ಮಾರುತಿ ಎಸ್-ಕ್ರಾಸ್ ಇನ್ಶೂರೆನ್ಸ್

Third-party premium has changed from 1st June. Renew now

ಮಾರುತಿ ಎಸ್-ಕ್ರಾಸ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿ ಅಥವಾ ರಿನೀವ್ ಮಾಡಿ

ಜಪಾನಿನ ಆಟೋಮೇಕರ್ ಸುಜುಕಿ 2006 ರಲ್ಲಿ ಸಬ್‌ಕಾಂಪ್ಯಾಕ್ಟ್ ಕಾರ್ ಮತ್ತು ಕ್ರಾಸ್‌ಒವರ್ ಎಸ್-ಕ್ರಾಸ್ ಅನ್ನು ಪ್ರಾರಂಭಿಸಿತು. ಈ ಮಾಡೆಲ್‌ನ ಎರಡನೇ ಜನರೇಶನ್ ಅನ್ನು ಭಾರತದಲ್ಲಿ ಸೆಪ್ಟೆಂಬರ್ 2015 ರಲ್ಲಿ ಪರಿಚಯಿಸಲಾಯಿತು. ಅಂದಿನಿಂದ, ಕಂಪನಿಯು ಮಾರುತಿ ಸುಜುಕಿಯ ನೆಕ್ಸಾ ಔಟ್‌ಲೆಟ್‌ಗಳ ಮೂಲಕ ಯುನಿಟ್‌ಗಳನ್ನು ಮಾರಾಟ ಮಾಡುತ್ತಿದೆ.

18.43 kmpl ಮೈಲೇಜ್, 1462 ಸಿಸಿ ಇಂಜಿನ್ ಡಿಸ್‌ಪ್ಲೇಸ್‌ಮೆಂಟ್, ಮಾನ್ಯುಯಲ್, ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಇತ್ಯಾದಿಗಳಂತಹ ಸಾಟಿಯಿಲ್ಲದ ಫೀಚರ್‌ಗಳಿಂದಾಗಿ ಈ ಕಾರ್ ತ್ವರಿತವಾಗಿ ತನ್ನ ಬೇಡಿಕೆಯಲ್ಲಿ ಏರಿಕೆಯನ್ನು ಕಂಡಿತು. ಪರಿಣಾಮವಾಗಿ, ಇದರ ತಯಾರಕರು ಈ ಮಾಡೆಲ್‌ನ ಸುಮಾರು 1.47 ಲಕ್ಷ ಯುನಿಟ್‌ಗಳನ್ನು ಭಾರತದಾದ್ಯಂತ ಮಾರಾಟ ಮಾಡಿದರು.

ಆದಾಗ್ಯೂ, ಇತರ ವಾಹನಗಳಂತೆ, ಈ ಮಾರುತಿ ಕಾರ್ ಸಹ ಅಪಘಾತಗಳು ಅಥವಾ ಘರ್ಷಣೆಯ ಸಂದರ್ಭದಲ್ಲಿ ನಿಮಗೆ ಹಾನಿಯನ್ನುಂಟುಮಾಡುತ್ತದೆ. ಇದರ ಪರಿಣಾಮವಾಗಿ ವಿಪರೀತ ರಿಪೇರಿ ವೆಚ್ಚವಾಗುತ್ತದೆ. ಇದನ್ನು ಪರಿಗಣಿಸಿ, ಭಾರತದಲ್ಲಿನ ಇನ್ಶೂರೆನ್ಸ್ ಕಂಪನಿಗಳು ಪಾಲಿಸಿ ಖರೀದಿದಾರನ ಲಯಬಿಲಿಟಿಗಳನ್ನು ಕಡಿಮೆ ಮಾಡಲು ಮಾರುತಿ ಎಸ್-ಕ್ರಾಸ್ ಇನ್ಶೂರೆನ್ಸ್ ಅನ್ನು ನೀಡುತ್ತವೆ.

ಈ ನಿಟ್ಟಿನಲ್ಲಿ, ಜನರು ಡಿಜಿಟ್‌ನಂತಹ ಪ್ರತಿಷ್ಠಿತ ಇನ್ಶೂರೆನ್ಸ್ ಕಂಪನಿಯಿಂದ ಇನ್ಶೂರೆನ್ಸ್ ಪಾಲಿಸಿಗಳನ್ನು ಖರೀದಿಸಬಹುದು. ಮತ್ತು ಅವರ ಹಣಕಾಸನ್ನು ಸುರಕ್ಷಿತಗೊಳಿಸಬಹುದು. ಕೆಳಗಿನ ವಿಭಾಗವು, ಈ ಇನ್ಶೂರೆನ್ಸ್ ಕಂಪನಿಯಿಂದ ಇನ್ಶೂರೆನ್ಸ್ ಅನ್ನು ಪಡೆಯುವ ಅನುಕೂಲತೆಗಳ ಮೇಲೆ ಸ್ವಲ್ಪ ಬೆಳಕು ಚೆಲ್ಲುತ್ತದೆ. ಇನ್ನಷ್ಟು ತಿಳಿಯಲು ಮುಂದೆ ಓದಿ.

ಮಾರುತಿ ಎಸ್-ಕ್ರಾಸ್ ಕಾರ್ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ?

ನೀವು ಡಿಜಿಟ್‌ನ ಮಾರುತಿ ಎಸ್-ಕ್ರಾಸ್ ಕಾರ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ಮಾರುತಿ ಸುಜುಕಿ ಎಸ್-ಕ್ರಾಸ್‌ಗಾಗಿ ಕಾರ್‌ ಇನ್ಶೂರೆನ್ಸ್ ಪ್ಲ್ಯಾನ್‌ಗಳು

ಥರ್ಡ್-ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ಬೆಂಕಿ ಕಾರಣದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ಥರ್ಡ್-ಪಾರ್ಟಿ ವೆಹಿಕಲ್‌ಗೆ ಉಂಟಾದ ಡ್ಯಾಮೇಜ್‌ಗಳು

×

ಥರ್ಡ್-ಪಾರ್ಟಿ ಪ್ರಾಪರ್ಟಿಗೆ ಉಂಟಾದ ಡ್ಯಾಮೇಜ್‌ಗಳು

×

ಪರ್ಸನಲ್ ಆ್ಯಕ್ಸಿಡೆಂಟ್ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಗೆ ಗಾಯಗಳು/ಮರಣ

×

ನಿಮ್ಮ ಕಾರಿನ ಕಳ್ಳತನ

×

ಡೋರ್‌ಸ್ಟೆಪ್‌ ಪಿಕಪ್ ಮತ್ತು ಡ್ರಾಪ್

×

ನಿಮ್ಮ ಐಡಿವಿ ಕಸ್ಟಮೈಸ್ ಮಾಡಿ

×

ಕಸ್ಟಮೈಸ್ಡ್ ಆ್ಯಡ್-ಆನ್‌ಗಳ ಜೊತೆ ಎಕ್ಷ್ಟ್ರಾ ಪ್ರೊಟೆಕ್ಷನ್

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಹೆಚ್ಚು ತಿಳಿಯಿರಿ

ಕ್ಲೈಮ್ ಅನ್ನು ಹೇಗೆ ಫೈಲ್ ಮಾಡುವುದು?

ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ನೀವು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿಸಿದ ನಂತರ, ನೀವು ಚಿಂತಾ-ಮುಕ್ತರಾಗಿ ಬದುಕುತ್ತೀರಿ! ಏಕೆಂದರೆ, ನಾವು ಕೇವಲ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ.

ಹಂತ 1

1800-258-5956 ನಂಬರಿಗೆ ಕಾಲ್ ಮಾಡಿದರೆ ಸಾಕು. ಯಾವ ಫಾರ್ಮ್‌ಗಳನ್ನೂ ತುಂಬಬೇಕಾಗಿಲ್ಲ

ಹಂತ 2

ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿಗೆ ಸ್ವ-ತಪಾಸಣೆಯ ಲಿಂಕ್ ಪಡೆಯಿರಿ. ಮಾರ್ಗದರ್ಶನದ ಹಂತ ಹಂತದ ಪ್ರೊಸೆಸ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಿಂದಲೇ ನಿಮ್ಮ ವಾಹನದ ಡ್ಯಾಮೇಜ್‌ಗಳನ್ನು ತಿಳಿಸಿರಿ.

ಹಂತ 3

ನಮ್ಮ ನೆಟ್‌ವರ್ಕ್‌ ಗ್ಯಾರೇಜ್‌ಗಳಲ್ಲಿ ಕ್ಯಾಶ್‌ಲೆಸ್ ಅಥವಾ ರಿಇಂಬರ್ಸ್‌ಮೆಂಟ್ ಈ ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ಮೋಡ್ ಅನ್ನು ಆರಿಸಿಕೊಳ್ಳಿ.

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ? ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ಈ ಪ್ರಶ್ನೆಯು ಮೊದಲು ನಿಮ್ಮ ಮನಸ್ಸಿಗೆ ಬರಬೇಕು. ಗುಡ್ ನೀವೀಗ ಅದನ್ನು ಕೇಳುತ್ತಿದ್ದೀರಿ! ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಓದಿ

ಮಾರುತಿ ಎಸ್-ಕ್ರಾಸ್ ಇನ್ಶೂರೆನ್ಸ್‌ಗಾಗಿ ಡಿಜಿಟ್ ಅನ್ನು ಏಕೆ ಆಯ್ಕೆ ಮಾಡಬೇಕು?

ಮಾರುತಿ ಕಾರಿಗೆ ಉತ್ತಮವಾದ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಆಯ್ಕೆ ಮಾಡಲು, ಇನ್ಶೂರೆನ್ಸ್ ಕಂಪನಿಯನ್ನು ಮತ್ತು ಅದರ ಸಂಬಂಧಿತ ಇನ್ಶೂರೆನ್ಸ್ ಪಾಲಿಸಿಗಳನ್ನು ಆನ್‌ಲೈನ್‌ನಲ್ಲಿ ಹೋಲಿಸಬೇಕು. ಹಾಗೆ ಮಾಡುವಾಗ, ನೀವು ಡಿಜಿಟ್‌ನ ಆಫರ್‌ಗಳನ್ನು ನೋಡಲು ಬಯಸಬಹುದು ಮತ್ತು ಮಾರುತಿ ಎಸ್-ಕ್ರಾಸ್‌ಗಾಗಿ ನಿಮ್ಮ ಕಾರ್ ಇನ್ಶೂರೆನ್ಸ್‌ಗೆ ಸಂಬಂಧಿಸಿದಂತೆ ತಿಳುವಳಿಕೆಯುತ ನಿರ್ಧಾರವನ್ನು ತೆಗೆದುಕೊಳ್ಳಬಹುದು.

1. ವಿವಿಧ ಇನ್ಶೂರೆನ್ಸ್ ಯೋಜನೆಗಳು

ನೀವು ಡಿಜಿಟ್ ಅನ್ನು ಆಯ್ಕೆ ಮಾಡಿಕೊಂಡರೆ, ನೀವು ಈ ಕೆಳಗಿನ ಇನ್ಶೂರೆನ್ಸ್ ಆಯ್ಕೆಗಳಲ್ಲಿ ಸೂಕ್ತವಾದುದನ್ನು ಆಯ್ಕೆ ಮಾಡಬಹುದು:

  • ಥರ್ಡ್-ಪಾರ್ಟಿ ಇನ್ಶೂರೆನ್ಸ್ ಪಾಲಿಸಿ

ನಿಮ್ಮ ಮಾರುತಿ ಕಾರಿಗೆ ಥರ್ಡ್-ಪಾರ್ಟಿ ಇನ್ಶೂರೆನ್ಸ್ ಪ್ಲ್ಯಾನ್ ಪಡೆಯುವುದು ಅತ್ಯಗತ್ಯವಾಗಿದೆ. ಏಕೆಂದರೆ ಇದು ಅಪಘಾತಗಳಿಂದ ಉಂಟಾಗುವ ಥರ್ಡ್ ಪಾರ್ಟಿ ಲಯಬಿಲಿಟಿಗಳನ್ನು ಕವರ್ ಮಾಡುತ್ತದೆ. ನಿಮ್ಮ ಕಾರ್ ಮತ್ತು ಥರ್ಡ್ ಪಾರ್ಟಿ ವ್ಯಕ್ತಿಯ, ಪ್ರಾಪರ್ಟಿಯ ಅಥವಾ ವಾಹನದ ಮಧ್ಯೆ ಅಪಘಾತ ಅಥವಾ ಘರ್ಷಣೆಯುಂಟಾದಲ್ಲಿ, ಥರ್ಡ್ ಪಾರ್ಟಿಯ ಹಾನಿಯನ್ನು ಸರಿಪಡಿಸುವ ವೆಚ್ಚವನ್ನು ನೀವು ಭರಿಸಬೇಕಾಗುತ್ತದೆ. ಆದಾಗ್ಯೂ, ಮಾರುತಿ ಎಸ್-ಕ್ರಾಸ್‌ಗಾಗಿ ಡಿಜಿಟ್‌ನ ಥರ್ಡ್ ಪಾರ್ಟಿ ಇನ್ಶೂರೆನ್ಸ್, ಈ ವೆಚ್ಚಗಳನ್ನು ಕವರ್ ಮಾಡುತ್ತದೆ ಮತ್ತು ಲಿಟಿಗೇಶನ್ ಸಮಸ್ಯೆಗಳನ್ನು ಸಹ ನೋಡಿಕೊಳ್ಳುತ್ತದೆ. ಇದಲ್ಲದೆ, ಮೋಟಾರ್ ವೆಹಿಕಲ್ಸ್ ಆ್ಯಕ್ಟ್, 1988 ರ ಪ್ರಕಾರ, ಈ ಬೇಸಿಕ್ ಇನ್ಶೂರೆನ್ಸ್ ಅನ್ನು ಪಡೆಯುವ ಮೂಲಕ ನೀವು ಪೆನಲ್ಟಿಗಳನ್ನು ತಪ್ಪಿಸಬಹುದು.

  • ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿ

ನಿಮ್ಮ ಮಾರುತಿ ಕಾರಿಗೆ ಅಧಿಕ ಹಾನಿಯನ್ನುಂಟುಮಾಡುವ ಅಪಘಾತಗಳು ಸಂಭವಿಸಬಹುದು ಮತ್ತು ಅವುಗಳನ್ನು ರಿಪೇರಿ ಮಾಡಿಸುವುದು ನಿಮಗೆ ಕಷ್ಟಕರವೆನಿಸಬಹುದು. ಇದನ್ನು ತಪ್ಪಿಸಲು, ನೀವು ಡಿಜಿಟ್‌ನಿಂದ ಕಾಂಪ್ರೆಹೆನ್ಸಿವ್ ಎಸ್-ಕ್ರಾಸ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸಬಹುದು. ಈ ಇನ್ಶೂರೆನ್ಸ್ ಪ್ಲ್ಯಾನ್ ನಿಮಗೆ ಸ್ವಂತ ಕಾರ್ ಹಾನಿ (ಓನ್ ಕಾರ್ ಡ್ಯಾಮೇಜ್) ಮತ್ತು ಥರ್ಡ್ ಪಾರ್ಟಿ ಹಾನಿಗಳ ವಿರುದ್ಧ ಕವರೇಜ್ ಪ್ರಯೋಜನಗಳನ್ನು ನೀಡುತ್ತದೆ. ಆದಾಗ್ಯೂ, ಈ ಪ್ಲ್ಯಾನ್‌ಗಳು ಒಟ್ಟಾರೆ ರಕ್ಷಣೆಯನ್ನು ಒದಗಿಸುವುದರಿಂದ, ಅವುಗಳು ಸ್ವಲ್ಪ ಹೆಚ್ಚಿನ ಬೆಲೆಹಳ್ಳಿ ಲಭ್ಯವಿವೆ.

2. ಕ್ಯಾಶ್‌ಲೆಸ್ ಕ್ಲೈಮ್‌ಗಳು

ನಿಮ್ಮ ಮಾರುತಿ ಎಸ್-ಕ್ರಾಸ್ ಇನ್ಶೂರೆನ್ಸ್ ವಿರುದ್ಧ ನೀವು ಕ್ಲೈಮ್ ಮಾಡುವಾಗ ಡಿಜಿಟ್ ನಿಮಗೆ ಕ್ಯಾಶ್‌ಲೆಸ್ ವಿಧಾನವನ್ನು ಆರಿಸಿಕೊಳ್ಳುವ ಆಯ್ಕೆಯನ್ನು ನೀಡುತ್ತದೆ. ಈ ರಿಪೇರಿ ವಿಧಾನದ ಅಡಿಯಲ್ಲಿ, ನೀವು ಯಾವುದೇ ಹಣವನ್ನು ಪಾವತಿಸದೆ ಅಥರೈಸ್ಡ್ ಗ್ಯಾರೇಜ್‌ನಿಂದ, ಪ್ರೊಫೆಷನಲ್ ರಿಪೇರಿ ಸರ್ವೀಸ್‌ಗಳನ್ನು ಪಡೆಯಬಹುದು. ಇನ್ಶೂರೆನ್ಸ್ ಕಂಪನಿಯು ನೇರವಾಗಿ ರಿಪೇರಿ ಸೆಂಟರ್‌ಗೆ ಪಾವತಿಸಿ ಸೆಟಲ್ ಮಾಡುತ್ತದೆ. ಹೀಗಾಗಿ, ಈ ಸೌಲಭ್ಯವನ್ನು ಆರಿಸಿಕೊಳ್ಳುವ ಮೂಲಕ ಭವಿಷ್ಯದ ಅಗತ್ಯಗಳಿಗಾಗಿ ನಿಮ್ಮ ಹಣಕಾಸನ್ನು ನೀವು ಉಳಿಸಬಹುದು.

3. ನೆಟ್‌ವರ್ಕ್ ಗ್ಯಾರೇಜ್‌ಗಳ ದೊಡ್ಡ ಸಂಖ್ಯೆ

ನಿಮ್ಮ ಮಾರುತಿ ಕಾರನ್ನು ಭಾರತದಾದ್ಯಂತ ಇರುವ ಅನೇಕ ಡಿಜಿಟ್ ನೆಟ್‌ವರ್ಕ್ ಗ್ಯಾರೇಜ್‌ಗಳಲ್ಲಿ ಯಾವುದಾದರೂ ಒಂದರಲ್ಲಿ ರಿಪೇರಿ ಮಾಡಿಸಬಹುದು ಮತ್ತು ಕ್ಯಾಶ್‌ಲೆಸ್ ಸೌಲಭ್ಯವನ್ನು ಪಡೆಯಬಹುದು. ಡಿಜಿಟ್ ಗ್ಯಾರೇಜ್‌ಗಳ ವಿಶಾಲವಾದ ನೆಟ್‌ವರ್ಕ್‌ನಿಂದಾಗಿ, ಅಪಘಾತಗಳು ಮತ್ತು ತುರ್ತು ಸಂದರ್ಭಗಳಲ್ಲಿ ರಿಪೇರಿ ಸೆಂಟರ್‌ಗಳನ್ನು ಪತ್ತೆಹಚ್ಚಲು ಇದು ಅನುಕೂಲಕರವಾಗಿದೆ.

4. ಸುಲಭ ಆನ್‌ಲೈನ್‌ ಪ್ರಕ್ರಿಯೆ

ಡಿಜಿಟ್‌ನಿಂದ ಸ್ಮಾರ್ಟ್‌ಫೋನ್-ಎನೆಬಲ್ಡ್ ಪ್ರಕ್ರಿಯೆಗಳ ಕಾರಣದಿಂದಾಗಿ ಮಾರುತಿ ಎಸ್-ಕ್ರಾಸ್ ಇನ್ಶೂರೆನ್ಸ್ ಅನ್ನು ಡಿಜಿಟ್‌ನಿಂದ ಆನ್‌ಲೈನ್‌ನಲ್ಲಿ ಪಡೆಯುವುದು ಅನುಕೂಲಕರವಾಗಿದೆ. ಭಾರೀ ಪೇಪರ್‌ವರ್ಕ್‌ಗಳ ತೊಂದರೆಯಿಲ್ಲದೆ ನಿಮ್ಮ ಮೊಬೈಲ್ ಫೋನ್‌ನಿಂದ ಕೇವಲ ಕೆಲವೇ ನಿಮಿಷಗಳಲ್ಲಿ ನೀವು ನಿಮ್ಮ ಇನ್ಶೂರೆನ್ಸ್ ಪ್ಲ್ಯಾನ್‌ಗಳನ್ನು ಖರೀದಿಸಬಹುದು.

5. ಡೋರ್‌ಸ್ಟೆಪ್ ಪಿಕ್-ಅಪ್ ಮತ್ತು ಡ್ರಾಪ್ ಸೌಲಭ್ಯ

ಕಾಂಪ್ರೆಹೆನ್ಸಿವ್ ಪ್ಲ್ಯಾನ್‌ಗಾಗಿ ಮಾರುತಿ ಎಸ್-ಕ್ರಾಸ್ ಇನ್ಶೂರೆನ್ಸ್ ರಿನೀವಲ್ ಬೆಲೆಯನ್ನು ಪಾವತಿಸಿದ ನಂತರ, ನೀವು ಡೋರ್‌ಸ್ಟೆಪ್ ಪಿಕ್-ಅಪ್ ಮತ್ತು ಡ್ರಾಪ್ ಸೌಲಭ್ಯವನ್ನು ಪಡೆಯಬಹುದು ಮತ್ತು ನಿಮ್ಮ ಮನೆಯಿಂದಲೇ ನಿಮ್ಮ ಮಾರುತಿ ಕಾರಿನ ಹಾನಿಗೊಳಗಾದ ಭಾಗಗಳನ್ನು ಸರಿಪಡಿಸಬಹುದು.

6. ಆ್ಯಡ್-ಆನ್ ಪ್ರಯೋಜನಗಳು

ಹೆಚ್ಚುವರಿ ಶುಲ್ಕಗಳ ವಿರುದ್ಧ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪ್ಲ್ಯಾನ್‌ ಅನ್ನು ಖರೀದಿಸುವಾಗ ಡಿಜಿಟ್ ನಿಮಗೆ ಆ್ಯಡ್-ಆನ್ ಪ್ರಯೋಜನಗಳನ್ನು ನೀಡುತ್ತದೆ. ಹೆಚ್ಚುವರಿ ಕವರೇಜ್‌ಗಾಗಿ ನಿಮ್ಮ ಬೇಸ್ ಪ್ಲ್ಯಾನ್‌ನ ಮೇಲೆ ಆ್ಯಡ್-ಆನ್ ಪಾಲಿಸಿಗಳನ್ನು ನೀವು ಸೇರಿಸಬಹುದು. ನೀವು ಪ್ರಯೋಜನ ಪಡೆಯಬಹುದಾದ ಕೆಲವು ಆ್ಯಡ್-ಆನ್ ಕವರ್‌ಗಳು ಹೀಗಿವೆ:

  • ರೋಡ್‌ಸೈಡ್ ಅಸಿಸ್ಟೆನ್ಸ್ 

  • ಇಂಜಿನ್ ಮತ್ತು ಗೇರ್ ಬಾಕ್ಸ್ ಪ್ರೊಟೆಕ್ಷನ್ ಕವರ್

  • ಕನ್ಸ್ಯೂಮೆಬಲ್ ಕವರ್

  • ರಿಟರ್ನ್ ಟು ಇನ್‌ವಾಯ್ಸ್ ಕವರ್‌

  • ಝೀರೋ ಡೆಪ್ರಿಸಿಯೇಶನ್ ಕವರ್

ಹೀಗಾಗಿ, ನಿಮ್ಮ ಮಾರುತಿ ಎಸ್-ಕ್ರಾಸ್ ಇನ್ಶೂರೆನ್ಸಿನ ಬೆಲೆಯನ್ನು ಹೆಚ್ಚಿಸುವ ಮೂಲಕ, ನೀವು ಈ ಕವರ್‌ಗಳನ್ನು ಸೇರಿಸಿಕೊಳ್ಳಬಹುದು ಮತ್ತು ಹೆಚ್ಚುವರಿ ರಕ್ಷಣಾ ಕವಚವನ್ನು ಪಡೆಯಬಹುದು.

7. ಐಡಿವಿ (IDV) ಕಸ್ಟಮೈಸೇಶನ್

ಇನ್ಶೂರೆನ್ಸ್ ಕಂಪನಿಯು ನಿಮ್ಮ ಮಾರುತಿ ಕಾರ್ ಇನ್ಶೂರೆನ್ಸ್‌ನ ಘೋಷಿತ ಮೌಲ್ಯವನ್ನು (ಐಡಿವಿ) ಅವಲಂಬಿಸಿ ಕಳ್ಳತನದ ಸಂದರ್ಭದಲ್ಲಿ ಅಥವಾ ರಿಪೇರಿಗೆ ಮೀರಿದ ಹಾನಿಯಾದಲ್ಲಿ ರಿಟರ್ನ್ ಮೊತ್ತವನ್ನು ನೀಡುತ್ತಾರೆ. ಹೆಚ್ಚುವರಿಯಾಗಿ, ಮಾರುತಿ ಎಸ್-ಕ್ರಾಸ್ ಇನ್ಶೂರೆನ್ಸ್‌ನ ವೆಚ್ಚವು, ನಿಮ್ಮ ಕಾರಿನ ಐಡಿವಿಯೊಂದಿಗೆ ಬದಲಾಗುತ್ತದೆ. ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಈ ಮೌಲ್ಯವನ್ನು ಕಸ್ಟಮೈಸ್ ಮಾಡಲು ಮತ್ತು ನಿಮ್ಮ ಪ್ರಯೋಜನಗಳನ್ನು ಗರಿಷ್ಠಗೊಳಿಸಲು ಡಿಜಿಟ್ ನಿಮ್ಮನ್ನು ಅನುಮತಿಸುತ್ತದೆ.

8. ಬೋನಸ್‌ಗಳು ಮತ್ತು ಡಿಸ್ಕೌಂಟ್‌ಗಳು

ಮಾರುತಿ ಎಸ್-ಕ್ರಾಸ್ ಇನ್ಶೂರೆನ್ಸ್ ರಿನೀವಲ್‌ನ ಸಮಯದಲ್ಲಿ, ಡಿಜಿಟ್‌ನಂತಹ ಇನ್ಶೂರೆನ್ಸ್ ಪೂರೈಕೆದಾರರು ನಿಮ್ಮ ಪಾಲಿಸಿ ಅವಧಿಯೊಳಗೆ ನೀವು ಕ್ಲೈಮ್‌ಗಳನ್ನು ಮಾಡದಿದ್ದರೆ, ನಿಮಗೆ 50% ವರೆಗೆ ನೋ ಕ್ಲೈಮ್ ಬೋನಸ್ ಅನ್ನು ನೀಡುತ್ತಾರೆ. ಈ ಡಿಸ್ಕೌಂಟ್ ಮತ್ತು ಬೋನಸ್‌ನಿಂದಾಗಿ, ನೀವು ಕಡಿಮೆ ಪ್ರೀಮಿಯಂನಲ್ಲಿ ಮಾರುತಿ ಎಸ್-ಕ್ರಾಸ್‌ಗಾಗಿ ಕಾರ್ ಇನ್ಶೂರೆನ್ಸ್ ಅನ್ನು ಆನಂದಿಸಬಹುದು.

ಅದಲ್ಲದೆ, ನಿಮ್ಮ ಮಾರುತಿ ಎಸ್-ಕ್ರಾಸ್ ಇನ್ಶೂರೆನ್ಸ್‌ಗೆ ಸಂಬಂಧಿಸಿದಂತೆ ನಿಮಗೇನಾದರೂ ಸಂದೇಹ ಮತ್ತು ಪ್ರಶ್ನೆಗಳಿದ್ದಲ್ಲಿ, ನೀವು ಡಿಜಿಟ್‌ನ ಸಮರ್ಥವಾದ ಕಸ್ಟಮರ್ ಸರ್ವೀಸ್ ಅನ್ನು ಸಂಪರ್ಕಿಸಬಹುದು ಮತ್ತು ತ್ವರಿತ ಪರಿಹಾರಗಳನ್ನು ಪಡೆಯಬಹುದು. ಆದ್ದರಿಂದ, ನೀವು ಮೇಲೆ ತಿಳಿಸಿದ ಪ್ರಯೋಜನಗಳನ್ನು ಪರಿಗಣಿಸಿದರೆ, ನಿಮ್ಮ ಕಾರ್ ಇನ್ಶೂರೆನ್ಸ್‌ಗಾಗಿ ಡಿಜಿಟ್ ಆಯ್ಕೆಯು ಅತ್ಯಂತ ಸೂಕ್ತವಾಗಿದೆ.

ನಿಮ್ಮ ಮಾರುತಿ ಸುಜುಕಿ ಎಸ್-ಕ್ರಾಸ್‌ಗಾಗಿ ಇನ್ಶೂರೆನ್ಸ್ ಅನ್ನು ಖರೀದಿಸುವುದು ಏಕೆ ಮುಖ್ಯವಾಗಿದೆ?

ರಸ್ತೆಯಲ್ಲಿ ಬಳಸುವ ಮಾರುತಿ ಸುಜುಕಿ ವ್ಯಾಗನ್ ಆರ್ ನಂತಹ ಯಾವುದೇ ಕಾರ್ ಖಂಡಿತವಾಗಿ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರಬೇಕು. ಕಾರ್ ಇನ್ಶೂರೆನ್ಸ್ ಈ ಕೆಳಗಿನವುಗಳಿಗಾಗಿ ಓನರ್‌ನನ್ನು ಕವರ್ ಮಾಡುತ್ತದೆ:

  • ಅನಿರೀಕ್ಷಿತ ಫೈನಾನ್ಸಿಯಲ್ ಲಯಬಿಲಿಟಿಗಳಿಂದ ರಕ್ಷಣೆ: ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್‌ನ ಅಡಿಯಲ್ಲಿ ಸ್ವಂತ ಹಾನಿಯ ಕವರ್, ನಿಮ್ಮ ವಾಹನದ ಹಾನಿಯಿಂದಾದ ಫೈನಾನ್ಸಿಯಲ್ ಲಯಬಿಲಿಟಿಗಳಿಗಾಗಿ ನಿಮಗೆ ಪಾವತಿಸುತ್ತದೆ. ಇದು ನಿಮ್ಮ ಜೇಬನ್ನು ಅನಿರೀಕ್ಷಿತ ವೆಚ್ಚಗಳಿಂದ ಉಳಿಸುತ್ತದೆ. ಅಪಘಾತ, ನೈಸರ್ಗಿಕ ವಿಪತ್ತುಗಳು, ಕಳ್ಳತನ ಅಥವಾ ವಿಧ್ವಂಸಕತೆ, ಮುಷ್ಕರಗಳು ಮತ್ತು ಗಲಭೆಗಳಿಂದ ಯಾವುದೇ ಹಾನಿಯಾಗದಂತೆ ಇದು ನಿಮ್ಮ ಕಾರನ್ನು ರಕ್ಷಿಸುತ್ತದೆ.
  • ಭಾರತೀಯ ರಸ್ತೆಗಳಲ್ಲಿ ಡ್ರೈವ್ ಮಾಡಲು ಕಾನೂನಾತ್ಮಕವಾದ ಕಂಪ್ಲೈಂಟ್: ಇನ್ಶೂರೆನ್ಸ್ ಪಾಲಿಸಿಯು ನಿಮಗೆ ರಸ್ತೆಯಲ್ಲಿ ಕಾನೂನುಬದ್ಧವಾಗಿ ಡ್ರೈವ್ ಮಾಡಲು ಅನುಮತಿಸುವ ಕಡ್ಡಾಯ ಡಾಕ್ಯುಮೆಂಟ್‌ಗಳಲ್ಲಿ ಒಂದಾಗಿದೆ. ಇನ್ಶೂರೆನ್ಸ್ ಪಾಲಿಸಿಯಿಲ್ಲದೆ, ಕಾರ್ ಓನರ್‌ಗಳಿಗೆ ಭಾರೀ ದಂಡದೊಂದಿಗೆ ಪೆನಲ್ಟಿಯನ್ನು ವಿಧಿಸಲಾಗುತ್ತದೆ ಮತ್ತು ಅವರ ಲೈಸೆನ್ಸ್ ಅನ್ನು ಕ್ಯಾನ್ಸಲ್‌ಗೊಳಿಸಬಹುದು.
  • ಥರ್ಡ್-ಪಾರ್ಟಿ ಲಯಬಿಲಿಟಿಗಳನ್ನು ಕವರ್ ಮಾಡುತ್ತದೆ: ಥರ್ಡ್-ಪಾರ್ಟಿ ಲಯಬಿಲಿಟಿ ಕವರ್ ನಿಮ್ಮಿಂದ ಉಂಟಾಗುವ ಯಾವುದೇ ಥರ್ಡ್ ಪಾರ್ಟಿ ಪ್ರಾಪರ್ಟಿಯ ಹಾನಿಗಳಿಂದ ಮತ್ತು ದೈಹಿಕ ಗಾಯದ ಕಾರಣದಿಂದ ಉಂಟಾದ ಲಯಬಿಲಿಟಿಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಕಾರ್ ಇನ್ಶೂರೆನ್ಸ್‌ನ ಅಡಿಯಲ್ಲಿ ಥರ್ಡ್-ಪಾರ್ಟಿ ಲಯಬಿಲಿಟಿ ಪಾಲಿಸಿಯನ್ನು ಖರೀದಿಸುವುದು ಕಡ್ಡಾಯವಾಗಿದೆ.
  • ಆ್ಯಡ್-ಆನ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ: ಥರ್ಡ್-ಪಾರ್ಟಿ ಇನ್ಶೂರೆನ್ಸ್ ಕಡ್ಡಾಯವಾಗಿದೆ ಆದರೆ ನೀವು ಹೆಚ್ಚಿನ ಕವರೇಜ್‌ಗಾಗಿ ಬಯಸಿದರೆ, ಆಗ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಬುದ್ಧಿವಂತರ ಆಯ್ಕೆಯಾಗಿದೆ. ರಕ್ಷಣೆಯ ಮಿತಿಯನ್ನು ಹೆಚ್ಚಿಸಲು ನೀವು ಈ ಬೇಸಿಕ್ ಕವರ್ ಅನ್ನು ಕೆಲವು ಆ್ಯಡ್-ಆನ್‌ಗಳೊಂದಿಗೆ ವಿಸ್ತರಿಸಬಹುದು. ಈ ಕಾರ್ ಇನ್ಶೂರೆನ್ಸ್ ಆ್ಯಡ್-ಆನ್‌ಗಳಲ್ಲಿ ಕೆಲವನ್ನು ಹೆಸರಿಸುವುದಾದರೆ ಬ್ರೇಕ್‌ಡೌನ್ ಅಸಿಸ್ಟೆನ್ಸ್, ಇಂಜಿನ್ ಮತ್ತು ಗೇರ್‌ಬಾಕ್ಸ್ ಪ್ರೊಟೆಕ್ಷನ್, ಟೈರ್ ಪ್ರೋಟೆಕ್ಟಿವ್ ಕವರ್ ಮತ್ತು ಝೀರೋ-ಡೆಪ್ರಿಸಿಯೇಶನ್ ಕವರ್ ಇತ್ಯಾದಿ.

ಮಾರುತಿ ಸುಜುಕಿ ಎಸ್-ಕ್ರಾಸ್ ಕುರಿತು ಇನ್ನಷ್ಟು ತಿಳಿಯಿರಿ

ಮಾರುತಿ ಸುಜುಕಿ ಎಸ್ ಕ್ರಾಸ್ ಅನ್ನು ಎಸ್‌ಯುವಿಯಾಗಿ ಗುತ್ತಿಗೆ ಪಡೆಯಲು ತಯಾರಿಸಲಾಗಿದೆ. ಆದರೆ ಇದರ ಲಾಂಗ್ ಹ್ಯಾಚ್‌ಬ್ಯಾಕ್ ಲುಕ್‌ನಿಂದಾಗಿ ಈ ಮಾಡೆಲ್‌ಗೆ ಮಾರ್ಕೆಟ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ತಯಾರಕರು ಇದನ್ನು ಇತ್ತೀಚೆಗೆ ಮರು ವ್ಯಾಖ್ಯಾನಿಸಿದ್ದಾರೆ. 2014 ರಲ್ಲಿ ಸ್ಥಗಿತಗೊಂಡ ಮಾರುತಿ ಸುಜುಕಿ 800 ನಂತಹ ಸಣ್ಣ ಸಿಟಿ ರೈಡ್ ಕಾರನ್ನು ರಚಿಸಿದ ನಂತರ, ಮಾರುತಿ ಎಸ್ ಕ್ರಾಸ್‌ನಂತಹ ಅನೇಕ ಇತರ ಕಾರುಗಳೊಂದಿಗೆ ಪುನಃ ಎದ್ದು ನಿಂತರು.

ಇತರ ಕಾರುಗಳಂತೆಯೇ, ಮಾರುತಿ ಸುಜುಕಿ ಎಸ್ ಕ್ರಾಸ್ ಅದರ ಪ್ರಾಥಮಿಕ ಡಿಸೈನ್‌ನೊಂದಿಗೆ ಒಂದು ಉದ್ದೇಶವನ್ನು ಪೂರೈಸಿದೆ. ಇದನ್ನು ಸಮಾಜದ ಮೇಲ್ಮಧ್ಯಮ ವರ್ಗದ ಜನರು ಖರೀದಿಸಿದ್ದಾರೆ. ಈ ಕಾರಿನ ಬೆಲೆಯು ₹8.86 ಲಕ್ಷದಿಂದ ₹11.49 ಲಕ್ಷಗಳವರೆಗೆ ಇರುತ್ತದೆ. ಅತ್ಯಾಧುನಿಕವಾಗಿ ಕಾಣುವ ಈ ಕಾರ್ ತನ್ನ ಗುಣಮಟ್ಟದ ಇಂಟೀರಿಯರ್‌ನಿಂದಾಗಿ ಮಾರ್ಕೆಟ್‌ನಲ್ಲಿ ಆಯ್ಕೆಯಾಗಿದೆ.

ನೀವು ಮಾರುತಿ ಸುಜುಕಿ ಎಸ್-ಕ್ರಾಸ್ ಅನ್ನು ಏಕೆ ಖರೀದಿಸಬೇಕು?

ಮಾರುತಿ ಸುಜುಕಿ ಎಸ್ ಕ್ರಾಸ್ ಫೈವ್ ಸೀಟರ್‌ಗಳ ಕಾರ್ ಆಗಿದ್ದು, ಇದು ವಿಶಾಲವಾಗಿದೆ ಮತ್ತು ಡೀಸೆಲ್ ಇಂಜಿನ್ ಅನ್ನು ಹೊಂದಿದೆ. 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಹೆಚ್ಚಿನ ವೇಗದಲ್ಲಿ ರೈಡರ್‌ಗಳು ಸುಗಮವಾಗಿ ತಮ್ಮ ರೈಡ್‌ಗಳನ್ನು ಮಾಡುತ್ತಾರೆ. ಮಾರುತಿ ಸುಜುಕಿ ಇತ್ತೀಚೆಗೆ ತನ್ನ ಫೀಚರ್‌ಗಳಿಗಾಗಿ ಕಾರನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಯೋಚಿಸಿದೆ.

ಈ ಕಾರ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಹೊಂದಿದ್ದು, ಪ್ರತಿ ಲೀಟರ್‌ಗೆ 25.1 km ಮೈಲೇಜ್ ನೀಡುತ್ತದೆ. ಲೆದರ್ ಅಪ್‌ಹೋಲ್‌ಸ್ಟರಿ, ಕ್ರೂಸ್ ಕಂಟ್ರೋಲ್, 60:40 ಅನುಪಾತದಲ್ಲಿ ರಿಯರ್ ಸೀಟ್ ಸ್ಪ್ಲಿಟ್ ಮತ್ತು 7-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂನೊಂದಿಗೆ ಕಾರಿನ ಇಂಟೀರಿಯರ್ ನಿಮಗೆ ಪ್ರೀಮಿಯಂ ಅನುಭವ ನೀಡುತ್ತದೆ. ಇದು ಆಂಡ್ರಾಯ್ಡ್ ಸಿಸ್ಟಮ್‌ಗಳೊಂದಿಗೆ ಉತ್ತಮವಾಗಿ ಕನೆಕ್ಟ್ ಆಗುತ್ತದೆ. ಎಲ್ಲಾ ಹೊಸ ಮಾರುತಿ ಸುಜುಕಿ ಎಸ್-ಕ್ರಾಸ್ ಫೇಸ್‌ಲಿಫ್ಟ್ ಸಿಗ್ಮಾ, ಡೆಲ್ಟಾ, ಝೀಟಾ ಮತ್ತು ಆಲ್ಫಾದ ನಾಲ್ಕು ವೇರಿಯಂಟ್‌ಗಳಲ್ಲಿ ಲಭ್ಯವಿದೆ.

ಮಾರುತಿ ಸುಜುಕಿ ಎಸ್-ಕ್ರಾಸ್‌ನಲ್ಲಿನ ಮತ್ತೊಂದು ಪ್ರಮುಖ ಅಪ್‌ಡೇಟ್ ಎಂದರೆ ಲೆದರ್‌ನಲ್ಲಿ ಸುತ್ತಿರುವ ಡೋರ್ ಆರ್ಮ್‌ರೆಸ್ಟ್‌ನೊಂದಿಗೆ ಉತ್ತಮ ಫಿನಿಶಿಂಗ್ ಇರುವ ಕ್ಯಾಬಿನ್.

ರಿಯರ್ ಸೀಟ್ ಸಾಕಷ್ಟು ತೊಡೆಗೆ ಬೆಂಬಲ, ಸುಪೀರಿಯರ್ ಶೋಲ್ಡರ್ ರೂಮ್ ಮತ್ತು ಸಾಕಷ್ಟು ಲೆಗ್‌ರೂಮ್ ಅನ್ನು ನೀಡುತ್ತದೆ.

ಇದು ದೊಡ್ಡ ಹಲ್ಲಿನ ಕ್ರೋಮ್ ಗ್ರಿಲ್ ಅನ್ನು ಹೊಂದಿದ್ದು ಅದು ಕಾರನ್ನು ಆಕ್ರಮಣಕಾರಿಯಾಗಿ ಕಾಣುವಂತೆ ಮಾಡುತ್ತದೆ. ಉತ್ತಮ ಗೋಚರತೆಗಾಗಿ ಹೆಡ್‌ಲ್ಯಾಂಪ್‌ಗಳು ಇಲ್ಲಿ ಎಲ್ಇಡಿ ಪ್ರೊಜೆಕ್ಟರ್ ಲ್ಯಾಂಪ್‌ಗಳಾಗಿವೆ. ಬಾನೆಟ್ ಅನ್ನು ತುಂಬಾ ಮಸ್ಕ್ಯೂಲರ್ ಆಗಿ ಮಾಡಲಾಗಿದೆ ಮತ್ತು ಸ್ಟ್ರಾಂಗ್ ಕ್ರೀಸ್‌ಗಳು ಬೋಲ್ಡ್ ಲುಕ್ ನೀಡುತ್ತದೆ.

 

ಚೆಕ್ ಮಾಡಿ: ಮಾರುತಿ ಕಾರ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ

ಮಾರುತಿ ಸುಜುಕಿ ಎಸ್-ಕ್ರಾಸ್ - ವೇರಿಯಂಟ್‌ಗಳು ಮತ್ತು ಎಕ್ಸ್ ಶೋರೂಂ ಬೆಲೆ

ಮಾರುತಿ ಎಸ್-ಕ್ರಾಸ್ ವೇರಿಯಂಟ್‌ಗಳು ಬೆಲೆ (ನವದೆಹಲಿಯಲ್ಲಿ, ನಗರಗಳಾದ್ಯಂತ ಬೆಲೆಯು ಬದಲಾಗಬಹುದು)
ಸಿಗ್ಮಾ ₹9.65 ಲಕ್ಷ
ಡೆಲ್ಟಾ ₹10.98 ಲಕ್ಷ
ಝೀಟಾ ₹11.19 ಲಕ್ಷ
ಡೆಲ್ಟಾ AT ₹12.73 ಲಕ್ಷ
ಝೀಟಾ AT ₹12.93 ಲಕ್ಷ
ಆಲ್ಫಾ ₹13.14 ಲಕ್ಷ
ಆಲ್ಫಾ AT ₹14.51 ಲಕ್ಷ

[1]

ಪದೇ ಪದೇ ಕೇಳಲಾದ ಪ್ರಶ್ನೆಗಳು

ನನ್ನ ಮಾರುತಿ ಎಸ್-ಕ್ರಾಸ್ ಇನ್ಶೂರೆನ್ಸ್‌ನಲ್ಲಿ ಬೆಂಕಿಯಿಂದ ಉಂಟಾದ ಹಾನಿಗಳ ವಿರುದ್ಧ ನಾನು ಕವರೇಜ್ ಪಡೆಯಬಹುದೇ?

ಹೌದು, ನಿಮ್ಮ ಮಾರುತಿ ಕಾರಿಗೆ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಬೆಂಕಿಯಿಂದ ಉಂಟಾದ ಹಾನಿಗಳ ವಿರುದ್ಧ ನೀವು ಕವರೇಜ್ ಪ್ರಯೋಜನಗಳನ್ನು ಪಡೆಯಬಹುದು.

ನಾನು ನನ್ನ ಮಾರುತಿ ಕಾರಿನ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಆನ್‌ಲೈನ್‌ನಲ್ಲಿ ಕ್ಯಾಲ್ಕುಲೇಟ್ ಮಾಡಬಹುದೇ?

ನಿಮ್ಮ ಇನ್ಶೂರರ್ ವೆಬ್‌ಸೈಟ್‌ನಲ್ಲಿ ನೀವು ಅನುಕೂಲಕರವಾದ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ಅನ್ನು ಕಾಣಬಹುದು. ಅಲ್ಲಿ ನೀವು ಮಾರುತಿ ಕಾರ್ ಇನ್ಶೂರೆನ್ಸ್‌ಗಾಗಿ ನೀವು ಭರಿಸಬೇಕಾದ ಪ್ರೀಮಿಯಂ ಮೊತ್ತವನ್ನು ಕ್ಯಾಲ್ಕುಲೇಟ್ ಮಾಡಬಹುದು.