ಹೆಲ್ತ್ ಇನ್ಶೂರೆನ್ಸ್ ಆನ್‌ಲೈನ್‌ನಲ್ಲಿ ಖರೀದಿಸಿ

ಡಿಜಿಟ್ ಹೆಲ್ತ್ ಇನ್ಶೂರೆನ್ಸ್ ಗೆ ಬದಲಾಯಿಸಿ.

ಭಾರತದಲ್ಲಿ ಅಂಗವಿಕಲರಿಗಾಗಿ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸುವಾಗ ಪರಿಗಣಿಸಬೇಕಾದ ವಿಷಯಗಳು

2011 ರ ಜನಗಣತಿಯ ಪ್ರಕಾರ, ಭಾರತದಲ್ಲಿ 26.8 ಮಿಲಿಯನ್ ಜನರು ಅಂಗವಿಕಲರು (PwDs) ಇದ್ದಾರೆ-ಇದು ದೇಶದ ಜನಸಂಖ್ಯೆಯ ಸುಮಾರು 2.2% ರಷ್ಟು ಇದೆ, ಆದರೂ ಇತರ ಮೂಲಗಳು ಹೆಚ್ಚಿನ ಅಂದಾಜುಗಳನ್ನು ಹೊಂದಿವೆ. ನೀವು ದೈಹಿಕ ಅಥವಾ ಮಾನಸಿಕ ಅಶಕ್ತತೆಯನ್ನು ಹೊಂದಿದ್ದರೆ, ದೈನಂದಿನ ಜೀವನವು ಮತ್ತಷ್ಟು ಕಷ್ಟಕರವಾಗುತ್ತದೆ. ಹೆಚ್ಚಿನ ಮೆಡಿಕಲ್ ವೆಚ್ಚಗಳಿಂದ ಉಂಟಾಗುವ ಆರ್ಥಿಕ ಒತ್ತಡವನ್ನಂತೂ ಹೇಳುವಂತಿಲ್ಲ.

ಮೆಡಿಕಲ್ ವೆಚ್ಚಗಳಿಂದ ಆರ್ಥಿಕ ಭದ್ರತೆಯನ್ನು ಪಡೆಯಲು ಹೆಲ್ತ್ ಇನ್ಶೂರೆನ್ಸ್ ಎನ್ನುವುದು ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿರುವುದರಿಂದ, "ಭಾರತದಲ್ಲಿ ಅಂಗವಿಕಲರಿಗೆ ಯಾವುದಾದರೂ ಹೆಲ್ತ್ ಇನ್ಶೂರೆನ್ಸ್ ಇದೆಯೇ?" ಎಂದು ಕೇಳಿದರೆ ನೀವು ಆಶ್ಚರ್ಯ ಪಡಬಹುದು. ಹೌದು, ಖಂಡಿತವಾಗಿಯೂ ಇದೆಯೆಂದು ನಾವು ನಿಮಗೆ ಭರವಸೆ ನೀಡುತ್ತೇವೆ.

ಅಂಗವಿಕಲಗರಿಗಾಗಿ ವಿವಿಧ ಸರ್ಕಾರಿ ಯೋಜನೆಗಳಿವೆ. ಆದರೆ ಇವುಗಳು ಸೀಮಿತ ವ್ಯಾಪ್ತಿಯನ್ನು ಹೊಂದಿವೆ. ಕೆಲವು ಖಾಸಗಿ ಇನ್ಶೂರೆನ್ಸ್ ಪೂರೈಕೆದಾರರು ಸಹ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳನ್ನು ನೀಡುತ್ತಾರೆ. ಆದರೂ ಅವುಗಳು ಹೆಚ್ಚು ದುಬಾರಿಯಾಗಿದೆ. ಅಂಗವಿಕಲ ವ್ಯಕ್ತಿಗೆ ಲಭ್ಯವಿರುವ ಇನ್ಶೂರೆನ್ಸ್ ಪ್ರಯೋಜನಗಳನ್ನು ನಾವೀಗ ನೋಡೋಣ:

ಹೆಲ್ತ್ ಇನ್ಶೂರೆನ್ಸ್‌ನಲ್ಲಿ ಅಂಗವೈಕಲ್ಯವನ್ನು ಹೇಗೆ ನಿರ್ಧರಿಸಲಾಗುತ್ತದೆ?

ಭಾರತದಲ್ಲಿ, ಅಂಗವಿಕಲರ (ಸಮಾನ ಅವಕಾಶಗಳು, ಹಕ್ಕುಗಳ ರಕ್ಷಣೆ ಮತ್ತು ಪೂರ್ಣ ಭಾಗವಹಿಸುವಿಕೆ) ಕಾಯಿದೆ, 1955 ರ ಅಡಿಯಲ್ಲಿ, ಕನಿಷ್ಠ 40% ದುರ್ಬಲತೆಯನ್ನು ಹೊಂದಿರುವ ವ್ಯಕ್ತಿಯನ್ನು ಅಂಗವಿಕಲ ಎಂದು ಪರಿಗಣಿಸಲಾಗುತ್ತದೆ. ಅವರು ಒಂದಕ್ಕಿಂತ ಹೆಚ್ಚು ರೀತಿಯ ಅಂಗವೈಕಲ್ಯವನ್ನು ಹೊಂದಿದ್ದರೆ ಅಥವಾ 80% ಕ್ಕಿಂತ ಹೆಚ್ಚು ದುರ್ಬಲತೆಯನ್ನು ಹೊಂದಿದ್ದರೆ, ಅವರನ್ನು ತೀವ್ರ ಅಂಗವಿಕಲರು ಎಂದು ಪರಿಗಣಿಸಲಾಗುತ್ತದೆ.

ಭಾರತದಲ್ಲಿ ವರ್ಗೀಕರಿಸಲಾದ ಮೂರು ಪ್ರಮುಖ ವಿಧದ ಅಂಗವೈಕಲ್ಯಗಳು ಇಲ್ಲಿವೆ:

  • ಜನ್ಮಜಾತ ಅಂಗವೈಕಲ್ಯ - ಇವುಗಳು ಆನುವಂಶಿಕ ಕಾರಣಗಳಿಂದಾಗಿ ಅಥವಾ ಕೆಲವೊಂದು ಪರಿಸರದ ಅಂಶಗಳಿಂದ ಹುಟ್ಟಿನಿಂದಲೇ ಇರುವ ಪರಿಸ್ಥಿತಿಗಳಾಗಿವೆ. ಕೆಲವು ಸಾಮಾನ್ಯ ಉದಾಹರಣೆಗಳೆಂದರೆ ಹೃದಯದ ಸ್ಥಿತಿಗಳು, ಸಿಸ್ಟಿಕ್ ಫೈಬ್ರೋಸಿಸ್, ಸ್ಪೈನಾ ಬೈಫಿಡಾ, ಡೌನ್ ಸಿಂಡ್ರೋಮ್, ಸೆರೆಬ್ರಲ್ ಪಾಲ್ಸಿ, ಇತ್ಯಾದಿ.
  • ಅಪಘಾತದ ಅಂಗವೈಕಲ್ಯ - ವ್ಯಕ್ತಿಯೊಬ್ಬರು ಅಪಘಾತವನ್ನು ಎದುರಿಸಿದಾಗ ಅಂತಹ ಪರಿಸ್ಥಿತಿಗಳು ಸಂಭವಿಸುತ್ತವೆ. ಅವು ವ್ಯಕ್ತಿಯ ಒಟ್ಟು, ಭಾಗಶಃ ಅಥವಾ ತಾತ್ಕಾಲಿಕ ಅಂಗವೈಕಲ್ಯತೆಗೆ ಕಾರಣವಾಗುತ್ತದೆ. ಇದು ಕೈ ಅಥವಾ ಕಾಲು ಮುರಿತ, ಕೈ ಅಥವಾ ಕಾಲಿಗುಂಟಾಗುವ ಹಾನಿ ಅಥವಾ ಶ್ರವಣ ನಷ್ಟ, ಪಾರ್ಶ್ವವಾಯು ಇತ್ಯಾದಿಗಳನ್ನು ಒಳಗೊಂಡಿರಬಹುದು.
  • ಮಾನಸಿಕ ಅಂಗವೈಕಲ್ಯ - ಇದು ವ್ಯಕ್ತಿಯ ಮನಸ್ಥಿತಿ, ನಡವಳಿಕೆ, ಆಲೋಚನೆ ಮತ್ತು ಮಾನಸಿಕ ಸಮತೋಲನದ ಮೇಲೆ ಪರಿಣಾಮ ಬೀರುವ ಮಾನಸಿಕ ಅಸ್ವಸ್ಥತೆ ಅಥವಾ ಅನಾರೋಗ್ಯವನ್ನು ಸೂಚಿಸುತ್ತದೆ. ಅವುಗಳಲ್ಲಿ ಖಿನ್ನತೆ, ಬೈಪೋಲಾರ್ ಡಿಸಾರ್ಡರ್, ಆತಂಕ, ಬುದ್ಧಿಮಾಂದ್ಯತೆ, ಹಾಗೆಯೇ ಸ್ಕಿಜೋಫ್ರೇನಿಯಾದಂತಹ ಮನೋಮೆಡಿಕಲ್ ಅಸ್ವಸ್ಥತೆಗಳು ಮತ್ತು ಆಟಿಸಂನಂತಹ ಬೆಳವಣಿಗೆಯ ಅಸ್ವಸ್ಥತೆಗಳು ಸೇರಿವೆ.

ಅಂಗವಿಕಲ ವ್ಯಕ್ತಿಗಳಿಗೆ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸುವಾಗ ಪರಿಗಣಿಸಬೇಕಾದ ಪ್ರಮುಖ ವಿಷಯಗಳು

ನೀವು ಸರ್ಕಾರಿ ಪ್ರಾಯೋಜಿತ ಹೆಲ್ತ್ ಇನ್ಶೂರೆನ್ಸ್ ಯೋಜನೆಯನ್ನು ಖರೀದಿಸುತ್ತಿರಲಿ ಅಥವಾ ಖಾಸಗಿ ಇನ್ಶೂರೆನ್ಸ್ ಪೂರೈಕೆದಾರರೊಂದಿಗೆ ಖರೀದಿಸಲು ಬಯಸುತ್ತಿರಲಿ ಆದರೆ, ಅಂಗವಿಕಲ ವ್ಯಕ್ತಿಗಳಿಗೆ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವ ಮೊದಲು, ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಪ್ರಮುಖ ವಿಷಯಗಳಿವೆ ಇಲ್ಲಿವೆ:

1. ಸರಿಯಾದ ಮಾಹಿತಿಯನ್ನು ತಿಳಿಸಿ

ನೀವು ಹೆಲ್ತ್ ಇನ್ಶೂರೆನ್ಸ್‌ಗಾಗಿ ಮಾಹಿತಿಯನ್ನು ಭರ್ತಿ ಮಾಡುವಾಗ, ನೀವು ನಿಮ್ಮ ಅಂಗವೈಕಲ್ಯಗಳನ್ನು ಮತ್ತು ಈ ಮೊದಲೇ ಅಸ್ತಿತ್ವದಲ್ಲಿರುವ ಯಾವುದೇ ಪರಿಸ್ಥಿತಿಗಳನ್ನು ಸರಿಯಾಗಿ ತಿಳಿಸಬೇಕು. ಹಾಗೆ ಮಾಡದಿದ್ದರೆ ಅದು ಕ್ಲೈಮ್‌ಗಳ ಸಮಯದಲ್ಲಿ ನಿಮ್ಮ ಮೇಲೆ ಪರಿಣಾಮ ಬೀರಬಹುದು.

2. ಸರಿಯಾದ ಡಾಕ್ಯುಮೆಂಟುಗಳನ್ನು ಹೊಂದಿರಿ

ನೀವು ಕೆಲವು ಡಾಕ್ಯುಮೆಂಟುಗಳನ್ನು ಅಥವಾ ಮೆಡಿಕಲ್ ವರದಿಗಳನ್ನು ಸಲ್ಲಿಸಬೇಕಾಗಬಹುದು. ಇದು ಸಾಮಾನ್ಯವಾಗಿ ಅಂಗವೈಕಲ್ಯದ ದುರ್ಬಲತೆಯ ಮಟ್ಟವನ್ನು ಅರ್ಥಮಾಡಿಕೊಳ್ಳಲು ವೈದ್ಯರಿಂದ ಪಡೆದಂತಹ ವರದಿಯನ್ನು ಒಳಗೊಂಡಿರುತ್ತದೆ (ಅಂದರೆ ದೈನಂದಿನ ಕೆಲಸಗಳನ್ನು ಮಾಡಲು ವ್ಯಕ್ತಿಯ ಸಾಮರ್ಥ್ಯದ ಮೇಲೆ ಇದು ಎಷ್ಟು ಪರಿಣಾಮ ಬೀರುತ್ತದೆ).

ನೋಂದಾಯಿತ ವೈದ್ಯರಿಂದ ಅಧಿಕೃತ ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚುವರಿ ಮೆಡಿಕಲ್ ಪರೀಕ್ಷೆಗಳನ್ನು ಮಾಡಿಸಲು ನಿಮ್ಮನ್ನು ಕೇಳಬಹುದು ಹಾಗೂ ಈ ಪರೀಕ್ಷೆಗಳು ಮತ್ತು ವರದಿಗಳ ಆಧಾರದ ಮೇಲೆ ಇನ್ಶೂರೆನ್ಸ್ ಪೂರೈಕೆದಾರರು ನಿಮ್ಮ ಇನ್ಶೂರೆನ್ಸ್ ಅಪ್ಲಿಕೇಶನ್ ಅನ್ನು ಸ್ವೀಕರಿಸಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುತ್ತಾರೆ.

3. ಪ್ರೀಮಿಯಂ ಮೊತ್ತವನ್ನು ಪರಿಗಣಿಸಿ

ಒಮ್ಮೆ ನಿಮ್ಮ ಇನ್ಶೂರೆನ್ಸ್ ಅಪ್ಲಿಕೇಶನ್ ಅನ್ನು ಖಾಸಗಿ ಇನ್ಶೂರೆನ್ಸ್ ಕಂಪನಿಗಳು ಒಪ್ಪಿಕೊಂಡರೆ, ನಿಮ್ಮ ಪಾಲಿಸಿಯ ಪ್ರೀಮಿಯಂ ಅನ್ನು ನಿರ್ಧರಿಸುವುದು ಕಂಪನಿಯವರಿಗೆ ಬಿಟ್ಟಿದ್ದು ಎಂಬುದನ್ನು ನೆನಪಿಡಿ. ಇದು ನಿಮ್ಮ ಅಂಗವೈಕಲ್ಯ, ವಯಸ್ಸು, ಕುಟುಂಬದ ಮೆಡಿಕಲ್ ಇತಿಹಾಸ, ಈ ಮೊದಲೇ ಅಸ್ತಿತ್ವದಲ್ಲಿರುವ ಪರಿಸ್ಥಿತಿಗಳು ಮತ್ತು ಇನ್ನೂ ಅನೇಕ ಅಂಶಗಳನ್ನು ಆಧರಿಸಿ ಬದಲಾಗುತ್ತದೆ. ಹೆಚ್ಚುವರಿಯಾಗಿ, ನಿಮ್ಮ ಪ್ರೀಮಿಯಂನಲ್ಲಿ 18% ರಷ್ಟು ಜಿಎಸ್‌ಟಿ ಅನ್ನು ವಿಧಿಸಲಾಗುತ್ತದೆ.

4. ತೆರಿಗೆ ಪ್ರಯೋಜನಗಳನ್ನು ನೆನಪಿಡಿ

ಹೆಚ್ಚಿನ ಪ್ರೀಮಿಯಂ ಬಗ್ಗೆ ನೀವು ಭಯಪಟ್ಟರೂ, ಅಂಗವಿಕಲ ವ್ಯಕ್ತಿಗಳು ತಮ್ಮ ಹೆಲ್ತ್ ಇನ್ಶೂರೆನ್ಸ್ ಮೇಲೆ ತೆರಿಗೆ ವಿನಾಯಿತಿ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ನೆನಪಿನಲ್ಲಿಡಿ.

ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80U ಭಾಗಶಃ ಅಂಗವಿಕಲರಿಗೆ ₹50,000 ವರೆಗೆ ತೆರಿಗೆ ವಿನಾಯಿತಿಯನ್ನು ಪಡೆಯಲು ಅನುಮತಿಸುತ್ತದೆ. ಹಾಗೆಯೇ ತೀವ್ರ ಅಂಗವಿಕಲ ವ್ಯಕ್ತಿಗಳು ₹1 ಲಕ್ಷದವರೆಗೆ ತೆರಿಗೆ ವಿನಾಯಿತಿಗಳನ್ನು ಪಡೆಯಬಹುದು.

ಮತ್ತು ಸೆಕ್ಷನ್ 80DD ಪ್ರಕಾರ, ಕುಟುಂಬದ ಸದಸ್ಯರು ತಮ್ಮ ಅವಲಂಬಿತ ಅಂಗವಿಕಲ ವ್ಯಕ್ತಿಗಳಿಗಾಗಿ ಇನ್ಶೂರೆನ್ಸ್ ಪ್ರೀಮಿಯಂಗಳ ಮೇಲೆ ಕಡಿತವನ್ನು ಪಡೆಯಬಹುದು.

ಅಂಗವಿಕಲ ವ್ಯಕ್ತಿಗಳಿಗೆ ಹೆಲ್ತ್ ಇನ್ಶೂರೆನ್ಸ್ ಅನ್ನು ಹೇಗೆ ಪಡೆಯುವುದು?

ನಾವು ಮೇಲೆ ಹೇಳಿದಂತೆ, ಅಂಗವಿಕಲತೆ ಹೊಂದಿರುವ ಜನರಿಗಾಗಿ ಕೆಲವು ಹೆಲ್ತ್ ಇನ್ಶೂರೆನ್ಸ್ ಆಯ್ಕೆಗಳಿವೆ.

ಅಪಘಾತದಿಂದಾಗಿ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳನ್ನು, ಹೆಚ್ಚಿನ ರೆಗ್ಯುಲರ್ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳು ಯಾವುದೇ ಹೆಚ್ಚುವರಿ ಷರತ್ತುಗಳನ್ನು ಸೇರಿಸದೆ ಕವರ್ ಮಾಡುತ್ತವೆ. ವಾಸ್ತವವಾಗಿ, ಅವರು ಅಪಘಾತದ ಮೊದಲು ಪರ್ಸನಲ್ ಆ್ಯಕ್ಸಿಡೆಂಟ್ ಕವರ್ ಹೊಂದಿದ್ದರೆ, ಕೆಲವು ಅಂಗವೈಕಲ್ಯದ ಸಂದರ್ಭದಲ್ಲಿ ನೀವು ಹೆಚ್ಚುವರಿ ಆರ್ಥಿಕ ಭದ್ರತೆ ಮತ್ತು ಸ್ಥಿರ ಪ್ರಯೋಜನವನ್ನು ಪಡೆಯುತ್ತೀರಿ.

ಆದಾಗ್ಯೂ, ಜನ್ಮಜಾತ ಮತ್ತು ಮಾನಸಿಕ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳು ಹೆಚ್ಚಿನ ಅಪಾಯದ ಕೆಟಗರಿಯಲ್ಲಿ ಬರುತ್ತಾರೆ. ಹಾಗಾಗಿ ರೆಗ್ಯುಲರ್ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳಲ್ಲಿ ಕವರ್ ಆಗದೇ ಇರಬಹುದು ಅಥವಾ ಭಾಗಶಃ ಕವರೇಜನ್ನು ಮಾತ್ರ ಪಡೆಯುತ್ತಾರೆ ಎಂಬುದನ್ನು ಗಮನಿಸಬೇಕು. ಆದ್ದರಿಂದ, ಅವರು ಉತ್ತಮ ಮೆಡಿಕಲ್ ರಕ್ಷಣೆಗಾಗಿ ಸರ್ಕಾರದ ಯೋಜನೆಗಳೆಡೆಗೆ ನೋಡಬಹುದು.

ಅಂಗವಿಕಲ ವ್ಯಕ್ತಿಗಳಿಗೆ ಸರ್ಕಾರಿ-ಪ್ರಾಯೋಜಿತ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು

ಭಾರತ ಸರ್ಕಾರವು ಅಂಗವಿಕರಿಗಾಗಿ ಎರಡು ವಿಶೇಷ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳನ್ನು ನೀಡುತ್ತದೆ:

  • ನಿರ್ಮಾಲ್ಯ ಹೆಲ್ತ್ ಇನ್ಶೂರೆನ್ಸ್: ಮಾನಸಿಕ ವೈಕಲ್ಯ ಹೊಂದಿರುವ ಜನರಿಗೆ ಮೆಡಿಕಲ್ ಚಿಕಿತ್ಸೆಗಳಿಗಾಗಿ ₹1 ಲಕ್ಷದವರೆಗೆ ಕವರ್ ಮಾಡುತ್ತದೆ. ಇದಕ್ಕೆ ಇನ್ಶೂರೆನ್ಸ್ ಪೂರ್ವ ಪರೀಕ್ಷೆಗಳ ಅಗತ್ಯವಿರುವುದಿಲ್ಲ. ಆದರೆ ಈ ಪಾಲಿಸಿಯನ್ನು ಪಡೆಯಲು ಜನರು ರಾಷ್ಟ್ರೀಯ ಟ್ರಸ್ಟ್‌ಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
  • ಸ್ವಾವಲಂಬನ್ ಹೆಲ್ತ್ ಇನ್ಶೂರೆನ್ಸ್: ಕುಟುಂಬದ ವಾರ್ಷಿಕ ಆದಾಯ ₹ 3,00,00 ಕ್ಕಿಂತ ಕಡಿಮೆ ಇರುವ ಯಾವುದೇ ಅಂಗವೈಕಲ್ಯ ವ್ಯಕ್ತಿಗೆ ಇದನ್ನು ನೀಡಲಾಗುತ್ತದೆ.

ಎರಡು ಪಾಲಿಸಿಗಳನ್ನು ಹೇಗೆ ಹೋಲಿಕೆ ಮಾಡಲಾಗುತ್ತದೆ ಎಂಬುದನ್ನು ಇಲ್ಲಿ ನೋಡಿ:

ಮಾನದಂಡಗಳು ನೈರ್ಮಲ್ಯ ಹೆಲ್ತ್ ಇನ್ಶೂರೆನ್ಸ್ ಸ್ವಾವಲಂಬನ್ ಹೆಲ್ತ್ ಇನ್ಶೂರೆನ್ಸ್
ವಯಸ್ಸಿನ ಮಿತಿ ಯಾವುದೇ ವಯಸ್ಸಿನ ಮಿತಿಯಿಲ್ಲ 18-65 ವರ್ಷಗಳು
ಅರ್ಹತೆ ರಾಷ್ಟ್ರೀಯ ಟ್ರಸ್ಟ್‌ನೊಂದಿಗೆ ನೋಂದಾಯಿಸಿಕೊಳ್ಳಬೇಕು ಕುಟುಂಬದ ವಾರ್ಷಿಕ ಆದಾಯವು ₹3 ಲಕ್ಷಕ್ಕಿಂತ ಕಡಿಮೆಯಿರಬೇಕು
ಸಮ್ ಇನ್ಶೂರ್ಡ್ ₹1 ಲಕ್ಷ ಕವರೇಜ್ ₹2 ಲಕ್ಷ ಕವರೇಜ್
ಕವರೇಜ್ ಮಿತಿಗಳು ಇವುಗಳಿಗೆ ಮಿತಿಗಳನ್ನು ಒಳಗೊಂಡಿದೆ: ಒಪಿಡಿ ವೆಚ್ಚಗಳು: ₹14,500, ನಡೆಯುತ್ತಿರುವ ಚಿಕಿತ್ಸೆಗಳು: ₹10,000, ಪರ್ಯಾಯ ಔಷಧಗಳು: ₹4,500, ಸಾರಿಗೆ ವೆಚ್ಚಗಳು: ₹1,000 ಅಂಗವಿಕಲ ವ್ಯಕ್ತಿ, ಸಂಗಾತಿ ಮತ್ತು ಇಬ್ಬರು ಮಕ್ಕಳನ್ನು ಕವರ್ ಮಾಡುತ್ತದೆ
ಪ್ರೀಮಿಯಂ ₹ 250 (ಕುಟುಂಬದ ಆದಾಯ ₹15,000 ಕ್ಕಿಂತ ಕಡಿಮೆ ಇದ್ದರೆ), ₹ 500 (ಕುಟುಂಬದ ಆದಾಯ ₹15,000 ಕ್ಕಿಂತ ಹೆಚ್ಚಿದ್ದರೆ) ₹ 3,100 (ಇನ್ಶೂರ್ಡ್ ರಿಂದ 10% ಅನ್ನು ಮಾತ್ರ ಸಂಗ್ರಹಿಸಲಾಗುತ್ತದೆ)
ಅಗತ್ಯವಿರುವ ಡಾಕ್ಯುಮೆಂಟುಗಳು ಮಾನ್ಯವಾದ ಅಂಗವೈಕಲ್ಯ ಪ್ರಮಾಣಪತ್ರ ಅಂಗವೈಕಲ್ಯ ಪ್ರಮಾಣಪತ್ರ, ಪ್ರಸ್ತಾವನೆಯ ನಮೂನೆ, ಪ್ರೀಮಿಯಂ ಪಾವತಿಯ ರಸೀದಿ, ಆದಾಯ ಪ್ರಮಾಣಪತ್ರ, ಗುರುತಿನ ಪುರಾವೆ

ಹೆಲ್ತ್ ಇನ್ಶೂರೆನ್ಸ್‌ಗಾಗಿ ನಿಮ್ಮ ಅರ್ಹತೆಯನ್ನು ಹೇಗೆ ನಿರ್ಧರಿಸುವುದು?

ಹೆಲ್ತ್ ಇನ್ಶೂರೆನ್ಸ್‌ಗಾಗಿ ನಿಮ್ಮ ಅರ್ಹತೆಯ ಮಾನದಂಡವನ್ನು ನಿರ್ಧರಿಸುವ ಕೆಲವು ಅಂಶಗಳೂ ಇವೆ. ಅವು ಈ ಕೆಳಗಿನಂತಿವೆ:

  • ಪ್ರಸ್ತುತ ಆರೋಗ್ಯ ಸ್ಥಿತಿ: ಅಂಗವೈಕಲ್ಯ ಹೊಂದಿರುವ ವ್ಯಕ್ತಿಯು ಇನ್ಸೂರೆನ್ಸ್ ಪಡೆಯಲು ಬಂದಾಗ ಇನ್ಶೂರೆನ್ಸ್ ಕಂಪನಿಯವರು ಪರಿಶೀಲಿಸುವ ಮೊದಲ ವಿಷಯವೆಂದರೆ ಕಳೆದ ಕೆಲವು ತಿಂಗಳುಗಳಲ್ಲಿ ಅವರ ಆರೋಗ್ಯದ ಸ್ಥಿತಿ. ಇದು ಅವರಿಗಿರುವ ಅಪಾಯವನ್ನು ಪತ್ತೆಮಾಡಲು. ಆರೋಗ್ಯ ವರದಿಗಳ ಆಧಾರದ ಮೇಲೆ, ದೀರ್ಘಕಾಲದ ಕಾಯಿಲೆಗಳು ಮತ್ತು ಈ ಮೊದಲೇ ಅಸ್ತಿತ್ವದಲ್ಲಿರುವ ಸಮಸ್ಯೆಗಳನ್ನು ಪತ್ತೆ ಮಾಡಲು ಯಾವುದಾದರೂ ಹೆಚ್ಚಿನ ಪರೀಕ್ಷೆಗಳು. ಇದರಿಂದ ಇನ್ಶೂರೆನ್ಸ್ ಕಂಪನಿಗಳು ನಿಮ್ಮ ಇನ್ಶೂರೆನ್ಸ್ ಕವರೇಜನ್ನು ಅನುಮೋದಿಸಬಹುದು ಅಥವಾ ತಿರಸ್ಕರಿಸಬಹುದು.
  • ಆದಾಯ: ಅಂಗವಿಕಲರ ಅರ್ಹತೆಯನ್ನು ನಿರ್ಧರಿಸುವ ಮತ್ತೊಂದು ಪ್ರಮುಖ ಅಂಶವೆಂದರೆ ಅವರ ಪ್ರೀಮಿಯಂಗಳನ್ನು ಪಾವತಿಸುವ ಸಾಮರ್ಥ್ಯ. ಆದ್ದರಿಂದ, ಅವರು ನಿಮ್ಮ ಗಳಿಕೆಯ ಸಾಮರ್ಥ್ಯ, ಬ್ಯಾಂಕ್ ಅಕೌಂಟ್‌ಗಳು ಮತ್ತು ಸ್ಟೇಟ್‌ಮೆಂಟ್‌ಗಳನ್ನು ಪರಿಶೀಲಿಸುತ್ತಾರೆ. ಆದಾಗ್ಯೂ, ಅನೇಕ ಅಂಗವಿಕಲರು ತಮ್ಮ ಕುಟುಂಬದ ಇತರ ಸದಸ್ಯರ ಮೇಲೆ ಆರ್ಥಿಕವಾಗಿ ಅವಲಂಬಿತರಾಗಿದ್ದರೆ ಮತ್ತು ಅಂತಹ ಸಂದರ್ಭಗಳಲ್ಲಿ, ಕುಟುಂಬದ ಒಟ್ಟಾರೆ ಆದಾಯವನ್ನು ಸಹ ಪರಿಶೀಲಿಸಲಾಗುತ್ತದೆ. ಈ ಅಂಶಗಳ ಆಧಾರದ ಮೇಲೆ, ಅವರು ವ್ಯಕ್ತಿಯೊಬ್ಬರನ್ನು ಕವರ್ ಮಾಡಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುತ್ತಾರೆ.

ನೀವು ಅಥವಾ ನಿಮ್ಮ ಕುಟುಂಬದ ಬೇರಾವುದೇ ಸದಸ್ಯರು ಅಂಗವೈಕಲ್ಯದಿಂದ ಬದುಕುತ್ತಿದ್ದರೆ, ಅದೃಷ್ಟವಶಾತ್, ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಲು ನೀವೇನು ಮಾಡಬಹುದು ಎಂಬುದರ ಕುರಿತು ಈಗ ನಿಮಗೆ ಸಾಕಷ್ಟು ತಿಳಿದಿದೆ.

ದುರದೃಷ್ಟವಶಾತ್, ಅಂಗವಿಕಲ ವ್ಯಕ್ತಿಗಳ ಹೆಲ್ತ್ ಇನ್ಶೂರೆನ್ಸ್ ವಿಷಯಕ್ಕೆ ಬಂದರೆ, ಸುಧಾರಣೆಗೆ ಇನ್ನೂ ಸಾಕಷ್ಟು ಅವಕಾಶವಿದೆ. ಪ್ರಸ್ತುತ, ಖಾಸಗಿ ಇನ್ಶೂರೆನ್ಸ್ ಯೋಜನೆಗಳ ವಿಷಯಕ್ಕೆ ಬಂದರೆ, ಹೆಚ್ಚಿನ ಅಪಾಯವನ್ನು ಪರಿಗಣಿಸದ ಅಂಗವಿಕಲ ವ್ಯಕ್ತಿಗಳಿಗೆ ಮಾತ್ರ ಅಲ್ಲಿ ಆಯ್ಕೆಗಳಿವೆ. ಆದರೆ ಭವಿಷ್ಯದಲ್ಲಿ ಸುಧಾರಣೆಗಳು ಮತ್ತು ಅಭಿವೃದ್ಧಿಗಳಾಗುವುದು ಖಚಿತ. ಇದರಿಂದಾದರೂ ಪ್ರತಿಯೊಬ್ಬರೂ ಅಂದರೆ ತೀವ್ರ ಅಂಗವೈಕಲ್ಯ ಹೊಂದಿರುವವರರೂ ಸಹ ಹೆಲ್ತ್ ಇನ್ಶೂರೆನ್ಸ್‌ನಡಿಯಲ್ಲಿ ಕವರ್ ಆಗಬಹುದು.