ಎನ್ಫೀಲ್ಡ್ ಕ್ಲಾಸಿಕ್ನಲ್ಲಿ ಕಿಲೋಮೀಟರ್ಗಟ್ಟಲೇ ಗ್ಲೈಡ್ ಮಾಡುವ ಆಲೋಚನೆಯಲ್ಲಿದ್ದೀರಾ? ಆದರೆ, ನೀವು ರೈಡಿಂಗ್ ಗಾಗಿ ನಿಮ್ಮ ಮೋಟಾರ್ಸೈಕಲ್ ಅನ್ನು ಹೊರತೆಗೆಯುವ ಮೊದಲು, ನಿಮ್ಮ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ ಟು ವೀಲರ್ ವೆಹಿಕಲ್ ಗೆ ಒಂದು ಸೂಕ್ತ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಬೇಕು ಎಂದುಕೊಂಡಿದ್ದೀರಾ? ಹಾಗಾದರೆ ಬನ್ನಿ ಟು ವೀಲರ್ ಇನ್ಶೂರೆನ್ಸ್ ಪಾಲಿಸಿಯಿಂದ ನಿಮಗೆ ಹೆಚ್ಚು ಪ್ರಯೋಜನಗಳನ್ನು ನೀಡುವ ಅದರ ವೈಶಿಷ್ಟ್ಯಗಳ ಬಗ್ಗೆ ತಿಳಿದುಕೊಳ್ಳೋಣ!
ರಾಯಲ್ ಎನ್ಫೀಲ್ಡ್ ಮೂಲತಃ ಒಂದು ಬ್ರಿಟಿಷ್ ಮೋಟಾರ್ಸೈಕಲ್ ಕಂಪನಿಯಾಗಿದ್ದು, ಇದು 20 ನೇ ಶತಮಾನದ ಬಹುಪಾಲು ಅವಧಿಯಲ್ಲಿ, ವಿಶೇಷವಾಗಿ ಎರಡೂ ವಿಶ್ವ ಯುದ್ಧಗಳು ನಡೆಯುವ ಸಂದರ್ಭದಲ್ಲಿ ಆಂಗ್ಲ ಸಶಸ್ತ್ರ ಪಡೆಗಳಿಗೆ ಮೋಟಾರ್ಸೈಕಲ್ಗಳನ್ನು ಪೂರೈಸಿತ್ತು.
ರಾಯಲ್ ಎನ್ಫೀಲ್ಡ್ ಕ್ಲಾಸಿಕ್ ಅನ್ನು ಕಂಪನಿಯು 2 ನೇ ವಿಶ್ವ ಮಹಾ ಯುದ್ಧಕ್ಕೆ ಸಲ್ಲಿಸಿದ ಸೇವೆಗೆ ಗೌರವವಾಗಿ ಕಲ್ಪಿಸಿಕೊಂಡಿದೆ. ಅಂದು ಇದು ಕೇವಲ ಯುದ್ಧದ ಸಂಕೇತವಾಗಿರಲಿಲ್ಲ; ಜೊತೆಗೆ ಸವಾರಿ ಸಂಸ್ಕೃತಿಯ ಸಂಕೇತ ಮತ್ತು ಆ ಕಾಲದ ಶಾಸ್ತ್ರೀಯ ದೃಷ್ಟಿಕೋನವೂ ಆಗಿತ್ತು. ಅವರ ದೃಷ್ಟಿಯಲ್ಲಿ ಅಂದಿನಿಂದ ಒಂದೇ ಗುರಿಯೊಂದಿಗೆ, ಮೋಟಾರ್ಬೈಕ್ ಅನ್ನು ಬುಲೆಟ್ನ ಅಸ್ತಿತ್ವದಲ್ಲಿರುವ ಮೇನ್ಫ್ರೇಮ್ನಲ್ಲಿ ವಿನ್ಯಾಸಗೊಳಿಸಲಾಗಿದೆ.
ಎಲ್ಲಾ ಇತರ ರಾಯಲ್ ಎನ್ಫೀಲ್ಡ್ ಮಾದರಿಗಳಂತೆ, ಕ್ಲಾಸಿಕ್ ಸಹ ಭಾರತದಲ್ಲಿ ತಯಾರಾದ ಮೋಟಾರ್ಸೈಕಲ್ಗಳ ಬೆಲೆಬಾಳುವ ಸ್ಪೆಕ್ಟ್ರಮ್ಗೆ ಸೇರಿದೆ. ಅದಕ್ಕಾಗಿಯೇ ಅಪಘಾತ ಅಥವಾ ಇನ್ನಾವುದೇ ಅವಘಡದ ಸಂದರ್ಭದಲ್ಲಿ ಈ ಬೈಕ್ ಗೆ ಉಂಟಾಗುವ ಯಾವುದೇ ಹಾನಿಯನ್ನು ರಿಪೇರಿ ಮಾಡಿಸಲು ನಿಮಗೆ ಸ್ವಲ್ಪ ಹೆಚ್ಚಾಗಿಯೇ ಖರ್ಚಾಗುತ್ತದೆ.
ರಾಯಲ್ ಎನ್ಫೀಲ್ಡ್ ಕ್ಲಾಸಿಕ್ಇನ್ಶೂರೆನ್ಸ್ ಪಾಲಿಸಿಯು ಅಂತಹ ಸಂದರ್ಭಗಳಲ್ಲಿ ಉದ್ಭವಿಸುವ ನಿಮ್ಮ ಹಣಕಾಸಿನ ಹೊಣೆಗಾರಿಕೆಗಳನ್ನು ಕಡಿಮೆ ಮಾಡುವ ಒಂದು ಪ್ರಮುಖ ಸಾಧನವಾಗಿದೆ. ಇದಲ್ಲದೆ, ಮೋಟಾರು ವಾಹನಗಳ ಕಾಯ್ದೆ, 1988 ರ ಪ್ರಕಾರ ಪ್ರತಿ ಮೋಟಾರು ವಾಹನ ಮಾಲೀಕರು ತಮ್ಮ ವಾಹನಕ್ಕಾಗಿ ಥರ್ಡ್ ಪಾರ್ಟಿ ಹೊಣೆಗಾರಿಕೆಯಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಕೇಳಿದ ಸಂದರ್ಭದಲ್ಲಿ, ಒಂದು ವೇಳೆ ಈ ಪಾಲಿಸಿ ನಿಮ್ಮ ಬಳಿ ಇಲ್ಲದಿದ್ದರೆ, ಸಂಚಾರ ದಂಡವಾಗಿ 2000 ರೂಪಾಯಿಗಳು ಮತ್ತು ಅದೇ ತಪ್ಪನ್ನು ಪುನರಾವರ್ತಿಸಿದರೆ 4000 ರೂಪಾಯಿಗಳನ್ನು ಕಟ್ಟಬೇಕಾಗುತ್ತದೆ.