ಕ್ಯಾಮ್ರಿ ಕಾರ್ ಅನ್ನು ಖರೀದಿಸಿದ ನಂತರ ಮಾಡಬೇಕಾದ ಪ್ರಮುಖ ಕೆಲಸವೆಂದರೆ, ಟೊಯೊಟಾ ಕ್ಯಾಮ್ರಿ ಕಾರ್ ಇನ್ಶೂರೆನ್ಸ್ ಖರೀದಿಸುವುದು. ಕಾರ್ ಇನ್ಶೂರೆನ್ಸ್ ಎನ್ನುವುದು ಓನರ್ಗಳ ಮತ್ತು ಥರ್ಡ್ ಪಾರ್ಟಿಯ ಸಂಪೂರ್ಣ ಹಾನಿ ಮತ್ತು ಗಾಯದ ವೆಚ್ಚವನ್ನು ಕವರ್ ಮಾಡಬಹುದು. ಕಾರ್ ಇನ್ಶೂರೆನ್ಸ್ ಅನ್ನು ಪಡೆಯುವುದರ ಪ್ರಯೋಜನಗಳು ಹೀಗಿವೆ:
ಫೈನಾನ್ಸಿಯಲ್ ಲಯಬಿಲಿಟಿಗಳಿಂದ ರಕ್ಷಣೆ - ಫೈನಾನ್ಸಿಯಲ್ ಲಯಬಿಲಿಟಿಗಳು ನಿಮ್ಮ ರಕ್ಷಾಕವಚವಾಗಬಹುದು. ಇದು ಯಾವುದೇ ಅಪಘಾತ ಸಂಭವಿಸಿದಲ್ಲಿ ಹಾಗೂ ನಿಮ್ಮಿಂದ ಯಾವುದೇ ಥರ್ಡ್ ಪಾರ್ಟಿಗಳಿಗೆ ಹಾನಿಯಾದಲ್ಲಿ, ಆ ಎಲ್ಲಾ ವೆಚ್ಚಗಳನ್ನು ಕವರ್ ಮಾಡುತ್ತದೆ. ಫೈನಾನ್ಸಿಯಲ್ ಲಯಬಿಲಿಟಿಯು ನಿಮಗೆ ಅಗತ್ಯವಿರುವಾಗ ನಿಮ್ಮ ಹಣಕಾಸಿನ ಸಪೋರ್ಟ್ ಸಿಸ್ಟಮ್ ಆಗಬಹುದು.
ಓನ್ ಡ್ಯಾಮೇಜ್ ಕಾರ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ.
ಕಾಂಪ್ರೆಹೆನ್ಸಿವ್ ಕವರ್ನೊಂದಿಗೆ ಹೆಚ್ಚುವರಿ ರಕ್ಷಣೆ - ಇದು ನಿಮ್ಮ ಎಲ್ಲಾ ಖರ್ಚುಗಳನ್ನು ಕವರ್ ಮಾಡುವುದರಿಂದ ನಿಮ್ಮ ಸಂಪೂರ್ಣ ಶೀಲ್ಡ್ ಆಗಿರಬಹುದು; ಹೆಸರೇ ಸೂಚಿಸುವಂತೆ, ಅಪಘಾತಗಳು, ವಿಧ್ವಂಸಕತೆ, ಬೆಂಕಿ, ಕಳ್ಳತನ, ಪ್ರಕೃತಿ ವಿಕೋಪಗಳಂತಹ ನಿಮ್ಮ ನಿಯಂತ್ರಣಕ್ಕೆ ಮೀರಿದ ಅಂಶಗಳಿಂದ ಉಂಟಾಗುವ ಎಲ್ಲಾ ಹಾನಿಗಳಿಗೆ ಕಾಂಪ್ರೆಹೆನ್ಸಿವ್ ಕವರ್ ಕವರೇಜ್ ಅನ್ನು ನೀಡುತ್ತದೆ. ಉದಾಹರಣೆಗೆ, ಆಕಸ್ಮಿಕವಾಗಿ ನಿಮ್ಮ ಹೊಚ್ಚಹೊಸ ಕ್ಯಾಮ್ರಿಗೆ ಒಂದು ಆಟೋ ಡಿಕ್ಕಿ ಹೊಡೆದರೆ ಮತ್ತು ನಿಮ್ಮ ಕಾರಿನ ಹೆಡ್ಲೈಟ್ ಮುರಿದುಹೋದರೆ, ಆ ಸಮಯದಲ್ಲಿ ನಿಮ್ಮ ಜೇಬನ್ನು ಉಳಿಸಲು ನಿಮ್ಮ ಕ್ಯಾಮ್ರಿ ಕಾರ್ ಇನ್ಶೂರೆನ್ಸ್ ನಿಮ್ಮ ಏಕೈಕ ರಕ್ಷಕನಾಗಬಹುದು.
ಕಾನೂನುಬದ್ಧವಾದ ಕಂಪ್ಲೈಂಟ್ - ನಿಮ್ಮ ಕ್ಯಾಮ್ರಿ ಕಾರ್ ಇನ್ಶೂರೆನ್ಸ್ ಇಲ್ಲದೆ ನಿಮ್ಮ ಕ್ಯಾಮ್ರಿಯನ್ನು ಡ್ರೈವ್ ಮಾಡುವುದರಿಂದ, ಅದು ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು. ಭಾರತದ ಅನೇಕ ಭಾಗಗಳಲ್ಲಿ ಕಾರ್ ಇನ್ಶೂರೆನ್ಸ್ ಇಲ್ಲದೆ ವಾಹನ ಚಲಾಯಿಸುವುದು ಕಾನೂನುಬಾಹಿರವಾಗಿದೆ ಮತ್ತು ಅದಕ್ಕಾಗಿ ₹2000 ವರೆಗಿನ ಭಾರೀ ಪೆನಲ್ಟಿಯನ್ನು ವಿಧಿಸಬಹುದು ಹಾಗೂ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಅನ್ನು ಅಮಾನತುಗೊಳಿಸಬಹುದು ಅಥವಾ ಜೈಲಿಗೆ ಹೋಗಬೇಕಾಗಬಹುದು.
ಥರ್ಡ್-ಪಾರ್ಟಿ ಲಯಬಿಲಿಟಿಯನ್ನು ಕವರ್ ಮಾಡುತ್ತದೆ - ಯಾವುದಾದರೂ ಅನಿರೀಕ್ಷಿತ ಅಪಘಾತದಲ್ಲಿ ಅಥವಾ ದುರದೃಷ್ಟಕರ ಸಂದರ್ಭಗಳಲ್ಲಿ, ನಿಮ್ಮಿಂದ ಯಾವುದೇ ಥರ್ಡ್ ಪಾರ್ಟಿಗೆ ಅಥವಾ ಅವರ ಪ್ರಾಪರ್ಟಿಗೆ ಹಾನಿಯಾದರೆ ಮತ್ತು ಆ ಹಾನಿಗೆ ನೀವು ಜವಾಬ್ದಾರರಾಗಿದ್ದರೆ, ಈ ರೀತಿಯ ಇನ್ಶೂರೆನ್ಸ್ ನಿಮಗೆ ಕವರೇಜ್ ಅನ್ನು ನೀಡುತ್ತದೆ. ಅಂತಹ ವೆಚ್ಚಗಳು ಹೆಚ್ಚಾಗಿ ಹಠಾತ್ ಆಗಿ ಬರುತ್ತವೆ ಮತ್ತು ಅನಿರೀಕ್ಷಿತವಾಗಿರುತ್ತವೆ, ಆದ್ದರಿಂದ ನಿಮ್ಮ ಟೊಯೋಟಾ ಕ್ಯಾಮ್ರಿ ಕಾರ್ ಇನ್ಶೂರೆನ್ಸ್ ನಿಮ್ಮನ್ನು ಮತ್ತು ನಿಮ್ಮ ಜೇಬನ್ನು ಉಳಿಸುವ ಸರಿಯಾದ ಅಸ್ತ್ರವಾಗಿದೆ.