ಭಾರತದ ಆಟೋಮೊಬೈಲ್ ಇಂಡಸ್ಟ್ರಿಯ ವಿಷಯಕ್ಕೆ ಬಂದರೆ, ಮಾರುತಿ ಸುಜುಕಿಯ ಬ್ರ್ಯಾಂಡ್ ಹೆಸರು ಚಿರಪರಿಚಿತವಾಗಿದೆ. ಇಕೋ ಮಾಡೆಲ್, ಮಾರುತಿ ಸುಜುಕಿಯ ವಿವಿಧ ಫ್ಯಾಮಿಲಿ ಕಾರುಗಳ ಒಂದು ಭಾಗವಾಗಿತ್ತು. ಈ ಸೆವೆನ್ ಸೀಟರ್ಗಳ ಕಾರ್ ಅದರ ಹಲವಾರು ಫೀಚರ್ಗಳೊಂದಿಗೆ ಅನುಕೂಲತೆ ಮತ್ತು ಸ್ಟೈಲ್ ಎರಡನ್ನೂ ಸಂಯೋಜಿಸುವ ಗುರಿಯನ್ನು ಹೊಂದಿದೆ. ಇದು 1.2-ಲೀಟರ್ ಪೆಟ್ರೋಲ್ ಇಂಜಿನ್ ಜೊತೆಗೆ 5-ಸ್ಪೀಡ್ MT ಯೊಂದಿಗೆ ಬರುತ್ತದೆ. ಈ ಮಾಡೆಲ್ನ ಪೆಟ್ರೋಲ್ ವರ್ಷನ್ 16.11 kmpl ಫ್ಯೂಯೆಲ್ ದಕ್ಷತೆಯ ಅಂಕಿ ಅಂಶದೊಂದಿಗೆ ಬರುತ್ತದೆ ಮತ್ತು CNG ವೇರಿಯೆಂಟ್ 20.88km/kg ಅನ್ನು ನೀಡುತ್ತದೆ.
ಮಾರುತಿ ಸುಜುಕಿ ಇಕೊ ಕಾರಿನ ಕೆಲವು ಜನಪ್ರಿಯ ಫೀಚರ್ಗಳಲ್ಲಿ ಹೆಡ್ಲ್ಯಾಂಪ್ ಲೆವೆಲಿಂಗ್, ಮ್ಯಾನ್ಯುವಲ್ ಎಸಿ, ಸೈಡ್-ಇಂಪ್ಯಾಕ್ಟ್ ಬೀಮ್ಗಳು ಮತ್ತು ಸೀಟ್ ಬೆಲ್ಟ್ ರಿಮೈಂಡರ್ಗಳು ಸೇರಿವೆ. ಇವು ವಾಹನದ ಕಡೆಗೆ ಕಸ್ಟಮರ್ಗಳ ಜನಪ್ರಿಯತೆ ಮತ್ತು ಗಮನವನ್ನು ಸೆಳೆದಿವೆ. ಇದಲ್ಲದೆ, ಸ್ಲೈಡಿಂಗ್ ಡ್ರೈವರ್ ಸೀಟ್, ಹೀಟರ್, ರಿಕ್ಲೈನಿಂಗ್ ಫ್ರಂಟ್ ಸೀಟ್ಗಳು ಮತ್ತು ಇಂಟಿಗ್ರೇಟೆಡ್ ಹೆಡ್ರೆಸ್ಟ್ಗಳಂತಹ ಇತರ ವಿಶಿಷ್ಟ ಫೀಚರ್ಗಳು, ರೈಡರ್ಗಳಿಗೆ ಸೌಕರ್ಯ ಮತ್ತು ಅನುಕೂಲತೆಯನ್ನು ಸಹ ನೀಡುತ್ತವೆ.
ಕಾರಿನ ಸುರಕ್ಷತಾ ಕ್ರಮಗಳು ಸಹ ಆಕರ್ಷಕವಾಗಿವೆ. ಡ್ರೈವರ್ಗಳು ಸ್ಪೀಡ್ ಅಲರ್ಟ್ ಸಿಸ್ಟಮ್, ಎಬಿಎಸ್ ಮತ್ತು ಇಬಿಡಿ ಹಾಗೂ ಡ್ರೈವರ್ ಸೈಡ್ ಏರ್ಬ್ಯಾಗ್ನಿಂದ ಪ್ರಯೋಜನಗಳನ್ನು ಪಡೆಯುತ್ತಾರೆ. ಇದಲ್ಲದೆ, ರಿಯರ್ ಪಾರ್ಕಿಂಗ್ ಸೆನ್ಸಾರ್ಗಳು ಮತ್ತು ಡೋರ್ಗಳಿಗ್ ಚೈಲ್ಡ್ ಲಾಕ್ಗಳು ಮಾರುತಿ ಸುಜುಕಿ ಇಕೋ ಕಾರನ್ನು ಕುಟುಂಬಗಳಿಗೆ ಮತ್ತು ಅವರ ಸುರಕ್ಷತೆಯ ಅವಶ್ಯಕತೆಗಳಿಗೆ ಸರಿಹೊಂದುವಂತೆ ಮಾಡಿದೆ. ಇದು 3,675mm ಉದ್ದವಿದ್ದು ಮತ್ತು 2,350mm ವ್ಹೀಲ್ಬೇಸ್ ಅನ್ನು ಹೊಂದಿದೆ.
ಈ ಕಾರಿನ ಸ್ಪೆಸಿಫಿಕೇಶನ್ಗಳು ಅದರ ಬೆಲೆಗೆ ವಿರುದ್ಧವಾಗಿ ಪ್ರಚೋದಿಸುವಂತೆ ಕಂಡರೂ ಸಹ, ವಾಹನವನ್ನು ಖರೀದಿಸುವ ಭವಿಷ್ಯದ ಅವಶ್ಯಕತೆಗಳನ್ನು ಜನರು ನೆನಪಿನಲ್ಲಿಟ್ಟುಕೊಳ್ಳಬೇಕು. ಅಪಘಾತದಿಂದಾದ ಹಾನಿಯ ವೆಚ್ಚಗಳನ್ನು ತಪ್ಪಿಸಲು, ಮಾರುತಿ ಸುಜುಕಿ ಇಕೋ ಕಾರ್ ಇನ್ಶೂರೆನ್ಸ್ ಖರೀದಿಸುವ ಮೊದಲು, ನೀವು ಎರಡೆರಡು ಬಾರಿ ಯೋಚಿಸಬಾರದು. ಅಪಘಾತದ ಹಾನಿಯನ್ನು ಭರಿಸುವುದು ಪ್ರಾಯೋಗಿಕ ಮಾತ್ರವಲ್ಲದೇ, 1988 ರ ಮೋಟಾರ್ ವೆಹಿಕಲ್ಸ್ ಆ್ಯಕ್ಟ್ ಅನ್ನು ಅನುಸರಿಸಲು ನಿಮಗೆ ಸಹಾಯ ಮಾಡುವಲ್ಲಿ ಇದು ಸಹಾಯಕವಾಗಿದೆ.