ಸಹಾಯ
closeನಮ್ಮ WhatsApp ಸಂಖ್ಯೆಯನ್ನು ಕರೆಗಳಿಗೆ ಬಳಸಲಾಗುವುದಿಲ್ಲ. ಈ ಸಂಖ್ಯೆ ಕೇವಲ ಚಾಟ್ ಗೆ ಮಾತ್ರ.
ಈಗಿನ ಗಿಗ್ ಎಕಾನಮಿಯ ಯುಗದಲ್ಲಿ, ಫ್ರೀಲ್ಯಾನ್ಸಿಂಗ್ ಮತ್ತು ಸೆಲ್ಫ್-ಎಂಪ್ಲಾಯ್ಮೆಂಟ್ಗಳು ಹೆಚ್ಚುತ್ತಿವೆ. ಅನೇಕ ವ್ಯಕ್ತಿಗಳು ಸ್ವತಂತ್ರವಾಗಿ ಕೆಲಸ ಮಾಡುವ ಸ್ವಾತಂತ್ರ್ಯ ಮತ್ತು ಅನುಕೂಲತೆಯನ್ನು ಆನಂದಿಸುತ್ತಾರೆ. ಆದಾಗ್ಯೂ, ಈ ಸ್ವಾಯತ್ತತೆಯೊಂದಿಗೆ ವ್ಯಕ್ತಿಯೊಬ್ಬನ ಆರೋಗ್ಯ ಮತ್ತು ಆರ್ಥಿಕ ಯೋಗಕ್ಷೇಮವನ್ನು ಕಾಪಾಡುವ ಜವಾಬ್ದಾರಿಯೂ ಬರುತ್ತದೆ.
ಫ್ರೀಲ್ಯಾನ್ಸರ್ಗಳು ಮತ್ತು ಸೆಲ್ಫ್-ಎಂಪ್ಲಾಯ್ಡ್ಗಳಿಗೆ ಹೆಲ್ತ್ ಇನ್ಶೂರೆನ್ಸ್ ಎನ್ನುವುದು ಅವರ ವೃತ್ತಿ ಪ್ರಯಾಣದ ಪ್ರಮುಖ ಅಂಶವಾಗಿದೆ. ಅದು ವೈದ್ಯಕೀಯ ಅನಿಶ್ಚಿತತೆಯ ಸಮಯದಲ್ಲಿ ಅವರಿಗೆ ಮನಃಶಾಂತಿ ಮತ್ತು ಭದ್ರತೆಯನ್ನು ನೀಡುತ್ತದೆ.
ಮುಂದಕ್ಕೆ ಹೋಗುವ ಮುನ್ನ, ಸೆಲ್ಫ್-ಎಂಪ್ಲಾಯ್ಡ್ ಮತ್ತು ಗಿಗ್ ವರ್ಕರ್ಗಳಿಗೆ ಹೆಲ್ತ್ ಇನ್ಶೂರೆನ್ಸ್ ಏಕೆ ಹೆಚ್ಚು ಮಹತ್ವದ್ದಾಗಿದೆ ಎಂಬುದನ್ನು ನಾವು ಮೊದಲು ಅರ್ಥಮಾಡಿಕೊಳ್ಳೋಣ.
ಗಿಗ್ ಎಕಾನಮಿಯು ಸಾಂಪ್ರದಾಯಿಕ ಫುಲ್-ಟೈಮ್ ಜಾಬ್ಗಳಿಗಿಂತ ಅಲ್ಪಾವಧಿಯ ಕಾಂಟ್ರ್ಯಾಕ್ಟ್ಗಳು ಮತ್ತು ಫ್ರೀಲ್ಯಾನ್ಸ್ ಕೆಲಸಗಳಿಂದ ನಿರೂಪಿಸಲ್ಪಟ್ಟಿದೆ. ಇದು ತ್ವರಿತ ಬೆಳವಣಿಗೆಯನ್ನು ನೋಡುತ್ತಿದೆ ಮತ್ತು ದೇಶದ ಉದ್ಯೋಗದ ಚಿತ್ರಣವನ್ನು ಮರಳಿ ರೂಪಿಸುತ್ತಿದೆ. ಇದು ಕೇವಲ ಆದಾಯ ಉತ್ಪಾದನೆಗೆ ಮಾತ್ರ ಹೊಸ ಮಾರ್ಗಗಳನ್ನು ನೀಡುತ್ತಿಲ್ಲ, ಅದರೊಂದಿಗೆ ಭಾರತದ ಒಟ್ಟಾರೆ ಆರ್ಥಿಕ ಬೆಳವಣಿಗೆ ಮತ್ತು ಬದಲಾವಣೆಗೆ ಗಮನಾರ್ಹ ಕೊಡುಗೆ ನೀಡುತ್ತದೆ.
ಏರಿಳಿತದ ಆದಾಯಗಳು ಮತ್ತು ಸಾಂಪ್ರದಾಯಿಕವಲ್ಲದ ಕೆಲಸದ ವ್ಯವಸ್ಥೆಗಳೊಂದಿಗೆ, ಸೂಕ್ತವಾದ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಪಡೆದುಕೊಳ್ಳುವುದು ಮುಖ್ಯವಾಗುತ್ತದೆ. ವಿಶೇಷವಾಗಿ ಎಂಪ್ಲಾಯರ್ಗಳಿಂದ ಹೆಲ್ತ್ ಕವರೇಜ್ ನೀಡದಿರುವ ಈ ಸನ್ನಿವೇಶದಲ್ಲಿ ನೀವು ವೈಯಕ್ತಿಕವಾಗಿ ಕಾಳಜಿ ವಹಿಸಬೇಕಾಗುತ್ತದೆ.
ಆದ್ದರಿಂದ, ಗಿಗ್ ಎಕಾನಮಿಗಾಗಿ ವಿನ್ಯಾಸಗೊಳಿಸಲಾದ ಸೂಕ್ತವಾದ ಹೆಲ್ತ್ ಇನ್ಶೂರೆನ್ಸ್ ಆಯ್ಕೆಗಳು, ಈ ವ್ಯಕ್ತಿಗಳ ವಿಭಿನ್ನ ಅಗತ್ಯಗಳನ್ನು ಪೂರೈಸುತ್ತವೆ. ಅಂದರೆ ಅವು ಅನುಕೂಲತೆ, ಕಾಂಪ್ರೆಹೆನ್ಸಿವ್ ಕವರೇಜ್ ಮತ್ತು ಫೈನಾನ್ಸಿಯಲ್ ಸೆಕ್ಯೂರಿಟಿಯನ್ನು ನೀಡುತ್ತವೆ.
ಫ್ರೀಲ್ಯಾನ್ಸರ್ಗಳು ಮತ್ತು ಸೆಲ್ಫ್-ಎಂಪ್ಲಾಯ್ಡ್ ವ್ಯಕ್ತಿಗಳು ಅವರ ಎಂಪ್ಲಾಯರ್ ನೀಡುವ ಹೆಲ್ತ್ ಇನ್ಶೂರೆನ್ಸ್ ಪ್ರಯೋಜನಗಳನ್ನು ಆನಂದಿಸುವುದಿಲ್ಲ. ಈ ಸುರಕ್ಷತಾ ಕವಚವಿಲ್ಲದೇ, ಅನಿರೀಕ್ಷಿತ ವೈದ್ಯಕೀಯ ವೆಚ್ಚಗಳು ಅವರ ಹಣಕಾಸಿನ ಮೇಲೆ ಗಣನೀಯ ಹೊರೆಯಾಗಿ ಪರಿಣಮಿಸಬಹುದು.
ಅವರ ಯೋಗಕ್ಷೇಮಕ್ಕಾಗಿ ಹೆಲ್ತ್ ಇನ್ಶೂರೆನ್ಸ್ ಅನ್ನು ಪಡೆಯುವುದು ಏಕೆ ಅಗತ್ಯ ಎಂಬುದನ್ನು ಅರ್ಥಮಾಡಿಕೊಳ್ಳಲು ಒಂದು ಪ್ರಕರಣವನ್ನು ನೋಡೋಣ.
ರಾಹುಲ್ ಮತ್ತು ಪ್ರಿಯಾ ಇಬ್ಬರು ಭಾರತದ ಕಿಕ್ಕಿರಿದ ನಗರವಾದ ಮುಂಬೈನಲ್ಲಿರುವ ವಿಭಿನ್ನ ವ್ಯಕ್ತಿಗಳು. ಗ್ರಾಫಿಕ್ ಡಿಸೈನರ್ ರಾಹುಲ್ ಮತ್ತು ಕಂಟೆಂಟ್ ರೈಟರ್ ಪ್ರಿಯಾ ಸ್ವತಂತ್ರವಾಗಿ ಕೆಲಸ ಮಾಡುವ ಸ್ವಾತಂತ್ರ್ಯ ಮತ್ತು ಅನುಕೂಲತೆಯನ್ನು ಆನಂದಿಸುತ್ತಾರೆ. ಆದಾಗ್ಯೂ, ಅವರು ಇತ್ತೀಚೆಗೆ ಅನಿರೀಕ್ಷಿತವಾಗಿ ಆರೋಗ್ಯ-ಸಂಬಂಧಿ ಸವಾಲನ್ನು ಎದುರಿಸಿದರು. ಅದು ಹೆಲ್ತ್ ಇನ್ಶೂರೆನ್ಸ್ನ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ.
ರಾಹುಲ್ ಅನಾರೋಗ್ಯಕ್ಕೆ ಒಳಗಾಗುತ್ತಾರೆ ಮತ್ತು ತೀವ್ರವಾದ ವೈರಲ್ ಇನ್ಫೆಕ್ಷನ್ನಿಂದ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಹೆಲ್ತ್ ಇನ್ಶೂರೆನ್ಸ್ ಇಲ್ಲದೆ, ಅವರ ವೈದ್ಯಕೀಯ ವೆಚ್ಚವು ₹ 1,50,000 ಆಗಿತ್ತು. ಅವರು ತಮ್ಮ ಉಳಿತಾಯವನ್ನೆಲ್ಲ ಹೊರತೆಗೆದರು ಮತ್ತು ಆಸ್ಪತ್ರೆಯ ಭಾರಿ ಬಿಲ್ಗಳನ್ನು ಕವರ್ ಮಾಡಲು ಕುಟುಂಬದಿಂದ ಸಾಲವನ್ನು ಪಡೆಯಬೇಕಾಗಿತ್ತು. ಅದು ಅವರ ಆರ್ಥಿಕ ಸ್ಥಿರತೆಯ ಮೇಲೆ ಪರಿಣಾಮ ಬೀರಿತು. ಅಲ್ಲದೇ ಆರ್ಥಿಕ ಹೊಡೆತವನ್ನು ಎದುರಿಸಲು ಗಿಗ್ಸ್ ತೆಗೆದುಕೊಳ್ಳಬೇಕಾದಾಗ ಅವರ ಚೇತರಿಕೆಯ ಸಮಯದಲ್ಲಿ ಒತ್ತಡವನ್ನು ಉಂಟುಮಾಡಿತು.
ಪ್ರಿಯಾ ಬುದ್ಧಿವಂತಿಕೆಯಿಂದ ಹೆಲ್ತ್ ಇನ್ಶೂರೆನ್ಸ್ನಲ್ಲಿ ಇನ್ವೆಸ್ಟ್ ಮಾಡಿದ್ದಳು. ಆಕೆ ಇದೇ ರೀತಿಯ ಆರೋಗ್ಯ ಸಮಸ್ಯೆಯನ್ನು ಎದುರಿಸಿದಾಗ, ಆಕೆಯ ಇನ್ಶೂರೆನ್ಸ್ ಪ್ಲ್ಯಾನ್ ಒಟ್ಟು ವೈದ್ಯಕೀಯ ವೆಚ್ಚದ 80% ನಷ್ಟು ಮೊತ್ತ ₹1,50,000 ಗಳನ್ನು ಕವರ್ ಮಾಡಿತ್ತು. ಹೆಲ್ತ್ ಇನ್ಶೂರೆನ್ಸ್ನೊಂದಿಗೆ, ಪ್ರಿಯಾಳ ಜೇಬಿನ ಖರ್ಚು ಗಣನೀಯವಾಗಿ ಕಡಿಮೆಯಾಯಿತು ಇದು ಅವಳಿಗೆ ಆರ್ಥಿಕ ಹೊರೆಯ ಬಗ್ಗೆ ಚಿಂತಿಸದೆ ತನ್ನ ಚೇತರಿಕೆಯತ್ತ ಗಮನಹರಿಸಲು ಅವಕಾಶ ಮಾಡಿಕೊಟ್ಟಿತು.
ರಾಹುಲ್ ಮತ್ತು ಪ್ರಿಯಾ ಅವರಂತಹ ಫ್ರೀಲ್ಯಾನ್ಸರ್ಗಳು ಮತ್ತು ಸೆಲ್ಫ್-ಎಂಪ್ಲಾಯ್ಡ್ ವ್ಯಕ್ತಿಗಳಿಗೆ ಹೆಲ್ತ್ ಇನ್ಶೂರೆನ್ಸ್ ಏಕೆ ಬೇಕು ಎಂಬುದನ್ನು ಈ ವಿವರಣೆಯು ಸ್ಪಷ್ಟವಾಗಿ ತೋರಿಸುತ್ತದೆ. ಇದು ಸುರಕ್ಷತಾ ಕವಚವಾಗಿ ಕೆಲಸ ಮಾಡುತ್ತದೆ, ಅವರಿಗೆ ಗುಣಮಟ್ಟದ ಹೆಲ್ತ್ ಕೇರ್ ಮತ್ತು ಮನಃಶಾಂತಿಯನ್ನು ನೀಡುತ್ತದೆ. ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು ಅವರು ತಮ್ಮ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡುವುದಲ್ಲದೆ, ಅವರ ಸ್ವತಂತ್ರ ವೃತ್ತಿಜೀವನದಲ್ಲಿ ಆತ್ಮವಿಶ್ವಾಸದಿಂದ ಮುಂದುವರೆಯಬಹುದು ಎಂಬುದನ್ನು ಖಚಿತಪಡಿಸುತ್ತದೆ.
ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು ಫ್ರೀಲ್ಯಾನ್ಸರ್ಗಳು ಮತ್ತು ಸೆಲ್ಫ್-ಎಂಪ್ಲಾಯ್ಡ್ ವ್ಯಕ್ತಿಗಳಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತಿದ್ದು, ಅವರಿಗೆ ಅಮೂಲ್ಯವಾದ ರಕ್ಷಣೆ ಮತ್ತು ಮನಃಶಾಂತಿಯನ್ನು ಒದಗಿಸುತ್ತದೆ. ಈ ಪ್ರಯೋಜನಗಳನ್ನು ನಾವೀಗ ವಿವರವಾಗಿ ತಿಳಿಯೋಣ:
ಹೆಲ್ತ್ ಇನ್ಶೂರೆನ್ಸ್ ಆಸ್ಪತ್ರೆಗೆ ದಾಖಲಾಗುವಿಕೆ, ಡಾಕ್ಟರ್ ಕನ್ಸಲ್ಟೇಶನ್ಗಳು, ಸರ್ಜರಿಗಳು, ಡಯಾಗ್ನೋಸ್ಟಿಕ್ ಟೆಸ್ಟ್ಗಳು, ಔಷಧಿಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಕಾಂಪ್ರೆಹೆನ್ಸಿವ್ ಮೆಡಿಕಲ್ ಕವರೇಜ್ ಅನ್ನು ನೀಡುತ್ತದೆ. ಈ ಕವರೇಜ್ ಫ್ರೀಲ್ಯಾನ್ಸರ್ಗಳು ಮತ್ತು ಸೆಲ್ಫ್-ಎಂಪ್ಲಾಯ್ಡ್ ವ್ಯಕ್ತಿಗಳಿಗೆ ಅತಿಯಾದ ಹಣದ ವೆಚ್ಚವಿಲ್ಲದೆ ಗುಣಮಟ್ಟದ ಹೆಲ್ತ್ಕೇರ್ ಸರ್ವೀಸ್ಗಳಿಗೆ ಆ್ಯಕ್ಸೆಸ್ ಪಡೆಯುವುದನ್ನು ಖಚಿತಪಡಿಸುತ್ತದೆ.
ಹೆಚ್ಚಿನ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ಗಳು ಅನುಕೂಲಕರ ಮತ್ತು ಕೈಗೆಟುಕುವ ಪ್ರೀಮಿಯಂ ಆಯ್ಕೆಗಳನ್ನು ನೀಡುತ್ತವೆ. ಅವರು ತಮ್ಮ ಬಜೆಟ್ ಮತ್ತು ವೈಯಕ್ತಿಕ ಅಗತ್ಯಗಳಿಗೆ ಸರಿಹೊಂದುವ ಪ್ಲ್ಯಾನ್ಗಳ ಶ್ರೇಣಿಯಿಂದ ಆಯ್ಕೆ ಮಾಡಬಹುದು. ಇದರಿಂದ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಮುಟ್ಟದೇ ಸಾಕಷ್ಟು ಕವರೇಜನ್ನು ಪಡೆದುಕೊಳ್ಳಲು ಸುಲಭವಾಗುತ್ತದೆ.
ಯಾವುದೇ ಎಂಪ್ಲಾಯರ್ ಸ್ಪಾನ್ಸರ್ ಮಾಡಿದ ಹೆಲ್ತ್ ಕವರ್ ಇಲ್ಲದೆ, ಫ್ರೀಲ್ಯಾನ್ಸರ್ಗಳು ಮತ್ತು ಸೆಲ್ಫ್-ಎಂಪ್ಲಾಯ್ಡ್ ವ್ಯಕ್ತಿಗಳು ತಮ್ಮ ಕುಟುಂಬದ ಸದಸ್ಯರೊಂದಿಗೆ ವೈದ್ಯಕೀಯ ತುರ್ತುಸ್ಥಿತಿಗಳ ಅಪಾಯವನ್ನು ಆಗಾಗ ಎದುರಿಸುತ್ತಾರೆ. ಫ್ಯಾಮಿಲಿ ಫ್ಲೋಟರ್ ಹೆಲ್ತ್ ಪ್ಲ್ಯಾನ್ನೊಂದಿಗೆ, ಅವರ ಇಡೀ ಕುಟುಂಬವು ಕವರ್ ಆಗುತ್ತದೆ. ಇಡೀ ಕುಟುಂಬವು ಭದ್ರತೆಯ ಭಾವವನ್ನು ಅನುಭವಿಸುತ್ತವೆ
ಆರೋಗ್ಯ ತುರ್ತು ಪರಿಸ್ಥಿತಿಗಳು ಅನಿರೀಕ್ಷಿತವಾದ ಆರ್ಥಿಕ ಹೊರೆಗಳನ್ನು ತರಬಹುದು, ವಿಶೇಷವಾಗಿ ಹೆಲ್ತ್ ಇನ್ಶೂರೆನ್ಸ್ ಇಲ್ಲದವರಿಗೆ. ಫ್ರೀಲ್ಯಾನ್ಸರ್ಗಳು ಮತ್ತು ಸೆಲ್ಫ್-ಎಂಪ್ಲಾಯ್ಡ್ ಪ್ರೊಫೆಷನಲ್ಗಳು ಹೆಲ್ತ್ ಇನ್ಶೂರೆನ್ಸ್ನೊಂದಿಗೆ ಹೆಚ್ಚಿನ ಆರ್ಥಿಕ ಸ್ಥಿರತೆಯನ್ನು ಆನಂದಿಸಬಹುದು. ಏಕೆಂದರೆ ಇದು ಅನಾರೋಗ್ಯ ಅಥವಾ ಗಾಯದ ಸಂದರ್ಭದಲ್ಲಿ ಭಾರೀ ವೈದ್ಯಕೀಯ ಬಿಲ್ಗಳು ಮತ್ತು ಸಂಭಾವ್ಯ ಆದಾಯ ನಷ್ಟದ ವಿರುದ್ಧ ಸುರಕ್ಷತಾ ಕವಚವಾಗಿ ಕೆಲಸ ಮಾಡುತ್ತದೆ.
ಹೆಲ್ತ್ ಇನ್ಶೂರೆನ್ಸ್ನ ಗಮನಾರ್ಹ ಪ್ರಯೋಜನಗಳಲ್ಲಿ ಒಂದು ಕ್ಯಾಶ್ಲೆಸ್ ಚಿಕಿತ್ಸೆಯ ಸೌಲಭ್ಯವಾಗಿದೆ. ಪಾಲಿಸಿಹೋಲ್ಡರ್ಗಳು ಮುಂಗಡ ವೆಚ್ಚವನ್ನು ಪಾವತಿಸದೆ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಬಹುದು. ಇನ್ಶೂರೆನ್ಸ್ ಪೂರೈಕೆದಾರರು ಬಿಲ್ಗಳನ್ನು ನೇರವಾಗಿ ಆಸ್ಪತ್ರೆಯೊಂದಿಗೆ ಇತ್ಯರ್ಥಪಡಿಸುತ್ತಾರೆ, ಹಾಗಾಗಿ ಅದು ಪಾಲಿಸಿಹೋಲ್ಡರ್ಗಳ ಮೇಲಿನ ಆರ್ಥಿಕ ಒತ್ತಡವನ್ನು ಇಳಿಸುತ್ತದೆ.
ಫ್ರೀಲ್ಯಾನ್ಸರ್ಗಳು ಮತ್ತು ಸೆಲ್ಫ್-ಎಂಪ್ಲಾಯ್ಡ್ ವ್ಯಕ್ತಿಗಳು ಪಾವತಿಸುವ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂಗಳು ಇನ್ಕಮ್ ಟ್ಯಾಕ್ಸ್ ಆ್ಯಕ್ಟ್ನ ಸೆಕ್ಷನ್ 80D ಅಡಿಯಲ್ಲಿ ಟ್ಯಾಕ್ಸ್ ಕಡಿತಕ್ಕೆ ಅರ್ಹವಾಗಿವೆ, ಹೀಗಾಗಿ ಅದು ಅವರ ಉಳಿತಾಯಕ್ಕೆ ಸೇರುತ್ತದೆ.
ಫ್ರೀಲ್ಯಾನ್ಸರ್ಗಳು ಮತ್ತು ಸೆಲ್ಫ್-ಎಂಪ್ಲಾಯ್ಡ್ ಪ್ರೊಫೆಷನಲ್ಗಳಿಗೆ ವಿವಿಧ ಹೆಲ್ತ್ ಇನ್ಶೂರೆನ್ಸ್ ಆಯ್ಕೆಗಳು ಲಭ್ಯವಿದೆ. ಹೆಚ್ಚು ಸೂಕ್ತವಾದ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಆಯ್ಕೆ ಮಾಡುವ ಮೂಲಕ, ಅವರು ತಮ್ಮ ಮತ್ತು ಅವರ ಪ್ರೀತಿಪಾತ್ರರ ಆರೋಗ್ಯವನ್ನು, ಅನಿರೀಕ್ಷಿತ ವೈದ್ಯಕೀಯ ವೆಚ್ಚಗಳ ವಿರುದ್ಧ ಉತ್ತಮವಾಗಿ ರಕ್ಷಿಸಬಹುದು ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.
ಫ್ರೀಲ್ಯಾನ್ಸರ್ಗಳು ಮತ್ತು ಸೆಲ್ಫ್-ಎಂಪ್ಲಾಯ್ಡ್ಗಳಿಗೆ ಜನಪ್ರಿಯವಾಗಿರುವ ಎರಡು ಮುಖ್ಯ ರೀತಿಯ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ಗಳು ಇಲ್ಲಿವೆ:
ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಒಬ್ಬ ವ್ಯಕ್ತಿಗೆ ಕವರೇಜ್ ನೀಡಲು ವಿನ್ಯಾಸಗೊಳಿಸಲಾಗಿದೆ. ಫ್ರೀಲ್ಯಾನ್ಸರ್ಗಳು ಮತ್ತು ಸೆಲ್ಫ್-ಎಂಪ್ಲಾಯ್ಡ್ ವ್ಯಕ್ತಿಗಳು ವೈದ್ಯಕೀಯ ವೆಚ್ಚ ಮತ್ತು ಹೆಲ್ತ್ ಕೇರ್-ಸಂಬಂಧಿತ ವೆಚ್ಚಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ವೈಯಕ್ತಿಕ ಹೆಲ್ತ್ ಪ್ಲ್ಯಾನ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಯಾವುದೇ ಅವಲಂಬಿತರನ್ನು ಹೊಂದಿರದವರಿಗೆ ಈ ಪ್ಲ್ಯಾನ್ ಸೂಕ್ತವಾಗಿದೆ.
ಫ್ಯಾಮಿಲಿ ಫ್ಲೋಟರ್ ಹೆಲ್ತ್ ಪ್ಲ್ಯಾನ್ ಎನ್ನುವುದು ಇನ್ಶೂರ್ಡ್, ಸಂಗಾತಿಗಳು, ಮಕ್ಕಳು ಮತ್ತು ಕೆಲವೊಮ್ಮೆ ಪೋಷಕರನ್ನು ಒಳಗೊಂಡಂತೆ ಇಡೀ ಕುಟುಂಬಕ್ಕೆ ಕವರೇಜನ್ನು ವಿಸ್ತರಿಸುವ ಕಾಂಪ್ರೆಹೆನ್ಸಿವ್ ಹೆಲ್ತ್ ಇನ್ಶೂರೆನ್ಸ್ ಆಯ್ಕೆಯಾಗಿದೆ. ವೈದ್ಯಕೀಯ ಅನಿಶ್ಚಿತತೆಗಳಿಂದ ತಮ್ಮ ಪ್ರೀತಿಪಾತ್ರರನ್ನು ರಕ್ಷಿಸಲು ಬಯಸುವ ಫ್ರೀಲ್ಯಾನ್ಸರ್ಗಳು ಮತ್ತು ಸೆಲ್ಫ್-ಎಂಪ್ಲಾಯ್ಡ್ ವ್ಯಕ್ತಿಗಳು, ಒಂದೇ ಪಾಲಿಸಿಯಡಿಯಲ್ಲಿ ವಿಶಾಲ ಕವರೇಜ್ ಸಿಗುವುದರಿಂದ ಸಾಮಾನ್ಯವಾಗಿ ಫ್ಯಾಮಿಲಿ ಫ್ಲೋಟರ್ ಪ್ಲ್ಯಾನ್ಗಳನ್ನು ಬಯಸುತ್ತಾರೆ.
ಗಿಗ್ ಎಕಾನಮಿಯಲ್ಲಿರುವವರಿಗೆ ಅನಿಯಮಿತ ಇನ್ಕಮ್ ಒಂದು ಸಾಮಾನ್ಯ ಸವಾಲಾಗಿದೆ. ಈ ಸಂದರ್ಭದಲ್ಲಿ ನಿಮ್ಮ ಇನ್ಕಮ್ ಅನಿಯಮಿತವಾಗಿದ್ದರೆ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂಗಳೊಂದಿಗೆ ವ್ಯವಹರಿಸುವಾಗ ಜಾಣತನದ ಫೈನಾನ್ಸಿಯಲ್ ಪ್ಲ್ಯಾನಿಂಗ್ ಮತ್ತು ಸ್ಮಾರ್ಟ್ ಸ್ಟ್ರಾಟಜಿಗಳ ಅಗತ್ಯವಿರುತ್ತದೆ. ಫ್ರೀಲ್ಯಾನ್ಸರ್ಗಳು ಮತ್ತು ಸೆಲ್ಫ್-ಎಂಪ್ಲಾಯ್ಡ್ ವ್ಯಕ್ತಿಗಳು ತಮ್ಮ ಗಳಿಕೆಯಲ್ಲಿ ಏರಿಳಿತಗಳನ್ನು ಎದುರಿಸಬಹುದು. ಇದರಿಂದಾಗಿ ಅವರ ಹೆಲ್ತ್ ಇನ್ಶೂರೆನ್ಸ್ ವೆಚ್ಚವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ಅತ್ಯಗತ್ಯ.
ಈ ಪರಿಸ್ಥಿತಿಯಲ್ಲಿ ಅವರಿಗೆ ಮಾರ್ಗದರ್ಶನ ನೀಡಲು ಸಹಾಯ ಮಾಡುವ ಕೆಲ ಸಲಹೆಗಳು ಇಲ್ಲಿವೆ:
ನಿಮ್ಮ ಬಜೆಟ್ಗೆ ಹೊಂದುವ ಕೈಗೆಟುಕುವ ಪ್ರೀಮಿಯಂಗಳೊಂದಿಗೆ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ಗಳನ್ನು ನೋಡಿ. ನಿಮ್ಮ ಹಣಕಾಸಿನ ಮೇಲೆ ಹೊರೆಯಾಗದಂತೆ ನಿಮ್ಮ ಹೆಲ್ತ್ ಕೇರ್ ಅಗತ್ಯಗಳನ್ನು ಸಮರ್ಪಕವಾಗಿ ಪೂರೈಸುವ ಕವರೇಜನ್ನು ಆಯ್ಕೆಮಾಡಿ. ಹಣಕ್ಕೆ ಉತ್ತಮ ಮೌಲ್ಯವನ್ನು ನೀಡುವ ಪ್ಲ್ಯಾನ್ಗಳನ್ನು ಕಂಡುಹಿಡಿಯಲು ವಿಭಿನ್ನ ಪ್ಲ್ಯಾನ್ಗಳನ್ನು ಹೋಲಿಕೆ ಮಾಡಿ.
ಅನಿಯಮಿತ ಇನ್ಕಮ್ನ ಕಾರಣದಿಂದಾಗಿ ವಾರ್ಷಿಕ ಪ್ರೀಮಿಯಂಗಳು ಹೆಚ್ಚೆಂದು ಕಂಡುಬಂದರೆ, ತಿಂಗಳ ಅಥವಾ ತ್ರೈಮಾಸಿಕ ಪ್ರೀಮಿಯಂ ಪಾವತಿ ಆಯ್ಕೆಗಳನ್ನು ಆಯ್ಕೆ ಮಾಡಿಕೊಳ್ಳಿ. ಸಣ್ಣ ಪ್ರೀಮಿಯಂಗಳಲ್ಲಿ ಪಾವತಿಸುವುದರಿಂದ ಹೆಲ್ತ್ ಇನ್ಶೂರೆನ್ಸ್ ವೆಚ್ಚಗಳಿಗಾಗಿ ಬಜೆಟ್ ಅನ್ನು ಉತ್ತಮವಾಗಿ ನಿರ್ವಹಿಸಬಹುದಾಗಿದೆ.
ಆರೋಗ್ಯ-ಸಂಬಂಧಿತ ವೆಚ್ಚಗಳಿಗಾಗಿ ವಿಶೇಷವಾಗಿ ಮೀಸಲಿಡುವ ಎಮರ್ಜೆನ್ಸಿ ಫಂಡ್ ಅನ್ನು ರಚಿಸಿ. ಹೆಚ್ಚಿನ ಇನ್ಕಮ್ ಬರುವ ತಿಂಗಳುಗಳಲ್ಲಿ, ಈ ಅಕೌಂಟ್ಗಾಗಿ ಸ್ವಲ್ಪ ಹಣವನ್ನು ಮೀಸಲಿಡಿ. ಈ ಫಂಡ್ ಕಡಿಮೆ ತಿಂಗಳುಗಳಲ್ಲಿ, ಕೂಡಿಟ್ಟ ದಾಸ್ತಾನಿನಂತೆ ಕೆಲಸ ಮಾಡುತ್ತದೆ ಹಾಗೂ ಯಾವುದೇ ಹಣಕಾಸಿನ ಒತ್ತಡವಿಲ್ಲದೇ ನಿಮ್ಮ ಪ್ರೀಮಿಯಂಗಳನ್ನು ನೀವು ಪಾವತಿಸಬಹುದೆಂದು ಖಚಿತಪಡಿಸುತ್ತದೆ.
ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಪಾವತಿಸಲು ಸಾಕಷ್ಟು ಎಸ್ಐಪಿ ಗಳನ್ನು (ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲ್ಯಾನ್ಸ್) ಅಥವಾ ಸಣ್ಣ ಮೊತ್ತದ ರಿಕರಿಂಗ್ ಡೆಪಾಸಿಟ್ಗಳನ್ನು ರಚಿಸಿ. ಇದರಿಂದ ನೀವು ಪ್ರತಿ ತಿಂಗಳು ಉಳಿತಾಯ ಮಾಡಬಹುದು ಮತ್ತು ವಾರ್ಷಿಕ ಪ್ರೀಮಿಯಂನ ಯಾವುದೇ ಹೊರೆ ಇರುವುದಿಲ್ಲ.
ನಿಮ್ಮ ಹೆಲ್ತ್ ಇನ್ಶೂರೆನ್ಸ್ ಅಗತ್ಯತೆಗಳನ್ನು ಮತ್ತು ನೀವು ಪಾವತಿಸುತ್ತಿರುವ ಪ್ರೀಮಿಯಂಗಳನ್ನು ಕಾಲಕಾಲಕ್ಕೆ ಪರಿಶೀಲಿಸಿ. ನಿಮ್ಮ ಇನ್ಕಮ್ ಮತ್ತು ಜೀವನದ ಪರಿಸ್ಥಿತಿಗಳು ಬದಲಾದಂತೆ, ನಿಮ್ಮ ಪ್ರಸ್ತುತ ಸ್ಥಿತಿಗೆ ಹೊಂದುವ ಉತ್ತಮ ಪ್ಲ್ಯಾನ್ಗಳು ಅಥವಾ ಉತ್ತಮ ಪ್ರೀಮಿಯಂ ಆಯ್ಕೆಗಳನ್ನು ನೀವು ಹುಡುಕಬಹುದು.
ಫ್ರೀಲ್ಯಾನ್ಸರ್ಗಳು ಮತ್ತು ಸೆಲ್ಫ್-ಎಂಪ್ಲಾಯ್ಡ್ ವ್ಯಕ್ತಿಗಳಿಗೆ ತಮ್ಮ ಆರೋಗ್ಯ ಮತ್ತು ಆರ್ಥಿಕ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಸರಿಯಾದ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿದೆ. ಅವರ ವಿಭಿನ್ನ ಅಗತ್ಯಗಳಿಗೆ ಅನುಗುಣವಾಗಿ ಹೆಲ್ತ್ ಇನ್ಶೂರೆನ್ಸ್ ಅನ್ನು ಆಯ್ಕೆಮಾಡುವಾಗ ಪರಿಗಣಿಸಬೇಕಾದ ಕೆಲವು ಪ್ರಮುಖ ಅಂಶಗಳು ಇಲ್ಲಿವೆ:
ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ನೀಡುವ ಕವರೇಜನ್ನು ಮೌಲ್ಯಮಾಪನ ಮಾಡಿ. ಇದು ಆಸ್ಪತ್ರೆಗೆ ದಾಖಲಾಗುವಿಕೆಯ ವೆಚ್ಚಗಳು, ಆಸ್ಪತ್ರೆಗೆ ದಾಖಲಾಗುವ ಪೂರ್ವದ ಮತ್ತು ನಂತರದ ಆರೈಕೆ, ಡೇ ಕೇರ್ ಪ್ರಕ್ರಿಯೆಗಳು, ಆಂಬ್ಯುಲೆನ್ಸ್ ಶುಲ್ಕಗಳು ಮತ್ತು ಇತರ ಅಗತ್ಯ ವೈದ್ಯಕೀಯ ಸೇವೆಗಳನ್ನು ಒಳಗೊಂಡಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
ನಿಮ್ಮ ಸಂಭಾವ್ಯ ಹೆಲ್ತ್ ಕೇರ್ ಅಗತ್ಯಗಳನ್ನು ನಿರ್ಣಯಿಸಿ ಮತ್ತು ಸಾಕಷ್ಟು ಸಮ್ ಇನ್ಶೂರ್ಡ್ ಅನ್ನು ಆಯ್ಕೆಮಾಡಿ. ಕೈಗೆಟುಕುವಿಕೆಯ ದರ ಮತ್ತು ಸಾಕಷ್ಟು ಕವರೇಜ್ ಸಿಗುವಂತೆ ಬ್ಯಾಲೆನ್ಸ್ ಮಾಡುವುದು ಸರಿಯಾದ ಸಮ್ ಇನ್ಶೂರ್ಡ್ ಅನ್ನು ಕಂಡುಹಿಡಿಯುವಲ್ಲಿ ಪ್ರಮುಖವಾಗಿದೆ.
ನಿಮ್ಮ ಬಜೆಟ್ ಅನ್ನು ಪರಿಗಣಿಸುವಾಗ ವಿವಿಧ ಪ್ಲ್ಯಾನ್ಗಳ ಪ್ರೀಮಿಯಂ ದರಗಳನ್ನು ಹೋಲಿಕೆ ಮಾಡಿ. ನೆನಪಿಡಿ, ಅಗ್ಗದ ಆಯ್ಕೆಯು ಅಗತ್ಯ ಕವರೇಜನ್ನು ನೀಡದಿರಬಹುದು, ಆದ್ದರಿಂದ ನಿಮ್ಮ ಆದ್ಯತೆಗಳನ್ನು ತಿಳಿದುಕೊಳ್ಳಿ ಮತ್ತು ಅದಕ್ಕೆ ಅನುಗುಣವಾಗಿ ಅತ್ಯುತ್ತಮವಾದ ಪಾಲಿಸಿಯನ್ನು ನಿಮ್ಮದಾಗಿಸಿಕೊಳ್ಳಿ.
ಸಮೀಪದಲ್ಲಿ ಗುಣಮಟ್ಟದ ಹೆಲ್ತ್ ಕೇರ್ ಸೌಲಭ್ಯಗಳಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನೆಟ್ವರ್ಕ್ ಆಸ್ಪತ್ರೆಗಳ ಪಟ್ಟಿಯನ್ನು ಚೆಕ್ ಮಾಡಿ. ವ್ಯಾಪಕ ನೆಟ್ವರ್ಕ್ ಆಸ್ಪತ್ರೆಗಳಿಗೆ ಆ್ಯಕ್ಸೆಸ್ ಪಡೆಯುವುದು ತೊಂದರೆ-ಮುಕ್ತ ಕ್ಯಾಶ್ಲೆಸ್ ಚಿಕಿತ್ಸೆಯನ್ನು ಖಚಿತಪಡಿಸುತ್ತದೆ.
ಡಿಜಿಟ್ ಹೆಲ್ತ್ ಇನ್ಶೂರೆನ್ಸ್ನೊಂದಿಗೆ ಭಾರತದಾದ್ಯಂತ 16400+ ಆಸ್ಪತ್ರೆಗಳಲ್ಲಿ ಕ್ಯಾಶ್ಲೆಸ್ ಚಿಕಿತ್ಸೆಯನ್ನು ಪಡೆಯಿರಿ.
ನಿಮ್ಮ ನಿರ್ದಿಷ್ಟ ಅಗತ್ಯಗಳನ್ನು ಪೂರೈಸುವ ಆ್ಯಡ್-ಆನ್ ಕವರ್ಗಳಿಗಾಗಿ ಚೆಕ್ ಮಾಡಿ. ಉದಾಹರಣೆಗೆ ಮೆಟರ್ನಿಟಿ ಬೆನಿಫಿಟ್ಸ್, ಕ್ರಿಟಿಕಲ್ ಇಲ್ನೆಸ್ ಕವರೇಜ್ ಅಥವಾ ಆಯುರ್ವೇದ ಅಥವಾ ಹೋಮಿಯೋಪತಿಯಂತಹ ಪರ್ಯಾಯ ಚಿಕಿತ್ಸೆಗಳಿಗೆ ಕವರೇಜ್.
ಕಡಿತಗೊಳಿಸುವಿಕೆಗಳ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳಿ - ಕಡಿತಗೊಳಿಸುವಿಕೆಗಳು ಎಂದರೆ ಇನ್ಶೂರೆನ್ಸ್ ಕವರೇಜ್ ಪ್ರಾರಂಭವಾಗುವ ಮೊದಲು ನೀವು ಪಾವತಿಸಬೇಕಾದ ಮೊತ್ತ. ಕಡಿತಗೊಳಿಸುವಿಕೆಯ ಮೊತ್ತ ಪಾವತಿಸಲು ನಿಮಗೆ ತೊಂದರೆಯಿಲ್ಲ ಎಂಬುದನ್ನು ಮೌಲ್ಯಮಾಪನ ಮಾಡಿ.
ಕೆಲವು ವೈದ್ಯಕೀಯ ಪ್ರಕ್ರಿಯೆಗಳು ಅಥವಾ ಆಸ್ಪತ್ರೆಯ ಕೊಠಡಿ ಬಾಡಿಗೆಗಳಿಗೆ ಅನ್ವಯವಾಗುವ ಸಹ-ಪಾವತಿ ಮತ್ತು ಉಪ-ಮಿತಿಗಳ ಬಗ್ಗೆ ತಿಳಿದಿರಲಿ. ಈ ಷರತ್ತುಗಳು ನಿಮ್ಮ ಜೇಬಿನ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ಮೌಲ್ಯಮಾಪನ ಮಾಡಿ.
ಕ್ಲೈಮ್ಗಳನ್ನು ಇತ್ಯರ್ಥಪಡಿಸುವಲ್ಲಿ ಕಂಪನಿಯ ದಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಅಳೆಯಲು, ಇನ್ಶೂರರ್ಗಳ ಕ್ಲೈಮ್ ಸೆಟಲ್ಮೆಂಟ್ ರೇಶಿಯೋ ಮತ್ತು ಕಸ್ಟಮರ್ಗಳ ರಿವ್ಯೂಗಳನ್ನು ಚೆಕ್ ಮಾಡಿ.
ಪಾಲಿಸಿ ಖರೀದಿ, ಕ್ಲೈಮ್ ಸಬ್ಮಿಶನ್ಗಳು ಮತ್ತು ರಿನೀವಲ್ಗಳಿಗಾಗಿ ತೊಂದರೆ-ಮುಕ್ತ ಮತ್ತು ಡಿಜಿಟಲ್ ಪ್ರಕ್ರಿಯೆಗಳನ್ನು ನೀಡುವ ಇನ್ಶೂರೆನ್ಸ್ ಪೂರೈಕೆದಾರರನ್ನು ಆಯ್ಕೆಮಾಡಿ. ಯೂಸರ್-ಫ್ರೆಂಡ್ಲಿ ಮತ್ತು ಆನ್ಲೈನ್ ಪ್ಲಾಟ್ಫಾರ್ಮ್ ನಿಮ್ಮ ಸಂಪೂರ್ಣ ಇನ್ಶೂರೆನ್ಸ್ ಅನುಭವವನ್ನು ಸರಳಗೊಳಿಸುತ್ತದೆ ಜೊತೆಗೆ ನಿಮ್ಮ ಅಮೂಲ್ಯ ಸಮಯ ಮತ್ತು ಶ್ರಮವನ್ನು ಉಳಿಸುತ್ತದೆ.
ಡಿಜಿಟ್ನಲ್ಲಿ, ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸುವುದರಿಂದ ಹಿಡಿದು ಕ್ಲೈಮ್ಗಳನ್ನು ಮಾಡುವವರೆಗಿನ ಪ್ರಕ್ರಿಯೆಯು ಪೇಪರ್ಲೆಸ್, ಸುಲಭ, ತ್ವರಿತ ಮತ್ತು ತೊಂದರೆ ಮುಕ್ತವಾಗಿದೆ.
ಹೆಲ್ತ್ ಇನ್ಶೂರೆನ್ಸ್ ಫ್ರೀಲ್ಯಾನ್ಸರ್ಗಳು ಮತ್ತು ಸೆಲ್ಫ್-ಎಂಪ್ಲಾಯ್ಡ್ ಪ್ರೊಫೆಷನಲ್ಗಳಿಗೆ ಅನಿವಾರ್ಯ ಇನ್ವೆಸ್ಟ್ಮೆಂಟ್ ಆಗಿದೆ. ಇದು ಕೇವಲ ಅವರ ಆರೋಗ್ಯವನ್ನು ಕಾಪಾಡುವುದು ಮಾತ್ರವಲ್ಲದೆ, ಅನಿರೀಕ್ಷಿತ ಗಿಗ್ ಆರ್ಥಿಕತೆಯಲ್ಲಿ ಅವರಿಗೆ ಆರ್ಥಿಕ ಸ್ಥಿರತೆಯನ್ನು ಖಾತ್ರಿಗೊಳಿಸುತ್ತದೆ. ಸರಿಯಾದ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಆಯ್ಕೆ ಮಾಡುವ ಮೂಲಕ ಮತ್ತು ಪ್ರೀಮಿಯಂಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ, ಫ್ರೀಲ್ಯಾನ್ಸರ್ಗಳು ತಮ್ಮ ಯೋಗಕ್ಷೇಮವನ್ನು ಭದ್ರಪಡಿಸಿಕೊಳ್ಳಬಹುದು ಮತ್ತು ಅವರ ನಿಯಮಗಳ ಮೇಲೆ ಯಶಸ್ವಿ ಕರಿಯರ್ ಅನ್ನು ನಿರ್ಮಿಸುವತ್ತ ಗಮನಹರಿಸಬಹುದು.