ಬಳಕೆಯಾಗಿರುವ ಬೈಕುಗಳಿಗೆ ಇನ್ಶೂರೆನ್ಸ್ ಪಾಲಿಸಿ

ನಿಮ್ಮ ಡಿಜಿಟ್ ಪಾಲಿಸಿಯನ್ನು ರಿನ್ಯೂ ಮಾಡಿ

Third-party premium has changed from 1st June. Renew now

ಬಳಕೆಯಾಗಿರುವ ಬೈಕನ್ನು ಖರೀದಿಸುವ ಮುನ್ನ ಪರಿಶೀಲಿಸಬೇಕಾದ ವಿಷಯಗಳು

ನೀವು ಸ್ವಂತಕ್ಕಾಗಿ ಒಂದು ಬೈಕನ್ನು ಖರೀದಿಸಲು ಯೋಚಿಸುತ್ತಿದ್ದು ನಿಮಗೆ ಹೆಚ್ಚು ಖರ್ಚು ಮಾಡಲು ಇಷ್ಟವಿಲ್ಲದಿದ್ದರೆ, ಬಳಕೆಯಾಗಿರುವ ಬೈಕ್ ಅನ್ನು ಖರೀದಿಸುವುದು ಒಂದು ಒಳ್ಳೆಯ ಉಪಾಯವಾಗಿದೆ. ಸರಿಯಾಗಿ ನಿರ್ಧರಿಸಿ ನೀವು ಬಯಸಿರುವ ಬೈಕಿನಲ್ಲಿ ನೀವು ಏನನ್ನೆಲ್ಲಾ ನೋಡಬೇಕು ಎಂದು ತಿಳಿಯಿರಿ. ತೆರೆದ ರಸ್ತೆಯಲ್ಲಿ ಮೈಲಿಗಟ್ಟಲೆ ಮೋಜು ಹಾಗೂ ಸಾಹಸಗಳನ್ನು ನಿಮಗೆ ನೀಡಬಹುದಂತಹ ಬೈಕನ್ನು ಖರೀದಿಸಿ.

ಏನನ್ನು ಪರಿಶೀಲಿಸುವುದು, ಎಲ್ಲಿಂದ ಆರಂಭಿಸುವುದು ಎಂಬ ಗೊಂದಲವೇ? ಚಿಂತಿಸಬೇಡಿ ನಾವು ಮಾರ್ಗದರ್ಶನ ನೀಡುತ್ತೇವೆ.

ಬಳಕೆಯಾಗಿರುವ ಬೈಕ್ ಅನ್ನು ಖರೀದಿಸುವ ಮುನ್ನ ಗುರುತು ಹಾಕಬೇಕಾದ ಪರಿಶೀಲನಾ ಪಟ್ಟ

ನಿಮ್ಮ ರೈಡಿಂಗ್ ಕ್ರಮ ಹಾಗೂ ರೀತಿಗೆ ಸೂಕ್ತವಾಗಿರುವ ಬೈಕುಗಳನ್ನು ಹುಡುಕಿ- ನೀವು ನಿಮ್ಮ ಬೈಕನ್ನು ಹೇಗೆ ಹಾಗೂ ಯಾವ ಉದ್ದೇಶಗಳಿಗೆ ಬಳಸಲು ಬಯಸುತ್ತೀರಿ ಎಂದು ನಿಮ್ಮನ್ನು ನೀವೇ ಪ್ರಶ್ನಿಸಿ ನಂತರ ಇದಕ್ಕೆ ಹೊಂದುವಂತೆ ಹುಡುಕಾಟವನ್ನು ನಡೆಸಿ.

ಸಂಶೋಧನೆಯು ಅಗತ್ಯ - ಆನ್ಲೈನ್ ಹೋಗಿ, ತಜ್ಞರೊಂದಿಗೆ ಸಮಾಲೋಚಿಸಿ ಬೈಕಿನ ಬಗ್ಗೆ ತಿಳಿಯಬೇಕಾದ ಎಲ್ಲಾ ವಿಷಯಗಳನ್ನು ತಿಳಿಯಿರಿ, ವಿಶೇಷವಾಗಿ ನೀವು ಖರೀದಿಸಲು ಬಯಸುವ ಬೈಕ್ ಗಳ ಬಗ್ಗೆ. 

ಬೈಕ್ ಅನ್ನು ಪರಿಶೀಲಿಸಿ - ಪೈಂಟ್, ತಿರುಚುಗಳು, ದ್ರವ್ಯದ ಲೀಕೇಜ್ ಗಳು, ಟಯರ್ ಅಥವಾ ಇತರ ಸವೆತಗಳನ್ನು ಪರಿಶೀಲಿಸಿ. ಹೊರಗಿನ ಭಾಗವನ್ನು ಪರಿಶೀಲಿಸಿ. ದೆಂಟ್ ಗಳಿವೆಯೇ ಎಂದು ನೋಡಿ. ಅವು ಆಳವಾಗಿರದೇ ಇದ್ದರೆ ತಿರುಚುಗಳನ್ನು ಪರಿಗಣಿಸುವ ಅಗತ್ಯವಿರುವುದಿಲ್ಲ.

ಬ್ರೇಕ್ ಗಳು - ಹೆಚ್ಚಿನ ಬೈಕ್ ಗಳಲ್ಲಿ ಡ್ರಮ್ ಬ್ರೇಕ್ ಇರುತ್ತದೆ. ಆದ್ದರಿಂದ, ಬ್ರೇಕ್ ಗಳನ್ನು ಪರಿಶೀಲಿಸಿ ನಿಮಗೆ ಅದನ್ನು ಇಟ್ಟುಕೊಳ್ಳಬೇಕೇ ಅಥವಾ ಬದಲಾಯಿಸಬೇಕೇ ಎಂದು ನಿರ್ಧರಿಸಿ. ಸರ್ವಿಸ್ ಮಾಡುವುದು ಕೂಡಾ ಸೂಕ್ತವಾಗಿರುತ್ತದೆ.

ಸರ್ವಿಸಿಂಗ್ ನ ದಾಖಲೆ - ಬೈಕ್ ಎಷ್ಟು ಬಾರಿ ಹಾಗೂ ಯಾವ ಉದ್ದೇಶಗಳಿಗಾಗಿ ಸರ್ವಿಸಿಂಗ್ ಗೆ ಹೋಗಿದೆ ಎಂದು ಅದರ ಮಾಲೀಕನಿಂದ ತಿಳಿಯಿರಿ.

ಯಾವುದೇ ದೋಷಗಳಿಗಾಗಿ ಬೈಕ್ ನ ವಿ ಐ ಎನ್( VIN) ಸಂಖ್ಯೆಯನ್ನು ಸ್ಕ್ಯಾನ್ ಮಾಡಿ -   ವಾಹನದ ಐಡೆಂಟಿಟಿ ನಂಬರ್ ಒಂದು ವಾಹನವನ್ನು ಕಾನೂನಾತ್ಮಕವಾಗಿ ಗುರುತಿಸಲು ಇರುವ ಅನನ್ಯ ಸೀರಿಯಲ್ ಸಂಖ್ಯೆಯಾಗಿದೆ. ಹೆಚ್ಚಿನ ಬೈಕ್ ಗಳಲ್ಲಿ, ನೀವು ವಿ ಐ ಎನ್ ಸಂಖ್ಯೆಯನ್ನು ಬೈಕ್ ಫ್ರೇಮ್ ನ ಕುತ್ತಿಗೆ ಭಾಗದಲ್ಲಿ ಹೆಡ್ಲೈಟ್ ನ ಹಿಂದೆ ಕಾಣಬಹುದು. ಈ ಸಂಖೆಯನ್ನು ಅದರ ಅಧಿಕೃತ ಟೈಟಲ್ ನಲ್ಲಿರುವ ಸಂಖ್ಯೆಯೊಂದಿಗೆ ಹೋಲಿಕೆ ಮಾಡಿ ನೋಡಿ.

ಲೈಟ್ ಗಳು(Lights) - ಹೆಡ್ಲೈಟ್ ಬಲ್ಬ್, ಇಂಡಿಕೇಟರ್ ಹಾಗೂ ಟೈಲ್ ಲೈಟ್ ಗಳು ಸರಿಯಾದ ಸ್ಥಿತಿಯಲ್ಲಿದ್ದು ಪ್ರಕಾಶಮಾನವಾಗಿರಬೇಕು. ಇಲ್ಲದಿದ್ದರೆ, ಬಲ್ಬ್ ಗಳನ್ನು ಬದಲಿಸಿ.

ಕಾಗದಗಳನ್ನು ಪರಿಶೀಲಿಸಿ - ಆರ್ ಸಿ(RC) ಪುಸ್ತಕ, ಬೈಕ್ ಇನ್ಶೂರೆನ್ಸ್, ಬೈಕ್ ಇನ್ಶೂರೆನ್ಸ್ ನ ಮಾನ್ಯತೆ, ಪ್ರದೂಷಣೆಯ ಪ್ರಮಾಣಪತ್ರ, ಮೂಲ ಇನ್ವಾಯ್ಸ್, ವಿಸ್ತರಿತ ವಾರಂಟಿ(ಇದ್ದರೆ).

ಟೆಸ್ಟ್ ಡ್ರೈವ್(Test drive ) - ಬೈಕ್ ನ ವೇಗ, ಮೈಲೇಜ್, ಅದರ ಸಾಮರ್ಥ್ಯನಿಮಗೆ ಹೊಂದುತ್ತದೆಯೇ ಎಂದು ಪರಿಶೀಲಿಸಲು ಟೆಸ್ಟ್ ಡ್ರೈವ್ ಮಾಡಿ.

ಒಂದು ವಿಸ್ತಾರವಾದ ಪರಿಶೀಲನೆಯನ್ನು ನಿಗದಿ ಪಡಿಸಲು ನಿಮ್ಮ ಸ್ಥಳೀಯ ಮೆಕ್ಯಾನಿಕ್ ನೊಂದಿಗೆ ಮಾತನಾಡಿ - ನೀವು ನಿಮ್ಮ ಸೆಕೆಂಡ್-ಹ್ಯಾಂಡ್ ಬೈಕ್ ಅನ್ನು ಖಾಸಗಿ ಪಾರ್ಟೀಯಿಂದ ಖರೀದಿಸಲು ನಿರ್ಧರಿಸಿದ್ದರೂ, ನೀವು ಯಾವುದೇ ರೀತಿಯ ಕಾಂಟ್ರಾಕ್ಟ್ ಸಹಿ ಮಾಡುವ ಮೊದಲು ಥರ್ಡ್ ಪಾರ್ಟೀಯಿಂದ ಅದರ ಪರಿಶೀಲನೆ ಮಾಡಿ.

ಒಮ್ಮೆ ನೀವು ಒಂದು ಬಳಕೆಯಾಗಿರುವ ಅನ್ನು ಆಯ್ಕೆ ಮಾಡಿದ ಮೇಲೆ, ನೀವು ಸ್ವತಃ ಮೆಕ್ಯಾನಿಕಲ್ ಆಗಿ ಪರಿಣಿತರಾಗದೇ ಇದ್ದರೆ ಅದನ್ನು ಸ್ಥಳೀಯ ಮೆಕ್ಯಾನಿಕ್ ಗ್ಯಾರೇಜ್ ಗೆ ಕೊಂಡೊಯ್ಯಿರಿ. ಇದಾದ ಮೇಲೆ, ಎಲ್ಲಾ ಪತ್ರವ್ಯವಹಾರಗಳು ಅಂದರೆ ಮುಖ್ಯವಾಗಿ ನಿಮ್ಮ ಹ್ರ್ಸರಿಗೆ ಮಾಲೀಕತ್ವ ಹಾಗೂ ಇನ್ಶೂರೆನ್ಸ್ ಅನ್ನು ವರ್ಗಾಯಿಸುವುದನ್ನು ಪೂರ್ಣಗೊಳಿಸಬಹುದು.

ಬೈಕ್ ಮಾಲೀಕತ್ವವನ್ನು ವರ್ಗಾಯಿಸುವುದು ಹೇಗೆ?

ಮಾಲೀಕತ್ವದ ವರ್ಗಾವಣೆಯು ಮುಖ್ಯವಾಗಿದ್ದು, ಇದನ್ನು ಈ ರೀತಿಯಲ್ಲಿ ಮಾಡಬಹುದು:

ಹಂತ  1 - ಬೈಕ್ ನ ಮಾಲೀಕ ಆರಂಭದಲ್ಲಿ ಯಾವ ಆರ್.ಟಿ.ಒ ದಿಂದ ಬೈಕ್ ಅನ್ನು ನೊಂದಾಯಿಸಿದ್ದರೋ ಅಲ್ಲಿಯೇ ನೀವು ಬೈಕ್ ಮಾಲೀಕತ್ವದ ವರ್ಗಾವಣೆಗಾಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ಹಂತ 2 - ಆರ್.ಸಿ. ಇನ್ಶೂರೆನ್ಸ್, ಎಮಿಷನ್ ಟೆಸ್ಟ್, ತೆರಿಗೆ ಪಾವತಿ ರಸೀದಿಗಳು, ಮೂರು ಪಾಸ್ಪೋರ್ಟ್ ಸೈಜ್ ಫೋಟೋಗಳು ಮಾರಾಟಗಾರರ ವಿಳಾಸದ ಸಾಕ್ಷಿ ಇತ್ಯಾದಿಗಳ ಮೂಲ ಪ್ರತಿಗಳೊಂದಿಗೆ ಫಾರ್ಮ್ 29 ಮತ್ತು ಫಾರ್ಮ್ 30 ಅನ್ನು ಸಾರಿಗೆ ಕಛೇರಿಯ ನಿರ್ದೇಶನಾಲಯದಲ್ಲಿ ಸಲ್ಲಿಸಿ.

ಹಂತ 3 - ನೋದಣಿ ಅಧಿಕಾರಿಗಳಿಂದ ಎಲ್ಲಾ ಪರಿಶೀಲನೆಗಳು ಮುಗಿದ ನಂತರ, ಬೈಕ್ ನ ಇನ್ಶೂರೆನ್ಸ್ ಹಾಗೂ ಮಲೀಕತ್ವವನ್ನು ನಿಮಗೆ 14 ದಿನಗಳ ಒಳಗೆ ವರ್ಗಾಯಿಸಲಾಗುತ್ತದೆ.

ಸುಲಭ ಅಲ್ಲವೇ? ಹಾಗೂ ನಿಮಗೆ ಬೇಕಾಗುವ ದಾಖಲೆಗಳು ಈ ರೀತಿ ಇವೆ:

  • ಮಾರಾಟಗಾರನ ಸಹಿಯೊಂದಿಗೆ ಫಾರ್ಮ್ 29 ಅನ್ನು ಭರ್ತಿ ಮಾಡಬೇಕಾಗುತ್ತದೆ.  2 ಪ್ರತಿಗಳು.
  • ಎರಡು ಪಾರ್ಟೀ ಗಳು ಫಾರ್ಮ್  30  ಅನ್ನು ಸಹಿ ಮಾಡಬೇಕಾಗುತ್ತದೆ ಚಾಸಿಸ್ ಪ್ರಿಂಟ್ ನೊಂದಿಗೆ : 1 ಪ್ರತಿ
  • ಬೈಕ್ ಅನ್ನು ಇನ್ನೊಂದು ಸ್ಥಳ ಅಥವಾ ಆರ್.ಟಿ.ಒ ಇಂದ ತರಲಾಗಿದ್ದರೆ ಅವನು/ಅವಳು ಎನ್.ಒ.ಸಿ ಅನ್ನು ನೀಡಬೇಕಾಗುತ್ತದೆ.
  • ಬೈಕ್ ಅನ್ನು ಮಾರಾಟಗಾರನು ಸಾಲದ ಮೇಲೆ ಖರೀದಿಸಿದ್ದರೆ, ಬ್ಯಾಂಕರ್ ನ ಎನ್.ಒ.ಸಿ ಯನ್ನು ಒದಗಿಸಬೇಕಾಗುತ್ತದೆ.
  • ಮೂಲ ಆರ್.ಸಿ
  • ಇನ್ಶೂರೆನ್ಸ್ ಪ್ರತಿ
  • ಎಮಿಷನ್ ಟೆಸ್ಟ್
  • ತೆರಿಗೆ ಪಾವತಿ ರಸೀದಿಗಳು
  • ಮಾರಾಟಗಾರನ ವಿಳಾಸದ ಸಾಕ್ಷಿ
  • ಮೂರು ಪಾಸ್ಪೋರ್ಟ್ ಸೈಜ್ ಫೋಟೋಗಳು

ಕೇಂದ್ರ ಮೋಟಾರ್ ವಾಹನಗಳ ನಿಯಮ 1989, ರ ನಿಯಮ 81 ರ ಪ್ರಕಾರ, ಈ ಮೇಲಿನ ದಾಖಲೆಗಳನ್ನು ನೊಂದಣಿ ಶುಲ್ಕದೊಂದಿಗೆ ನೊಂದಣಿ ಅಧಿಕಾರಿಗಳಿಗೆ ನೀಡಬೇಕಾಗುತ್ತದೆ.

ಬೈಕ್ ಇನ್ಶೂರೆನ್ಸ್ ಅನ್ನು ವರ್ಗಾಯಿಸುವುದು ಹೇಗೆ?

ಸೂಕ್ತ  ಬೈಕ್ ಇನ್ಶೂರೆನ್ಸ್ ಅನ್ನು ವರ್ಗಾಯಿಸುವುದು ಕೂಡಾ ಮುಖ್ಯವಾಗಿದೆ. ನೀವು ಬೈಕ್ ನ ಮಾಲೀಕತ್ವದ ವರ್ಗಾವಣೆ ಸಂದರ್ಭದಲ್ಲಿ ಎಲ್ಲಾ ಪ್ರಕ್ರಿಯೆಗಳನ್ನು ಸರಿಯಾಗಿ ಪೂರ್ಣಗೊಳಿಸಿದ್ದೀರಿ ಎಂದು ಖಚಿತಪಡಿಸಬೇಕು. ಇದು ಬೈಕ್ ಇನ್ಶೂರೆನ್ಸ್ ನ ವರ್ಗಾವಣೆಯ ಪ್ರಕ್ರಿಯೆಯನ್ನು ಸರಳವಾಗಿಸುತ್ತದೆ.

ಬೈಕ್ ಇನ್ಶೂರೆನ್ಸ್ ಅನ್ನು ವರ್ಗಾಯಿಸಲು ನೀವು ಇದನ್ನು ಮಾಡುವ ಅಗತ್ಯವಿದೆ:

  • ಬೈಕ್ ಮಾಲೀಕತ್ವದ ವರ್ಗಾವಣೆಯ 15 ದಿನಗಳೊಳಗೆ ಬೈಕ್ ಮಾಲೀಕನು ಇನ್ಶೂರೆನ್ಸ್ ಕಂಪನಿಯಲ್ಲಿ ಬೈಕ್ ಇನ್ಶೂರೆನ್ಸ್ ನ ವರ್ಗಾವಣೆಗಾಗಿ ಅರ್ಜಿ ಸಲ್ಲಿಸಬೇಕು.
  • ನೋಂದಣಿ ಸರ್ಟಿಫಿಕೇಟ್, ಮಾಲೀಕತ್ವ ವರ್ಗಾವಣೆಯ ದಿನಾಂಕ, ಒರಿಜಿನಲ್ ಇನ್ಶೂರೆನ್ಸ್ ಪಾಲಿಸಿಯ ವಿವರ, ವಾಹನದ ವಿವರಗಳು, ಡೀಲರ್ ನ ಹೆಸರು ಹಾಗೂ ಪಾವತಿಸಿದ ಪ್ರೀಮಿಯಂ ಗಳಂತಹ ಅಗತ್ಯ ದಾಖಲೆಗಳನ್ನು ಇಟ್ಟುಕೊಳ್ಳಬೇಕಾಗುತ್ತದೆ.
  • ಮಾಲೀಕನ ವಯಕ್ತಿಕ ವಿವರಗಳೊಂದಿಗೆ ಖರೀದಿ ಮಾಡುವವರು ಕೂಡಾ ಅವನ/ಅವಳ ವಯಕ್ತಿಕ ಐಡಿ ಅಂದರೆ ಪ್ಯಾನ್ ಕಾರ್ಡ್ ಅಥವಾ ಆಧಾರ್ ಕಾರ್ಡ್, ಚಾಲಕ ಲೈಸನ್ಸ್ ಇತ್ಯಾದಿಗಳನ್ನು ಇನ್ಶೂರೆನ್ಸ್ ವರ್ಗಾವಣೆಯ ದಾಖಲೆಗಳಿಗಾಗಿ ಸಲ್ಲಿಸಬೇಕಾಗುತ್ತದೆ. ಒಮ್ಮೆ ಇನ್ಶೂರರ್ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ಮೇಲೆ, ಪಾಲಿಸಿಯ ಹೆಸರನ್ನು ಹೊಸ ಮಾಲೀಕನ ಹೆಸರಿನೊಂದಿಗೆ ಬದಲಾಯಿಸಲಾಗುತ್ತದೆ.
  • ಬೈಕ್ ನ ಮಾಲೀಕ ಇನ್ಶೂರೆನ್ಸ್ ವರ್ಗಾವಣೆಯ ಸಂದರ್ಭದಲ್ಲಿ ಥರ್ಡ್ ಪಾರ್ಟೀ ಇನ್ಶೂರೆನ್ಸ್ ಅನ್ನು ಸಲ್ಲಿಸಬೇಕಾಗುತ್ತದೆ. ಯಾಕೆಂದರೆ ಇದು ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕ್ಯಾಲ್ಕುಲೇಟ್ ಮಾಡಲು ಇದರ ಅಗತ್ಯವಿರುತ್ತದೆ.
  • ಮಾಲೀಕನು ಪ್ರಸ್ತುತ ಬೈಕ್ ನೊಂದಿಗೆ ಅವನು/ಅವಳು ಹೊಸ ಬೈಕಿಗಾಗಿ ಇನ್ಶೂರೆನ್ಸ್ ಖರೀದಿಸುವಾಗ ಅಥವಾ ರಿನ್ಯೂ ಮಾಡುವಾಗ ಎನ್ ಸಿ ಬಿ(NCB )  ಸರ್ಟಿಫಿಕೇಟ್ ಅನ್ನು ಸಲ್ಲಿಸಿ ಪ್ರೀಮಿಯಂ ನಲ್ಲಿ ರಿಯಾಯಿತಿ ಪಡೆಯುವ ಮೂಲಕ ನೋ ಕ್ಲೈಮ್ ಬೋನಸ್ ನ ಲಾಭಗಳನ್ನು ಆನಂದಿಸಬಹುದು.

ನಿಮ್ಮ ಬಳಕೆಯಾಗಿರುವ ಬೈಕಿಗಾಗಿ ಹೊಸ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿ

ನಿಮ್ಮ ಸೆಕೆಂಡ್ ಹ್ಯಾಂಡ್ ಬೈಕ್ ಯಾವುದೇ ಬೈಕ್ ಇನ್ಶೂರೆನ್ಸ್ ಅನ್ನು ಹೊಂದದೇ ಇದ್ದರೆ ನೀವೇ ಅದನ್ನು ಆಯ್ಕೆ ಮಾಡಬೇಕಾಗುತ್ತದೆ, ಅದು ಕಡ್ಡಾಯವಾಗಿರುವ ಕಾರಣ. ಸೆಕೆಂಡ್ ಹ್ಯಾಂಡ್ ಬೈಕಿಗೆ ಶಿಫಾರಸು ಮಾಡಲಾದ ಪಾಲಿಸಿಯು ಸಮಗ್ರ ಇನ್ಶೂರೆನ್ಸ್ ಪಾಲಿಸಿಯಾಗಿದ್ದು, ಇದು ಗರಿಷ್ಠ ಕವರೇಜ್ ನೊಂದಿಗೆ ನಿಮ್ಮ ಲಾಭಕ್ಕಾಗಿ ಕಸ್ಟಮೈಜ್ ಮಾಡಲಾದ ಆಡ್ ಆನ್ ಗಳನ್ನೂ ನೀಡುತ್ತದೆ. ನೀವು ಬೈಕ್ ಇನ್ಶೂರೆನ್ಸ್ ಅನ್ನು ಆನ್ಲೈನ್ ಆಗಿ ಪಡೆಯಬಹುದು ಅಥವಾ ಸೂಕ್ತ ದಾಖಲೆಗಳೊಂದಿಗೆ ಇನ್ಶೂರೆನ್ಸ್ ಕಂಪನಿಗೆ ಭೇಟಿ ನೀಡಿ ಪಾಲಿಸಿಗಳ ಸಾಲಿನಿಂದ ನಿಮ್ಮ ಬೈಕಿಗೆ ಸರಿಹೊಂದುವ ಪಾಲಿಸಿಯನ್ನು ಖರೀದಿಸಬಹುದು.

ಬಳಕೆಯಾಗಿರುವ ಬೈಕ್ ಗಳಿಗಾಗಿ ಪಾಲಿಸಿಯ ಪ್ರಕಾರಗಳು

ಥರ್ಡ್ ಪಾರ್ಟೀ-  ಹೆಸರೇ ಸೂಚಿಸುವಂತೆ ಥರ್ಡ್ ಪಾರ್ಟೀ ಇನ್ಶೂರೆನ್ಸ್ ಥರ್ಡ್ ಪಾರ್ಟೀ ಹಾನಿಗಳನ್ನು ಹಾಗೂ ಮಾಲೀಕನ ವಯಕ್ತಿಕ ಅಪಘಾತವನ್ನು ಕವರ್ ಮಾಡುತ್ತದೆ.

ಏನೆಲ್ಲಾ ಕವರ್ ಆಗಿರುತ್ತದೆ?

  • ಥರ್ಡ್ ಪಾರ್ಟೀಯ ಹಾನಿ ಅಥವಾ ಸಾವು
  • ಇನ್ನೊಬ್ಬರ ಸ್ವತ್ತು ಅಥವಾ ವಾಹನಕ್ಕೆ ಹಾನಿ
  • ಮಾಲಕ-ಚಾಲಕನಿಗೆ ಅನಿಯಮಿತ ವಯಕ್ತಿಕ ಹಾನಿ ಕವರೇಜ್ ನ ಆಯ್ಕೆ, ಈಗಾಗಲೇ ಇಲ್ಲದಿದ್ದರೆ.

ಏನೆಲ್ಲಾ ಕವರ್ ಆಗಿರುವುದಿಲ್ಲ?

  • ಭಾಗಗಳ ಡಿಪ್ರಿಸಿಯೇಷನ್ ಹಾಗೂ ಬ್ರೇಕ್ಡೌನ್ ಅಸಿಸ್ಟೆನ್ಸ್ ಇತ್ಯಾದಿ ಆಡ್ ಆನ್ ಗಳು.
  • ಅಪಘಾತ, ಕಳವು ಬೆಂಕಿ ಇತ್ಯಾದಿಗಳ ಸಂದರ್ಭದಲ್ಲಿ ಸ್ವಂತ ವಾಹನಕ್ಕಾದ ಹಾನಿ.ನಾವು ಬಹುತೇಕ ಗ್ರಾಹಕರಿಗೆ ಸ್ಟಾಂಡರ್ಡ್ ಪ್ಯಾಕೇಜ್ ಅಥವಾ ಸಮಗ್ರ ಇನ್ಶೂರೆನ್ಸ್ ಪಾಲಿಸಿಯನ್ನು ಶಿಫಾರಸಿ ಮಾಡುತ್ತೇವೆ. ಆದರೆ ನೀವು ಅಪರೂಪಕ್ಕೊಮ್ಮೆ ಬೈಕ್ ಓಡಿಸುತ್ತಿದ್ದರೆ ಅಥವಾ ನಿಮ್ಮ ಬೈಕ್ ಈಗಾಗಲೇ ತುಂಬಾ ಹಳೆಯದಾಗಿದ್ದರೆ, ಕೇವಲ ಥರ್ಡ್ ಪಾರ್ಟೀ ಹೊಣೆಗಾರಿಕೆ ಮಾತ್ರದ ಇನ್ಶೂರೆನ್ಸ್ ಕೂಡಾ ಕೆಟ್ಟ ವಿಚಾರವೇನಲ್ಲ.

ಕಾಂಪ್ರೆಹೆನ್ಸಿವ್  ಪಾಲಿಸಿ - ಈ ಪಾಲಿಸಿಯು ಥರ್ಡ್ ಪಾರ್ಟೀ ಹಾನಿಗಳನ್ನು, ಅಪಘಾತದಿಂದ ನಿಮ್ಮ ಬೈಕಿಗಾದ ಹಾನಿ ಅಥವಾ ಮಾಲೀಕನಿಗಾದ ವಯಕ್ತಿಕ ಅಪಘಾತಗಳನ್ನು ಕವರ್ ಮಾಡುತ್ತದೆ. ಈ ಸಮಗ್ರ ಅಥವಾ ಸ್ಟಾಂಡರ್ಡ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಬೈಕಿಗೆ ಹಾಗೂ ಖಂಡಿತವಾಗಿಯೂ ನಿಮ್ಮ ಜೇಬಿಗೆ ಉತ್ತಮ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ.

ಏನೆಲ್ಲಾ ಕವರ್ ಆಗಿರುತ್ತದೆ?

  • ಥರ್ಡ್ ಪಾರ್ಟೀ ಇನ್ಶೂರೆನ್ಸ್ ನ ಎಲ್ಲಾ ಲಾಭಗಳು ಅಂದರೆ ಥರ್ಡ್ ಪಾರ್ಟೀ ಸ್ವತ್ತು ಅಥವಾ ವಾಹನಕ್ಕೆ ಹಾನಿ ಹಾಗೂ ಥರ್ಡ್ ಪಾರ್ಟೀಗಾದ ವಯಕ್ತಿಕ ಹಾನಿ ಉದಾಹರಣೆಗೆ ಆಸ್ಪತ್ರೆ ದಾಖಲಾತಿ, ಸಾವು ಅಥವಾ ಅಂಗವೈಕಲ್ಯ.
  • ಹಾಗೂ ಅಪಘಾತ, ಬೆಂಕಿ, ಕಳವುಗಳಿಂದ ಸ್ವಂತ ವಾಹನಕ್ಕಾದ ಹಾನಿ.
  • ಮಾಲಕ-ಚಾಲಕನಿಗೆ ಅನಿಯಮಿತ ವಯಕ್ತಿಕ ಹಾನಿ ಕವರೇಜ್ ನ ಆಯ್ಕೆ, ಈಗಾಗಲೇ ಇಲ್ಲದಿದ್ದರೆ. 

ಬಳಕೆಯಾಗಿರುವ ಬೈಕ್ ಇನ್ಶೂರೆನ್ಸ್ ಗೆ ಲಭ್ಯವಿರುವ ಆಡ್ ಆನ್ ಕವರ್ ಗಳು

ನಿಮ್ಮ ಸೆಕೆಂಡ್-ಹ್ಯಾಂಡ್ ಬೈಕ್ ನ ಸಂಪೂರ್ಣ ಸುರಕ್ಷತೆಗಾಗಿ ನಾವು ನಿಮಗೆ ಸರಿಯಾದ ಆಡ್ ಆನ್ ಗಳನ್ನು ಒದಗಿಸುತ್ತೇವೆ. ಗರಿಷ್ಠ ಲಾಭಗಳನ್ನು ಪಡೆಯಲು ನಿಮ್ಮ ಪಾಲಿಸಿಯೊಂದಿಗೆ ಉತ್ತಮ ಬೈಕ್ ಇನ್ಶೂರೆನ್ಸ್ ಆಡ್ ಆನ್ ಗಳ ಆಯ್ಕೆಯನ್ನು ಮಾಡಿ.

  • ಭಾಗಗಳ ಡಿಪ್ರಿಸಿಯೇಷನ್ ಕವರ್( ಶೂನ್ಯ ಡೆಪ್/ಬಂಪರ್ ಟು ಬಂಪರ್) – ಸಮಯ ಕಳೆದಂತೆ, ನಿಮ್ಮ ಬೈಕಿನ ಮೌಲ್ಯವು ಕುಸಿಯುತ್ತದೆ, ಇದರಿಂದ ಕ್ಲೈಮ್ ಸಂದರ್ಭದಲ್ಲಿ ಇದರ ಡಿಪ್ರಿಸಿಯೇಷನ್ ಅನ್ನು ಪರಿಗಣಿಸಿ ಅದಕ್ಕಾಗಿ ಶುಲ್ಕವನ್ನು ವಿಧಿಸಲಾಗುತ್ತದೆ. ಆದರೆ ಶೂನ್ಯ ಡಿಪ್ರಿಸಿಯೇಷನ್ ಕವರ್ ಡಿಪ್ರಿಸಿಯೇಷನ್ ಅನ್ನು ಅರಿಗಣಿಸದೆಯೇ ಡಿಜಿಟ್ ನ ಅಧಿಕೃತ ವರ್ಕ್ ಶಾಪ್ ಗಳಲ್ಲಿ ರಿಪೇರಿ ಅದರ ಅಥವಾ ಬದಲಾವಣೆಯ ಸಂಪೂರ್ಣ ವೆಚ್ಚವನ್ನು ನಿಮಗೆ ಒದಗಿಸುತ್ತದೆ.
  • ಗ್ರಾಹಕ ಬಳಕೆಯ ಕವರ್ - ಈ ಆಡ್-ಆನ್ ನಲ್ಲಿ ಭಾಗಗಳಾದ ಸ್ಕ್ರೂ, ಎಂಜಿನ್ ಆಯಿಲ್, ನಟ್, ಬೋಲ್ಟ್, ಗ್ರೀಸ್ ನ ಬದಲಾವಣೆಯ ವೆಚ್ಚವನ್ನು ಕವರ್ ಮಾಡಲಾಗುತ್ತದೆ.
  • ಎಂಜಿನ್ ಹಾಗೂ ಗೇರ್ ಬಾಕ್ಸ್ ಸಂರಕ್ಷಣಾ ಕವರ್ - ಒಂದು ಅಪಘಾತದಿಂದ ಎಂಜಿನ್ ಗೆ ಹಾನಿಯಾದರೆ, ಇದನ್ನು ಸ್ಟಾಂಡರ್ಡ್ ಪ್ಯಾಕೇಜ್ ಪಾಲಿಸಿಯಲ್ಲಿ ಕವರ್ ಮಾಡಲಾಗುತ್ತದೆ. ಆದರೆ ಅದು ಪರಿಣಾಮಕ ಹಾನಿಯಾಗಿದ್ದರೆ ಅದನ್ನು ಕವರ್ ಮಾಡಲಗುವುದಿಲ್ಲ. ಇಲ್ಲಿ ಈ ಆದ್-ಆನ್ ಉಪಯೋಗಕ್ಕೆ ಬರುತ್ತದೆ, ಅಪಘಾತ ಇಲ್ಲದಿದ್ದರೂ ರಿಪೇರಿ ವೆಚ್ಚಗಳನ್ನು ಕವರ್ ಮಾಡುತ್ತದೆ.
  • ರಿಟರ್ನ್ ಟಿ ಇನ್ವಾಯ್ಸ್ ಕವರ್ - ನಿಮ್ಮ ಬೈಕ್ ಕಳವಾಗಿದ್ದರೆ ಅಥವಾ ದುರಸ್ತಿಗೂ ಮೀರಿ ಹಾನಿಯಾಗಿದ್ದರೆ, ಅದರ ಅಂದಾಜು ರಿಪೇರಿ ಲೆಕ್ಕವು ಅದರ ಐಡಿವಿಯ 75% ಕ್ಕಿಂತಲೂ ಹೆಚ್ಚಿರುತ್ತದೆ. ನಾವು ಅಂತಹದ್ದೇ ಹೊಸ ಬೈಕ್ ಅನ್ನು ಖರೀದಿಸುವ ವೆಚ್ಚವನ್ನು ಕವರ್ ಮಾಡುತ್ತೇವೆ. ಅಂದರೆ ನಿಮಗೆ ಎಕ್ಸ್ ಶೋರೂಂ ಬೆಲೆ ಅಥವಾ ಕೊನೆ ಇನ್ವಾಯ್ಸ್ ನ ಮೊತ್ತವು ದೊರೆಯುತ್ತದೆ ಐಡಿವಿ( ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ) ಇಲ್ಲದೆ. ಹಾಗೂ, ನಾವು ಹೊಸ ಬೈಕಿನ ನೊಂದಣಿ ಶುಲ್ಕ ಹಾಗೂ ರಸ್ತೆ ತೆರಿಗೆಯನ್ನೂ ಕವರ್ ಮಾಡುತ್ತೇವೆ.
  • ಬ್ರೇಕ್ಡೌನ್ ಅಸಿಸ್ಟೆನ್ಸ್ - ರಸ್ತೆಯಲ್ಲಿ ಬ್ರೇಕ್ಡೌನ್ ಆದರೆ ಹಾಗೂ ಅದು ನಗರದ ಕೇಂದ್ರ ಭಾಗದಿಂದ 500 ಕಿಮಿ ಒಳಗೆ ಇದ್ದರೆ  24*7 ಅಸಿಸ್ಟೆನ್ಸ್ ಪಡೆಯಿರಿ

ಇನ್ನಷ್ಟು ಪ್ರಶ್ನೆಗಳಿದ್ದರೆ ನಮ್ಮನ್ನು ಸಂಪರ್ಕಿಸಿ. ನಾವು ಸಂತೋಷದಿಂದ ಸಹಾಯ ಮಾಡುವೆವು!