ಮೊದಲು ರಾಯಲ್ ಎನ್ಫೀಲ್ಡ್ ಬುಲೆಟ್ ಮೇಲೆ ನಿಮ್ಮ ಕೈಗಳನ್ನು ಇಡಬೇಕೆಂದು ಕನಸು ಕಾಣುತ್ತಿದ್ದೀರಾ? 60 ರಿಂದ 70 ರ ದಶಕದಲ್ಲಿ ಈ ಬೈಕ್ ಸೃಷ್ಟಿಸಿದ ಹವಾ ಈಗಲೂ ಇದೆಯೇ ಎಂದು ಆಶ್ಚರ್ಯ ಪಡುತ್ತಿದ್ದೀರಾ?
ಸರಿ ಹಾಗಾದರೆ, ಈಗಲೂ ಪ್ರತಿ ರಾಯಲ್ ಎನ್ಫೀಲ್ಡ್ ಅನ್ನು ಇನ್ನೂ ಗನ್ನಂತೆ ಸದೃಡವಾಗಿ ತಯಾರಿಸಲಾಗುತ್ತಿದೆಯೇ, ಇನ್ಸೂರೆನ್ಸ್ ಪಾಲಿಸಿಗಳೊಂದಿಗೆ ಅವುಗಳನ್ನು ಉತ್ತಮವಾಗಿ ರಕ್ಷಿಸಬಹುದೇ ಮತ್ತು ಅಂತಹ ಪಾಲಿಸಿಗಳು ನೀಡುವ ಪ್ರಯೋಜನಗಳಾದರೂ ಯಾವುವು ಎಂಬುದರ ಬಗ್ಗೆ ನಾವು ಚರ್ಚಿಸೋಣ ಮತ್ತು ತಿಳಿದುಕೊಳ್ಳೋಣ ಬನ್ನಿ.
ರಾಯಲ್ ಎನ್ಫೀಲ್ಡ್ ಕಂಪನಿಯವರು, ಒಂದು ಬ್ರ್ಯಾಂಡ್ ಆಗಿ, ತಾವು ವಿಶ್ವದಲ್ಲೇ ಅತಿ ಹೆಚ್ಚು ಕಾಲ ಕಾರ್ಯನಿರ್ವಹಿಸುವ ಮೋಟಾರ್ಸೈಕಲ್ ತಯಾರಕರಾಗಿ ನಿಲ್ಲುತ್ತೇವೆ ಎಂಬ ಸರಳ ಸಂಗತಿಯೊಂದಿಗೆ ಸರ್ವೋಚ್ಚ ಹೇಳಿಕೆಯನ್ನು ನೀಡುತ್ತಾರೆ. 1901 ರಲ್ಲಿ ಅವರಿಂದ ಉತ್ಪಾದನೆಯೊಂದಿಗೆ ಪ್ರಾರಂಭವಾದ, ಅವರ ಬುಲೆಟ್ ಮಾಡೆಲ್ ಪ್ರಪಂಚದಲ್ಲೇ ಅತಿ ಹೆಚ್ಚು ಕಾರ್ಯಕ್ಷಮತೆಯ ಮೋಟಾರ್ಸೈಕಲ್ ವಿನ್ಯಾಸವಾಗಿ ನಿಂತಿದೆ.
4 ಸ್ಟ್ರೋಕ್ ಎಂಜಿನ್ನಿಂದ ನಡೆಸಲ್ಪಡುವ ಗಟ್ಟಿಮುಟ್ಟಾದ ವಿನ್ಯಾಸಕ್ಕೆ ಹೆಸರುವಾಸಿಯಾದ ಈ ಮಾದರಿಯು 1931 ರಲ್ಲಿ ಮೊಟ್ಟ ಮೊದಲ ಬಾರಿಗೆ ತಯಾರಾಯಿತು. ಆರಂಭದಲ್ಲಿ ಬುಲೆಟ್ ಅನ್ನು 350 ಸಿಸಿ ಮತ್ತು 500 ಸಿಸಿಯಲ್ಲಿ ಬಿಡುಗಡೆ ಮಾಡಲಾಗಿದ್ದರೂ, ನಂತರ 1933 ರಲ್ಲಿ 250 ಸಿಸಿ ರೂಪಾಂತರವನ್ನು ಪರಿಚಯಿಸಲಾಯಿತು. ಕಟ್ಟುನಿಟ್ಟಾದ ಹಿಂಬದಿಯು ಅದನ್ನು ಗಟ್ಟಿಮುಟ್ಟಾಗಿ ಮಾಡಿತು, ಇದರಿಂದಾಗಿ ಸವಾರನಿಗೆ ಬೇಕಾದ ಸ್ಪ್ರಂಗ್ ಸೀಟ್ ಅವಶ್ಯಕತೆಯನ್ನು ಪೂರೈಸಿತು. ಬ್ರಿಟಿಷ್ ಸೈನ್ಯವು ತಮ್ಮ ಸೇವೆಯಲ್ಲಿ 350 cc ರೂಪಾಂತರವನ್ನು ಪರಿಚಯಿಸಿತು, ಎರಡನೆಯ ಮಹಾಯುದ್ಧದ ಸಮಯದಲ್ಲಿ ಅದನ್ನು ಉತ್ತಮ ಯಶಸ್ಸಿನೊಂದಿಗೆ ಬಳಸಿತು.
ಆದರೆ, ಜನಪ್ರಿಯ ಮಾತುಗಳು ಹೇಳುವಂತೆ - ದೊಡ್ಡ ಶಕ್ತಿಯ ಜೊತೆ ದೊಡ್ಡ ಜವಾಬ್ದಾರಿಯೇ ಇರಲಿದೆ. ಅದಕ್ಕಾಗಿಯೇ ನಿಮ್ಮ ಬೈಕು ವಿವಿಧ ಹಣಕಾಸಿನ ಹೊಣೆಗಾರಿಕೆಗಳಿಂದ ರಕ್ಷಿಸಲ್ಪಟ್ಟಿದೆ ಎಂದು ಖಚಿತಪಡಿಸಿಕೊಳ್ಳಲು, ನೀವು ರಾಯಲ್ ಎನ್ಫೀಲ್ಡ್ ಬುಲೆಟ್ ಇನ್ಸೂರೆನ್ಸ್ ಪಾಲಿಸಿಯನ್ನು ಪಡೆದುಕೊಳ್ಳುವುದು ಬಹಳ ಮುಖ್ಯವಾಗಿದೆ.
ಇಷ್ಟೇ ಅಲ್ಲದೆ, ಮೋಟಾರು ವಾಹನ ಕಾಯ್ದೆ 1988 ರ ಅಡಿಯಲ್ಲಿ ಬೈಕ್ ಇನ್ಸೂರೆನ್ಸ್ ಪಾಲಿಸಿಯನ್ನು ಪಡೆಯುವುದು ಸಹ ಕಡ್ಡಾಯವಾಗಿದೆ. ಕನಿಷ್ಠ ಥರ್ಡ್ ಪಾರ್ಟಿ ಹೊಣೆಗಾರಿಕೆಯ ದ್ವಿಚಕ್ರ ವಾಹನ ಇನ್ಸೂರೆನ್ಸ್ ಪಾಲಿಸಿಯಿಲ್ಲದೆ ನೀವು ಸವಾರಿ ಮಾಡುತ್ತಿದ್ದರೆ, ನೀವು ರೂ.2000/- ಗಳ ಮತ್ತು ಮತ್ತೆ ಅದೇ ತಪ್ಪನ್ನು ಮಾಡುವುದರಿಂದ ರೂ.4000/- ಗಳ ಟ್ರಾಫಿಕ್ ದಂಡವನ್ನು ಕಟ್ಟಬೇಕಾಗಿ ಬರಬಹುದು.