ಯಮಹಾ, 1955 ರಲ್ಲಿ ಸ್ಥಾಪಿಸಲಾದ, ಮೋಟಾರ್ ಸೈಕಲ್ ಗಳ ಜಪಾನಿ ತಯಾರಕರಾಗಿದ್ದಾರೆ. ಇದರ ಪ್ರಧಾನ ಕಛೇರಿಯು ಶಿಜೂಕಾ ಜಪಾನಿನಲ್ಲಿದೆ. ಭಾರತದಲ್ಲಿ, ಯಮಹಾ ತನ್ನ ಆರಂಭಿಕ ಕಾರ್ಯಾಚರಣೆಗಳನ್ನು 1985 ರಲ್ಲಿ ಜಂಟಿ ಉದ್ಯಮವಾಗಿ ಪ್ರಾರಂಭಿಸಿತು. ಇಂದು, ದೇಶದಲ್ಲಿ ಈ ಕಂಪನಿಯು ಹರ್ಯಾಣ, ಉತ್ತರ ಪ್ರದೇಶ ಹಾಗೂ ತಮಿಳು ನಾಡಿನಲ್ಲಿ ಮೂರು ತಯಾರಿಕಾ ಘಟಕಗಳನ್ನು ಹೊಂದಿದೆ.
ಯಮಹಾದ ಯಶಸ್ಸಿನ ಪ್ರಾಥಮಿಕ ಕಾರಣವು ಅದರ ಗ್ರಾಹಕ ಕೇಂದ್ರಿತ ನಿಲುವಾಗಿದೆ. ದೇಶಾದ್ಯಂತ 500 ಡೀಲರ್ ಗಳನ್ನು ಹೊಂದಿದ್ದು, ಯಮಹಾ ಗ್ರಾಹಕರು ಸ್ಪೋರ್ಟ್ಸ್ ಬೈಕ್, ಸೂಪರ್ ಬೈಕ್ಸ್, ಸ್ಟ್ರೀಟ್ ಬೈಕ್ ಹಾಗೂ ಸ್ಕೂಟರ್ ಗಳಿಂದ ಆಯ್ಕೆ ಮಾಡಬಹುದು.
ಭಾರತದಲ್ಲಿ ಲಭ್ಯವಿರುವ ಕೆಲವು ಜನಪ್ರಿಯ ಯಮಹಾ ಮಾದರಿಗಳು ಇಲ್ಲಿವೆ:
ಯಮಹಾ ಫ಼್ಯಾಸಿನೋ
ಯಮಹಾ ಎಫ್ ಜೆಡ್ 25
ಯಮಹಾದ ವ್ಯಾಪ್ತಿಯಲ್ಲಿ ಪ್ರೀಮಿಯಂ, ದುಬಾರಿ ಬೈಕ್ ಗಳ ಜೊತೆ ಹೆಚ್ಚು ಕೈಗೆಟಕುವಂತಹ ಆಯ್ಕೆ ಗಳೂ ಇವೆ. ಬೈಕ್ ನ ದರವನ್ನು ಲೆಕ್ಕಿಸದೆಯೇ, ಸರಿಯಾದ ಯಮಹಾ ಬೈಕ್ ಇನ್ಶೂರೆನ್ಸ್ ಯೋಜನೆಯನ್ನು ಆಯ್ಕೆ ಮಾಡುವುದು ಮುಖ್ಯವಾಗಿದೆ.
ಇಂತಹ ಯೋಜನೆಗಳು ಅಪಘಾತದ ಸಂದರ್ಭದಲ್ಲಿ ನಿಮ್ಮ ವಾಹನ ಅಥವಾ ಥರ್ಡ್ ಪಾರ್ಟೀ ವಾಹನಕ್ಕಾದ ಹಾನಿಯ ಆರ್ಥಿಕ ಹೊಣೆಗಾರಿಕೆಗಳನ್ನು ತಪ್ಪಿಸಲು ನಿಮಗೆ ಸಹಾಯ ಮಾಡುತ್ತದೆ.
ಯಮಹಾ ಬೈಕ್ ಗಳು ಭಾರತದಲ್ಲಿ ಇಷ್ಟು ಜನಪ್ರಿಯ ಏಕಾಗಿವೆ?
ಯಮಹಾ ಬೈಕ್ ಗಳು ದೇಶದಲ್ಲಿ ಅಗ್ರಸ್ಥಾನವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿವೆ, ಇದಕ್ಕೆ ಕೆಲವು ಪ್ರಾಥಮಿಕ ಕಾರಣಗಳು ಇಲ್ಲಿವೆ
ಉತ್ಪನ್ನಗಳ ವ್ಯಾಪಕ ಶ್ರೇಣಿ : ಹಲವು ಕಂಪನಿಗಳಿಗಿಂತ ಭಿನ್ನವಾಗಿ, ಯಮಹಾವು ಅಪರೂಪದ ಹಾಗೂ ನಿಯಮಿತ ರೈಡರ್ ಇಬ್ಬರಿಗೂ ಒದಗಿಸುತ್ತದೆ. ವಾಹನಗಳ ಇಂತಹ ವ್ಯಾಪಕ ಶ್ರೇಣಿಯೊಂದಿಗೆ, ದರಗಳು ಕೂಡಾ ವಿಭಿನ್ನವಾಗಿರುತ್ತವೆ. ನಿಮ್ಮ ಆಸಕ್ತಿ, ಬಜೆಟ್ ಹಾಗೂ ಅಗತ್ಯಗಳ ಪ್ರಕಾರ, ನೀವು ನಿಮಗೆ ಹೆಚ್ಚು ಸೂಕ್ತವೆನಿಸುವ ಸ್ಕೂಟರ್ ಅಥವಾ ಬೈಕ್ ಅನ್ನು ಖರೀದಿಸಬಹುದು.
ನಿರ್ವಹಣೆ-ಕೇಂದ್ರಿತ ಬೈಕ್ ಗಳು : ಯಮಹಾದ ಪ್ರತಿಯೊಂದು ಬೈಕ್ ಕೂಡಾ ಖಚಿತವಾದ ಉನ್ನತ ನಿರ್ವಹಣೆಯನ್ನು ನೀಡುತ್ತದೆ. ಎಂಜಿನ್ ನ ಕ್ಯೂಬಿಕ್ ಸಾಮರ್ಥ್ಯ, ನಿಭಾಯಿಸುವಿಕೆ, ಸಸ್ಪೆನ್ಷನ್ ಹಾಗೂ ವಾಹನದ ಇತರ ಮುಖ್ಯ ಭಾಗಗಳು ನಿಮಗೆ ಉತ್ತಮ ರೈಡಿಂಗ್ ಅನುಭವವನ್ನು ಒದಗಿಸುವುದರ ಜೊತೆ ಕೊನೆಯವರೆಗೆ ಕಾರ್ಯನಿರ್ವಹಿಸುತ್ತವೆ.
ಶ್ರೇಷ್ಠ ಗ್ರಾಹಕ ಸೇವೆ - ಯಮಹಾ ಹೆಸರುವಾಸಿಯಾಗಿರುವ ಒಂದು ಜಾಗತಿಕ ಬ್ರ್ಯಾಂಡ್ ಆಗಿದೆ. ಆದ್ದರಿಂದ, ಕಂಪನಿಯು, ಶ್ರೇಷ್ಠ ಗ್ರಾಹಕ ಸೇವೆಯನ್ನು ಒದಗಿಸುತ್ತದೆ. ಸಣ್ಣಪುಟ್ಟ ಪ್ರಶ್ನೆಗಳನ್ನು ಉತ್ತರಿಸುವುದರಿಂದ ಹಿಡಿದು ಬೈಕ್ ನ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿಯನ್ನು ನೀಡುವವರೆಗೆ, ಯಮಹಾ ಗ್ರಾಹಕ ಸೇವಾ ಕೇಂದ್ರವು ನೀವು ಜಾಗತಿಕ ಯಮಹಾ ಕುಟುಂಬದ ಒಂದು ಅಮೂಲ್ಯ ಸದಸ್ಯರು ಎಂಬ ಭಾವನೆಯನ್ನು ನೀಡುತ್ತದೆ.
ಈಗ ನೀವು ಯಮಹಾ ಬೈಕ್ ಭಾರತೀಯ ಜನಸಂಖ್ಯೆ ಮಧ್ಯೆ ಇಷ್ಟು ಜನಪ್ರಿಯ ಏಕಾಗಿದೆ ಎಂದು ತಿಳಿದ ನಂತರ, ಇಂತಹ ಬೆಲೆಬಾಳುವ ಸ್ವತ್ತನ್ನು ಕಾಪಾಡುವುದು ಹೇಗೆ ಎಂಬುವುದನ್ನು ತಿಳೀಯಬೇಕಾಗಿದೆ.
ನಿಮ್ಮ ಬೈಕ್(ಹಾಗೂ ನೀವು ಅದರ ಮೇಲೆ ಮಾಡಿದ ಹೂಡಿಕೆ)ನೀವು ಅದಕ್ಕಾಗಿ ಇನ್ಶೂರೆನ್ಸ್ ಕವರ್ ಖರೀದಿಸಿದಾಗ ಮಾತ್ರ ಸಂಪೂರ್ಣವಾಗಿ ಸುರಕ್ಷಿತವಾಗುತ್ತದೆ.