ಹೋಂಡಾ ಬೈಕ್ ಇನ್ಶೂರೆನ್ಸ್

ಕೇವಲ ₹714 ರಿಂದ ಆರಂಭವಾಗುವ ಹೋಂಡಾ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯಿರಿ

Third-party premium has changed from 1st June. Renew now

ಹೋಂಡಾ ಟು ವೀಲರ್ ವಾಹನಗಳು - ಭಾರತದಲ್ಲಿ ಇದರ ಇತಿಹಾಸ, ಇದರ ಜನಪ್ರಿಯತೆಗೆ ಕಾರಣ, ಹೋಂಡಾ ಬೈಕ್ ಇನ್ಶೂರೆನ್ಸ್ ಪಾಲಿಸಿಗಳು ಹಾಗೂ ನಿಮಗೆ ಯಾವ ಪಾಲಿಸಿ ಸೂಕ್ತ? ಇವುಗಳ ಬಗ್ಗೆ ನಿಮಗೆಷ್ಟು ತಿಳಿದಿದೆ.

ಕೆಲವು ಸತ್ಯಾಂಶಗಳೊಂದಿಗೆ ಆರಂಭಿಸೋಣ!

ಭಾರತದಲ್ಲಿ ಹೋಂಡಾ ಎಂದರೆ ಟು ವೀಲರ್ ವಾಹನದ ಇನ್ನೊಂದು ಹೆಸರು. ಇತ್ತೀಚಿಗೆ ಆರ್ಥಿಕ ಕುಸಿತವಾಗಿದ್ದರೂ, ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫಾಕ್ಚರರ್ಸ್ (ಸಿಐಎಎಂ) ನ ವರದಿಗಳ ಪ್ರಕಾರ, ಭಾರತದಲ್ಲಿ ಸತತ ಆರು ತಿಂಗಳು ಎಂದರೆ ಎಪ್ರಿಲ್ ಇಂದ ಸೆಪ್ಟೆಂಬರ್’ ’19 ರ ವರೆಗೆ, ಈ ಕಂಪನಿಯು ಟು ವೀಲರ್ ವಾಹನದ ಮಾರಾಟದಲ್ಲಿ ಅಗ್ರಸ್ಥಾನವನ್ನು ಪಡೆದಿತ್ತು. (1) ಬಿ ಎಚ್ ಪಿ - ಇಂಡಿಯಾ, ಎಲ್ಲಾ ಭಾರತೀಯ ಟು ವೀಲರ್ ವಾಹನ ತಯಾರಕರ, ಆಗಸ್ಟ್‘19 ವರೆಗಿನ, ಮಾರುಕಟ್ಟೆ ಷೇರುಗಳ ವಿಶ್ಲೇಷಣೆ ನಡೆಸಿತ್ತು. ಆ ವಿಶ್ಲೇಷಣೆಯ ಪ್ರಕಾರ, ಹೋಂಡಾ ಪ್ರಸ್ತುತ 29% ಮಾರುಕಟ್ಟೆ ಷೇರುಗಳನ್ನು ಹೊಂದಿದೆ ಹಾಗೂ ಈ ನಿಟ್ಟಿನಲ್ಲಿ ಇದು ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. 

(2) ಈ ಅಂಕಿಗಳು,  ಭಾರತದ ಬಳಕೆದಾರರಲ್ಲಿ ಹೋಂಡಾದ ಟು ವೀಲರ್ ವಾಹನಗಳಿಗಿರುವ ಜನಪ್ರಿಯತೆಯನ್ನು ಇನ್ನೂ ಪುಷ್ಟೀಕರಿಸುತ್ತದೆ. 

ಆದರೆ ಹೋಂಡಾದ ಯಾವ ಕೈಗಾರಿಕಾ-ಮೊದಲಿಗ ವೈಶಿಷ್ಟ್ಯಗಳೂ, ಅದನ್ನು ಭಾರತೀಯ ರಸ್ತೆಗಳಲ್ಲಿ ಓಡಾಡುವ ಸಂದರ್ಭಗಳಲ್ಲಿ ಉಂಟಾಗಬಹುದಾದ ಸಮಸ್ಯೆಗಳಿಂದ ಸಂರಕ್ಷಿಸಲಾರವು.

ಆದ್ದರಿಂದ, ಹೋಂಡಾ ಟು ವೀಲರ್ ವಾಹನ ಪಾಲಿಸಿಯನ್ನು ಪಡೆದು, ನಿಮ್ಮ ವಾಹನದಿಂದ ಹಾಗೂ ವಾಹನಕ್ಕೆ ಆಗಬಹುದಾದ ಹಾನಿಗಳು ಹಾಗೂ ಅದರಿಂದ ಉತ್ಪನ್ನವಾಗುವ ಆರ್ಥಿಕ ಹೊಣೆಗಾರಿಕೆಗಳಿಂದ ತಮ್ಮನ್ನು ತಾವೇ ರಕ್ಷಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ಇತರ ವಾಹನಗಳ ಹಾಗೆಯೇ, ನಿಮ್ಮ ಹೋಂಡಾ ಟು ವೀಲರ್ ವಾಹನ ಕೂಡಾ, ಅಪಘಾತಕ್ಕೀಡಾದರೆ ಗಣನೀಯ ಹಾನಿಗೆ ತುತ್ತಾಗಬಹುದು. ಇದು ಭಾರೀ ಖರ್ಚಿಗೆ ಕಾರಣವಾಗುತ್ತದೆ. ಇಂತಹ ಸಂದರ್ಭಗಳಲ್ಲಿ, ಇನ್ಶೂರೆನ್ಸ್ ಪಾಲಿಸಿ ನಿಮ್ಮನ್ನು ಕಾಪಾಡುತ್ತದೆ. 

ಆದಾಗ್ಯೂ, ಒಂದು ಥರ್ಡ್ ಪಾರ್ಟೀ ಹೊಣೆಗಾರಿಕಾ ಟು ವೀಲರ್ ವಾಹನ ಇನ್ಶೂರೆನ್ಸ್ ಅನ್ನು ಹೊಂದುವುದು, 1988 ನ ಮೋಟಾರ್ ವಾಹನ ಅಧಿನಿಯಮದ ಪ್ರಕಾರ, ಕಡ್ಡಾಯವಾಗಿದೆ ಕೂಡಾ. ನೀವು ಇನ್ಶೂರ್ ಮಾಡದ ಹೋಂಡಾ ಬೈಕ್ ಅನ್ನು ಚಲಾಯಿಸಿದರೆ, ನೀವು ರೂ 2000 ಟ್ರಾಫಿಕ್ ದಂಡ ಹಾಗೂ ತಪ್ಪು ಪುನರಾವರ್ತನೆಗಾಗಿ ರೂ 4000 ಅನ್ನು ತೆರಬೇಕಾಗುತ್ತದೆ.

ಹೋಂಡಾ ಬೈಕ್ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್ ಆಗಿದೆ

ಏನೆಲ್ಲಾ ಕವರ್ ಆಗಿರುವುದಿಲ್ಲ

ನಿಮ್ಮ ಟು ವೀಲರ್ ವಾಹನದ ಇನ್ಶೂರೆನ್ಸ್ ಪಾಲಿಸಿಯಲ್ಲಿ ಏನೆಲ್ಲಾ ಕವರ್ ಆಗಿರುವುದಿಲ್ಲ ಎಂದು ತಿಳಿಯುವುದೂ ಬಹಳ ಮುಖ್ಯ ಏಕೆಂದರೆ ಕ್ಲೈಮ್ ಸಮಯದಲ್ಲಿ ನಿಮಗೆ ಯಾವುದೇ ಆಶ್ಚರ್ಯಗಳು ಕಾದಿರಬಾರದು. ಇಲ್ಲಿ ಕೆಲವು ಸಂದರ್ಭಗಳನ್ನು ನೀಡಲಾಗಿದೆ:

ಥರ್ಡ್ ಪಾರ್ಟೀ ಪಾಲಿಸಿದಾರರಿಗಾಗುವ ಸ್ವಂತ ಹಾನಿಗಳು:

ಥರ್ಡ್ ಪಾರ್ಟೀ ಅಥವಾ ಹೊಣೆಗಾರಿಕೆ ಮಾತ್ರದ ಬೈಕ್ ಪಾಲಿಸಿ ಇದ್ದ ಸಂದರ್ಭದಲ್ಲಿ, ನಿಮ್ಮ ಸ್ವಂತ ವಾಹನಕ್ಕಾದ ಹಾನಿಯನ್ನು ಕವರ್ ಮಾಡಲಾಗುವುದಿಲ್ಲ.

ಪಾನಮತ್ತರಾಗಿ ಅಥವಾ ಪರವಾನಿಗೆ ಇಲ್ಲದೆ ವಾಹನ ಚಲಾವಣೆ

ನೀವು ಪಾನಮತ್ತರಾಗಿ ಅಥವಾ ಮಾನ್ಯ ಟು ವೀಲರ್ ವಾಹನ ಪರವಾನಿಗೆ ಇಲ್ಲದೆಯೇ ವಾಹನ ಚಲಾಯಿಸುತ್ತಿದ್ದ ಸಂದರ್ಭದಲ್ಲಿ ನಿಮ್ಮ ಬೈಕ್ ಇನ್ಶೂರೆನ್ಸ್ ನಿಮ್ಮನ್ನು ಕವರ್ ಮಾಡುವುದಿಲ್ಲ.

ತತ್ಪರಿಣಾಮವಾದ ಹಾನಿ

ಯಾವುದೇ ಅಪಘಾತದ ನೇರ ಪರಿಣಾಮವಲ್ಲದ ಹಾನಿಗಳು( ಉದಾ; ಅಪಘಾತದ ನಂತರ, ಹಾನಿಗೊಳಗಾದ ಟು ವೀಲರ್ ವಾಹನವನ್ನು ತಪ್ಪು ರೀತಿಯಲ್ಲಿ ಬಳಸುತ್ತಿದ್ದು ಅದರ ಎಂಜಿನ್ ಕೆಟ್ಟುಹೋದರೆ, ಅದನ್ನು ಕವರ್ ಮಾಡಲಾಗುವುದಿಲ್ಲ).

ಸಹಾಯಕಾರಿ ನಿರ್ಲಕ್ಷ್ಯ

ಯಾವುದೇ ರೀತಿಯ ಸಹಾಯಕಾರಿ ನಿರ್ಲಕ್ಷ್ಯ(ಉದಾ; ಪ್ರವಾಹದ ಸಂದರ್ಭದಲ್ಲಿ ಟು ವೀಲರ್ ವಾಹನ ಚಲಾಯಿಸುವುದು, ಇಂತಹ ಕಾರ್ಯಗಳನ್ನು ತಯಾರಕರ ಕೈಪಿಡಿ ಶಿಫಾರಸು ಮಾಡುವುದಿಲ್ಲ ಹಾಗೂ ಇವುಗಳನ್ನು ಕವರ್ ಮಾಡಲಾಗುವುದಿಲ್ಲ).

ಆಡ್-ಆನ್ ಗಳನ್ನು ಖರೀದಿಸದೇ ಇರುವುದು

ಕೆಲವು ಸಂದರ್ಭಗಳನ್ನು ಆಡ್-ಆನ್ ಗಳಿಂದ ಕವರ್ ಮಾಡಲಾಗುತ್ತದೆ. ನೀವು ಆ ಆಡ್-ಆನ್ ಗಳನ್ನು ಖರೀದಿಸದೇ ಇದ್ದರೆ, ಅದಕ್ಕೆ ಸಂಬಂಧಿತ ಸಂದರ್ಭಗಳನ್ನು ಕವರ್ ಮಾಡಲಾಗುವುದಿಲ್ಲ.

ಡಿಜಿಟ್ ನ ಹೋಂಡಾ ಬೈಕ್ ಇನ್ಶೂರೆನ್ಸ್ ಅನ್ನು ನೀವು ಏಕೆ ಖರೀದಿಸಬೇಕು?

ನಿಮ್ಮ ಅಗತ್ಯಗಳಿಗೆ ಸರಿಹೊಂದುವ ಹೋಂಡಾ ಬೈಕ್ ಇನ್ಶೂರೆನ್ಸ್ ಯೋಜನೆಗಳು

ಥರ್ಡ್ ಪಾರ್ಟೀ ಕಾಂಪ್ರೆಹೆನ್ಸಿವ್

ಅಪಘಾತದ ಕಾರಣ ನಿಮ್ಮ ಸ್ವಂತ ಟು ವೀಲರ್ ವಾಹನಕ್ಕಾದ ಹಾನಿಗಳು/ನಷ್ಟಗಳು

×

ಬೆಂಕಿಯ ಕಾರಣ ನಿಮ್ಮ ಸ್ವಂತ ಟು ವೀಲರ್ ವಾಹನಕ್ಕಾದ ಹಾನಿಗಳು/ನಷ್ಟಗಳು

×

ನೈಸರ್ಗಿಕ ವಿಪತ್ತಿನ ಕಾರಣ ನಿಮ್ಮ ಸ್ವಂತ ಟು ವೀಲರ್ ವಾಹನಕ್ಕಾದ ಹಾನಿಗಳು/ನಷ್ಟಗಳು

×

ಥರ್ಡ್ ಪಾರ್ಟೀ ವಾಹನಕ್ಕಾದ ಹಾನಿಗಳು

×

ಥರ್ಡ್ ಪಾರ್ಟೀ ಸ್ವತ್ತಿಗಾದ ಹಾನಿಗಳು

×

ವಯಕ್ತಿಕ ಅಪಘಾತ ಕವರ್

×

ಥರ್ಡ್ ಪಾರ್ಟೀ ವ್ಯಕ್ತಿಗೆ ಗಾಯ/ಸಾವು

×

ನಿಮ್ಮ ಸ್ಕೂಟರ್ ಅಥವಾ ಬೈಕ್ ನ ಕಳವು

×

ನಿಮ್ಮ ಐಡಿವಿ ಅನ್ನು ಕಸ್ಟಮೈಜ್ ಮಾಡಿ

×

ಕಸ್ಟಮೈಜ್ ಆದ ಆಡ್-ಆನ್ ಗಳಿಂದಾಗಿ ಹೆಚ್ಚುವರಿ ಸುರಕ್ಷೆ

×
Get Quote Get Quote

Know more about the difference between comprehensive and third party two wheeler insurance

ಸಮಗ್ರ ಹಾಗೂ ಥರ್ಡ್ ಪಾರ್ಟೀ ಟು ವೀಲರ್ ವಾಹನ ಇನ್ಶೂರೆನ್ಸ್ ನಡುವಿನ ವ್ಯತ್ಯಾಸಗಳ ಬಗ್ಗೆ ಹೆಚ್ಚು ತಿಳಿಯಿರಿ

ಕ್ಲೈಮ್ ಫೈಲ್ ಮಾಡುವುದು ಹೇಗೆ?

ನೀವು ನಮ್ಮ ಟು ವೀಲರ್ ವಾಹನ ಇನ್ಶೂರೆನ್ಸ್ ಯೋಜನೆಯನ್ನು ಖರೀದಿಸಿದ ಅಥವಾ ರಿನ್ಯೂ ಮಾಡಿದ ನಂತರ, ನೀವು ಚಿಂತೆಯಿಲ್ಲದೆ ಬದುಕುತ್ತೀರಿ ಯಾಕೆಂದರೆ ನಮ್ಮ ಬಳಿ ಇದೆ 3-ಹೆಜ್ಜೆಗಳ ಸಂಪೂರ್ಣ ಡಿಜಿಟಲ್ ಕ್ಲೈಮ್ ಪ್ರಕ್ರಿಯೆ!

ಹಂತ 1

ಕೇವಲ 1800-258-5956 ಗೆ ಕರೆ ಮಾಡಿ. ಯಾವುದೇ ಫಾರ್ಮ್ ತುಂಬಿಸುವ ಅಗತ್ಯವಿಲ್ಲ.

ಹಂತ 2

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವಯಂ-ಪರಿಶೀಲನಾ ಲಿಂಕ್ ಅನ್ನು ಪಡೆಯಿರಿ. ಮಾರ್ಗದರ್ಶಿತ ಹಂತ ಹಂತವಾದ ಪ್ರಕ್ರಿಯೆ ಮೂಲಕ ನಿಮ್ಮ ವಾಹನಕ್ಕಾದ ಹಾನಿಗಳನ್ನು ಸ್ಮಾರ್ಟ್ಫೋನಿನಲ್ಲಿ ಸೆರೆಹಿಡಿಯಿರಿ.

ಹಂತ 3

ನೀವು ಬಯಸುವ ರಿಪೇರಿಯ ರೀತಿಯನ್ನು ಆಯ್ಕೆ ಮಾಡಿ. ಅಂದರೆ;ಮರುಪಾವತಿ ಅಥವಾ ನಗದುರಹಿತ ನಮ್ಮ ಗ್ಯಾರೇಜ್ ಗಳ ನೆಟ್ವರ್ಕ್ ಮೂಲಕ.

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್ ಗಳ ಇತ್ಯರ್ಥ ಎಷ್ಟು ಶೀಘ್ರವಾಗಿ ಆಗುತ್ತದೆ? ಇದು, ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಿಸುವಾಗ ನಿಮ್ಮ ಯೋಚನೆಗೆ ಬರುವ ಮೊದಲ ಪ್ರಶ್ನೆಯಾಗಿರಬೇಕು. ಒಳ್ಳೆಯದು, ನೀವು ಅದನ್ನೇ ಮಾಡುತ್ತಿದ್ದೀರಿ! ಡಿಜಿಟ್ ನ ಕ್ಲೈಮ್ ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿರಿ

ಹೋಂಡಾ ಮೋಟಾರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಪ್ರೈ.ಲಿ.(ಎಚ್ ಎಮ್ ಎಸ್ ಐ) ನ ಒಂದು ಸಂಕ್ಷಿಪ್ತ ಇತಿಹಾಸ

ಎಚ್ ಎಮ್ ಎಸ್ ಐ, ಹೋಂಡಾ ಮೋಟಾರ್ ಕಂಪನಿ ಲಿಮಿಟೆಡ್, ಜಪಾನ್ ನ, ಒಂದು ನೇರ ಉಪ ಸಂಸ್ಥೆಯಾಗಿದ್ದು,. 1999 ನೇ ಇಸವಿಯಲ್ಲಿ ಭಾರತದಲ್ಲಿ ತನ್ನ ವಿಭಾಗವನ್ನು ಸ್ಥಾಪಿಸಿತ್ತು ಹಾಗೂ ಇದರ ಮುಖ್ಯ ಉತ್ಪಾದನಾ ಕಾರ್ಖಾನೆ ಹರ್ಯಾಣಾದ ಗುರ್ಗಾವ್ ಜಿಲ್ಲೆಯ ಮನೆಸರ್ ನಲ್ಲಿತ್ತು. ಅದರ ಜಪಾನಿ ಪರಂಪರೆಯಂತೆಯೇ ತನ್ನ ಸಾಮರ್ಥ್ಯ ಹಾಗೂ ಮೈಲೇಜ್ ನಿಂದ ತನ್ನನ್ನು ತಾನು ದೃಢಪಡಿಸಿಕೊಂಡ ಹೋಂಡಾ, ಶೀಘ್ರವೇ ತನ್ನ ಎರಡನೇ ಉತ್ಪಾದನಾ ಘಟಕವನ್ನು ರಾಜಸ್ಥಾನದ ಅಲವಾರ್ ಜಿಲ್ಲೆಯ ತಾಪುಕಾರದಲ್ಲಿ ಸ್ಥಾಪಿಸಿತು.

ಹೋಂಡಾ, ಹೀರೋ ಮೊಟೋಕಾರ್ಪ್ ಜೊತೆಗಿನ ಸಹಯೋಗದೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದರೂ,  2014 ನೇ ಇಸವಿಯಲ್ಲಿ ಅದು ತನ್ನನ್ನು ತಾನು ಸಂಪೂರ್ಣವಾಗಿ ಸ್ವತಂತ್ರವಾಗಿ ಸ್ಥಾಪಿಸಿತು. ಪ್ರಸ್ತುತ, ಇದು ಭಾರತದ ಟು ವೀಲರ್ ವಾಹನ ತಯಾರಕರಲ್ಲಿ ಅತೀ ದೋಡ್ಡ ಸ್ಥಾನದಲ್ಲಿದೆ.

ಹೋಂಡಾ ನೀಡುವ ಕೆಲವು ಮಾದರಿಗಳನ್ನು ಈ ಕೆಳಗೆ ಉಲ್ಲೇಖಿಸಲಾಗಿದೆ:

  • ಹೋಂಡಾ ಆಕ್ಟಿವಾ ಐ
  • ಹೋಂಡಾ ಆಕ್ಟಿವಾ 5G
  • ಹೋಂಡಾ ಎಕ್ಸ್-ಬ್ಲೇಡ್
  • ಹೋಂಡಾ ಹಾರ್ನೆಟ್ 160ಆರ್
  • ಹೋಂಡಾ ಸಿಬಿಆರ್ 250ಆರ್

ಹೋಂಡಾ ಇತ್ತೀಚಿಗಷ್ಟೇ ಕೆಲವು ಹೈ ಎಂಡ್ ಮಾದರಿಗಳನ್ನು ಪರಿಚಯಿಸಿದೆ.

  • ಹೋಂಡಾ ಸಿಬಿಆರ್ 300ಆರ್
  • ಹೋಂಡಾ ಸಿಬಿಆರ್ 650ಆರ್
  • ಹೋಂಡಾ ಸಿಬಿ1000ಆರ್
  • ಹೋಂಡಾ ಗೋಲ್ಡ್ ವಿಂಗ್

ರೋಚಕ ವಿಷಯ ಏನೆಂದರೆ, ಪಟ್ಟಿಯಲ್ಲಿರುವ ಕೊನೆಯ ಮಾದರಿ-ಹೋಂಡಾ ಗೋಲ್ಡ್ ವಿಂಗ್, ಒಂದು ಅನನ್ಯ ರೀತಿಯ ಕ್ರೂಸರ್ ಆಗಿದೆ. ಈ ನವಿನತೆಯಲ್ಲಿ ರಿವರ್ಸ್ ಗೇರ್ ಮಾತ್ರವಲ್ಲದೆ ಐಚ್ಛಿಕ ಏರ್ ಬ್ಯಾಗ್ ಕೂಡಾ ಸೇರಿದ್ದು, ಇವರ ತಾಂತ್ರಿಕ ಚಾಣಾಕ್ಷತೆಯ ಒಂದು ಪರಿಚಯವಾಗಿದೆ.

ಹೋಂಡಾದ ಜನಪ್ರಿಯತೆಯ ಕಾರಣವೇನು?

ಹೋಂಡಾ ಟು ವೀಲರ್ ವಾಹನಗಳು ಎಲ್ಲಾ ವರ್ಗದ ಜನರ ಮಧ್ಯೆ ಜನಪ್ರಿಯವಾಗಲು ಹಲವು ಅಂಶಗಳು ಕಾರಣವಾಗಿವೆ. ಇದರ ಜೊತೆ, ಹೋಂಡಾದ ಇಲ್ಲಿಯವರೆಗಿನ ಸಾಧನೆಗಳೂ ಈ ಕಂಪನಿ ಪ್ರತೀ ವರ್ಷ ಹೊರತರುವ ಶ್ರೇಷ್ಠ ಟು ವೀಲರ್ ವಾಹನಗಳ ಸಾಕ್ಷಿಯಾಗಿದೆ. 

ಇಲ್ಲಿ ಕೆಲವು ಅಂಶಗಳನ್ನು ನೋಡೋಣ:

  • ಗುಜರಾತಿನ ವಿಠಲಪುರದಲ್ಲಿರುವ ಇದರ ಉತ್ಪಾದನಾ ಘಟಕ ಅತೀ ದೊಡ್ಡದಾಗಿದ್ದು, ಕೇವಲ ಸ್ಕೂಟರ್ ಉತ್ಪಾದನೆಗೆಂದೇ ಮೀಸಲಾಗಿದೆ.
  • ಹೋಂಡಾದ ತಂತ್ರಜ್ಞಾನ ಉನ್ನತ ದರ್ಜೆಯದಾಗಿದ್ದು, ವಿಶ್ವದ ಕೇವಲ ಬೆರಳೆಣಿಕೆಯ ಟು ವೀಲರ್ ವಾಹನ ಉತ್ಪಾದಕರು ಇದಕ್ಕೆ ಸರಿಸಾಟಿಯಾಗಬಲ್ಲರು. ಯಮಹಾ ಹಾಗೂ ಡುಕಾಟಿಯ ನಂತರ, ಎಲ್ಲಾ ವಿಭಾಗಗಳಲ್ಲಿ, ಮೋಟೋಜಿಪಿಯಲ್ಲಿಯ ಮೂರನೇ ಅತೀ ಯಶಸ್ವೀ ಉತ್ಪಾದಕರು ಎಂಬ ಹೆಗ್ಗಳಿಕೆ ಇವರಿಗಿದೆ.
  • 2004 ರೊಳಗೆ, ಹೋಂಡಾ ಅದರ ಇಂಧನ ಕೋಶ(ಫ಼್ಯುಯೆಲ್ ಸೆಲ್) ಶಕ್ತ ಮೋಟರ್ ಬೈಕುಗಳ ಮೂಲಮಾದರಿಯನ್ನು ನಿರ್ಮಿಸಿತ್ತು.
  • 249 ಸಿಸಿ ಸಿಂಗಲ್- ಸಿಲಿಂಡರ್ ಎಂಜಿನ್ ಹೊಂದಿರುವ ಸಿಬಿಆರ್ 250ಆರ್, ಹೋಂಡಾ ಪರಿಚಯಿಸಿದ ಅತೀ ಸಣ್ಣ ರೇಸಿಂಗ್ ವರ್ಗದ ಮೋಟರ್ ಬೈಕ್ ಆಗಿದೆ.

ತನ್ನ ಗಡಿಗಳನ್ನು ತಳ್ಳುವುದು ಒಂದು ಕಂಪನಿಯನ್ನು ಜನಪ್ರಿಯಗೊಳಿಸಿದರೂ ಸಹ, ಯಶಸ್ಸನ್ನು ಖಚಿತಪಡಿಸದರೆ ಮಾತ್ರ ಅದು ಮುಂದೆ ಸಾಗಬಹುದು.ಟು ವೀಲರ್ ವಾಹನ ಉತ್ಪಾದನೆಯಲ್ಲಿ ಮಾತ್ರವಲ್ಲದೇ ತನ್ನ ಇತರ ಉದ್ಯಮಗಳಲ್ಲೂ ಕೂಡಾ, ಹೋಂಡಾದ ದೋಷರಹಿತ ಸಾಧನಾ ದಾಖಲೆಯು, ಇದನ್ನು ವಿಶ್ವದ ಚಿರಪರಿಚಿತ ತಯಾರಿಕರಲ್ಲಿ ಒಂದಾಗಿಸಿದೆ. 

ಆದಾಗ್ಯೂ, ಟು ವೀಲರ್ ವಾಹನ ಉತ್ಪಾದನಾ ಉದ್ಯಮದಲ್ಲಿ ಹೋಂಡಾ ಅಡೆತಡೆಗಳನ್ನು ಮುರಿಯುತ್ತಿದ್ದರೂ ಸಹ, ಅದರಡಿಯಲ್ಲಿ ತಯಾರಾಗುವ ಮಾದರಿಗಳು ರಸ್ತೆ ಅಪಘಾತದ ಸಂದರ್ಭದಲ್ಲಿ ಇತರ ಟು ವೀಲರ್ ವಾಹನಗಳಷ್ಟೇ ಗಾಸಿಗೊಳಗಾಗುತ್ತವೆ. ಇಂತಹ ಪರಿಸ್ಥಿತಿಗಳು ನಿಮ್ಮನ್ನು, ನಿಮ್ಮ ಸ್ವಂತ ವಾಹನಕ್ಕೆ ಅಥವಾ ಅಪಘಾತಕ್ಕೆ ಸಿಲುಕಿದ ಥರ್ಡ್ ಪಾರ್ಟೀಗಾದ ಹಾನಿಗಳಿಗೆ ತೆರಬೇಕಾದ ಭಾರಿ ವೆಚ್ಚಗಳನ್ನು ಭರಿಸುವಂತೆ ಮಾಡುತ್ತವೆ.

ಇಂತಹ ಸಂದರ್ಭಗಳಲ್ಲಿ ಉತ್ಪನ್ನವಾಗುವ ಆರ್ಥಿಕ ಹೊಣೆಗಾರಿಕೆಗಳನ್ನು ಕಡಿಮೆಗೊಳಿಸಲು, ನೀವು ಹೋಂಡಾ ಟು ವೀಲರ್ ವಾಹನ ಇನ್ಶೂರೆನ್ಸ್ ಪಾಲಿಸಿ ಖರೀದಿಸುವುದು ಬಹಳ ಮುಖ್ಯವಾಗುತ್ತದೆ.

ನೀವು ಹೋಂಡಾ ಟು ವೀಲರ್ ವಾಹನ ಇನ್ಶೂರೆನ್ಸ್ ಪಾಲಿಸಿಯನ್ನು ಏಕೆ ಖರೀದಿಸಬೇಕು?

ಟು ವೀಲರ್ ವಾಹನ ಇನ್ಶೂರೆನ್ಸ್ ಪಾಲಿಸಿಗಳು ಹಲವು ಕಾರಣಗಳಿಂದಾಗಿ ಆವಶ್ಯಕವಾಗಿವೆ. ನೀವು ಹೋಂಡಾ ಟು ವೀಲರ್ ವಾಹನ ಇನ್ಶೂರೆನ್ಸ್ ಪಾಲಿಸಿಯನ್ನು ಏಕೆ ಪಡೆಯಬೇಕೆಂಬ ಕಾರಣಗಳನ್ನು ಇಲ್ಲಿ ನೀಡಲಾಗಿದೆ:

  • ಇದು ಕಾನೂನಾತ್ಮಕವಾಗಿ ಕಡ್ಡಾಯವಾಗಿದೆ  - 1988 ರ ಮೋಟಾರ್ ವಾಹನ ಅಧಿನಿಯಮದ ಪ್ರಕಾರ, ಪ್ರತೀ ಮೋಟಾರ್ ಬೈಕ್, ಥರ್ಡ್ ಪಾರ್ಟೀ ಹೊಣೆಗಾರಿಕಾ ಟು ವೀಲರ್ ವಾಹನ ಪರವಾನಿಗೆಯನ್ನು ಹೊಂದಿರಬೇಕು. ನಿಮ್ಮ ಹೋಂಡಾ ಟು ವೀಲರ್ ವಾಹನವು ಕನಿಷ್ಟ ಪಕ್ಷ ಒಂದು ಥರ್ಡ್ ಪಾರ್ಟೀ ಹೊಣೆಗಾರಿಕಾ ಲೈಸನ್ಸ್ ಅನ್ನೂ ಹೊಂದದಿದ್ದಲ್ಲಿ, ನೀವು ಭಾರೀ ಟ್ರಾಫಿಕ್ ದಂಡಗಳನ್ನು ತೆರಲು ಬಾಧ್ಯರಾಗುವಿರಿ. 2019 ರ ಮೋಟಾರ್ ವಾಹನ(ತಿದ್ದುಪಡಿ) ಅಧಿನಿಯಮದ ಪ್ರಕಾರ, ಟು ವೀಲರ್ ವಾಹನ ಇನ್ಶೂರೆನ್ಸ್ ಪಾಲಿಸಿ ಇಲ್ಲದಿದ್ದರೆ ರೂ.2000 ಹಾಗೂ ತಪ್ಪು ಪುನರಾವರ್ತನೆಗಾಗಿ ರೂ 4000 ಟ್ರಾಫಿಕ್ ದಂಡವನ್ನು ತೆರಬೇಕಾಗುವುದು.
  • ಥರ್ಡ್ ಪಾರ್ಟೀಗೆ ಉಂಟಾದ ಹಾನಿಗಳಿಗಾಗಿ ಮರುಪಾವತಿಯನ್ನು ಕ್ಲೈಮ್ ಮಾಡುವುದು)- ಥರ್ಡ್ ಪಾರ್ಟೀ ಹೊಣೆಗಾರಿಕೆಗಳನ್ನು, ಥರ್ಡ್ ಪಾರ್ಟೀ ಹಾಗೂ ಸಮಗ್ರ ಹೋಂಡಾ ಟು ವೀಲರ್ ವಾಹನ ಪಾಲಿಸಿ, ಈ ಎರಡರ ಅಡಿಯಲ್ಲೂ ಕವರ್ ಮಾಡಲಾಗುತ್ತದೆ. ಇನ್ಶೂರೆನ್ಸ್ ಪಾಲಿಸಿಗಳು ನೀಡುವ ಈ ಲಾಭದಿಂದಾಗಿ, ನಿಮ್ಮ ಹೋಂಡಾ ಟು ವೀಲರ್ ವಾಹನದಿಂದ ಯಾವುದೇ ಥರ್ಡ್ ಪಾರ್ಟೀ ವಾಹನ ಅಥವಾ ಸ್ವತ್ತಿಗೆ ಆದ ಹಾನಿಯನ್ನು ಭರಿಸುವ ನಷ್ಟದಿಂದ ನಿಮ್ಮನ್ನು ನೀವೇ ಆರ್ಥಿಕವಾಗಿ ಸಂರಕ್ಷಿಸಬಲ್ಲಿರಿ. ಈ ಲಾಭವು, ಅಪಘಾತದ ಕಾರಣ ಥರ್ಡ್ ಪಾರ್ಟೀ ವ್ಯಕ್ತಿಗೆ ಗಾಯ ಅಥವಾ ಸಾವು ಸಂಭವಿಸಿದರೆ, ಅದರಿಂದಾಗುವ ಹೊಣೆಗಾರಿಕೆಗಳವರೆಗೂ ವಿಸ್ತರಿಸುತ್ತದೆ. ಇದರ ಜೊತೆ, ಇನ್ಶೂರರ್ ಆಗಿ, ಆ ಸಂದರ್ಭದಲ್ಲಿ ಉತ್ಪನ್ನವಾಗಬಹುದಾದ ಯಾವುದೇ ಕಾನೂನಾತ್ಮಕ ಕೇಸುಗಳನ್ನೂ ನಾವು ನಿರ್ವಹಿಸುತ್ತೇವೆ.
  • ಪರ್ಸನಲ್ ಆಕ್ಸಿಡೆಂಟ್ ಆಡ್-ಆನ್ ಕವರ್ - ಹೋಂಡಾ ಟು ವೀಲರ್ ವಾಹನ ಇನ್ಶೂರೆನ್ಸ್ ಪಾಲಿಸಿ ಖರೀದಿಸಿದ ಬಳಿಕ(ಥರ್ಡ್ ಪಾರ್ಟೀ ಅಥವಾ ಸಮಗ್ರ) ಹಾಗೂ ಅದರ ಜೊತೆ ಕಡ್ಡಾಯವಾದ ಪರ್ಸನಲ್ ಆಕ್ಸಿಡೆಂಟ್ ಆಡ್-ಆನ್ ಕವರ್ ಅನ್ನು ಖರೀದಿಸಿದ ನಂತರ, ಅಪಘಾತದ ಕಾರಣದಿಂದ ನೀವು ಶಾಶ್ವತ ಅಂಗವೈಕಲ್ಯಕ್ಕೀಡಾದರೆ, ನೀವು ಆರ್ಥಿಕ ಪರಿಹಾರಕ್ಕೆ ಅರ್ಹತೆ ಪಡೆಯುತ್ತೀರಿ. ಇದರ ಜೊತೆ, ಅಪಘಾತದ ಕಾರಣ ನಿಮ್ಮ ಸಾವು ಸಂಭವಿಸಿದರೆ, ನಿಮ್ಮ ಪರಿವಾರದ ಸದಸ್ಯರು ಆರ್ಥಿಕ ಕವರೇಜ್ ಅನ್ನು ಪಡೆಯಲು ಅರ್ಹರಾಗಿರುತ್ತಾರೆ.
  • ನಿಮ್ಮ ಸ್ವಂತ ಹೋಂಡಾ ಟು ವೀಲರ್ ವಾಹನದ ಹಾನಿಗಳನ್ನು ಕವರ್ ಮಾಡುತ್ತದೆ - ಅಪಘಾತಗಳು ಕೇವಲ ಥರ್ಡ್ ಪಾರ್ಟೀಗೆ ಹಾನಿ ಉಂಟುಮಾಡುವುದಿಲ್ಲ. ಅದು ನಿಮ್ಮ ಹೋಂಡಾ ಟು ವೀಲರ್ ವಾಹನಕ್ಕೂ ಸಾಕಷ್ಟು ಹಾನಿಯನ್ನು ಮಾಡಬಹುದು. ಸಮಗ್ರ ಟು ವೀಲರ್ ವಾಹನ ಇನ್ಶೂರೆನ್ಸ್ ಪಾಲಿಸಿಯೊಂದಿಗೆ, ಅಪಘಾತದ ಸಮಯದಲ್ಲಿ ನಿಮ್ಮ ಸ್ವಂತ ವಾಹನಕ್ಕಾದ ಹಾನಿಗೂ ನೀವು ಆರ್ಥಿಕ ಕವರ್ ಅನ್ನು ಪಡೆಯಬಹುದು. ಇದರ ಜೊತೆ, ನಿಮ್ಮ ಟು ವೀಲರ್ ವಾಹನ ಕಳವಾದರೆ, ಬೆಂಕಿಯಿಂದ, ಭೂಕಂಪದಂತಹ ನೈಸರ್ಗಿಕ ವಿಪತ್ತಿನಿಂದ ಅಥವಾ ಯಾವುದೇ ಮನುಷ್ಯ ನಿರ್ಮಿತ ಅವಘಡದಿಂದ ಅದಕ್ಕೆ ಹಾನಿಯಾದರೆ, ಈ ಪಾಲಿಸಿಯು ಕವರೇಜ್ ನೀಡುತ್ತದೆ.

ಆದಾಗ್ಯೂ, ಮೇಲೆ ನೀಡಿರುವ ಹಾಗೂ ಅದಕ್ಕಿಂತಲೂ ಹೆಚ್ಚಿನ ಲಾಭಗಳನ್ನು ಆನಂದಿಸಲು, ದೇಶದ ಒಂದು ಪ್ರತಿಷ್ಠಿತ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು ಅತೀ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಡಿಜಿಟ್ ಇನ್ಶೂರೆನ್ಸ್ ಉತ್ತಮ ಆಯ್ಕೆಯಾಗುತ್ತದೆ!

ಏಕೆ ಎಂದು ತಿಳಿದುಕೊಳ್ಳಿ!

ಹೋಂಡಾ ಟು ವೀಲರ್ ವಾಹನ ಇನ್ಶೂರೆನ್ಸ್ ಪಾಲಿಸಿಯಡಿಯಲ್ಲಿ ಡಿಜಿಟ್ ಏನೆಲ್ಲಾ ಒದಗಿಸುತ್ತದೆ?

ನಮ್ಮ ದೇಶದಲ್ಲಿ ಹಲವು ಇನ್ಶೂರೆನ್ಸ್ ಪ್ರೊವೈಡರ್ಸ್ ಇದ್ದರೂ, ಡಿಜಿಟ್ ಹಲವು ಹಾಗೂ ವೈವಿಧ್ಯತೆಯುಳ್ಳ ಲಾಭಗಳನ್ನು ನೀಡುತ್ತದೆ. ಡಿಜಿಟ್ ನ ಹೋಂಡಾ ಇನ್ಶೂರೆನ್ಸ್ ಪಾಲಿಸಿ ಒದಗಿಸುವ ಹೆಚ್ಚು ಆಕರ್ಷಕ ಲಾಭಗಳನ್ನು ಕೆಳಗಿನ ಪಟ್ಟಿಯಲ್ಲಿ ನೀಡಲಾಗಿದೆ -

ಹೋಂಡಾ ಇನ್ಶೂರೆನ್ಸ್ ಪಾಲಿಸಿಗಳ ಹಲವು ಆಯ್ಕೆಗಳು- ಹೋಂಡಾ ಟು ವೀಲರ್ ವಾಹನ ಇನ್ಶೂರೆನ್ಸ್ ಪಾಲಿಸಿಗೆ ಸಂಬಂಧಿಸಿದಂತೆ, ಡಿಜಿಟ್ ಹಲವು ಆಯ್ಕೆಗಳನ್ನು ನೀಡುತ್ತದೆ. ಉದಾಹರಣೆಗೆ;

  • ಎ) ಥರ್ಡ್ ಪಾರ್ಟೀ ಟು ವೀಲರ್ ವಾಹನ ಇನ್ಶೂರೆನ್ಸ್ ಪಾಲಿಸಿ - ಈ ಪಾಲಿಸಿ ಅಡಿಯಲ್ಲಿ, ನಿಮ್ಮ ಟು ವೀಲರ್ ವಾಹನದಿಂದ ಥರ್ಡ್ ಪಾರ್ಟೀ ವ್ಯಕ್ತಿ, ಸ್ವತ್ತು ಅಥವಾ ವ್ಯಕ್ತಿಗೆ ಹಾನಿಯಾಗಿದ್ದರೆ, ಇದರಿಂದ ಉಂಟಾಗುವ ಎಲ್ಲಾ ಆರ್ಥಿಕ ಹೊಣೆಗಾರಿಕೆಗಳಿಗಾಗಿ ಕವರೇಜ್ ಅನ್ನು ನೀಡುತ್ತದೆ,
  • ಬಿ) ಕಾಂಪ್ರೆಹೆನ್ಸಿವ್ ಟು ವೀಲರ್ ವಾಹನ ಇನ್ಶೂರೆನ್ಸ್ ಪಾಲಿಸಿ - ಈ ಪಾಲಿಸಿ ಸಂಪೂರ್ಣ ಸಂರಕ್ಷಣೆ ಒದಗಿಸುತ್ತದೆ. ಥರ್ಡ್ ಪಾರ್ಟೀ ಹಾನಿಗಳನ್ನು ಹೊರತುಪಡಿಸಿ, ಕಾಂಪ್ರೆಹೆನ್ಸಿವ್ ಪಾಲಿಸಿಯು, ಅಪಘಾತ, ಕಳ್ಳತನ ಇತ್ಯಾದಿಗಳಿಂದ ನಿಮ್ಮ ಸ್ವಂತ ವಾಹನಕ್ಕಾದ ಹಾನಿಗಳನ್ನೂ ಕವರ್ ಮಾಡುತ್ತದೆ.

ಹಾಗೂ, ನೀವು ನಿಮ್ಮ ಹೋಂಡಾ ಟು ವೀಲರ್ ವಾಹನವನ್ನು ಸೆಪ್ಟೆಂಬರ್ 2018 ರ ನಂತರ ಖರೀದಿಸಿದ್ದರೆ, ನೀವು ಒಂದು ಓನ್ ಡ್ಯಾಮೇಜ್ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನೂ ಪಡೆಯುತ್ತೀರಿ, ಇದು ನಿಮಗೆ ಥರ್ಡ್ ಪಾರ್ಟೀ ಲಾಭಗಳಿಲ್ಲದ ಕಾಂಪ್ರೆಹೆನ್ಸಿವ್ ಪಾಲಿಸಿ ಲಾಭಗಳನ್ನು ನೀಡುತ್ತದೆ.

  • ದೊಡ್ಡ ಸಂಖ್ಯೆಯ ಗ್ಯಾರೇಜ್ ನೆಟ್ವರ್ಕ್ ಗಳು- ಡಿಜಿಟ್, ದೇಶದಾದ್ಯಂತ ಸಾವಿರಾರು ಗ್ಯಾರೇಜ್ ನೆಟ್ವರ್ಕ್ ಗಳನ್ನು ಹೊಂದಿದೆ. ಸರಿ, ಏನಿದರರ್ಥ? ಇದು ನಿಮ್ಮ ಇನ್ಶೂರೆನ್ಸ್ ಕಂಪನಿಯಡಿಯಲ್ಲಿ ಬರುವ ಗ್ಯಾರೇಜ್ ಗಳಾಗಿದ್ದು, ನಿಮ್ಮ ಟು ವೀಲರ್ ವಾಹನಕ್ಕೆ ನಗದುರಹಿತ ರಿಪೇರಿ ಸೌಲಭ್ಯಗಳನ್ನು ಒದಗಿಸುತ್ತದೆ. ಆದ್ದರಿಂದ, ನಿಮ್ಮ ಹೋಂಡಾ ಬೈಕಿಗಾಗಿ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವಾಗ ಡಿಜಿಟ್ ನಲ್ಲಿರುವ ಈ ಗ್ಯಾರೇಜ್ ನೆಟ್ವರ್ಕ್ ಗಳು ಖಂಡಿತವಾಗಿಯೂ ಲಾಭದಾಯಕವಾಗಿ ಪರಿಣಮಿಸುತ್ತವೆ.
  • ಶೀಘ್ರ ಕ್ಲೈಮ್ ಇತ್ಯರ್ಥ ಹೆಚ್ಚು ಕ್ಲೈಮ್ ಇತ್ಯರ್ಥದ ಅನುಪಾತದೊಂದಿಗ - ಸಾಮಾನ್ಯವಾಗಿ, ಕ್ಲೈಮ್ ಪ್ರಕ್ರಿಯೆಯ ಸಮಯದಲ್ಲಿ ಕಂಪನಿಯ ಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಹಾನಿಯ ತನಿಖೆ ನಡೆಸಿ ನಂತರ ಕ್ಲೈಮ್ ಗೆ ಅನುಮೋದನೆ ನೀಡುತ್ತಾರೆ. ಡಿಜಿಟ್, ಈ ಪ್ರಕ್ರಿಯೆಯನ್ನು ಸರಳೀಕರಿಸಿ ಅದರ ಶೀಘ್ರತೆಯನ್ನು ಹೆಚ್ಚಿಸಿದೆ. ನೀವು ಸ್ವಯಂ ಪರಿಶೀಲನೆಗಾಗಿ ಕೇವಲ ನಿಮ್ಮ ಸ್ಮಾರ್ಟ್ ಫೋನ್ ಅನ್ನು ಬಳಸಿ ನಿಮ್ಮ ಕ್ಲೈಮ್ ಅನ್ನು ಆನ್ಲೈನ್ ಆಗಿ ಮಾಡಬಹುದು. ಇದರ ಜೊತೆ, ಡಿಜಿಟ್ ಹೆಚ್ಚು ಕ್ಲೈಮ್ ಇತ್ಯರ್ಥ ಅನುಪಾತದ ಹೆಗ್ಗಳಿಕೆಯನ್ನೂ ಹೊಂದಿದ್ದು ಇದು ನಿಮ್ಮ ಕ್ಲೈಮ್ ತಿರಸ್ಕಾರವಾಗುವ ಅವಕಾಶಗಳನ್ನು ಕಡಿಮೆಗೊಳಿಸುತ್ತದೆ.
  • ನಿಮ್ಮ ಹೋಂಡಾ ಟು ವೀಲರ್ ವಾಹನಕ್ಕಾಗಿ ಹೆಚ್ಚಿನ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ(ಐಡಿವಿ)  - ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ, ನಿಮ್ಮ ಹೋಂಡಾ ಟು ವೀಲರ್ ವಾಹನಕ್ಕೆ ಸಂಪೂರ್ಣ ನಷ್ಟ ಅಥವಾ ಸರಿಪಡಿಸಲಾದ ಹಾನಿಯಾದ ಸಂದರ್ಭದಲ್ಲಿ, ನೀವು ನಿಮ್ಮ ಇನ್ಶೂರೆನ್ಸ್ ಪ್ರೊವೈಡರ್ ನಿಂದ ಪಡೆಯಬಹುದಾದ ಮೊತ್ತವಾಗಿದೆ. ಇದನ್ನು, ಮಾರಾಟಗಾರರ ಬೆಲೆಯಿಂದ ನಿಮ್ಮ ಹೋಂಡಾ ಬೈಕಿನ ಡಿಪ್ರಿಸಿಯೇಷನ್ ಅನ್ನು ಕಳೆದು ನೀಡಲಾಗುತ್ತದೆ. ಡಿಜಿಟ್ ನ ಇನ್ಶೂರೆನ್ಸ್ ಪಾಲಿಸಿಯಿಂದ ನೀವು ನಿಮ್ಮ ಲಾಭಗಳನ್ನು ಹೆಚ್ಚಿಸಬಹುದು ಕಾರಣ, ಇದು ನೀಡುವ ಹೆಚ್ಚಿನ ಹಾಗೂ ಕಸ್ಟಮೈಜ್ ಮಾಡಬಹುದಾದ ಐಡಿವಿ.
  • ಸರಳ ಖರೀದಿ ಹಾಗೂ ರಿನೀವಲ್ ಪ್ರಕ್ರಿಯೆ - ಹೋಂಡಾ ಬೈಕ್ ಇನ್ಶೂರೆನ್ಸ್ ಅನ್ನು ಆನ್ಲೈನ್ ಆಗಿ ಖರೀದಿಸುವ ಡಿಜಿಟ್ ನ ಪ್ರಕ್ರಿಯೆ ಸರಳ ಹಾಗೂ ಗೊಂದಲರಹಿತವಾಗಿದೆ. ಒಮ್ಮೆ ನೀವು ನಿಮಗೆ ಸೂಕ್ತವಾಗಿರುವ ಪಾಲಿಸಿಯನ್ನು ಆಯ್ಕೆ ಮಾಡಿದ ಮೇಲೆ, ನೀವು ನಿಮ್ಮ ಆಡ್-ಆನ್ ಕೊಡುಗೆಗಳನ್ನು ಪರಿಶೀಲಿಸಬಹುದು ಹಾಗೂ ಪ್ರೀಮಿಯಂ ಮೊತ್ತವನ್ನು ಪರಿಶೀಲಿಸಬಹುದು. ನೀವು ಖರೀದಿಸಬೇಕಾದ ಪಾಲಿಸಿಯನ್ನು ಸರಿಯಾಗಿ ಆಯ್ಕೆ ಮಾಡಿದ ನಂತರ, ಅರ್ಜಿಯನ್ನು ತುಂಬಿಸುವುದನ್ನು ಹಾಗೂ ಪ್ರೀಮಿಯಮ್ ಪಾವತಿಗಳನ್ನು ಆನ್ಲೈನ್ ಆಗಿ ನಿಮಿಷಗಳಲ್ಲಿ ಪೂರ್ಣಗೊಳಿಸಬಹುದು.
  • ವಿವಿಧ ಆಡ್-ಆನ್ ಆಯ್ಕೆಗಳು  - ಡಿಜಿಟ್ ತನ್ನ ಗ್ರಾಹಕರಿಗೆ ವಿವಿಧ ಆಡ್-ಆನ್ ಆಯ್ಕೆಗಳನ್ನು ನೀಡುತ್ತದೆ. ಈ ಕೆಳಗೆ ಪಟ್ಟಿ ಮಾಡಿರುವ ಆಡ್-ಆನ್ ಆಯ್ಕೆಗಳನ್ನು ಪಡೆದರೆ, ನೀವು ನಿಮ್ಮ ಇನ್ಶೂರೆನ್ಸ್ ಪಾಲಿಸಿಯ ಲಾಭಗಳನ್ನು ಇನ್ನೂ ಹೆಚ್ಚಿಸಬಹುದು:
    • ಎ) ಶೂನ್ಯ ಡಿಪ್ರಿಸಿಯೇಷನ್ ಕವರ್ 
    • ಬಿ) ರಿಟರ್ನ್ ಟು ಇನ್ವಾಯ್ಸ್ ಕವರ್
    • ಸಿ)ಕುಸಿತದ ಸಮಯದಲ್ಲಿ ನೆರವು
    • ಡಿ) ಎಂಜಿನ್ ಹಾಗೂ ಗೇರ್ ಸುರಕ್ಷಾ ಕವರ್ 
    • ಇ) ಗ್ರಾಹಕ ಬಳಕೆಯ ಕವರ್ 
  • ಎಲ್ಲಾ ಸಮಯದಲ್ಲೂ ಲಭ್ಯತೆ- ಡಿಜಿಟ್ ಅವರ ಸೇವೆಗಳನ್ನು 24X7 ಒದಗಿಸುತ್ತಾರೆ. ಇದರಿಂದಾಗಿ ನೀವು ನಿಮಗೆ ಬೇಕಾದ ಸಮಯದಲ್ಲಿ ನಿಮ್ಮ ಕ್ಲೈಮ್ ಗಳನ್ನು ಅಥವಾ ನಿಮಗನಿಸುವ ಕುಂದುಕೊರತೆಗಳನ್ನು ರೈಸ್ ಮಾಡಬಹುದು. ವಿಶೇಷವಾಗಿ ಅಪಘಾತಗಳು ಅಥವಾ ಗಾಯವಾದ ಸಂದರ್ಭದಲ್ಲಿ, ಇದು ಅತಿಯಾಗಿ ಸಹಾಯಕರವಾಗುತ್ತದೆ. ನಮ್ಮ ಸೇವೆ ರಾಷ್ಟ್ರೀಯ ರಜಾದಿನಗಳಲ್ಲೂ ಲಭ್ಯವಿದೆ, ಇದರಿಂದ ನೀವು ನಮ್ಮ ಸೇವೆಗಳ ಗರಿಷ್ಠ ಲಾಭಗಳನ್ನು ಪಡೆಯಬಹುದು.
  • ನೋ ಕ್ಲೈಮ್ ಬೋನಸ್ ಲಾಭಗಳು - ನೋ ಕ್ಲೈಮ್ ಬೋನಸ್, ನಿಮ್ಮ ಪ್ರತೀ ಕ್ಲೈಮ್ ಇಲ್ಲದ ವರ್ಷಕ್ಕಾಗಿ ನಿಮಗೆ ನೀಡಲಾದ ಲಾಭವಾಗಿದೆ. ಈ ಲಾಭದೊಂದಿಗೆ, ನೀವು ಪಾಲಿಸಿ ಪಡೆದ ವರ್ಷದ ಮುಂದಿನ ವರ್ಷದಿಂದ ಪ್ರತೀ ವರ್ಷ ಕಟ್ಟುವ ಪ್ರೀಮಿಯಂ ಮೇಲೆ 20% ರಿಂದ 50% ವರೆಗಿನ ರಿಯಾಯಿತಿಯನ್ನು ಪಡೆಯಬಹುದು. ಡಿಜಿಟ್ ಇನ್ಶೂರೆನ್ಸ್ ನೀಡುವ ಈ ಲಾಭವನ್ನು ನೀವು ಪ್ರತೀ ಪಾಲಿಸಿ ರಿನೀವಲ್ ಸಮಯದಲ್ಲಿ ಅಥವಾ ನೀವು ನಿಮ್ಮ ಪ್ರಸ್ತುತ ಇನ್ಶೂರೆನ್ಸ್ ಕಂಪನಿಯಿಂದ ಡಿಜಿಟ್ ನ ಸೇವೆಗೆ ಬದಲಾಗುತ್ತಿದ್ದಾಗ ಪಡೆಯಬಹುದು.

ಡಿಜಿಟ್ ನೀಡುವ ಕೊಡುಗೆಗಳು ಬಹಳ ಲಾಭದಾಯಕವಾಗಿದ್ದರೂ, ಪ್ರೀಮಿಯಂ ಪಾವತಿ ಮಾಡುವುದು, ವಿಶೇಷವಾಗಿ ಸಮಗ್ರ ಹೋಂಡಾ ಟು ವೀಲರ್ ಇನ್ಶೂರೆನ್ಸ್ ಪಾಲಿಸಿಗಾಗಿ, ಎದೆಗುಂದಿಸಬಹುದು, ಹಾಗೂ ಇದು ನಮಗೆ ಅರ್ಥವಾಗುತ್ತದೆ.

ಆದರೆ ಚಿಂತಿಸಬೇಡಿ, ನಾವು ಕೆಲವು ರಹಸ್ಯಗಳನ್ನು ಹೇಳುತ್ತೇವೆ.

ನಿಮ್ಮ ಹೋಂಡಾ ಟು ವೀಲರ್ ವಾಹನ ಇನ್ಶೂರೆನ್ಸ್ ನ ಪ್ರೀಮಿಯಂ ಅನ್ನು ಕಡಿಮೆಗೊಳಿಸಬಹುದೇ? ಹೇಗೆಂದು ತಿಳಿಯಿರಿ!

ಹೌದು, ನೀವು ನಿಮ್ಮ ಟು ವೀಲರ್ ವಾಹನ ಇನ್ಶೂರೆನ್ಸ್ ಪಾಲಿಸಿಯ ಪ್ರೀಮಿಯಂ ಅನ್ನು ಕಡಿಮೆ ಮಾಡಲು ಕೆಲವು ವಿಧಾನಗಳನ್ನು ಅಳವಡಿಸಿಕೊಳ್ಳಬಹುದು. ಅದು ಹೋಂಡಾ ಬೈಕ್ ಇನ್ಶೂರೆನ್ಸ್ ಇರಲಿ ಅಥವಾ ಅದರ ಖರೀದಿ ಇರಲಿ, ನೀವು ನಿಮ್ಮ ಇನ್ಶೂರೆನ್ಸ್ ಪಾಲಿಸಿಗಾಗಿ ಅಗತ್ಯಕ್ಕಿಂತ ಹೆಚ್ಚನ್ನು ಪಾವತಿಸುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಲು ಈ ಕೆಳಗೆ ಚರ್ಚಿಸಲಾಗಿರುವ ಕೆಲವು ಸಲಹೆಗಳನ್ನು ಪರಿಶೀಲಿಸಬೇಕು:

  • ಇನ್ಶೂರೆನ್ಸ್ ಅನ್ನು ನೇರವಾಗಿ ಇನ್ಶೂರರ್ ನಿಂದ ಖರೀದಿಸಿ  -  ನಿಮ್ಮ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಲು ಯಾವುದೇ ಏಜಂಟ್ ಅಥವಾ ಬ್ರೋಕರ್ ಬಳಿ ಹೋಗಬೇಡಿ. ಬಹುತೇಕ ಇನ್ಶೂರೆನ್ಸ್ ಪ್ರೊವೈಡರ್ ಗಳು ನಿಮಗೆ ಸರಳ ಪ್ರಕ್ರಿಯೆಯನ್ನು ಅನುಸರಿಸಿ, ಪಾಲಿಸಿಗಳನ್ನು ಆನ್ಲೈನ್ ಆಗಿ ಖರೀದಿಸುವ ಆಯ್ಕೆಯನ್ನು ನೀಡುತ್ತಾರೆ.ಇದರಿಂದ ನಿಮಗೆ ಇನ್ಶೂರೆನ್ಸ್ ಅನ್ನು ನೇರವಾಗಿ ಇನ್ಶೂರೆನ್ಸ್ ಕಂಪನಿಯಿಂದಲೇ ಖರೀದಿಸುವ ಸೌಲಭ್ಯ ಸಿಗುತ್ತದೆ ಹಾಗೂ ಇದರಿಂದ ನೀವು ಯಾವುದೇ ಮಧ್ಯಂತರ ಅಥವಾ ಹೆಚ್ಚುವರು ಶುಲ್ಕ ನೀಡುವುದು ತಪ್ಪುತ್ತದೆ.
  • ಅತೀ ಆವಶ್ಯಕವಿರುವ ಆಡ್-ಆನ್ ಗಳಿಗೆ ಅಪ್ಲೈ ಮಾಡಿ   - ಪಾಲಿಸಿಯನ್ನು ಆಯ್ಕೆ ಮಾಡುವಾಗ, ನಿಮಗೆ ನಿಜವಾಗಿ ಅಗತ್ಯವಿರುವ ಆಡ್-ಆನ್ ಗಳು ಯಾವುವು ಎಂದು ಪರಿಶೀಲಿಸಿ. ಪ್ರತೀ ಆಡ್-ಆನ್ ಕವರ್ ಪ್ರೀಮಿಯಂ ಮೊತ್ತವನ್ನು ಹೆಚ್ಚಿಸುತ್ತದೆ, ಆದ್ದರಿಂದ ನಿಮಗೆ ಅದರ ಅಗತ್ಯವಿಲ್ಲದಿದ್ದರೆ ಅದನ್ನು ಖರೀದಿಸಬೇಡಿ.
  • ನೋ ಕ್ಲೈಮ್ ಬೋನಸ್ ಇರುವುದನ್ನು ಖಚಿತಪಡಿಸಿ - ಪಾಲಿಸಿದಾರರು ಒಂದು ವರ್ಷದಲ್ಲಿ ಅವರ ಪಾಲಿಸಿ ವಿರುದ್ಧ ಯಾವುದೇ ಕ್ಲೈಮ್ ಮಾಡದೇ ಇದ್ದಲ್ಲಿ ಅವರಿಗೆ ನೋ ಕ್ಲೈಮ್ ಬೋನಸ್ ಅನ್ನು ನೀಡಲಾಗುತ್ತದೆ. ಈ ಲಾಭವನ್ನು, ಮುಂಬರುವ ವರ್ಷದ ಪ್ರೀಮಿಯಂ ಮೊತ್ತದಲ್ಲಿ ರಿಯಾಯಿತಿಯಾಗಿ ನೀಡಲಾಗುತ್ತದೆ.
  • ವಾಲಂಟರಿ ಡಿಡಕ್ಟಿಬಲ್ ಗಳನ್ನು ಆಯ್ಕೆ ಮಾಡಿ  - ನೀವು ನಿಮ್ಮ ಪಾಲಿಸಿಯಲ್ಲಿ ವಾಲಂಟರ್ ಡಿಡಕ್ಟಿಬಲ್ ಗಳನ್ನು ಆಯ್ಕೆ ಮಾಡಿದರೆ, ನೀವು ನಿಮ್ಮ ಇನ್ಶೂರೆನ್ಸ್ ಕವರೇಜ್ ಆರಂಭವಾಗುವ ಮೊದಲೇ ನೀವು ಕ್ಲೈಮ್ ನ ಒಂದು ಭಾಗವನ್ನು ಪಾವತಿಸಬೇಕಾಗುತ್ತದೆ. ನೀವು ಈ ಡಿಡಕ್ಟಿಬಲ್ ಅನ್ನು ಆಯ್ಕೆ ಮಾಡಿದರೆ,  ನೀವು ನಿಮ್ಮ ಇನ್ಶೂರೆನ್ಸ್ ಪಾಲಿಸಿಯ ಪ್ರೀಮಿಯಂ ಪಾವತಿಯಲ್ಲಿ ಉಳಿತಾಯವನ್ನು ಮಾಡಬಹುದು.

ಈಗ, ಪಾಲಿಸಿಗಳು ಹಾಗೂ ಪ್ರೀಮಿಯಂ ಕಡಿತಗಳ ಬಗ್ಗೆ ಸಂಪೂರ್ಣ ಜ್ಞಾನ ಪಡೆದ ನಂತರ, ನೀವು ನಿಮ್ಮ ಹೋಂಡಾ ಟು ವೀಲರ್ ವಾಹನಕ್ಕಾಗಿ ಸೂಕ್ತ ಪಾಲಿಸಿಯನ್ನು ಖರೀದಿಸಲು ತಡ ಮಾಡಬೇಡಿ. ಈ ಕೆಳಗೆ ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳೊಂದಿಗೆ ನಿಮಗೆ ಸಹಾಯ ಮಾಡಲು ಹೆಚ್ಚುವರಿ ಅಂಶಗಳನ್ನು ಚರ್ಚಿಸಲಾಗಿದೆ.

ಭಾರತದಲ್ಲಿ ಹೋಂಡಾ ಬೈಕ್ ಇನ್ಶೂರೆನ್ಸ್ ಪಾಲಿಸಿಯ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು

ನಾನು ನನ್ನ ಇನ್ಶೂರೆನ್ಸ್ ಪ್ರೊವೈಡರ್ ಅನ್ನು ಬದಲಾಯಿಸಿದ ನಂತರವೂ ನೋ ಕ್ಲೈಮ್ ಬೋನಸ್ ಗೆ ಅರ್ಹನೇ?

ಹೌದು,ನೀವು ನಿಮ್ಮ ಇನ್ಶೂರೆನ್ಸ್ ಪ್ರೊವೈಡರ್ ಅನ್ನು ಬದಲಾಯಿಸಿದ ನಂತರವೂ ನೋ ಕ್ಲೈಮ್ ಬೋನಸ್ ಗೆ ಅರ್ಹರಾಗಿರುತ್ತೀರಿ.

ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯ ರಿನೀವಲ್ ಗೆ ಏನೆಲ್ಲಾ ಬೇಕಾಗುವುದು?

ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯ ರಿನೀವಲ್ ಗೆ ಈ ಕೆಲವು ದಾಖಲೆಗಳ ಹಾಗೂ ವಿವರಗಳ ಅಗತ್ಯವಿರುತ್ತದೆ.

  • ಟು ವೀಲರ್ ವೆಹಿಕಲ್ ನೋಂದಣಿ ಸಂಖ್ಯೆ 
  • ಟು ವೀಲರ್ ವೆಹಿಕಲ್ ಚಾಸಿಸ್ ಸಂಖ್ಯೆ 
  • ವಾಹನ ಖರೀದಿಸಿದ ದಿನಾಂಕ ಹಾಗೂ ಸ್ಥಳ 
  • ನಿಮ್ಮ ಹೆಸರು ಹಾಗೂ ಅಡ್ರೆಸ್ ಪ್ರೂಫ್ ಹೊಂದಿರುವ ನಿಮ್ಮ ಕೆವೈಸಿ ವಿವರ 
  • ಟು ವೀಲರ್ ವಾಹನದ ಮಾದರಿ ಹಾಗೂ ತಯಾರಾದ ದಿನಾಂಕ.

ನನ್ನ ಬಳಿ ಥರ್ಡ್ ಪಾರ್ಟೀ ಹೊಣೆಗಾರಿಕೆಯ ಇನ್ಶೂರೆನ್ಸ್ ಯೋಜನೆಯಿಲ್ಲದಿದ್ದರೆ ಏನಾಗುತ್ತದೆ?

ನೀವು ಥರ್ಡ್ ಪಾರ್ಟೀ ಹೊಣೆಗಾರಿಕಾ ಇನ್ಶೂರೆನ್ಸ್ ಯೋಜನೆ ಇಲ್ಲದೆಯೇ ಟು ವೀಲರ್ ವಾಹನ ಚಲಾಯಿಸುತ್ತಿದ್ದಾಗ ಅಧಿಕಾರಿಗಳಿಂದ ಹಿಡಿಯಲ್ಪಟ್ಟರೆ,ನೀವು ರೂ 2000 ಗಳ ಭಾರೀ ದಂಡವನ್ನು ತೆರಬೇಕಾಗುವುದು(ತಪ್ಪು ಪುನರಾವರ್ತನೆಗೆ ರೂ 4000) ಅಥವಾ 3 ತಿಂಗಳ ಜೈಲುವಾಸ ಅನುಭವಿಸಬೇಕಾಗುವುದು. ಕೆಲವು ಸಂದರ್ಭಗಳಲ್ಲಿ ಈ ಎರಡೂ ಶಿಕ್ಷೆಗಳು ಅನ್ವಯಿಸುತ್ತವೆ.