ಪ್ರತೀ ವರ್ಷ ಹಲವಾರು ಹೊಸ ಕಾರುಗಳು ಬಿಡುಗಡೆಯಾದರೂ, ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಸಿಟಿ ಎಲ್ಲಿಯವರೆಗೆ ಇರುತ್ತದೆಯೇ ಅಲ್ಲಿಯವರೆಗೆ ವಿಶೇಷ ವೆಹಿಕಲ್ ಎಂದೇ ಪರಿಗಣಿಸಲಾಗುತ್ತದೆ. ಇವತ್ತು, ಇದು ಭಾರತದ ಅತ್ಯಂತ ಜನಪ್ರಿಯ ಸೆಡಾನ್ಗಳಲ್ಲಿ ಒಂದಾಗಿದೆ, ಶೈಲಿ ಸೌಕರ್ಯ ಮತ್ತು ಕಾರ್ಯಕ್ಷಮತೆಯ ಮಧ್ಯೆ ಆಸಕ್ತಿಕರ ಸಮತೋಲನವನ್ನು ಒದಗಿಸುತ್ತದೆ.
ವರ್ಷಗಳು ಕಳೆದಂತೆ, ಹೋಂಡಾದ ಈ ಉತ್ಪನ್ನ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದಿದೆ. 2014ರಲ್ಲಿ ಈ ವೆಹಿಕಲ್ ಜೆ.ಡಿ. ಪವರ್ಸ್ ಏಷ್ಯಾ ಅವಾರ್ಡ್ಸ್ನಲ್ಲಿ ಮೋಸ್ಟ್ ಡಿಪೆಂಡೆಬಲ್ ಕಾರ್ ಎಂಬ ಕಿರೀಟವನ್ನು ಧರಿಸಿಕೊಂಡಿತು. (1)
ಸಹಜವಾಗಿ, ಈ ಕಾರುಗಳ ಮಾಲೀಕರು ತಮ್ಮ ಆರ್ಥಿಕ ಭದ್ರತೆ ನೋಡಿಕೊಳ್ಳುವಾಗ ವೆಹಿಕಲ್ನ ದೀರ್ಘಾಯುಷ್ಯ ಮತ್ತು ಬಾಳಿಕೆಗಾಗಿ ಗುಣಮುಟ್ಟದ ಹೋಂಡಾ ಸಿಟಿ ಕಾರ್ ಇನ್ಸೂರೆನ್ಸ್ ಪಾಲಿಸಿಯಲ್ಲಿ ಹೂಡಿಕೆ ಮಾಡುವ ಅವಶ್ಯಕತೆ ಇದೆ.
ಮೋಟಾರ್ ಇನ್ಶೂರೆನ್ಸ್ ಖರೀದಿ ಸಂದರ್ಭದಲ್ಲಿ ನೀವು ಎರಡು ರೀತಿಯ ಪ್ರೈಮ್ ಆಯ್ಕೆಗಳ ಮಧ್ಯೆ ಒಂದನ್ನು ಆರಿಸಿಕೊಳ್ಳಬಹುದು- ಥರ್ಡ್-ಪಾರ್ಟಿ ಲಯಬಿಲಿಟಿ ಅಥವಾ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿ.
ಈ ಮೊದಲನೆಯದನ್ನು ನಿಮ್ಮ ಕಾರನ್ನು ಒಳಗೊಂಡು ನಡೆಯುವ ವೆಹಿಕಲ್ನ ಅಪಘಾತ ಅಥವಾ ಅವರ ವ್ಯಕ್ತಿ, ಪ್ರಾಪರ್ಟಿಗಳಿಗೆ ಸಂಭವಿಸಿದ ಡ್ಯಾಮೇಜ್ಗಳಿಗೆ ಥರ್ಡ್-ಪಾರ್ಟಿಗಳಿಗೆ ಪರಿಹಾರ ಒದಗಿಸುವಂತೆ ವಿನ್ಯಾಸ ಮಾಡಲಾಗಿದೆ. ಆದಾಗ್ಯೂ, ಈ ಪ್ಲಾನ್ಗಳು ಪಾಲಿಸಿಹೋಲ್ಡರ್ಗಳ ಕಾರ್ಗಳ ಡ್ಯಾಮೇಜ್ ರಿಪೇರಿಗೆ ನೆರವಾಗುವ ಯಾವುದೇ ನಿಬಂಧನೆಗಳನ್ನು ಹೊಂದಿರುವುದಿಲ್ಲ.
ಮತ್ತೊಂದೆಡೆ, ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿಯಿಂದ, ನೀವು ಥರ್ಡ್-ಪಾರ್ಟಿ ಲಯಬಿಲಿಟಿ ಮತ್ತು ಓನ್-ಡ್ಯಾಮೇಜ್ ಕಾಂಪನ್ಸೇಶನ್ಗಳು ಈ ಎರಡೂ ಪ್ರಯೋಜನಗಳನ್ನು ಪಡೆಯಬಹುದು. ಹಾಗಾಗಿ, ಎರಡನೆಯದು ಎಲ್ಲಾ ರೀತಿಯಿಂದಲೂ ಸಂಪೂರ್ಣವಾಗಿರುವ ಅತ್ಯುತ್ತಮ ಆಯ್ಕೆಯಾಗಿದೆ.
ಆದರೂ, ನೀವು ಕಾಂಪ್ರೆಹೆನ್ಸಿವ್ ಪಾಲಿಸಿ ಪಡೆಯುವುದು ಸಾಧ್ಯವಾಗದಿದ್ದರೆ, ಭಾರತದ ಕಾನೂನಿನ ಪ್ರಕಾರ ಕಡ್ಡಾಯ ಆಗಿರುವುದರಿಂದ ಕನಿಷ್ಠ ಥರ್ಡ್-ಪಾರ್ಟಿ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಬೇಕು.
ಮೋಟಾರ್ ವೆಹಿಕಲ್ ಆ್ಯಕ್ಟ್ 1988 ಪ್ರಕಾರ, ವ್ಯಾಲಿಡ್ ಆದ ಥರ್ಡ್-ಪಾರ್ಟಿ ಇನ್ಶೂರೆನ್ಸ್ ಹೊಂದಿಲ್ಲದೆ ರಸ್ತೆಗಳಲ್ಲಿ ಸಂಚರಿಸುವ ಯಾವುದೇ ವೆಹಿಕಲ್ನ ಮಾಲೀಕರು ದಂಡವನ್ನು ತೆರಬೇಕಾದ ಹೊಣೆ ಹೊರಬೇಕಾಗುತ್ತದೆ. ಪ್ರಥಮ ಬಾರಿಗೆ ರೂ.2000 ದಂಡವನ್ನು ನಿಮಗೆ ಹೇರಲಾಗುತ್ತದೆ ಮತ್ತು ಪುನರಾವರ್ತಿತ ಅಪರಾಧಗಳಿಗೆ ರೂ.4000.
ಆಕರ್ಷಕ ವೈಶಿಷ್ಟ್ಯಗಳು ಮತ್ತು ಸೌಲಭ್ಯಗಳನ್ನು ಹೊಂದಿರುವ ಹಲವು ಅತ್ಯುತ್ತಮ ಹೋಂಡಾ ಸಿಟಿ ಕಾರ್ ಇನ್ಶೂರೆನ್ಸ್ ಪಾಲಿಸಿಗಳನ್ನು ಡಿಜಿಟ್ ಒದಗಿಸುತ್ತದೆ. ಒಂದು ವೇಳೆ ನೀವು ಹೊಸ ಇನ್ಶೂರೆನ್ಸ್ ಖರೀದಿ ಮಾಡುವುದಿದ್ದರೆ, ಡಿಜಿಟ್ ಒಂದು ಕಾರ್ಯಸಾಧ್ಯವಾದ ಇನ್ಶೂರೆನ್ಸ್ ಪೂರೈಕೆದಾರ ಎಂಬುದಕ್ಕೆ ಈ ಕೆಳಗಿನ ಹಲವು ಕಾರಣಗಳಿವೆ.