1899ರಲ್ಲಿ ಸ್ಥಾಪನೆಯಾದ ರೆನಾಲ್ಟ್ ಗ್ರೂಪ್, ಫ್ರೆಂಚ್ ಬಹುರಾಷ್ಟ್ರೀಯ ಆಟೋಮೊಬೈಲ್ ತಯಾರಿಕಾ ಕಂಪನಿಯಾಗಿದೆ. ಇದು ಮೂಲಭೂತವಾಗಿ ಇತ್ತೀಚಿನ ದಿನಗಳಲ್ಲಿ ಕಾರುಗಳು ಮತ್ತು ವ್ಯಾನ್ಗಳನ್ನು ತಯಾರಿಸುತ್ತದೆ. ಆದಾಗ್ಯೂ, ಕಂಪನಿಯು ಟ್ರಕ್ಗಳು, ಟ್ಯಾಂಕ್ಗಳು, ಟ್ರಾಕ್ಟರ್ಗಳು, ವಿಮಾನ ಎಂಜಿನ್ಗಳು ಮತ್ತು ಆಟೋರೈಲ್ ವಾಹನಗಳನ್ನು ತಯಾರಿಸುತ್ತಿತ್ತು. 2016ರ ಹೊತ್ತಿಗೆ, ಉತ್ಪಾದನೆಯ ಪ್ರಮಾಣದಿಂದಾಗಿ ಇದು ವಿಶ್ವದ ಒಂಬತ್ತನೇ ಅತಿದೊಡ್ಡ ವಾಹನ ತಯಾರಿಕಾ ಕಂಪನಿ ಆಯಿತು.
ಇದಲ್ಲದೆ, ರೆನಾಲ್ಟ್ ಕಾರುಗಳು, ಫಾರ್ಮುಲಾ 1 ಮತ್ತು ಫಾರ್ಮುಲಾ ಇ ರ್ಯಾಲಿಯಂತಹ ಮೋಟಾರ್ಸ್ಪೋರ್ಟ್ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿವೆ. ಕಂಪನಿಯು ಡಿಸೆಂಬರ್ 2019ರ ಉದ್ದಕ್ಕೂ ವಿಶ್ವದಾದ್ಯಂತ 2,73,000 ಯುನಿಟ್ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಿ ಜನಪ್ರಿಯವಾಗಿದೆ.
ಈ ಬಹುರಾಷ್ಟ್ರೀಯ ಕಂಪನಿಯ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ರೆನಾಲ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅನ್ನು ಅಕ್ಟೋಬರ್ 2005ರಲ್ಲಿ ಸ್ಥಾಪಿಸಲಾಯಿತು. ಈ ಕಂಪನಿಯು ಪ್ರಸ್ತುತ ಭಾರತೀಯ ಖರೀದಿದಾರರಿಗೆ ನಾಲ್ಕು ರೆನಾಲ್ಟ್ ಕಾರ್ ಮಾಡೆಲ್ ಗಳನ್ನು ಹೊಂದಿದೆ. ಚೆನ್ನೈನಲ್ಲಿ ತಯಾರಿಕಾ ಸೌಲಭ್ಯವನ್ನು ಹೊಂದಿರುವ ಇದು ವರ್ಷಕ್ಕೆ 4,80,000 ಯುನಿಟ್ ರೆನಾಲ್ಟ್ ಕಾರುಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ.
2020ರ ಹೊತ್ತಿಗೆ, ಈ ಫ್ರೆಂಚ್ ವಾಹನ ತಯಾರಕರ ಭಾರತೀಯ ಅಂಗಸಂಸ್ಥೆಯು ಭಾರತದಾದ್ಯಂತ 89,000 ಯುನಿಟ್ ರೆನಾಲ್ಟ್ ಕಾರುಗಳನ್ನು ಮಾರಾಟ ಮಾಡಿದೆ. ಹೀಗಾಗಿ, ಈ ಬ್ರಾಂಡ್ನ ಕಾರು ಮಾಡೆಲ್ ಗಳು ಭಾರತೀಯ ವಾಹನ ಚಾಲಕರಲ್ಲಿ ಬೇಡಿಕೆಯಲ್ಲಿವೆ ಎಂಬುದು ಸ್ಪಷ್ಟವಾಗಿದೆ.
ನೀವು ರೆನಾಲ್ಟ್ ಕಾರುಗಳಲ್ಲೊಂದನ್ನು ಹೊಂದಿದ್ದರೆ, ನೀವು ರೆನಾಲ್ಟ್ ಕಾರ್ ಇನ್ಶೂರೆನ್ಸ್ ಅನ್ನು ಪಡೆದುಕೊಳ್ಳುವುದು ಅಥವಾ ರಿನೀವಲ್ ಮಾಡುವುದನ್ನು ಪರಿಗಣಿಸಬೇಕು. ನಿಮ್ಮ ಕಾರ್ ಅಪಘಾತ ಅಥವಾ ಇತರ ದುರದೃಷ್ಟಕರ ಪರಿಸ್ಥಿತಿಯಿಂದ ಡ್ಯಾಮೇಜ್ ಗೊಳಗಾದಾಗ ಕಾರ್ ಇನ್ಶೂರೆನ್ಸ್ ಪಾಲಿಸಿ ಸೂಕ್ತವಾಗಿ ನೆರವಾಗುತ್ತದೆ. ರೆನಾಲ್ಟ್ ಕಾರುಗಳಿಗೆ ವ್ಯಾಲಿಡ್ ಅದ ಇನ್ಶೂರೆನ್ಸ್ ಇಲ್ಲದಿದ್ದರೆ, ನಿಮ್ಮ ಜೇಬಿನಿಂದ ಅತಿಯಾದ ದುರಸ್ತಿ ವೆಚ್ಚವನ್ನು ನೀವು ಭರಿಸಬೇಕಾಗುತ್ತದೆ.
ಹೆಚ್ಚುವರಿಯಾಗಿ, ಮೋಟಾರ್ ವೆಹಿಕಲ್ಸ್ ಆಕ್ಟ್, 1988 ಭಾರಿ ದಂಡವನ್ನು ತಪ್ಪಿಸಲು ಕನಿಷ್ಠ ಥರ್ಡ್-ಪಾರ್ಟಿ ಇನ್ಶೂರೆನ್ಸ್ ಪ್ಲಾನ್ ಅನ್ನು ಹೊಂದುವುದನ್ನು ಕಡ್ಡಾಯಗೊಳಿಸುತ್ತದೆ. ಆದ್ದರಿಂದ, ರೆನಾಲ್ಟ್ಗೆ ಕಾರ್ ಇನ್ಶೂರೆನ್ಸ್ ಅನ್ನು ಪಡೆಯುವ ಮೂಲಕ, ನೀವು ಹಣಕಾಸಿನ ಮತ್ತು ಕಾನೂನು ಲಯಬಿಲಿಟಿಗಳನ್ನು ಕಡಿಮೆ ಮಾಡಬಹುದು.
ನಿಮ್ಮ ಅವಶ್ಯಕತೆಗಳನ್ನು ಪರಿಗಣಿಸಿ, ಹಲವಾರು ಇನ್ಶೂರೆನ್ಸ್ ಕಂಪನಿಗಳು ಆನ್ಲೈನ್ನಲ್ಲಿ ಥರ್ಡ್-ಪಾರ್ಟಿ ಮತ್ತು ಕಾಂಪ್ರೆಹೆನ್ಸಿವ್ ರೆನಾಲ್ಟ್ ಕಾರ್ ಇನ್ಶೂರೆನ್ಸ್ ಅನ್ನು ನೀಡುತ್ತವೆ. ಥರ್ಡ್ ಪಾರ್ಟಿ ಪಾಲಿಸಿಯು ಥರ್ಡ್ ಪಾರ್ಟಿ ಡ್ಯಾಮೇಜ್ ಅನ್ನು ಮಾತ್ರ ಕವರ್ ಮಾಡುತ್ತದೆ, ಆದರೆ; ಕಾಂಪ್ರೆಹೆನ್ಸಿವ್ ಪಾಲಿಸಿಯು ಥರ್ಡ್-ಪಾರ್ಟಿ ಜೊತೆಗೆ ಓನ್ ಕಾರ್ ಡ್ಯಾಮೇಜ್ ಅನ್ನೂ ಕವರ್ ಮಾಡುತ್ತದೆ. ಇದಲ್ಲದೆ, ಇನ್ಶೂರರ್ ಗಳು ನಿಮ್ಮ ಇನ್ಶೂರೆನ್ಸ್ ಪ್ಲಾನ್ ನಲ್ಲಿ ಹಲವಾರು ಇತರ ಸೇವಾ ಪ್ರಯೋಜನಗಳನ್ನು ನೀಡುತ್ತಾರೆ. ಗರಿಷ್ಠ ಪ್ರಯೋಜನಗಳೊಂದಿಗೆ ಬರುವ ಒಂದನ್ನು ಆಯ್ಕೆಮಾಡುವ ಮೊದಲು ನೀವು ಇನ್ಶೂರೆನ್ಸ್ ಪಾಲಿಸಿಗಳನ್ನು ಹೋಲಿಸುವುದನ್ನು ಪರಿಗಣಿಸಬಹುದು.
ಸುಲಭವಾಗಿ ನಿರ್ಧಾರವನ್ನು ತೆಗೆದುಕೊಳ್ಳಲು, ನೀವು ಕೈಗೆಟುಕುವ ರೆನಾಲ್ಟ್ ಕಾರ್ ಇನ್ಶೂರೆನ್ಸ್ ಬೆಲೆ, ಆ್ಯಡ್-ಆನ್ ಪ್ರಯೋಜನಗಳು, ನಿರರ್ಗಳ ಕ್ಲೈಮ್ ಪ್ರೊಸೆಸ್ ಮತ್ತು ಇತರ ಪ್ರಯೋಜನಗಳ ಕಾರಣದಿಂದಾಗಿ ಡಿಜಿಟ್ ಇನ್ಸೂರೆನ್ಸ್ ಅನ್ನು ಪರಿಗಣಿಸಬಹುದು.