ಈ ಕಾರ್, ಕಾರ್ಖಾನೆಯಲ್ಲಿ ಅಳವಡಿಸಲಾಗಿರುವ S-CNG ಪವರ್ಡ್ ಇಂಜಿನ್ ಹೊಂದಿರುವ ಸೆಗ್ಮೆಂಟ್ನ ಏಕೈಕ MPV ಆಗಿದೆ. ಪವರ್ಫುಲ್, ಬೋಲ್ಡ್ ಮತ್ತು ಸ್ಟೈಲಿಶ್ ಆಗಿರುವ ಎರ್ಟಿಗಾ ಗ್ರಾಹಕರ ಮನಸ್ಸನ್ನು ಗೆದ್ದಿದೆ ಮತ್ತು ನಂ.1 MPV ಆಗಿದೆ. ಹೊಸ CNG ಚಾಲಿತ ಎರ್ಟಿಗಾ, ಉತ್ತಮ ಫ್ಯೂಯೆಲ್ ಎಕಾನಮಿ ಮತ್ತು ಸುರಕ್ಷಿತ, ವಿಶ್ವಾಸಾರ್ಹ ಹಾಗೂ ಪರಿಸರ ಸ್ನೇಹಿಯಾಗಿರುವ ಸುಪೀರಿಯರ್ ಟೆಕ್ನಾಲಜಿಯನ್ನು ಹೊಂದಿದೆ. ಮಾರುತಿ ಸುಜುಕಿ ಎರ್ಟಿಗಾ ಕಾರ್ ಎಲ್ಲಾ ಗ್ರಾಹಕರ ಹೃದಯಗಳನ್ನು ಗೆಲ್ಲುವುದರ ಜೊತೆಗೆ, ಆಟೋಕಾರ್ ಅವಾರ್ಡ್ಸ್ 2019 ರಲ್ಲಿ 'ಕಾರ್ ಆಫ್ ದಿ ಇಯರ್' ಪ್ರಶಸ್ತಿಯನ್ನು ಸಹ ಮುಡಿಗೇರಿಸಿಕೊಂಡಿದೆ.
ನೀವು ಮಾರುತಿ ಸುಜುಕಿ ಎರ್ಟಿಗಾ ಅನ್ನು ಏಕೆ ಖರೀದಿಸಬೇಕು?
ನೆಕ್ಸ್ಟ್-ಜೆನರೇಶನ್ ಎರ್ಟಿಗಾ ಮೂರು ಇಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ: ಎಲ್ಲಾ ಹೊಸ DDis 225, K15 ಸ್ಮಾರ್ಟ್ ಹೈಬ್ರಿಡ್ ಪೆಟ್ರೋಲ್ ಮತ್ತು ಹೊಸ ಫ್ಯಾಕ್ಟರಿ-ಫಿಟ್ಟೆಡ್ S-CNG ಪವರ್ಡ್ ಇಂಜಿನ್. ಇಷ್ಟೇ ಅಲ್ಲ, ಇದು ಪ್ರೊಜೆಕ್ಟರ್ ಹೆಡ್ಲ್ಯಾಂಪ್ಗಳು, ಥ್ರೀ-ರೋ ರಿಕ್ಲೈನರ್ ಸೀಟ್ಗಳು, ಸ್ಮಾರ್ಟ್ಪ್ಲೇ ಇನ್ಫೋಟೈನ್ಮೆಂಟ್, ಮಲ್ಟಿ-ಸ್ಪೋಕ್ ಅಲಾಯ್ ವೀಲ್ಗಳು, ಎಲ್ಇಡಿಯೊಂದಿಗೆ 3D ಟೈಲ್ ಲ್ಯಾಂಪ್ಗಳಂತಹ ಅದ್ಭುತ ಫೀಚರ್ಗಳನ್ನು ಹೊಂದಿದೆ. ಎರ್ಟಿಗಾ 4 ವೇರಿಯಂಟ್ಗಳಲ್ಲಿ ಲಭ್ಯವಿದೆ: L, V, Z ಮತ್ತು Z+. ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್ ಎರಡನ್ನೂ ಮ್ಯಾನುಯಲ್ ಟ್ರಾನ್ಸ್ಮಿಷನ್ನೊಂದಿಗೆ ಯಾವುದೇ ನಾಲ್ಕು ವೇರಿಯಂಟ್ಗಳಲ್ಲಿ ತೆಗೆದುಕೊಳ್ಳಬಹುದಾದರೂ, ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಪೆಟ್ರೋಲ್ ಇಂಜಿನ್ನೊಂದಿಗೆ ಕೇವಲ V ಮತ್ತು Z ವೇರಿಯಂಟ್ಗಳಲ್ಲಿ ಮಾತ್ರ ಲಭ್ಯವಿರುತ್ತದೆ.
ನಿಮ್ಮ ಸುರಕ್ಷತೆಗಾಗಿ ಎರ್ಟಿಗಾ ಕಾರ್, ಡ್ಯುಯಲ್ ಏರ್ಬ್ಯಾಗ್, ಬಜರ್ನೊಂದಿಗೆ ಸೀಟ್ ಬೆಲ್ಟ್ ರಿಮೈಂಡರ್ ಲ್ಯಾಂಪ್, ಹೈ-ಸ್ಪೀಡ್ ಅಲರ್ಟ್ ಸಿಸ್ಟಮ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್ಗಳೊಂದಿಗೆ ಬರುತ್ತದೆ.
ಸೇಫ್ಟಿ, ಡಿಸೈನ್, ಸ್ಟೈಲ್, ಸ್ಪೇಸ್ ಮತ್ತು ಪರ್ಫಾರ್ಮೆನ್ಸ್, ತನ್ನ ಕಸ್ಟಮರ್ಗಳ ಈ ಎಲ್ಲಾ ಅಗತ್ಯಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಎರ್ಟಿಗಾ ಅನ್ನು ಡಿಸೈನ್ ಮಾಡಲಾಗಿದೆ. ಇದನ್ನು ದೊಡ್ಡ ಇಂಟೀರಿಯರ್ ಸ್ಪೇಸ್ನೊಂದಿಗೆ ಡಿಸೈನ್ ಮಾಡಲಾಗಿದೆ ಮತ್ತು ಉತ್ತಮವಾಗಿ ಕೆಲಸ ಮಾಡುವ ಇಂಜಿನ್ ಅನ್ನು ಅಳವಡಿಸಲಾಗಿದೆ.
ಎರ್ಟಿಗಾ ನಗರ ಕುಟುಂಬದ ಖರೀದಿದಾರರಿಗೆ ಸೂಕ್ತವಾಗಿದೆ. ಎರ್ಟಿಗಾದೊಂದಿಗೆ, ಮಾರುತಿಯು ಮಲ್ಟಿ-ಪರ್ಪಸ್ ವೆಹಿಕಲ್ ಅನ್ನು ಹುಡುಕುತ್ತಿರುವ ಹೊಸ ಪ್ರಬುದ್ಧ ವರ್ಗದ ಖರೀದಿದಾರರನ್ನು ತಲುಪಲು ಪ್ರಯತ್ನಿಸಿದೆ.
ಚೆಕ್ ಮಾಡಿ: ಮಾರುತಿ ಕಾರ್ ಇನ್ಶೂರೆನ್ಸ್ ಕುರಿತು ಇನ್ನಷ್ಟು ತಿಳಿಯಿರಿ