ಮಹೀಂದ್ರಾ ಎಕ್ಸ್ಯುವಿ ಅನ್ನು 2011 ರಲ್ಲಿ ಬಿಡುಗಡೆ ಮಾಡಲಾಯಿತು. ಈ ಕಾರಿನ XUV500 ವೇರಿಯಂಟ್ ಮಹೀಂದ್ರ ಸ್ಕಾರ್ಪಿಯೋ, ಟಾಟಾ ಸಫಾರಿ, ಟೊಯೋಟಾ ಇನ್ನೋವಾ ಕ್ರಿಸ್ಟಾ, ಟಾಟಾ ಹ್ಯಾರಿಯರ್, ಎಮ್.ಜಿ ಹೆಕ್ಟರ್ ಪ್ಲಸ್ ಮತ್ತು ಹ್ಯುಂಡೈ ಕ್ರೆಟಾ ವಿರುದ್ಧ ಸ್ಪರ್ಧಿಸುತ್ತದೆ.
ಮಹೀಂದ್ರಾ ಎಕ್ಸ್ಯುವಿ ಫೈವ್-ಡೋರ್ ಎಸ್ಯುವಿ ಆಗಿದ್ದು, ಏಳು ಜನರ ಸೀಟಿಂಗ್ ಕೆಪ್ಯಾಸಿಟಿಯನ್ನು ಹೊಂದಿದೆ. ಈ ಕಾರ್ ಆಟೋಮ್ಯಾಟಿಕ್ ಮತ್ತು ಮ್ಯಾನ್ಯುವಲ್ ಟ್ರಾನ್ಸ್ಮಿಷನ್ನೊಂದಿಗೆ ಲಭ್ಯವಿದೆ. ವಾಹನವು 2179 ಸಿಸಿ ವರೆಗಿನ ಇಂಜಿನ್ ಡಿಸ್ಪ್ಲೇಸ್ಮೆಂಟ್ ಅನ್ನು ನೀಡುತ್ತದೆ. ಫ್ಯೂಯೆಲ್ ಪ್ರಕಾರವನ್ನು ಮತ್ತು ಇಂಜಿನ್ ವೇರಿಯಂಟ್ ಅನ್ನು ಆಧರಿಸಿ, ಇದು 13 kmpl ನಿಂದ 15 kmpl ವರೆಗೆ ARAI ಮೈಲೇಜ್ ನೀಡುತ್ತದೆ. ಮಹೀಂದ್ರಾ ಎಕ್ಸ್ಯುವಿ 70 ಲೀಟರ್ ಫ್ಯೂಯೆಲ್ ಟ್ಯಾಂಕ್ ಕೆಪ್ಯಾಸಿಟಿಯ ಮತ್ತು 200 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ.
ಕಾರಿನ ಇಂಟೀರಿಯರ್ ಟ್ಯಾಕೋಮೀಟರ್, ಎಲೆಕ್ಟ್ರಾನಿಕ್ ಮಲ್ಟಿ-ಟ್ರಿಪ್ಮೀಟರ್, ಡಿಜಿಟಲ್ ಗಡಿಯಾರ ಮತ್ತು ಹೈಟ್-ಅಡ್ಜಸ್ಟೇಬಲ್ ಡ್ರೈವರ್ ಸೀಟ್ ಅನ್ನು ಹೊಂದಿದೆ. ಈ ಕಾರಿನ ಎಕ್ಸ್ಟೀರಿಯರ್ ಫೀಚರ್ಗಳಲ್ಲಿ ಅಡ್ಜಸ್ಟೇಬಲ್ ಹೆಡ್ಲೈಟ್ಗಳು, ವೀಲ್ ಕವರ್ಗಳು, ರಿಯರ್ ಸ್ಪಾಯ್ಲರ್ ಮತ್ತು ರೂಫ್ ರೈಲ್ ಸೇರಿವೆ. ಹೆಚ್ಚುವರಿಯಾಗಿ, ಇದು ಅವಳಿ ಎಕ್ಸಾಸ್ಟ್ಗಳನ್ನು ಹೊಂದಿದೆ.
ಮಹೀಂದ್ರಾ ಎಕ್ಸ್ಯುವಿಯು ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್, ಸೆಂಟ್ರಲ್ ಲಾಕಿಂಗ್, ಪವರ್ ಡೋರ್ ಲಾಕ್ಗಳು, ಚೈಲ್ಡ್ ಸೇಫ್ಟಿ ಲಾಕ್ಗಳು, ಡ್ರೈವರ್ ಮತ್ತು ಪ್ಯಾಸೆಂಜರ್ ಏರ್ಬ್ಯಾಗ್ಗಳು, ಸೆಂಟ್ರಲಿ ಮೌಂಟೆಡ್ ಫ್ಯೂಯೆಲ್ ಟ್ಯಾಂಕ್ ಮತ್ತು ಕ್ರ್ಯಾಶ್ ಸೆನ್ಸಾರ್ನಂತಹ ಸೇಫ್ಟಿ ಸ್ಪೆಸಿಫಿಕೇಶನ್ಗಳನ್ನು ಹೊಂದಿದೆ.
ಈ ಇನೋವೇಟಿವ್ ಸೇಫ್ಟಿ ಫೀಚರ್ಗಳ ಹೊರತಾಗಿಯೂ, ಮಹೀಂದ್ರ ಎಕ್ಸ್ಯುವಿ ಕಾರ್ ಆನ್-ರೋಡ್ ಲಯಬಿಲಿಟಿಗಳಿಗೆ ಗುರಿಯಾಗುತ್ತದೆ. ಆದ್ದರಿಂದ, ನೀವು ಈ ವಾಹನವನ್ನು ಡ್ರೈವ್ ಮಾಡಿದರೆ ಅಥವಾ ಹೊಸದನ್ನೇ ಖರೀದಿಸಲು ಪ್ಲ್ಯಾನ್ ಮಾಡುತ್ತಿದ್ದರೆ, ಮಹೀಂದ್ರಾ ಎಕ್ಸ್ಯುವಿ ಕಾರ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಿಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ.
ಭಾರತದಲ್ಲಿ ಅನೇಕ ಕಾರ್ ಇನ್ಶೂರೆನ್ಸ್ ಕಂಪನಿಗಳು ಥರ್ಡ್ ಪಾರ್ಟಿ ಮತ್ತು ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿಯನ್ನು ನೀಡುತ್ತವೆ. ಡಿಜಿಟ್ನಂತಹ ಕಂಪನಿಗಳು ತಮ್ಮ ಕಸ್ಟಮರ್ಗಳಿಗೆ ಹಲವಾರು ಪ್ರಯೋಜನಗಳನ್ನು ಹೊಂದಿರುವ ಹೆಚ್ಚುವರಿ ಸೌಲಭ್ಯಗಳನ್ನು ನೀಡುತ್ತವೆ.