ಅಮೇಜ್ ಕಾರ್, ಹೋಂಡಾದ ಶ್ರೇಣಿಯಲ್ಲಿನ ಅತ್ಯಂತ ಚಿಕ್ಕ ಸೆಡಾನ್ ಆಗಿದೆ ಮತ್ತು 2013 ರಲ್ಲಿ ಇದನ್ನು ಪರಿಚಯಿಸಲಾಯಿತು. ಸಬ್-ಕಾಂಪ್ಯಾಕ್ಟ್ ಸೆಡಾನ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ಗಳಲ್ಲಿ 4 ಟ್ರಿಮ್ ಲೆವೆಲ್ಗಳಲ್ಲಿ ಲಭ್ಯವಿದೆ- E, EX, S ಮತ್ತು VX. ಯಶಸ್ಸಿನಿಂದಾಗಿ, ಹೋಂಡಾ ಮತ್ತೆ ಎರಡನೇ ಜನರೇಶನ್ನ ಅಮೇಜ್ ಅನ್ನು E, S, V ಮತ್ತು VX ಸೇರಿದಂತೆ 4 ಟ್ರಿಮ್ ಲೆವೆಲ್ಗಳಲ್ಲಿ ಬಿಡುಗಡೆ ಮಾಡಿತು. ಎಲ್ಲಾ ವರ್ಷನ್ಗಳು ಡೀಸೆಲ್ ಮೋಟಾರ್ ಜೊತೆಗೆ ಸಿ.ವಿ.ಟಿ ಯೊಂದಿಗೆ ಬಂದಿವೆ.
2021 ರಲ್ಲಿ, ಹೋಂಡಾ ಪ್ರಸ್ತುತ ಸ್ಪರ್ಧಿಗಳೊಂದಿಗೆ ಸ್ಪರ್ಧಿಸಲು ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ 3 ವರ್ಷನ್ಗಳಲ್ಲಿ ಅಮೇಜ್ನ ಫೇಸ್-ಲಿಫ್ಟ್ ವರ್ಷನ್ ಅನ್ನು ಬಿಡುಗಡೆ ಮಾಡಿತು. ಹೊಸ ಮಾಡೆಲ್ಗಳು ಫ್ರಂಟ್ ಫ್ಯಾಸಿಯ, ಹೆಚ್ಚುವರಿ ಕ್ರೋಮ್ ಲೈನ್ಗಳು, ಫಾಗ್ ಲೈಟ್ಗಳು ಮತ್ತು ಹೆಚ್ಚಿನವುಗಳಂತಹ ವಿಶಿಷ್ಟ ಫೀಚರ್ಗಳನ್ನು ಎತ್ತಿ ತೋರಿಸುತ್ತವೆ. ವಾಸ್ತವವಾಗಿ, ಟಾಪ್-ಎಂಡ್ ಮಾಡೆಲ್ಗಳು ಡಿಆರ್ಎಲ್ಗಳೊಂದಿಗೆ ಎಲ್ಇಡಿ ಪ್ರೊಜೆಕ್ಟರ್ ಹೆಡ್ಲೈಟ್ಗಳು, ಸಿ-ಶೇಪ್ನ ಎಲ್ಇಡಿ ಟೈಲ್ಲೈಟ್ಗಳು ಮತ್ತು 15-ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್ಗಳನ್ನು ಅದರ ಸೌಂದರ್ಯ ಹೆಚ್ಚಿಸುತ್ತವೆ.
ನೀವು ಯಾವುದಾದರೂ ಇತ್ತೀಚಿನ ಮಾಡೆಲ್ಗಳನ್ನು ಖರೀದಿಸಿದ್ದೀರಾ? ಹಾಗಿದ್ದರೆ, ನಿಮ್ಮ ಹಣಕಾಸನ್ನು ರಿಪೇರಿ/ರಿಪ್ಲೇಸ್ಮೆಂಟ್ ಹೊರೆಗಳಿಂದ ರಕ್ಷಿಸಲು, ಹೋಂಡಾ ಅಮೇಜ್ ಕಾರ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಿಕೊಳ್ಳಿ. ಇದಲ್ಲದೆ, ಭಾರತದ ಮೋಟಾರ್ ವೆಹಿಕಲ್ಸ್ ಆ್ಯಕ್ಟ್ ಪ್ರಕಾರ ಇದು ಕಡ್ಡಾಯವೂ ಆಗಿದೆ.
ಈಗ, ನೀವು ಆನ್ಲೈನ್ನಲ್ಲಿ ಲಭ್ಯವಿರುವ ವಿವಿಧ ಪಾಲಿಸಿ ಪ್ಲ್ಯಾನ್ಗಳನ್ನು ಹೋಲಿಸಿ ಮತ್ತು ಅನುಕೂಲಕರ ಪಾಲಿಸಿಯೊಂದನ್ನು ಆಯ್ಕೆ ಮಾಡಲು ಇಲ್ಲಿ ಕೆಲವು ಪಾಯಿಂಟರ್ಗಳಿವೆ. ಅವುಗಳಲ್ಲಿ ಕೆಲವು ಹೋಂಡಾ ಅಮೇಜ್ ಕಾರ್ ಇನ್ಶೂರೆನ್ಸ್ ಬೆಲೆ, ಐಡಿವಿ ಅಂಶ, ನೋ ಕ್ಲೈಮ್ ಬೋನಸ್ ಪ್ರಯೋಜನಗಳು, ಪಾಲಿಸಿಯ ಪ್ರಕಾರಗಳು ಇತ್ಯಾದಿ.
ಈ ನಿಟ್ಟಿನಲ್ಲಿ ಡಿಜಿಟ್ ಇನ್ಶೂರೆನ್ಸ್ ಒಂದು ಸರಿಯಾದ ಆಯ್ಕೆಯಾಗಿದೆ. ಏಕೆಂದರೆ ಇದು ನಿಮಗೆ ಸಂಪೂರ್ಣ ಫೈನಾನ್ಸಿಯಲ್ ಸೆಕ್ಯೂರಿಟಿಯನ್ನು ಖಾತರಿಪಡಿಸುತ್ತದೆ.