ಹುಂಡೈ i10 ಇನ್ಶೂರೆನ್ಸ್

Third-party premium has changed from 1st June. Renew now

ಹುಂಡೈ i10 ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿ ಅಥವಾ ರಿನ್ಯೂ ಮಾಡಿ

ಹ್ಯುಂಡೈ i10 ಸಿರೀಸ್ ಉತ್ತಮ ಗುಣಮಟ್ಟ, ಕಾರ್ಯಕ್ಷಮತೆ ಮತ್ತು ಶೈಲಿಯನ್ನು ನೀಡುವ ಮೂಲಕ ಕಂಪೆನಿಯ ಹ್ಯಾಚ್‌ಬ್ಯಾಕ್ ವಿಭಾಗವನ್ನು ಮರುವ್ಯಾಖ್ಯಾನಿಸಿದೆ. ಹರಿಯುವ ರೇಖೆಗಳು ಮತ್ತು ದೃಢ ಕಾಂಟ್ರಾಸ್ಟ್‌ಗಳು ಭಾರತೀಯರ ಕಣ್ಣುಗಳನ್ನು ಸೆಳೆಯಿತು, ಇದರ ಡೈನಾಮಿಕ್ ವಿನ್ಯಾಸದ ಸೌಜನ್ಯದಿಂದ.

i10 ವೇರಿಯಂಟ್ ಗಳು ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ಬ್ಲೂಲಿಂಕ್ ಕನೆಕ್ಟೆಡ್ ಕಾರ್ ಸರ್ವೀಸಸ್ ಮತ್ತು ವಾಯ್ಸ್ ಅಸಿಸ್ಟಂಸ್ ಇರುವ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಒಳಗೊಂಡಿತ್ತು. ಸುರಕ್ಷತೆಗಾಗಿ, ಹುಂಡೈ ತನ್ನ ನವೀನ ಸ್ಮಾರ್ಟ್‌ಸೆನ್ಸ್ ಮತ್ತು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ಗಳನ್ನು ಅಳವಡಿಸಿಕೊಂಡಿತ್ತು.

ಹುಂಡೈ i10 2 ಪೆಟ್ರೋಲ್ ಮತ್ತು 1 ಎಲ್ ಪಿ ಜಿ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿತ್ತು. ಪೆಟ್ರೋಲ್ ಮೋಟರ್ 1086ಸಿಸಿ ಮತ್ತು 1197ಸಿಸಿ ಪವರ್ ಅನ್ನು ಹೊರಹಾಕಿದರೆ, ಎಲ್.ಪಿ.ಜಿ ಮೋಟರ್ 1086ಸಿಸಿ ಗರಿಷ್ಠ ಪವರ್ ಅನ್ನು ಉತ್ಪಾದಿಸುತ್ತಿತ್ತು. ಎಲ್ಲಾ ಆವೃತ್ತಿಗಳನ್ನು ಮ್ಯಾನುಯಲ್ ಅಥವಾ ಆಟೋಮ್ಯಾಟಿಕ್ ಟ್ರಾನ್ಸ್ಮಿಶನ್ ಗಳೊಂದಿಗೆ ನಿರ್ಮಿಸಲಾಗಿತ್ತು. ಫ್ಯೂಯೆಲ್ ಪ್ರಕಾರವನ್ನು ಆಧರಿಸಿ, i10 ವೇರಿಯಂಟ್ ಗಳು 16.95 ರಿಂದ 20.36 ಕಿಮೀ/ಲೀ ಯ ಒಳ್ಳೆಯ ಮೈಲೇಜ್ ನೀಡುತ್ತಿದ್ದವು. ಸುಧಾರಿತ ಆವೃತ್ತಿಗಳು ಐಚ್ಛಿಕ 100ಪಿಎಸ್ ಎಂಜಿನ್‌ನೊಂದಿಗೆ ಇನ್ನಷ್ಟು ಸ್ಪೋರ್ಟಿಯಾದ ಡ್ರೈವಿಂಗ್ ಆನಂದವನ್ನು ನೀಡುತ್ತಿದ್ದವು.

ಈಗ, ನೀವು ಈ ಮಾಡೆಲ್ ಗಳಲ್ಲ್ಲಿ ಯಾವುದನ್ನಾದರೂ ಡ್ರೈವ್ ಮಾಡುತ್ತಿದ್ದರೆ, ಹಣಕಾಸಿನ ಹೊರೆಯನ್ನು ದೂರವಿರಿಸಲು ಹುಂಡೈ i10 ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುವುದು ಜಾಣ್ಮೆಯ ಆಯ್ಕೆಯಾಗಿದೆ.

ಇದಲ್ಲದೆ, 1988 ರ ಮೋಟಾರು ವಾಹನಗಳ ಕಾಯಿದೆಯ ಪ್ರಕಾರ, ಭಾರತೀಯ ರಸ್ತೆಗಳಲ್ಲಿ ಕಾನೂನುಬದ್ಧವಾಗಿ ಡ್ರೈವ್ ಮಾಡಲು ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುವುದು ಕಡ್ಡಾಯವಾಗಿದೆ.

ಹುಂಡೈ i10 ಕಾರ್ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್ ಆಗಿರುತ್ತದೆ

ನೀವು ಡಿಜಿಟ್‌ನ ಹ್ಯುಂಡೈ i10 ಕಾರ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ಹ್ಯುಂಡೈ i10 ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಗಳು

ಥರ್ಡ್-ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದಿಂದಾಗಿ ಸ್ವಂತ ಕಾರಿಗೆ ಹಾನಿ/ನಷ್ಟ

×

ಬೆಂಕಿಯಿಂದಾಗಿ ಸ್ವಂತ ಕಾರಿಗೆ ಹಾನಿ/ನಷ್ಟ

×

ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರಿಗೆ ಹಾನಿ/ನಷ್ಟಗಳು

×

ಥರ್ಡ್-ಪಾರ್ಟಿ ವಾಹನಕ್ಕೆ ಹಾನಿ

×

ಥರ್ಡ್-ಪಾರ್ಟಿ ಆಸ್ತಿಗೆ ಹಾನಿ

×

ವೈಯಕ್ತಿಕ ಅಪಘಾತ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಯ ಗಾಯಗಳು/ಸಾವು

×

ನಿಮ್ಮ ಕಾರಿನ ಕಳ್ಳತನ

×

ಡೋರ್ ಸ್ಟೆಪ್ ಪಿಕಪ್ ಮತ್ತು ಡ್ರಾಪ್

×

ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ

×

ಕಸ್ಟಮೈಸ್ ಮಾಡಲಾದ ಆ್ಯಡ್-ಆನ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್-ಪಾರ್ಟಿ ಇನ್ಶೂರೆನ್ಸ್ ನಡುವಿನ ವ್ಯತ್ಯಾಸದ ಬಗ್ಗೆ ಇನ್ನಷ್ಟು ತಿಳಿಯಿರಿ

ಕ್ಲೈಮ್ ಫೈಲ್ ಮಾಡುವುದು ಹೇಗೆ?

ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ನೀವು ಖರೀದಿಸಿದ ನಂತರ ಅಥವಾ ರಿನ್ಯೂ ಮಾಡಿದ ನಂತರ, ನಾವು 3-ಹಂತದ, ಸಂಪೂರ್ಣ ಡಿಜಿಟಲ್ ಆದ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿರುವುದರಿಂದ ನೀವು ಚಿಂತೆಯಿಲ್ಲದೆ ಹಾಯಾಗಿ ಬದುಕುತ್ತೀರಿ!

ಹಂತ 1

1800-258-5956 ಗೆ ಕರೆ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ

ಹಂತ 2

ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ನಲ್ಲಿ ಸ್ವ ತಪಾಸಣೆಗಾಗಿ ಲಿಂಕ್ ಅನ್ನು ಪಡೆಯಿರಿ. ಮಾರ್ಗದರ್ಶನವಿರುವ ಹಂತ ಹಂತವಾದ ಪ್ರಕ್ರಿಯೆಯಿಂದ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವಾಹನಕ್ಕಾದ ಡ್ಯಾಮೇಜ್ ಗಳನ್ನು ಶೂಟ್ ಮಾಡಿ.

ಹಂತ 3

ನೀವು ಆಯ್ಕೆ ಮಾಡಲು ಬಯಸುವ ರಿಪೇರಿ ವಿಧಾನವನ್ನು ಆರಿಸಿ, ಅಂದರೆ, ರಿಇಂಬರ್ಸ್‌ಮೆಂಟ್ ಅಥವಾ ನಮ್ಮ ಗ್ಯಾರೇಜ್ ಗಳ ನೆಟ್‌ವರ್ಕ್ ಮೂಲಕ ಕ್ಯಾಶ್‌ಲೆಸ್ ರಿಪೇರಿ.

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳ ಇತ್ಯರ್ಥ ಎಷ್ಟು ಬೇಗ ಆಗುತ್ತದೆ? ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವು ಅದನ್ನೇ ಮಾಡುತ್ತಿದ್ದೀರಿ! ಡಿಜಿಟ್‌ನ ಕ್ಲೈಮ್ ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿ

ಡಿಜಿಟ್‌ನ ಹ್ಯುಂಡೈ i10 ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಲು ಕಾರಣಗಳು?

ಇನ್ಶೂರೆನ್ಸ್ ಪಾಲಿಸಿ ಪ್ಲ್ಯಾನ್ ಗಳನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸುವಾಗ, ಹ್ಯುಂಡೈ i10 ಕಾರ್ ಇನ್ಶೂರೆನ್ಸ್ ಬೆಲೆಗಳನ್ನು ಹೋಲಿಸುವುದನ್ನು ಹೊರತುಪಡಿಸಿ, ನಮಗೆ ಪರಿಗಣಿಸಲು ಕೆಲವು ಇತರ ಪಾಯಿಂಟರ್‌ಗಳಿವೆ. ಉದಾಹರಣೆಗೆ, ಇನ್ಶೂರೆನ್ಸ್ ಕಂಪೆನಿಯು ಒದಗಿಸುವ ಇತರ ಪ್ರಯೋಜನಗಳಿಗಾಗಿ ನೀವು ನೋಡಬೇಕು.

ಈ ನಿಟ್ಟಿನಲ್ಲಿ, ಡಿಜಿಟ್ ನೀವು ತಲುಪಬೇಕಾದ ಒಂದು ಆದರ್ಶ ಸ್ಥಾನವಾಗಿದೆ. ಸುಗಮವಾದ ಅನುಭವವನ್ನು ಖಚಿತಪಡಿಸಿಕೊಳ್ಳಲು ಇನ್ಶೂರರ್ ವ್ಯಾಪಕ ಶ್ರೇಣಿಯ ಲಾಭದಾಯಕ ಕೊಡುಗೆಗಳನ್ನು ವಿಸ್ತರಿಸುತ್ತಾರೆ.

1. ಪಾಲಿಸಿಗಳ ವ್ಯಾಪಕ ರೇಂಜ್

ಡಿಜಿಟ್‌ನಲ್ಲಿ, ನಿಮ್ಮ ಬಜೆಟ್ ಮತ್ತು ಅವಶ್ಯಕತೆಗಳ ಆಧಾರದ ಮೇಲೆ ಅನುಕೂಲಕರ ಪಾಲಿಸಿ ಪ್ಲ್ಯಾನ್ ಗಳಿಂದ ನೀವು ಆಯ್ಕೆ ಮಾಡಿಕೊಳ್ಳಬಹುದು.

ಪಟ್ಟಿ ಇಲ್ಲಿದೆ.

  •  ಥರ್ಡ್-ಪಾರ್ಟಿ ಪಾಲಿಸಿ

ಈ ಪ್ಲ್ಯಾನ್ ಅಡಿಯಲ್ಲಿ, ಅಪಘಾತದಲ್ಲಿ ನಿಮ್ಮ ಕಾರಿನಿಂದ ನೀವು ಮತ್ತೊಂದು ವಾಹನ, ಆಸ್ತಿಗೆ ಢಿಕ್ಕಿ ಹೊಡೆದರೆ ಅಥವಾ ಒಬ್ಬ ವ್ಯಕ್ತಿಯನ್ನು ಗಾಯಗೊಳಿಸಿದರೆ, ಹ್ಯುಂಡೈ i10 ಗಾಗಿ ನಿಮ್ಮ ಕಾರ್ ಇನ್ಶೂರೆನ್ಸ್ ವಿರುದ್ಧ ನಿಮ್ಮ ಪರವಾಗಿ ಡಿಜಿಟ್ ನಷ್ಟಕ್ಕೆ ಕಾಂಪನ್ಸೇಶನ್ ನೀಡುತ್ತದೆ. ಇಂತಹ ಪರಿಸ್ಥಿತಿಗಳಲ್ಲಿ ಉದ್ಭವಿಸಬಹುದಾದ ಮೊಕದ್ದಮೆ ಸಮಸ್ಯೆಗಳನ್ನು ಸಹ ಡಿಜಿಟ್ ನಿರ್ವಹಿಸುತ್ತದೆ.

  • ಕಾಂಪ್ರೆಹೆನ್ಸಿವ್ ಪಾಲಿಸಿ

ಈ ಪ್ಲ್ಯಾನ್ ಅಡಿಯಲ್ಲಿ, ನಿಮ್ಮ ಕಾರು ಅಪಘಾತದಲ್ಲಿ ಅಥವಾ ನೈಸರ್ಗಿಕ ವಿಪತ್ತುಗಳು, ಬೆಂಕಿ, ಕಳ್ಳತನ ಅಥವಾ ಇತರ ಪರಿಸ್ಥಿತಿಗಳಿಂದ ಹಾನಿಗೊಳಗಾದರೆ, ನಿಮ್ಮ ಇನ್ಶೂರೆನ್ಸ್ ಪಾಲಿಸಿಯ ವಿರುದ್ಧ ನೀವು ರಿಇಂಬರ್ಸ್‌ಮೆಂಟ್ ಅನ್ನು ಸ್ವೀಕರಿಸುತ್ತೀರಿ. ಇದಲ್ಲದೆ, ಆ್ಯಡ್-ಆನ್ ಕವರ್‌ಗಳನ್ನು ಸೇರಿಸುವ ಮೂಲಕ ನಿಮ್ಮ ಬೇಸ್ ಪ್ಲ್ಯಾನ್ ಅನ್ನು ನೀವು ಅಪ್‌ಗ್ರೇಡ್ ಮಾಡಬಹುದು.

ಸೂಚನೆ: ಥರ್ಡ್-ಪಾರ್ಟಿ ಪಾಲಿಸಿಯು ಸ್ವಂತ ಕಾರಿನ ಹಾನಿಯನ್ನು ಕವರ್ ಮಾಡುವುದಿಲ್ಲ. ಆದ್ದರಿಂದ, ಹಣಕಾಸಿನ ರಕ್ಷಣೆಯನ್ನು ಸುಧಾರಿಸಲು ಸ್ಟ್ಯಾಂಡ್ಅಲೋನ್ ಕವರ್ ಅನ್ನು ಆರಿಸಿಕೊಳ್ಳಿ.

2. ಆನ್‌ಲೈನ್‌ ಸರ್ವೀಸಸ್

ಕಾರ್ ಪಾಲಿಸಿಯನ್ನು ಸುರಕ್ಷಿತಗೊಳಿಸಲು ನೀವು ಯಾವುದೇ ಕಷ್ಟಕರವಾದ ಪ್ರಕ್ರಿಯೆಯನ್ನು ಕೈಗೊಳ್ಳಬೇಕಾಗಿಲ್ಲ. ಡಿಜಿಟ್ ನಿಮಗೆ ಹ್ಯುಂಡೈ i10 ಕಾರ್ ಇನ್ಶೂರೆನ್ಸ್ ಆನ್‌ಲೈನ್‌ನಲ್ಲಿ ನೀಡುತ್ತಿದೆ. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಲಭ್ಯವಿರುವ ಆಯ್ಕೆಗಳ ಮೂಲಕ ಸ್ಕ್ರಾಲ್ ಮಾಡಿ. ಇದಲ್ಲದೆ, ನಿಮ್ಮ ಅಸ್ತಿತ್ವದಲ್ಲಿರುವ ಖಾತೆಗಳಿಗೆ ಸೈನ್ ಇನ್ ಮಾಡುವ ಮೂಲಕ ನೀವು ಆನ್‌ಲೈನ್‌ನಲ್ಲಿ ಹುಂಡೈ i10 ಕಾರ್ ಇನ್ಶೂರೆನ್ಸ್ ರಿನೀವಲ್ ಅನ್ನು ಮಾಡಬಹುದು.

3. ಪೇಪರ್ ಲೆಸ್ ಪ್ರೊಸೆಸ್

ಈಗ ಡಿಜಿಟ್ ಇನ್ಶೂರೆನ್ಸ್‌ನೊಂದಿಗೆ ಕ್ಲೈಮ್‌ಗಳನ್ನು ಫೈಲ್ ಮಾಡುವುದು ಸುಲಭವಾಗಿದೆ. ನೀವು ಮಾಡಬೇಕಾಗಿರುವುದು ಇಷ್ಟೇ; ಈ 3-ಹಂತದ ಪ್ರಕ್ರಿಯೆಯನ್ನು ಅನುಸರಿಸುವುದು.

ಹಂತ 1: ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ ನಿಂದ 1800 258 5956 ಅನ್ನು ಡಯಲ್ ಮಾಡಿ ಮತ್ತು ಸ್ವ ತಪಾಸಣೆ ಲಿಂಕ್ ಅನ್ನು ಸ್ವೀಕರಿಸಿ

ಹಂತ 2: ನಿಮ್ಮ ಹಾನಿಗೊಳಗಾದ ಕಾರಿನ ಚಿತ್ರಗಳನ್ನು ಲಿಂಕ್‌ನಲ್ಲಿ ಅಪ್‌ಲೋಡ್ ಮಾಡಿ

ಹಂತ 3: ರಿಇಂಬರ್ಸ್‌ಮೆಂಟ್ ಅಥವಾ ಕ್ಯಾಶ್‌ಲೆಸ್ ರಿಪೇರಿಯ ನಡುವೆ ಆಯ್ಕೆಮಾಡಿ

4. ಐಡಿವಿ(IDV) ಕಸ್ಟಮೈಸೇಶನ್

ಇನ್ಶೂರ್ಡ್ ಡಿರ್ಕ್ಲೇಡ್ ಮೌಲ್ಯವು ನೀವು ಪಾವತಿಸುವ ಪ್ರೀಮಿಯಂಗಳನ್ನು ಅವಲಂಬಿಸಿರುತ್ತದೆ. ಆದ್ದರಿಂದ, ನೀವು ಹೆಚ್ಚಿನ ಪ್ರೀಮಿಯಂಗಳನ್ನು ಪಾವತಿಸಿದರೆ, ನಿಮ್ಮ ವಾಹನ ಐಡಿವಿ ಅನ್ನು ಹೆಚ್ಚಿಸಬಹುದು. ಈ ರೀತಿಯಾಗಿ, ಕಳ್ಳತನ ಅಥವಾ ಸರಿಪಡಿಸಲಾಗದ ಹಾನಿಯ ಸಮಯದಲ್ಲಿ ನೀವು ಉತ್ತಮ ಕಾಂಪನ್ಸೇಶನ್ ಅನ್ನು ಪಡೆಯಬಹುದು.

5. ಆ್ಯಡ್-ಆನ್‌ಗಳೊಂದಿಗೆ ಹೆಚ್ಚುವರಿ ಪ್ರೊಟೆಕ್ಷ

ಆ್ಯಡ್-ಆನ್ ಕವರ್‌ಗಳನ್ನು ಸೇರಿಸುವ ಮೂಲಕ ನಿಮ್ಮ ಬೇಸ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ನೀವು ಹೆಚ್ಚಿಸಬಹುದು. ಕೆಳಗಿನ ಆಯ್ಕೆಗಳಿಂದ ನೀವು ಪಿಕ್ ಮಾಡಬಹುದು.

  • ಕನ್ಸ್ಯೂಮೆಬಲ್
  • ಟೈರ್ ಪ್ರೊಟೆಕ್ಷನ್
  • ಎಂಜಿನ್ ಮತ್ತು ಗೇರ್‌ಬಾಕ್ಸ್ ಪ್ರೊಟೆಕ್ಷನ್
  • ಝೀರೋ ಡೆಪ್ರಿಸಿಯೇಷನ್
  • ರಿಟರ್ನ್ ಟು ಇನ್‌ವಾಯ್ಸ್ ಇತ್ಯಾದಿ.

ಹ್ಯುಂಡೈ i10 ಕಾರ್ ಇನ್ಶೂರೆನ್ಸ್ ರಿನೀವಲ್ ಬೆಲೆಯನ್ನು ಹೆಚ್ಚಿಸುವ ಮೂಲಕ ನಿಮ್ಮ ಪಾಲಿಸಿ ಅವಧಿಯು ಮುಗಿದ ನಂತರ ನೀವು ಕವರೇಜ್ ಅನ್ನು ಮುಂದಕ್ಕೆ ಸಾಗಿಸಬಹುದು

6. ನೋ ಕ್ಲೈಮ್ ಬೋನಸ್ ಡಿಸ್ಕೌಂಟ್ ಗಳು

ಹ್ಯುಂಡೈ i10 ಗಾಗಿ ನಿಮ್ಮ ಕಾರ್ ಇನ್ಶೂರೆನ್ಸ್ ವಿರುದ್ಧ ಯಾವುದೇ ಕ್ಲೈಮ್ ಅನ್ನು ಮಾಡದೆಯೇ ಇಡೀ ವರ್ಷವನ್ನು ಪೂರ್ಣಗೊಳಿಸಿದಾಗ, ನಂತರದ ಪ್ರೀಮಿಯಂನಲ್ಲಿ ನೀವು ನೋ ಕ್ಲೈಮ್ ಬೋನಸ್ ಡಿಸ್ಕೌಂಟ್ ಗಳನ್ನು ಗಳಿಸುವಿರಿ. ಡಿಜಿಟ್ ಕ್ಲೈಮ್-ಮುಕ್ತ ವರ್ಷಗಳ ಸಂಖ್ಯೆಯನ್ನು ಅವಲಂಬಿಸಿ 20% ರಿಂದ 50% ವರೆಗಿನ ಎನ್ ಸಿ ಬಿ ಡಿಸ್ಕೌಂಟ್ ಗಳನ್ನು ಒದಗಿಸುತ್ತದೆ.

7.ಡೋರ್ ಸ್ಟೆಪ್ ಕಾರ್ ಪಿಕಪ್ ಮತ್ತು ಡ್ರಾಪ್ ಸೌಲಭ್ಯಗಳು

ನಿಮ್ಮ ಕಾರು ತೀವ್ರವಾಗಿ ಹಾನಿಗೊಳಗಾಗಿದ್ದರೆ ಮತ್ತು ಡ್ರೈವಿಂಗ್ ಕಂಡೀಶನ್ ನಲ್ಲಿಲ್ಲದಿದ್ದರೆ, ಯಾವುದೇ ಹತ್ತಿರದ ಡಿಜಿಟ್ ನೆಟ್‌ವರ್ಕ್ ಕಾರ್ ಗ್ಯಾರೇಜ್‌ಗಳಿಂದ ಡೋರ್‌ಸ್ಟೆಪ್ ಪಿಕಪ್ ಮತ್ತು ಡ್ರಾಪ್ ಸೇವೆಯನ್ನು ಆರಿಸಿಕೊಳ್ಳಿ.

8. ಗ್ಯಾರೇಜುಗಳ ವಿಶಾಲವಾದ ನೆಟ್‌ವರ್ಕ್

ಡಿಜಿಟ್ 5800 ಕ್ಕೂ ಹೆಚ್ಚು ನೆಟ್‌ವರ್ಕ್ ಗ್ಯಾರೇಜ್‌ಗಳೊಂದಿಗೆ ಸಹಯೋಗವನ್ನು ಹೊಂದಿರುವುದರಿಂದ ಒಂದು ಗೊಂದಲ-ರಹಿತ ಅನುಭವವನ್ನು ಖಚಿತಪಡಿಸುತ್ತದೆ. ಆದ್ದರಿಂದ, ನೀವು ಯಾವುದೇ ವಾಹನ ಸಮಸ್ಯೆಗಳನ್ನು ಪರಿಹರಿಸಬೇಕಾದರೆ, ನೀವು ಸಮೀಪದಲ್ಲಿಯೇ ಕ್ಯಾಶ್‌ಲೆಸ್ ರಿಪೇರಿಯನ್ನು ಒದಗಿಸುವ ನೆಟ್‌ವರ್ಕ್ ಗ್ಯಾರೇಜ್ ಅನ್ನು ಕಾಣುವಿರಿ.

ಇವುಗಳನ್ನು ಹೊರತುಪಡಿಸಿ, ವಾಲಂಟರಿ ಡಿಡಕ್ಟಿಬಲ್ ಅನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ಹ್ಯುಂಡೈ i10 ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಸಹ ನೀವು ಕಡಿಮೆ ಮಾಡಬಹುದು. ಆದಾಗ್ಯೂ, ಕಡಿಮೆ ಪ್ರೀಮಿಯಂಗಳು ಕಂಪ್ಲೀಟ್ ಫೈನಾನ್ಸಿಯಲ್ ಕವರೇಜ್ ಅನ್ನು ಖಾತರಿಪಡಿಸುವುದಿಲ್ಲ. ಆದ್ದರಿಂದ, ಈ ಸೌಲಭ್ಯದ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಮತ್ತು ಜಾಣ್ಮೆಯ ಆಯ್ಕೆ ಮಾಡಲು ಡಿಜಿಟ್‌ನ 24X7 ಗ್ರಾಹಕ ಸೇವೆಗೆ ಕರೆ ಮಾಡಿ.

ಹ್ಯುಂಡೈ i10 ಕುರಿತು ಇನ್ನಷ್ಟು ತಿಳಿಯಿರಿ

ಭಾರತದಲ್ಲಿ ಮಿಡ್ಲ್-ಕ್ಲಾಸ್ ವಿಭಾಗದ ಬೇಡಿಕೆಯನ್ನು ಪೂರೈಸುವುದಕ್ಕಾಗಿ ಕೊರಿಯನ್ ತಯಾರಕರು ಹ್ಯುಂಡೈ i10 ಅನ್ನು ಪರಿಚಯಿಸಿದರು. ಮತ್ತು ಅದು ಮಾರ್ಕೆಟ್ ಅನ್ನು ಸಂಪೂರ್ಣವಾಗಿ ಆಳಿದೆ ಎಂದು ಎಲ್ಲರೂ ಒಪ್ಪುವರು. ಅನೇಕರು ಇದನ್ನು ತಮ್ಮ ಸಣ್ಣ ಸಿಟಿ ಕಾರ್ ಅಥವಾ ದೈನಂದಿನ ಕಚೇರಿ ಕಾರ್ ಆಗಿ ಖರೀದಿಸಿದರು.

ಈ ಮಾಡೆಲ್ ಅನ್ನು ಈಗ ಸ್ಥಗಿತಗೊಳಿಸಲಾಗಿದ್ದರೂ, ಈ ಹ್ಯಾಚ್‌ಬ್ಯಾಕ್ ಕೆಲವು ವರ್ಷಗಳ ಹಿಂದೆ ಎಲ್ಲರ ಹೃದಯವನ್ನು ಕದ್ದಿತ್ತು. ಹುಂಡೈ i10 ಪೆಟ್ರೋಲ್ ಮತ್ತುಎಲ್.ಪಿ.ಜಿ ಫ್ಯೂಯೆಲ್ ಪ್ರಕಾರವನ್ನು ಆಧರಿಸಿತ್ತು. ಇದು ಪ್ರತಿ ಲೀಟರ್‌ಗೆ 20.36 ಕಿಮೀ ಸಿಟಿ ಮೈಲೇಜ್ ನೀಡುತಿತ್ತು. ಈ ಚಿಕ್ಕ ಕಾರಿನ ಎಂಜಿನ್ 1086 ಕ್ಯೂಬಿಕ್ ಸಾಮರ್ಥ್ಯದ್ದಾಗಿತ್ತು ಮತ್ತು ಟ್ರಾನ್ಸ್ಮಿಷನ್ ಪ್ರಕಾರವು ಮ್ಯಾನುವಲ್ ಆಗಿತ್ತು.

ಹುಂಡೈ i10 ನ ಆರಂಭಿಕ ಬೆಲೆ ರೂ.3.79 ಲಕ್ಷಗಳು. ಹುಂಡೈ i10 ಐದು-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಹೊಂದಿತ್ತು ಮತ್ತು ಐದು ಪ್ರಯಾಣಿಕರಿಗೆ ಸ್ಥಳವನ್ನು ಹೊಂದಿತ್ತು. ಭಾರತದಲ್ಲಿ, ಈ ಕಾರನ್ನು ಅದರ ಚೆನ್ನೈ ಪ್ಲಾಂಟ್‌ನಲ್ಲಿ ತಯಾರಿಸಲಾಗುತ್ತದೆ. ಇದನ್ನು 9 ವೇರಿಯಂಟ್ ಗಳು ಮತ್ತು ಎರಡು ವಿಭಿನ್ನ ಎಂಜಿನ್ ಆಯ್ಕೆಗಳೊಂದಿಗೆ ಬಿಡುಗಡೆ ಮಾಡಲಾಗಿತ್ತು. ಒಂದು 1.1.ಲೀ ಗ್ಯಾಸೋಲಿನ್ ಎಂಜಿನ್ ಆಗಿದ್ದರೆ ಇನ್ನೊಂದು ಶಕ್ತಿಶಾಲಿ 1.2ಲೀ ಕಪ್ಪಾ ಎಂಜಿನ್ ಆಗಿತ್ತು

ಹುಂಡೈ i10 ಏಕೆ ಅಷ್ಟೊಂದು ಜನಪ್ರಿಯವಾಗಿತ್ತು?

ಜನರು ಹ್ಯುಂಡೈ i10 ಅನ್ನು ಏಕೆ ಖರೀದಿಸುತ್ತಿದ್ದರು ಎಂಬುದಕ್ಕೆ ಕಾರಣಗಳು ಇಲ್ಲಿವೆ.

  • ಸ್ಟೈಲಿಶ್ ಹೊರಭಾಗಗಳು(Stylish Ext: ಹ್ಯುಂಡೈ i10 ದೊಡ್ಡ ಅಂತರದ ಏರ್ ಡ್ಯಾಮ್, ಕ್ರೋಮ್-ಲೈನ್ ಇರುವ ಗ್ರಿಲ್ ಮತ್ತು ಇಂಟಿಗ್ರೇಟೆಡ್ ಕ್ಲಿಯರ್ ಲೆನ್ಸ್ ಫಾಗ್ ಲ್ಯಾಂಪ್‌ಗಳೊಂದಿಗೆ ಬರುತಿತ್ತು. ಇದರ ಕೇಂದ್ರಭಾಗವು ಒಂದು ಹೊಸ ರೇಡಿಯೇಟರ್ ಗ್ರಿಲ್ ಆಗಿದೆ. ಇದರ ಟಾಪ್ ಆವೃತ್ತಿಗಳು ಸಂಯೋಜಿತ ರೂಫ್ ಸ್ಪಾಯ್ಲರ್‌ನೊಂದಿಗೆ ಬಂದಿದ್ದವು. ದಕ್ಷತಾಶಾಸ್ತ್ರ(ಏರ್ದಗೊನೋಮಿಕ್ಸ್) ವಿನ್ಯಾಸವು ಉತ್ತಮವಾಗಿತ್ತು ಏಕೆಂದರೆ ಇದು ಎತ್ತರದ ಚಾಲಕರಿಗೆ ಸಹ ಅನುಕೂಲವನ್ನು ಕಲ್ಪಿಸಿತ್ತು. ಹೊರಗಿನ ರಿಯರ್‌ವ್ಯೂ ಮಿರರ್‌ನಲ್ಲಿ ಸೈಡ್ ಇಂಡಿಕೇಟರ್‌ಗಳನ್ನು ಅಳವಡಿಸಲಾಗಿದೆ.
  • ಬುದ್ಧಿವಂತ ಇಂಟೀರಿಯರ್‌ಗಳು: ಇನ್‌ಸ್ಟ್ರುಮೆಂಟ್ ಡಿಸ್‌ಪ್ಲೇಗಳನ್ನು ಹೊರತುಪಡಿಸಿ, ಗೇರ್ ಲಿವರ್ ಅನ್ನು ಎತ್ತರದಲ್ಲಿ ಇರಿಸಿದ್ದರಿಂದ ಕೆಲ ಕಪ್ ಹೋಲ್ಡರ್‌ಗಳಿಗೆ ಹೆಚ್ಚಿನ ಜಾಗವನ್ನು ನೀಡಲಾಗಿತ್ತು. ಇದರ ಕನ್ಸೋಲ್, ನೀಲಿ ಆಂತರಿಕ ಪ್ರಕಾಶದೊಂದಿಗೆ ಮೆಟಲ್ ಫಿನಿಶ್ ಅನ್ನು ಹೊಂದಿತ್ತು.
  • ಕೈಗೆಟುಕುವ ಬೆಲೆ: ಹ್ಯುಂಡೈ i10 ನ ಆರಂಭಿಕ ಬೆಲೆ ರೂ.3.73 ಲಕ್ಷಗಳು ಮಾತ್ರವಾಗಿತ್ತು. ಇದು ಸಾಕಷ್ಟು ಕೈಗೆಟುಕುವ ಮತ್ತು ಲವಲವಿಕೆಯುಳ್ಳ ಕಾರಾಗಿತ್ತು.
  • ಸೌಕರ್ಯ ಮತ್ತು ಅನುಕೂಲತೆ: ಹ್ಯುಂಡೈ i10 ಪವರ್ ಸ್ಟೀರಿಂಗ್ ಮತ್ತು ಪವರ್ ವಿಂಡೋಗಳೊಂದಿಗೆ ಬರುತ್ತಿತ್ತು. ಸಣ್ಣ ಪ್ರಯಾಣಕ್ಕೆ ಆಸನಗಳು ಆರಾಮದಾಯಕವಾಗಿದ್ದವು ಮತ್ತು ಬಳಸಿದ ಅಪ್ಹೋಲ್ಸ್ಟರಿ ಉತ್ತಮ ಗುಣಮಟ್ಟದ್ದಾಗಿತ್ತು. ಸ್ಟೀರಿಂಗ್‌ನಲ್ಲಿ, ಕವರ್ ಅನ್ನು ಲೆದರ್ ನಿಂದ ಮಾಡಲಾಗಿದ್ದು ಅದು ಪ್ರೀಮಿಯಂ ಟಚ್ ಅನ್ನು ನೀಡಿತ್ತು.
  • ಸುರಕ್ಷತಾ ವೈಶಿಷ್ಟ್ಯಗಳು: ಹುಂಡೈ i10 ಅನ್ನು ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್, ಡ್ಯುಯಲ್-ಫ್ರಂಟ್ ಏರ್‌ಬ್ಯಾಗ್‌ಗಳು, ಚೈಲ್ಡ್ ಲಾಕ್ ಸುರಕ್ಷತೆ, ಸೆಂಟ್ರಲ್ ಲಾಕಿಂಗ್, ಡೋರ್ ತೆರೆಯುವಿಕೆಗಾಗಿ ವಾರ್ನಿಂಗ್, ಸೀಟ್ ಬೆಲ್ಟ್ ರಿಮೈಂಡರ್ ಮತ್ತು ರಿಯರ್ ಸೀಟ್ ಬೆಲ್ಟ್‌ಗಳೊಂದಿಗೆ ಸುರಕ್ಷಿತವಾಗಿಸಲಾಗಿತ್ತು.

ಹುಂಡೈ i10 ನ ವೇರಿಯಂಟ್ ಗಳು

ವೇರಿಯಂಟ್ ನ ಹೆಸರು ವೇರಿಯಂಟ್ ನ ಬೆಲೆ
ಎರ ₹ 6.74 ಲಕ್ಷಗಳು
ಮಗ್ನಾ ₹ 7.76 ಲಕ್ಷಗಳು
ಸ್ಪೋರ್ಟ್ಸ್ ಎಸ್ಎಕ್ಯುಟಿವ್ ₹ 8.40 ಲಕ್ಷಗಳು
ಸ್ಪೋರ್ಟ್ಜ್ ₹ 8.44 ಲಕ್ಷಗಳು
ಮ್ಯಾಗ್ನಾ AMT ₹ 8.50 ಲಕ್ಷಗಳು
ಸ್ಪೋರ್ಟ್ಜ್ ಡಿಟಿ ₹ 8.72 ಲಕ್ಷಗಳು
ಸ್ಪೋರ್ಟ್ಜ್ ಕಾರ್ಯನಿರ್ವಾಹಕ AMT ₹ 9.05 ಲಕ್ಷಗಳು
ಸ್ಪೋರ್ಟ್ಜ್ AMT ₹ 9.09 ಲಕ್ಷಗಳು
ಅಸ್ತಾ AMT ₹ 9.92 ಲಕ್ಷಗಳು
ಮ್ಯಾಗ್ನಾ ಸಿಎನ್ಜಿ ₹ 8.56 ಲಕ್ಷಗಳು
ಸ್ಪೋರ್ಟ್ಜ್ ಸಿನ್ಗ್ ₹ 9.17 ಲಕ್ಷಗಳು

ಪದೇ ಪದೇ ಕೇಳಲಾದ ಪ್ರಶ್ನೆಗಳು

ಅಪಘಾತದಲ್ಲಿ ಚಾಲಕ/ಮಾಲೀಕರು ಸಾವಿಗೀಡಾದರೆ ಅಥವಾ ಅಂಗವೈಕಲ್ಯಕ್ಕೆ ಒಳಗಾಗಿದ್ದರೆ, ಅಂತಹ ಸಂದರ್ಭಗಳಲ್ಲಿ ಡಿಜಿಟ್ ಕಾಂಪನ್ಸೇಶನ್ ನೀಡುತ್ತದೆಯೇ?

ಹೌದು, ಐ.ಆರ್.ಡಿ.ಎ.ಐ. ಪ್ರಕಾರ, ಇನ್ಶೂರೆನ್ಸ್ ಕಂಪನಿಗಳು ಸಂತ್ರಸ್ತರ ಕುಟುಂಬಕ್ಕೆ ₹ 15 ಲಕ್ಷ ಕಾಂಪನ್ಸೇಶನ್ ಅನ್ನು ನೀಡಬೇಕು.

ಪ್ರಯಾಣಿಕ(ರು) ಕಾರು ಅಪಘಾತದಲ್ಲಿ ಗಾಯಗೊಂಡರೆ, ಡಿಜಿಟ್ ಈ ನಷ್ಟವನ್ನು ಕವರ್ ಮಾಡುತ್ತದೆಯೇ?

ಇಲ್ಲ, ಅಂತಹ ಸಂದರ್ಭಗಳಲ್ಲಿ ಡಿಜಿಟ್ ಹಣಕಾಸಿನ ನೆರವು ನೀಡುವುದಿಲ್ಲ. ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು, ನೀವು ಪ್ರಯಾಣಿಕರ ಆ್ಯಡ್-ಆನ್ ಕವರ್ ಅನ್ನು ಆರಿಸಿಕೊಳ್ಳಬಹುದು.