ಮಹೀಂದ್ರಾ e2o ಪ್ಲಸ್ ಇನ್ಶೂರೆನ್ಸ್

Third-party premium has changed from 1st June. Renew now

ಮಹೀಂದ್ರಾ e2o ಪ್ಲಸ್ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿ ಅಥವಾ ರಿನೀವ್ ಮಾಡಿ

ಭಾರತೀಯ ಪ್ರಯಾಣಿಕ ಮಾರುಕಟ್ಟೆಗಾಗಿ ಮಹೀಂದ್ರಾಾ ಎಲೆಕ್ಟ್ರಿಕ್‌ನಿಂದ ಲ್ಯಾಂಚ್ ಮಾಡಲಾದ, e2o ಪ್ಲಸ್ 2016 ರಲ್ಲಿ ಪರಿಚಯಿಸಲಾದ 5-ಬಾಗಿಲಿನ ಹ್ಯಾಚ್‌ಬ್ಯಾಕ್ ಸಿಟಿ ಕಾರ್ ಆಗಿದೆ. e2o ಪ್ಲಸ್ ಲ್ಯಾಂಚ್ ನಂತರ 2018-19 ರಲ್ಲಿ ಸುಮಾರು 10,276 ಯುನಿಟ್‌ಗಳನ್ನು ಮಾರಾಟ ಮಾಡಿರುವುದಾಗಿ ಮಹೀಂದ್ರಾಾ ಆಂಡ್ ಮಹೀಂದ್ರಾಾ ಇಂಡಿಯಾ ಘೋಷಿಸಿತು.

ಇಷ್ಟೇ ಅಲ್ಲದೆ, ಈ ಸಿಟಿ ಕಾರು ರಿಜನರೇಟಿವ್ ಬ್ರೇಕಿಂಗ್, ರಿವೈವ್, ಸ್ಮಾರ್ಟ್‌ಫೋನ್ ಆ್ಯಪ್ ಸಂಪರ್ಕ, ಚಾರ್ಜ್ ಮಾಡಲು ಸುಲಭ, ಪ್ರಿಕೂಲ್ ಮತ್ತು ಹೆಚ್ಚಿನವುಗಳಂತಹ ಅಡ್ವಾನ್ಸ್ಡ್ ಟೆಕ್ನಾಲಜಿಗಳನ್ನು ಸಜ್ಜುಗೊಳಿಸುತ್ತದೆ. ಇದು ನಾಲ್ಕು ವೇರಿಯಂಟುಗಳಲ್ಲಿ ಲಭ್ಯವಿದೆ, ಮತ್ತು ಅವುಗಳಲ್ಲಿ ಪ್ರತಿಯೊಂದೂ ಆಪ್ಟಿಮೈಸ್ಡ್ ಸುರಕ್ಷತಾ ವೈಶಿಷ್ಟ್ಯಗಳನ್ನು ಸಂಯೋಜಿಸುತ್ತದೆ.

ಈ ಕಾರ್ 2019 ರವರೆಗೆ ಉತ್ಪಾದನೆಯಲ್ಲಿದ್ದರೂ, ಇನ್ನೂ ಹಲವಾರು ವ್ಯಕ್ತಿಗಳು ಈ ಕಾರನ್ನು ಡ್ರೈವ್ ಮಾಡುತ್ತಿದ್ದಾರೆ. ನೀವು ಈ ಹ್ಯಾಚ್‌ಬ್ಯಾಕ್‌ನ ಮಾಲೀಕರಾಗಿದ್ದರೆ, ಅದು ಒಳಗಾಗುವ ಅಪಾಯಗಳು ಮತ್ತು ಡ್ಯಾಮೇಜುಗಳನ್ನು ನೀವು ಪರಿಗಣಿಸಬೇಕು. ಅವುಗಳನ್ನು ಪರಿಗಣಿಸಿ, ನಿಮ್ಮ ಮಹೀಂದ್ರಾ e2o ಪ್ಲಸ್ ಕಾರು ಇನ್ಶೂರೆನ್ಸ್ ಪಾಲಿಸಿಯನ್ನು ಮುಕ್ತಾಯ ದಿನಾಂಕದ ಮೊದಲು ನೀವು ರಿನೀವ್ ಮಾಡಬೇಕು.

ನಿಮ್ಮ ಮಹೀಂದ್ರಾಾ ಕಾರಿಗೆ ಉತ್ತಮವಾದ ಇನ್ಶೂರೆನ್ಸ್ ಪಾಲಿಸಿಯು ವಿವಿಧ ಲಾಭದಾಯಕ ಪ್ರಯೋಜನಗಳೊಂದಿಗೆ ಬರುತ್ತದೆ. ಈ ಪ್ರಯೋಜನಗಳು ಭಾರತದಲ್ಲಿ ಇನ್ಶೂರೆನ್ಸ್ ಪೂರೈಕೆದಾರರ ಮೇಲೆ ಅವಲಂಬಿತವಾಗಿದೆ. ಉದಾಹರಣೆಗೆ, ಡಿಜಿಟ್‌ನಂತಹ ಇನ್ಶೂರೆನ್ಸ್ ಕಂಪನಿಗಳು ಕೈಗೆಟುಕುವ ಕಾರ್ ಇನ್ಶೂರೆನ್ಸ್ ಪ್ರೀಮಿಯಂಗಳು ಸೇರಿದಂತೆ ಹಲವಾರು ಸೇವಾ ಪ್ರಯೋಜನಗಳನ್ನು ನೀಡುತ್ತವೆ.

ಡಿಜಿಟ್‌ನ ಆಫರ್ ಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ಓದುವುದನ್ನು ಮುಂದುವರಿಸಿ.

ಮಹೀಂದ್ರಾಾ ಕಾರ್ ಇನ್ಶೂರೆನ್ಸ್ ಮತ್ತು ಮಹೀಂದ್ರಾಾ ಲ್ಯಾಂಚ್ ಮಾಡಿದ ಎಲ್ಲಾ ಮಾಡೆಲುಗಳ ಬಗ್ಗೆ ಇನ್ನಷ್ಟು ತಿಳಿಯಿರಿ.

ಮಹೀಂದ್ರಾ e2o ಪ್ಲಸ್ ಕಾರ್ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ

ನೀವು ಡಿಜಿಟ್‌ನ ಮಹೀಂದ್ರಾ e2o ಪ್ಲಸ್ ಕಾರ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ಮಹೀಂದ್ರಾ e2o ಪ್ಲಸ್ ಗಾಗಿ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಗಳು

ಥರ್ಡ್ ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದಿಂದಾಗಿ ಸ್ವಂತ ಕಾರಿಗೆ ಆಗುವ ಹಾನಿ/ನಷ್ಟ

×

ಬೆಂಕಿಯ ಸಂದರ್ಭದಲ್ಲಿ ಸ್ವಂತ ಕಾರಿಗೆ ಆಗುವ ಹಾನಿ/ನಷ್ಟಗಳು

×

ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರಿಗೆ ಆಗುವ ಹಾನಿ/ನಷ್ಟ

×

ಥರ್ಡ್ ಪಾರ್ಟಿ ವಾಹನಕ್ಕೆ ಆಗುವ ಹಾನಿ

×

ಥರ್ಡ್ ಪಾರ್ಟಿ ಪ್ರಾಪರ್ಟಿಗೆ ಆಗುವ ಹಾನಿ

×

ಪರ್ಸನಲ್ ಆಕ್ಸಿಡೆಂಟ್ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಯ ಗಾಯಗಳು/ಸಾವು

×

ನಿಮ್ಮ ಕಾರಿನ ಕಳ್ಳತನ

×

ಡೋರ್‌ಸ್ಟೆಪ್ ಪಿಕಪ್ ಮತ್ತು ಡ್ರಾಪ್

×

ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ

×

ಕಸ್ಟಮೈಸ್ ಮಾಡಿದ ಆ್ಯಡ್-ಆನ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ನಡುವಿನ ವ್ಯತ್ಯಾಸದ ಬಗ್ಗೆ ಇನ್ನಷ್ಟು ತಿಳಿಯಿರಿ.

ಕ್ಲೈಮ್ ಅನ್ನು ಹೇಗೆ ಫೈಲ್ ಮಾಡುವುದು?

ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ನೀವು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿಸಿದ ನಂತರ, ನೀವು ಚಿಂತಾ-ಮುಕ್ತರಾಗಿ ಬದುಕುತ್ತೀರಿ! ಏಕೆಂದರೆ, ನಾವು ಕೇವಲ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ.

ಹಂತ 1

1800-258-5956 ಸಂಖ್ಯೆಗೆ ಕರೆ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ.

ಹಂತ 2

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವಯಂ ತಪಾಸಣೆಗಾಗಿ (self inspection) ಲಿಂಕ್ ಪಡೆಯಿರಿ. ಹಂತ ಹಂತವಾಗಿ ನೀಡುವ ಮಾರ್ಗದರ್ಶನದಂತೆ, ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವಾಹನದ ಹಾನಿಯನ್ನು ಶೂಟ್ ಮಾಡಿ.

ಹಂತ 3

ನಮ್ಮ ಗ್ಯಾರೇಜ್‌ಗಳ ನೆಟ್‌ವರ್ಕ್ ಮೂಲಕ ನೀವು ರಿಇಂಬರ್ಸ್ಮೆಂಟ್ ಅಥವಾ ಕ್ಯಾಶ್‌ಲೆಸ್ ಆಯ್ಕೆಗಾಗಿ, ರಿಪೇರಿ ವಿಧಾನವನ್ನು ಆರಿಸಿ.

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ? ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು ನೀವೀಗ ಅದನ್ನೇ ಮಾಡುತ್ತಿರುವಿರಿ! ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿ

ಮಹೀಂದ್ರಾ e2o ಪ್ಲಸ್ ಕಾರ್ ಇನ್ಶೂರೆನ್ಸ್ ಗಾಗಿ ಡಿಜಿಟ್ ಅನ್ನು ಏಕೆ ಆಯ್ಕೆ ಮಾಡಬೇಕು?

ಸ್ಪರ್ಧಾತ್ಮಕ ಮಹೀಂದ್ರ e2o ಪ್ಲಸ್ ಕಾರ್ ಇನ್ಶೂರೆನ್ಸ್ ಬೆಲೆಯನ್ನು ನೀಡುವುದರ ಜೊತೆಗೆ, ಡಿಜಿಟ್ ಇನ್ಶೂರೆನ್ಸ್ ಹಲವಾರು ಪ್ರಯೋಜನಗಳೊಂದಿಗೆ ಬರುತ್ತದೆ. ಅವುಗಳಲ್ಲಿ ಕೆಲವು ಸೇರಿವೆ -

  • ಕ್ಯಾಶ್‌ಲೆಸ್ ಕ್ಲೈಮ್ ಗಳು

ನಿಮ್ಮ e2o ಪ್ಲಸ್ ಇನ್ಶೂರೆನ್ಸ್ ವಿರುದ್ಧ ನೀವು ಕ್ಲೈಮ್ ಅನ್ನು ಎತ್ತಿದರೆ, ಡಿಜಿಟ್ ನಿಮಗೆ ಕ್ಯಾಶ್‌ಲೆಸ್ ರಿಪೇರಿ ಮೋಡ್ ಅನ್ನು ಆಯ್ಕೆ ಮಾಡುವ ಆಯ್ಕೆಯನ್ನು ನೀಡುತ್ತದೆ. ಈ ಮೋಡ್ ಅಡಿಯಲ್ಲಿ, ನೀವು ಯಾವುದೇ ಕ್ಯಾಶ್ ಪಾವತಿಸದೆ ಅಧಿಕೃತ ರಿಪೇರಿ ಕೇಂದ್ರದಿಂದ ವೃತ್ತಿಪರ ಸೇವೆಗಳನ್ನು ಪಡೆಯಬಹುದು. ಇನ್ಶೂರರ್ ನಿಮ್ಮ ಪರವಾಗಿ ಪಾವತಿಸುತ್ತಾರೆ.

  • ಇನ್ಶೂರೆನ್ಸ್ ಆಯ್ಕೆಗಳ ರೇಂಜ್

ಡಿಜಿಟ್ ಇನ್ಶೂರೆನ್ಸ್ ಅನ್ನು ಆರಿಸುವ ಮೂಲಕ, ಈ ಕೆಳಗಿನ ಯಾವುದಾದರೂ ಪ್ಲ್ಯಾನ್ ಗಳನ್ನು ಆಯ್ಕೆ ಮಾಡುವ ಆಯ್ಕೆಯನ್ನು ನೀವು ಹೊಂದಿರುತ್ತೀರಿ:

ಮಹೀಂದ್ರಾ ಕಾರ್ ಇನ್ಶೂರೆನ್ಸ್ ಮತ್ತು ಮಹೀಂದ್ರಾ ಲ್ಯಾಂಚ್ ಮಾಡಿದ ಎಲ್ಲಾ ಮಾಡೆಲುಗಳ ಬಗ್ಗೆ ಇನ್ನಷ್ಟು ತಿಳಿಯಿರಿ.

1. ಥರ್ಡ್-ಪಾರ್ಟಿ ಇನ್ಶೂರೆನ್ಸ್ ಪಾಲಿಸಿ

ಇದು ಥರ್ಡ್-ಪಾರ್ಟಿ ಡ್ಯಾಮೇಜಿನ ವಿರುದ್ಧ ಕವರೇಜ್ ಪ್ರಯೋಜನಗಳನ್ನು ಒದಗಿಸುವ ಮೂಲ ಇನ್ಶೂರೆನ್ಸ್ ಪ್ಲ್ಯಾನ್ ಆಗಿದೆ. ನಿಮ್ಮ ಮಹೀಂದ್ರಾ ಕಾರ್ ಮತ್ತು ಥರ್ಡ್-ಪಾರ್ಟಿ ವ್ಯಕ್ತಿ, ಪ್ರಾಪರ್ಟಿ ಅಥವಾ ವಾಹನದ ನಡುವೆ ಅಪಘಾತಗಳು ಅಥವಾ ಘರ್ಷಣೆಗಳು ಇರಬಹುದು. ಅಂತಹ ಸಂದರ್ಭಗಳಲ್ಲಿ, ಡಿಜಿಟ್‌ನಿಂದ ಮಹೀಂದ್ರ e2o ಪ್ಲಸ್‌ಗಾಗಿ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಅನ್ನು ಪಡೆಯುವ ಮೂಲಕ ನೀವು ಲಯಬಿಲಿಟಿಗಳನ್ನು ಪರಿಣಾಮಕಾರಿಯಾಗಿ ತಪ್ಪಿಸಬಹುದು.

2. ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿ

ಥರ್ಡ್-ಪಾರ್ಟಿ ಮತ್ತು ಸ್ವಂತ ಕಾರು ಹಾನಿಗಳ ವಿರುದ್ಧ ಕಾಂಪ್ರೆಹೆನ್ಸಿವ್ ಕವರೇಜ್‌ಗಾಗಿ, ಡಿಜಿಟ್‌ನಿಂದ ಈ ಇನ್ಶೂರೆನ್ಸ್ ಯೋಜನೆ ಸೂಕ್ತವಾಗಿದೆ. ಇದಲ್ಲದೆ, ಬೆಂಕಿ, ಕಳ್ಳತನ, ನೈಸರ್ಗಿಕ ಅಥವಾ ಕೃತಕ ವಿಪತ್ತುಗಳಿಂದ ಉಂಟಾಗುವ ಸ್ವಂತ ಕಾರ್ ಡ್ಯಾಮೇಜಿನ ಸಂದರ್ಭದಲ್ಲಿ ಈ ಪಾಲಿಸಿಯು ಅದರ ಕವರೇಜನ್ನು ವಿಸ್ತರಿಸುತ್ತದೆ.

  • ಆ್ಯಡ್-ಆನ್ ಪ್ರಯೋಜನಗಳು

ಮಹೀಂದ್ರಾ e2o ಪ್ಲಸ್‌ಗಾಗಿ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿಹೋಲ್ಡರ್ ಗಳು ಆ್ಯಡ್-ಆನ್ ಪಾಲಿಸಿಗಳನ್ನು ಪಡೆಯಬಹುದು ಮತ್ತು ಅವರ ಬೇಸ್ ಪ್ಲ್ಯಾನ್ ಗಿಂತ ಹೆಚ್ಚಿನ ಕವರೇಜ್ ಪಡೆಯಬಹುದು. ಅವರು ಆಯ್ಕೆ ಮಾಡಬಹುದಾದ ಕೆಲವು ಆ್ಯಡ್-ಆನ್ ಕವರ್‌ಗಳೆಂದರೆ: ಕನ್ಸ್ಯುಮೇಬಲ್ ಗಳು, ಝೀರೋ ಡೆಪ್ರಿಸಿಯೇಷನ್, ರಸ್ತೆಬದಿಯ ನೆರವು, ಇನ್‌ವಾಯ್ಸ್ ಕವರ್‌ಗೆ ಹಿಂತಿರುಗುವುದು ಇತ್ಯಾದಿ. ಈ ಪ್ರಯೋಜನಗಳನ್ನು ಆನಂದಿಸಲು ನೀವು ಮಹೀಂದ್ರಾ e2o ಪ್ಲಸ್ ಇನ್ಶೂರೆನ್ಸ್ ವೆಚ್ಚಕ್ಕಿಂತ ಅತ್ಯಲ್ಪ ಮೊತ್ತವನ್ನು ಪಾವತಿಸಬೇಕಾಗುತ್ತದೆ ಎಂಬುದನ್ನು ಗಮನಿಸಿ.

  • ನೆಟ್‌ವರ್ಕ್ ಗ್ಯಾರೇಜ್‌ಗಳ ದೊಡ್ಡ ಸಂಖ್ಯೆ

ಭಾರತದಾದ್ಯಂತ ಹಲವಾರು ಡಿಜಿಟ್ ನೆಟ್‌ವರ್ಕ್ ಕಾರ್ ಗ್ಯಾರೇಜ್‌ಗಳಿವೆ, ಅಲ್ಲಿ ಒಬ್ಬರು ಕ್ಯಾಶ್‌ಲೆಸ್ ಸೌಲಭ್ಯವನ್ನು ಪಡೆಯಬಹುದು. ನೀವು ಎಲ್ಲಿದ್ದರೂ, ಡಿಜಿಟ್‌ನ ನೆಟ್‌ವರ್ಕ್ ಗ್ಯಾರೇಜುಗಳ ಕಾರಣದಿಂದಾಗಿ ವೃತ್ತಿಪರ ರಿಪೇರಿ ಸೇವೆಗಳಿಗೆ ಪ್ರವೇಶವನ್ನು ಪಡೆಯುವುದು ಅನುಕೂಲಕರವಾಗಿದೆ.

  • ತೊಂದರೆ-ಮುಕ್ತ ಅಪ್ಲಿಕೇಶನ್ ಪ್ರಕ್ರಿಯೆ

ಡಿಜಿಟ್ ನ ಟೆಕ್ನಾಲಜಿ- ಚಾಲಿತ ಪ್ರಕ್ರಿಯೆಗಳಿಂದಾಗಿ ಮಹೀಂದ್ರ e2o ಪ್ಲಸ್ ಕಾರ್ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಖರೀದಿಸುವುದು ತಡೆರಹಿತ ಮತ್ತು ತೊಂದರೆ-ಮುಕ್ತವಾಗಿದೆ. ಈ ಆನ್‌ಲೈನ್ ಪ್ರಕ್ರಿಯೆಯಲ್ಲಿ, ನೀವು ಡಾಕ್ಯುಮೆಂಟುಗಳ ಹಾರ್ಡ್ ಕಾಪಿಯನ್ನು ಒದಗಿಸುವ ಅಗತ್ಯವಿಲ್ಲ. ನಿಮ್ಮ ಸ್ಮಾರ್ಟ್‌ಫೋನ್ ಮೂಲಕ ನೀವು ಡಾಕ್ಯುಮೆಂಟ್‌ಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬಹುದು.

  • 3-ಹಂತದ ಕ್ಲೈಮ್ ಫೈಲಿಂಗ್ ಪ್ರಕ್ರಿಯ

ಡಿಜಿಟ್ ಇನ್ಶೂರೆನ್ಸ್ ಅನ್ನು ಆರಿಸುವ ಮೂಲಕ ವ್ಯಕ್ತಿಗಳು ತಮ್ಮ ಕ್ಲೈಮ್ ಫೈಲಿಂಗ್ ಪ್ರಕ್ರಿಯೆಯನ್ನು 3-ಹಂತಗಳಲ್ಲಿ ಪೂರ್ಣಗೊಳಿಸಬಹುದು:

  1. ನಿಮ್ಮ ಮೊಬೈಲ್‌ನಲ್ಲಿ ಸ್ವಯಂ ತಪಾಸಣೆ ಲಿಂಕ್ ಪಡೆಯಲು 1800-258-5956 ಗೆ ಕರೆ ಮಾಡಿ. ನೀವು ಯಾವುದೇ ಕ್ಲೈಮ್ ಫಾರ್ಮ್ ಅನ್ನು ಭರ್ತಿ ಮಾಡುವ ಅಗತ್ಯವಿಲ್ಲ.
  2. ನಿಮ್ಮ ವಾಹನದ ಡ್ಯಾಮೇಜನ್ನು ಹಂತ-ಹಂತದ ರೀತಿಯಲ್ಲಿ ಆಯ್ಕೆಮಾಡಿ.
  3. ರಿಪೇರಿ ಮೋಡ್ ಅನ್ನು ಆಯ್ಕೆ ಮಾಡಿ: ರಿಇಂಬರ್ಸಮೆಂಟ್ ಅಥವಾ ಕ್ಯಾಶ್‌ಲೆಸ್ . ಕ್ಯಾಶ್‌ಲೆಸ್ ರಿಪೇರಿಗಾಗಿ, ನೀವು ಡಿಜಿಟ್ ನೆಟ್‌ವರ್ಕ್ ಗ್ಯಾರೇಜ್‌ಗಳಿಂದ ರಿಪೇರಿ ಸೇವೆಗಳನ್ನು ಪಡೆಯಬೇಕು.
  • ಐಡಿವಿ ಕಸ್ಟಮೈಸೇಶನ್

ಮಹೀಂದ್ರಾ e2o ಪ್ಲಸ್ ಕಾರ್ ಇನ್ಶೂರೆನ್ಸ್ ರಿನೀವಲ್ ಬೆಲೆಯು ನಿಮ್ಮ ಕಾರಿನ ಇನ್ಶೂರ್ಡ್ ಡಿಕ್ಲರೇಡ್ ಮೌಲ್ಯವನ್ನು ಅವಲಂಬಿಸಿರುತ್ತದೆ.ತಯಾರಕರ ಮಾರಾಟದ ಸ್ಥಳದಿಂದ ಕಾರಿನ ಡೆಪ್ರಿಸಿಯೇಷನ್ ಅನ್ನು ಕಳೆಯುವುದರ ಮೂಲಕ ಇನ್ಶೂರರ್ ಇದನ್ನು ಮೌಲ್ಯಮಾಪನ ಮಾಡುತ್ತಾರೆ. ಆದಾಗ್ಯೂ, ಈ ಮೌಲ್ಯವನ್ನು ಕಸ್ಟಮೈಸ್ ಮಾಡಲು ಮತ್ತು ಗರಿಷ್ಠ ಪ್ರಯೋಜನಗಳನ್ನು ಪಡೆಯಲು ಡಿಜಿಟ್ ನಿಮಗೆ ಅನುಮತಿಸುತ್ತದೆ.

  • 24x7 ಗ್ರಾಹಕ ಸೇವೆ

ಮಹೀಂದ್ರಾ e2o ಪ್ಲಸ್ ಕಾರ್ ಇನ್ಶೂರೆನ್ಸ್ ರಿನೀವಲ್ ಸಮಯದಲ್ಲಿ ನೀವು ಅನುಮಾನಗಳನ್ನು ಅಥವಾ ಪ್ರಶ್ನೆಗಳನ್ನು ಹೊಂದಿದ್ದರೆ, ನೀವು ಬಯಸಿದ ಯಾವುದೇ ಸಮಯದಲ್ಲಿ ನೀವು ಡಿಜಿಟ್ ನ ಕಸ್ಟಮರ್ ಸಪೋರ್ಟ್ ಅನ್ನು ಸಂಪರ್ಕಿಸಬಹುದು.

ಇದರ ಹೊರತಾಗಿ, ಪಾಲಿಸಿ ಅವಧಿಯೊಳಗೆ ಕ್ಲೈಮ್-ಫ್ರೀ ವರ್ಷಗಳನ್ನು ನಿರ್ವಹಿಸುವ ಮೂಲಕ ಮಹೀಂದ್ರಾ e2o ಪ್ಲಸ್ ಕಾರ್ ಇನ್ಶೂರೆನ್ಸ್ ಪ್ರೀಮಿಯಂನಲ್ಲಿ 50% ವರೆಗೆ ನೋ-ಕ್ಲೈಮ್ ಬೋನಸ್‌ಗಳನ್ನು ಪಡೆಯಬಹುದು. ಪಾಲಿಸಿ ಪ್ರೀಮಿಯಂಗಳನ್ನು ಕಡಿಮೆ ಮಾಡುವ ಇನ್ನೊಂದು ವಿಧಾನವೆಂದರೆ ಹೆಚ್ಚಿನ ಡಿಡಕ್ಟಿಬಲ್ ಪ್ಲ್ಯಾನ್ ಅನ್ನು ಆರಿಸಿಕೊಳ್ಳುವುದು. ಆದಾಗ್ಯೂ, ಕಡಿಮೆ ಪ್ರೀಮಿಯಂಗಳನ್ನು ಆಯ್ಕೆಮಾಡುವಾಗ ನೀವು ಜಾಗರೂಕರಾಗಿರಬೇಕು ಏಕೆಂದರೆ ನೀವು ಅಗತ್ಯ ಪ್ರಯೋಜನಗಳನ್ನು ಕಳೆದುಕೊಳ್ಳಬಹುದು.

ನಿಮ್ಮ ಮಹೀಂದ್ರಾ e2o ಪ್ಲಸ್ ಗೆ ಇನ್ಶೂರೆನ್ಸ್ ಅನ್ನು ಖರೀದಿಸುವುದು ಏಕೆ ಮುಖ್ಯ?

ಮಹೀಂದ್ರ E2O ಪ್ಲಸ್ ಮುಂದಿನ ಜನರೇಷನಿನ ಕಾರ್ ಮತ್ತು ಅದಕ್ಕಾಗಿ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಮುಖ್ಯವಾಗಿದೆ. ಕಾರಣಗಳನ್ನು ತಿಳಿಯೋಣ:

ಮಹೀಂದ್ರಾ e2o ಪ್ಲಸ್ ಬಗ್ಗೆ ತಿಳಿಯಿರಿ

ಕಾರ್ ಉದ್ಯಮದಲ್ಲಿ ಕ್ರಾಂತಿಯನ್ನು ತರುತ್ತಿರುವ ಮಹೀಂದ್ರಾ ತನ್ನ E2O ಜೊತೆಗೆ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಿತು. ಇದು ಜಿಪ್ಪಿ, ಕಾಂಪ್ಯಾಕ್ಟ್ ಮತ್ತು 100% ಎಲೆಕ್ಟ್ರಿಕ್ ಆಗಿದೆ. ನೀವು ಇದನ್ನು ನಿಮ್ಮ ದೈನಂದಿನ ಸಿಟಿ ಡ್ರೈವ್ ಕಾರ್ ಆಗಿ ಆಯ್ಕೆ ಮಾಡಬಹುದು. ಮಹೀಂದ್ರಾ E2O ಪ್ಲಸ್ ನಿಮ್ಮನ್ನು ಇತರ ಕಾರು ಮಾಲೀಕರಿಗಿಂತ ಭಿನ್ನವಾಗಿ ಹೊಂದಿಸುತ್ತದೆ. ಈ ಎಲೆಕ್ಟ್ರಿಕ್ ಕಾರು P4 ಮತ್ತು P6 ಎಂಬ ಎರಡು ವೇರಿಯಂಟುಗಳನ್ನು ಹೊಂದಿದೆ. ಬ್ಯಾಟರಿ ವೇಗವಾಗಿ ಖಾಲಿಯಾಗುವಂತೆ ತೋರುತ್ತಿರುವಾಗಲೂ ಪ್ರತಿಯೊಂದೂ ನಿಮಗೆ ಹೆಚ್ಚುವರಿ ಮೈಲುಗಳನ್ನು ನೀಡಬಹುದು. ಈ ಹ್ಯಾಚ್-ಬ್ಯಾಕ್ ಮಿನಿ ಕಾರು ನಾಲ್ಕು ಜನರಿಗೆ ಆರಾಮದಾಯಕ ಆಸನವನ್ನು ನೀಡುತ್ತದೆ. ಇದು ಲಿಥಿಯಂ-ಐಯಾನ್ ಟೆಕ್ನಾಲಜಿಯೊಂದಿಗೆ ಚಾಲಿತವಾಗಿದ್ದು, ಇದು ಸಾಕಷ್ಟು ಸೆಲ್ ಗಳಿಂದ ಬೆಂಬಲಿತವಾಗಿದೆ. ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಜೊತೆಗೆ ಮಹೀಂದ್ರಾ E2O ನ ಆರಂಭಿಕ ಬೆಲೆ ರೇಂಜ್ ರೂಪಾಯಿ7.48 ಲಕ್ಷದಿಂದ ಆರಂಭವಾಗುತ್ತದೆ.

ಮಹೀಂದ್ರಾ ಕಾರ್ ಇನ್ಶೂರೆನ್ಸ್ ಮತ್ತು ಮಹೀಂದ್ರಾ ಲ್ಯಾಂಚ್ ಮಾಡಿದ ಎಲ್ಲಾ ಮಾಡೆಲುಗಳ ಬಗ್ಗೆ ಇನ್ನಷ್ಟು ತಿಳಿಯಿರಿ

ನೀವು ಮಹೀಂದ್ರಾ e2o ಪ್ಲಸ್ ಅನ್ನು ಏಕೆ ಖರೀದಿಸಬೇಕು?

  • ಅಡ್ವಾನ್ಸ್ಡ್ ಟೆಕ್ನಾಲಾಜಿಯಿಂದ ಬೆಂಬಲಿತವಾಗಿದೆ: ಇದು ಫ್ಯೂಚರಿಸ್ಟಿಕ್ ಟೆಕ್ನಾಲಾಜಿಯನ್ನು ಹೊಂದಿದ್ದು ಅದು ಹೆಚ್ಚಿನ ಕಾರ್ಯಕ್ಷಮತೆಯ ಎಲೆಕ್ಟ್ರಿಕ್ ಕಾರನ್ನು ಮಾಡುತ್ತದೆ. ಇದು ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಕಾರ್ ಆಗಿದ್ದು, ಇದರಲ್ಲಿ ನೀವು ಪ್ರಿಕೂಲ್ ಮಾಡಬಹುದು, ಲಾಕ್/ಅನ್‌ಲಾಕ್ ಮಾಡಬಹುದು ಮತ್ತು ಕಾರಿನ ಇತರ ವೈಶಿಷ್ಟ್ಯಗಳನ್ನು ಪ್ರವೇಶಿಸಬಹುದು.
  • ರಿಜನರೇಟಿವ್ ಬ್ರೇಕಿಂಗ್: ಪ್ರತಿ ಬಾರಿ ನೀವು ಬ್ರೇಕ್ ಅನ್ನು ಹಿಟ್ ಮಾಡಿದಾಗ, ನಿಮ್ಮ ಕಾರು ಚಾರ್ಜ್ ಆಗುತ್ತದೆ. ಕಾರಿನ ಚಲನ ಶಕ್ತಿಯು ವಿದ್ಯುತ್ ಶಕ್ತಿಯಾಗಿ ಬದಲಾಗುತ್ತದೆ.
  • ನಿಮ್ಮನ್ನು ಚೆನ್ನಾಗಿ ಪುನರುಜ್ಜೀವನಗೊಳಿಸುತ್ತದೆ: ಕಾರು ಚಾರ್ಜ್‌ನಿಂದ ಹೊರಬಿದ್ದಾಗಲೂ ಹೆಚ್ಚುವರಿ ಕಿಲೋಮೀಟರ್‌ಗಳನ್ನು ಓಡಿಸಲು ಇದು ನಿಮಗೆ ಸಹಾಯ ಮಾಡುತ್ತದೆ.
  • ಉತ್ತಮ ಬ್ಯಾಟರಿ ಬಾಳಿಕೆಯೊಂದಿಗೆ ಚಾರ್ಜ್ ಮಾಡಲು ಸುಲಭ: ಮಹೀಂದ್ರಾ E2O ಪ್ಲಸ್ ಅನ್ನು ಯಾವುದೇ ಸಮಯದಲ್ಲಿ ಮತ್ತು ಯಾವುದೇ ಸ್ಥಳದಲ್ಲಿ ಚಾರ್ಜ್ ಮಾಡುವುದು ಸುಲಭ. ನೀವು ಕಾರಿನಲ್ಲಿ ದೀರ್ಘಕಾಲೀನ ಮತ್ತು ಸುರಕ್ಷಿತ ಬ್ಯಾಟರಿಗಳನ್ನು ಪಡೆಯುತ್ತೀರಿ.
  • iEMS ಟೆಕ್ನಾಲಜಿ: ಮಹೀಂದ್ರಾ E2O ಪ್ಲಸ್ ನಿಮ್ಮ ಆರೋಗ್ಯ ರಿಪೋರ್ಟುಗಳನ್ನು ಮಹೀಂದ್ರಾ ತಜ್ಞರೊಂದಿಗೆ ಹಂಚಿಕೊಳ್ಳುತ್ತದೆ ಮತ್ತು ಯಾವುದೇ ವೈದ್ಯಕೀಯ ಬಿಕ್ಕಟ್ಟಿನ ಸಮಯದಲ್ಲಿ ನಿಮಗೆ ಸಹಾಯ ಮಾಡುತ್ತದೆ.

ನೀವು ಪರಿಸರದ ಬಗ್ಗೆ ಕಾಳಜಿ ವಹಿಸುತ್ತೀರಾ, ಸುಸ್ಥಿರ ಭವಿಷ್ಯಕ್ಕಾಗಿ ನೀವು ಉತ್ಸುಕರಾಗಿದ್ದೀರಾ? ಹೌದು ಎಂದಾದರೆ, ಇದು ನಿಮಗಾಗಿ ಸರಿಯಾದ ಕಾರು.

ಮಹೀಂದ್ರಾ e2o ಪ್ಲಸ್‌ನ ವೇರಿಯಂಟುಗಳು

ವೇರಿಯಂಟಿನ ಹೆಸರು ವೇರಿಯಂಟಿನ ಬೆಲೆ
P4 ₹6.07 ಲಕ್ಷ
P2 ಫ್ಲೀಟ್ ₹6.50 ಲಕ್ಷ
P6 ₹6.83 ಲಕ್ಷ
P8 ₹8.46 ಲಕ್ಷ

[1]

ಪದೇ ಪದೇ ಕೇಳಲಾದ ಪ್ರಶ್ನೆಗಳು

ನನ್ನ ಸೆಕೆಂಡ್ ಹ್ಯಾಂಡ್ ಮಹೀಂದ್ರಾ e2o ಪ್ಲಸ್ ಕಾರಿಗೆ ಇನ್ಶೂರೆನ್ಸ್ ಪಾಲಿಸಿಯ ಅಗತ್ಯವಿದೆಯೇ?

ಹೌದು, ಭಾರೀ ಟ್ರಾಫಿಕ್ ದಂಡವನ್ನು ತಪ್ಪಿಸಲು ನಿಮ್ಮ ಮಹೀಂದ್ರಾ ಕಾರಿಗೆ ನೀವು ಕನಿಷ್ಟ ಥರ್ಡ್ ಪಾರ್ಟಿ ವ್ಯಕ್ತಿಯ ಇನ್ಶೂರೆನ್ಸ್ ಅನ್ನು ಪಾಲಿಸಿಯನ್ನು ಪಡೆಯಬೇಕು. ಆದಾಗ್ಯೂ, ಹೆಚ್ಚಿನ ಕವರೇಜ್‌ಗಾಗಿ, ನೀವು ಕಾಂಪ್ರೆಹೆನ್ಸಿವ್ ಮಹೀಂದ್ರಾ e2o ಪ್ಲಸ್ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸಬಹುದು.

ನನ್ನ ಮಹೀಂದ್ರಾ e2o ಪ್ಲಸ್ ಕಾರ್ ಇನ್ಶೂರೆನ್ಸ್ ನಲ್ಲಿ ನಾನು ಪರ್ಸನಲ್ ಆಕ್ಸಿಡೆಂಟ್ ಕವರ್ ಪಡೆಯುತ್ತೇನೆಯೇ?

ಹೌದು, ಐಆರ್‌ಡಿಎ ನಿಯಮಗಳ ಪ್ರಕಾರ, ಅಂಗವೈಕಲ್ಯ ಅಥವಾ ಸಾವಿಗೆ ಕಾರಣವಾಗುವ ಕಾರು ಅಪಘಾತಗಳ ಸಂದರ್ಭದಲ್ಲಿ ನೀವು ಪರ್ಸನಲ್ ಆಕ್ಸಿಡೆಂಟ್ ಕವರ್ ಅನ್ನು ಸ್ವೀಕರಿಸುತ್ತೀರಿ.