ಡಸ್ಟರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವಾಗ, ಗರಿಷ್ಠ ಪ್ರಯೋಜನಗಳಿಗಾಗಿ ಕೆಲವು ಅಂಶಗಳನ್ನು ಪರಿಗಣಿಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ, ವಿವಿಧ ಇನ್ಶೂರರ್ ಗಳ ಪ್ಲಾನ್ ಗಳನ್ನು ಹೋಲಿಸಬಹುದು ಮತ್ತು ಸ್ಪರ್ಧಾತ್ಮಕ ಇನ್ಶೂರೆನ್ಸ್ ಬೆಲೆಗಳೊಂದಿಗೆ ಹಲವಾರು ಸೇವಾ ಪ್ರಯೋಜನಗಳನ್ನು ನೀಡುವ ಒಂದನ್ನು ಆಯ್ಕೆ ಮಾಡಬಹುದು.
ತಿಳುವಳಿಕೆಯುಳ್ಳ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ನೀವು ಪರಿಗಣಿಸಬಹುದಾದ ಡಿಜಿಟ್ ನ ಕೆಲವು ಕೊಡುಗೆಗಳ ಮಾಹಿತಿ ಇಲ್ಲಿವೆ:
1. ವಿವಿಧ ಇನ್ಶೂರೆನ್ಸ್ ಆಯ್ಕೆಗಳು
ಡಿಜಿಟ್ ತನ್ನ ಬಳಕೆದಾರರಿಗೆ ಈ ಕೆಳಗಿನ ಇನ್ಶೂರೆನ್ಸ್ ಆಯ್ಕೆಗಳಲ್ಲಿ ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ:
· ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್
ಅಪಘಾತ ಅಥವಾ ಘರ್ಷಣೆಯ ಸಂದರ್ಭದಲ್ಲಿ ನಿಮ್ಮ ರೆನಾಲ್ಟ್ ಕಾರ್ ಥರ್ಡ್ ಪಾರ್ಟಿ ವ್ಯಕ್ತಿ, ವೆಹಿಕಲ್ ಅಥವಾ ಪ್ರಾಪರ್ಟಿಗೆ ಡ್ಯಾಮೇಜ್ ಉಂಟು ಮಾಡಬಹುದು. ಅಂತಹ ಸನ್ನಿವೇಶದಲ್ಲಿ ಭಾರೀ ಆರ್ಥಿಕ ನಷ್ಟವನ್ನು ಉಂಟುಮಾಡುವ ಲಯಬಿಲಿಟಿಗಳನ್ನು ನೀವು ಎದುರಿಸಬೇಕಾಗುತ್ತದೆ. ಆದಾಗ್ಯೂ, ನೀವು ಡಿಜಿಟ್ನಿಂದ ರೆನಾಲ್ಟ್ ಡಸ್ಟರ್ಗಾಗಿ ಥರ್ಡ್-ಪಾರ್ಟಿ ಇನ್ಶೂರೆನ್ಸ್ ಅನ್ನು ಪಡೆದರೆ, ಅದು ಥರ್ಡ್ ಪಾರ್ಟಿ ಅಪಘಾತಗಳಿಂದ ಉಂಟಾಗುವ ಶುಲ್ಕಗಳನ್ನು ಕವರ್ ಮಾಡಲು ನಿಮಗೆ ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಮೋಟಾರ್ ವೆಹಿಕಲ್ಸ್ ಆಕ್ಟ್, 1988ರ ಪ್ರಕಾರ, ಭಾರೀ ಪೆನಲ್ಟಿಗಳನ್ನು ತಪ್ಪಿಸಲು ಈ ಬೇಸಿಕ್ ಇನ್ಶೂರೆನ್ಸ್ ಪ್ಲಾನ್ ಅನ್ನು ಹೊಂದಿರುವುದು ಕಡ್ಡಾಯವಾಗಿದೆ.
· ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್
ಥರ್ಡ್-ಪಾರ್ಟಿ ಡ್ಯಾಮೇಜ್ ಗಳಲ್ಲದೆ, ಕಳ್ಳತನ, ಬೆಂಕಿ, ಭೂಕಂಪ ಮತ್ತು ಇತರ ವಿಪತ್ತುಗಳ ಸಮಯದಲ್ಲಿ ನಿಮ್ಮ ರೆನಾಲ್ಟ್ ಡಸ್ಟರ್ ಕಾರಿಗೆ ಓನ್ ಡ್ಯಾಮೇಜ್ ಗಳು ಉಂಟಾಗಬಹುದು. ಅಂತಹ ಸಂದರ್ಭದಲ್ಲಿ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪ್ಲಾನ್ ನಿಂದ ಕವರೇಜ್ ಪ್ರಯೋಜನಗಳನ್ನು ಪಡೆಯಬಹುದು. ಡಿಜಿಟ್ನಿಂದ ರೆನಾಲ್ಟ್ ಡಸ್ಟರ್ನ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಅಡಿಯಲ್ಲಿ, ನಿಮ್ಮ ಇನ್ಶೂರರ್ ನಿಮ್ಮ ಪರವಾಗಿ ದುರಸ್ತಿ ವೆಚ್ಚವನ್ನು ಪಾವತಿಸುತ್ತಾರೆ ಮತ್ತು ಭವಿಷ್ಯದ ಅವಶ್ಯಕತೆಗಳಿಗಾಗಿ ಹಣವನ್ನು ಉಳಿಸಲು ನಿಮಗೆ ಸಹಾಯ ಮಾಡುತ್ತಾರೆ. ಇದರ ಹೊರತಾಗಿ, ಈ ಇನ್ಶೂರೆನ್ಸ್ ಪಾಲಿಸಿಯು ಥರ್ಡ್ ಪಾರ್ಟಿ ಅಪಘಾತಗಳಿಂದ ಉಂಟಾಗುವ ಡ್ಯಾಮೇಜ್ ಗಳ ವಿರುದ್ಧವೂ ಕವರೇಜ್ ಒದಗಿಸುತ್ತದೆ.
2. ಹಲವಾರು ಆ್ಯಡ್-ಆನ್ ಪಾಲಿಸಿಗಳು
ಕಾಂಪ್ರೆಹೆನ್ಸಿವ್ ರೆನಾಲ್ಟ್ ಡಸ್ಟರ್ ಇನ್ಶೂರೆನ್ಸ್ ಪಾಲಿಸಿಯು ಥರ್ಡ್ ಪಾರ್ಟಿ ಮತ್ತು ಓನ್ ಡ್ಯಾಮೇಜ್ ಎರಡನ್ನೂ ಒಳಗೊಳ್ಳುತ್ತದೆ, ಅದರಲ್ಲಿ ಕೆಲವು ಎಕ್ಸ್ಕ್ಲೂಷನ್ಗಳು ಇರಬಹುದು. ಆ ನಿಟ್ಟಿನಲ್ಲಿ, ನೀವು ಹೆಚ್ಚುವರಿ ಶುಲ್ಕಗಳನ್ನು ಪಾವತಿಸಿ ಡಿಜಿಟ್ನಿಂದ ಆ್ಯಡ್-ಆನ್ ಪ್ರಯೋಜನಗಳನ್ನು ಪಡೆಯಬಹುದು. ನಿಮ್ಮ ರೆನಾಲ್ಟ್ ಡಸ್ಟರ್ ಇನ್ಶೂರೆನ್ಸ್ ಬೆಲೆಯನ್ನು ಹೆಚ್ಚಿಸುವ ಮೂಲಕ ಕೆಳಗಿನ ಯಾವುದೇ ಕವರ್ಗಳನ್ನು ಸೇರಿಸುವ ಆಯ್ಕೆಯನ್ನು ನೀವು ಹೊಂದಿದ್ದೀರಿ:
• ಕನ್ಸ್ಯೂಮೇಬಲ್ ಕವರ್
• ಝೀರೋ ಡೆಪ್ರಿಸಿಯೇಷನ್ ಕವರ್
• ರೋಡ್ ಸೈಡ್ ಅಸಿಸ್ಟೆನ್ಸ್
• ಎಂಜಿನ್ ಆಂಡ್ ಗೇರ್ಬಾಕ್ಸ್ ಪ್ರೊಟೆಕ್ಷನ್ ಕವರ್
• ರಿಟರ್ನ್ ಟು ಇನ್ವಾಯ್ಸ್ ಕವರ್
3. ಕ್ಯಾಶ್ಲೆಸ್ ರಿಪೇರಿ ಮೋಡ್
ಡಿಜಿಟ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡುವ ಬಳಕೆದಾರರು ತಮ್ಮ ರೆನಾಲ್ಟ್ ಕಾರುಗಳನ್ನು ಅಧಿಕೃತ ನೆಟ್ವರ್ಕ್ ಗ್ಯಾರೇಜ್ನಿಂದ ರಿಪೇರಿ ಮಾಡುವಾಗ ಕ್ಯಾಶ್ಲೆಸ್ ರಿಪೇರಿ ಮೋಡ್ ಅನ್ನು ಆಯ್ಕೆ ಮಾಡಬಹುದು. ಈ ಸೌಲಭ್ಯದ ಅಡಿಯಲ್ಲಿ, ಇನ್ಶೂರರ್ ನೇರವಾಗಿ ಕೇಂದ್ರಕ್ಕೆ ಪಾವತಿಯನ್ನು ಮಾಡುವುದರಿಂದ ಯಾವುದೇ ದುರಸ್ತಿ ವೆಚ್ಚವನ್ನು ಭರಿಸಬೇಕಾಗಿಲ್ಲ.
4. ಸುಲಭವಾದ ಕ್ಲೈಮ್ ಫೈಲಿಂಗ್ ಪ್ರೊಸೆಸ್
ಡಿಜಿಟ್ ಅದರ ಸ್ಮಾರ್ಟ್ಫೋನ್-ಎನೇಬಲ್ಡ್ ಸ್ವಯಂ-ತಪಾಸಣಾ ಪ್ರೊಸೆಸ್ ಮೂಲಕ ನಿಮ್ಮ ರೆನಾಲ್ಟ್ ಡಸ್ಟರ್ ಇನ್ಶೂರೆನ್ಸ್ ಪಾಲಿಸಿಯ ವಿರುದ್ಧ ಕ್ಲೈಮ್ಗಳನ್ನು ಮಾಡಲು ನಿಮಗೆ ಅನುಮತಿಸುತ್ತದೆ. ಈ ವಿಧಾನವು ನಿಮ್ಮ ಸ್ಮಾರ್ಟ್ಫೋನ್ನಿಂದ ಕ್ಲೈಮ್ಗಳನ್ನು ಫೈಲ್ ಮಾಡಲು ಮತ್ತು ರೆನಾಲ್ಟ್ ಡಸ್ಟರ್ ಡ್ಯಾಮೇಜ್ ಗಳನ್ನು ಸ್ವಯಂ-ತಪಾಸಣೆ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ. ಹೀಗಾಗಿ, ಈ ತಂತ್ರಜ್ಞಾನ-ಚಾಲಿತ ಪ್ರೊಸೆಸ್ ನಿಂದಾಗಿ ನೀವು ಸಂಪೂರ್ಣ ಕ್ಲೈಮ್ ಪ್ರೊಸೆಸ್ ಅನ್ನು ಕಡಿಮೆ ಸಮಯದಲ್ಲಿ ಪೂರ್ಣಗೊಳಿಸಬಹುದು.
5. ಸಾಕಷ್ಟು ನೆಟ್ವರ್ಕ್ ಗ್ಯಾರೇಜ್ಗಳು
ಡಿಜಿಟ್ನ ರೆನಾಲ್ಟ್ ಡಸ್ಟರ್ ಇನ್ಶೂರೆನ್ಸ್ ರಿನೀವಲ್ ಗೆ ಹೋಗುವ ಮೂಲಕ, ಡ್ಯಾಮೇಜ್ ದುರಸ್ತಿಯ ಸಂದರ್ಭದಲ್ಲಿ ನೀವು ಭಾರತದಾದ್ಯಂತ ಹಲವಾರು ಡಿಜಿಟ್ ನೆಟ್ವರ್ಕ್ ಕಾರ್ ಗ್ಯಾರೇಜ್ಗಳಲ್ಲಿ ರಿಪೇರಿ ಸೌಲಭ್ಯ ಪಡೆಯಬಹುದು. ಈ ಗ್ಯಾರೇಜುಗಳ ಸಮೃದ್ಧಿಯಿಂದಾಗಿ, ತುರ್ತು ಪರಿಸ್ಥಿತಿಯಲ್ಲಿ ದುರಸ್ತಿ ಕೇಂದ್ರವನ್ನು ತಕ್ಷಣವೇ ಕಂಡುಹಿಡಿಯುವುದು ಸಾಧ್ಯವಾಗುತ್ತದೆ. ಇದಲ್ಲದೆ, ನೀವು ಈ ಗ್ಯಾರೇಜ್ಗಳಿಂದ ಕ್ಯಾಶ್ ಲೆಸ್ ಸೌಲಭ್ಯವನ್ನು ಪಡೆಯಬಹುದು.
6. ಪೇಪರ್ಲೆಸ್ ಪ್ರೊಸೀಜರ್
ನೀವು ಡಿಜಿಟ್ನಿಂದ ಆನ್ಲೈನ್ನಲ್ಲಿ ರೆನಾಲ್ಟ್ ಡಸ್ಟರ್ ಇನ್ಶೂರೆನ್ಸ್ ಅನ್ನು ಪಡೆಯಬಹುದು. ಅದಕ್ಕಾಗಿ ನೀವು ದಾಖಲೆಗಳ ಹಾರ್ಡ್ ಪ್ರತಿಗಳನ್ನು ಸಬ್ಮಿಟ್ ಮಾಡಬೇಕಾಗಿಲ್ಲ. ಯಶಸ್ವಿ ಇನ್ಶೂರೆನ್ಸ್ ರಿನೀವಲ್ ಮತ್ತು ಕ್ಲೈಮ್ ಪ್ರೊಸೆಸ್ ಗಾಗಿ ನಿಮ್ಮ ಸ್ಮಾರ್ಟ್ಫೋನ್ ಮೂಲಕ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡುವುದು ಮಾತ್ರ ನೀವು ಮಾಡಬೇಕಾಗಿರುವುದು.
7. ಡೋರ್ಸ್ಟೆಪ್ ಪಿಕ್-ಅಪ್ ಮತ್ತು ಡ್ರಾಪ್ ಸೌಲಭ್ಯ
ಕಾಂಪ್ರೆಹೆನ್ಸಿವ್ ಪ್ಲಾನ್ ಗಾಗಿ ರೆನಾಲ್ಟ್ ಡಸ್ಟರ್ ಇನ್ಶೂರೆನ್ಸ್ ರಿನೀವಲ್ ಬೆಲೆಯನ್ನು ಪಾವತಿಸಿದರೆ, ಡಿಜಿಟ್ ಇನ್ಶೂರರ್ ನಿಮ್ಮ ರೆನಾಲ್ಟ್ ಕಾರಿನ ಡ್ಯಾಮೇಜ್ ಗೊಳಗಾದ ಭಾಗಗಳಿಗೆ ಮನೆ ಬಾಗಿಲಿಗೆ ಪಿಕ್ ಅಪ್ ಮತ್ತು ಡ್ರಾಪ್ ಸೌಲಭ್ಯವನ್ನು ನೀಡುತ್ತಾರೆ. ಈ ಸೌಲಭ್ಯವು ನಿಮ್ಮ ಮನೆಯಿಂದಲೇ ಅನುಕೂಲಕರವಾಗಿ ನಿಮ್ಮ ರೆನಾಲ್ಟ್ ಕಾರಿಗೆ ದುರಸ್ತಿ ಸೇವೆಗಳನ್ನು ಪಡೆಯಲು ನಿಮಗೆ ಅನುವು ಮಾಡಿಕೊಡುತ್ತದೆ.
8. ಐಡಿವಿ(IDV ) ಕಸ್ಟಮೈಸೇಷನ್
ರೆನಾಲ್ಟ್ ಡಸ್ಟರ್ ಇನ್ಶೂರೆನ್ಸ್ ವೆಚ್ಚವು ನಿಮ್ಮ ಕಾರಿನ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ ಅನ್ನು ಅವಲಂಬಿಸಿರುತ್ತದೆ. ಇನ್ಶೂರೆನ್ಸ್ ಪೂರೈಕೆದಾರರು ಈ ಮೌಲ್ಯವನ್ನು ಅದರ ತಯಾರಕರ ಮಾರಾಟದ ಬೆಲೆಯಿಂದ ಕಾರಿನ ಡೆಪ್ರಿಸಿಯೇಷನ್ ಅನ್ನು ಕಳೆಯುವ ಮೂಲಕ ಮೌಲ್ಯಮಾಪನ ಮಾಡುತ್ತಾರೆ. ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಈ ಮೌಲ್ಯವನ್ನು ಕಸ್ಟಮೈಸ್ ಮಾಡಲು ಡಿಜಿಟ್ ನಿಮಗೆ ಅನುಮತಿಸುತ್ತದೆ. ಇದು ಪ್ರತಿಯಾಗಿ, ಕಾರು ಕಳ್ಳತನದ ಸಂದರ್ಭದಲ್ಲಿ ಅಥವಾ ದುರಸ್ತಿಗೆ ಮೀರಿದ ಡ್ಯಾಮೇಜ್ ಆದ ಸಂದರ್ಭದಲ್ಲಿ ನಿಮ್ಮ ಗಳಿಕೆಯನ್ನು ಗರಿಷ್ಠಗೊಳಿಸಲು ನಿಮಗೆ ಅನುವು ಮಾಡಿಕೊಡುತ್ತದೆ.
ಇದಲ್ಲದೆ, ಡಿಜಿಟ್ನ ಸ್ಪಂದನಾಶೀಲ ಗ್ರಾಹಕ ಸೇವೆಯು ರೆನಾಲ್ಟ್ ಡಸ್ಟರ್ ಇನ್ಶೂರೆನ್ಸ್ ಪ್ಲಾನ್ ಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳಿಗೆ ತ್ವರಿತ ಪರಿಹಾರಗಳನ್ನು ನೀಡುತ್ತದೆ. ಅವರು ರಾಷ್ಟ್ರೀಯ ರಜಾದಿನಗಳಲ್ಲಿಯೂ ಸಹ 24x7 ಲಭ್ಯವಿರುತ್ತಾರೆ. ನಿಮ್ಮ ರೆನಾಲ್ಟ್ ಕಾರಿಗೆ ಡಿಜಿಟ್ ಇನ್ಶೂರೆನ್ಸ್ ಅನ್ನು ಪಡೆಯುವ ಪ್ರಯೋಜನಗಳ ಬಗ್ಗೆ ಈಗ ನೀವು ಎಲ್ಲವನ್ನೂ ತಿಳಿದಿದ್ದೀರಿ, ಆನ್ಲೈನ್ನಲ್ಲಿ ಯೋಜನೆಗಳನ್ನು ಹೋಲಿಸುವಾಗ ನೀವು ಈ ಇನ್ಶೂರರ್ ರನ್ನು ಪರಿಗಣಿಸಬಹುದು.