ಟು ವೀಲರ್ ಇನ್ಶೂರೆನ್ಸ್ ಪಾಲಿಸಿಗಳನ್ನು ಖರೀದಿಸುವಾಗ ನಿಮ್ಮ ಆಯ್ಕೆ ಡಿಜಿಟ್ ಈಕೆ ಆಗಿರಬೇಕು ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ, ಈ ಕೆಳಗಿನ ಪಾಯಿಂಟರ್ಗಳನ್ನು ಪರಿಗಣಿಸಿ:
ಗ್ರಾಹಕರಿಗೆ ಪಾಲಿಸಿಗಳ ಸಾಕಷ್ಟು ಆಯ್ಕೆ - ಡಿಜಿಟ್ ನಿಮ್ಮನ್ನು ಕೇವಲ ಒಂದು ಉತ್ಪನ್ನಕ್ಕೆ ನಿರ್ಬಂಧಿಸುವುದಿಲ್ಲ. ಬದಲಾಗಿ, ನಿಮ್ಮ ಹಣಕಾಸಿನ ಹಿನ್ನೆಲೆ, ಅಗತ್ಯತೆಗಳು ಮತ್ತು ಇತರ ಅಂಶಗಳ ಆಧಾರದ ಮೇಲೆ ಆಯ್ಕೆ ಮಾಡಲು ನಾವು ಕೆಲವು ಆಯ್ಕೆಗಳನ್ನು ನೀಡುತ್ತೇವೆ. ನಾವು ನೀಡುವ ಕೆಲವು ಪ್ಲಾನ್ ಗಳು ಇಲ್ಲಿವೆ:
- ಥರ್ಡ್-ಪಾರ್ಟಿ ಲಯಬಿಲಿಟಿ ಟೂ-ವೀಲರ್ ಇನ್ಶೂರೆನ್ಸ್ ಪಾಲಿಸಿ - ಇದೊಂದು ಬೇಸಿಕ್ ಪಾಲಿಸಿಯಾಗಿದ್ದು, ಇದರಲ್ಲಿ ನಿಮ್ಮ ಸ್ಕೂಟರ್ನಿಂದ ಅಪಘಾತಕ್ಕೀಡಾದ ಇತರ ಪಕ್ಷಕ್ಕೆ (ವೈಯಕ್ತಿಕ, ವಾಹನ ಅಥವಾ ಆಸ್ತಿ) ಇನ್ಶೂರರ್ ಹಣಕಾಸಿನ ಸಹಾಯವನ್ನು ನೀಡುತ್ತಾರೆ. ಆದಾಗ್ಯೂ, ಇಂತಹ ಪಾಲಿಸಿಯು ನಿಮ್ಮ ವಾಹನಕ್ಕೆ ಯಾವುದೇ ಹಣಕಾಸಿನ ಸಹಾಯವನ್ನು ಒದಗಿಸುವುದಿಲ್ಲ.
- ಕಾಂಪ್ರೆಹೆನ್ಸಿವ್ ಟು ವೀಲರ್ ಇನ್ಶೂರೆನ್ಸ್ ಪಾಲಿಸಿ - ಇದು ಆಲ್-ರೌಂಡ್ ಪ್ರೊಟೆಕ್ಷನ್ ಅನ್ನು ಸೂಚಿಸುತ್ತದೆ; ಇದರಲ್ಲಿ ಇನ್ಶೂರರ್ ಥರ್ಡ್ ಪಾರ್ಟಿಗೆ ಮಾತ್ರವಲ್ಲದೆ, ಅಪಘಾತಗಳ ಸಮಯದಲ್ಲಿ ಸ್ವಂತ ಸ್ಕೂಟರ್ ಹಾನಿಯನ್ನು ಸರಿಪಡಿಸಲು ಪಾಲಿಸಿಹೋಲ್ಡರ್ ಗೆ ಸಹ ಹಣಕಾಸಿನ ನೆರವನ್ನು ನೀಡುತ್ತಾರೆ. ಹೆಚ್ಚುವರಿಯಾಗಿ, ಅಂತಹ ಪ್ಲಾನ್ ಗಳು ಕಳ್ಳತನದ ಕವರ್ ಮತ್ತು ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಪತ್ತುಗಳ ವಿರುದ್ಧ ರಕ್ಷಣೆಯೊಂದಿಗೆ ಬರುತ್ತವೆ.
ನಿಮ್ಮ ಫ್ಯಾಸಿನೋಗಾಗಿ ನೀವು ಓನ್ ಡ್ಯಾಮೇಜ್ ಕವರ್ ಅನ್ನು ಸಹ ಆರಿಸಿಕೊಳ್ಳಬಹುದು. ಈ ವಿಶೇಷ ಪ್ಲಾನ್, ಸೆಪ್ಟೆಂಬರ್ 2018 ರ ನಂತರ ತಮ್ಮ ಸ್ಕೂಟರ್ ಅನ್ನು ಖರೀದಿಸಿದ ವಾಹನ ಮಾಲೀಕರಿಗೆ ಮಾತ್ರ ಲಭ್ಯವಿರುತ್ತದೆ. ಅಷ್ಟೇ ಅಲ್ಲದೆ, ಪ್ರಶ್ನೆಯಲ್ಲಿರುವ ಬೈಕ್ ಹೊಸದಾಗಿರಬೇಕು ಮತ್ತು ಸೆಕೆಂಡ್ ಹ್ಯಾಂಡ್ ಖರೀದಿಯಲ್ಲ. ಓನ್ ಡ್ಯಾಮೇಜ್ ಪ್ರೊಟೆಕ್ಷನ್ ಎನ್ನುವುದು ಪ್ಲಾನ್ ನ ಥರ್ಡ್ ಪಾರ್ಟಿ ಲಯಬಿಲಿಟಿಯ ಭಾಗವಿಲ್ಲದೆಯೇ ನೀವು ಕಾಂಪ್ರೆಹೆನ್ಸಿವ್ ಕವರೇಜ್ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾದ ಒಂದು ಪಾಲಿಸಿಯನ್ನು ಸೂಚಿಸುತ್ತದೆ.
ಡಿಜಿಟ್ನಲ್ಲಿ, ಈ ಮೂರು ಪ್ಲಾನ್ ಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಲು ನಿಮಗೆ ಅವಕಾಶವಿದೆ. ಎಚ್ಚರಿಕೆಯಿಂದ ಪರಿಗಣಿಸಲು ನಾವು ನಿಮ್ಮನ್ನು ಒತ್ತಾಯಿಸುತ್ತೇವೆ!
- ದೊಡ್ಡ ಸಂಖ್ಯೆಯ ನೆಟ್ವರ್ಕ್ ಗ್ಯಾರೇಜ್ಗಳು - ಡಿಜಿಟ್ ದೇಶಾದ್ಯಂತ ನೆಟ್ವರ್ಕ್ ಗ್ಯಾರೇಜ್ಗಳ ಶ್ರೇಣಿಯೊಂದಿಗೆ ಸಂಬಂಧವನ್ನು ಹೊಂದಿದೆ. ಆದ್ದರಿಂದ, ಒಬ್ಬ ಅಸ್ತಿತ್ವದಲ್ಲಿರುವ ಪಾಲಿಸಿಹೋಲ್ಡರ್ ರಸ್ತೆಯಲ್ಲಿ ಹಠಾತ್ ಅಪಘಾತವನ್ನು ಎದುರಿಸಿದರೆ, ಅವರು ಹಾನಿಗೊಳಗಾದ ಸ್ಕೂಟರ್ ಅನ್ನು ಈ ಕೇಂದ್ರಗಳಲ್ಲಿ ಒಂದಕ್ಕೆ ತೆಗೆದುಕೊಂಡು ಹೋಗಿ ಕ್ಯಾಶ್ಲೆಸ್ ರಿಪೇರಿ ಮಾಡಿಸಬಹುದಾಗಿದೆ. ಈ ಗ್ಯಾರೇಜ್ಗಳಲ್ಲಿ, ಮೊದಲು ಪಾವತಿಸಿ ನಂತರ ರಿಇಂಬರ್ಸ್ಮೆಂಟ್ ಗಾಗಿ ಕಾಯುವ ಅಗತ್ಯವಿಲ್ಲದೆಯೇ ನೀವು ನೇರವಾಗಿ ಇನ್ಶೂರೆನ್ಸ್ ಕವರ್ ಅನ್ನು ಕ್ಲೈಮ್ ಮಾಡಬಹುದು.
- ಉತ್ತಮ ಆರ್ಥಿಕ ಭದ್ರತೆಗಾಗಿ ನಿಮ್ಮ ಐಡಿವಿ(IDV) ಅನ್ನು ಹೆಚ್ಚಿಸಿ - ವಾಹನ ಕಳ್ಳತನ ಅಥವಾ ನಿಮ್ಮ ಸ್ಕೂಟರ್ಗೆ ಸರಿಪಡಿಸಲಾಗದ ಹಾನಿಯ ಬಗ್ಗೆ ನೀವು ಚಿಂತಿತರಾಗಿದ್ದಲ್ಲಿ, ಪ್ರಶ್ನೆಯಲ್ಲಿರುವ ಪಾಲಿಸಿಗಾಗಿ ನೀವು ಇನ್ಶೂರ್ಡ್ ಡಿಕ್ಲೇರ್ಡ್ ಮೌಲ್ಯವನ್ನು ಹೆಚ್ಚಿಸುವುದನ್ನು ಖಚಿತಪಡಿಸಿಕೊಳ್ಳಿ. ಇಂತಹ ದುರದೃಷ್ಟಕರ ಘಟನೆಗಳ ಸಂದರ್ಭದಲ್ಲಿ ನೀವು ಗರಿಷ್ಟ ಹಣಕಾಸಿನ ನೆರವು ಪಡೆಯುವುದಕ್ಕಾಗಿ ಡಿಜಿಟ್ ನಿಮಗೆ ಮುಕ್ತವಾಗಿ ಹಾಗೆ ಮಾಡಲು ಅನುಮತಿಸುತ್ತದೆ.
- ಆನ್ಲೈನ್ ಇನ್ಶೂರೆನ್ಸ್ ಖರೀದಿ ಮತ್ತು ರಿನೀವಲ್ - ಆನ್ಲೈನ್ ವ್ಯವಸ್ಥೆಯ ಮೂಲಕ ನಿಮ್ಮ ಟು ವೀಲರ್ ಇನ್ಶೂರೆನ್ಸ್ ಪಾಲಿಸಿಗಳನ್ನು ಖರೀದಿಸುವ ಅಥವಾ ರಿನ್ಯೂ ಮಾಡುವ ಸಂಪೂರ್ಣ ಪ್ರಕ್ರಿಯೆಯನ್ನು ಡಿಜಿಟ್ ಸರಳಗೊಳಿಸುತ್ತದೆ. ಹೀಗಾಗಿ, ನೀವು ನಮ್ಮನ್ನು ಆಯ್ಕೆ ಮಾಡಿದಾಗ, ನೀವು ನಮ್ಮ ವೆಬ್ಸೈಟ್ಗೆ ಭೇಟಿ ನೀಡಬಹುದು, ನಿಮಗೆ ಬೇಕಾದ ರೀತಿಯ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳಬಹುದು, ಆನ್ಲೈನ್ನಲ್ಲಿ ಪ್ರೀಮಿಯಂ ಪಾವತಿಸಿ, ಪ್ರಯೋಜನಗಳನ್ನು ಪಡೆದುಕೊಳ್ಳಲು ಆರಂಭಿಸಬಹುದು. ಹೌದು, ಅಷ್ಟೊಂದು ಸರಳ! ಅಸ್ತಿತ್ವದಲ್ಲಿರುವ ಪಾಲಿಸಿಹೋಲ್ಡರ್ ಗಳು ಲ್ಯಾಪ್ಸ್ ಆಗಲಿರುವ ಪ್ಲಾನ್ ಗಳನ್ನು ರಿನ್ಯೂ ಮಾಡಲು ಇದೇ ರೀತಿಯ ಆನ್ಲೈನ್ ಪ್ರಕ್ರಿಯೆಯನ್ನು ಅನುಸರಿಸಬಹುದು.
- 24x7 ಕಸ್ಟಮರ್ ಕೇರ್ನ ಪ್ರಯೋಜನವನ್ನು ಪಡೆದುಕೊಳ್ಳಿ - ನೀವು ಯಾವುದೇ ಸಮಯದಲ್ಲಿ ಯಮಹಾ ಫ್ಯಾಸಿನೋ ಇನ್ಶೂರೆನ್ಸ್ ಪಾಲಿಸಿಯನ್ನು, ಅದು ಹಗಲಿರಲಿ ಅಥವಾ ರಾತ್ರಿಯಿರಲಿ, ಕ್ಲೈಮ್ ಮಾಡಬೇಕಾಗಬಹುದು. ಆದ್ದರಿಂದ, ವಿಷಯಗಳನ್ನು ಇನ್ನಷ್ಟು ಸರಳಗೊಳಿಸಲು, ನಾವು 24x7- ಕಸ್ಟಮರ್ ಕೇರ್ ವಿಭಾಗವನ್ನು ಹೊಂದಿದ್ದು, ಈ ಮೂಲಕ ಅಸ್ತಿತ್ವದಲ್ಲಿರುವ ಪಾಲಿಸಿಹೋಲ್ಡರ್ ಗಳಿಗೆ ಗುಣಮಟ್ಟದ ಸಹಾಯವನ್ನು ನೀಡುತ್ತೇವೆ. ನೀವು ಯಾವುದೇ ಸಮಸ್ಯೆಗಳನ್ನು ಎದುರಿಸಿದರೆ ಅಥವಾ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ನಮ್ಮನ್ನು ಸಂಪರ್ಕಿಸಲು ಮುಕ್ತವಾಗಿರಿ.
- ನೋ ಕ್ಲೈಮ್ ಬೋನಸ್ - ಡಿಜಿಟ್ನಲ್ಲಿ, ಪಾಲಿಸಿಹೋಲ್ಡರ್ ಗಳು ಒಂದು ಕ್ಲೈಮ್-ಮುಕ್ತ ವರ್ಷವನ್ನು ಅನುಭವಿಸಿದ ನಂತರ ಅವರಿಗೆ ಕಂಪನ್ಸೇಶನ್ ದೊರೆಯಬೇಕು ಎಂದು ನಾವು ನಂಬುತ್ತೇವೆ. ಇಂತಹ ಪ್ರತಿ ಕ್ಲೈಮ್-ಮುಕ್ತ ಟರ್ಮ್ ಗಾಗಿ ನಿಮ್ಮ ಮೇಲಿನ ಭಾರ ಕಡಿಮೆಯಾಗುವುದನ್ನು ಖಚಿತಪಡಿಸಿಕೊಳ್ಳಲು, ನಾವು ನಿಮ್ಮ ಪಾಲಿಸಿ ಪ್ರೀಮಿಯಂಗಳ ಮೇಲೆ ನೋ ಕ್ಲೈಮ್ ಬೋನಸ್ ಡಿಸ್ಕೌಂಟ್ ಗಳನ್ನು ನೀಡುತ್ತೇವೆ. ಇದರೊಂದಿಗೆ, ನೀವು ಸತತವಾಗಿ ನೋ- ಕ್ಲೈಮ್ ಪಾಲಿಸಿ ವರ್ಷಗಳನ್ನು ಆನಂದಿಸಿದರೆ, ನೀವು ಈ ಡಿಸ್ಕೌಂಟ್ ಗಳನ್ನು ಒಟ್ಟಿಗೆ ಸಹ ಸೇರಿಸಬಹುದು.
ಪ್ರತಿ ಪ್ಲಾನ್ ಅನ್ನು ಮಾರ್ಪಡಿಸಲು ಆಡ್-ಆನ್ಗಳು - ಸಾಮಾನ್ಯವಾಗಿ, ನಿಮ್ಮ ಅವಶ್ಯಕತೆಗಳನ್ನು ಪೂರೈಸಲು ನಮ್ಮ ಬೇಸ್ ಪ್ಲಾನ್ ಸಾಕಾಗುವುದಿಲ್ಲ. ಹೀಗಾಗಿ, ನಿಮ್ಮ ಟು ವೀಲರ್ ಗಳಿಗೆ ಅಪಘಾತದ ಹಾನಿಯಾಗುವುದರಿಂದ ನಿಮ್ಮ ಹಣಕಾಸಿನ ಪರಿಸ್ಥಿತಿಯು ಎಂದಿಗೂ ಏರುಪೆರಾಗದಂತೆ ಖಚಿತಪಡಿಸಿಕೊಳ್ಳಲು, ನಾವು ಡಿಜಿಟ್ನಲ್ಲಿ ಆಡ್-ಆನ್ಗಳ ಕವರ್ಗಳ ಶ್ರೇಣಿಯನ್ನು ನೀಡುತ್ತಿದ್ದೇವೆ:
ಇವುಗಳಲ್ಲಿ ಪ್ರತಿಯೊಂದೂ ವಿಭಿನ್ನ ಉದ್ದೇಶವನ್ನು ಪೂರೈಸುತ್ತದೆ ಆದರೆ ನಿಮ್ಮ ಸ್ಕೂಟರ್ನ ರಕ್ಷಣೆಯನ್ನು ಹೆಚ್ಚಿಸುತ್ತದೆ.
- ಯಾವುದೇ ಡಿಲೇ ಇಲ್ಲದೆ ಆನ್ಲೈನ್ ಕ್ಲೈಮ್ ಇತ್ಯರ್ಥ - ನಿಮ್ಮ ಯಮಹಾ ಫ್ಯಾಸಿನೋ ಇನ್ಶೂರೆನ್ಸ್ ಅನ್ನು ಕ್ಲೈಮ್ ಮಾಡುವುದು ಗೊಂದಲಮಯ ಎಂದು ನೀವು ಭಾವಿಸಿದರೆ, ಮತ್ತೊಮ್ಮೆ ಯೋಚಿಸಿ. ಡಿಜಿಟ್ ಕ್ಲೈಮ್ ಫೈಲಿಂಗ್ ಮತ್ತು ಇತ್ಯರ್ಥಕ್ಕಾಗಿ ಒಂದು ಸಂಪೂರ್ಣ ಆನ್ಲೈನ್ ಕಾರ್ಯವಿಧಾನವನ್ನು ಅನುಸರಿಸುತ್ತದೆ. ನಮ್ಮ ಆನ್ಲೈನ್ ಪೋರ್ಟಲ್ಗೆ ಲಾಗ್ ಇನ್ ಮಾಡಿ, ಅಧಿಕೃತ ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ಕ್ಲೈಮ್ ಅನ್ನು ಫೈಲ್ ಮಾಡಿ ಮತ್ತು ಡಾಕ್ಯುಮೆಂಟ್ಗಳ ಸಾಫ್ಟ್ ಕಾಪಿಗಳೊಂದಿಗೆ ಅದನ್ನು ಸಲ್ಲಿಸಿ. ಅಧಿಕೃತ ತಪಾಸಣೆ ಪ್ರಕ್ರಿಯೆ ಇರುವುದಿಲ್ಲ. ನಿಮ್ಮ ಸ್ಮಾರ್ಟ್ಫೋನ್ ಬಳಸಿ ನೀವು ಸ್ವತಪಾಸಣೆ ಮಾಡಬಹುದು. ಇದರರ್ಥ ಬಹುತೇಕ ಯಾವುದೇ ಕಾಯುವಿಕೆ ಅಥವಾ ಡಿಲೇ ಇಲ್ಲ. ಕ್ಲೈಮ್ಗಳನ್ನು ಕೆಲವೇ ನಿಮಿಷಗಳಲ್ಲಿ ಅಪ್ರುವ್ ಮಾಡಲಾಗುತ್ತದೆ.
ಯಮಹಾ ಫ್ಯಾಸಿನೋ ಒಂದು ಅಸಾಧಾರಣ ಪ್ರಯಾಣಿಕ ಸ್ಕೂಟರ್ ಆಗಿದ್ದು, ನೀವು ಅಗತ್ಯ ಕಾಳಜಿಯನ್ನು ತೆಗೆದುಕೊಂಡರೆ ಖರೀದಿಸಿದ ವರ್ಷಗಳ ನಂತರವು ಇದು ಹಾಗೇ ಉಳಿಯುವುದು. ಒಂದು ಯೋಗ್ಯವಾದ ಇನ್ಶೂರೆನ್ಸ್ ಪಾಲಿಸಿ ಮತ್ತು ಪೂರೈಕೆದಾರರು ಅಗತ್ಯವಿದ್ದಾಗ ನಿರ್ವಹಣೆ ಮತ್ತು ರಿಪೇರಿಗೆ ಸಹಾಯ ಮಾಡಬೇಕು.