ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕಡಿಮೆ ಮಾಡುವುದು ಹೇಗೆ

ಡಿಜಿಟ್ ಹೆಲ್ತ್ ಇನ್ಶೂರೆನ್ಸ್ ಅಪಘಾತ ಸಂಬಂಧೀ, ಅನಾರೋಗ್ಯ ಹಾಗೂ ಕೋವಿಡ್-19 ಆಸ್ಪತ್ರೆ ದಾಖಲೀಕರಣ. ನಿಮ್ಮ ಡಿಜಿಟ್ ಪಾಲಿಸಿಯನ್ನು ರಿನ್ಯೂ ಮಾಡಿ

ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕಡಿಮೆ ಮಾಡುವ ಬಗ್ಗೆ ಎಲ್ಲಾ ಮಾಹಿತಿಗಳು

ಭಾರತೀಯರನ್ನು ಕಳೆದ ಕೆಲವು ವರ್ಷಗಳಿಂದ ಕಾಡುತ್ತಿರುವ ಒಂದು ಅತ್ಯಂತ ಗಂಭೀರ ವಿಷಯವೆಂದರೆ ವೈದ್ಯಕೀಯ ಹಣದುಬ್ಬರ. ಪ್ರೀಮಿಯಂ ಆರೋಗ್ಯ ಆರೈಕೆಯ ವೆಚ್ಚಗಳು ನಿಯಮಿತವಾಗಿ ಹೆಚ್ಚುತ್ತಿರುವುದರಿಂದ, ಕೆಳ ಹಾಗೂ ಮಧ್ಯಮ ವರ್ಗದ ಜನರಿಗೆ ತಮ್ಮ ಖರ್ಚುಗಳನ್ನು ನಿಭಾಯಿಸುವುದು ಕಷ್ಟವಾಗುತ್ತಿದೆ.

ಆದರೆ, ಈ ಸಂದರ್ಭದಲ್ಲಿ ಮಾಡುವುದಾದರೂ ಏನು?

ಖಂಡಿತವಾಗಿಯೂ, ಒಂದು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಿ!

ಭಾರತದಲ್ಲಿ, ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳನ್ನು ಸುಮಾರು 34 ಇನ್ಶೂರೆನ್ಸ್ ಕಂಪನಿಗಳು ನೀಡುತ್ತವೆ. ಈ ಯೋಜನೆಗಳು, ಅನಾರೋಗ್ಯ ಚಿಕಿತ್ಸೆ ಅಥವಾ ಅಪಘಾತದ ಸಂದರ್ಭದಲ್ಲಿ ತಗಲುವ ವೆಚ್ಚಗಳಿಗಾಗಿ ಪರಿಣಾಮಕಾರಿಯಾದ ಆರ್ಥಿಕ ಬೆಂಬಲವನ್ನು ನೀಡುತ್ತವೆ. ಆದರೆ, ಕೆಲವೊಮ್ಮೆ ಈ ಕವರ್ ಗಳ ದರಗಳು ಚಿಂತೆಗೆ ಕಾರಣವಾಗಬಹುದು.

ಹಾಗಾದರೆ, ಇಂತಹ ಸಂದರ್ಭದಲ್ಲಿ ಏನು ಮಾಡಬೇಕು? ತಿಳಿಯಲು ಮುಂದೆ ಓದಿ!

ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕಡಿಮೆ ಮಾಡಲು 9 ವಿಧಾನಗಳು

1. ಚಿಕ್ಕ ವಯಸ್ಸಿನಲ್ಲೇ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿ

ಚಿಕ್ಕ ವಯಸ್ಸಿನಲ್ಲೇ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕಡಿಮೆ ಮಾಡುವ ಒಂದು ಖಚಿತ ವಿಧಾನಗಳಲ್ಲಿ ಒಂದಾಗಿದೆ.

ಬಹುತೇಕ ಇನ್ಶೂರೆನ್ಸ್ ಪ್ರೊವೈಡರ್ ಗಳು ನಿಮ್ಮ ವಯಸ್ಸು, ವೈದ್ಯಕೀಯ ಇತಿಹಾಸಗಳಂತಹ ಅಂಶಗಳನ್ನು ಪರಿಗಣಿಸಿ ನೀವು ಕವರ್ ಗಾಗಿ ಅರ್ಹರೇ ಅಲ್ಲವೇ ಎಂದು ನಿರ್ಧರಿಸುತ್ತಾರೆ. ಆದ್ದರಿಂದ, ಸಮಸ್ಯೆ ಏನೆಂದರೆ, ನಿಮಗೆ ವಯಸ್ಸಾಗುತ್ತಿದ್ದ ಹಾಗೇ ಕವರ್ ಅನ್ನು ಪಡೆಯುವುದು ಹೆಚ್ಚು ಕಷ್ಟವಾಗುತ್ತದೆ.

ಸಾಮಾನ್ಯ ವಯಸ್ಸು ಸಂಬಂಧಿತ ಕಾಯಿಲೆಗಳಾದ ಡಯಾಬಿಟೀಸ್, ಹೃದಯ ಸಂಬಂಧೀ ಕಾಯಿಲೆಗಳು, ರಕ್ತದೊತ್ತಡದ ಸಮಸ್ಯೆಗಳು ನಿಮ್ಮ ವೈದ್ಯಕೀಯ ಇತಿಹಾಸವನ್ನು ಸೇರಿಕೊಳ್ಳುವುದರಿಂದ, ಇನ್ಶೂರೆನ್ಸ್ ಪ್ರೊವೈಡರ್ ಗಳು ನಿಮ್ಮ ಇನ್ಶೂರೆನ್ಸ್ ಪಾಲಿಸಿಯ ಪ್ರೀಮಿಯಂ ಪಾವತಿಗಳನ್ನು ಹೆಚ್ಚಿಸುತ್ತಾರೆ.

ಆದ್ದರಿಂದಲೇ, ಕಡಿಮೆ ಪ್ರೀಮಿಯಂ ಪವತಿಗಳಿರುವ ಪಾಲಿಸಿಯನ್ನು ಪಡೆಯಲು, ನೀವು ಉತ್ತಮ ಆರೋಗ್ಯ ಸ್ಥಿತಿಯಲ್ಲಿರುವಾಗಲೇ ಹೆಲ್ತ್ ಇನ್ಶೂರೆನ್ಸ್ ಖರೀದಿಸುವುದು ಉತ್ತಮ ವಿಚಾರವಾಗಿದೆ. ಹೀಗೆ, ನಿಮ ಹಿರಿ ವಯಸ್ಸಿನಲ್ಲಿ ಪಾವತಿಸುವ ಪ್ರೀಮಿಯಂ ಗೆ ಹೋಲಿಸಿದರೆ, ನಿಮ್ಮ ಪ್ರೀಮಿಯಂ ತುಂಬಾ ಕಡಿಮೆಯಿರುತ್ತದೆ.

 

ಇನ್ನಷ್ಟು ತಿಳಿಯಿರಿ

2. ಕಡಿಮೆ ಇನ್ಶೂರ್ಡ್ ಮೊತ್ತವಿರುವ ಪಾಲಿಸಿಯನ್ನು ಆಯ್ಕೆ ಮಾಡಿ

ನೀವು ನಿಮ್ಮ ಪಾಲಿಸಿ ಅಡಿಯಲ್ಲಿ ಕಡಿಮೆ ಇನ್ಶೂರ್ಡ್ ಮೊತ್ತವನ್ನು ಆಯ್ಕೆ ಮಾಡಿದಾಗ, ನೀವದನ್ನು ಕಡಿಮೆ ಪ್ರೀಮಿಯಂ ನಲ್ಲಿ ಪಡೆಯಬಹುದಾಗಿದೆ.

ಪಾಲಿಸಿಯ ಪ್ರಾರಂಭದಲ್ಲಿ, ನೀವು ಕಡಿಮೆ ಇನ್ಶೂರ್ಡ್ ಮೊತ್ತವನ್ನು ಪಡೆದು ಸಮಯ ಕಳೆದಂತೆ ಮೊತ್ತವನ್ನು ಹೆಚ್ಚಿಸುತ್ತಾ ಹೋಗಬಹುದು. ಈ ರೀತಿ, ನೀವು ನಿಮ್ಮ ಪಾಲಿಸಿಯನ್ನು ಚೆನ್ನಾಗಿ ನಿಭಾಯಿಸಬಹುದು.

3. ಸಹಪಾವತಿ ಹಾಗೂ ಡಿಡಕ್ಟಿಬಲ್ ಗಳ ಆಯ್ಕೆಯನ್ನು ಮಾಡಿ

ಕೆಲ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು, ನಿಮ್ಮ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ, ನಿಮಗೆ ಸ್ವಂತವಾಗಿ ಡಿಡಕ್ಟಿಬಲ್  ಆಯ್ಕೆ ಮಾಡುವ ಹಾಗೂ ಸಹಪಾವತಿ ನಿಯಮಗಳನ್ನು ಆಯ್ಕೆ ಮಾಡುವ ಅನುಮತಿಯನ್ನು ನೀಡುತ್ತವೆ.

ಆದರೆ ಅದನ್ನು ಆಯ್ದುಕೊಳ್ಳುವ ಮೊದಲು, ಈ ಅಂಶಗಳು ಏನನ್ನು ಸೂಚಿಸುತ್ತವೆ ಎಂದು ನೀವು ತಿಳಿಯುವ ಅಗತ್ಯವಿದೆ:

ಸಹ ಪಾವತಿ ಡಿಡಕ್ಟಿಬಲ್ ಸಹ-ಇನ್ಶೂರೆನ್ಸ್
ಸಹಪಾವತಿ ಎಂದರೆ, ಕ್ಲೈಮ್ ಇತ್ಯರ್ಥದ ಸಂದರ್ಭದಲ್ಲಿ ನಿಮ್ಮ ಚಿಕಿತ್ಸೆಯ ವೆಚ್ಚಗಳ ಒಂದು ನಿಗದಿತ ಭಾಗವನ್ನು ನೀವು ನೀಡಿ ಉಳಿದ ಭಾಗವನ್ನು ನಿಮ್ಮ ಇನ್ಶೂರೆನ್ಸ್ ಪಾಲಿಸಿ ಕವರ್ ಮಾಡುವುದಾಗಿದೆ. ಡಿಡಕ್ಟಿಬಲ್ ಎಂದರೆ, ನಿಮ್ಮ ಇನ್ಶೂರೆನ್ಸ್ ಪಾಲಿಸಿ ಅದಕ್ಕಾಗಿ ಕೊಡುಗೆ ನೀಡುವುದನ್ನು ಆರಂಭಿಸುವ ಮೊದಲೇ ನೀವು ಚಿಕಿತ್ಸೆಗಳಿಗೆ ನೀಡಬೇಕಾದ ನಿಗದಿತ ಪಾವತಿಯಾಗಿದೆ. ಸಹ-ಇನ್ಶೂರೆನ್ಸ್ ಅನ್ನು ಕೆಲವು ಬಾರಿ ಇನ್ಶೂರೆನ್ಸ್ ಪ್ರೊವೈಡರ್ ಗಳಿಂದ ಪರ್ಯಾಯವಾಗಿ ಸಹಪಾವತಿಗಾಗಿ ಬಳಸಲಾಗುತ್ತದೆ.
ಸಹಪಾವತಿ ಮೊತ್ತವು ನಿಗದಿತವಾಗಿರುತ್ತದೆ. ಆದರೆ ವಿವಿಧ ಸೇವೆಗಳಿಗೆ ಮೊತ್ತವು ಭಿನ್ನವಿರಬಹುದು. ನಂತರ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಬಿಲ್ಲಿನ ಹೆಚ್ಚಿನ ಭಾಗವನ್ನು ಕವರ್ ಮಾಡುತ್ತದೆ. ಸಹ ಇನ್ಶೂರೆನ್ಸ್ ನಲ್ಲಿ, ನೀವು ಚಿಕಿತ್ಸೆಯ ವೆಚ್ಚದ ಒಂದು ನಿಗದಿತ ಭಾಗವನ್ನು ಆವತಿಸಬೇಕಾಗುತ್ತದೆ, ಹಾಗೂ ಉಳಿದ ಭಾಗವನ್ನು ನಿಮ್ಮ ಇನ್ಶೂರೆನ್ಸ್ ಪ್ರೊವೈಡರ್ ಕವರ್ ಮಾಡುತ್ತಾರೆ. ಹಾಗೂ, ಕೋ ಇನ್ಶೂರೆನ್ಸ್ ಮೊತ್ತವು ನಿಗದಿತವಾಗಿ ಇರುವುದಿಲ್ಲ.

ಈಗ ನಿಮಗೆ ಪ್ರತೀ ಸಹ ಹಂಚುವಿಕೆ ಯೋಜನೆಯ ಅರ್ಥ ತಿಳಿದಿರುವುದರಿಂದ, ಇದನ್ನು ನೀವು ನಿಮ್ಮ ಹೆಲ್ತ್ ಇನ್ಶೂರೆನ್ಸ್ ಯೋಜನೆಯ ಪ್ರೀಮಿಯಂ ಮೊತ್ತವನ್ನು ಕಡಿಮೆ ಮಾಡಲು ಬಳಸಬಹುದು.

ಹಾಗೂ, ಅದರಿಂದ ಗರಿಷ್ಠ ಲಾಭಗಳನ್ನು ಪಡೆಯಲು, ನೀವು ಇಂತಹ ವೆಚ್ಚ ಹಂಚಿಕೆಯ ಆಯ್ಕೆ ಇರುವ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳ ಹೋಲಿಕೆ ಮಾಡಬೇಕು.

ಏಕೆಂದರೆ, ನೀವು ಸಹಪಾವತಿ, ಡಿಡಕ್ಟಿಬಲ್ ಇತ್ಯಾದಿಗಳಿಗಾಗಿ ಸರಿಯಾದ ಮೊತ್ತವನ್ನು ಆಯ್ಕೆ ಮಾಡದಿದ್ದರೆ, ನೀವು ನಿಮ್ಮ ಪ್ರೀಮಿಯಂ ಉಳಿತಾಯಕ್ಕಿಂತಲೂ ಹೆಚ್ಚು ಹಣವನ್ನು ಚಿಕಿತ್ಸೆಯ ವೆಚ್ಚಗಳಲ್ಲಿ ಪಾವತಿಸಬಹುದು.

 

ಸಹಪಾವತಿ ಸಹಇನ್ಶೂರೆನ್ಸ್ ಹಾಗೂ ಡಿಡಕ್ಟಿಬಲ್ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಇನ್ನಷ್ಟು ತಿಳಿಯಿರಿ.

4. ನಿಮ್ಮ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳ ಮಧ್ಯೆ ಸಮತೋಲನವಿರಲಿ

ಕೆಲವೊಮ್ಮೆ, ನಿಮ್ಮ ಉದ್ಯೋಗದಾತರು ನಿಮಗೆ ಗುಂಪು ಇನ್ಶೂರೆನ್ಸ್ ಪಾಲಿಸಿಯನ್ನು ಒದಗಿಸುತ್ತಾರೆ. ಹಾಗೂ ನಿಮ್ಮ ಆರ್ಥಿಕತೆಯನ್ನು ಇನ್ನಷ್ಟೂ ಸದೃಢಗೊಳಿಸಲು ನೀವು ಹೆಚ್ಚುವರಿ ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನೂ ಖರೀದಿಸುತ್ತೀರಿ.

ಇದರ ಜೊತೆ, ಅವರೊಂದಿಗೆ ಅವರ ಕುಟುಂಬವನ್ನು ಇನ್ಶೂರ್ ಮಾಡಲು ಪಾಲಿಸಿದಾರರು ಫ್ಯಾಮಿಲಿ ಫ್ಲೋಟರ್ ಪಾಲಿಸಿಯನ್ನೂ ಆಯ್ಕೆ ಮಾಡುತ್ತಾರೆ.

ಇಷ್ಟೊಂದು ಇನ್ಶೂರೆನ್ಸ್ ಪಾಲಿಸಿಗಳು ಸಕ್ರಿಯವಾಗಿರುವಾಗ, ಅವುಗಳ ಪಾಲಿಸಿ ಪ್ರೀಮಿಯಂ ಪಾವತಿಗಳನ್ನು ನಿಭಾಯಿಸುವುದು ನಿಮಗೆ ಕಷ್ಟವಾಗಬಹುದು. ಈ ಸಂದರ್ಭದಲ್ಲಿ, ನೀವು ವೈಯಕ್ತಿಕ ಇನ್ಶೂರೆನ್ಸ್ ಅನ್ನು ಪಡೆಯುವುದು ಉತ್ತಮವಾದ ವಿಚಾರವಾಗಿರುತ್ತದೆ. ನಿಮ್ಮ ಇತರ ಇನ್ಶೂರೆನ್ಸ್ ಕವರ್ ಗಳಿಂದ ನಿಮಗೆ ದೊರೆಯುವ ಇತರ ಹತ್ತು ಹಲವು ಲಾಭಗಳನ್ನು ಪರಿಗಣಿಸಿ.

ಈ ರೀತಿ, ನಿಮ್ಮ ಇನ್ಶೂರೆನ್ಸ್ ಪಾಲಿಸಿಗಳಿಗಾಗಿ ಇರುವ ಪ್ರೀಮಿಯಂ ಪಾವತಿಗಳನ್ನು ನೀವು ಪರಿಣಾಮಕಾರಿಯಾಗಿ ನಿಭಾಯಿಸಬಹುದಾಗಿ

5. ಟಾಪ್-ಅಪ್ ಯೋಜನೆಗಳನ್ನು ಆಯ್ಕೆ ಮಾಡಿ

ಭಾರೀ ಪ್ರೀಮಿಯಂ ಅನ್ನು ಪಾವತಿಸದೆಯೇ ಹೆಚ್ಚಿನ ಕವರೇಜ್ ಅನ್ನು ಪಡೆಯುವ ವಿಷಯ ಬಂದಾಗ ಟಾಪ್-ಅಪ್ ಯೋಜನೆಗಳು ಅತ್ಯಂತ ಪ್ರಯೋಜನಕಾರಿಯಾಗಿರುತ್ತವೆ.

ಟಾಪ್-ಅಪ್ ಯೋಜನೆಗಳು ಸಾಮಾನ್ಯವಾಗಿ ನಿಮ್ಮ ಕವರ್ ಅನ್ನು ಎರಡು ಭಾಗಗಳಾಗಿ ವಿಂಗಡಿಸಲು ಸಹಾಯ ಮಾಡುತ್ತವೆ. ಇದು ನಿಮಗೆ, ನಿಮ್ಮ ಪೂರ್ವನಿರ್ಧಾರಿತ ಮಿತಿಯನ್ನೂ ಮೀರಿದ ಹೆಚ್ಚಿನ ಕ್ಲೈಮ್ ಅನ್ನು ರೈಸ್ ಮಾಡಲು ಅನುಮತಿಯನ್ನು ನೀಡುತ್ತದೆ.

ವಿಷಯಗಳನ್ನು ಸರಳೀಕರಿಸಲು ನಾವು ಒಂದು ಉದಾಹರಣೆಯನ್ನು ನೋಡೋಣ:

ನೀವು 10 ಲಕ್ಷದ ಯೋಜನೆಯನ್ನು ಹೊಂದಿದ್ದು ಅದರ ಬೆಂಚ್ ಮಾರ್ಕ್ ರೂ. 5 ಲಕ್ಷವಿದೆ ಎಂದು ಭಾವಿಸಿ. ನೀವು ಈ ಯೋಜನೆಯ ವಿರುದ್ಧ ರೂ 7 ಲಕ್ಷದ ಕ್ಲೈಮ್ ರೈಸ್ ಮಾಡುತ್ತೀರಿ.  ನಂತರ, ಇನ್ಶೂರೆನ್ಸ್ ಕಂಪನಿಯು ನಿಮ್ಮ ವೆಚ್ಚಕ್ಕೆ ತಗುಲಿದ ಹೆಚ್ಚುವರಿ ರೂ. 2 ಲಕ್ಷವನ್ನು ಪಾವತಿಸುತ್ತದೆ.

ಈ ರೀತಿ, ನೀವು ನಿಮ್ಮ ಇನ್ಶೂರೆನ್ಸ್ ಯೋಜನೆಗೆ ಕಡಿಮೆ ಪ್ರೀಮಿಯಂ ಅನ್ನು ಪಾವತಿಸಿ ನಿಮ್ಮ ಚಿಕಿತ್ಸೆಯ ವೆಚ್ಚದ ಬೇಡಿಕೆಯಿದ್ದರೆ ನೀವು ಟಾಪ್ ಅಪ್ ಯೋಜನೆಯನ್ನು ಪಡೆಯಬಹುದಾಗಿದೆ.

6. ಸರಿಯಾದ ಜೋನಿನಿಂದ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿ.

ಭಾರತದಲ್ಲಿ, ವಿವಿಧ ನಗರಗಳನ್ನು ಝೋನ್ ಗಳಾಗಿ ವಿಂಗಡಿಸಲಾಗಿದೆ, ಆ ನಗರದ ವೈದ್ಯಕೀಯ ವೆಚ್ಚಗಳನ್ನು ಆಧರಿಸಿ. ಝೋನ್ ಎಷ್ಟು ಹೇಚ್ಚಿನದಿರುತ್ತದೆಯೋ(A, B, ಅಥವಾ C) ನಿಮ್ಮ ಪ್ರೀಮಿಯಂ ಕೂಡಾ ಅಷ್ಟೇ ಹೆಚ್ಚಿರುತ್ತದೆ. ಇದನ್ನು ಕೆಳಗಿನ ಟೇಬಲಿನಲ್ಲಿ ನೀಡಲಾಗಿದೆ:

ಝೋನ್ A ಝೋನ್ B
ದೆಹೆಲಿ, ಎನ್ ಸಿ ಆರ್, ಮುಂಬೈ(ನವಿ ಮುಂಬೈ, ಥಾಣೆ ಹಾಗೂ ಕಲ್ಯಾಣ್ ಅನ್ನೂ ಸೇರಿ) ಹೈದೆರಾಬಾದ್, ಸೆಕುಂದ್ರಾಬಾದ್, ಬೆಂಗಳೂರು, ಕೋಲ್ಕತ್ತಾ, ಅಹ್ಮದಾಬಾದ್, ವಡೋದರ, ಚೆನ್ನೈ. ಪುಣೆ, ಸೂರತ್
ಅಂದಾಜು ಪ್ರೀಮಿಯಂ ₹6,448 ಅಂದಾಜು ಪ್ರೀಮಿಯಂ ₹5,882

 

ಆದ್ದರಿಂದಲೇ, ನೀವು ವಾಸವಾಗಿರುವ ಸರಿಯಾದ ಜೋನಿನಿಂದಲೇ ಪಾಲಿಸಿಯನ್ನು ಖರೀದಿಸುವುದು ಮುಖ್ಯವಾಗುತ್ತದೆ. ಉದಾಹರಣೆಗೆ, ನೀವು ಝೋನ್ ಬಿ ಅಥವಾ ಸಿ ನಗರದಲ್ಲಿ ವಾಸವಾಗಿದ್ದರೆ, ಝೋನ್ ಎ ಯ ಪಾಲಿಸಿಯನ್ನು ಖರೀದಿಸಬೇಡಿ ಏಕೆಂದರೆ ನೀವು ವಿನಾಕಾರಣ ಹೆಚ್ಚು ಪ್ರೀಮಿಯಂ ಅನ್ನು ಪಾವತಿಸುತ್ತೀರಿ. ಆದ್ದರಿಂದ, ಸರಿಯಾದ ಜೋನಿನಿಂದ ಪಾಲಿಸಿಯನ್ನು ಖರೀದಿಸುವುದರಿಂದ ನೀವು ಹೆಚ್ಚು ಪರಿಣಾಮಕಾರಿಯಾಗಿ ಪ್ರೀಮಿಯಂ ಪಾವತಿಸಿವುದನ್ನು ಖಚಿತಪಡಿಸಬಹುದಾಗಿದೆ.

7. ದೀರ್ಘಾವಧಿಯ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳನ್ನು ಆರಿಸಿ

ದೀರ್ಘಾವಧಿಯ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳ ಪ್ರೀಮಿಯಂ ಪಾವತಿಗಳು, ವಾರ್ಷಿಕ ಅವಧಿಯಿರುವ ಸಾಧಾರಣ ಯೋಜನೆಯಾ ಪ್ರೀಮಿಯಂ ಯೋಜನೆಗಿಂತ ಕಡಿಮೆ ಇರುತ್ತದೆ. ಆದ್ದರಿಂದ, 2-3 ಅವಧ್ಯಿರುವ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳನ್ನು ಆಯ್ಕೆ ಮಾಡುವುದರಿಂದ, ನಿಮ್ಮ ಪ್ರೀಮಿಯಂ ಮೊತ್ತವನ್ನು ನೀವು ಗಣನೀಯವಾಗಿ ಕಡಿಮೆ ಮಾಡಬಹುದು.

ಇತ್ತೀಚಿನ ವರ್ಷಗಳಲ್ಲಿ, ಹಲವು ಇನ್ಶೂರೆನ್ಸ್ ಕಂಪನಿಗಳು ಈ ದೀರ್ಘಾವಧಿ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳು ಕೂಡಲೇ ಲಭ್ಯವಿರುವಂತೆ ಮಾಡಿದ್ದವೆ. ನಿಮ್ಮ ಯೋಜನೆಯಿಂದ ನೀವು ಗರಿಷ್ಠ ಲಾಭ ಪಡೆಯಬೇಕೆಂದಿದ್ದರೆ, ನಿಮ್ಮ ಅಗತ್ಯಗಳಿಗೆ ಸರಿಹೊಂದುವ ಯೋಜನೆಯನ್ನು ಆಯ್ಕೆ ಮಾಡಲು, ಹಲವು ಇನ್ಶೂರೆನ್ಸ್ ಪ್ರೊವೈಡರ್ ಗಳು ಒದಗಿಸುವ ಪಾಲಿಸಿಗಳನ್ನು ಹೋಲಿಸಿ ನೋಡಿ.

8. ಫ್ಯಾಮಿಲಿ-ಫ್ಲೋಟರ್ ಯೋಜನೆಯನ್ನು ಆಯ್ಕೆ ಮಾಡಿ

ಒಂದು ಫ್ಯಾಮಿಲಿ-ಫ್ಲೋಟರ್ ಇನ್ಶೂರೆನ್ಸ್ ಯೋಜನೆಯು ನಿಮ್ಮ ಪ್ರೀಮಿಯಂ ಗಳನ್ನು ಸಹಾಯ ಮಾಡಲು ಹೇಗೆ ಸಹಾಯ ಮಾಡುತ್ತದೆ ಎಂದು ತಿಳಿಯುವ ಮೊದಲು, ವೈಯಕ್ತಿಕ ಹಾಗೂ ಫ್ಯಾಮಿಲಿ-ಫ್ಲೋಟರ್ ಯೋಜನೆಯ ಮಧ್ಯೆ ಇರುವ ವ್ಯತ್ಯಾಸವನ್ನು ತಿಳಿಯಿರಿ.

ಅವುಗಳ ಮಧ್ಯೆ ಇರುವ ವ್ಯತ್ಯಾಸವನ್ನು ಈ ಟೇಬಲಿನಲ್ಲಿ ನೀಡಲಾಗಿದೆ

ಮಾನದಂಡಗಳು ವೈಯಕ್ತಿಕ ಯೋಜನೆಗಳು ಫ್ಯಾಮಿಲಿ ಫ್ಲೋಟರ್ ಯೋಜನೆಗಳು
ಪ್ರಯೋಜನ ಈ ಯೋಜನೆಯಡಿಯಲ್ಲಿ, ಒಂದು ಸಿಂಗಲ್ ಇನ್ಶೂರೆನ್ಸ್ ಯೋಜನೆಯ ಇನ್ಶೂರ್ಡ್ ಮೊತ್ತವು ಪರಿವಾರದ ಪ್ರತಿ ಸದಸ್ಯರಿಗೂ ಸ್ಥಿರವಾಗಿರುತ್ತದೆ ಈ ಯೋಜನೆಯಲ್ಲಿ, ಸಂಪೂರ್ಣ ಇನ್ಶೂರ್ಡ್ ಮೊತ್ತವನ್ನುಒಬ್ಬ ವ್ಯಕ್ತಿಯ ಚಿಕಿತ್ಸೆಗಾಗಿ ಬಳಸಬಹುದಾಗಿದೆ
ಪ್ರೀಮಿಯಂ ಪಾವತಿ ಈ ರೀತಿಯ ಹೆಲ್ತ್ ಇನ್ಶೂರೆನ್ಸ್ ಪಾವತಿಯ ಪ್ರೀಮಿಯಂ ಅದರಡಿಯಲ್ಲಿ ಕವರ್ ಆಗಿರುವ ಪ್ರತೀ ವ್ಯಕ್ತಿಯ ವಯಸ್ಸು ಹಾಗೂ ಇನ್ಶೂರ್ಡ್ ಮೊತ್ತವನ್ನು ಆಧರಿಸಿದೆ. ಈ ಸಂದರ್ಭದಲ್ಲಿ, ಹೆಚ್ಚಿನ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳ ಪ್ರೀಮಿಯಂ, ಕವರ್ ಆದ ಪರಿವಾರದ ಸದಸ್ಯರ ಅತ್ಯಂತ ಹಿರಿಯ ವ್ಯಕ್ತಿಯ ವಯಸ್ಸನ್ನು ಆಧರಿಸಿದೆ.
ದರಗಳ ಮಧ್ಯೆ ಇರುವ ವ್ಯತ್ಯಾಸಗಳು ಪ್ರತಿ ಪಾಲಿಸಿಗಾಗಿ ಇರುವ ಪ್ರೀಮಿಯಂ ಪಾವತಿಯು ಸಾಮಾನ್ಯವಾಗಿ ಹೆಚ್ಚಿರುತ್ತದೆ. ಫ್ಯಾಮಿಲಿ ಫ್ಲೋಟರ್ ಯೋಜನೆಯಲ್ಲಿ, ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳಿಗೆ ಹೋಲಿಸಿದರೆ, ಪಾಲಿಸಿಯ ವೆಚ್ಚವು 20% ಕಡಿಮೆ ಇರುತ್ತದೆ.

 

ಮೇಲಿನ ಟೆಬಲ್ ಅನ್ನು ನೋಡಿದಾಗ ಫ್ಯಾಮಿಲಿ ಫ್ಲೋಟರ್ ಯೋಜನೆಗಳು ವೈಯಕ್ತಿಕ ಯೋಜನೆಗಳಿಗಿಂತ ಕಡಿಮೆ ದರದ್ದಾಗಿದೆ ಎಂದು ನಮಗೆ ತಿಳಿಯುತ್ತದೆ.

9. ಯೋಜನೆಗಳ ಶಕ್ತತೆಗಳ ಆನ್ಲೈನ್ ಹೋಲಿಕೆ ಮಾಡಿ

ನೀವು ಯೋಜನೆಗಳ ಆನ್ಲೈನ್ ಹೋಲಿಕೆ ಹಾಗೂ ಖರೀದಿ ಮಾಡಿದಾಗ, ನೀವು ನಿಮ್ಮ ಇನ್ಶೂರೆನ್ಸ್ ಪಾಲಿಸಿ ಮೇಲೆ ಆಕರ್ಷಕ ಕೊಡುಗೆಗಳನ್ನು ಹಾಗೂ ರಿಯಾಯಿತಿಗಳನ್ನು ಪಡೆಯಬಹುದಾಗಿದೆ. ಈ ಕೊಡುಗೆ ಗಳಿಂದಾಗಿ ನೀವು ನಿಮ್ಮ ಪ್ರೀಮಿಯಂ ಪಾವತಿಯ ಮಟ್ಟವನ್ನು ಗಣನೀಯವಾಗಿ ಇಳಿಸಬಹುದಾಗಿದೆ, ಹಾಗೂ ಇದರ ಜೊತೆ ನಿಮಗೆ ಇದರಲ್ಲಿ ದೊರೆಯುವ ಲಾಭಗಳನ್ನೂ ಗರಿಷ್ಠಗೊಳಿಸಬಹುದಾಗಿದೆ.

ಹೆಲ್ತ್ ಇನ್ಶೂರೆನ್ಸ್ ಯೋಜನೆಗಳ ಹೋಲಿಕೆಯ ಬಗ್ಗೆ ಇನ್ನಷ್ಟು

10. ನಿಮ್ಮ ಪೋಷಕರಿಗೆ ಅವರು 60 ವರ್ಷ ವಯಸ್ಸನ್ನು ತಲುಪುವ ಮೊದಲೇ ಪಾಲಿಸಿಯನ್ನು ಖರೀದಿಸಿ.

ಹೆಚ್ಚಿನ ಇನ್ಶೂರೆನ್ಸ್ ಯೋಜನೆಗಳಲ್ಲಿ, ವ್ಯಕ್ತಿಯ ವಯಸ್ಸು 60 ದಾಟಿದಾಗ ಪ್ರೀಮಿಯಂ ದರವೂ ಹೆಚ್ಚುತ್ತದೆ.

ಆದ್ದರಿಂದ ನೀವು ನಿಮ್ಮ ಹೆತ್ತವರಿಗೆ ಇನ್ಶೂರೆನ್ಸ್ ಯೋಜನೆ ಪಡೆಯುವ ಬಗ್ಗೆ ಯೋಚಿಸುತ್ತಿದ್ದರೆ, ಅವರ ವಯಸ್ಸು 60 ದಾಟುವ ಮೊದಲೇ ಇದನ್ನು ಮಾಡಿದರೆ ಉತ್ತಮವಾಗಿರುತ್ತದೆ, ಇದರಿಂದ ನಿಮ್ಮ ಪ್ರೀಮಿಯಂ ಪಾವತಿ ಕಡಿಮೆಯಾಗುತ್ತದೆ.

ಈ ಹತ್ತು ಸಲಹೆಗಳೊಂದಿಗೆ, ನಿಮ್ಮ ಹೆಲ್ತ್ ಇನ್ಶೂರೆನ್ಸ್ ಯೋಜನೆಯ ಪ್ರತಿ ನೀವು ಪಾವತಿಸುವ ಇನ್ಶೂರೆನ್ಸ್ ಸಾಕಷ್ಟು ಪ್ರಾಮಾಣದಲ್ಲಿ ಕಡಿಮೆಯಾಗುತ್ತದೆ.

 

ಆದರೆ ನೆನಪಿಡಿ…

ನೀವು ಪ್ರೀಮಿಯಂ ಪಾವತಿಗಳನ್ನು ಕಡಿಮೆ ಮಾಡುವ ಬಗ್ಗೆ ಯೋಚಿಸುತ್ತಿದ್ದರೂ, ಆ ಯೋಜನೆಯಿಂದ ನಿಮಗೆ ಸಿಗುವ ಕವರೇಜ್ ಮೇಲೆ ನೀವು ಯಾವುದೇ ರೀತಿಯ ರಾಜಿ ಮಾಡಕೂಡದು.

ಒಂದು ಪ್ರೀಮಿಯಂ ವೈದ್ಯಕೀಯ ಆರೈಕೆಯನ್ನು ಆಯ್ಕೆ ಮಾಡಿದಾಗ ಅದರ ವೆಚ್ಚವು ಬಹಳಷ್ಟಿದ್ದು, ನಿಮಗೆ ನಿಭಾಯಿಸಲು ಕಷ್ಟವಾಗಬಹುದು. ಆದ್ದರಿಂದ, ಹೆಲ್ತ್ ಇನ್ಶೂರೆನ್ಸ್ ಯೋಜನೆಯನ್ನು ಖರೀದಿಸುವಾಗ ಕಡಿಮೆ ಪ್ರೀಮಿಯಂ ನ ಅಗ್ಗದ ಇನ್ಶೂರೆನ್ಸ್ ಯೋಜನೆಯನ್ನು ಖರೀದಿಸುವುದು ಎಂದಿಗೂ ಒಳ್ಳೆಯ ವಿಚಾರವಾಗಿರುವುದಿಲ್ಲ!

ಹೆಲ್ತ್ ಇನ್ಶೂರೆನ್ಸ್ ಯೋಜನೆಯ ಪ್ರೀಮಿಯಂ ಅನ್ನು ಕಡಿಮೆ ಮಾಡುವ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು

ಕಡಿಮೆ ಪ್ರೀಮಿಯಂ ಪಾವತಿ ಎಂದರೆ ಇನ್ಶೂರೆನ್ಸ್ ಪಾಲಿಸಿ ಸಮರ್ಪಕವಗಿರುವುದಿಲ್ಲ ಎಂದು ಅರ್ಥವೇ?

ಇದು ನಿಜವಲ್ಲ ಏಕೆಂದರೆ, ಇನ್ಶೂರೆನ್ಸ್ ಪಾಲಿಸಿಯ ದರವು ಒಂದು ಇನ್ಶೂರೆನ್ಸ್ ಪ್ರೊವೈಡರ್ ನಿಂದ ಇನ್ನೊಬ್ಬರಿಗೆ ಭಿನ್ನವಾಗಿರುತ್ತದೆ. ಆದ್ದರಿಂದ, ಒಂದು ಇನ್ಶೂರೆನ್ಸ್ ಕಂಪನಿ ನೀಡುವ ಕವರ್ ಇನ್ನೊಂದರಿಂದ ಕಡಿಮೆ ದರದಲ್ಲಿ ಲಭ್ಯವಿರಬಹುದು.

ಹೆಲ್ತ್ ಇನ್ಶೂರೆನ್ಸ್ ಅಡಿಯಲ್ಲಿ ಮೆಟರ್ನಿಟಿ ಆರೈಕೆಯ ಕವರೇಜ್ ಅನ್ನು ನೀಡಲಾಗುತ್ತದೆಯೇ?

ಮೆಟರ್ನಿಟಿ ಕವರೇಜ್ ಹೆಚ್ಚಾಗಿ ಹೆಲ್ತ್ ಇನ್ಶೂರೆನ್ಸ್ ಯೋಜನೆಯ ಒಂದು ಆಡ್-ಆನ್ ರೀತಿಯಲ್ಲಿ ಲಭ್ಯವಿದೆ.

ಮೆಟರ್ನಿಟಿ ಲಾಭಗಳೊಂದಿಗಿನ ಹೆಲ್ತ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ.

ನೆಟ್ವರ್ಕ್ ಆಸ್ಪತ್ರೆ ಎಂದರೇನು?

ನೆಟ್ವರ್ಕ್ ಆಸ್ಪತ್ರೆ ಎಂದರೆ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಯೋಜನೆಯಡಿಯಲ್ಲಿ ನೀವು ನಗದುರಹಿತ ಚಿಕಿತ್ಸೆಯನ್ನು ಪಡೆಯಬಹುದಾದ ಆಸ್ಪತ್ರೆಯಾಗಿದೆ.

ಕ್ಯಾಷ್ಲೆಸ್ ಹೆಲ್ತ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ.