ಫೋರ್ಡ್ ಇಕೋಸ್ಪೋರ್ಟ್ ಬಿಡುಗಡೆಯು ಭಾರತದಲ್ಲಿ ಸಬ್ ಕಾಂಪ್ಯಾಕ್ಟ್ ಎಸ್ಯುವಿ ಟ್ರೆಂಡ್ ಅನ್ನು ಬದಲಾಯಿಸಿತು. ಇದು ಆರಾಮದಾಯಕ ಡ್ರೈವಿಂಗ್ ಅನುಭವ, ಉತ್ತಮ ಕಾರ್ಯಕ್ಷಮತೆ ಮತ್ತು ಪ್ರಭಾವಶಾಲಿ ರೋಡ್ ಪ್ರೆಸೆನ್ಸ್ ಅನ್ನು ಹೊಂದಿದೆ. ಫ್ಲೋಟಿಂಗ್ ಇನ್ಫೋಟೈನ್ಮೆಂಟ್, ವಿಶಾಲವಾದ ಕ್ಯಾಬಿನ್, ಸನ್ರೂಫ್ ಹೊಂದಿರುವ ಇಕೋಸ್ಪೋರ್ಟ್ ಎಲ್ಲಾ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ.
ಆದ್ದರಿಂದ, ನೀವು ಈಗಾಗಲೇ ಈ ಮಾಡೆಲ್ ಅನ್ನು ಡ್ರೈವ್ ಮಾಡುತ್ತಿದ್ದರೆ ಅಥವಾ ಇತ್ತೀಚಿನ ವರ್ಷನ್ ಅನ್ನು ಖರೀದಿಸಲು ಪ್ಲಾನ್ ಮಾಡುತ್ತಿದ್ದರೆ, ಸಂಭವನೀಯ ಆರ್ಥಿಕ ಒತ್ತಡವನ್ನು ತಪ್ಪಿಸಲು ಫೋರ್ಡ್ ಇಕೋಸ್ಪೋರ್ಟ್ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆದುಕೊಳ್ಳಿ.
ವಾಸ್ತವವಾಗಿ, 1988ರ ಮೋಟಾರ್ ವೆಹಿಕಲ್ಸ್ ಆಕ್ಟ್ ಪ್ರಕಾರ ಭಾರತದಲ್ಲಿ ನಿಮ್ಮ ವಾಹನವನ್ನು ಇನ್ಶೂರೆನ್ಸ್ ಮಾಡುವುದು ಕಡ್ಡಾಯವಾಗಿದೆ. ಯಾವುದೇ ಉಲ್ಲಂಘನೆಯು ತೀವ್ರವಾದ ಕಾನೂನು ಪರಿಣಾಮಗಳು ಮತ್ತು ಪೆನಲ್ಟಿಗಳಿಗೆ ಕಾರಣವಾಗುತ್ತದೆ.
ಈಗ, ಆನ್ಲೈನ್ನಲ್ಲಿ ವಿಶ್ವಾಸಾರ್ಹ ಇನ್ಶೂರೆನ್ಸ್ ಆಯ್ಕೆಗಳನ್ನು ಹುಡುಕುತ್ತಿರುವಾಗ, ತಿಳುವಳಿಕೆಯುಳ್ಳ ಆಯ್ಕೆಯನ್ನು ಮಾಡುವ ಮೊದಲು ನೀವು ಹಲವಾರು ಅಂಶಗಳನ್ನು ನಿರ್ಧರಿಸಬೇಕು. ಉದಾಹರಣೆಗೆ, ನೀವು ಫೋರ್ಡ್ ಇಕೋಸ್ಪೋರ್ಟ್ ಕಾರ್ ಇನ್ಶೂರೆನ್ಸ್ ಬೆಲೆ, ಲಭ್ಯವಿರುವ ಆ್ಯಡ್-ಆನ್ ಕವರ್ಗಳು, ಐಡಿವಿ ಫ್ಯಾಕ್ಟರ್ ಮತ್ತು ಹೆಚ್ಚಿನದನ್ನು ಹೋಲಿಸಬೇಕು.
ಈ ನಿಟ್ಟಿನಲ್ಲಿ, ಡಿಜಿಟ್ ಕಾರ್ ಇನ್ಶೂರೆನ್ಸ್ ಗೆ ಸೂಕ್ತವಾದ ಆಯ್ಕೆಯನ್ನು ಮಾಡುತ್ತದೆ.
ಏಕೆ ಎಂಬುದನ್ನು ತಿಳಿಯಲು ಪೂರ್ತಿ ಓದಿ.