ಹೋಂಡಾ ಡಿಯೋ ಇನ್ಶೂರೆನ್ಸ್

ಹೋಂಡಾ ಡಿಯೋ ಟು ವೀಲರ್ ವೆಹಿಕಲ್ ಆನ್ಲೈನ್ ಇನ್ಶೂರೆನ್ಸ್ ಪಡೆಯಿರಿ ಕೇವಲ ₹714 ರಿಂದ ಆರಂಭ.

Third-party premium has changed from 1st June. Renew now

source

ನಿಮಗೇನು ಬೇಕೆಂದು ನೀವು ತಿಳಿಯದೇ ಇದ್ದರೆ ನಿಮ್ಮ ಹೋಂಡಾ ಡಿಯೋಗಾಗಿ ನೀವು ಟು ವೀಲರ್ ವೆಹಿಕಲ್  ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು ಒಂದು ಪ್ರಯಾಸಕರ ಕಾರ್ಯವಾಗಬಹುದು. ಆದ್ದರಿಂದಲೇ, ಹೋಂಡಾ ಡಿಯೋ ಇನ್ಶೂರೆನ್ಸ್ ಪಾಲಿಸಿ ಖರೀದಿಸುವ ಮೊದಲು, ಅದರಿಂದ ಪಡೆಯಬಹುದಾದ ಲಾಭಗಳ ಪಟ್ಟಿಯನ್ನು ನೀವು ಒಮ್ಮೆ ಪರಿಶೀಲಿಸಬೇಕು!

ಹೋಂಡಾ ಡಿಯೋ, ಇಂದಿಗೂ ತಯಾರಿಸಿ ಮಾರಾಟಮಾಡಲ್ಪಡುವ ಹೋಂಡಾ ಕಂಪನಿಯ ಅತೀ ಹಳೆಯ ಸ್ಕೂಟರ್ ಗಳಲ್ಲಿ ಒಂದು. ಈ ಜಪಾನಿ ಕಂಪನಿಯು, ಮುಖ್ಯವಾಗಿ ಡಿಯೋ, ಆಕ್ಟಿವಾದಂತಹ ಸ್ಕೂಟರ್ ಗಳಂತಹ, ಹಲವು ಜನಪ್ರಿಯ ಸ್ಕೂಟರ್ ಗಳೊಂದಿಗೆ ಭಾರತದ ಟು ವೀಲರ್  ವಾಹನ ವಿಭಾಗದಲ್ಲಿ ತನ್ನ ಸ್ಥಾನವನ್ನು ಸುಭದ್ರಗೊಳಿಸಿದೆ.

ಮೂಲತಃ ಹೋಂಡಾ ಡಿಯೋ ಸಾಲುಗಳನ್ನು 1988 ರಲ್ಲಿ ಲಾಂಚ್ ಮಾಡಲಾಯಿತು. ಭಾರತದಲ್ಲಿ ಈ ವಾಹನಗಳಿಗೆ ಭಾರೀ ಬೇಡಿಕೆ ಇರುವುದರಿಂದ, ಹೋಂಡಾ, ಬಹುತೇಕ ಪ್ರತೀ ವರ್ಷ, ದೇಶದಲ್ಲಿ ಹೊಸ ಮಾದರಿಗಳನ್ನು ಲಾಂಚ್ ಮಾಡುತ್ತದೆ.

ಫ಼ೆಬ್ರವರಿ 2020 ರಲ್ಲಿ, ಭಾರತ ಸರಕಾರದ ಹೊಸ ಎಮಿಷನ್ ನಿಯಂತ್ರಣ ಮಾರ್ಗಸೂಚಿಗೆ ಪ್ರಕಾರವಾಗಿ, ಹೋಂಡಾ, ಡಿಯೋದ ಬಿಎಸ್-VI ಗೆ ಒಗ್ಗುವ ಆವೃತ್ತಿಯನ್ನು ಬಿಡುಗಡೆಗೊಳಿಸಿತು.

ಈಗ, ಇಂತಹ ದುಬಾರಿ ಟು ವೀಲರ್  ವಾಹನಗಳಿಗೆ ಸದಾಕಾಲ ಸಮರ್ಪಕವಾದ ಇನ್ಶೂರೆನ್ಸ್ ಕವರೇಜ್ ಕೂಡಾ ಬೇಕಾಗುತ್ತದೆ. ಮೋಟಾರ್ ವಾಹನ ಅಧಿನಿಯಮ 1988 ರ ಪ್ರಕಾರ ಎಲ್ಲಾ ಮೋಟಾರ್ ವಾಹನಗಳು ಕನಿಷ್ಟ ಪಕ್ಷ ಥರ್ಡ್-ಪಾರ್ಟಿ ಹೊಣೆಗಾರಿಕೆಯ ಇನ್ಶೂರೆನ್ಸ್ ಕವರ್ ಅನ್ನು ಪಡೆದಿರಲೇಬೇಕಾಗಿದೆ. ಆದ್ದರಿಂದ ಡಿಯೋ ಇನ್ಶೂರೆನ್ಸ್ ಖರೀದಿಸುವುದು ಅತೀ ಆವಶ್ಯಕವೂ ಆಗಿದೆ. ಈ ನಿಯಮದ ಪಾಲನೆಯಲ್ಲಿ ನೀವು ವಿಫಲವಾದಲ್ಲಿ ನೀವು ರೂ.2000 ದ ಟ್ರಾಫಿಕ್ ದಂಡಕ್ಕೆ ಪಾತ್ರವಾಗಬಹುದು.( ಹಾಗೂ ಪುನರಾವರ್ತನೆಗೆ ರೂ. 4,000).

ಹೋಂಡಾ ಡಿಯೋ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್ ಆಗಿದೆ.

ನೀವು ಡಿಜಿಟ್ ನ ಹೋಂಡಾ ಡಿಯೋ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ಹೋಂಡಾ ಡಿಯೋಗಾಗಿ ಇನ್ಶೂರೆನ್ಸ್ ಯೋಜನೆಗಳ ವಿಧಗಳು

ಥರ್ಡ್ ಪಾರ್ಟೀ ಕಾಂಪ್ರಹೆನ್ಸಿವ್

ಅಪಘಾತದಿಂದ ಸ್ವಂತ ಟು ವೀಲರ್ ವಾಹನಕ್ಕಾದ ನಷ್ಟ/ಹಾನಿ

×

ಬೆಂಕಿಯಿಂದ ಸ್ವಂತ ಟು ವೀಲರ್ ವಾಹನಕ್ಕಾದ ನಷ್ಟ/ಹಾನಿ

×

ಪ್ರಕೃತಿ ವಿಕೋಪದಿಂದ ಸ್ವಂತ ಟು ವೀಲರ್ ವಾಹನಕ್ಕಾದ ನಷ್ಟ/ಹಾನಿ

×

ಥರ್ಡ್ ಪಾರ್ಟೀ ವಾಹನಕ್ಕಾದ ಹಾನಿ

×

ಥರ್ಡ್ ಪಾರ್ಟೀ ಸ್ವತ್ತಿಗಾದ ಹಾನಿ

×

ವೈಯಕ್ತಿಕ ಅಪಘಾತ ಕವರ್

×

ಥರ್ಡ್ ಪಾರ್ಟೀ ವ್ಯಕ್ತಿಗೆ ಹಾನಿ/ಸಾವು

×

ನಿಮ್ಮ ಸ್ಕೂಟರ್ ಅಥವಾ ಬೈಕ್ ನ ಕಳವು

×

ನಿಮ್ಮ ಐಡಿವಿ ಅನ್ನು ಕಸ್ಟಮೈಜ್ ಮಾಡುವುದು

×

ಕಸ್ಟಮೈಜ್ ಮಾಡಲಾದ ಆಡ್-ಆನ್ ಗಳೊಂದಿಗೆ ಹೆಚ್ಚುವರಿ ಸಂರಕ್ಷಣೆ

×
Get Quote Get Quote

ಕಾಂಪ್ರೆಹೆನ್ಸಿವ್  ಹಾಗೂ ಥರ್ಡ್ ಪಾರ್ಟೀಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಇನ್ನಷ್ಟು ತಿಳಿಯಿರಿ.

ಹೋಂಡಾ ಡಿಯೋ - ರೂಪಾಂತರಗಳು ಹಾಗೂ ಎಕ್ಸ್-ಶೋರೂಂ ದರ

ರೂಪಾಂತರಗಳು ಶೋರೂಂ ದರ
ಡಿಯೋ ಎಸ್ ಟಿ ಡಿ, 109.19 ಸಿಸಿ ₹ 53,218
ಡಿಯೋ ಡಿ ಎಲ್ ಎಕ್ಸ್, 109.19 ಸಿಸಿ ₹ 55,218

ಕ್ಲೈಮ್ ಫೈಲ್ ಮಾಡುವುದು ಹೇಗೆ?

ನಮ್ಮಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಯೋಜನೆಯನ್ನು ಖರೀದಿಸಿದ ಅಥವಾ ರಿನ್ಯೂ ಮಾಡಿದ ನಂತರ ನೀವು ನೆಮ್ಮದಿಯ ಜೀವನವನ್ನು ನಡೆಸುತ್ತೀರಿ, ಕಾರಣ ನಮ್ಮ ಬಳಿ ಇರುವ 3 ಹಂತಗಳ ಸಂಪೂರ್ಣ ಡಿಜಿಟಲ್ ಆದ ಕ್ಲೈಮ್ ಗಳ ಪ್ರಕ್ರಿಯೆ!

ಹಂತ 1

ಕೇವಲ 1800-258-5956 ಗೆ ಕರೆ ನೀಡಿ. ಯಾವುದೇ ಫಾರ್ಮ್ ತುಂಬಿಸಬೇಕಾಗಿಲ್ಲ.

ಹಂತ 2

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವ ಪರಿಶೀಲನೆಯ ಲಿಂಕ್ ಅನ್ನು ಪಡೆಯಿರಿ.ನಮ್ಮ ಹಂತ ಹಂತದ ಮಾರ್ಗದರ್ಶನದೊಂದಿಗೆ ನಿಮ್ಮ ಸ್ಮಾರ್ಟ್ ಫೋನಿನಿಂದ ನಿಮ್ಮ ವಾಹನದ ಹಾನಿಗಳನ್ನು ಸೆರೆಹಿಡಿಯಿರಿ.

ಹಂತ 3

ನೀವು ಆಯ್ಕೆ ಮಾಡಲು ಬಯಸುವ ಪಾವತಿಯ ವಿಧಾನವನ್ನು ನಿರ್ಧರಿಸಿ ಅಂದರೆ ಮರುಪಾವತಿ ಅಥವಾ ನಮ್ಮ ನೆಟ್ವರ್ಕ್ ಗ್ಯಾರೇಜ್ ಗಳಲ್ಲಿ ಕ್ಯಾಷ್ಲೆಸ್.

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್ ಅನ್ನು ಎಷ್ಟು ಬೇಗ ಸೆಟ್ಲ್ ಮಾಡಬೇಕಾಗುತ್ತದೆ? ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುತ್ತಿರುವಾಗ ಇದು ನಿಮ್ಮ ಯೋಚನೆಗೆ ಬರಬೇಕಾದ ಮೊದಲ ಪ್ರಶ್ನೆಯಾಗಿದೆ. ಒಳ್ಳೆಯದು, ನೀವು ಅದನ್ನೇ ಮಾಡುತ್ತಿದ್ದೀರಿ! ಡಿಜಿಟ್ ನ ಕ್ಲೈಮ್ಸ್ ರಿಪೋರ್ಟ್ ಕಾರ್ಡ್ ಅನ್ನು ಓದಿ

ಹೋಂಡಾ ಡಿಯೋ : ಭಾರತೀಯರಿಗಾಗಿ ಒಂದು ನವೀನ ಹಾಗೂ ಆಕರ್ಷಕ ಸ್ಕೂಟರ್

ಡಿಯೋ ದೈನಂದಿನ ಪ್ರಯಾಣಕ್ಕೆ ಅತ್ಯಂತ ಸೂಕ್ತವಾದ ಒಂದು ಸವಾರಿ ವಾಹನವಾಗಿದ್ದರೂ, ಹೋಂಡಾ ಇದರ ಆಕರ್ಷಕ ವಿನ್ಯಾಸಕ್ಕೂ ಆದ್ಯತೆ ನೀಡಿದೆ. ಈ ಸ್ಕೂಟರಿನ ಟ್ರೆಂಡಿ ಸ್ವರೂಪವು ದೇಶದ ಯುವಜನತೆಯೊಂದಿಗೆ ಹೊಂದಾಣಿಕೆಯನ್ನು ಕಂಡಿದೆ. ಆದಾಗ್ಯೂ, ಈ ಟು ವೀಲರ್  ವಾಹನದ ಆಂತರಿಕ ನಿರ್ದಿಷ್ಟತೆಗಳು ಕೂಡಾ ಅದ್ಭುತವಾಗಿವೆ:

  • ಇದೊಂದು 5.3 -ಲೀಟರ್, ಸಿಂಗಲ್-ಸಿಲಿಂಡರ್ ಎಂಜಿನ್.
  • 110 ಸಿಸಿ ಯ ಕ್ಯೂಬಿಕ್ ಸಾಮರ್ಥ್ಯದೊಂದಿಗೆ, ಈ ಸ್ಕೂಟರಿನ ಎಂಜಿನ್ 8 ಬಿ ಎಚ್ ಪಿ ಯಷ್ಟು ಟಾರ್ಕ್ ಅನ್ನು ಉತ್ಪಾದಿಸಬಲ್ಲದು.
  • ಇಂಧನ ಸಾಮರ್ಥ್ಯದ ವಿಷಯದಲ್ಲಂತೂ ಇದು ಶ್ರೇಷ್ಠವಾಗಿದ್ದು, ತನ್ನ ಮಾಲೀಕರಿಗೆ 55 ಕಿಮಿ/ಲಿ ಪ್ರಯಾಣವನ್ನು ಒದಗಿಸುತ್ತದೆ.

ಬಹುಶಃ ಇಂತಹ ಇನ್ನೂ ಹಲವಾರು ವೈಶಿಷ್ಟ್ಯಗಳಿಂದಾಗಿಯೇ ಹೋಂಡಾ ಡಿಯೋ,  2013 ರ ಇಂಡಿಯಾ ಡಿಸೈನ್ ಮಾರ್ಕ್ಸ್ ಅವಾರ್ಡ್ಸ್ (1) ನಲ್ಲಿ, ಪ್ರಶಸ್ತಿಯನ್ನು ಗೆದ್ದಿತ್ತು. ಇಷ್ಟು ವರ್ಷಗಳಲ್ಲಿ, ಈ ಟು ವೀಲರ್  ವಾಹನಗಳ ಜನಪ್ರಿಯತೆಯು ನಿರಂತರವಾಗಿ ಬೆಳೆದಿದ್ದು ಭಾರತದಲ್ಲಿ ಸವಾರರಿಗೆ ಅತ್ಯಂತ ಜನಪ್ರಿಯ ಸ್ಕೂಟರ್ ಗಳಲ್ಲಿ ಒಂದನ್ನಾಗಿಸಿದೆ.

ಹೀಗಾಗಿ, ಡಿಯೋ ದ ಮಾಲೀಕರು ತಮ್ಮ ಸ್ಕೂಟರ್ ಅನ್ನು ಅಪಾಯದಿಂದ ಸಂರಕ್ಷಿಸಲು ಕ್ರಮಗಳನ್ನು ಕೈಗೊಳ್ಳುವುದು ಆವಶ್ಯಕವಾಗಿದೆ. ಅಪಘಾತದ ಸಮಯದಲ್ಲಿ ಸ್ಕೂಟರಿನ ರಿಪೇರಿಗಾಗಿ ಆರ್ಥಿಕ ನೆರವನ್ನು ಒದಗಿಸುವ ಹೋಂಡಾ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುವುದು ಈ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ.

ಆದರೆ, ನಿಮ್ಮ ಇನ್ಶೂರೆನ್ಸ್ ಗಾಗಿ ಸರಿಯಾದ ಪ್ರೊವೈಡರ್ ಅನ್ನು ಆಯ್ಕೆ ಮಾಡುವುದು ಕೂಡಾ ಸರಿಯಾದ ಯೋಜನೆಯನ್ನು ಆಯ್ಕೆ ಮಾಡುವಷ್ಟೇ ಮುಖ್ಯವಾಗಿದೆ. ಇಂತಹ ಯೋಜನೆಗಳಿಗೆ ಬಂದಾಗ ಡಿಜಿಟ್ ನೀವು ಕಣ್ಣು ಮುಚ್ಚಿ ಆಯ್ಕೆ ಮಾಡಬಹುದಾದಂತಹ ಪ್ರೊವೈಡರ್ ಆಗಿದ್ದಾರೆ.

ಆದರೆ, ಇತರರು ನೀಡದೇ ಇರುವಂತದ್ದೇನನ್ನು ಡಿಜಿಟ್ ನೀಡುತ್ತದೆ?

ನಿಮ್ಮ ಹೋಂಡಾ ಡಿಯೋಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಗಾಗಿ ಡಿಜಿಟ್ ಅನ್ನು ಏಕೆ ಆಯ್ಕೆ ಮಾಡಬೇಕು?

ವಿವಿಧ ಸ್ಕೂಟರ್ ಕಂಪನಿಗಳು ಒದಗಿಸುವ ಎಲ್ಲಾ ವೈಶಿಷ್ಟ್ಯಗಳನ್ನು ಹೋಲಿಕೆ ಮಾಡಲು ನೀವು ಮುಕ್ತವಾಗಿರುವಿರಿ, ಆದರೂ, ಡಿಜಿಟ್ ಪಾಲಿಸಿದಾರರು ಅಪೇಕ್ಷಿಸಬಹುದಾದಂತಹ ಕೆಲವು ಲಾಭಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ:

ಪಾಲಿಸಿದಾರರಿಗೆ ವಿವಿಧ ಇನ್ಶೂರೆನ್ಸ್ ಆಯ್ಕೆಗಳು - ಒಂದು ಡಿಯೋ ಇನ್ಶೂರೆನ್ಸ್ ಯೋಜನೆಯನ್ನು ಆಯ್ಕೆ ಮಾಡುವಾಗ ಗ್ರಾಹಕರಿಕೆ ಸಾಕಷ್ಟು ಆಯ್ಕೆಗಳು ಇರುವುದನ್ನು ಡಿಜಿಟ್ ಖಚಿತಪಡಿಸುತ್ತದೆ.

ನೀವು ಈ ಕೆಳಗಡೆ ನೀಡಿರುವ ಟು ವೀಲರ್  ವಾಹನಾ ಇನ್ಶೂರೆನ್ಸ್ ಗಳ ವಿಶಾಲ ವರ್ಗಗಳಿಂದ ಆಯ್ಕೆ ಮಾಡಬಹುದಾಗಿದೆ:

  • ಥರ್ಡ್-ಪಾರ್ಟಿ ಹೊಣೆಗಾರಿಕೆಯಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿ - ಇಂತಹ ಇನ್ಶೂರೆನ್ಸ್ ಯೋಜನೆಯು ಥರ್ಡ್-ಪಾರ್ಟಿ ಪ್ರತಿ ನಿಮಗಿರುವ ಆರ್ಥಿಕ ಹೊಣೆಗಾರಿಕೆಯನ್ನು ಪೂರೈಸುತ್ತದೆ, ನಿಮ್ಮ ಡಿಯೋ ಜೊತೆ ಅಪಘಾತಕ್ಕೆ ಸಿಲುಕಿದ ವ್ಯಕ್ತಿ, ವಾಹನ ಅಥವಾ ಸ್ವತ್ತನ್ನೂ ಸೇರಿ. ಆದರೆ ಇದರೊಂದಿಗೆ ನೀವು ಸ್ವಂತ ಹಾನಿಗಾಗಿ ಕ್ಲೈಮ್ ಮಾಡಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ನೀವು ನಿಮ್ಮ ಜೇಬಿನಿಂದಲೇ ಖರ್ಚನ್ನು ಭರಿಸಬೇಕಾಗುತ್ತದೆ. 

  • ಕಾಂಪ್ರೆಹೆನ್ಸಿವ್ ಟು ವೀಲರ್ ವೆಹಿಕಲ್  ಪಾಲಿಸಿ - ಇಂತಹ ಪಾಲಿಸಿಗಳು, ಥರ್ಡ್-ಪಾರ್ಟಿ ಸಂರಕ್ಷಣೆಯೊಂದಿಗೆ ಸ್ವಂತ ಹಾನಿ ಕವರ್ ಅನ್ನು ಒದಗಿಸುತ್ತದೆ. ಆದ್ದರಿಂದಲೇ, ನೀವು ಥರ್ಡ್-ಪಾರ್ಟಿ ಹೊಣೆಗಾರಿಕೆಯ ಜೊತೆ ನಿಮ್ಮ ಸ್ವಂತ ವಾಹನದ ರಿಪೇರಿಗೆ ತಗುಲಿದ ವೆಚ್ಚಗಳಿಗೂ ಕ್ಲೈಮ್ ಮಾಡಬಹುದಾಗಿದೆ. ಇದರ ಜೊತೆ, ಇಂತಹ ಯೋಜನೆಗಳು ಬೆಂಕಿ, ಮಾನವ ನಿರ್ಮಿತ ಹಾಗೂ ನೈಸರ್ಗಿಕ ವಿಪತ್ತುಗಳಿಗೂ ಆರ್ಥಿಕ ನೆರವು ಒದಗಿಸುತ್ತದೆ.

ನೀವು ಪರಿಗಣಿಸಬಹುದಾದ ಇನ್ನೊಂದು ಇನ್ಶೂರೆನ್ಸ್ ಪಾಲಿಸಿಯೆಂದರೆ ಸ್ವಂತ-ಹಾನಿ ಸಂರಕ್ಷಣೆ. ಇದರಲ್ಲಿ, ನೀವು ಥರ್ಡ್-ಪಾರ್ಟಿ ಹೊಣೆಗಾರಿಕೆಯ ಕವರೇಜ್ ಇಲ್ಲದೇ ಇರುವ ಕಾಂಪ್ರೆಹೆನ್ಸಿವ್ ಪಾಲಿಸಿಯ ಲಾಭಗಳನ್ನು ಪಡೆಯಬಹುದಾಗಿದೆ.

ಆದರೆ, ಇಂತಹ ಯೋಜನೆಗಳು ತಮ್ಮ ಹೊಸ ಸ್ಕೂಟರ್/ ಬೈಕ್ ಅನ್ನು ಸೆಪ್ಟೆಂಬರ್ 2018 ನಂತರ ಖರೀದಿಸಿದ ಮಾಲೀಕರಿಗೆ ಮಾತ್ರ ಅನ್ವಯಿಸುತ್ತದೆ.

ನಿಮ್ಮ ಇನ್ಶೂರೆನ್ಸ್ ಪ್ರೊವೈಡರ್ ನಿಂದ ನಿಮಗಿರುವ ವಯಕ್ತಿಕ ಅಗತ್ಯ ಹಾಗೂ ನಿರೀಕ್ಷೆಗಳ ಆಧಾರದ ಮೇಲೆ ಇವುಗಳಿಂದ ನೀವು ಆಯ್ಕೆ ಮಾಡಬಹುದು.

  • ಸರಳ ಆನ್ಲೈನ್ ಪಾಲಿಸಿ ಖರೀದಿ ಹಾಗೂ ರಿನ್ಯೂವಲ್ - ಹಲವು ಬಾರಿ, ಒಂದುಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿ ಹಾಗೂ ಖರೀದಿ ಶ್ರಮವೆನಿಸುತ್ತದೆ. ನೀವೂ ಅದೇ ದೋಣಿಯಲ್ಲಿ ಸವಾರಿ ಮಾಡಿದ್ದರೆ, ಡಿಜಿಟ್ ನಿಮಗಾಗಿ ಒಂದು ಉತ್ತಮ ಆಯ್ಕೆಯಾಗಿದೆ. ನಾವು ಆನ್ಲೈನ್ ಪೋರ್ಟಲ್ ಮೂಲಕ ಸುಲಭ ಖರೀದಿಯನ್ನು ಒದಗಿಸುವುದರಿಂದ ಯಾವುದೇ ಕಛೇರಿಗೆ ಭೇಟಿ ನೀಡುವ ಪ್ರಮೇಯ ತಪ್ಪುತ್ತದೆ. ತಮ್ಮ ಪಾಲಿಸಿಯನ್ನು ರಿನ್ಯೂ ಮಾಡಲು ಯೋಚಿಸುತ್ತಿರುವ ಪ್ರಸ್ತುತ ಗ್ರಾಹಕರಿಗೆ ಈ ಆನ್ಲೈನ್ ಪ್ರಕ್ರಿಯೆಯು ಇನ್ನಷ್ಟು ಪ್ರಯೋಜನಕಾರಿಯಾಗಿದೆ. ಅವರು ಸಂಪೂರ್ಣವಾಗಿ ಇಂಟರ್ನೆಟ್ ಮೂಲಕವೇ ತಮ್ಮ ಪ್ರೀಮಿಯಂ ಅನ್ನು ಪಾವತಿಸಿ ಪಾಲಿಸಿಯನ್ನು ರಿನ್ಯೂ ಮಾಡಬಹುದಾಗಿದೆ.

  • ಅದ್ಭುತವಾದ ನೋ-ಕ್ಲೈಮ್ ಬೋನಸ್ ಷರತ್ತು -  ಡಿಜಿಟ್, ಕ್ಲೈಮ್ ರಹಿತ ವರ್ಷಗಳನ್ನು ಅನಂದಿಸಿದವರಿಗೆ, ಆಕರ್ಷಕ ರಿಯಾಯಿತಿಗಳನ್ನು ನೀಡುತ್ತದೆ. ಇಂತಹ ಬೋನಸ್ ಗಳನ್ನು ಸಂಗ್ರಹಿಸಿದರೆ ನಿಮಗೆ ಬಹಳ ಪ್ರಯೋಜವಾಗುತ್ತದೆ ಏಕೆಂದರೆ, ಇದು ರಿನ್ಯೂವಲ್ ಸಮಯದಲ್ಲಿ ಪ್ರೀಮಿಯಂ ಮೇಲಿನ ಕಡಿತಕ್ಕೆ ಕಾರಣವಾಗುತ್ತದೆ. ಹೀಗಾಗಿ, ಒಂದು ನಿರ್ದಿಷ್ಟ ವರ್ಷದಲ್ಲಿ ಒಬ್ಬ ವ್ಯಕ್ತಿಯು ಕ್ಲೈಮ್ ಫೈಲ್ ಮಾಡುವುದನ್ನು ತಪ್ಪಿಸುವಲ್ಲಿ ಯಶಸ್ವಿಯಾದರೆ, ಅವರ ಪಾಲಿಸಿಯ ಪ್ರತಿ ಇರುವ ಹೊಣೆಗಾರಿಕೆಯೂ ಕಡಿಮೆಯಾಗುತ್ತದೆ.

  • ನಿಮ್ಮ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ ಅನ್ನು ಕಸ್ಟಮೈಜ್ ಮಾಡಿ - ನಿಮ್ಮ ಹೋಂಡಾ ಡಿಯೋ ಕಳವಾದ ಅಥವಾ ರಿಪೇರಿಗೂ ಮೀರಿ ಹಾನಿಗೊಳಗಾದ ದುರಾದೃಷ್ಟಕರ ಸಂದರ್ಭಗಳಲ್ಲಿ, ನೀವು ನಿಮ್ಮ ಇನ್ಶೂರೆನ್ಸ್ ಪ್ರೊವೈಡರ್ ನಿಂದ ಗರಿಷ್ಠ ಆರ್ಥಿಕ ನೆರವನ್ನು ಪಡೆಯುವಂತೆ ಆಗಬೇಕು. ಸಿಹಿ ಸುದ್ದಿಯೆಂದರೆ, ಡಿಜಿಟ್ ಡಿಯೋ ಇನ್ಶೂರೆನ್ಸ್ ಪಾಲಿಸಿಗಳ ಕಸ್ಟಮೈಜ್ ಮಾಡಬಹುದಾದ ಐಡಿವಿ(IDV) ಯೊಂದಿಗೆ, ಇದನ್ನು ಮಾಡುವುದು ಅತ್ಯಂತ ಸರಳವಾಗಿದೆ. ಪಾಲಿಸಿ ಖರೀದಿಯ ಸಮಯದಲ್ಲಿ, ನೀವು ನಿಮ್ಮ ನಿರ್ದಿಷ್ಟ ಅಗತ್ಯಗಳ ಪ್ರಕಾರ ನೀವು ಬಯಸಿದ ಐಡಿವಿ ಅನ್ನು ಆಯ್ಕೆ ಮಾಡಬಹುದಾಗಿದೆ.

  • ಆನ್ಲೈನ್ ಆಗಿ ಕ್ಲೈಮ್ ಫೈಲ್ ಹಾಗೂ ಇತ್ಯರ್ಥ ಮಾಡುವುದು - ಡಿಜಿಟ್ ತನ್ನ ಗ್ರಾಹಕರ ಗೊಂದಲವನ್ನು ತಪ್ಪಿಸಲು ಇಂಟರ್ನೆಟ್ ನ ಸಂಪೂರ್ಣ ಬಳಕೆಯನ್ನು ಮಾಡುತ್ತದೆ. ಆದ್ದರಿಂದಲೇ, ನೀವು ನಿಶ್ಚಿಚಿಂತೆಯಿಂದ ಆನ್ಲೈನ್ ಆಗಿ ಕ್ಲೈಮ್ ಅನ್ನು ಫೈಲ್ ಮಾಡಬಹುದು. ಇದರ ಜೊತೆ, ನೀವು ನಿಮ್ಮ ಡಿಯೋಗಾಗಿ ಸ್ಮಾರ್ಟ್ ಫೋನ್ ಅಳವಡಿಕೆಯಿರುವ ಸ್ವಪರಿಶೀಲನೆಯನ್ನು ಮಾಡಿ ಯಾವುದೇ ಕಷ್ಟವಿಲ್ಲದೆ ಕ್ಲೈಮ್ ಅನ್ನು ಫೈಲ್ ಮಾಡಬಹುದು. ಉಳಿದ ಕಂಪನಿಗಳ ಹಾಗೆ ಇಲ್ಲಿ ಹಲವು ಬಾರಿ ಹಾನಿಯ ಪುರಾವೆಯ ದಾಖಲೆಗಳೊಂದಿಗೆ ನಿಮ್ಮ ಇನ್ಶೂರೆನ್ಸ್ ಪ್ರೊವೈಡರ್ ನ ಕಛೇರಿಯನ್ನು ಭೇಟಿ ಮಾಡಬೇಕಾಗಿರದೇ ಇರುವುದರಿಂದ, ಡಿಜಿಟ್ ನ ಕಾಗದ ರಹಿತ ಪ್ರಕ್ರಿಯೆಯು ಹೆಚ್ಚು ಅನುಕೂಲಕರವಾಗಿದೆ. ಹಾಗೂ, ಇಂತಹ ಸರಳ ಪ್ರಕ್ರಿಯೆಗಳಿಂದಾಗಿ ನಿಮ್ಮ ಅಮೂಲ್ಯ ಸಮಯದ ಉಳಿತಾಯವೂ ಆಗುತ್ತದೆ.

  • 24x7 ಸಮರ್ಥ ಗ್ರಾಹಕ ಬೆಂಬಲ - ಡಿಜಿಟ್ ನ ಗ್ರಾಹಕರೂ ಯಾವ ಸಮಯದಲ್ಲಿ ಬೇಕಾದರೂ ನೆರವನ್ನು ಕೋರುವ ಆಯ್ಕೆಯನ್ನು ಹೊಂದಿದ್ದಾರೆ, ಅದು ಹಗಲು ಇರಲಿ ಅಥವಾ ರಾತ್ರಿಯೇ ಇರಲಿ. ಇನ್ನಷ್ಟೂ ಸರಳೀಕರಿಸಲು, ಪಾಲಿಸಿದಾರರ ಪ್ರಶ್ನೆ ಹಾಗೂ ಸಂದೇಹಗಳಿಗೆ ಉತ್ತರಿಸಲು ಹಾಗೂ ನೆರವನ್ನು ಒದಗಿಸಲು, ನಾವೊಂದು ಆಂತರಿಕ ತಂಡವನ್ನೇ ಹೊಂದಿದ್ದೇವೆ. ಕೇವಲ ನಮ್ಮ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ಹಾಗೂ ಸಂಪರ್ಕಿಸಿ. ನಮ್ಮ ಗ್ರಾಹಕ ಸೇವೆಯ ನೌಕರರು ನಿಮಗೆ ಕ್ಲೈಮ್ ಫೈಲ್ ಮಾಡಲು ಅಥವಾ ಪಾಲಿಸಿಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳನ್ನು ಉತ್ತರಿಸಲು ತಯಾರಾಗಿರುತ್ತಾರೆ.

ಪ್ರಯೋಜನಕರ ಆಡ್-ಆನ್ ಗಳು - ಹಲವು ಬಾರಿ, ನಿಮ್ಮ ಇನ್ಶೂರೆನ್ಸ್ ಪ್ರೊವೈಡರ್ ನೀಡುವ ಮೂಲ ಯೋಜನೆಗಳು ನಿಮಗೆ ಸಮರ್ಪಕ ಸಂರಕ್ಷಣೆಯನ್ನು ನೀಡದೇ ಇರಬಹುದು. ಆದರೆ, ಡಿಜಿಟ್ ಒದಗಿಸುತ್ತಿರುವ ಅದ್ಭುತ ಆಡ್-ಆನ್ ಗಳಿಂದಾಗಿ, ಪಾಲಿಸಿದಾರರು ಮುಕ್ತವಾಗಿ, ತಮ್ಮ ಅಗತ್ಯಗಳ ಅನುಸಾರ ಪಾಲಿಸಿಗಳನ್ನು ಮಾರ್ಪಾಡು ಮಾಡಬಹುದಾಗಿದೆ. ನಾವು ಈ ಕೆಲವು ರೈಡರ್ ಸಂರಕ್ಷಣೆಯನ್ನು ನೀಡುತ್ತೇವೆ:

  • ಬ್ರೇಕ್ಡೌನ್ ಗಾಗಿ ನೆರವು
  • ಬಳಕೆಯ ವಸ್ತುಗಳ ಕವರ್
  •  ಎಂಜಿನ್ ಹಾಗೂ ಗೇರ್ ಸಂರಕ್ಷಣಾ ಕವರ್
  • ರಿಟರ್ನ್ ಟು ಇನ್ವಾಯ್ಸ್ ಕವರ್, ಬಳಕೆಯ ವಸ್ತುಗಳ ಕವರ್
  •   ಝೀರೋ ಡಿಪ್ರಿಸಿಯೇಷನ್ ಕವರ್
  • ಸಂದರ್ಭಕ್ಕೆ ತಕ್ಕಂತೆ, ನಿಮ್ಮ ಹೋಂಡಾ ಡಿಯೋ ಇನ್ಶೂರೆನ್ಸ್ ಪಾಲಿಸಿಗೆ ನೀವು ಈ ರೈಡರ್ ಗಳನ್ನು ಸೇರಿಸಬಹುದು.

ಗ್ಯಾರೇಜು ಗಳ ಪ್ರಭಾವಶಾಲಿ ನೆಟ್ವರ್ಕ್ - ಡಿಜಿಟ್ ತನ್ನ ಪ್ರಭಾವವನ್ನು ಬೀರುವ ಇನ್ನೊಂದು ಕ್ಷೇತ್ರವೆಂದರೆ ಅದರಡಿಯಲ್ಲಿರುವ ನೆಟ್ವರ್ಕ್ ಗ್ಯಾರೇಜ್ ಗಳು. ನೀವು ಇವುಗಳಲ್ಲಿ ಒಂದು ಸರ್ವಿಸ್ ಸೆಂಟರ್ ನಲ್ಲಿ ನಿಮ್ಮ ಸ್ಕೂಟರಿನ ರಿಪೇರಿ ಮಾಡಿಸಿದಲ್ಲಿ, ಅದಕ್ಕೆ ಪಾವತಿಯನ್ನು ಮಾಡಬೇಕಾಗಿ ಇರುವುದಿಲ್ಲ. ಬದಲಾಗಿ, ನಾವೇ ಎಲ್ಲಾ ಖರ್ಚುಗಳನ್ನು ನಿಭಾಯಿಸಿ ನಿಮಗೆ ಶೂನ್ಯ ಹೊಣೆಗಾರಿಕೆಯನ್ನು ಒದಗಿಸುತ್ತೇವೆ. ಗ್ಯಾರೇಜ್ ಗಳ ಇಷ್ಟೊಂದು ಬಲಿಷ್ಟ ನೆಟ್ವರ್ಕ್ ಇರುವುದು, ನೀವೂ ಎಂದಿಗೂ ಇಂತಹ ಒಂದು ಕೇಂದ್ರಕ್ಕೆ ಹತ್ತಿರವಾಗಿರುವುದನ್ನು ಖಚಿತಪಡುಸುತ್ತದೆ.

ಸರಿಯಾದ ಇನ್ಶೂರರ್ ಅನ್ನು ಆಯ್ಕೆ ಮಾಡಲು ಸ್ವಲ್ಪ ಸಮಯವನ್ನು ಮೀಸಲಿಡಿ. ಮೇಲೆ ನೀಡಿದ ಅಂಶಗಳನ್ನು ಪರಿಗಣಿಸಿ ಡಿಜಿಟ್, ನಿಮ್ಮ ಡಿಯೋ ಇನ್ಶೂರೆನ್ಸ್ ಪಾಲಿಸಿಗಾಗಿ ಉತ್ತಮ ಆಯ್ಕೆ ಎಂದು ಕಂಡುಹಿಡಿಯಿರಿ. ನಿಮಗೆ ಇನ್ನೂ ಮನವರಿಕೆ ಆಗದೇ ಇದ್ದರೆ, ಹೆಚ್ಚು ತಿಳಿಯಲು ನಮ್ಮ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ!

ಭಾರತದಲ್ಲಿ ಹೋಂಡಾ ಡಿಯೋ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು

ನನ್ನ ಡಿಯೋ ಇನ್ಶೂರೆನ್ಸ್ ನಲ್ಲಿ ಗೇರ್ ಹಾಗೂ ಎಂಜಿನ್ ಆಡ್-ಆನ್ ನ ಆವಶ್ಯಕತೆಯಿದೆಯೇ?

ಎಂಜಿನ್ ಹಾಗೂ ಗೇರ್ ಸಂರಕ್ಷಣಾ ರೈಡರ್, ನಿಮ್ಮ ಡಿಯೋ ಪಾಲಿಸಿ ಕವರೇಜ್ ನಲ್ಲಿ ಎಲೆಕ್ಟ್ರಿಕಲ್ ಹಾಗೂ ಲಿಕ್ವಿಡ್ ಹಾನಿಯನ್ನು ಸೇರಿಸುತ್ತದೆ. ಆದ್ದರಿಂದ, ನಿಮ್ಮ ಸ್ಕೂಟರಿನ ಎಂಜಿನ್ ಅಥವಾ ಗೇರಿಗೆ ಇಂತಹ ಹಾನಿಗಳಾದರೆ ನೀವು ಇನ್ಶೂರೆನ್ಸ್ ಅನ್ನು ಕ್ಲಮ್ ಮಾಡಬಹುದಾಗಿದೆ.

ನಾನು ಸರಿಯಾದ ಸಮಯದಲ್ಲಿ ನನ್ನ ಪಾಲಿಸಿಯನ್ನು ರಿನ್ಯೂ ಮಾಡಲಿಲ್ಲ, ಈಗ ಅದು ಲ್ಯಾಪ್ಸ್ ಆಗಿದೆ. ಈಗಲೂ ನಾನು ನನ್ನ ಸಂಗ್ರಹಿತ ನೋ ಕ್ಲೈಮ್ ಬೋನಸ್ ಅನ್ನು ಬಳಸಬಹುದೇ?

ಇಲ್ಲ.  ಸಂಗ್ರಹಿತ ಎನ್ ಸಿ ಬಿ (NCB) ಅನ್ನು ಬಳಸಲು,ನೀವು ನಿಮ್ಮಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಅನ್ನು ಸರಿಯಾದ ಸಮಯದಲ್ಲಿ ಅಂದರೆ ಅದು ಲ್ಯಾಪ್ಸ್ ಆಗುವ ಮೊದಲೇ ರಿನ್ಯೂ ಮಾಡತಕ್ಕದ್ದು.