಹೆಚ್ಚು ಸೀಮಿತ ಕವರೇಜ್ ಅನ್ನು ಒದಗಿಸಬಹುದು. ಆದ್ದರಿಂದ, ನಿಮ್ಮ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸುವ ಮೊದಲು ನಿಮ್ಮ ಆರೋಗ್ಯ ಅಗತ್ಯತೆಗಳು ಮತ್ತು ನಿಮ್ಮ ಬಜೆಟ್ ಎರಡಕ್ಕೂ ಸರಿಹೊಂದುವ ಪಾಲಿಸಿಯನ್ನು ನೋಡಲು ಮರೆಯದಿರಿ.