ರೆನಾಲ್ಟ್ ಕಾರ್ ಇನ್ಶೂರೆನ್ಸ್

2 ನಿಮಿಷಗಳಲ್ಲಿ ರೆನಾಲ್ಟ್ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಪರಿಶೀಲಿಸಿ

Third-party premium has changed from 1st June. Renew now

ರೆನಾಲ್ಟ್ ಕಾರ್ ವಿಮಾ ಯೋಜನೆಯನ್ನು ಖರೀದಿಸಿ ಅಥವಾ ನವೀಕರಿಸಿ

1899ರಲ್ಲಿ ಸ್ಥಾಪನೆಯಾದ ರೆನಾಲ್ಟ್ ಗ್ರೂಪ್, ಫ್ರೆಂಚ್ ಬಹುರಾಷ್ಟ್ರೀಯ ಆಟೋಮೊಬೈಲ್ ತಯಾರಿಕಾ ಕಂಪನಿಯಾಗಿದೆ. ಇದು ಮೂಲಭೂತವಾಗಿ ಇತ್ತೀಚಿನ ದಿನಗಳಲ್ಲಿ ಕಾರುಗಳು ಮತ್ತು ವ್ಯಾನ್‌ಗಳನ್ನು ತಯಾರಿಸುತ್ತದೆ. ಆದಾಗ್ಯೂ, ಕಂಪನಿಯು ಟ್ರಕ್‌ಗಳು, ಟ್ಯಾಂಕ್‌ಗಳು, ಟ್ರಾಕ್ಟರ್‌ಗಳು, ವಿಮಾನ ಎಂಜಿನ್‌ಗಳು ಮತ್ತು ಆಟೋರೈಲ್ ವಾಹನಗಳನ್ನು ತಯಾರಿಸುತ್ತಿತ್ತು. 2016ರ ಹೊತ್ತಿಗೆ, ಉತ್ಪಾದನೆಯ ಪ್ರಮಾಣದಿಂದಾಗಿ ಇದು ವಿಶ್ವದ ಒಂಬತ್ತನೇ ಅತಿದೊಡ್ಡ ವಾಹನ ತಯಾರಿಕಾ ಕಂಪನಿ ಆಯಿತು.

ಇದಲ್ಲದೆ, ರೆನಾಲ್ಟ್ ಕಾರುಗಳು, ಫಾರ್ಮುಲಾ 1 ಮತ್ತು ಫಾರ್ಮುಲಾ ಇ ರ್‍ಯಾಲಿಯಂತಹ ಮೋಟಾರ್‌ಸ್ಪೋರ್ಟ್ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿವೆ. ಕಂಪನಿಯು ಡಿಸೆಂಬರ್ 2019ರ ಉದ್ದಕ್ಕೂ ವಿಶ್ವದಾದ್ಯಂತ 2,73,000 ಯುನಿಟ್ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಿ ಜನಪ್ರಿಯವಾಗಿದೆ.

ಈ ಬಹುರಾಷ್ಟ್ರೀಯ ಕಂಪನಿಯ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ರೆನಾಲ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ ಅನ್ನು ಅಕ್ಟೋಬರ್ 2005ರಲ್ಲಿ ಸ್ಥಾಪಿಸಲಾಯಿತು. ಈ ಕಂಪನಿಯು ಪ್ರಸ್ತುತ ಭಾರತೀಯ ಖರೀದಿದಾರರಿಗೆ ನಾಲ್ಕು ರೆನಾಲ್ಟ್ ಕಾರ್ ಮಾಡೆಲ್ ಗಳನ್ನು ಹೊಂದಿದೆ. ಚೆನ್ನೈನಲ್ಲಿ ತಯಾರಿಕಾ ಸೌಲಭ್ಯವನ್ನು ಹೊಂದಿರುವ ಇದು ವರ್ಷಕ್ಕೆ 4,80,000 ಯುನಿಟ್ ರೆನಾಲ್ಟ್ ಕಾರುಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ.

2020ರ ಹೊತ್ತಿಗೆ, ಈ ಫ್ರೆಂಚ್ ವಾಹನ ತಯಾರಕರ ಭಾರತೀಯ ಅಂಗಸಂಸ್ಥೆಯು ಭಾರತದಾದ್ಯಂತ 89,000 ಯುನಿಟ್ ರೆನಾಲ್ಟ್ ಕಾರುಗಳನ್ನು ಮಾರಾಟ ಮಾಡಿದೆ. ಹೀಗಾಗಿ, ಈ ಬ್ರಾಂಡ್‌ನ ಕಾರು ಮಾಡೆಲ್ ಗಳು ಭಾರತೀಯ ವಾಹನ ಚಾಲಕರಲ್ಲಿ ಬೇಡಿಕೆಯಲ್ಲಿವೆ ಎಂಬುದು ಸ್ಪಷ್ಟವಾಗಿದೆ.

ನೀವು ರೆನಾಲ್ಟ್ ಕಾರುಗಳಲ್ಲೊಂದನ್ನು ಹೊಂದಿದ್ದರೆ, ನೀವು ರೆನಾಲ್ಟ್ ಕಾರ್ ಇನ್ಶೂರೆನ್ಸ್ ಅನ್ನು ಪಡೆದುಕೊಳ್ಳುವುದು ಅಥವಾ ರಿನೀವಲ್ ಮಾಡುವುದನ್ನು ಪರಿಗಣಿಸಬೇಕು. ನಿಮ್ಮ ಕಾರ್ ಅಪಘಾತ ಅಥವಾ ಇತರ ದುರದೃಷ್ಟಕರ ಪರಿಸ್ಥಿತಿಯಿಂದ ಡ್ಯಾಮೇಜ್ ಗೊಳಗಾದಾಗ ಕಾರ್ ಇನ್ಶೂರೆನ್ಸ್ ಪಾಲಿಸಿ ಸೂಕ್ತವಾಗಿ ನೆರವಾಗುತ್ತದೆ. ರೆನಾಲ್ಟ್ ಕಾರುಗಳಿಗೆ ವ್ಯಾಲಿಡ್ ಅದ ಇನ್ಶೂರೆನ್ಸ್ ಇಲ್ಲದಿದ್ದರೆ, ನಿಮ್ಮ ಜೇಬಿನಿಂದ ಅತಿಯಾದ ದುರಸ್ತಿ ವೆಚ್ಚವನ್ನು ನೀವು ಭರಿಸಬೇಕಾಗುತ್ತದೆ.

ಹೆಚ್ಚುವರಿಯಾಗಿ, ಮೋಟಾರ್ ವೆಹಿಕಲ್ಸ್ ಆಕ್ಟ್, 1988 ಭಾರಿ ದಂಡವನ್ನು ತಪ್ಪಿಸಲು ಕನಿಷ್ಠ ಥರ್ಡ್-ಪಾರ್ಟಿ ಇನ್ಶೂರೆನ್ಸ್ ಪ್ಲಾನ್ ಅನ್ನು ಹೊಂದುವುದನ್ನು ಕಡ್ಡಾಯಗೊಳಿಸುತ್ತದೆ. ಆದ್ದರಿಂದ, ರೆನಾಲ್ಟ್‌ಗೆ ಕಾರ್ ಇನ್ಶೂರೆನ್ಸ್ ಅನ್ನು ಪಡೆಯುವ ಮೂಲಕ, ನೀವು ಹಣಕಾಸಿನ ಮತ್ತು ಕಾನೂನು ಲಯಬಿಲಿಟಿಗಳನ್ನು ಕಡಿಮೆ ಮಾಡಬಹುದು.

ನಿಮ್ಮ ಅವಶ್ಯಕತೆಗಳನ್ನು ಪರಿಗಣಿಸಿ, ಹಲವಾರು ಇನ್ಶೂರೆನ್ಸ್ ಕಂಪನಿಗಳು ಆನ್‌ಲೈನ್‌ನಲ್ಲಿ ಥರ್ಡ್-ಪಾರ್ಟಿ ಮತ್ತು ಕಾಂಪ್ರೆಹೆನ್ಸಿವ್ ರೆನಾಲ್ಟ್ ಕಾರ್ ಇನ್ಶೂರೆನ್ಸ್ ಅನ್ನು ನೀಡುತ್ತವೆ. ಥರ್ಡ್ ಪಾರ್ಟಿ ಪಾಲಿಸಿಯು ಥರ್ಡ್ ಪಾರ್ಟಿ ಡ್ಯಾಮೇಜ್ ಅನ್ನು ಮಾತ್ರ ಕವರ್ ಮಾಡುತ್ತದೆ, ಆದರೆ; ಕಾಂಪ್ರೆಹೆನ್ಸಿವ್ ಪಾಲಿಸಿಯು ಥರ್ಡ್-ಪಾರ್ಟಿ ಜೊತೆಗೆ ಓನ್ ಕಾರ್ ಡ್ಯಾಮೇಜ್ ಅನ್ನೂ ಕವರ್ ಮಾಡುತ್ತದೆ. ಇದಲ್ಲದೆ, ಇನ್ಶೂರರ್ ಗಳು ನಿಮ್ಮ ಇನ್ಶೂರೆನ್ಸ್ ಪ್ಲಾನ್ ನಲ್ಲಿ ಹಲವಾರು ಇತರ ಸೇವಾ ಪ್ರಯೋಜನಗಳನ್ನು ನೀಡುತ್ತಾರೆ. ಗರಿಷ್ಠ ಪ್ರಯೋಜನಗಳೊಂದಿಗೆ ಬರುವ ಒಂದನ್ನು ಆಯ್ಕೆಮಾಡುವ ಮೊದಲು ನೀವು ಇನ್ಶೂರೆನ್ಸ್ ಪಾಲಿಸಿಗಳನ್ನು ಹೋಲಿಸುವುದನ್ನು ಪರಿಗಣಿಸಬಹುದು.

ಸುಲಭವಾಗಿ ನಿರ್ಧಾರವನ್ನು ತೆಗೆದುಕೊಳ್ಳಲು, ನೀವು ಕೈಗೆಟುಕುವ ರೆನಾಲ್ಟ್ ಕಾರ್ ಇನ್ಶೂರೆನ್ಸ್ ಬೆಲೆ, ಆ್ಯಡ್-ಆನ್ ಪ್ರಯೋಜನಗಳು, ನಿರರ್ಗಳ ಕ್ಲೈಮ್ ಪ್ರೊಸೆಸ್ ಮತ್ತು ಇತರ ಪ್ರಯೋಜನಗಳ ಕಾರಣದಿಂದಾಗಿ ಡಿಜಿಟ್ ಇನ್ಸೂರೆನ್ಸ್ ಅನ್ನು ಪರಿಗಣಿಸಬಹುದು.

ರೆನಾಲ್ಟ್ ಕಾರ್ ಇನ್ಶೂರೆನ್ಸ್‌ ನಲ್ಲಿ ಏನೆಲ್ಲಾ ಕವರ್‌ ಆಗುತ್ತದೆ

ಏನೆಲ್ಲಾ ಕವರ್ ಆಗುವುದಿಲ್ಲ

ನಿಮ್ಮ ಕಾರು ಇನ್ಶೂರೆನ್ಸ್ ಪಾಲಿಸಿಯಲ್ಲಿ ಏನೆಲ್ಲಾ ಕವರ್ ಆಗುವುದಿಲ್ಲ ಎಂಬುದನ್ನು ತಿಳಿದುಕೊಳ್ಳುವುದು ಕೂಡ ಅಷ್ಟೇ ಮುಖ್ಯ, ಹಾಗೆ ಮಾಡುವುದರಿಂದ ಕ್ಲೈಮ್ ಮಾಡುವ ಸಂದರ್ಭದಲ್ಲಿ ನೀವು ಯಾವುದೇ ಅಚ್ಚರಿಗೆ ಒಳಗಾಗುವ ಸಾಧ್ಯತೆ ಎದುರಾಗುವುದಿಲ್ಲ. ಅಂತಹ ಕೆಲವು ಸಂದರ್ಭಗಳು ಇಲ್ಲಿವೆ:

ಥರ್ಡ್-ಪಾರ್ಟಿ ಪಾಲಿಸಿ ಹೋಲ್ಡರ್‌ಗೆ ಓನ್‌-ಡ್ಯಾಮೇಜ್‌ಗಳು

ಥರ್ಡ್-ಪಾರ್ಟಿ ಅಥವಾ ಲಯಬಿಲಿಟಿ ಓನ್ಲಿ ಕಾರ್ ಪಾಲಿಸಿಯ ಸಂದರ್ಭದಲ್ಲಿ, ಓನ್ ವೆಹಿಕಲ್ ಡ್ಯಾಮೇಜ್‌ಗಳನ್ನು ಕವರ್ ಮಾಡಲಾಗುವುದಿಲ್ಲ.

ಮದ್ಯ ಸೇವಿಸಿ ಅಥವಾ ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸುವುದು

ನೀವು ಕುಡಿದು ಅಥವಾ ವ್ಯಾಲಿಡ್ ಆದ ಡ್ರೈವಿಂಗ್ ಲೈಸೆನ್ಸ್ ಹೊಂದಿಲ್ಲದೆ ವಾಹನ ಚಾಲನೆ ಮಾಡುತ್ತಿರುವಾಗ.

ವ್ಯಾಲಿಡ್ ಆದ ಡ್ರೈವಿಂಗ್ ಲೈಸೆನ್ಸ್ ಹೋಲ್ಡರ್ ಇಲ್ಲದೆ ವಾಹನ ಚಾಲನೆ

ನೀವು ಲರ್ನರ್ಸ್(ಕಲಿಯುವವರ) ಲೈಸೆನ್ಸ್ ಅನ್ನು ಹೊಂದಿದ್ದೀರಿ ಮತ್ತು ಮುಂಭಾಗದ ಪ್ರಯಾಣಿಕರ ಸೀಟಿನಲ್ಲಿ ವ್ಯಾಲಿಡ್ ಆದ ಡ್ರೈವಿಂಗ್ ಲೈಸೆನ್ಸ್-ಹೋಲ್ಡರ್ ಇಲ್ಲದೆ ಚಾಲನೆ ಮಾಡುತ್ತಿರುವಾಗ.

ಕಾನ್‌ಸೀಕ್ವೆನ್ಷಿಯಲ್‌ ಡ್ಯಾಮೇಜ್‌ಗಳು

ಅಪಘಾತದ ನೇರ ಪರಿಣಾಮವಲ್ಲದ ಯಾವುದೇ ಡ್ಯಾಮೇಜ್ (ಉದಾ. ಅಪಘಾತದ ನಂತರ, ಡ್ಯಾಮೇಜ್ ಆದ ಕಾರನ್ನು ತಪ್ಪಾಗಿ ಚಲಾಯಿಸಿದರೆ ಮತ್ತು ಎಂಜಿನ್ ಡ್ಯಾಮೇಜ್ ಆದರೆ, ಅದನ್ನು ಕವರ್ ಮಾಡಲಾವುದಿಲ್ಲ)

ನಿರ್ಲಕ್ಷ್ಯದಿಂದಾದ ಅನಾಹುತಗಳು

ನಿರ್ಲಕ್ಷ್ಯದಿಂದಾಗುವ ಯಾವುದೇ ಅನಾಹುತಗಳು (ಉದಾ. ಪ್ರವಾಹದಲ್ಲಿ ಕಾರನ್ನು ಚಾಲನೆ ಮಾಡುವುದರಿಂದ ಉಂಟಾಗುವ ಡ್ಯಾಮೇಜ್, ಅದನ್ನು ತಯಾರಕರ ಮ್ಯಾನ್ಯುವಲ್ ಪ್ರಕಾರ ಶಿಫಾರಸು ಮಾಡಲಾಗಿರುವುದಿಲ್ಲ, ಡ್ಯಾಮೇಜ್ ಕವರ್ ಆಗುವುದಿಲ್ಲ)

ಆ್ಯಡ್-ಆನ್‌ಗಳನ್ನು ಖರೀದಿಸಲಾಗಿಲ್ಲ

ಕೆಲವು ಸನ್ನಿವೇಶಗಳನ್ನು ಆ್ಯಡ್-ಆನ್‌ಗಳ ಮೂಲಕ ಕವರ್ ಮಾಡಬಹುದಾಗಿದೆ. ನೀವು ಆ ಆ್ಯಡ್ -ಆನ್‌ಗಳನ್ನು ಖರೀದಿಸದಿದ್ದರೆ, ಅನುಗುಣವಾದ ಸಂದರ್ಭಗಳ ಡ್ಯಾಮೇಜ್ ಅನ್ನು ಕವರ್ ಮಾಡಲಾಗುವುದಿಲ್ಲ.

ಡಿಜಿಟ್‌ನ ರೆನಾಲ್ಟ್ ಕಾರ್ ಇನ್ಶೂರೆನ್ಸ್ ಅನ್ನು ನೀವು ಯಾಕೆ ಖರೀದಿಸಬೇಕು?

ಎಂಜಿ ಝಡ್ಎಸ್ ಇವಿಗೆ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳು

ಥರ್ಡ್-ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ಬೆಂಕಿ ಕಾರಣದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ಥರ್ಡ್-ಪಾರ್ಟಿ ವೆಹಿಕಲ್‌ಗೆ ಉಂಟಾದ ಡ್ಯಾಮೇಜ್‌ಗಳು

×

ಥರ್ಡ್-ಪಾರ್ಟಿ ಪ್ರಾಪರ್ಟಿಗೆ ಉಂಟಾದ ಡ್ಯಾಮೇಜ್‌ಗಳು

×

ಪರ್ಸನಲ್ ಆ್ಯಕ್ಸಿಡೆಂಟ್ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಗೆ ಗಾಯಗಳು/ಮರಣ

×

ನಿಮ್ಮ ಕಾರಿನ ಕಳ್ಳತನ

×

ಡೋರ್‌ಸ್ಟೆಪ್‌ ಪಿಕಪ್ ಮತ್ತು ಡ್ರಾಪ್

×

ನಿಮ್ಮ ಐಡಿವಿ ಕಸ್ಟಮೈಸ್ ಮಾಡಿ

×

ಕಸ್ಟಮೈಸ್ಡ್ ಆ್ಯಡ್-ಆನ್‌ಗಳ ಜೊತೆ ಎಕ್ಷ್ಟ್ರಾ ಪ್ರೊಟೆಕ್ಷನ್

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಹೆಚ್ಚು ತಿಳಿಯಿರಿ

ಕ್ಲೈಮ್ ಫೈಲ್ ಮಾಡುವುದು ಹೇಗೆ?

ನೀವು ಕಾರ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿದ ಅಥವಾ ರಿನೀವ್ ಮಾಡಿದ ಬಳಿಕ ಒತ್ತಡ ಮುಕ್ತರಾಗಿ ಇರಬಹುದು, ಯಾಕೆಂದರೆ ನಾವು 3-ಹಂತದ ಸಂಪೂರ್ಣ ಡಿಜಿಟಲ್ ಕ್ಲೈಮ್ಸ್ ಪ್ರೊಸೆಸ್ ಹೊಂದಿದ್ದೇವೆ!

ಹಂತ 1

1800-258-5956 ನಂಬರಿಗೆ ಕಾಲ್ ಮಾಡಿದರೆ ಸಾಕು. ಯಾವ ಫಾರ್ಮ್‌ಗಳನ್ನೂ ತುಂಬಬೇಕಾಗಿಲ್ಲ

ಹಂತ 2

ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿಗೆ ಸ್ವ-ತಪಾಸಣೆಯ ಲಿಂಕ್ ಪಡೆಯಿರಿ. ಮಾರ್ಗದರ್ಶನದ ಹಂತ ಹಂತದ ಪ್ರೊಸೆಸ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಿಂದಲೇ ನಿಮ್ಮ ವಾಹನದ ಡ್ಯಾಮೇಜ್‌ಗಳನ್ನು ತಿಳಿಸಿರಿ.

ಹಂತ 3

ನಮ್ಮ ನೆಟ್‌ವರ್ಕ್‌ ಗ್ಯಾರೇಜ್‌ಗಳಲ್ಲಿ ಕ್ಯಾಶ್‌ಲೆಸ್ ಅಥವಾ ರಿಇಂಬರ್ಸ್‌ಮೆಂಟ್ ಈ ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ಮೋಡ್ ಅನ್ನು ಆರಿಸಿಕೊಳ್ಳಿ.

ಎಷ್ಟು ವೇಗವಾಗಿ ಡಿಜಿಟಲ್ ಇನ್ಶೂರೆನ್ಸ್ ಕ್ಲೈಮ್‌ಗಳು ಸೆಟಲ್ ಆಗುತ್ತವೆ ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ಈ ಪ್ರಶ್ನೆಯು ಮೊದಲು ನಿಮ್ಮ ಮನಸ್ಸಿಗೆ ಬರಬೇಕು. ಗುಡ್ ನೀವೀಗ ಅದನ್ನು ಕೇಳುತ್ತಿದ್ದೀರಿ! ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಓದಿ

ರೆನಾಲ್ಟ್ ಬಗ್ಗೆ ಮತ್ತಷ್ಟು ತಿಳಿಯಿರಿ

ಕಾರು ಖರೀದಿಸಲು ಯೋಚಿಸುತ್ತಿದ್ದೀರಾ? ಕಡಿಮೆ ದುರಸ್ತಿ ವೆಚ್ಚದೊಂದಿಗೆ ಬರುವ ವಿಶ್ವಾಸಾರ್ಹ ಕಾರನ್ನು ಹುಡುಕುತ್ತಿರುವಿರಾ? ಹೌದು ಎಂದಾದರೆ, ರೆನಾಲ್ಟ್ ನಿಮಗೆ ಅಂಥಾ ಒಂದು ಬ್ರಾಂಡ್ ಆಗಿದೆ. ಈ ಆಟೋಮೊಬೈಲ್ ತಯಾರಕರು ನಿರಂತರವಾಗಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ನೀಡುತ್ತಿದ್ದಾರೆ. ಈ ಬ್ರಾಂಡ್ ಮೂಲತಃ ಫ್ರಾನ್ಸ್‌ನಿಂದ ಬಂದಿದೆ ಮತ್ತು ರೆನಾಲ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ರೆನಾಲ್ಟ್ ಎಸ್‌ಎ ಫ್ರಾನ್ಸ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ.

ರೆನಾಲ್ಟ್ 2005ರಲ್ಲಿ ಭಾರತಕ್ಕೆ ಬಂದಿತು ಮತ್ತು ಅಂದಿನಿಂದ ಅವರು ಕೆಲವು ಅತ್ಯುತ್ತಮ ಕಾರ್ ಮಾಡೆಲ್ ಗಳನ್ನು ಹೊರತಂದಿದ್ದಾರೆ. ಇವುಗಳಲ್ಲಿ, ರೆನಾಲ್ಟ್ ಡಸ್ಟರ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಪ್ರಬಲ ಅಸ್ತಿತ್ವವನ್ನು ಸಾಧಿಸಿದೆ. ಕಾಂಪ್ಯಾಕ್ಟ್ ಎಸ್‌ಯುವಿಯಾದ ಡಸ್ಟರ್, ಮಿನಿ-ವ್ಯಾನ್ಸ್ ಟ್ರೈಬರ್ ಮತ್ತು ಲಾಡ್ಜಿ, ಸಬ್‌ಕಾಂಪ್ಯಾಕ್ಟ್ ಕಾರ್ ಕೆಡಬ್ಲ್ಯೂಐಡಿ ಮತ್ತು ಎಸ್‌ಯುವಿ ಕ್ಯಾಪ್ಚರ್ ಅನ್ನು ಒಳಗೊಂಡಿರುವ ಎಲ್ಲಾ ಸೆಗ್ಮೆಂಟ್ ಗಳ ಕಾರುಗಳನ್ನು ರೆನಾಲ್ಟ್ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ನೀಡಿದೆ. ರೆನಾಲ್ಟ್ ಕಾರಿನ ಬೆಲೆ ರೂ.2.83 ಲಕ್ಷದಿಂದ ಪ್ರಾರಂಭವಾಗುತ್ತದೆ ಮತ್ತು ಟಾಪ್ ಲೈನಪ್ ನಲ್ಲಿರುವ ಅತ್ಯಂತ ದುಬಾರಿ ಕಾರಿನ ಬೆಲೆ ರೂ.12.99 ಲಕ್ಷಗಳು ಆಗಿದೆ.

2012ರಲ್ಲಿ, ಈ ಬ್ರ್ಯಾಂಡ್ 23 ಪ್ರಶಸ್ತಿಗಳನ್ನು ಪಡೆದುಕೊಂಡಿತ್ತು, ಆ ಮೂಲಕ ಹೆಚ್ಚಿನ ಸಂಖ್ಯೆಯ ಪ್ರಶಸ್ತಿಗಳನ್ನು ಪಡೆದ ಪ್ರಮುಖ ಸ್ಪರ್ಧಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿತ್ತು. 2018ರಲ್ಲಿ, ರೆನಾಲ್ಟ್ ಕ್ಯಾಪ್ಚರ್ ಎನ್‌ಡಿಟಿವಿ ಕಾರ್‌ ಆ್ಯಂಡ್‌ ಬೈಕ್‌ ಅವಾರ್ಡ್ಸ್‌ನಲ್ಲಿ " ಎನ್‌ಡಿಟಿವಿ ವ್ಯೂವರ್ಸ್ ಚಾಯ್ಸ್ ವರ್ಷದ ಕಾರು 2018" ಪ್ರಶಸ್ತಿ ಗೆದ್ದುಕೊಂಡಿತು.

ಕಾರುಗಳು ಎಷ್ಟೇ ಬಲಶಾಲಿಯಾಗಿದ್ದರೂ, ಕೆಲವು ದುರದೃಷ್ಟಕರ ಘಟನೆಗಳು ನಿಮ್ಮ ಕಾರನ್ನು ಡ್ಯಾಮೇಜ್ ಗೊಳಿಸಬಹುದು. ಅಂತಹ ಅಪಘಾತಗಳ ಸಮಯದಲ್ಲಿ ಕಾರ್ ಇನ್ಶೂರೆನ್ಸ್ ಪ್ರಯೋಜನಗಳು ನೆರವಿಗೆ ಬರುತ್ತವೆ. ಅದರಿಂದಾಗಿ, ಕಾರ್ ಇನ್ಶೂರೆನ್ಸ್ ಕಡ್ಡಾಯ ಅವಶ್ಯಕತೆಯಾಗಿದೆ. ಕಾರ್ ಇನ್ಶೂರೆನ್ಸ್ ಇಲ್ಲದೆ ಡ್ರೈವಿಂಗ್ ಮಾಡುವ ಯಾರಾದರೂ ಭಾರೀ ದಂಡವನ್ನು ಭರಿಸಬೇಕಾಗುತ್ತದೆ.

ನೀವು ರೆನಾಲ್ಟ್ ಕಾರನ್ನು ಏಕೆ ಖರೀದಿಸಬೇಕು?

ರೆನಾಲ್ಟ್ ಕಾರುಗಳನ್ನು ಖರೀದಿಸಲು ಕಾರಣಗಳು ಇಲ್ಲಿವೆ:

  • ಕೈಗೆಟುಕುವ ದರ: ರೆನಾಲ್ಟ್ ಕಾರುಗಳು ಕೈಗೆಟುಕುವ ಬೆಲೆಯಲ್ಲಿವೆ. ಅವು ರೂ.2.83 ಲಕ್ಷಗಳ ಆರಂಭಿಕ ಬೆಲೆಯಲ್ಲಿ ದೊರಕುತ್ತವೆ ಮತ್ತು ಉನ್ನತ ಮಾದರಿಗೆ ರೂ.12.99 ಲಕ್ಷಗಳವರೆಗಿನ ಬೆಲೆ ಇದೆ. ಈ ಬಜೆಟ್‌ನಲ್ಲಿ, ನೀವು ಬೋಲ್ಡ್ ಮತ್ತು ಶಕ್ತಿಯುತ ಕಾರುಗಳನ್ನು ಪಡೆಯುತ್ತೀರಿ. ರೆನಾಲ್ಟ್ ಕಾರುಗಳನ್ನು ಅತ್ಯಂತ ಸೊಗಸಾದ ಎಸ್‌ಯುವಿ ಎಂದು ವರ್ಗೀಕರಿಸಲಾಗಿದೆ.

  • ಎಲ್ಲಾ ಸೆಗ್ಮೆಂಟ್ ಗಳಲ್ಲಿ ಮಾಡೆಲ್‌ಗಳು: ಸಬ್‌ಕಾಂಪ್ಯಾಕ್ಟ್ ಕಾರ್ ಆದ ರೆನಾಲ್ಟ್ ಕ್ವಿಡ್ ನಿಂದ ಹಿಡಿದು ರೆನಾಲ್ಟ್ ಕಾಪ್ಟರ್ ಎಸ್‌ಯುವಿವರೆಗೆ, ನಿಮಗೆ ಆಯ್ಕೆ ಮಾಡಲು ಉತ್ತಮ ಆಯ್ಕೆಗಳನ್ನು ಪಡೆಯುತ್ತೀರಿ. ಪ್ರತಿಯೊಂದು ಮಾಡೆಲ್ ಕೂಡ ಬಜೆಟ್‌ನಲ್ಲಿ ಬರುತ್ತದೆ.

  • ಇಂಧನ-ಸಮರ್ಥ ಕಾರುಗಳು: ಕಾರನ್ನು ಖರೀದಿಸುವ ಮೊದಲು, ಪರಿಗಣಿಸಬೇಕಾದ ಒಂದು ಪ್ರಮುಖ ಮಾನದಂಡವೆಂದರೆ ಇಂಧನ ದಕ್ಷತೆ. ರೆನಾಲ್ಟ್ ಕಾರುಗಳು ಡೀಸೆಲ್ ಮತ್ತು ಪೆಟ್ರೋಲ್ ವೇರಿಯಂಟ್ ಗಳಿಗೆ ಉತ್ತಮ ಮೈಲೇಜ್ ಅನ್ನು ಒದಗಿಸುತ್ತವೆ.

  • ಅಪೀಯರೆನ್ಸ್: ರೆನಾಲ್ಟ್ ಕಾರುಗಳು ದೃಢವಾಗಿ, ಬೋಲ್ಡ್ ಆಗಿ ಕಾಣುತ್ತವೆ ಮತ್ತು ಬಾಕ್ಸಿ ಅಪೀಯರೆನ್ಸ್ ಹೊಂದಿದೆ. ಅವರ ಚಿಕ್ಕ ಕಾರು ಕೂಡ ಎಸ್‌ಯುವಿ ಡಿಎನ್‌ಎ ಹೊಂದಿದೆ. ನಿಮ್ಮ ಆದ್ಯತೆಯನ್ನು ತೀರ್ಮಾನಿಸಲು ಇದು ನಿಮಗೆ ಸಹಾಯ ಮಾಡುತ್ತದೆ.

  • ಆರಾಮದಾಯಕ ವೈಶಿಷ್ಟ್ಯಗಳು: ಈ ಬ್ರ್ಯಾಂಡ್‌ನ ಎಲ್ಲಾ ಕಾರುಗಳು ವಿಶಾಲವಾಗಿವೆ. ಹೆಚ್ಚಿನ ಮಾದರಿಗಳು ರೇರ್ ಏಸಿ ವೆಂಟ್ಸ್, 8-ವೇ ಅಡ್ಜಸ್ಟೇಬಲ್ ಡ್ರೈವರ್ ಸೀಟ್, ಸ್ಟೀರಿಂಗ್ ಮೌಂಟೆಡ್ ಆಡಿಯೊ ಕಂಟ್ರೋಲ್, ಅಡ್ಜಸ್ಟೇಬಲ್ ಸ್ಟೀರಿಂಗ್ ವೀಲ್ ಮತ್ತು ಇತ್ಯಾದಿ ಹೊಂದಿವೆ.

  • ವಿಶ್ವಾಸಾರ್ಹ ಮತ್ತು ಕಡಿಮೆ ಮೇಂಟೆನೆನ್ಸ್: ರೆನಾಲ್ಟ್ ಕಾರುಗಳು ತಮ್ಮ ಕಾರ್ಯಕ್ಷಮತೆಯಲ್ಲಿ ಸಾಕಷ್ಟು ವಿಶ್ವಾಸಾರ್ಹವಾಗಿವೆ. ಈ ಬ್ರ್ಯಾಂಡ್‌ನಿಂದ ಕಾರು ಖರೀದಿಸುವುದಕ್ಕೆ ಉತ್ತಮ ಕಾರಣವಿದೆ, ಅದು ಏನೆಂದರೆ ಈ ಕಾರುಗಳು ಕಡಿಮೆ ದುರಸ್ತಿ ವೆಚ್ಚವನ್ನು ಹೊಂದಿವೆ.

ರೆನಾಲ್ಟ್ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಏಕೆ ಮುಖ್ಯ?

ರೆನಾಲ್ಟ್ ಕಂಪನಿ ತಮ್ಮ ಕಾರುಗಳಿಗೆ ಹೆಚ್ಚಿನ ಬೆಲೆಯನ್ನು ಇಡದ ಕಾರಣ ಜನಸಾಮಾನ್ಯರ ಬ್ರಾಂಡ್ ಆಗಿದೆ. ದುರಸ್ತಿ ವೆಚ್ಚವೂ ಕಡಿಮೆಯಾದರೂ, ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು ಪ್ರಯೋಜನಕಾರಿಯಾಗಿದೆ. ನಿಮ್ಮ ರೆನಾಲ್ಟ್ ಕಾರಿಗೆ ನೀವು ಇನ್ಶೂರೆನ್ಸ್ ಪಾಲಿಸಿಯನ್ನು ಏಕೆ ಪಡೆಯಬೇಕು ಎಂಬ ಕಾರಣಗಳು ಇಲ್ಲಿದೆ:

• ಕಾನೂನು ಅವಶ್ಯಕತೆಗಳನ್ನು ಪೂರೈಸುತ್ತದೆ: ಕಾರ್ ಇನ್ಶೂರೆನ್ಸ್ ಅನ್ನು ಭಾರತ ಸರ್ಕಾರವು ಕಡ್ಡಾಯಗೊಳಿಸಿದೆ. ಮೋಟಾರ್ ವೆಹಿಕಲ್ ಆಕ್ಟ್ ಪ್ರಕಾರ, ಯಾವುದೇ ವ್ಯಕ್ತಿ ಇನ್ಶೂರೆನ್ಸ್ ಪಾಲಿಸಿ ಇಲ್ಲದೆ ಕಾರ್ ಡ್ರೈವಿಂಗ್ ಮಾಡಲು ಅವಕಾಶವಿಲ್ಲ. ಹಾಗೆ ಮಾಡಿ ಸಿಕ್ಕಿಬಿದ್ದರೆ ಮೊದಲ ಅಪರಾಧಕ್ಕೆ ರೂ.2000/- ಮತ್ತು ನಂತರದ ಅಪರಾಧಕ್ಕೆ ರೂ.4000/- ದಂಡವನ್ನು ಪಾವತಿಸಬೇಕಾಗುತ್ತದೆ. ಅಷ್ಟೇ ಅಲ್ಲ, 3 ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಬಹುದು ಮತ್ತು ವಾಹನ ಡ್ರೈವ್ ಮಾಡಲು ನೀಡುವ ಲೈಸೆನ್ಸ್ ಅನ್ನು ರದ್ದುಗೊಳಿಸಬಹುದು.

• ಓನ್ ಡ್ಯಾಮೇಜ್ ವೆಚ್ಚಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ: ಅಪಘಾತ, ಬೆಂಕಿ, ಕಳ್ಳತನ ಮತ್ತು ನೈಸರ್ಗಿಕ ವಿಕೋಪದಿಂದ ಉಂಟಾಗುವ ಯಾವುದೇ ಡ್ಯಾಮೇಜ್ ಕೆಲವೊಮ್ಮೆ ನಿಮ್ಮ ಸಾಮರ್ಥ್ಯವನ್ನು ಮೀರಬಹುದು. ಈ ಯಾವುದೇ ಘಟನೆಗಳಿಂದಾಗಿ ನಷ್ಟ ಸಂಭವಿಸಿದಾಗ ರಿಪೇರಿ ವೆಚ್ಚವನ್ನು ಮರುಪಡೆಯಲು ಕಾರ್ ಇನ್ಶೂರೆನ್ಸ್ ಪಾಲಿಸಿ ನಿಮಗೆ ಸಹಾಯ ಮಾಡುತ್ತದೆ.

• ಕಾನೂನು ಲಯಬಿಲಿಟಿಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ: ಥರ್ಡ್ ಪಾರ್ಟಿ ನಷ್ಟಕ್ಕೆ ನೀವು ಜವಾಬ್ದಾರರಾಗಿದ್ದರೆ ಕಾನೂನು ಲಯಬಿಲಿಟಿಗಳನ್ನು ಪಾವತಿಸಲು ಕಾರ್ ಇನ್ಶೂರೆನ್ಸ್ ಪಾಲಿಸಿ ನಿಮಗೆ ಸಹಾಯ ಮಾಡುತ್ತದೆ. ನೀವು ಥರ್ಡ್ ಪಾರ್ಟಿಗೆ ಡಿಕ್ಕಿ ಹೊಡೆದರೆ, ದೈಹಿಕ ಗಾಯ ಅಥವಾ ಪ್ರಾಪರ್ಟಿ ಡ್ಯಾಮೇಜ್ ಗೆ ಕಾರಣವಾಗುತ್ತದೆ, ಆಗ ಅವರ ಕ್ಲೈಮ್ ಅಮೌಂಟ್ ಕೆಲವೊಮ್ಮೆ ದೊಡ್ಡದಾಗಿರಬಹುದು. ಅಂತಹ ವೆಚ್ಚಗಳನ್ನು ಥರ್ಡ್ ಪಾರ್ಟಿ ಲಯಬಿಲಿಟಿ ಪಾಲಿಸಿ ಅಡಿಯಲ್ಲಿ ಕವರ್ ಮಾಡುತ್ತದೆ.

• ಬೇಸಿಕ್ ಕವರೇಜ್ ಅನ್ನು ವಿಸ್ತರಿಸಬಹುದು: ಅಪಘಾತ, ಕಳ್ಳತನ, ಬೆಂಕಿ ಮತ್ತು ನೈಸರ್ಗಿಕ ವಿಕೋಪವನ್ನು ಹೊರತುಪಡಿಸಿ ಬಡಿಯುವ ವಸ್ತುಗಳು, ಟ್ರಾನ್ಸ್ ಮಿಷನ್ ಫೇಲ್ಯೂರ್, ಎಂಜಿನ್‌ಗಳಲ್ಲಿ ವಾಟರ್ ಇಂಗ್ರೆಷನ್ ಇತ್ಯಾದಿಗಳಂತಹ ಇತರ ಅಂಶಗಳಿಂದ ಉಂಟಾಗುವ ಡ್ಯಾಮೇಜ್ ಗಳು ಕಾರ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಕವರ್ ಆಗುವುದಿಲ್ಲ. ಇದಕ್ಕಾಗಿ, ನೀವು ಆ್ಯಡ್-ಆನ್ ಕವರ್‌ಗಳನ್ನು ಖರೀದಿಸಬೇಕಾಗುತ್ತದೆ. ಇವುಗಳು ಹೆಚ್ಚುವರಿ ವೆಚ್ಚದಲ್ಲಿ ದೊರೆಯುತ್ತವೆ. ಝೀರೋ ಡೆಪ್ರಿಸಿಯೇಷನ್, ರಿಟರ್ನ್-ಟು-ಇನ್‌ವಾಯ್ಸ್ ಕವರ್ ಮತ್ತು ಇತ್ಯಾದಿಗಳಂತಹ ಆ್ಯಡ್-ಆನ್ ಕವರ್‌ಗಳು ಬೇಸಿಕ್ ಕವರೇಜ್ ವ್ಯಾಪ್ತಿಯನ್ನು ವಿಸ್ತರಿಸಲು ಸಹಾಯ ಮಾಡುತ್ತವೆ.

ರೆನಾಲ್ಟ್ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಅಂಶಗಳು

ರೆನಾಲ್ಟ್ ಕಾರ್ ಇನ್ಶುರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಕೆಲವು ಅಂಶಗಳು ಹೀಗಿವೆ:

  • ವಯಸ್ಸು: ಕಾರಿನ ಐಡಿವಿ ಸಾಲಕ್ರಮೇಣ ಕಡಿಮೆಯಾಗುತ್ತದೆ ಮತ್ತು ಪ್ರೀಮಿಯಂ ಅನ್ನು ಕ್ಯಾಲ್ಕುಲೇಟ್ ಮಾಡುವಾಗ ಡೆಪ್ರಿಸಿಯೇಷನ್ ವ್ಯಾಲ್ಯೂ ಅನ್ನು ಸಹ ಅಪ್ಲೈ ಮಾಡಲಾಗುತ್ತದೆ. ಹಾಗಾಗಿ ಕಾರ್ ಹಳೆಯದಾದಂತೆ ಪ್ರೀಮಿಯಂ ಕಡಿಮೆಯಾಗಬಹುದು.

  • ಭೌಗೋಳಿಕ ಸ್ಥಳ: ಮಹಾನಗರಗಳು ಹೆಚ್ಚಿನ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಹೊಂದಿವೆ. ಏಕೆಂದರೆ ಹೆಚ್ಚಿನ ಸಂಖ್ಯೆಯ ಕಾರುಗಳಿಂದ ಅಪಘಾತ ಸಂಭವನೀಯತೆ ಹೆಚ್ಚಾಗಿರುತ್ತದೆ.

  •  ಇನ್ಶೂರೆನ್ಸ್ ಪಾಲಿಸಿಯ ವಿಧ: ಕಾಂಪ್ರೆಹೆನ್ಸಿವ್ ಪ್ಯಾಕೇಜ್ ಪಾಲಿಸಿಗೆ, ಓನ್ ಡ್ಯಾಮೇಜ್ ಮತ್ತು ಥರ್ಡ್ ಪಾರ್ಟಿ ಲಯಬಲಿಟಿ ಅಂಶಗಳಿಂದಾಗಿ ಪ್ರೀಮಿಯಂ ಹೆಚ್ಚಾಗಿರುತ್ತದೆ. ಆದರೆ ಸ್ವತಂತ್ರ ಥರ್ಡ್-ಪಾರ್ಟಿ ಪಾಲಿಸಿಯಲ್ಲಿ, ಪ್ರೀಮಿಯಂ ಕಡಿಮೆ ಇರುತ್ತದೆ.

  •  ಕಾರಿನ ಐಡಿವಿ: ನಿಮ್ಮ ಕಾರಿನ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ (ಐಡಿವಿ) ಪ್ರೀಮಿಯಂ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಹೆಚ್ಚಿನ ಐಡಿವಿಗೆ, ಪ್ರೀಮಿಯಂ ಹೆಚ್ಚಾಗಿರುತ್ತದೆ ಮತ್ತು ವೈಸ್ ವರ್ಸಾ.

  • ಸಿಎನ್‌ಜಿ ಕಿಟ್ ಇನ್ಸ್ಟಾಲ್ ಮಾಡಲಾಗಿದೆ: ನಿಮ್ಮ ರೆನಾಲ್ಟ್ ಕಾರಿಗೆ ಹೆಚ್ಚುವರಿಯಾಗಿ ಸಿಎನ್‌ಜಿ ಕಿಟ್‌ ಇನ್ಸ್ಟಾಲ್ ಮಾಡಿದ್ದರೆ, ಕಾರ್ ಇನ್ಶೂರೆನ್ಸ್ ಪ್ರೀಮಿಯಂಗೆ ಹೆಚ್ಚುವರಿ ಅಮೌಂಟ್ ಅನ್ನು ಸೇರಿಸಲಾಗುತ್ತದೆ.

  • ಆ್ಯಡ್-ಆನ್ ಕವರ್‌ಗಳು: ಪ್ರತಿ ಆ್ಯಡ್-ಆನ್ ಕವರ್ ಹೆಚ್ಚುವರಿ ಪ್ರೀಮಿಯಂ ಪಾವತಿಯೊಂದಿಗೆ ಬರುತ್ತದೆ. ನೀವು ಆ್ಯಡ್-ಆನ್ ಕವರ್‌ಗಳನ್ನು ಆಯ್ಕೆ ಮಾಡಿದಂತೆ, ಪ್ರೀಮಿಯಂ ಹೆಚ್ಚಾಗುತ್ತದೆ.

  • ನೋ ಕ್ಲೈಮ್ ಬೋನಸ್ (ಎನ್‌ಸಿಬಿ): ನೀವು ಒಂದು ಸಂಪೂರ್ಣ ವರ್ಷಕ್ಕೆ ಒಂದೇ ಕ್ಲೈಮ್ ಮಾಡದೆ ಹೋದರೆ, ಮುಂದಿನ ರಿನೀವಲ್ ಗಾಗಿ ನೀವು ಎನ್‌ಸಿಬಿ ಅನ್ನು ಪಡೆಯುತ್ತೀರಿ.

  • ಎಂಜಿನ್ ಸಾಮರ್ಥ್ಯ: ಇನ್ಶೂರೆನ್ಸ್ ಪ್ರೀಮಿಯಂನಲ್ಲಿನ ಥರ್ಡ್-ಪಾರ್ಟಿ ಅಂಶವು ಕಾರ್ ಎಂಜಿನ್‌ನ ಕ್ಯುಬಿಕ್ ಕೆಪಾಸಿಟಿ ಮೇಲೆ ಅವಲಂಬಿತವಾಗಿರುತ್ತದೆ. ಹೆಚ್ಚಿನ ಕ್ಯುಬಿಕ್ ಕೆಪಾಸಿಟಿ ಇದ್ದಷ್ಟು, ಹೆಚ್ಚಿನ ಪ್ರೀಮಿಯಂ ಇರುತ್ತದೆ.

  • ವಾಲಂಟರಿ ಡಿಡಕ್ಟಿಬಲ್: ಇನ್ಶೂರೆನ್ಸ್ ಕಂಪನಿಗೆ ಸಂಪೂರ್ಣವಾಗಿ ಕವರ್ ಮಾಡಲು ಅವಕಾಶ ನೀಡುವ ಬದಲು ಕ್ಲೈಮ್ ಅಮೌಂಟ್ ಗೆ ನೀವೂ ಕೊಡುಗೆ ನೀಡಲು ನಿರ್ಧರಿಸಿದರೆ ಆಗ ಅದು ವಾಲಂಟರಿ ಡಿಡಕ್ಟಿಬಲ್. ಹೆಚ್ಚಿನ ವಾಲಂಟರಿ ಡಿಡಕ್ಟಿಬಲ್ ಎಂದರೆ ಕಡಿಮೆ ಪ್ರೀಮಿಯಂ ಎಂದರ್ಥ.

ಇತ್ತೀಚೆಗೆ, ಭಾರತ ಸರ್ಕಾರವು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಅಮೌಂಟ್ ಅನ್ನು ಹೆಚ್ಚಿಸಿದೆ.

ರೆನಾಲ್ಟ್ ಕಾರ್ ಇನ್ಶೂರೆನ್ಸ್‌ಗಾಗಿ ಡಿಜಿಟ್ ಅನ್ನು ಏಕೆ ಆರಿಸಬೇಕು?

  •  ದೋಷರಹಿತ ಸೇವೆಗಳು: ಡಿಜಿಟ್ ಇನ್ಶೂರೆನ್ಸ್ ತನ್ನ ಗ್ರಾಹಕರಿಗೆ ಎಲ್ಲವನ್ನೂ ಅನುಕೂಲಕರವಾಗಿಸಿದೆ. ನೀವು ಪಾಲಿಸಿಯನ್ನು ಅನುಕೂಲಕರವಾಗಿ ಆನ್‌ಲೈನ್‌ನಲ್ಲಿ ಖರೀದಿಸಬಹುದು ಮತ್ತು ಕ್ಲೈಮ್ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಬಹುದು. ಪಾಲಿಸಿಯನ್ನು ಖರೀದಿಸುವುದರಿಂದ ಹಿಡಿದು ಕ್ಲೈಮ್ ಫೈಲ್ ಮಾಡುವವರೆಗಿನ ಅನುಭವವು ದೋಷರಹಿತವಾಗಿರುತ್ತದೆ.

  • ಇನ್ಶೂರೆನ್ಸ್ ಪಾಲಿಸಿಯ ಆಯ್ಕೆ: ಡಿಜಿಟ್ ಎರಡು ವಿಧದ ಇನ್ಶೂರೆನ್ಸ್ ಪಾಲಿಸಿಯನ್ನು ನೀಡುತ್ತದೆ. ಒಂದು ಕಾಂಪ್ರೆಹೆನ್ಸಿವ್ ಪ್ಯಾಕೇಜ್ ಪಾಲಿಸಿ, ಅದು ಓನ್ ಡ್ಯಾಮೇಜ್ ಮತ್ತು ಥರ್ಡ್ ಪಾರ್ಟಿ ಲಯಬಿಲಿಟಿಗಾಗಿ ನಿಮಗೆ ಪಾವತಿಸುತ್ತದೆ. ಇನ್ನೊಂದು ವಿಧವು ಥರ್ಡ್ ಪಾರ್ಟಿ ಲಯಬಿಲಿಟಿಗಾಗಿ ಪಾಲಿಸಿ ಆಗಿದೆ. ಥರ್ಡ್ ಪಾರ್ಟಿ ದೈಹಿಕ ಗಾಯ ಅಥವಾ ಪ್ರಾಪರ್ಟಿ ಡ್ಯಾಮೇಜ್ ನಿಂದ ನೀವು ಅನುಭವಿಸುವ ನಷ್ಟಗಳಿಗೆ ಇದು ಪಾವತಿಸುತ್ತದೆ.

  • ನೀವು ಪಾಲಿಸಿಯನ್ನು ಖರೀದಿಸುವ ಮೊದಲು ಪ್ರೀಮಿಯಂ ಅನ್ನು ಕ್ಯಾಲ್ಕುಲೇಟ್ ಮಾಡಿ: ವೆಬ್‌ಸೈಟ್‌ಗೆ ಹೋಗಿ, ನಿಮ್ಮ ರಿಜಿಸ್ಟ್ರೇಷನ್ ಸಂಖ್ಯೆ ಅಥವಾ ಕಾರಿನ ವಿವರಗಳನ್ನು ಹಾಕಿ ಮತ್ತು ಅಗತ್ಯವಿರುವ ಕೆಲವು ಕ್ಷೇತ್ರಗಳನ್ನು ಭರ್ತಿ ಮಾಡಿ ಮತ್ತು ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಕವರ್ ಅನ್ನು ಆಯ್ಕೆ ಮಾಡಿ, ತಕ್ಷಣ ನಿಮ್ಮ ಇನ್ಶೂರೆನ್ಸ್ ಪ್ರೀಮಿಯಂನ ಬೆಲೆಯನ್ನು ಪರದೆಯ ಮೇಲೆ ತೋರಿಸಲಾಗುತ್ತದೆ.

  • ಕಸ್ಟಮೈಸ್ ಮಾಡಬಹುದಾದ ಐಡಿವಿ: ಡಿಜಿಟ್ ಇನ್ಶೂರೆನ್ಸ್ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ ಅನ್ನು ಕಸ್ಟಮೈಸ್ ಮಾಡಲು ನಿಮಗೆ ಅನುಮತಿಸುತ್ತದೆ. ಅದು ಒಟ್ಟು ನಷ್ಟದ ಕ್ಲೈಮ್‌ನ ಸಂದರ್ಭದಲ್ಲಿ ಕಾರ್ ಇನ್ಶೂರೆನ್ಸ್ ಕಂಪನಿಯು ನಿಮಗೆ ಪಾವತಿಸುವ ಗರಿಷ್ಠ ಅಮೌಂಟ್ ಆಗಿದೆ. ಐಡಿವಿಯನ್ನು ಅವಲಂಬಿಸಿ ಪ್ರೀಮಿಯಂ ಬದಲಾಗುತ್ತದೆ.

  •  ಹೈ ಕ್ಲೈಮ್ ಸೆಟಲ್‌ಮೆಂಟ್ ಅನುಪಾತ: ಡಿಜಿಟ್ ಇನ್ಶೂರೆನ್ಸ್ ಎಲ್ಲಾ ಕ್ಲೈಮ್‌ಗಳನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳುತ್ತದೆ. ಅದರ ಕ್ಲೈಮ್ ಸೆಟಲ್ಮೆಂಟ್ ಅನುಪಾತವು ಸಾಕಷ್ಟು ಜಾಸ್ತಿ ಇದೆ.

  •  ಆ್ಯಡ್-ಆನ್ ಕವರ್‌ಗಳ ಶ್ರೇಣಿಯನ್ನು ನೀಡುತ್ತದೆ: ವಯಸ್ಸು ಮತ್ತು ಅವಶ್ಯಕತೆಗಳನ್ನು ಪರಿಗಣಿಸಿ, ನೀವು ಆ್ಯಡ್-ಆನ್ ಕವರ್‌ಗಳಲ್ಲಿ ಆಯ್ಕೆ ಮಾಡಬಹುದು. ನೀವು ಕಳ್ಳತನದಿಂದಾಗಿ ನಿಮ್ಮ ಕಾರನ್ನು ಕಳೆದುಕೊಂಡರೆ ಅಥವಾ ಅಪಘಾತದಲ್ಲಿ ಸಂಪೂರ್ಣವಾಗಿ ಡ್ಯಾಮೇಜ್ ಗೊಳಗಾದರೆ ವೆಚ್ಚವನ್ನು ಮರುಪಡೆಯಲು ಸಹಾಯ ಮಾಡುವ ರಿಟರ್ನ್-ಟು-ಇನ್ವಾಯ್ಸ್ ಕವರ್ ಅನ್ನು ನೀವು ಖರೀದಿಸಬಹುದು. ಅಪಘಾತದಲ್ಲಿ ಗಾಯಗೊಂಡರೆ ಪ್ರಯಾಣಿಕರನ್ನು ರಕ್ಷಿಸಲು ನೀವು ಪ್ಯಾಸೆಂಜರ್ ಕವರ್ ಅನ್ನು ಸಹ ಪರಿಗಣಿಸಬಹುದು. ಟೈರ್ ಪ್ರೊಟೆಕ್ಟ್ ಕವರ್, ಝೀರೋ ಡೆಪ್ರಿಸಿಯೇಷನ್ ಕವರ್, ಬ್ರೇಕ್‌ಡೌನ್ ಅಸಿಸ್ಟೆನ್ಸ್, ಎಂಜಿನ್ ಮತ್ತು ಗೇರ್‌ಬಾಕ್ಸ್ ಪ್ರೊಟೆಕ್ಷನ್ ಮತ್ತು ಕನ್ಸ್ಯೂಮೇಬಲ್ ಕವರ್ ನೀವು ಆಯ್ಕೆ ಮಾಡಬಹುದಾದ ಇನ್ನೂ ಕೆಲವು ಆ್ಯಡ್-ಆನ್‌ಗಳಾಗಿವೆ.

  • ಸ್ಪರ್ಧಾತ್ಮಕ ಪ್ರೀಮಿಯಂ ದರಗಳು: ಡಿಜಿಟ್ ಇನ್ಶೂರೆನ್ಸ್ ನೀಡುವ ಪ್ರೀಮಿಯಂ ದರಗಳು ಸಾಕಷ್ಟು ಸ್ಪರ್ಧಾತ್ಮಕವಾಗಿವೆ. ಅವರು ಪ್ರೀಮಿಯಂನಲ್ಲಿ ಯಾವುದೇ ಗುಪ್ತ ವೆಚ್ಚವನ್ನು ಸೇರಿಸುವುದಿಲ್ಲ. ನೀವು ಆಯ್ಕೆ ಮಾಡಿದ ಕವರ್‌ಗೆ ತಕ್ಕಂತೆ ನೀವು ಪಾವತಿಸುತ್ತೀರಿ.

 ಸುಲಭ ಮತ್ತು ಅನುಕೂಲಕರ: ಆನ್‌ಲೈನ್ ನಲ್ಲಿ ಖರೀದಿ ಮತ್ತು ಕ್ಲೈಮ್ ಮಾಡುವ ಪ್ರೊಸೆಸ್ ಹೊರತಾಗಿ, ನಿಮ್ಮ ಕಾರನ್ನು ಮನೆ ಬಾಗಿಲಿನಿಂದ ಪಿಕಪ್ ಮಾಡಿ ರಿಪೇರಿ ನಂತರ ಡ್ರಾಪ್ ಮಾಡಲಾಗುತ್ತದೆ.

ಪದೇ ಪದೇ ಕೇಳಲಾದ ಪ್ರಶ್ನೆಗಳು

ನನ್ನ ಅವಧಿ ಮೀರಿದ ರೆನಾಲ್ಟ್ ಕಾರ್ ಇನ್ಶೂರೆನ್ಸ್ ಅನ್ನು ರಿನೀವ್ ಮಾಡುವಾಗ ನಾನು ನೋ ಕ್ಲೈಮ್ ಪ್ರಯೋಜನಗಳನ್ನು ಪಡೆಯುತ್ತೇನೆಯೇ?

ರೆನಾಲ್ಟ್ ಕಾರಿನ ನಿಮ್ಮ ಇನ್ಶೂರೆನ್ಸ್ ಪ್ಲಾನ್ ಅವಧಿ ಮುಗಿದು 90 ದಿನಗಳಿಗಿಂತ ಹೆಚ್ಚು ಸಮಯ ಕಳೆದಿದ್ದರೆ, ನೀವು ಸಂಗ್ರಹವಾದ ನೋ ಕ್ಲೈಮ್ ಬೋನಸ್‌ಗಳನ್ನು ಕಳೆದುಕೊಳ್ಳುತ್ತೀರಿ. ಆದ್ದರಿಂದ, ಈ ಪ್ರಯೋಜನಗಳನ್ನು ಪಡೆಯಲು, ನಿಮ್ಮ ಪಾಲಿಸಿಯನ್ನು ಸಮಯಕ್ಕೆ ಸರಿಯಾಗಿ ಅಥವಾ ಪಾಲಿಸಿ ಅವಧಿ ಮುಗಿದ 90 ದಿನಗಳ ಒಳಗೆ ನೀವು ರಿನೀವ್ ಮಾಡಬೇಕು.

ರೆನಾಲ್ಟ್ ಕಾರುಗಳಿಗಾಗಿ ನನ್ನ ಥರ್ಡ್ ಪಾರ್ಟಿ ಇನ್ಶೂರೆನ್ಸ್ ನಲ್ಲಿ ನಾನು ಆ್ಯಡ್-ಆನ್ ಪ್ರಯೋಜನಗಳನ್ನು ಪಡೆಯಬಹುದೇ?

ಇಲ್ಲ, ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪ್ಲಾನ್ ಗಳ ಪಾಲಿಸಿಹೋಲ್ಡರ್ ಗಳು ಒಟ್ಟಾರೆ ರಕ್ಷಣೆಗಾಗಿ ಹೆಚ್ಚುವರಿ ಶುಲ್ಕಗಳನ್ನು ಪಾವತಿಸಿ ಕೆಲವು ಆ್ಯಡ್-ಆನ್ ಕವರ್‌ಗಳನ್ನು ಸೇರಿಸಿಕೊಳ್ಳಬಹುದು.

ನನ್ನ ರೆನಾಲ್ಟ್ ಕಾರ್ ಇನ್ಶೂರೆನ್ಸ್ ಪೂರೈಕೆದಾರರನ್ನು ನಾನು ಬದಲಾಯಿಸಿದರೆ ನೋ ಕ್ಲೈಮ್ ಬೋನಸ್‌ಗಳನ್ನು ವರ್ಗಾಯಿಸಲಾಗುವುದೇ?

ಹೌದು, ನೀವು ನಿಮ್ಮ ಇನ್ಶೂರರ್ ರನ್ನು ಬದಲಾಯಿಸಿದರೆ, ಸಂಗ್ರಹವಾದ ನೋ ಕ್ಲೈಮ್ ಬೋನಸ್‌ಗಳನ್ನು ನಿಮ್ಮ ಅಸ್ತಿತ್ವದಲ್ಲಿರುವ ಇನ್ಶೂರೆನ್ಸ್ ಪ್ಲಾನ್ ಮತ್ತು ಇನ್ಶೂರೆನ್ಸ್ ಪೂರೈಕೆದಾರರಿಗೆ ವರ್ಗಾಯಿಸಲಾಗುತ್ತದೆ.