ನಗದುರಹಿತ ಕಾರು ಇನ್ಶೂರೆನ್ಸ್

ಡಿಜಿಟ್ ನ ಕಾರು ಇನ್ಶೂರೆನ್ಸ್ 6000+ ನಗದುರಹಿತ ಗ್ಯಾರೇಜ್ ಗಳೊಂದಿಗೆ ಬರುತ್ತದೆ

Third-party premium has changed from 1st June. Renew now

ನಗದುರಹಿತ ಕಾರು ಇನ್ಶೂರೆನ್ಸ್ ಎಂದರೇನು?

ಒಂದು ನಗದುರಹಿತ ಇನ್ಶೂರೆನ್ಸ್ ಪಾಲಿಸಿ ನಿಮಗೆ ಕಾರು ಇನ್ಶೂರೆನ್ಸ್ ಪಾಲಿಸಿಯ ಎಲ್ಲಾ ಲಾಭಗಳು, ಎಂದರೆ, ಅಪಘಾತದ ನಂತರ ತನ್ನ ಜೇಬಿನಿಂದ ಹಣ ಖರ್ಚು ಮಾಡದೆಯೇ ಕಾರು ರಿಪೇರಿ ಮಾಡಿಸುವುದು, ಇತ್ಯಾದಿಗಳಿಗೆ ಅನುಮತಿ ನೀಡುತ್ತದೆ.

ಇಂತಹ ರಿಪೇರಿ ಗಳ ಬಿಲ್ಲನ್ನು ನೇರವಾಗಿ ನಮಗೆ(ಇನ್ಶೂರರ್ ಗೆ!) ಕಳಿಸಲಾಗುತ್ತದೆ ಹಾಗೂ ನಾವು ಗ್ಯಾರೇಜ್ ನವರೊಂದಿಗೆ ಬಿಲ್ ಅನ್ನು ಸೆಟ್ಲ್ ಮಾಡುತ್ತೇವೆ. ಆದ್ದರಿಂದ ನೀವು  ನಮ್ಮ ಕ್ಯಾಷ್ಲೆಸ್ ನೆಟ್ವರ್ಕ್ ನ ಭಾಗವಾದ ಯಾವುದೇ ಗ್ಯಾರೇಜ್ ಗೆ ಹೋಗಿ, ಯಾವ ಹಣವನ್ನು ಖರ್ಚು ಮಾಡದೆಯೇ(ನಿಮ್ಮ ಕಡಿತಗಳು ಹಾಗೂ ಡಿಪ್ರಿಸಿಯೇಷನ್ ಅನ್ನು ಹೊರತುಪಡಿಸಿ) ನಿಮ್ಮ ಕಾರಿನ ರಿಪೇರಿ ಮಾಡಿಸಬಹುದು.

ಸಾಂಪ್ರದಾಯಿಕ ಮರುಪಾವತಿ ಕ್ಲೈಮ್ ಗಳಿಗೆ ಹೋಲಿಸಿದರೆ, ನಗದುರಹಿತ ಕ್ಲೈಮ್ ಅತೀ ಶೀಘ್ರ, ಸರಳ ಹಾಗೂ ಗೊಂದಲ ರಹಿತವಾಗಿರುತ್ತದೆ. ಡಿಜಿಟ್ ನಲ್ಲಿ, ನಾವು 6 ತಿಂಗಳುಗಳ ವಾರಂಟಿಯ ಜೊತೆ ಮನೆಬಾಗಿಲಿನಿಂದ ಪಿಕಪ್ ಡ್ರಾಪ್ ಅನ್ನೂ ನೀಡುತ್ತೇವೆ!

ಆದರೆ ನೆನಪಿಡಿ, ಇದು ನಿಮ್ಮ ಕಾರು ಇನ್ಶೂರೆನ್ಸ್ ನಲ್ಲಿ ಕವರ್ ಆದ ಲಾಭಗಳಿಗೆ ಮಾತ್ರ ಅನ್ವಯಿಸುತ್ತದೆ. ಆದ್ದರಿಂದ, ಆಗಿರುವ ಹಾನಿ ನಿಮ್ಮ ಕಾರು ಇನ್ಶೂರೆನ್ಸ್ ನಲ್ಲಿ ಕವರ್ ಆಗದೇ ಇದ್ದರೆ, ನೀವು ನಿಮ್ಮ ಸ್ವಂತ  ಜೇಬಿನಿಂದಲೇ ಪಾವತಿ ಮಾಡಬೇಕಾಗುತ್ತದೆ. ಉದಾಹರಣೆಗೆ, ನಿಮ್ಮ ಎಂಜಿನಿಗೆ ನೀರಿನಿಂದ ಆದ ಹಾನಿಯನ್ನು ಹಲವು ಮೂಲ ಪಾಲಿಸಿಗಳು ಕವರ್ ಮಾಡುವುದಿಲ್ಲ.

ಇದರ ಜೊತೆ, ಡಿಡಕ್ಟಿಬಲ್ಸ್ ಹಾಗೂ ಡಿಪ್ರಿಸಿಯೇಷನ್ ರೂಪದಲ್ಲಿ ಬಿಲ್ಲಿನ ಒಂದು ಚಿಕ್ಕ ಭಾಗವನ್ನು ಪಾವತಿಸಬೇಕಾಗುತ್ತದೆ, ನಿಮ್ಮ ಕಾರು ಇನ್ಶೂರೆನ್ಸ್ ಪಾಲಿಸಿಯ ಷರತ್ತು ಹಾಗೂ ನಿಯಮಗಳ ಪ್ರಕಾರ.

ನಗದುರಹಿತ ಕಾರು ಇನ್ಶೂರೆನ್ಸ್ ಪಾಲಿಸಿ ಹೇಗೆ ಕೆಲಸ ಮಾಡುತ್ತದೆ?

ನಗದುರಹಿತ ಕಾರು ಇನ್ಶೂರೆನ್ಸ್ ಹೇಗೆ ಕೆಲಸ ಮಾಡುತ್ತದೆ ಎಂದರೆ, ಇನ್ಶೂರರ್ ಗೆ ಭಾರತದಾದ್ಯಂತ ಗ್ಯಾರೇಜ್ ಗಳ ಜೊತೆ ಟೈ ಅಪ್(ಸಹಯೋಗ) ಇರುತ್ತದೆ. ಇಂತಹ ಅಧಿಕೃತ ಗ್ಯಾರೇಜ್ ಗಳನ್ನು ಗ್ಯಾರೇಜ್ ಗಳ ನೆಟ್ವರ್ಕ್ ಎಂದು ಕರೆಯಲಾಗುತ್ತದೆ ಹಾಗೂ ಇವುಗಳು ಅಪಘಾತದ ಸಂದರ್ಭದಲ್ಲಿ ನೀವು ಹಾನಿಗಳಿಗಾಗಿ ಕ್ಲೈಮ್ ಮಾಡಿದರೆ ನಿಮಗೆ ನಗದುರಹಿತ ಕಾರು ರಿಪೇರಿ ಸೇವೆಗಳನ್ನು ಒದಗಿಸುತ್ತಾರೆ.

  • ಅಪಘಾತದ ಹಾನಿಯ ದುರಾದೃಷ್ಟಕರ ಸಂದರ್ಭದಲ್ಲಿ ನೀವು ಮಾಡಬೇಕಾಗುವುದು ಇಷ್ಟೇ, ನಿಮ್ಮ ಹತ್ತಿರವಿರುವ ಗ್ಯಾರೇಜ್ ಅನ್ನು ಹುಡುಕಿ. ಡಿಜಿಟ್ ನಲ್ಲಿ, ಇದನ್ನೂ ಸಹ ಮನೆಬಾಗಿಲಿನ ಪಿಕ್ ಅಪ್ ಹಾಗೂ ಡ್ರಾಪ್ ನೊಂದಿಗೆ ಕವರ್ ಮಾಡಲಾಗುತ್ತದೆ.
  • ನಿಮ್ಮ ಇನ್ಶೂರರ್ ಗೆ ತಿಳಿಸಿ ಆದ ಮೇಲೆ, ನಿಮ್ಮ ಕಾರನ್ನು ರಿಪೇರಿ ಮಾಡುವ ಹಾಗೂ ನಿಮ್ಮ ನಗದುರಹಿತ ಕ್ಲೈಮ್ ಇತ್ಯರ್ಥದ ಪ್ರಕ್ರಿಯೆಯನ್ನು ಆರಂಭಿಸುವ ಕೆಲಸವನ್ನು ನಿಮ್ಮ ನೆಟ್ವರ್ಕ್ ಗ್ಯಾರೇಜ್ ನ ಮೇಲೆ ಬಿಟ್ಟುಬಿಡಬಹುದು.
  • ರಿಪೇರಿಗಳೆಲ್ಲಾ ಆದ ಮೇಲೆ, ಬಿಲ್ಲ್ ಅನ್ನು ನೇರವಾಗಿ ಇನ್ಶೂರರ್ ಗೆ ಕಳಿಸಲಾಗುತ್ತದೆ.
  • ಬಿಲ್ಲಿನ ಹೆಚ್ಚಿನ ಭಾಗವನ್ನು ಇನ್ಶೂರರ್ ಪಾವತಿ ಮಾಡಿದರೂ, ಯಾವುದೇ ಕಡಿತಗಳು ಹಾಗೂ ಬದಲಿ ಮಾಡಬೇಕಾದ ಭಾಗಗಳ ಡಿಪ್ರಿಸಿಯೇಷನ್ ವೆಚ್ಚಗಳನ್ನು ನೀವೇ ನೀಡಬೇಕಾಗುತ್ತದೆ.
  • ಆದರೆ ನೀವು ಸೊನ್ನೆ-ಡಿಪ್ರಿಸಿಯೇಷನ್ ಆಡ್-ಆನ್ ಕವರ್ ಅನ್ನೂ ಆಯ್ಕೆ ಮಾಡಿದ್ದರೆ ಡಿಪ್ರಿಸಿಯೇಷನ್ ದರ ಪಾವತಿಯನ್ನು ತಪ್ಪಿಸಬಹುದು.

ನಗದುರಹಿತ/ನೆಟ್ವರ್ಕ್ ಗ್ಯಾರೇಜ್ ಎಂದರೇನು?

ಕಾರನ್ನು ರಿಪೇರಿಗೆ, ಇನ್ಶೂರರ್ ನ ನೆಟ್ವರ್ಕ್ ನ ಭಾಗವಾದ, ಗ್ಯಾರೇಜ್ ಗೆ ಕಳಿಸಿದರೆ ಮಾತ್ರ ನಗದುರಹಿತ ಕಾರು ಇನ್ಶೂರೆನ್ಸ್ ಕೆಲಸ ಮಾಡುತ್ತದೆ.ನೆಟ್ವರ್ಕ್ ಗ್ಯಾರೇಜ್ ಎಂದರೆ, ಇದರಲ್ಲಿ ತನ್ನ ಎಲ್ಲಾ ಪಾಲಿಸಿದಾರರಿಗೆ ನಗದುರಹಿತ ಕಾರು ರಿಪೇರಿ ಸೇವೆಗಳನ್ನು ಒದಗಿಸಬೇಕೆಂದು ಇನ್ಶೂರರ್ ಮತ್ತು ಗ್ಯಾರೇಜ್ ನಡುವೆ ಒಪ್ಪಂದ ಇರುತ್ತದೆ.

ನಗದುರಹಿತ ಗ್ಯಾರೇಜ್ ಸೌಲಭ್ಯಕ್ಕೆ ಪ್ರವೇಶ ಪಡೆಯಬೇಕೆಂದರೆ, ನೀವು ಕೇವಲ ಒಂದು ಒಳ್ಳೆಯ ಇನ್ಶೂರೆನ್ಸ್ ಕಂಪನಿಯಿಂದ ಕಾಂಪ್ರೆಹೆನ್ಸಿವ್ ಕಾರು ಇನ್ಶೂರೆನ್ಸ್ ಪಾಲಿಸಿಯನ್ನು  ಖರೀದಿಸಬೇಕು.

ಡಿಜಿಟ್ ನಲ್ಲಿ, ನಾವು ಇದನ್ನು ಮನೆಬಾಗಿಲಿಗೆ ಪಿಕಪ್ ಡ್ರಾಪ್ ಜೊತೆ ರಿಪೇರಿಗಳ ಮೇಲೆ 6 ತಿಂಗಳ ವಾರಂಟಿಯನ್ನೂ ನೀಡುತ್ತೇವೆ.

ಇನ್ಶೂರೆನ್ಸ್ ಖರೀದಿಸುವ ಮೊದಲು, ಇನ್ಶೂರರ್ ಒದಗಿಸಿದ ನೆಟ್ವರ್ಕ್ ಗ್ಯಾರೇಜ್ ಗಳ ಪಟ್ಟಿಯನ್ನು ಪರಿಶೀಲಿಸಿ  ಗ್ಯಾರೇಜ್ ನಿಮ್ಮ ಹತ್ತಿರ ಇದೆಯೋ ಎಂದು ಚೆಕ್ ಮಾಡಿಕೊಌ. ನಂತರ ಆರಾಮವಾಗಿ ಕುಳಿತುಕೊಂಡು, ನಮಗೆ ಎಲ್ಲವನ್ನೂ ನಿರ್ವಹಿಸಲು ಬಿಡಿ.

ಹತ್ತಿರದಲ್ಲಿ ನಗದುರಹಿತ ಗ್ಯಾರೇಜ್ ಇಲ್ಲದಿದ್ದರೆ ಏನು ಮಾಡಬೇಕು?

ಹತ್ತಿರದಲ್ಲಿ ನಗದುರಹಿತ ಗ್ಯಾರೇಜ್ ಇಲ್ಲದಿದ್ದರೆ, ಉದಾಹರಣೆ ನೀವು ದೂರದ ಪ್ರದೇಶಕ್ಕೆ ಪ್ರಯಾಣ ಬೆಳೆಸಿದ್ದರೆ, ಡಿಜಿಟ್ ರಿಪೇರಿಯ 80% ಪಾವತಿಯನ್ನು ಮುಂಗಡವಾಗಿ ವರ್ಕ್ ಶಾಪಿಗೇ ಮಾಡುತ್ತದೆ ಹಾಗೂ ಇದರಿಂದ ದುರಸ್ತಿ ಕಾರ್ಯವು ಸರಿಯಾದ ಸಮಯದಲ್ಲಿ ಆರಂಭವಾಗುತ್ತದೆ.

ಕಾರ್ಯ ಆರಂಭವಾದ ಮೇಲೆ, ನಾವು ವರ್ಕ್ ಶಾಪಿಗೆ ಉಳಿದ ಪಾವತಿಯನ್ನು ಮಾಡುತ್ತೇವೆ, ಕಡಿತಗಳು ಹಾಗೂ ಡಿಪ್ರಿಸಿಯೇಷನ್ ಅನ್ನು ಹೊರತುಪಡಿಸಿ, ಆದರೆ ಇನ್ವಾಯ್ಸ್(ಬೆಲೆ ಪಟ್ಟಿ) ನಮ್ಮ ಹೆಸರಿನಲ್ಲಿದ್ದರೆ ಮಾತ್ರ.

ಡಿಜಿಟ್ ನ ನಗದುರಹಿತ ಗ್ಯಾರೇಜ್ ಗಳು

6000+ ನೆಟ್ವರ್ಕ್ ಗ್ಯಾರೇಜ್ ಗಳ ಪಟ್ಟಿ >

ನೀವು ಡಿಜಿಟ್ ನ ನಗದುರಹಿತ ಕಾರು ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ಡಿಜಿಟ್ ನೊಂದಿಗೆ ನಗದುರಹಿತ ಕಾರು ಇನ್ಶೂರೆನ್ಸ್ ಕ್ಲೈಮ್ ಮಾಡುವುದು ಹೇಗೆ?

ನಗದುರಹಿತ ಕಾರು ಇನ್ಶೂರೆನ್ಸ್ ಪಾಲಿಸಿಗಾಗಿ ಕ್ಲೈಮ್ ಮಾಡುವ ಪ್ರಕ್ರಿಯೆ ತುಂಬಾ ಸರಳವಾಗಿದೆ. ನೀವು ಕೇವಲ ಮುಂಚಿತವಾಗಿಯೇ ನಿಮ್ಮ ಇನ್ಶೂರೆನ್ಸ್ ಕಂಪನಿಯ ಜೊತೆ ಸಂಯೋಜನೆ ಹೊಂದಿರುವ ಸೇವೆಗಳ ಪಟ್ಟಿ ಹಾಗೂ ದುರಸ್ತಿ ಕೇಂದ್ರಗಳ ಬಗ್ಗೆ ಅರಿತಿರಬೇಕು.

  • ಹಂತ 1 - ಕೇವಲ 1800-258-5956. ಗೆ ಕರೆ ಮಾಡಿ.ಯಾವುದೇ ಫಾರ್ಮ್ ಗಳನ್ನು ತುಂಬಿಸಬೇಕಾಗಿಲ್ಲ!
  • ಹಂತ 2 - ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ನಿಮಗೆ ಸ್ವಪರಿಶೀಲನೆಯ ಲಿಂಕ್ ಕಳಿಸಲಾಗುವುದು. ಮಾರ್ಗದರ್ಶನ ಇರುವ ಹಂತ ಹಂತದ ಪ್ರಕ್ರಿಯೆಯೊಂದಿಗೆ ನಿಮ್ಮ ಸ್ಮಾರ್ಟ್ ಫೋನಿನಿಂದ ಕಾರಿಗಾದ ಹಾನಿಯ ಚಿತ್ರ ಕ್ಲಿಕ್ ಮಾಡಿ.
  • ಹಂತ 3 - ನಿಮ್ಮ ಆಯ್ಕೆ ಪ್ರಕಾರ ರಿಪೇರಿಯ ರೀತಿಯನ್ನು ನೀವು ಆಯ್ದುಕೊಌ ಅಂದರೆ, ಮರುಪಾವತಿ ಅಥವಾ ನಮ್ಮ ಗ್ಯಾರೇಜ್ ನೆಟ್ವರ್ಕ್ ನಿಂದ ನಗದುರಹಿತ ಸೇವೆ.

ನಿಮ್ಮ ಆಯ್ಕೆಯ ಯಾವುದೇ ಗ್ಯಾರೇಜ್ ನೆಟ್ವರ್ಕ್ ಗಳಲ್ಲಿ ಒಂದರೊಳಗಡೆ ಬಂದು, ನೀವು ನಿಮ್ಮ ನಗದುರಹಿತ ಕಾರು ಇನ್ಶೂರೆನ್ಸ್ ಪಾಲಿಸಿ ವಿವರಗಳನ್ನು ನೀಡಬಹುದು.

ಅಲ್ಲಿಂದ ನಮ್ಮ ಗ್ಯಾರೇಜ್ ನೆಟ್ವರ್ಕ್ ಗಳು ಎಲ್ಲವನ್ನೂ ನೋಡಿಕೊಳ್ಳುತ್ತವೆ. ನಿಮ್ಮ ಕಾರಿಗಾದ ಹಾನಿಯ ಪ್ರಮಾಣದಿಂದ ಹಿಡಿದು ಅದಕ್ಕೆ ತಗಲುವ ರಿಪೇರಿಯ ವೆಚ್ಚದ ಮೌಲ್ಯಮಾಪನ, ಬಿಲ್ಲನ್ನು ಇನ್ಶೂರೆನ್ಸ್ ಕಂಪನಿಗೆ ಕಳಿಸುವುದು, ಖಂಡಿತವಾಗಿಯೂ ನಿಮ್ಮ ಕಸ್ಟಮೈಜ್ಡ್ ಕಾರು ಇನ್ಶೂರೆನ್ಸ್ ಪಾಲಿಸಿಯ ಷರತ್ತು ಹಾಗೂ ನಿಯಮಗಳ ಪ್ರಕಾರ!.

ನಗದುರಹಿತ ಕಾರು ಕ್ಲೈಮ್ ನಲ್ಲಿ ಗ್ರಾಹಕರು ಭರಿಸಬೇಕಾದ ವೆಚ್ಚ ಎಷ್ಟಾಗಿರುತ್ತದೆ?

ನಗದುರಹಿತ ಕ್ಲೈಮ್ ಗಳು 100% ನಗದುರಹಿತವಾಗಿರುವುದಿಲ್ಲ ಎಂಬುವುದು ಇಲ್ಲಿ ಗಮನಿಸಬೇಕಾದ ವಿಷಯವಾಗಿದೆ. ಡಿಡಕ್ಟಿಬಲ್ಸ್(ಕಡಿತಗಳು) ಹಾಗೂ ಡಿಪ್ರಿಸಿಯೇಷನ್ ರೂಪದಲ್ಲಿ ನೀವು ಕ್ಲೈಮ್ ಮೊತ್ತದ ಸಣ್ಣ ಭಾಗವನ್ನು ಪಾವತಿಸಬೇಕಾಗುತ್ತದೆ, ಯಾಕೆಂದರೆ ಇವುಗಳನ್ನು ನಿಮ್ಮ ಇನ್ಶೂರರ್ ಕವರ್ ಮಾಡುವುದಿಲ್ಲ.

ಡಿಪ್ರಿಸಿಯೇಷನ್

ಡಿಪ್ರಿಸಿಯೇಷನ್ ಎಂದರೆ ಹಲವು ವರ್ಷಗಳ ಬಳಕೆಯಿಂದಾಗಿ ನಿಮ್ಮ ಕಾರು ಹಾಗೂ ಅದರ ಭಾಗಗಳಲ್ಲಿ ಉಂಟಾದ ಸವೆತದ ಕಾರಣ ನಿಮ್ಮ ಕಾರಿನ ಮೌಲ್ಯದ ಕುಸಿತ.

ವಾಸ್ತವದಲ್ಲಿ, ನಿಮ್ಮ ಹೊಚ್ಚಹೊಸ ಕಾರು ಶೋರೂಂ ನಿಂದ ಹೊರ ಬಂದ ಮರುಕ್ಷಣವೇ, ಅದರ ಮೌಲ್ಯದಲ್ಲಿ 5%! ಡಿಪ್ರಿಯೇಷನ್ ಆಗಿದೆ ಎನ್ನಲಾಗುತ್ತದೆ!

ನೀವು ಕ್ಲೈಮ್ ಫೈಲ್ ಮಾಡಿದಾಗ, ಇನ್ಶೂರರ್ ಸಾಮಾನ್ಯವಾಗಿ ಪಾವತಿ ಮಾಡುವ ಮುಂಚೆ ಡಿಪ್ರಿಸಿಯೇಷನ್ ದರವನ್ನು ಕಡಿತ ಮಾಡುತ್ತಾರೆ. 

ಕಾರು ಇನ್ಶೂರೆನ್ಸ್ ನಲ್ಲಿ ಎರಡು ರೀತಿಯ ಡಿಪ್ರಿಸಿಯೇಷನ್ ಗಳಿವೆ -ಸಂಪೂರ್ಣ ಕಾರಿನ ಡಿಪ್ರಿಸಿಯೇಷನ್ ಹಾಗೂ ಕಾರಿನ ಬಿಡಿ ಭಾಗಗಳ ಮತ್ತು ಇತರ ವಿವಿಧ ಭಾಗಗಳ ಡಿಪ್ರಿಸಿಯೇಷನ್. ಡಿಪ್ರಿಸಿಯೇಷನ್ ಅನ್ನು ಹೇಗೆ ಕ್ಯಾಲ್ಕುಲೇಟ್ ಮಾಡಬೇಕು ಎನ್ನುವುದಕ್ಕೆ ಐ ಆರ್ ಡಿ ಎ ಐ ಕೆಲವು ನಿಯಮಗಳನ್ನು ಮುಂದಿಟ್ಟಿದೆ.

ಭಾಗಶಃ ಹಾನಿಯಾಗಿರುವ ಎಂದರೆ ಸಣ್ಣ ಪುಟ್ಟ ವಾಹನ ಹಾನಿಯಾದ ಸಂದರ್ಭದಲ್ಲಿ, ಕ್ಲೈಮ್ ಸಮಯದಲ್ಲಿ ಕಾರಿನ ಭಾಗಗಳ ಡಿಪ್ರಿಸಿಯೇಷನ್ ಅನ್ನು ಪರಿಗಣಿಸಲಾಗುವುದಿಲ್ಲ. ಈ ಕೆಳಗಡೆ ನೀಡಿದಂತೆ ಕಾರಿನ ಭಾಗಗಳ ಡಿಪ್ರಿಸಿಯೇಷನ್ ದರ ವಿಭಿನ್ನವಾಗಿರುತ್ತದೆ:

  • ಹೆಚ್ಚು ಸವೆತವಿರುವ ಭಾಗಗಳು - ರಬ್ಬರ್ ಭಾಗಗಳು, ಪ್ಲಾಸ್ಟಿಕ್ ಭಾಗಗಳು, ಬ್ಯಾಟರಿ, ಟ್ಯೂಬ್ಸ್ ಮತ್ತು ಟಯರ್ ಗಳು, ಇತ್ಯಾದಿ - 50%
  • ಫೈಬರ್ ಗ್ಲಾಸ್ ಭಾಗಗಳು - 30%
  • ಮೆಟ್ಯಾಲಿಕ್ ಭಾಗಗಳು - 0% to 50%, ವಾಹನದ ವಯಸ್ಸನ್ನು ಅವಲಂಬಿಸಿದೆ.

ಸಂಪೂರ್ಣ ನಷ್ಟದ ಸಂದರ್ಭ ಎದುರಾದಲ್ಲಿ, ಉದಾಹರಣೆಗೆ ಕಳವು, ಆಗ ವಾಹನದ ಡಿಪ್ರಿಸಿಯೇಷನ್ ನ  ಮಹತ್ವ ತಿಳಿಯುತ್ತದೆ. ಇದು ನಿಮ್ಮ ಕಾರಿನ ವಯಸ್ಸಿನ ಮೇಲೆ ಆಧರಿತವಾಗಿದೆ.

(ಡಿಡಕ್ಟಿಬಲ್ಸ್) ಕಡಿತಗಳು

ಡಿಡಕ್ಟಿಬಲ್ಸ್ ಎಂದರೆ ಇನ್ಶೂರರ್ ಉಳಿದ ಪಾವತಿ ಮಾಡುವ ಮುಂಚೆ ನೀವು ನಿಮ್ಮ ಜೇಬಿನಿಂದಲೇ ಪಾವತಿಸಬೇಕಾದ ಇನ್ಶೂರ್ಡ್ ವೆಚ್ಚದ ಒಂದು ಭಾಗವಾಗಿದೆ.

ಕಾರು ಇನ್ಶೂರೆನ್ಸ್ ನಲ್ಲಿ, ಹೆಚ್ಚಾಗಿ ಕ್ಲೈಮ್ ಆಧಾರದ ಪ್ರಕಾರ ಈ ಡಿಡಕ್ಟಿಬಲ್ ಗಳು ಅನ್ವಯಿಸುತ್ತವೆ. ಅಂದರೆ, ನೀವು ₹15,000 ವೆಚ್ಚದ ಹಾನಿಗೆ ಕ್ಲೈಮ್ ಫೈಲ್ ಮಾಡಿದರೆ ಹಾಗೂ ಡಿಡಕ್ಟಿಬಲ್ ಗಳು ₹1,000 ಆಗಿದ್ದರೆ  - ಇನ್ಶೂರರ್ ನಿಮ್ಮ ಕಾರು ರಿಪೇರಿಗಾಗಿ ₹14,000 ಪಾವತಿಸುತ್ತಾರೆ.

ಡಿಡಕ್ಟಿಬಲ್ ಗಳು ಎರಡು ಪ್ರಕಾರದ್ದಾಗಿರುತ್ತವೆ -ಕಂಪಲ್ಸರಿ ಡಿಡಕ್ಟಿಬಲ್ಸ್ ಹಾಗೂ ವಾಲಂಟರಿ ಡಿಡಕ್ಟಿಬಲ್ಸ್.

ನೀವು ಕಾರು ಇನ್ಶೂರೆನ್ಸ್ ಪಾಲಿಸಿ ಕೊಳ್ಳುವಾಗಲೇ ಎಷ್ಟು ಪಾವತಿಸಲು ಬಯಸುತ್ತೀರಿ ಎಂದು ನಿರ್ಧರಿಸಬೇಕಾಗುತ್ತದೆ, ಹಾಗೂ ಇದನ್ನೇ ಪ್ರತೀ ಕ್ಲೈಮ್ ಗೆ ಅನ್ವಯಿಸಲಾಗುತ್ತದೆ.

ನಿಮ್ಮ ಇನ್ಶೂರರ್, ಒಟ್ಟು ವಾಲಂಟರಿ ಮತ್ತು ಕಡ್ಡಾಯ ಡಿಡಕ್ಟಿಬಲ್ ಕ್ಕಿಂತ ಹೆಚ್ಚಾಗಿರುವ ಕ್ಲೈಮ್ ನ ಒಂದು ಭಾಗವನ್ನಷ್ಟೇ ಪಾವತಿ ಮಾಡುತ್ತಾರೆ.

ಕಂಪಲ್ಸರಿ(ಕಡ್ಡಾಯ)ಡಿಡಕ್ಟಿಬಲ್ - ಈ ತರಹದ ಡಿಡಕ್ಟಿಬಲ್ ನಲ್ಲಿ, ಪಾಲಿಸಿದಾರನಿಗೆ ಮೋಟಾರ್ ಇನ್ಶೂರೆನ್ಸ್ ಕ್ಲೈಮ್ ನ ಒಂದು ಭಾಗವನ್ನು ಪಾವತಿಸಲೇಬೇಕಾಗುತ್ತದೆ. 

ಐ ಆರ್ ಡಿ ಎ ಐ ನಿಭಂದನೆಗಳ ಪ್ರಕಾರ, ಕಾರು ಇನ್ಶೂರೆನ್ಸ್ ನ ಈ ಕಡ್ದಾಯ ಡಿಡಕ್ಟಿಬಲ್ ನ ಫಿಕ್ಸ್ಡ್ ಮೊತ್ತವನ್ನು ಕಾರು ಎಂಜಿನ್ ನ ಕ್ಯೂಬಿಕ್ ಸಾಮರ್ಥ್ಯದ ಮೇಲೆ ಆಧರಿಸಲಾಗುತ್ತದೆ. ಪ್ರಸ್ತುತವಾಗಿ, ಇದನ್ನು ಹೀಗೆ ಸೆಟ್ ಮಾಡಲಾಗಿದೆ : 

  •  1,500 ಸಿಸಿ ವರೆಗೆ - ರೂ.1,000 
  •  1,500 ಸಿಸಿ ಕ್ಕಿಂತ ಹೆಚ್ಚು - ರೂ.2,000

ವಾಲಂಟರಿ(ಸ್ವ ಇಚ್ಛೆಯ) ಡಿಡಕ್ಟಿಬಲ್ - ವಾಲಂಟರಿ ಡಿಡಕ್ಟಿಬಲ್ ಎಂದರೆ ಸಾಮನ್ಯವಾಗಿ ಇನ್ಶೂರರ್ ಪಾವತಿ ಮಾಡಬಹುದಾದ ಮೊತ್ತವನ್ನು, ನೀವೇ ನಿಮ್ಮ ಜೇಬಿನಿಂದ ಪಾವತಿಸುವ ಆಯ್ಕೆ ಮಾಡುತ್ತೀರಿ.

ನೀವು ನಿಮ್ಮ ಇನ್ಶೂರೆನ್ಸ್ ಕವರ್ ನಲ್ಲಿ ವಾಲಂಟರಿ ಡಿಡಕ್ಟಿಬಲ್ ನ ಆಯ್ಕೆ ಮಾಡಿದರೆ, ಇದು ನಿಮ್ಮ ಕಾರು ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕಡಿಮೆಗೊಳುಸುತ್ತದೆ, ಯಾಕೆಂದರೆ ಇದರಿಂದ ಇನ್ಶೂರರ್ ಗೆ ಅಪಾಯ ಕಡಿಮೆ ಇರುತ್ತದೆ.

ಆದರೆ, ಇದರರ್ಥ ಏನಾಗುತ್ತದೆಂದರೆ ನಿಮ್ಮ ಕಾರಿಗೆ ಯಾವುದೇ ಹಾನಿಯಾದ ಸಂದರ್ಭದಲ್ಲಿ ಹೆಚ್ಚು ಹಣವನ್ನು ನೀವೇ ಪಾವತಿಸಬೇಕಾಗುತ್ತದೆ( ಇದು ನಿಮ್ಮ ಇತರ ಖರ್ಚುಗಳ ಮೇಲೆ ಪರಿಣಾಮ ಬೀರಬಹುದು) ಆದ್ದರಿಂದ ಇದನ್ನು ಪರಿಗಣಿಸಲು ಮರೆಯದಿರಿ.

ನಗದುರಹಿತ ಕ್ಲೈಮ್ ಮರುಪಾವತಿಗಿಂತ ಉತ್ತಮವೇ?

ನಿಮಗೆ ನಗದುರಹಿತ ಕ್ಲೈಮ್ ಎಂದರೇನು ಎಂದು ತಿಳಿದಮೇಲೆ, ನೀವು ಬಹುಶಃ ಯಾವುದು ಉತ್ತಮ ಎಂದು ಯೋಚಿಸುತ್ತಿದ್ದೀರಿ - ನಗದುರಹಿತ ಕ್ಲೈಮ್ ಅಥವಾ ಮರುಪಾವತಿ?

ಸರಿ, ಈ ಪ್ರಶ್ನೆಯನ್ನು ಉತ್ತರಿಸುವ ಮುಂಚೆ ಮರುಪಾವತಿ ಕ್ಲೈಮ್ ಏನೆಂದು ಸಹ ತಿಳಿದುಕೊಳ್ಳಿ

ಹೆಸರೇ ಸೂಚಿಸುವ ಹಾಗೆ, ರೀಎಂಬರ್ಸ್ಮೆಂಟ್ ಕ್ಲೈಮ್ ಅಥವಾ ಮರುಪಾವತಿ ಕ್ಲೈಮ್ ಎಂದರೆ ನೀವು ನಿಮಗೆ ತಗಲುವ ರಿಪೇರಿ ವೆಚ್ಚಗಳನ್ನು ತಾವೇ ಭರಿಸಿ, ನಂತರ ಬಿಲ್ಲ್ ಮತ್ತು ಸೂಕ್ತ ದಾಖಲೆಗಳನ್ನು ಸಲ್ಲಿಸಿ, ನಿಮ್ಮ ಇನ್ಶೂರೆನ್ಸ್ ಕಂಪನಿಯಿಂದ ಖರ್ಚು ಮಾಡಿದ ಹಣವನ್ನು ಹಿಂದೆ ಪಡೆಯುತ್ತೀರಿ.

ಈ ಎರಡರ ನಡುವೆ ಪ್ರಾಥಮಿಕ ವ್ಯತ್ಯಾಸ ಏನೆಂದರೆ, ಮರುಪಾವತಿ ಸಂದರ್ಭದಲ್ಲಿ ಮೊದಲು ನೀವು ಒಟ್ಟು ಮೊತ್ತವನ್ನು ತಮ್ಮ ಜೇಬಿನಿಂದಲೇ ನೀಡಿ, ನಂತರ ಮರುಪಾವತಿಗಾಗಿ ಬಿಲ್ ಹಾಗೂ ಸೂಕ್ತ ದಾಖಲೆಗಳ ಸಲ್ಲಿಕೆ ಹಾಗೂ ಪರಿಶೀಲನೆಗಳ ಹೆಚ್ಚುವರಿ ಹಂತವನ್ನು ದಾಟಬೇಕಾಗುತ್ತದೆ.

ಇನ್ನೊಂದೆಡೆ ನಗದುರಹಿತ ಕ್ಲೈಮ್ ನಲ್ಲಿ, ನೀವು ಕೇವಲ ಕ್ಲೈಮ್ ನ ಒಂದು ಸಣ್ಣ ಭಾಗವನ್ನು ಜೇಬಿನಿಂದ ನೀಡಬೇಕಾಗುತ್ತದೆ(ಡಿಪ್ರಿಸಿಯೇಷನ್ ಹಾಗೂ ಡಿಡಕ್ಟಿಬಲ್ಸ್) ಹಾಗೂ ಇನ್ಶೂರರ್ ತಾವಾಗಿಯೇ ಎಲ್ಲಾ ಪಾವತಿಗಳನ್ನು ಮಾಡುತ್ತಾರೆ.

ನಗದುರಹಿತ ಕಾರು ಇನ್ಶೂರೆನ್ಸ್ ಪಾಲಿಸಿಯ ಲಾಭಗಳೇನು?

  • ಔಪಚಾರಿಕತೆಗಳಿಲ್ಲ - ಒಂದು ನಗದುರಹಿತ ಪಾಲಿಸಿಯಲ್ಲಿ, ನಗದುರಹಿತವಲ್ಲದ ಪಾಲಿಸಿಗೆ ಹೋಲಿಸಿದರೆ, ಔಪಚಾರಿಕತೆಗಳು ಹಾಗೂ ದಾಖಲೆ ಕೆಲಸಗಳು ಬಹುತೇಕ ಇರುವುದಿಲ್ಲ. ಕ್ಯಾಷ್ ಇಲ್ಲದೇ ಇರುವುದರಿಂದ(ಡಿಪ್ರಿಸಿಯೇಷನ್ ಹಾಗೂ ಡಿಡಕ್ಟಿಬಲ್ಸ್ ನ ಸಣ್ಣ ಮೊತ್ತವನ್ನು ಹೊರತುಪಡಿಸಿ)  ಕ್ಲೈಮ್ ಪ್ರಕ್ರಿಯೆಗಳೂ ಬಹಳ ಸರಳವಾಗಿರುತ್ತವೆ.
  • ಶೀಘ್ರ ಕ್ಲೈಮ್ ಗಳು  - ನಗದುರಹಿತ ಕ್ಲೈಮ್ ಗಳಿರುವ ಕಾರು ಇನ್ಶೂರೆನ್ಸ್ ನ ಅರ್ಥ ನಿಮ್ಮ ಕ್ಲೈಮ್ ಪ್ರಕ್ರಿಯೆ ಅತೀ ಶೀಘ್ರವಾಗಿ ಪೂರ್ತಿಯಾಗುತ್ತದೆ. ನೀವು ಕೇವಲ ನಿಮ್ಮ ಪಾಲಿಸಿ ವಿವರಗಳನ್ನು ನೀಡಿ, ನೇರವಾಗಿ ನಿಮ್ಮ ಕಾರಿನ ದುರಸ್ತಿಯನ್ನು ಆರಂಭಿಸಬಹುದು.
  • ಚಿಂತೆಯಿಲ್ಲ - ನಗದುರಹಿತ ಇನ್ಶೂರೆನ್ಸ್ ನಲ್ಲಿ, ಬಹುತೇಕ ಎಲ್ಲಾ ವಿನಿಮಯಗಳು ಸರ್ವಿಸ್ ಪ್ರೊವೈಡರ್ ಹಾಗೂ ಇನ್ಶೂರೆನ್ಸ್ ಕಂಪನಿ ಮಧ್ಯೆ ನಡೆಯುತ್ತದೆ. ಆದ್ದರಿಂದ, ನೀವು ಹೆಚ್ಚಾಗಿ ಚಿಂತೆ ಮಾಡಬೇಕಾಗಿರುವುದಿಲ್ಲ, ಎಲ್ಲವನ್ನೂ ನೋಡಿಕೊಳ್ಳಲಾಗುತ್ತದೆ.
  • ಬಳಕೆ ಸರಳವಾಗಿದೆ - ಡಿಜಿಟ್ ನೊಂದಿಗೆ, ನಿಮ್ಮ ನಗದುರಹಿತ ಕಾರು ಇನ್ಶೂರೆನ್ಸ್, ನಿಮಗೆ ರಿಪೇರಿ ಮೇಲಿನ ವಾರಂಟಿಯ 6 ತಿಂಗಳವರೆಗೆ ಮನೆಬಾಗಿಲಿಗೆ ಪಿಕಪ್, ರಿಪೇರಿ ಮತ್ತು ಡ್ರಾಪ್ ನಂತಹ ಲಾಭಗಳನ್ನು ನೀಡುತ್ತದೆ!
  • ನಗದಿನ ಅಗತ್ಯವಿಲ್ಲ - ಅಪಘಾತದಲ್ಲಿ ನಿಮ್ಮ ಕಾರಿಗೆ ಹಾನಿಯಾದರೆ, ರಿಪೇರಿ ವೆಚ್ಚಗಳು ಬಲು ದುಬಾರಿಯಾಗಬಹುದು. ನಗದುರಹಿತ ಗ್ಯಾರೇಜ್ ನೊಂದಿಗೆ, ನೀವು ಇಂತಹ ದುರಸ್ತಿಗಳಿಗೆ ನಿಮ್ಮ ತುರ್ತು ನಿಧಿಗೆ ಕೈ ಹಾಕುವ ಅಗತ್ಯವಿರುವುದಿಲ್ಲ. ಕೇವಲ ನಿಮ್ಮ ಹತ್ತಿರದ ನೆಟ್ವರ್ಕ್ ಗ್ಯಾರೇಜ್ ಗೆ ಹೋಗಿ ಯಾವುದೇ ಗೊಂದಲಗಳಿಲ್ಲದೆ ನಿಮ್ಮ ಕಾರಿನ ರಿಪೇರಿಯನ್ನು ಮಾಡಿಸಿಕೊಌ!
  • ಉನ್ನತ ಸೇವೆ - ಇಂದು ಇನ್ಶೂರೆನ್ಸ್ ಕಂಪನಿಗಳು ತಮ್ಮ ಸಹಯೋಗ(ಟೈ ಅಪ್) ಪಟ್ಟಿಯಲ್ಲಿ ಅತ್ಯುತ್ತಮ ಸೇವಾ ಕೇಂದ್ರಗಳನ್ನೇ ಆಯ್ಕೆ ಮಾಡುತ್ತಾರೆ. ಆದ್ದರಿಂದ ಸಮಸ್ಯೆಯ ಸಂದರ್ಭದಲ್ಲಿ ನಿಮಗೆ ಈ ನೆಟ್ವರ್ಕ್ ಗ್ಯಾರೇಜ್ ಗಳಿಂದ ಉತ್ತಮ ಸೇವೆಯೇ ದೊರೆಯುವುದು ಎಂದು ನಿಮಗೆ ಖಾತ್ರಿ ಇರಲಿ.
  • ಸಂಪೂರ್ಣ ಪಾರದರ್ಶಕತೆ -  ನಗದುರಹಿತ ಕಾರು ಇನ್ಶೂರೆನ್ಸ್ ಪಾಲಿಸಿಯಲ್ಲಿ, ಎಲ್ಲವೂ ಡಿಜಿಟಲ್ ಆಗಿರುವ ಕಾರಣ, ನೀಡಿರುವ ಕ್ಲೈಮ್ ಹಾಗೂ ಮಾಡಿರುವ ಕ್ಲೈಮ್ ಗೆ ಸಂಬಂಧಿಸಿದಂತೆ ಸಂಪೂರ್ಣ ಪಾರದರ್ಶಕತೆ ಇರುತ್ತದೆ. ವ್ಯತ್ಯಾಸ ಅಥವಾ ಮೋಸದ ಸಂಭಾವನೆ ಕನಿಷ್ಠವಾಗಿರುತ್ತದೆ.