ಬಹುರಾಷ್ಟ್ರೀಯ ಕಾರ್ಪೊರೇಶನ್ ಸ್ಟೆಲಾಂಟಿಸ್ ಒಡೆತನದಲ್ಲಿರುವ ಜೀಪ್, ಯುನೈಟೆಡ್ ಸ್ಟೇಟ್ಸ್ ಮೂಲದ ಆಟೋಮೊಬೈಲ್ ತಯಾರಿಕಾ ಕಂಪನಿ ಆಗಿದೆ. ಪ್ರಸ್ತುತ, ಅದು ಕ್ರಾಸ್ಓವರ್ ಮತ್ತು ಆಫ್-ರೋಡ್ ಎಸ್ಯುವಿಗಳು ಎರಡನ್ನೂ ಒಳಗೊಂಡ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ಗಳ ಉತ್ಪನ್ನ ಶ್ರೇಣಿಗಳನ್ನು ಹೊಂದಿದೆ.
2016ರಲ್ಲಿ ಸುಮಾರು 1.4 ಮಿಲಿಯನ್ ಎಸ್ಯುವಿಗಳು ಮಾರಾಟವಾದ ಕಾರಣ ಕಂಪನಿಯ ಎಸ್ಯುವಿಗಳು ವಿಶ್ವಾದ್ಯಂತ ಜನಪ್ರಿಯವಾಗಿದೆ.
ರಾಂಗ್ಲರ್ ಮತ್ತು ಗ್ರ್ಯಾಂಡ್ ಚೆರೋಕೀ ಮಾದರಿಗಳನ್ನು ಬಿಡುಗಡೆ ಮಾಡುವ ಮೂಲಕ, ಜೀಪ್ 2016ರಲ್ಲಿ ನೇರವಾಗಿ ಭಾರತೀಯ ಪ್ರಯಾಣಿಕ ವಾಹಣ ಮಾರುಕಟ್ಟೆಯನ್ನು ಪ್ರವೇಶಿಸಿತು. ಇದಕ್ಕೂ ಮೊದಲು, 1960ರ ದಶಕದಿಂದಲೂ ಜೀಪ್ ಕಾರುಗಳನ್ನು ಮಹೀಂದ್ರಾ ಮತ್ತು ಮಹೀಂದ್ರಾ ಪರವಾನಗಿ ಅಡಿಯಲ್ಲಿ ತಯಾರಿಸಲಾಗುತ್ತಿತ್ತು.
ಇದಲ್ಲದೆ, ಜೀಪ್ ಕಂಪಾಸ್ ಮತ್ತು ರಾಂಗ್ಲರ್ನಂತಹ ಮಾದರಿಗಳು ಭಾರತೀಯ ಖರೀದಿದಾರರಲ್ಲಿ ಭಾರಿ ಜನಪ್ರಿಯವಾಗಿವೆ. ಬೇಡಿಕೆಯ ಕಾರಣದಿಂದಾಗಿ, ಈ ಕಂಪನಿಯು 2021ರಲ್ಲಿ 11,000 ಯುನಿಟ್ಗಳನ್ನು ಮಾರಾಟ ಮಾಡಿದೆ.
ಜೀಪ್ ಕಾರ್ ಮಾಡೆಲ್ ಅನ್ನು ಖರೀದಿಸುವ ಮೊದಲು, ಅಪಘಾತದ ಸಂದರ್ಭದಲ್ಲಿ ಅದಕ್ಕೆ ಎದುರಾಗಬಹುದಾದ ಅಪಾಯಗಳು ಮತ್ತು ಡ್ಯಾಮೇಜ್ಗಳನ್ನು ನೀವು ತಿಳಿದಿರಬೇಕು. ಅದನ್ನು ಪರಿಗಣಿಸುವ ಮೂಲಕ, ನೀವು ಜೀಪ್ ಕಾರ್ ಇನ್ಶೂರೆನ್ಸ್ ಅನ್ನು ಪಡೆದುಕೊಳ್ಳಬೇಕು ಮತ್ತು ಅಂತಹ ಡ್ಯಾಮೇಜ್ಗಳನ್ನು ಸರಿಪಡಿಸಲು ಉಂಟಾಗುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿಕೊಳ್ಳಬೇಕು.
ನಿಮ್ಮ ಜೀಪ್ ಕಾರಿಗೆ ಎರಡು ವಿಧಗಳ ಸುಸಜ್ಜಿತ ಇನ್ಶೂರೆನ್ಸ್ ಪಾಲಿಸಿಯು ಲಭ್ಯವಿದೆ- ಥರ್ಡ್-ಪಾರ್ಟಿ ಮತ್ತು ಕಾಂಪ್ರೆಹೆನ್ಸಿವ್. ನೀವು ಜೀಪ್ ಕಾರುಗಳಿಗೆ ಬೇಸಿಕ್ ಥರ್ಡ್-ಪಾರ್ಟಿ ಇನ್ಶೂರೆನ್ಸ್ ಅನ್ನು ಪರಿಗಣಿಸಬಹುದು ಮತ್ತು ಥರ್ಡ್-ಪಾರ್ಟಿ ಅಪಘಾತಗಳಿಂದ ಉಂಟಾಗುವ ಲಯಬಿಲಿಟಿಗಳನ್ನು ಕವರ್ ಮಾಡಬಹುದು.
ಹೆಚ್ಚುವರಿಯಾಗಿ, ನೀವು ಕಾಂಪ್ರೆಹೆನ್ಸಿವ್ ಜೀಪ್ ಕಾರ್ ಇನ್ಶೂರೆನ್ಸ್ ಅನ್ನು ಆನ್ಲೈನ್ನಲ್ಲಿ ಪಡೆಯಬಹುದು ಮತ್ತು ಥರ್ಡ್-ಪಾರ್ಟಿ ಮತ್ತು ಸ್ವಂತ ಕಾರು ಡ್ಯಾಮೇಜ್ಗಳ ವಿರುದ್ಧ ಕವರೇಜ್ ಪ್ರಯೋಜನಗಳನ್ನು ಪಡೆಯಬಹುದು. ಆದಾಗ್ಯೂ, ಮೋಟಾರ್ ವೆಹಿಕಲ್ ಆ್ಯಕ್ಟ್, 1988ರ ಪ್ರಕಾರ ನಿಮ್ಮ ಜೀಪ್ ಕಾರಿಗೆ ಕನಿಷ್ಠ ಬೇಸಿಕ್ ಇನ್ಶೂರೆನ್ಸ್ ಪ್ಲಾನ್ ಅನ್ನು ಹೊಂದಿರುವುದು ಕಡ್ಡಾಯವಾಗಿದೆ. ಯಾವುದೇ ಇನ್ಶೂರೆನ್ಸ್ ಪಾಲಿಸಿ ಇಲ್ಲದಿದ್ದರೆ, ನೀವು ನಿಮ್ಮ ಜೇಬಿನಿಂದ ಡ್ಯಾಮೇಜ್ ದುರಸ್ತಿ ವೆಚ್ಚವನ್ನು ಭರಿಸಬೇಕಾಗುತ್ತದೆ ಮತ್ತು ಭಾರೀ ಟ್ರಾಫಿಕ್ ದಂಡವನ್ನು ಸಹ ಪಾವತಿಸಬೇಕಾಗುತ್ತದೆ.
ಜೀಪ್ಗಾಗಿ ಕಾರ್ ಇನ್ಶೂರೆನ್ಸ್ ಅನ್ನು ಆಯ್ಕೆಮಾಡುವಾಗ, ನೀವು ಹಲವಾರು ಇನ್ಶೂರರ್ಗಳು ಮತ್ತು ಅವರ ಪ್ಲಾನ್ಗಳನ್ನು ತಿಳಿದುಕೊಳ್ಳಬಹುದು. ನಿಮ್ಮ ಆಯ್ಕೆಗಳನ್ನು ಸುಲಭಗೊಳಿಸಲು, ಅವರ ಪಾಲಿಸಿ ಪ್ರೀಮಿಯಂಗಳು ಮತ್ತು ಇತರ ಸೇವಾ ಪ್ರಯೋಜನಗಳಿಗೆ ಸಂಬಂಧಿಸಿದಂತೆ ಪ್ಲಾನ್ಗಳನ್ನು ಹೋಲಿಸಿ ನೋಡಬೇಕು.
ಈ ನಿಟ್ಟಿನಲ್ಲಿ, ನೀವು ಡಿಜಿಟ್ ಇನ್ಶೂರೆನ್ಸ್ ಅನ್ನು ಅದರ ಸಮಂಜಸವಾದ ಜೀಪ್ ಕಾರ್ ಇನ್ಶೂರೆನ್ಸ್ ಬೆಲೆ, ಆನ್ಲೈನ್ ಕ್ಲೈಮ್ ಪ್ರೊಸೀಜರ್, ನೋ ಕ್ಲೈಮ್ ಪ್ರಯೋಜನಗಳು ಮತ್ತು ಇತರ ವೈಶಿಷ್ಟ್ಯಗಳ ಅಂತ್ಯವಿಲ್ಲದ ಪಟ್ಟಿಯ ಕಾರಣಗಳಿಂದಾಗಿ ಪರಿಗಣಿಸಬಹುದು. ಹೀಗಾಗಿ, ನಿಮ್ಮ ಜೀಪ್ ಕಾರ್ ಇನ್ಶೂರೆನ್ಸ್ಗೆ ಸಂಬಂಧಿಸಿದಂತೆ ತಿಳುವಳಿಕೆಯುಳ್ಳ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು, ನೀವು ಡಿಜಿಟ್ನ ಕೊಡುಗೆಗಳನ್ನು ತಿಳಿದುಕೊಳ್ಳಬಹುದು.