ರೆನಾಲ್ಟ್ ಡಸ್ಟರ್ ಇನ್ಶೂರೆನ್ಸ್

Third-party premium has changed from 1st June. Renew now

ರೆನಾಲ್ಟ್ ಡಸ್ಟರ್ ಕಾರ್ ಇನ್ಶೂರೆನ್ಸ್ ಪಾಲಿಸಿ ಅನ್ನು ಖರೀದಿಸಿ ಅಥವಾ ರಿನೀವ್ ಮಾಡಿ

ಫ್ರೆಂಚ್ ತಯಾರಕ ಕಂಪನಿ ರೆನಾಲ್ಟ್ ಮತ್ತು ಅದರ ರೊಮೇನಿಯನ್ ಅಂಗಸಂಸ್ಥೆ ಡೇಸಿಯಾ 2010ರಲ್ಲಿ ಕಾಂಪ್ಯಾಕ್ಟ್ ಕ್ರಾಸ್ಓವರ್ ಎಸ್‌ಯುವಿ, ರೆನಾಲ್ಟ್ ಡಸ್ಟರ್ ಅನ್ನು ಪರಿಚಯಿಸಿತು ಮತ್ತು ಮಾರ್ಕೆಟಿಂಗ್ ಮಾಡಿತು. ಈ ಮಾಡೆಲ್ ಹಲವಾರು ನವೀಕರಣಗಳಿಗೆ ಒಳಪಟ್ಟ ನಂತರ 2012ರಲ್ಲಿ ಭಾರತೀಯ ಪ್ರಯಾಣಿಕರ ಮಾರುಕಟ್ಟೆಯನ್ನು ಪ್ರವೇಶಿಸಿತು.

ಪರಿಣಾಮವಾಗಿ, ಅಪ್ ಗ್ರೇಡೆಡ್ ವರ್ಷನ್ ಗಳು ಎಮರ್ಜೆನ್ಸಿ ಬ್ರೇಕ್ ಅಸಿಸ್ಟ್, ಸ್ಟೆಬಿಲಿಟಿ ಕಂಟ್ರೋಲ್ ಮಾಡ್ಯೂಲ್, ಆಂಟಿ-ಲಾಕ್ ಬ್ರೇಕ್ ಸಿಸ್ಟಮ್ ಮತ್ತು ಇತರ ಡ್ರೈವಿಂಗ್ ಸುರಕ್ಷತಾ ಆಯ್ಕೆಗಳಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತವೆ.

ಅದೇನೇ ಇದ್ದರೂ, ಇತರ ವಾಹನಗಳಂತೆ, ಈ ಕಾರ್ ಕೂಡ ಅಪಾಯಗಳು ಮತ್ತು ಡ್ಯಾಮೇಜ್ ಗಳಿಗೆ ಒಳಗಾಗುತ್ತದೆ. ಇದನ್ನು ಪರಿಗಣಿಸಿ, ನೀವು ಹೆಸರಾಂತ ಇನ್ಶೂರರ್ ರಿಂದ ರೆನಾಲ್ಟ್ ಡಸ್ಟರ್ ಇನ್ಶೂರೆನ್ಸ್ ಅನ್ನು ಪಡೆಯಬೇಕು. ಈ ನಿಟ್ಟಿನಲ್ಲಿ, ನೀವು ಡಿಜಿಟ್ ಅನ್ನು ಅದು ನೀಡುವ ಪ್ರಯೋಜನಗಳಿಂದಾಗಿ ಪರಿಗಣಿಸಬಹುದು.

ರೆನಾಲ್ಟ್ ಡಸ್ಟರ್ ಕಾರ್ ಇನ್ಶೂರೆನ್ಸ್‌ ನಲ್ಲಿ ಏನೆಲ್ಲಾ ಕವರ್‌ ಆಗುತ್ತದೆ

ಡಿಜಿಟ್‌ನ ರೆನಾಲ್ಟ್ ಡಸ್ಟರ್ ಕಾರ್ ಇನ್ಶೂರೆನ್ಸ್ ಅನ್ನು ನೀವು ಯಾಕೆ ಖರೀದಿಸಬೇಕು?

ರೆನಾಲ್ಟ್‌ ಡಸ್ಟರ್‌ಗೆ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳು

ಥರ್ಡ್ ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದಿಂದಾಗಿ ಸ್ವಂತ ಕಾರಿಗೆ ಆಗುವ ಹಾನಿ/ನಷ್ಟ

ಅಪಘಾತ ಅಥವಾ ಘರ್ಷಣೆಯ ಸಂದರ್ಭದಲ್ಲಿ ನಿಮ್ಮ ಸ್ವಂತ ಕಾರಿಗೆ ಹಾನಿಗಾಗಿ ಕವರ್ ನೀಡುತ್ತದೆ

×

ಬೆಂಕಿಯ ಸಂದರ್ಭದಲ್ಲಿ ಸ್ವಂತ ಕಾರಿಗೆ ಆಗುವ ಹಾನಿ/ನಷ್ಟಗಳು

ಬೆಂಕಿಯಿಂದಾಗಿ ನಿಮ್ಮ ಸ್ವಂತ ಕಾರಿಗೆ ಉಂಟಾದ ಹಾನಿ ಮತ್ತು ನಷ್ಟಗಳಿಗೆ ಕವರ್ ನೀಡುತ್ತದೆ

×

ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರಿಗೆ ಆಗುವ ಹಾನಿ/ನಷ್ಟ

ಪ್ರವಾಹಗಳು, ಭೂಕಂಪಗಳು, ಚಂಡಮಾರುತಗಳು ಇತ್ಯಾದಿಗಳಂತಹ ನೈಸರ್ಗಿಕ ವಿಕೋಪದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಹಾನಿ ಮತ್ತು ನಷ್ಟಗಳಿಗೆ ಕವರ್ ನೀಡುತ್ತದೆ

×

ಥರ್ಡ್ ಪಾರ್ಟಿ ವಾಹನಕ್ಕೆ ಆಗುವ ಹಾನಿ

ಯಾವುದೇ ಥರ್ಡ್ ಪಾರ್ಟಿ ವಾಹನಕ್ಕೆ ನಿಮ್ಮ ಕಾರ್‌ನಿಂದ ಉಂಟಾದ ಹಾನಿಗಳಿಗೆ 7.5 ಲಕ್ಷದವರೆಗೆ ಕವರ್‌ ನೀಡುತ್ತದೆ.

×

ಥರ್ಡ್ ಪಾರ್ಟಿ ಆಸ್ತಿಗೆ ಆಗುವ ಹಾನಿ

ಯಾವುದೇ ಥರ್ಡ್ ಪಾರ್ಟಿ ಆಸ್ತಿಗೆ ನಿಮ್ಮ ಕಾರ್‌ನಿಂದ ಉಂಟಾದ ಹಾನಿಗಳು ಮತ್ತು ನಷ್ಟಗಳಿಗೆ 7.5 ಲಕ್ಷದವರೆಗೆ ಕವರ್‌ ನೀಡುತ್ತದೆ.

×

ಪರ್ಸನಲ್ ಆಕ್ಸಿಡೆಂಟ್ ಕವರ್

ಮಾಲೀಕ-ಚಾಲಕನ ದೈಹಿಕ ಗಾಯಗಳು ಅಥವಾ ಸಾವಿಗೆ ರಕ್ಷಣೆ ನೀಡುತ್ತದೆ. (ಕಾನೂನಿನ ಮೂಲಕ ಕಡ್ಡಾಯವಾಗಿ, ಒಬ್ಬರು ಈಗಾಗಲೇ ಒಂದನ್ನು ಹೊಂದಿಲ್ಲದಿದ್ದರೆ ಅದನ್ನು ಆಯ್ಕೆ ಮಾಡಬಹುದು)

×

ಥರ್ಡ್-ಪಾರ್ಟಿ ವ್ಯಕ್ತಿಯ ಗಾಯಗಳು/ಸಾವು

ಅನಿಯಮಿತ ಲಯಬಿಲಿಟಿಯವರೆಗೆ ಯಾವುದೇ ಥರ್ಡ್ ಪಾರ್ಟಿ ವ್ಯಕ್ತಿಗೆ ನಿಮ್ಮ ಕಾರಿನಿಂದ ಉಂಟಾಗುವ ದೈಹಿಕ ಗಾಯಗಳು ಅಥವಾ ಮರಣಕ್ಕೆ ಕವರ್‌ ನೀಡುತ್ತದೆ .

×

ನಿಮ್ಮ ಕಾರಿನ ಕಳ್ಳತನ

ನಿಮ್ಮ ಕಾರ್ ದುರದೃಷ್ಟವಶಾತ್ ಕಳ್ಳತನವಾದರೆ ನಷ್ಟವನ್ನು ಕವರ್ ಮಾಡುತ್ತದೆ.

×

ನಿಮ್ಮ ಐಡಿವಿ(IDV) ಅನ್ನು ಕಸ್ಟಮೈಸ್ ಮಾಡಿ

ನಿಮ್ಮ ಆಯ್ಕೆಯ ಪ್ರಕಾರ ನಿಮ್ಮ ಕಾರಿನ ಐಡಿವಿ ಅನ್ನು ಕಸ್ಟಮೈಸ್ ಮಾಡಿ ಮತ್ತು ಅದರ ಪ್ರಕಾರ ನಿಮ್ಮ ಕಾರಿನ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಸರಿಹೊಂದಿಸಿ.

×

ಕಸ್ಟಮೈಸ್ ಮಾಡಿದ ಆಡ್-ಆನ್‌ಗಳೊಂದಿಗೆ ಹೆಚ್ಚುವರಿ ಕವರ್

ಟೈರ್ ರಕ್ಷಣೆಯ ಕವರ್, ಎಂಜಿನ್ ಮತ್ತು ಗೇರ್‌ಬಾಕ್ಸ್ ಕವರ್ , ಝೀರೋ ಡಿಪ್ರಿಸಿಯೇಷನ್ ಆಡ್-ಆನ್, ಇತ್ಯಾದಿಗಳಂತಹ ಕಸ್ಟಮೈಸ್ ಮಾಡಿದ ಆಡ್-ಆನ್‌ಗಳೊಂದಿಗೆ ನಿಮ್ಮ ಕಾರಿಗೆ ಹೆಚ್ಚುವರಿ ರಕ್ಷಣೆಯನ್ನು ನೀಡಿ.

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ  ಇನ್ಶೂರೆನ್ಸ್ ನಡುವಿನ ವ್ಯತ್ಯಾಸ ಬಗ್ಗೆ ಇನ್ನಷ್ಟು ತಿಳಿಯಿರಿ.

ಕಾರ್ ಇನ್ಶೂರೆನ್ಸ್ ಕ್ಲೈಮ್ ಅನ್ನು ಸಲ್ಲಿಸುವುದು ಹೇಗೆ?

ನಮ್ಮ ಕಾರ್ ಇನ್ಶೂರೆನ್ಸ್ ಯೋಜನೆಯನ್ನು ನೀವು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿಸಿದ ನಂತರ, ನೀವು ಚಿಂತಾ-ಮುಕ್ತರಾಗಿ ಬದುಕುತ್ತೀರಿ! ಏಕೆಂದರೆ, ನಾವು ಕೇವಲ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ.

ಹಂತ 1

1800-258-5956 ಸಂಖ್ಯೆಗೆ ಕರೆ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ

ಹಂತ 2

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವಯಂ ತಪಾಸಣೆಗಾಗಿ (self inspection) ಲಿಂಕ್ ಪಡೆಯಿರಿ. ಹಂತ ಹಂತವಾಗಿ ನೀಡುವ ಮಾರ್ಗದರ್ಶನದಂತೆ, ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವಾಹನದ ಹಾನಿಯನ್ನು ಶೂಟ್ ಮಾಡಿ.

ಹಂತ 3

ನಮ್ಮ ಗ್ಯಾರೇಜ್‌ಗಳ ನೆಟ್‌ವರ್ಕ್ ಮೂಲಕ ನೀವು ಮರುಪಾವತಿ ಅಥವಾ ನಗದುರಹಿತದ ಆಯ್ಕೆಗಾಗಿ, ರಿಪೇರಿ ವಿಧಾನವನ್ನು ಆರಿಸಿ.

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ? ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು ನೀವೀಗ ಅದನ್ನೇ ಮಾಡುತ್ತಿರುವಿರಿ! ಡಿಜಿಟ್‌ನ ಹಕ್ಕುಗಳ ವರದಿ ಕಾರ್ಡ್ ಅನ್ನು ಓದಿ

ರೆನಾಲ್ಟ್ ಡಸ್ಟರ್ ಇನ್ಶೂರೆನ್ಸ್ ಗಾಗಿ ಡಿಜಿಟ್ ಅನ್ನು ಏಕೆ ಆರಿಸಬೇಕು?

ಡಸ್ಟರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವಾಗ, ಗರಿಷ್ಠ ಪ್ರಯೋಜನಗಳಿಗಾಗಿ ಕೆಲವು ಅಂಶಗಳನ್ನು ಪರಿಗಣಿಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ, ವಿವಿಧ ಇನ್ಶೂರರ್ ಗಳ ಪ್ಲಾನ್ ಗಳನ್ನು ಹೋಲಿಸಬಹುದು ಮತ್ತು ಸ್ಪರ್ಧಾತ್ಮಕ ಇನ್ಶೂರೆನ್ಸ್ ಬೆಲೆಗಳೊಂದಿಗೆ ಹಲವಾರು ಸೇವಾ ಪ್ರಯೋಜನಗಳನ್ನು ನೀಡುವ ಒಂದನ್ನು ಆಯ್ಕೆ ಮಾಡಬಹುದು.

ತಿಳುವಳಿಕೆಯುಳ್ಳ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ನೀವು ಪರಿಗಣಿಸಬಹುದಾದ ಡಿಜಿಟ್ ನ ಕೆಲವು ಕೊಡುಗೆಗಳ ಮಾಹಿತಿ ಇಲ್ಲಿವೆ:

1. ವಿವಿಧ ಇನ್ಶೂರೆನ್ಸ್ ಆಯ್ಕೆಗಳು

ಡಿಜಿಟ್ ತನ್ನ ಬಳಕೆದಾರರಿಗೆ ಈ ಕೆಳಗಿನ ಇನ್ಶೂರೆನ್ಸ್ ಆಯ್ಕೆಗಳಲ್ಲಿ ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ:

· ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್

ಅಪಘಾತ ಅಥವಾ ಘರ್ಷಣೆಯ ಸಂದರ್ಭದಲ್ಲಿ ನಿಮ್ಮ ರೆನಾಲ್ಟ್ ಕಾರ್ ಥರ್ಡ್ ಪಾರ್ಟಿ ವ್ಯಕ್ತಿ, ವೆಹಿಕಲ್ ಅಥವಾ ಪ್ರಾಪರ್ಟಿಗೆ ಡ್ಯಾಮೇಜ್ ಉಂಟು ಮಾಡಬಹುದು. ಅಂತಹ ಸನ್ನಿವೇಶದಲ್ಲಿ ಭಾರೀ ಆರ್ಥಿಕ ನಷ್ಟವನ್ನು ಉಂಟುಮಾಡುವ ಲಯಬಿಲಿಟಿಗಳನ್ನು ನೀವು ಎದುರಿಸಬೇಕಾಗುತ್ತದೆ. ಆದಾಗ್ಯೂ, ನೀವು ಡಿಜಿಟ್‌ನಿಂದ ರೆನಾಲ್ಟ್ ಡಸ್ಟರ್‌ಗಾಗಿ ಥರ್ಡ್-ಪಾರ್ಟಿ ಇನ್ಶೂರೆನ್ಸ್ ಅನ್ನು ಪಡೆದರೆ, ಅದು ಥರ್ಡ್ ಪಾರ್ಟಿ ಅಪಘಾತಗಳಿಂದ ಉಂಟಾಗುವ ಶುಲ್ಕಗಳನ್ನು ಕವರ್ ಮಾಡಲು ನಿಮಗೆ ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಮೋಟಾರ್ ವೆಹಿಕಲ್ಸ್ ಆಕ್ಟ್, 1988ರ ಪ್ರಕಾರ, ಭಾರೀ ಪೆನಲ್ಟಿಗಳನ್ನು ತಪ್ಪಿಸಲು ಈ ಬೇಸಿಕ್ ಇನ್ಶೂರೆನ್ಸ್ ಪ್ಲಾನ್ ಅನ್ನು ಹೊಂದಿರುವುದು ಕಡ್ಡಾಯವಾಗಿದೆ.

· ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್

ಥರ್ಡ್-ಪಾರ್ಟಿ ಡ್ಯಾಮೇಜ್ ಗಳಲ್ಲದೆ, ಕಳ್ಳತನ, ಬೆಂಕಿ, ಭೂಕಂಪ ಮತ್ತು ಇತರ ವಿಪತ್ತುಗಳ ಸಮಯದಲ್ಲಿ ನಿಮ್ಮ ರೆನಾಲ್ಟ್ ಡಸ್ಟರ್ ಕಾರಿಗೆ ಓನ್ ಡ್ಯಾಮೇಜ್ ಗಳು ಉಂಟಾಗಬಹುದು. ಅಂತಹ ಸಂದರ್ಭದಲ್ಲಿ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪ್ಲಾನ್ ನಿಂದ ಕವರೇಜ್ ಪ್ರಯೋಜನಗಳನ್ನು ಪಡೆಯಬಹುದು. ಡಿಜಿಟ್‌ನಿಂದ ರೆನಾಲ್ಟ್ ಡಸ್ಟರ್‌ನ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಅಡಿಯಲ್ಲಿ, ನಿಮ್ಮ ಇನ್ಶೂರರ್ ನಿಮ್ಮ ಪರವಾಗಿ ದುರಸ್ತಿ ವೆಚ್ಚವನ್ನು ಪಾವತಿಸುತ್ತಾರೆ ಮತ್ತು ಭವಿಷ್ಯದ ಅವಶ್ಯಕತೆಗಳಿಗಾಗಿ ಹಣವನ್ನು ಉಳಿಸಲು ನಿಮಗೆ ಸಹಾಯ ಮಾಡುತ್ತಾರೆ. ಇದರ ಹೊರತಾಗಿ, ಈ ಇನ್ಶೂರೆನ್ಸ್ ಪಾಲಿಸಿಯು ಥರ್ಡ್ ಪಾರ್ಟಿ ಅಪಘಾತಗಳಿಂದ ಉಂಟಾಗುವ ಡ್ಯಾಮೇಜ್ ಗಳ ವಿರುದ್ಧವೂ ಕವರೇಜ್ ಒದಗಿಸುತ್ತದೆ.

2. ಹಲವಾರು ಆ್ಯಡ್-ಆನ್ ಪಾಲಿಸಿಗಳು

ಕಾಂಪ್ರೆಹೆನ್ಸಿವ್ ರೆನಾಲ್ಟ್ ಡಸ್ಟರ್ ಇನ್ಶೂರೆನ್ಸ್ ಪಾಲಿಸಿಯು ಥರ್ಡ್ ಪಾರ್ಟಿ ಮತ್ತು ಓನ್ ಡ್ಯಾಮೇಜ್ ಎರಡನ್ನೂ ಒಳಗೊಳ್ಳುತ್ತದೆ, ಅದರಲ್ಲಿ ಕೆಲವು ಎಕ್ಸ್‌ಕ್ಲೂಷನ್‌ಗಳು ಇರಬಹುದು. ಆ ನಿಟ್ಟಿನಲ್ಲಿ, ನೀವು ಹೆಚ್ಚುವರಿ ಶುಲ್ಕಗಳನ್ನು ಪಾವತಿಸಿ ಡಿಜಿಟ್‌ನಿಂದ ಆ್ಯಡ್-ಆನ್ ಪ್ರಯೋಜನಗಳನ್ನು ಪಡೆಯಬಹುದು. ನಿಮ್ಮ ರೆನಾಲ್ಟ್ ಡಸ್ಟರ್ ಇನ್ಶೂರೆನ್ಸ್ ಬೆಲೆಯನ್ನು ಹೆಚ್ಚಿಸುವ ಮೂಲಕ ಕೆಳಗಿನ ಯಾವುದೇ ಕವರ್‌ಗಳನ್ನು ಸೇರಿಸುವ ಆಯ್ಕೆಯನ್ನು ನೀವು ಹೊಂದಿದ್ದೀರಿ:

• ಕನ್ಸ್ಯೂಮೇಬಲ್ ಕವರ್

• ಝೀರೋ ಡೆಪ್ರಿಸಿಯೇಷನ್ ಕವರ್

• ರೋಡ್ ಸೈಡ್ ಅಸಿಸ್ಟೆನ್ಸ್

• ಎಂಜಿನ್ ಆಂಡ್ ಗೇರ್‌ಬಾಕ್ಸ್ ಪ್ರೊಟೆಕ್ಷನ್ ಕವರ್

• ರಿಟರ್ನ್ ಟು ಇನ್‌ವಾಯ್ಸ್ ಕವರ್‌

3. ಕ್ಯಾಶ್‌ಲೆಸ್‌ ರಿಪೇರಿ ಮೋಡ್

ಡಿಜಿಟ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡುವ ಬಳಕೆದಾರರು ತಮ್ಮ ರೆನಾಲ್ಟ್ ಕಾರುಗಳನ್ನು ಅಧಿಕೃತ ನೆಟ್‌ವರ್ಕ್ ಗ್ಯಾರೇಜ್‌ನಿಂದ ರಿಪೇರಿ ಮಾಡುವಾಗ ಕ್ಯಾಶ್‌ಲೆಸ್‌ ರಿಪೇರಿ ಮೋಡ್ ಅನ್ನು ಆಯ್ಕೆ ಮಾಡಬಹುದು. ಈ ಸೌಲಭ್ಯದ ಅಡಿಯಲ್ಲಿ, ಇನ್ಶೂರರ್ ನೇರವಾಗಿ ಕೇಂದ್ರಕ್ಕೆ ಪಾವತಿಯನ್ನು ಮಾಡುವುದರಿಂದ ಯಾವುದೇ ದುರಸ್ತಿ ವೆಚ್ಚವನ್ನು ಭರಿಸಬೇಕಾಗಿಲ್ಲ.

4. ಸುಲಭವಾದ ಕ್ಲೈಮ್ ಫೈಲಿಂಗ್ ಪ್ರೊಸೆಸ್

ಡಿಜಿಟ್ ಅದರ ಸ್ಮಾರ್ಟ್‌ಫೋನ್-ಎನೇಬಲ್ಡ್ ಸ್ವಯಂ-ತಪಾಸಣಾ ಪ್ರೊಸೆಸ್ ಮೂಲಕ ನಿಮ್ಮ ರೆನಾಲ್ಟ್ ಡಸ್ಟರ್ ಇನ್ಶೂರೆನ್ಸ್ ಪಾಲಿಸಿಯ ವಿರುದ್ಧ ಕ್ಲೈಮ್‌ಗಳನ್ನು ಮಾಡಲು ನಿಮಗೆ ಅನುಮತಿಸುತ್ತದೆ. ಈ ವಿಧಾನವು ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಕ್ಲೈಮ್‌ಗಳನ್ನು ಫೈಲ್ ಮಾಡಲು ಮತ್ತು ರೆನಾಲ್ಟ್ ಡಸ್ಟರ್ ಡ್ಯಾಮೇಜ್ ಗಳನ್ನು ಸ್ವಯಂ-ತಪಾಸಣೆ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ. ಹೀಗಾಗಿ, ಈ ತಂತ್ರಜ್ಞಾನ-ಚಾಲಿತ ಪ್ರೊಸೆಸ್ ನಿಂದಾಗಿ ನೀವು ಸಂಪೂರ್ಣ ಕ್ಲೈಮ್ ಪ್ರೊಸೆಸ್ ಅನ್ನು ಕಡಿಮೆ ಸಮಯದಲ್ಲಿ ಪೂರ್ಣಗೊಳಿಸಬಹುದು.

5. ಸಾಕಷ್ಟು ನೆಟ್‌ವರ್ಕ್ ಗ್ಯಾರೇಜ್‌ಗಳು

ಡಿಜಿಟ್‌ನ ರೆನಾಲ್ಟ್ ಡಸ್ಟರ್ ಇನ್ಶೂರೆನ್ಸ್ ರಿನೀವಲ್ ಗೆ ಹೋಗುವ ಮೂಲಕ, ಡ್ಯಾಮೇಜ್ ದುರಸ್ತಿಯ ಸಂದರ್ಭದಲ್ಲಿ ನೀವು ಭಾರತದಾದ್ಯಂತ ಹಲವಾರು ಡಿಜಿಟ್ ನೆಟ್‌ವರ್ಕ್ ಕಾರ್ ಗ್ಯಾರೇಜ್‌ಗಳಲ್ಲಿ ರಿಪೇರಿ ಸೌಲಭ್ಯ ಪಡೆಯಬಹುದು. ಈ ಗ್ಯಾರೇಜುಗಳ ಸಮೃದ್ಧಿಯಿಂದಾಗಿ, ತುರ್ತು ಪರಿಸ್ಥಿತಿಯಲ್ಲಿ ದುರಸ್ತಿ ಕೇಂದ್ರವನ್ನು ತಕ್ಷಣವೇ ಕಂಡುಹಿಡಿಯುವುದು ಸಾಧ್ಯವಾಗುತ್ತದೆ. ಇದಲ್ಲದೆ, ನೀವು ಈ ಗ್ಯಾರೇಜ್‌ಗಳಿಂದ ಕ್ಯಾಶ್ ಲೆಸ್ ಸೌಲಭ್ಯವನ್ನು ಪಡೆಯಬಹುದು.

6. ಪೇಪರ್‌ಲೆಸ್‌ ಪ್ರೊಸೀಜರ್

ನೀವು ಡಿಜಿಟ್‌ನಿಂದ ಆನ್‌ಲೈನ್‌ನಲ್ಲಿ ರೆನಾಲ್ಟ್ ಡಸ್ಟರ್ ಇನ್ಶೂರೆನ್ಸ್ ಅನ್ನು ಪಡೆಯಬಹುದು. ಅದಕ್ಕಾಗಿ ನೀವು ದಾಖಲೆಗಳ ಹಾರ್ಡ್ ಪ್ರತಿಗಳನ್ನು ಸಬ್ಮಿಟ್ ಮಾಡಬೇಕಾಗಿಲ್ಲ. ಯಶಸ್ವಿ ಇನ್ಶೂರೆನ್ಸ್ ರಿನೀವಲ್ ಮತ್ತು ಕ್ಲೈಮ್ ಪ್ರೊಸೆಸ್ ಗಾಗಿ ನಿಮ್ಮ ಸ್ಮಾರ್ಟ್‌ಫೋನ್ ಮೂಲಕ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡುವುದು ಮಾತ್ರ ನೀವು ಮಾಡಬೇಕಾಗಿರುವುದು.

7. ಡೋರ್‌ಸ್ಟೆಪ್ ಪಿಕ್-ಅಪ್ ಮತ್ತು ಡ್ರಾಪ್ ಸೌಲಭ್ಯ

ಕಾಂಪ್ರೆಹೆನ್ಸಿವ್ ಪ್ಲಾನ್ ಗಾಗಿ ರೆನಾಲ್ಟ್ ಡಸ್ಟರ್ ಇನ್ಶೂರೆನ್ಸ್ ರಿನೀವಲ್ ಬೆಲೆಯನ್ನು ಪಾವತಿಸಿದರೆ, ಡಿಜಿಟ್ ಇನ್ಶೂರರ್ ನಿಮ್ಮ ರೆನಾಲ್ಟ್ ಕಾರಿನ ಡ್ಯಾಮೇಜ್ ಗೊಳಗಾದ ಭಾಗಗಳಿಗೆ ಮನೆ ಬಾಗಿಲಿಗೆ ಪಿಕ್ ಅಪ್ ಮತ್ತು ಡ್ರಾಪ್ ಸೌಲಭ್ಯವನ್ನು ನೀಡುತ್ತಾರೆ. ಈ ಸೌಲಭ್ಯವು ನಿಮ್ಮ ಮನೆಯಿಂದಲೇ ಅನುಕೂಲಕರವಾಗಿ ನಿಮ್ಮ ರೆನಾಲ್ಟ್ ಕಾರಿಗೆ ದುರಸ್ತಿ ಸೇವೆಗಳನ್ನು ಪಡೆಯಲು ನಿಮಗೆ ಅನುವು ಮಾಡಿಕೊಡುತ್ತದೆ.

8. ಐಡಿವಿ(IDV ) ಕಸ್ಟಮೈಸೇಷನ್

ರೆನಾಲ್ಟ್ ಡಸ್ಟರ್ ಇನ್ಶೂರೆನ್ಸ್ ವೆಚ್ಚವು ನಿಮ್ಮ ಕಾರಿನ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ ಅನ್ನು ಅವಲಂಬಿಸಿರುತ್ತದೆ. ಇನ್ಶೂರೆನ್ಸ್ ಪೂರೈಕೆದಾರರು ಈ ಮೌಲ್ಯವನ್ನು ಅದರ ತಯಾರಕರ ಮಾರಾಟದ ಬೆಲೆಯಿಂದ ಕಾರಿನ ಡೆಪ್ರಿಸಿಯೇಷನ್ ಅನ್ನು ಕಳೆಯುವ ಮೂಲಕ ಮೌಲ್ಯಮಾಪನ ಮಾಡುತ್ತಾರೆ. ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಈ ಮೌಲ್ಯವನ್ನು ಕಸ್ಟಮೈಸ್ ಮಾಡಲು ಡಿಜಿಟ್ ನಿಮಗೆ ಅನುಮತಿಸುತ್ತದೆ. ಇದು ಪ್ರತಿಯಾಗಿ, ಕಾರು ಕಳ್ಳತನದ ಸಂದರ್ಭದಲ್ಲಿ ಅಥವಾ ದುರಸ್ತಿಗೆ ಮೀರಿದ ಡ್ಯಾಮೇಜ್ ಆದ ಸಂದರ್ಭದಲ್ಲಿ ನಿಮ್ಮ ಗಳಿಕೆಯನ್ನು ಗರಿಷ್ಠಗೊಳಿಸಲು ನಿಮಗೆ ಅನುವು ಮಾಡಿಕೊಡುತ್ತದೆ.

ಇದಲ್ಲದೆ, ಡಿಜಿಟ್‌ನ ಸ್ಪಂದನಾಶೀಲ ಗ್ರಾಹಕ ಸೇವೆಯು ರೆನಾಲ್ಟ್ ಡಸ್ಟರ್ ಇನ್ಶೂರೆನ್ಸ್ ಪ್ಲಾನ್ ಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳಿಗೆ ತ್ವರಿತ ಪರಿಹಾರಗಳನ್ನು ನೀಡುತ್ತದೆ. ಅವರು ರಾಷ್ಟ್ರೀಯ ರಜಾದಿನಗಳಲ್ಲಿಯೂ ಸಹ 24x7 ಲಭ್ಯವಿರುತ್ತಾರೆ. ನಿಮ್ಮ ರೆನಾಲ್ಟ್ ಕಾರಿಗೆ ಡಿಜಿಟ್ ಇನ್ಶೂರೆನ್ಸ್ ಅನ್ನು ಪಡೆಯುವ ಪ್ರಯೋಜನಗಳ ಬಗ್ಗೆ ಈಗ ನೀವು ಎಲ್ಲವನ್ನೂ ತಿಳಿದಿದ್ದೀರಿ, ಆನ್‌ಲೈನ್‌ನಲ್ಲಿ ಯೋಜನೆಗಳನ್ನು ಹೋಲಿಸುವಾಗ ನೀವು ಈ ಇನ್ಶೂರರ್ ರನ್ನು ಪರಿಗಣಿಸಬಹುದು.

ರೆನಾಲ್ಟ್ ಡಸ್ಟರ್‌ಗಾಗಿ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಏಕೆ ಮುಖ್ಯ?

ಕಾರ್ ಇನ್ಶೂರೆನ್ಸ್ ಪಡೆಯುವುದು ಪ್ರತಿಯೊಬ್ಬ ಸಂವೇದನಾಶೀಲ ಕಾರ್ ಮಾಲೀಕರಿಗೂ ಮೂಲಭೂತ ಕರ್ತವ್ಯವಾಗಿದೆ. ಏಕೆಂದರೆ ಇನ್ಶೂರೆನ್ಸ್ ಹಣಕಾಸಿನ ರಕ್ಷಣೆಯಾಗಿದ್ದು, ಅದು ನಿಮ್ಮ ಕಷ್ಟಪಟ್ಟು ಗಳಿಸಿದ ಹಣವನ್ನು ಅನೇಕ ಸಂದರ್ಭಗಳಲ್ಲಿ ಉಳಿಸುತ್ತದೆ. ರೆನಾಲ್ಟ್ ಡಸ್ಟರ್ ಕಾರ್ ಇನ್ಶೂರೆನ್ಸ್ ಹೇಗೆ ಸಹಾಯಕವಾಗಿದೆ ಎಂಬುದನ್ನು ಮುಂದೆ ನೋಡೋಣ:

ನಿಯಮಗಳನ್ನು ಪಾಲಿಸಿ ಮತ್ತು ದಂಡದಿಂದ ದೂರವಿರಿ: ಕಾರ್ ಇನ್ಶೂರೆನ್ಸ್ ಕಾನೂನು ಬಾಧ್ಯತೆಯಾಗಿದೆ. ಭಾರತೀಯ ರಸ್ತೆಗಳಲ್ಲಿ ಕಾರ್ ಇನ್ಶೂರೆನ್ಸ್ ಇಲ್ಲದೆ ವಾಹನ ಡ್ರೈವ್ ಮಾಡುವುದು ಕಾನೂನುಬಾಹಿರವಾಗಿದೆ. ಅಂತಹ ಅಪರಾಧಕ್ಕಾಗಿ ನಿಮಗೆ ₹2000 ಮತ್ತು/ಅಥವಾ 3 ತಿಂಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಆದ್ದರಿಂದ ನಿಮ್ಮ ಕಾರಿಗೆ ಇನ್ಶೂರೆನ್ಸ್ ಮಾಡಿಸಿಕೊಳ್ಳುವುದು ಥ್ರಿಲ್ ಅನ್ವೇಷಣೆಗಿಂತ ಹೆಚ್ಚಾಗಿ ಬುದ್ಧಿವಂತ ಆಯ್ಕೆಯಾಗಿದೆ.

ಇನ್ಶೂರೆನ್ಸ್ ಇಲ್ಲದೆ ಡ್ರೈವಿಂಗ್ ಮಾಡುವುದಕ್ಕೆ ವಿಧಿಸಲಾಗುವ ದಂಡದ ಬಗ್ಗೆ ಇನ್ನಷ್ಟು ತಿಳಿಯಿರಿ

ಥರ್ಡ್ ಪಾರ್ಟಿ ಲಯಬಿಲಿಟಿಗಳಿಂದ ರಕ್ಷಣೆ ಪಡೆಯಿರಿ: ಅಜಾಗರೂಕತೆಯಿಂದ ಥರ್ಡ್ ಪಾರ್ಟಿ ಗಾಯಗೊಂಡ ಅಥವಾ ಅವನ/ಅವಳ ಪ್ರಾಪರ್ಟಿಗೆ ಡ್ಯಾಮೇಜ್ ಆದ ಅಪಘಾತಕ್ಕೆ ನೀವು ಜವಾಬ್ದಾರರಾಗಿದ್ದರೆ, ಅವರ ನಷ್ಟಕ್ಕೆ ನೀವು ಪಾವತಿಸಬೇಕಾಗುತ್ತದೆ. ಆದರೆ ನೀವು ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದರೆ ನಿಮ್ಮ ಇನ್ಶೂರರ್ ಕ್ಲೈಮ್ ಅಮೌಂಟ್ ಅನ್ನು ಪಾವತಿಸುತ್ತಾರೆ ಮತ್ತು ನೀವು ರಕ್ಷಿಸಲ್ಪಡುತ್ತೀರಿ. ಮತ್ತು ಮೋಟಾರ್ ವೆಹಿಕಲ್ ಆಕ್ಟ್ ಪ್ರಕಾರ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಕಡ್ಡಾಯವಾಗಿದೆ.

ಕಾಂಪ್ರೆಹೆನ್ಸಿವ್ ಪಾಲಿಸಿಯೊಂದಿಗೆ ನಿಮ್ಮ ಡಸ್ಟರ್ ಅನ್ನು ರಕ್ಷಿಸಿ: ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಎರಡು ರೀತಿಯ ಕವರೇಜ್‌ನೊಂದಿಗೆ ಬರುತ್ತದೆ. ಇದು ಥರ್ಡ್ ಪಾರ್ಟಿ ಲಯಬಿಲಿಟಿ ಮತ್ತು ನಿಮ್ಮ ಕಾರಿಗೆ ಆಗುವ ಡ್ಯಾಮೇಜ್ ಅನ್ನು ಸಹ ಕವರ್ ಮಾಡುತ್ತದೆ. ಕಾಂಪ್ರೆಹೆನ್ಸಿವ್ ಪಾಲಿಸಿಯೊಂದಿಗೆ, ನಿಮ್ಮ ಕಾರನ್ನು ಯಾವುದೇ ಮಾನವ ನಿರ್ಮಿತ ವಿಪತ್ತು ಅಥವಾ ಯಾವುದೇ ನೈಸರ್ಗಿಕ ವಿಕೋಪದಿಂದ ರಕ್ಷಿಸಿಕೊಳ್ಳಬಹುದು. ಈ ಪಾಲಿಸಿಯ ಅಡಿಯಲ್ಲಿ ನಿಮ್ಮ ಕಾರಿಗೆ ಉತ್ತಮ ರಕ್ಷಣೆಯನ್ನು ಒದಗಿಸಲು ಆ್ಯಡ್-ಆನ್‌ಗಳನ್ನು ಆಯ್ಕೆ ಮಾಡುವ ಆಯ್ಕೆಯನ್ನು ನೀವು ಹೊಂದಿರುವಿರಿ.

ಕಾರ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ಬಗ್ಗೆ ಇನ್ನಷ್ಟು ತಿಳಿಯಿರಿ.

ಆ್ಯಡ್-ಆನ್‌ಗಳೊಂದಿಗೆ ವಿಸ್ತಾರವಾದ ರಕ್ಷಣೆ: ಕಾಂಪ್ರೆಹೆನ್ಸಿವ್ ಪಾಲಿಸಿಯೊಂದಿಗೆ ನಿಮ್ಮ ಕಾರಿಗೆ ಉತ್ತಮ ರಕ್ಷಣೆಯನ್ನು ಒದಗಿಸಲು ಆ್ಯಡ್-ಆನ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಎಂಜಿನ್ ಪ್ರೊಟೆಕ್ಷನ್ ಆ್ಯಡ್-ಆನ್‌ ಇದ್ದರೆ ನಿಮ್ಮ ಎಂಜಿನ್ ಪ್ರವಾಹದಿಂದ ಅಥವಾ ಅಂತಹ ಸನ್ನಿವೇಶಗಳಿಂದ ಡ್ಯಾಮೋಜ್ ಗೊಳಗಾದ ಪರಿಸ್ಥಿತಿಯಲ್ಲಿ ಕ್ಲೈಮ್ ಮಾಡಬಹುದು. ಬ್ರೇಕ್ ಡೌನ್ ಅಸಿಸ್ಟೆನ್ಸ್, ಟೈರ್ ಪ್ರೊಟೆಕ್ಷ್, ರಿಟರ್ನ್ ಟು ಇನ್‌ವಾಯ್ಸ್‌ ಗಳಂತಹ ಇತರ ಆ್ಯಡ್-ಆನ್‌ಗಳನ್ನು ಕೂಡ ನೀವು ಪಡೆಯಬಹುದು.

ರೆನಾಲ್ಟ್ ಡಸ್ಟರ್ ಬಗ್ಗೆ ಇನ್ನಷ್ಟು ತಿಳಿಯಿರಿ

ರೆನಾಲ್ಟ್ ಡಸ್ಟರ್ ಬಿಡುಗಡೆಯಾದಾಗಿನಿಂದ ಭಾರತೀಯ ಖರೀದಿದಾರರಿಂದ ವ್ಯಾಪಕ ಸ್ವಾಗತವನ್ನು ಪಡೆದುಕೊಂಡಿದೆ. ಭಾರತೀಯ ಕಾರು ಉತ್ಸಾಹಿಗಳ ದೃಷ್ಟಿಕೋನದಿಂದ ಎಸ್‌ಯುವಿ ಅಗತ್ಯತೆಗಳಿಗೆ ಬಂದಾಗ ಇದು ಆಕರ್ಷಕ ಬಣ್ಣಗಳೊಂದಿಗೆ ಗಮನ ಸೆಳಯುತ್ತದೆ. ಈ ಕಾರು ತನ್ನ ಹೆಸರಿಗೆ 29 ಪ್ರಶಸ್ತಿಗಳನ್ನು ಹೊಂದಿದೆ, ಅವುಗಳಲ್ಲಿ ಕೆಲವೆಂದರೆ: ಇಂಡಿಯನ್ ಕಾರ್ ಆಫ್ ದಿ ಇಯರ್ (ಐಸಿಓಟಿವೈ), ಬಿಬಿಸಿ ಮತ್ತು ಟೈಮ್ಸ್ ಆಫ್ ಇಂಡಿಯಾದಿಂದ ವರ್ಷದ ಕಾಂಪ್ಯಾಕ್ಟ್ ಎಸ್‌ಯುವಿ, ಕಾರ್ ಇಂಡಿಯಾದಿಂದ ವರ್ಷದ ಎಸ್‌ಯುವಿ, ಇತ್ಯಾದಿ.

ಭಾರೀ ಯಶಸ್ಸಿನ ಕಾರಣದಿಂದಾಗಿ, ರೆನಾಲ್ಟ್ ಭಾರತದಲ್ಲಿ ಎರಡನೇ ಜನರೇಷ್ ಡಸ್ಟರ್ ಅನ್ನು ಬಿಡುಗಡೆ ಮಾಡಿದೆ, ಇದು ₹.8.00 ಲಕ್ಷಗಳ ಎಕ್ಸ್ ಶೋ ರೂಂ ಆರಂಭಿಕ ಬೆಲೆಯಲ್ಲಿ ದೊರೆಯುತ್ತದೆ.

ನೀವು ರೆನಾಲ್ಟ್ ಡಸ್ಟರ್ ಅನ್ನು ಏಕೆ ಖರೀದಿಸಬೇಕು?

ಫೇಸ್‌ಲಿಫ್ಟ್‌ ನೊಂದಿಗೆ ಪರಿಷ್ಕೃತಗೊಂಡ ಸ್ಟೈಲಿಂಗ್: ಇತ್ತೀಚಿನ ಪಾದಚಾರಿ ಸಂರಕ್ಷಣಾ ಮಾನದಂಡಗಳನ್ನು ಅನುಸರಿಸಲು ಮುಂಭಾಗದ ಬಂಪರ್ ಅನ್ನು ಪರಿಷ್ಕರಿಸಲಾಗಿದೆ. ಬಾನೆಟ್ ಲೈನ್ ಅನ್ನು ಹೆಚ್ಚಿಸಲಾಗಿದ್ದು, ಇದು ಕಾರಿಗೆ ಭಾರಿ ಅನ್ನುಸುವ ನೋಟವನ್ನು ನೀಡುತ್ತದೆ. ಬಾನೆಟ್ ಬಾಹ್ಯರೇಖೆಯನ್ನು ಹೊಂದಿದ್ದು, ಅದು ಕಾರಿಗೆ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ದೊಡ್ಡ ಕ್ರೋಮ್ ನಿಂದ ಅಲಂಕರಿಸಿದ ಗ್ರಿಲ್ ಈ ಕಾರನ್ನು ಎಸ್‌ಯುವಿ ಎಂದು ಸಾರುತ್ತದೆ. ಇದು ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು ಮತ್ತು ಎಲ್‌ಇಡಿ ಡಿಆರ್‌ಎಲ್‌ಗಳನ್ನು ಹೊಂದಿದ್ದು, ಅದು ಟ್ರೆಂಡ್ ಗೆ ಸೂಕ್ತವಾಗಿದೆ. ಯಂತ್ರದಿಂದ ತಯಾರಿಸಿದ ಆಕರ್ಷಕ ಚಕ್ರಗಳನ್ನು ನಿಮ್ಮನ್ನು ಯಾವುದೇ ರೀತಿಯ ಭೂಪ್ರದೇಶಕ್ಕೆ ಕರೆದೊಯ್ಯುವಂತೆ ವಿನ್ಯಾಸಗೊಳಿಸಲಾಗಿದೆ. ಕಿಟಕಿಗಳ ತಳಭಾಗದಲ್ಲಿ ಹೊಂದಿರುವ ಕ್ರೋಮ್ ಸ್ಟ್ರಿಪ್ ಗೆ ಪ್ರೀಮಿಯಂ ಸ್ಪರ್ಶ ಹೊಂದಿದೆ.

ದೃಢವಾದ ನಿರ್ಮಾಣ ಗುಣಮಟ್ಟ ಮತ್ತು ಸ್ಟೋರೇಜ್: ನೀವು ಬಾಗಿಲನ್ನು ಮುಚ್ಚಿದ ತಕ್ಷಣವೇ ನಿರ್ಮಾಣದ ಗುಣಮಟ್ಟವನ್ನು ತಿಳಿದುಕೊಳ್ಳುವಿರಿ ಮತ್ತು ಅಧಿಕೃತತೆಯನ್ನು ಅನುಭವಿಸುವಿರಿ. ನಿರ್ಮಾಣ ಗುಣಮಟ್ಟವು ಅದರ ಜಪಾನೀಸ್ ಅಥವಾ ಕೊರಿಯನ್ ಪ್ರತಿಸ್ಪರ್ಧಿಗಳಿಗಿಂತ ಉತ್ತಮವಾಗಿದೆ. ಸೀಟ್ ಗಳು ಅತ್ಯುತ್ತಮವಾಗಿವೆ ಮತ್ತು ಉತ್ತಮ ಮೆತ್ತನೆಯ ಅನುಭವ ನೀಡುತ್ತವೆ. ಕಾರಿನೊಳಗೆ ಸಾಕಷ್ಟು ಸ್ಟೋರೇಜ್ ಸ್ಥಳಗಳಿವೆ. ಡಸ್ಟರ್ ಎರಡು ಗ್ಲೋವ್ ಬಾಕ್ಸ್‌ ಗಳು, ಡ್ಯಾಶ್‌ಬೋರ್ಡ್‌ನಲ್ಲಿನ ಟ್ರೇಗಳು, ಕ್ಯಾಬಿನ್ ಅನ್ನು ಪ್ರಾಯೋಗಿಕವಾಗಿ ಕಾಣಿಸುವ ದೊಡ್ಡ ಡೋರ್ ಬಿನ್‌ಗಳನ್ನು ಹೊಂದಿದೆ.

ಹೊಸ ವೈಶಿಷ್ಟ್ಯಗಳು: ರೆನಾಲ್ಟ್ ಡಸ್ಟರ್ ಡ್ಯುಯಲ್ ಏರ್‌ಬ್ಯಾಗ್‌ಗಳು, ಎಬಿಎಸ್, ರೇರ್ ಪಾರ್ಕಿಂಗ್ ಸೆನ್ಸರ್‌ಗಳು, ಸ್ಟೀರಿಂಗ್ ಟಿಲ್ಟ್ ಹೊಂದಾಣಿಕೆ, ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಸ್ಯಾಟಲೈಟ್ ನ್ಯಾವಿಗೇಷನ್, ಪವರ್ಡ್ ಮಿರರ್ ಗಳು, ಇಎಸ್‌ಸಿ, ಹಿಲ್ ಸ್ಟಾರ್ಟ್ ಅಸಿಸ್ಟ್‌ ನೊಂದಿಗೆ 7-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌, ಕ್ರೂಸ್ ಕಂಟ್ರೋಲ್, ಅಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಮತ್ತು ಇನ್ನೂ ಇತ್ಯಾದಿಗಳಂತಹ ಎಲ್ಲಾ ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ.

ಲಾಂಗ್ ರೈಡ್‌ಗೆ ಪೂರಕವಾದುದು: ಡಸ್ಟರ್ 50 ಲೀಟರ್ ಇಂಧನ ಸಾಮರ್ಥ್ಯದೊಂದಿಗೆ ಬರುತ್ತದೆ. ಆರಾಮದಾಯಕ ಡ್ರೈವಿಂಗ್ ಅನುಭವಕ್ಕಾಗಿ ಡಸ್ಟರ್ 3 ಶಕ್ತಿಶಾಲಿ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಅವುಗಳೆಂದರೆ:

  • ಮ್ಯಾನ್ಯುವಲ್ ಟ್ರಾನ್ಸ್‌ ಮಿಷನ್ ಮತ್ತು ಸಿವಿಟಿ ಆಟೋ ಆಯ್ಕೆ ಇರುವ 106 ಹಾರ್ಸ್ ಪವರ್ ನ 1.5-ಲೀಟರ್ ಪೆಟ್ರೋಲ್ ಎಂಜಿನ್

  • 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ ಮಿಷನ್ ಜೊತೆಗೆ 85 ಎಚ್‌ಪಿ 1.5 ಲೀಟರ್ ಡೀಸೆಲ್ ಎಂಜಿನ್

  • 6-ಸ್ಪೀಡ್ ಮ್ಯಾನ್ಯುವಲ್ ಮತ್ತು ಎಂಟಿ ಆಯ್ಕೆಗಳೊಂದಿಗೆ 110 ಎಚ್‌ಪಿ 1.5-ಲೀಟರ್ ಡೀಸೆಲ್ ಎಂಜಿನ್

ಆರಾಮದಾಯಕ ಡ್ರೈವಿಂಗ್ ಅನುಭವ: ಉತ್ತಮ ಡ್ರೈವಿಂಗ್ ಅನುಭವವನ್ನು ಒದಗಿಸಲು ಎಲ್ಲಾ ಎಂಜಿನ್‌ಗಳನ್ನು ಪರಿಷ್ಕರಿಸಲಾಗಿದೆ ಮತ್ತು ಸ್ಟೀರಿಂಗ್ ಅನ್ನೂ ಪರಿಷ್ಕರಿಸಿದ್ದು, ಅದು ಮೊದಲಿಗಿಂತ ಉತ್ತಮವಾಗಿದೆ.

ರೆನಾಲ್ಟ್ ಡಸ್ಟರ್​ ವೇರಿಯಂಟ್‌ಗಳ ದರಪಟ್ಟಿ

ರೆನಾಲ್ಟ್ ಡಸ್ಟರ್​ ವೇರಿಯಂಟ್‌ಗಳು

ಬೆಲೆ (ನವದೆಹಲಿಯಲ್ಲಿ, ನಗರಗಳಾದ್ಯಂತ ಬದಲಾಗಬಹುದು)
ಆರ್‌ಎಕ್ಸ್‌ಎಸ್‌ ₹11.02 ಲಕ್ಷಗಳು
ಆರ್‌ಎಕ್ಸ್‌ಝಡ್ ₹11.18 ಲಕ್ಷಗಳು
ಆರ್‌ಎಕ್ಸ್‌ಇ ಟರ್ಬೋ ₹13.04 ಲಕ್ಷಗಳು
ಆರ್‌ಎಕ್ಸ್‌ಎಸ್‌ ಟರ್ಬೋ ₹13.93 ಲಕ್ಷಗಳು
ಆರ್‌ಎಕ್ಸ್‌ಝಡ್ ಟರ್ಬೋ ₹14,62 ಲಕ್ಷಗಳು
ಆರ್‌ಎಕ್ಸ್‌ಎಸ್‌ ಟರ್ಬೋ ಸಿವಿಟಿ ₹15.77 ಲಕ್ಷಗಳು
ಆರ್‌ಎಕ್ಸ್‌ಝಡ್ ಟರ್ಬೋ ಸಿವಿಟಿ ₹16.45 ಲಕ್ಷಗಳು

ಪದೇ ಪದೇ ಕೇಳಲಾದ ಪ್ರಶ್ನೆಗಳು

ನನ್ನ ರೆನಾಲ್ಟ್ ಡಸ್ಟರ್‌ಗಾಗಿ ಥರ್ಡ್-ಪಾರ್ಟಿ ಇನ್ಶೂರೆನ್ಸ್ ಅನ್ನು ಆರಿಸುವ ಮೂಲಕ ನಾನು ಆ್ಯಡ್-ಆನ್ ಪ್ರಯೋಜನಗಳನ್ನು ಪಡೆಯಬಹುದೇ?

ಇಲ್ಲ, ಹೆಚ್ಚುವರಿ ಶುಲ್ಕಗಳ ವಿರುದ್ಧ ನೀವು ಕಾಂಪ್ರೆಹೆನ್ಸಿವ್ ರೆನಾಲ್ಟ್ ಡಸ್ಟರ್ ಇನ್ಶೂರೆನ್ಸ್ ಪ್ಲಾನ್ ಅನ್ನು ಆರಿಸಿದರೆ ಮಾತ್ರ ಆ್ಯಡ್-ಆನ್ ಪ್ರಯೋಜನಗಳು ಲಭ್ಯವಿರುತ್ತವೆ.

ನನ್ನ ರೆನಾಲ್ಟ್ ಡಸ್ಟರ್ ಕಾರ್ ಇನ್ಶೂರೆನ್ಸ್ ಅಡಿಯಲ್ಲಿ ಎಂಜಿನ್ ಡ್ಯಾಮೇಜ್ ಗಳ ವಿರುದ್ಧ ನಾನು ಕವರೇಜ್ ಪಡೆಯುತ್ತೇನೆಯೇ?

ಸ್ಟಾಂಡರ್ಡ್ ಇನ್ಶೂರೆನ್ಸ್ ಪಾಲಿಸಿಯು ಎಂಜಿನ್ ಡ್ಯಾಮೇಜ್ ಗಳನ್ನು ಕವರ್ ಮಾಡುವುದಿಲ್ಲ. ಆದಾಗ್ಯೂ, ನಿಮ್ಮ ರೆನಾಲ್ಟ್ ಕಾರಿನ ಎಂಜಿನ್‌ಗೆ ಹೆಚ್ಚುವರಿ ರಕ್ಷಣೆಯನ್ನು ಪಡೆಯಲು ನಿಮ್ಮ ಇನ್ಶೂರೆನ್ಸ್ ನಲ್ಲಿ ಜಾಸ್ತಿ ಪ್ರೀಮಿಯಂ ಪಾವತಿಸುವ ಮೂಲಕ ನೀವು ಆ್ಯಡ್-ಆನ್ ಆದ ಎಂಜಿನ್ ಮತ್ತು ಗೇರ್‌ಬಾಕ್ಸ್ ಪ್ರೊಟೆಕ್ಷನ್ ಕವರ್ ಅನ್ನು ಸೇರಿಸಬಹುದು.