ಹೋಂಡಾ ಸಿಬಿಎಫ್ ಸ್ಟನ್ನರ್ ಇನ್ಶೂರೆನ್ಸ್

ಆನ್ಲೈನ್ ಆಗಿ ತಕ್ಷಣವೇ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಚೆಕ್ ಮಾಡಿ

Third-party premium has changed from 1st June. Renew now

ಹೋಂಡಾ ಸಿಬಿಎಫ್ ಸ್ಟನ್ನರ್ ಬೈಕ್ ಇನ್ಶೂರೆನ್ಸ್ ದರ ಹಾಗೂ ಆನ್ಲೈನ್ ಪಾಲಿಸಿ ರಿನ್ಯೂವಲ್

source

ಹೋಂಡಾ ಮೋಟಾರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ(ಎಚ್ ಎಂ ಎಸ್ ಐ), ಜೂನ್-ಜುಲ್ಲೈ 2008 ರಲ್ಲಿ ಸಿಬಿಎಫ್ ಸ್ಟನ್ನರ್ ಸರಣಿಯನ್ನು ಅಧಿಕೃತವಾಗಿ ಲಾಂಚ್ ಮಾಡಿತ್ತು.ಈ ಸರಣಿಯಲ್ಲಿ ಹೋಂಡಾ ಸ್ಟಾಂಡರ್ಡ್ ಮೋಟಾರ್ ಸೈಕಲ್ ಗಳ ಪಟ್ಟಿಯೇ ಇದೆ. ಭಾರತ  125 ಸಿಸಿ ಮೋಟಾರ್ ಸೈಕ್ಲಿಂಗ್ ಇತಿಹಾಸದಲ್ಲಿ  ಹೋಂಡಾ ಸಿಬಿಎಫ್ ಸ್ಟನ್ನರ್ ಒಂದು ಬೆಂಚ್ ಮಾರ್ಕ್ ಮಾದರಿಯಾಗಿದೆ.

ಈ ಹೋಂಡಾ ಬೈಕಿನ ಮಾಲೀಕರಾಗಿದ್ದು, ಎಲ್ಲಾ ಸಮರ್ಪಕ ಸುರಾಕ್ಷತಾ ವೈಶಿಷ್ಟ್ಯಗಳಿದ್ದರೂ ನಿಮ್ಮ ಸವಾರಿಯು ಅಪಾಯ ಹಾಗೂ ಹಾನಿಗಳಿಗೆ ತುತ್ತಾಗುವ ಹೆಚ್ಚಿನ ಸಂಭಾವನೆಗಳ ಬಗ್ಗೆ ನಿಮಗೆ ತಿಳಿದಿರಬಹುದು. ಆದ್ದರಿಂದಲೇ, ಹೋಂಡಾ ಸಿಬಿಎಫ್ ಸ್ಟನ್ನರ್ ಬೈಕ್ ಇನ್ಶೂರೆನ್ಸ್ ಅನ್ನು ಪಡೆದು ನಿಮ್ಮ ಬೈಕನ್ನು ಇಂತಹ ಹಾನಿಗಳಿಂದ ಸಂರಕ್ಷಿಸುವುದು ಆವಶ್ಯಕವಾಗಿದೆ.

ಭಾರತದಲ್ಲಿ ಪ್ರತಿಷ್ಠಿತ ಇನ್ಶೂರರ್ ಗಳು ನೀಡುವ ಆಕರ್ಷಕ ಕೊಡುಗೆಗಳಿಂದಾಗಿ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಅನ್ನು ಪಡೆಯುವುದು ಸರಳ ಹಾಗೂ ಅನುಕೂಲಕಾರವಾಗಿದೆ. ಭಾರತದಲ್ಲಿ ಅಂತಹ ಒಂದು ಇನ್ಶೂರೆನ್ಸ್ ಪ್ರೊವೈಡರ್ ಆಗಿದ್ದಾರೆ ಡಿಜಿಟ್.

ಈ ಭಾಗದಲ್ಲಿ, ನೀವು ಹೋಂಡಾ ಸಿಬಿಎಫ್ ಸ್ಟನ್ನರ್ ಬೈಕ್ ಇನ್ಶೂರೆನ್ಸ್ ನ ವಿವರಗಳು, ಅದರ ಲಾಭಗಳು, ಹಾಗೂ ಡಿಜಿಟ್ ನ ಇನ್ಶೂರೆನ್ಸ್ ಪಾಲಿಸಿ ಖರೀದಿಯಿಂದ ನಿಮಗೆ ಸಿಗುವ ಪ್ರಯೋಜನಗಳ ಬಗ್ಗೆ ವಿವರಗಳನ್ನು ಪಡೆಯಬಹುದಾಗಿದೆ.

ಸಿಬಿಎಫ್ ಸ್ಟನ್ನರ್ ಬೈಕ್ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್ ಆಗಿದೆ?

ನೀವು ಡಿಜಿಟ್ ನ ಹೋಂಡಾ ಸಿಬಿಎಫ್ ಸ್ಟನ್ನರ್ ಬೈಕ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು ?

ಹೋಂಡಾ ಸಿಬಿಎಫ್ ಸ್ಟನ್ನರ್ ಗಾಗಿ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಯೋಜನೆಗಳು

ಥರ್ಡ್ ಪಾರ್ಟೀ ಕಾಂಪ್ರಹೆನ್ಸಿವ್

ಅಪಘಾತದಿಂದ ಸ್ವಂತ ಟು ವೀಲರ್ ವಾಹನಕ್ಕಾದ ನಷ್ಟ/ಹಾನಿ

×

ಬೆಂಕಿಯಿಂದ ಸ್ವಂತ ಟು ವೀಲರ್ ವಾಹನಕ್ಕಾದ ನಷ್ಟ/ಹಾನಿ

×

ಪ್ರಕೃತಿ ವಿಕೋಪದಿಂದ ಸ್ವಂತ ಟು ವೀಲರ್ ವಾಹನಕ್ಕಾದ ನಷ್ಟ/ಹಾನಿ

×

ಥರ್ಡ್ ಪಾರ್ಟೀ ವಾಹನಕ್ಕಾದ ಹಾನಿ

×

ಥರ್ಡ್ ಪಾರ್ಟೀ ಸ್ವತ್ತಿಗಾದ ಹಾನಿ

×

ವೈಯಕ್ತಿಕ ಅಪಘಾತ ಕವರ್

×

ಥರ್ಡ್ ಪಾರ್ಟೀ ವ್ಯಕ್ತಿಗೆ ಹಾನಿ/ಸಾವು

×

ನಿಮ್ಮ ಸ್ಕೂಟರ್ ಅಥವಾ ಬೈಕ್ ನ ಕಳವು

×

ನಿಮ್ಮ ಐಡಿವಿ ಅನ್ನು ಕಸ್ಟಮೈಜ್ ಮಾಡುವುದು

×

ಕಸ್ಟಮೈಜ್ ಮಾಡಲಾದ ಆಡ್-ಆನ್ ಗಳೊಂದಿಗೆ ಹೆಚ್ಚುವರಿ ಸಂರಕ್ಷಣೆ

×
Get Quote Get Quote

ಕಾಂಪ್ರೆಹೆನ್ಸಿವ್  ಹಾಗೂ ಥರ್ಡ್ ಪಾರ್ಟೀ ಟು ವೀಲರ್  ವೆಹಿಕಲ್ ಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಇನ್ನಷ್ಟು ತಿಳಿಯಿರಿ.

ಕ್ಲೈಮ್ ಫೈಲ್ ಮಾಡುವುದು ಹೇಗೆ?

ನಮ್ಮ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಯೋಜನೆಯನ್ನು ಖರೀದಿಸಿದ ಅಥವಾ ರಿನ್ಯೂ ಮಾಡಿದ ನಂತರ ನೀವು ನೆಮ್ಮದಿಯ ಜೀವನವನ್ನು ನಡೆಸುತ್ತೀರಿ, ಕಾರಣ ನಮ್ಮ ಬಳಿ ಇರುವ 3 ಹಂತಗಳ ಸಂಪೂರ್ಣ ಡಿಜಿಟಲ್ ಆದ ಕ್ಲೈಮ್ ಗಳ ಪ್ರಕ್ರಿಯೆ!

ಹಂತ 1

ಕೇವಲ 1800-258-5956 ಗೆ ಕರೆ ನೀಡಿ. ಯಾವುದೇ ಫಾರ್ಮ್ ತುಂಬಿಸಬೇಕಾಗಿಲ್ಲ.

ಹಂತ 2

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವ ಪರಿಶೀಲನೆಯ ಲಿಂಕ್ ಅನ್ನು ಪಡೆಯಿರಿ.ನಮ್ಮ ಹಂತ ಹಂತದ ಮಾರ್ಗದರ್ಶನದೊಂದಿಗೆ ನಿಮ್ಮ ಸ್ಮಾರ್ಟ್ ಫೋನಿನಿಂದ ನಿಮ್ಮ ವಾಹನದ ಹಾನಿಗಳನ್ನು ಸೆರೆಹಿಡಿಯಿರಿ.

ಹಂತ 3

ನೀವು ಆಯ್ಕೆ ಮಾಡಲು ಬಯಸುವ ಪಾವತಿಯ ವಿಧಾನವನ್ನು ನಿರ್ಧರಿಸಿ ಅಂದರೆ ಮರುಪಾವತಿ ಅಥವಾ ನಮ್ಮ ನೆಟ್ವರ್ಕ್ ಗ್ಯಾರೇಜ್ ಗಳಲ್ಲಿ ಕ್ಯಾಷ್ಲೆಸ್.

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್ ಅನ್ನು ಎಷ್ಟು ಬೇಗ ಸೆಟ್ಲ್ ಮಾಡಬೇಕಾಗುತ್ತದೆ? ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುತ್ತಿರುವಾಗ ಇದು ನಿಮ್ಮ ಯೋಚನೆಗೆ ಬರಬೇಕಾದ ಮೊದಲ ಪ್ರಶ್ನೆಯಾಗಿದೆ. ಒಳ್ಳೆಯದು, ನೀವು ಅದನ್ನೇ ಮಾಡುತ್ತಿದ್ದೀರಿ! ಡಿಜಿಟ್ ನ ಕ್ಲೈಮ್ಸ್ ರಿಪೋರ್ಟ್ ಕಾರ್ಡ್ ಅನ್ನು ಓದಿ

ಹೋಂಡಾ ಸಿಬಿಎಫ್ ಸ್ಟನ್ನರ್ ಇನ್ಶೂರೆನ್ಸ್ ಗಾಗಿ ಡಿಜಿಟ್ ಅನ್ನು ಆಯ್ಕೆ ಮಾಡಲು ಇರುವ ಕಾರಣಗಳು

ಡಿಜಿಟ್ ನಂತಹ ಇನ್ಶೂರೆನ್ಸ್ ಪ್ರೊವೈಡರ್ ಗಳು ಬೈಕ್ ಇನ್ಶೂರೆನ್ಸ್ ನ ಪಾಲಿಸಿದಾರರಿಗೆ ಹಾಲವು ಸವಲತ್ತುಗಳನ್ನು ಹಾಗೂ ಲಾಭಗಳನ್ನು ಒದಗಿಸುತ್ತಾರೆ. ಅವರ ಸೇವೆಗಳನ್ನು ಆಯ್ಕೆ ಮಾಡಲು ಕೆಲ ಕಾರಣಗಳು ಇಲ್ಲಿವೆ:

  • ಗೊಂದಲರಹಿತ ಆನ್ಲೈನ್ ಅರ್ಜಿ ಪ್ರಕ್ರಿಯೆ - ಡಿಜಿಟ್ ನ ಸ್ಮಾರ್ಟ್ಫೋನ್ ಅಳವಡಿಕೆ ಇರುವ ಪ್ರಕ್ರಿಯೆಗಳೊಂದಿಗೆ, ಸಿಬಿಎಫ್ ಸ್ಟನ್ನರ್ ಇನ್ಶೂರೆನ್ಸ್ ಅನ್ನು ಆನ್ಲೈನ್ ಆಗಿ ಪಡೆಯುವುದು ಸುಲಭವಾಗಿದೆ. ಸಂಪೂರ್ಣವಾಗಿ ಡಿಜಿಟಲ್ ಆಗಿರುವುದರಿಂದ ಇದರ ಆನ್ಲೈನ್ ಅರ್ಜಿ ಪ್ರಕ್ರಿಯೆಯು ಶೀಘ್ರ ಹಾಗೂ ಗೊಂದಲರಹಿತವಾಗಿದೆ.
  • ಡಿಜಿಟ್ ನ ನೆಟ್ವರ್ಕ್ ಗ್ಯಾರೇಜ್ ಗಳ ವ್ಯಾ - ನೀವು ಡಿಜಿಟ್ ನ ಅಧಿಕೃತ ನೆಟ್ವರ್ಕ್ ಗ್ಯಾರೇಜ್ ಗಳಿಂದ ನಗದುರಹಿತ ಸೌಲಭ್ಯವುಳ್ಳ ಸೇವೆಗಳನ್ನು ಪಡೆಯಬಹುದಾಗಿದೆ. ಇದರ ಜೊತೆ, ಇಂತಹ ಗ್ಯಾರೇಜ್ ಗಳನ್ನು ಹುಡುಕುವುದು ಸರಳವಾಗಿದೆ, ಕಾರಣ, ಭಾರತದಾದ್ಯಂತ ಇರುವ ಡಿಜಿಟ್ ನ 2900+ ಬೈಕ್ ಗ್ಯಾರೇಜ್ ಗಳು.
  • ಇನ್ಶೂರೆನ್ಸ್ ಆಯ್ಕೆಗಳು - ಡಿಜಿಟ್ ನಿಮ್ಮ ಅಗತ್ಯಗಳ ಪ್ರಕಾರ ಮೂರು ಇನ್ಶೂರೆನ್ಸ್ ಕವರೇಜ್ ಗಳನ್ನು ನೀಡುತ್ತದೆ. ಕವರೇಜ್ ಆಯ್ಕೆಗಳು ಈ ರೀತಿ ಇವೆ:
  • ಥರ್ಡ್-ಪಾರ್ಟಿ ಇನ್ಶೂರೆನ್ಸ್ : ಈ ಯೋಜನೆಯ ಅಡಿಯಲ್ಲಿ, ನೀವು ಥರ್ಡ್–ಪಾರ್ಟಿ ಹಾನಿಗಳಿಗಾಗಿ ಕವರೇಜ್ ಲಾಭಗಳನ್ನು ಪಡೆಯಬಹುದಾಗಿದೆ.
  • ಸ್ವಂತ ಹಾನಿ ಬೈಕ್ ಇನ್ಶೂರೆನ್ಸ್(Own Damage Bike Insurance) : ಇದೊಂದು ಪ್ರತ್ಯೇಕ ಪಾಲಿಸಿಯಾಗಿದ್ದು, ಅಪಘಾತಗಳಿಂದಾದ ಸ್ವಂತ ಬೈಕ್ ಹಾನಿಯನ್ನು ಕವರ್ ಮಾಡುತ್ತದೆ.
  • ಕಾಂಪ್ರೆಹೆನ್ಸ್ಸಿವ್ ಇನ್ಶೂರೆನ್ಸ್ : ಒಂದು ಕಾಂಪ್ರೆಹೆನ್ಸಿವ್ ಹೋಂಡಾ ಸಿಬಿಎಫ್ ಸ್ಟನ್ನರ್ ಬೈಕ್ ಇನ್ಶೂರೆನ್ಸ್ ನಂತಹ ಪಾಲಿಸಿಯು ಥರ್ಡ್-ಪಾರ್ಟಿ ಹಾಗೂ ಸ್ವಂತ ಹಾನಿ ಎರಡಕ್ಕೂ ಸಂಪೂರ್ಣವಾದ ಕವರ್ ಅನ್ನು ಒದಗಿಸುತ್ತದೆ.
  • ಹೆಚ್ಚಿನ ಕ್ಲೈಮ್ ಇತ್ಯರ್ಥದ ರೇಷಿಯೋ - ನಿಮ್ಮ ಹೋಂಡಾ ಬೈಕ್ ಇನ್ಶೂರೆನ್ಸ್ ಮೇಲೆ ಕ್ಲೈಮ್ ರೈಸ್ ಮಾಡಿದಾಗ, ನೀವು ಸಮಯ ಹಾಗೂ ಸಮಸ್ಯೆ ಎರಡನ್ನೂ ಸೀಮಿತಗೊಳಿಸುತ್ತೀರಿ. ಡಿಜಿಟ್ ನ ಸ್ಮಾರ್ಟ್ಫೋನ್ ಅಳವಡಿಕೆಯ ಪ್ರಕ್ರಿಯೆಯಿಂದಾಗಿ ನೀವು ಕೆಲವೇ ನಿಮಿಷಗಳಲ್ಲಿ ತ್ವರಿತ ಕ್ಲೈಮ್ ಗಳನ್ನು ಪಡೆಯಬಹುದಾಗಿದೆ. ಹಾಗೂ, ಇದು ಅಕ್ಟೋಬರ್ 2019 ಇಂದ ಮಾರ್ಚ್ 2020 ವರೆಗೆ 97% ಕ್ಲೈಮ್ ಗಳನ್ನು ಇತ್ಯರ್ಥ ಮಾಡಿದ ದಾಖಲೆಯನ್ನು ಹೊಂದಿದೆ.
  •  ಸ್ವ-ಪರಿಶೀಲನಾ ಪ್ರಕ್ರಿಯೆ - ಯಾವುದೇ ಅಧಿಕಾರಿಗಳ ಅಗತ್ಯವಿಲ್ಲದೆಯೇ ಡಿಜಿಟ್, ನಿಮ್ಮ ಬೈಕಿನ ಹಾನಿಯನ್ನು ಸ್ವಯಂ ಪರಿಶೀಲಿಸುವ ಆಯ್ಕೆಯನ್ನು ನೀಡುತ್ತದೆ. ಇದರಿಂದ ನೀವು ನಿಮ್ಮ ಬೈಕ್ ಪರಿಶೀಲನೆ ಹಾಗೂ ರಿಪೇರಿಗಳನ್ನು ಗೊಂದಲರಹಿತವಾಗಿ ಮಾಡಬಹುದಾಗಿದೆ.
  • ಸ್ಪಂದಿಸುವ ಗ್ರಾಹಕ ಬೆಂಬಲ - ಸಂದೇಹ ಹಾಗೂ ಪ್ರಶ್ನೆಗಳಿದ್ದ ಸಂದರ್ಭದಲ್ಲಿ, ನೀವು ಡಿಜಿಟ್ ನ ಗ್ರಾಹಕ ಸೇವೆಯನ್ನು ಸಂಪರ್ಕಿಸಬಹುದು. ಇವರು 24/7 ಲಭ್ಯವಿರುವರು, ರಾಶ್ಟ್ರೀಯ ರಜಾ ದಿನಗಳಲ್ಲೂ.
  •  
  • ಆಡ್-ಆನ್ ಲಾಭಗಳು - ನಿಮ್ಮ ಹೋಂಡಾ ಬೈಕಿಗಾಗಿ ಇರುವ ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಕೆಲ ಕವರ್ ಗಳನ್ನು ಹೊಂದಿರುವುದಿಲ್ಲ. ಇದಕ್ಕಾಗಿ, ನೀವು ಸ್ವಲ್ಪ ಹೆಚ್ಚಿನ ಪ್ರೀಮಿಯಂ ಮೊತ್ತವನ್ನು ನೀಡಿ, ಡಿಜಿಟ್ ನ ಆಡ್-ಆನ್ ಪಾಲಿಸಿಗಳನ್ನು ಖರೀದಿಸಬಹುದಾಗಿದೆ. ಝೀರೋ ಡಿಪ್ರಿಸಿಯೇಷನ್ ಕವರ್, ಬ್ರೇಕ್ಡೌನ್ ಗಾಗಿ ನೆರವು, ಬಳಕೆಯ ವಸ್ತುಗಳ ಕವರ್ ಇತ್ಯಾದಿ ಕೆಲವು ಲಭ್ಯಾವಿರುವ ಆಡ್-ಆನ್ ಗಳಾಗಿವೆ.

ಇದರ ಜೊತೆ, ಎಲ್ಲಾ ಸೇವೆಗಳಲ್ಲೂ ಡಿಜಿಟ್ ಪಾರದರ್ಷಕತೆಯನ್ನು ಒದಗಿಸುತ್ತದೆ. ಯಾವುದೆ ಗೌಪ್ಯ ಶುಲ್ಕಗಳಿಲ್ಲ. ಹಾಗೂ, ನಿಮ್ಮ ಲಾಭಗಳನ್ನು ಇನ್ನಷ್ಟು ಹೆಚ್ಚಿಸಲು ಅವರು ನಿಮಗೆ ನಿಮ್ಮ ಐಡಿವಿ(IDV) ಅನ್ನು ಹೆಚ್ಚಿಸುವ ಆಯ್ಕೆಯನ್ನು ನೀಡುತ್ತಾರೆ.

ನಿಮ್ಮ ಹೋಂಡಾ ಸಿಬಿಎಫ್ ಸ್ಟನ್ನರ್ ಗಾಗಿ ನೀವು ಡಿಜಿಟ್ ನ ಇನಶೂರೆನ್ಸ್ ಅನ್ನು ಏಕೆ ಆಯ್ಕೆ ಮಾಡಬೇಕು?

ಹೋಂಡಾ ಸಿಬಿಎಫ್ ಸ್ಟನ್ನರ್ ನ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯು ಹಲವಾರು ಆಕರ್ಷಕ ಲಾಭಗಳನ್ನು ಹೊಂದಿದೆ. ಈ ಕೆಳಗಿನ ಲಾಭಗಳನ್ನು ಪರಿಗಣಿಸಿ, ನೀವು ನಿಮ್ಮ ಸಮಾರಿಗಾಗಿ ಈ ಇನ್ಶೂರೆನ್ಸ್ ಅನ್ನು ಪಡೆಯಬಹುದಾಗಿದೆ.

  • ಥರ್ಡ್-ಪಾರ್ಟಿ ಹೊಣೆಗಾರಿಕೆಗಳನ್ನು ಕಡಿಮೆ ಮಾಡುತ್ತದೆ  -  ಒಂದು ಅಪಘಾತದಲ್ಲಿ ಥರ್ಡ್ ಪಾರ್ಟಿ ವ್ಯಕ್ತಿ, ವಾಹನ ಸ್ವತ್ತುಗಳಿಗೆ ನಿಮ್ಮ ಬೈಕಿನಿಂದಾಗಿ ಹಾನಿಯಾದರೆ, ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಇಂದು ಥರ್ಡ್-ಪಾರ್ಟಿ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡುವುದರಿಂದ ಇಂತಹ ಸಂದರ್ಭಗಳಲ್ಲಿ ಉಂಟಾಗುವ ಆರ್ಥಿಕ ಹೊಣೆಗಾರಿಕೆಗಳನ್ನು ಹಾಗೂ ಕಾನೂನಾತ್ಮಕ ಗೊಂದಲಗಳನ್ನು ನೀವು ಸೀಮಿತಗೊಳಿಸಬಹುದಾಗಿದೆ.
  • ಸ್ವಂತ ಬೈಕ್ ಹಾನಿಯನ್ನು ಕವರ್ ಮಾಡುತ್ತದೆ - ಮೋಟಾರ್ ವಾಹನ ಅಧಿನಿಯಮದ ಪ್ರಕಾರ ಥರ್ಡ್-ಪಾರ್ಟಿ ಇನ್ಶೂರೆನ್ಸ್ ಕಡ್ಡಾಯವಾಗಿದೆ. ಆದರೆ, ಇದು ನಿಮ್ಮ ಸ್ವಂತ ಬೈಕಿಗೆ ಕವರ್ ಅನ್ನು ನೀಡುವುದಿಲ್ಲ. ಇಂತಹ ಸಂದರ್ಭಗಳಿಗಾಗಿ, ಸಂಪೂರ್ಣ ಸುರಕ್ಷತೆಯನ್ನು ನೀಡುವ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಯೋಜನೆಗಳನ್ನು ಆಯ್ಕೆ ಮಾಡುವುದು ಉತ್ತಮವಾಗಿರುತ್ತದೆ.
  • ವಯಕ್ತಿಕ ಅಪಘಾತದ ಕವರ್ - ನೀವು ಥರ್ಡ್ ಪಾರ್ಟಿ ಅಥವಾ ಕಾಂಪ್ರೆಹೆನ್ಸಿವ್, ಯಾವುದೇ ಕವರ್ ಅನ್ನು ಆಯ್ಕೆ ಮಾಡಿದರೂ, ಐ.ಅರ್.ಡಿ.ಎ.ಐ ಪ್ರಕಾರ, ಅಪಘಾತದಿಂದಾಗುವ, ಶಾಶ್ವತ ಸಂಪೂರ್ಣ ಅಂಗವೈಕಲ್ಯ ಅಥವಾ ಸಾವಿನ ಸಂದರ್ಭದಲ್ಲಿ ನೀವು ವಯಕ್ತಿಕ ಅಪಘಾತ ಕವರ್ ಪಡೆಯಲು ಬದ್ಧರು.
  • ಭಾರೀ ಟ್ರಾಫಿಕ್ ದಂಡಗಳನ್ನು ತಪ್ಪಿಸಿ ಮೋಟಾರ್ ವಾಹನ ಅಧಿನಿಯಮ 1988 ರ ಪ್ರಕಾರ ಎಲ್ಲಾ ಮೋಟಾರ್ ವಾಹನಗಳು ಕನಿಷ್ಟ ಪಕ್ಷ ಥರ್ಡ್-ಪಾರ್ಟಿ ಹೊಣೆಗಾರಿಕೆಯ ಇನ್ಶೂರೆನ್ಸ್ ಕವರ್ ಅನ್ನು ಪಡೆದಿರಲೇಬೇಕಾಗಿದೆ. ಈ ನಿಯಮದ ಪಾಲನೆಯಲ್ಲಿ ನೀವು ವಿಫಲವಾದಲ್ಲಿ ನೀವು ಟ್ರಾಫಿಕ್ ದಂಡಕ್ಕೆ ಪಾತ್ರವಾಗಬಹುದು, ಮೊದಲ ಅಪರಾಧಕ್ಕೆ ರೂ.2000 ಹಾಗೂ ಪುನರಾವರ್ತನೆಗೆ ರೂ. 4,000.
  • ನೋ ಕೈಮ್ ಬೋನಸ್ ಗಳು - ಹೋಂಡಾ ಸಿಬಿಎಸ್ ಸ್ಟನ್ನರ್ ಇನ್ಶೂರೆನ್ಸ್ ರಿನ್ಯೂವಲ್ ಸಮಯದಲ್ಲಿ, ನೀವು ನಿಮ್ಮ ಪಾಲಿಸಿ ಅವಧಿಯಲ್ಲಿ ಒಂದು ಕ್ಲೈಮ್ ಅನ್ನೂ ರೈಸ್ ಮಾಡದೇ ಇದ್ದಿದ್ದರೆ, ನಿಮ್ಮ ಇನ್ಶೂರರ್ ನಿಮಗೆ ಪಾಲಿಸಿ ಪ್ರೀಮಿಯಂ ಮೇಲೆ ರೀಯಾಯಿತಿಗಳನ್ನು ನೀಡುತ್ತಾರೆ. ಇದು ಕ್ಲೈಮ್ ರಹಿತ ವರ್ಷಗಳ ಸಂಖ್ಯೆಯನ್ನು ಆಧರಿಸಿ 20% to 50% ವರೆಗೆ ಇರುತ್ತದೆ.

 ಹೋಂಡಾ ಸಿಬಿಎಫ್ ಸ್ಟನ್ನರ್ ಇನ್ಶೂರೆನ್ಸ್ ಅನ್ನು ಖರೀದಿಸುವಾಗ, ನೀವು ಹಲವು ಇನ್ಶೂರರ್ ಗಳನ್ನು ಅವರು ನೀಡುವ ಸೇವಾ ಲಾಭಗಳು, ಪ್ರೀಮಿಯಂ ಮೊತ್ತ, ಕಸ್ಟಮೈಜ್ ಆಯ್ಕೆ, ಐಡಿವಿ(IDV) ಇತ್ಯಾದಿಗಳ ಆಧಾರದ ಮೇಲೆ ಆಯ್ಕೆ ಮಾಡಬೇಕಾಗುತ್ತದೆ. ಇದು ಅವರ ಆಯ್ಕೆಗಳನು ಸುವ್ಯವಸ್ಥಿತವಾಗಿಸಿ ಅರಿವುಳ್ಳ ನಿರ್ಧಾರವನ್ನು ಕೈಗೊಳ್ಳಲು ಸಹಾಯ ಮಾಡುತ್ತದೆ.

ಹೇಗಿದ್ದರೂ, ನೀವು ಈ ನಿಟ್ಟಿನಲ್ಲಿ ಡಿಜಿಟ್ ಇನ್ಶೂರೆನ್ಸ್ ಅನ್ನು ಪರಿಗಣಿಸಬಹುದು.

ಹೋಂಡಾ ಸಿಬಿಎಫ್ ಸ್ಟನ್ನರ್ ಬಗ್ಗೆ ಇನ್ನಷ್ಟು ತಿಳಿಯಿರಿ

ಈ ಹೋಂಡಾ ಮಾದರಿಯ ಪ್ರಮುಖ ವೈಶಿಷ್ಟ್ಯಗಳು ಈ ರೀತಿ ಇವೆ:

  • ಸುರಕ್ಷತೆ - ಇದು ಸುರಕ್ಷತಾ ಕ್ರಮಗಳಾಗಿ ಒಂದು ಆನಲಾಗ್ ಕನ್ಸೋಲ್ ಹಾಗೂ ಡುಜಿಟಲ್ ಫ್ಯುಯೆಲ್ ಗೇಜ್ ಅನ್ನು ಹೊಂದಿದೆ.
  • ಟಯರ್ ಗಳು ಹಾಗೂ ಬ್ರೇಕ್ ಗಳು - ಈ ಮೋಟಾರ್ ಸೈಕಲ್ ಟ್ಯೂಬ್ ಲೆಸ್ ಟಯರ್ ಗಳನ್ನು ಹಾಗೂ ಎಲಾಯ್ ವೀಲ್ ಗಳನ್ನು ಹೊಂದಿದೆ. ಇದರ ಬ್ರೇಕಿಂಗ್ ಘಟಕದಲ್ಲಿ ಡಿಸ್ಕ್ ಫ್ರಂಟ್ ಹಾಗೂ ಹಿಂಬದಿಯ ಬ್ರೇಕ್ ಗಳು ಇವೆ.
  • ಮೈಲೇಜ್ - ಹೋಂಡಾ ಸಿಬಿಎಸ್ ಸ್ಟನ್ನರ್ 60 ಕಿಮಿ/ಲಿ ನ ಮಲೇಜ್ ಅನ್ನು ಹೊಂದಿದೆ.
  • ಎಂಜಿನ್ - ಹವಾನಿಯಂತ್ರಿತ, 4-ಸ್ಟ್ರೋಕ್, ಎಸ್ ಐ ಎಂಜಿನ್, PGM-FI ಅನ್ನು ಹೊಂದಿದ್ದು, ಈ ಬೈಕ್ 124.7ಸಿಸಿ ಡಿಸ್ಪ್ಲೇಸ್ಮೆಂಟ್ ಅನ್ನು ಪಡೆದಿದೆ.
  • ಟ್ರಾನ್ಸ್ಮಿಷನ್ - ಇದು ಕಾನ್ಸ್ಟೆಂಟ್ ಮೆಶ್ 5 ಸ್ಪೀಡ್ ಗೇರ್ ಬಾಕ್ಸ್ ಅನ್ನು ಹೊಂದಿದೆ.

ಹೋಂಡಾ ಮೋಟಾರ್ ಸೈಕಲ್ ಇಷ್ಟೊಂದು ವೈಶಿಷ್ಟ್ಯಗಳಿಂದ ಕೂಡಿದ್ದು ಉತ್ತಮ ಸಂರಕ್ಷಣೆ ಸಾಮರ್ಥ್ಯವನ್ನು ಪ್ರದರ್ಶಿಸಿದರೂ ಕೂಡಾ ಅದು ಅಪಘಾತ, ದುರ್ಘಟನೆಗಳಿಗೆ ಸಿಲುಕುವ ಸಂಭಾವನೆ ಹೆಚ್ಚಿರುತ್ತದೆ. ಆದ್ದರಿಂದಲೇ, ಭಾರೀ ರಿಪೇರಿ ಖರ್ಚುಗಳನ್ನು ಹೊರುವುದಕ್ಕಿಂತ ಹೋಂಡಾ ಸಿಬಿಎಫ್ ಸ್ಟನ್ನರ್ ಇನ್ಶೂರೆನ್ಸ್ ಪಡೆಯುವುದು ಒಂದು ಉತ್ತಮ ಉಪಾಯವಾಗಿದೆ.

ಈ ನಿಟ್ಟಿನಲ್ಲಿ, ಡಿಜಿಟ್ ನಂತಹ ಇನ್ಶೂರರ್ ಗಳು ನಿಮ್ಮ ಅಗತ್ಯಗಳನ್ನು ಸಮರ್ಪಕವಾಗಿ ಪೂರೈಸಬಲ್ಲರು.

ಹೋಂಡಾ ಸಿಬಿಎಫ್ ಸ್ಟನ್ನರ್ - ರೂಪಾಂತರಗಳು ಹಾಗೂ ಎಕ್ಸ್-ಶೋರೂಂ ದರ

ರೂಪಾಂತರಗಳು ಎಕ್ಸ್-ಶೋರೂಂ ದರ
ಸ್ಟನ್ನರ್ ಸಿಬಿಎಫ್ ಸೆಲ್ಫ್ ಡ್ರಂ ಎಲಾಯ್ ₹51,449 ಸ್ಟನ್ನರ್ ಸಿಬಿಎಫ್ ಸೆಲ್ಫ್ ಡಿಸ್ಕ್ ಎಲಾಯ್ ₹58,721 ಸ್ಟನ್ನರ್ ಸಿಬಿಎಫ್ ಸಿಬಿಎಫ್ ಸ್ಟನ್ನರ್ PGM FI ₹65,842

ಹೋಂಡಾ ಸಿಬಿಎಫ್ ಸ್ಟನ್ನರ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು

ನನ್ನ ಥರ್ಡ್-ಪಾರ್ಟಿ ಹೋಂಡಾ ಸಿಬಿಎಫ್ ಸ್ಟನ್ನರ್ ಇನ್ಶೂರೆನ್ಸ್ ಬೈಕ್ ಕಳ್ಳತನವನ್ನೂ ಒಳಗೊಂಡಿದೆಯೇ?

ಇಲ್ಲ, ನಿಮ್ಮ ಹೋಂಡಾ ಬೈಕಿನ ಥರ್ಡ್-ಪಾರ್ಟಿ ಇನ್ಶೂರೆನ್ಸ್ ಪಾಲಿಸಿ ಕೇವಲ ಥರ್ಡ್-ಪಾರ್ಟಿ ಗಾದ ಹಾನಿಗಳನ್ನು ಕವರ್ ಮಾಡುತ್ತದೆ. ಸಂಪೂರ್ಣ ಕವರೇಜ್ ಗಾಗಿ, ನೀವು ಸಿಬಿಎಫ್ ಸ್ಟನ್ನರ್ ಕಾಂಪ್ರೆಹೆನ್ಸಿವ್ ಕವರೇಜ್ ಪಡೆಯಬೇಕಾಗುವುದು.

ನನ್ನ ಸಿಬಿಎಫ್ ಸ್ಟನ್ನರ್ ಇನ್ಶೂರೆನ್ಸ್ ಟಯರ್ ಹಾನಿಗಳನ್ನೂ ಒಳಗೊಂಡಿದೆಯೇ?

ಒಂದು ಸ್ಟಾಂಡರ್ಡ್ ಹೋಂಡಾ ಸಿಬಿಎಫ್ ಸ್ಟನ್ನರ್ ಬೈಕ್ ಇನ್ಶೂರೆನ್ಸ್ ಪಾಲಿಸಿಯು ಟಯರ್ ಹಾನಿಗಳನ್ನು ಕವರ್ ಮಾಡುವುದಿಲ್ಲ.

ಹೋಂಡಾ ಸಿಬಿಎಫ್ ಬೈಕ್ ಇನ್ಶೂರೆನ್ಸ್ ಗೆ ಅದರ ತಯಾರಿ ಹಾಗೂ ರಚನೆ ಮುಖ್ಯವೇಕಾಗಿದೆ?

ನಿಮ್ಮ ಬೈಕಿನ ತಯಾರಿ ಹಾಗೂ ರಚನೆ ಅದರ ಇನ್ಶೂರ್ಡ್ ಡೆಕ್ಲೇರ್ಡ್ ವ್ಯಾಲ್ಯೂ ಅನ್ನು ನಿರ್ಧರಿಸುತ್ತದೆ ಹಾಗೂ ಇದು ನಿಮ್ಮ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ.