ಬೈಕ್ ಇನ್ಶೂರೆನ್ಸಿನಲ್ಲಿ ಎನ್‌.ಸಿ.ಬಿ

ರಿಯಾಯಿತಿಯೊಂದಿಗೆ ಬೈಕ್ ಇನ್ಶೂರೆನ್ಸ್ ಕೋಟ್ ಪಡೆಯಿರಿ

Third-party premium has changed from 1st June. Renew now

ಬೈಕ್ ಇನ್ಶೂರೆನ್ಸಿನಲ್ಲಿ ನೋ ಕ್ಲೈಮ್ ಬೋನಸ್ (NCB)

ನಿಮ್ಮ ಬಾಲ್ಯ ನಿಮಗೆ ನೆನಪಿದೆಯೇ? ನೀವು 5 ಅಥವಾ 6 ವರ್ಷದವರಾಗಿದ್ದಾಗ, ನಿಮ್ಮ ತಂದೆ ನಿಮಗೆ ಇಡೀ ದಿನ ಚೆನ್ನಾಗಿ ವರ್ತಿಸಿದರೆ , ಕಷ್ಟಪಟ್ಟು ಓದಿದರೆ ಮತ್ತು ತೊಂದರೆ ಕೊಡದಿದ್ದರೆ, ನಿಮಗೆ ಸಿಹಿತಿಂಡಿ ಸಿಗುತ್ತದೆ ಎಂದು ಹೇಳುತ್ತಿದ್ದದ್ದು? ನೋ ಕ್ಲೈಮ್ ಬೋನಸ್ (NCB) ಎಂದರೆ ಉತ್ತಮ ಶಿಸ್ತಿನ ಬೈಕರ್ ಆಗಿರುವ ಕ್ಯಾಂಡಿ ಆಗಿದೆ.

ಈಗ ನೀವು ಕೇಳಬಹುದು, ಬೋನಸ್‌ಗೂ, ಉತ್ತಮ ಬೈಕ್ ಸವಾರಿಗೂ ಏನು ಸಂಬಂಧವಿದೆ ಎಂದು, ಅಲ್ಲವೇ? ಒಂದು ವೇಳೆ ನೀವು ಬೈಕ್ ಇನ್ಶೂರೆನ್ಸ್ ಅನ್ನು ಖರೀದಿಸಿದ್ದರೆ ಹಾಗೂ ನೀವು ಸುರಕ್ಷಿತವಾಗಿ ಚಾಲನೆ ಮಾಡಿದ್ದರೆ ಮತ್ತು ಬೈಕ್ ಅನ್ನು ಸರಿಯಾಗಿ ಮೆಂಟೇನ್ ಮಾಡಿದ್ದರೆ, ನೀವು ಇನ್ಶೂರೆನ್ಸ್ ಕ್ಲೈಮ್ ಮಾಡುವ ಅಗತ್ಯವಿಲ್ಲ, ಏಕೆಂದರೆ ಕ್ಲೈಮ್ ಮಾಡಲು ಯಾವುದೇ ಹಾನಿ ಇರುವುದಿಲ್ಲ!

ಬೈಕ್ ಇನ್ಶೂರೆನ್ಸಿನಲ್ಲಿ NCB ಎಂದರೇನು?

ನಿಮ್ಮ ಇನ್ಶೂರೆನ್ಸ್ ಸಂಸ್ಥೆಯವರು ನಿಮಗೆ ಸುರಕ್ಷಿತವಾಗಿ ಚಾಲನೆ ಮಾಡಿದರೆ ಮತ್ತು ನಿಮ್ಮ ಪಾಲಿಸಿ ನವೀಕರಣದ ಮೇಲೆ ಒಂದು ವರ್ಷದವರೆಗೆ ಕ್ಲೈಮ್ ಸಂಗ್ರಹಿಸದಿದ್ದರೆ, ನೀವು ಪ್ರೀಮಿಯಂನಲ್ಲಿ ರಿಯಾಯಿತಿಯನ್ನು ಪಡೆಯುತ್ತೀರಿ ಎಂದು ಹೇಳುತ್ತಾರೆ. ಈ ರಿಯಾಯಿತಿಯನ್ನೇ ನೋ ಕ್ಲೈಮ್ ಬೋನಸ್  (NCB) ಎಂದು ಕರೆಯಲಾಗುತ್ತದೆ.

ಔಪಚಾರಿಕವಾಗಿ ಎನ್‌.ಸಿ.ಬಿ ಅನ್ನು, ಪಾಲಿಸಿಯ ವರ್ಷದಲ್ಲಿ ಕ್ಲೈಮ್ ಮಾಡದೇ ಇರುವ ಪಾಲಿಸಿದಾರನಿಗೆ ನೀಡಲಾಗುವ ಪ್ರೀಮಿಯಂ ಮೇಲಿನ ರಿಯಾಯಿತಿ ಎಂದು ವ್ಯಾಖ್ಯಾನಿಸಲಾಗಿದೆ. ದೈತ್ಯ ಕ್ಲೇಮ್'ಗಳನ್ನು ತಡೆಯಲು ಮತ್ತು ಕೆಲವು ರೀತಿಯ ಶಿಸ್ತುಗಳನ್ನು ಹುಟ್ಟುಹಾಕಲು, ನೋ ಕ್ಲೈಮ್ ಬೋನಸ್ ಪರಿಕಲ್ಪನೆಯನ್ನು ಪರಿಚಯಿಸಲಾಯಿತು (ಆದರೂ ನಾವು ಕ್ಲೇಮ್'ಗಳನ್ನು ಪ್ರೀತಿಸುತ್ತೇವೆ ಮತ್ತು ಜನರಿಗೆ ಸಹಾಯ ಮಾಡುತ್ತೇವೆ!).

ಒಳ್ಳೆಯ ಸುದ್ದಿ ಏನೆಂದರೆ, ನೀವು ಉತ್ತಮ ನಡವಳಿಕೆಯೊಂದಿಗೆ ಮುಂದುವರೆದರೆ ಮತ್ತು ನಿಮ್ಮ ಬೈಕ್ ಯಾವುದೇ ಸಮಸ್ಯೆಗಳನ್ನು , ಹಾನಿಗಳನ್ನು ಅಥವಾ ಅಪಘಾತಗಳನ್ನು ಎದುರಿಸಿಲ್ಲದಿದ್ದರೆ, ಆಗ ನೀವು ಆ ವರ್ಷಗಳಲ್ಲಿ ನಿಮ್ಮ ನೋ ಕ್ಲೈಮ್ ಬೋನಸ್‌ಗಳನ್ನು ಸಂಗ್ರಹಿಸಬಹುದು. ಇದು ನಿಮ್ಮ ಪಾಕೆಟ್‌ಗೆ ಎಷ್ಟು ಚೆನ್ನಾಗಿ ಕೆಲಸ ಮಾಡುತ್ತದೆ ಎಂಬುದನ್ನು ನಾವು ಸ್ವಲ್ಪ ಸಮಯದ ನಂತರ ತಿಳಿಸುತ್ತೇವೆ .

ನೀವು ಹೊಸ ಬೈಕ್ ಖರೀದಿಸಿದಾಗ, ನೀವು NCB ಅನ್ನು ವರ್ಗಾಯಿಸಬಹುದೇ?

ಇನ್ನೂ ಒಂದು ಒಳ್ಳೆಯ ಸುದ್ದಿ ಏನೆಂದರೆ, ಸಂಗ್ರಹಿಸಿದ ಎನ್‌.ಸಿ.ಬಿ(NCB)ಬೋನಸ್ ಒಂದು ಪ್ರಸಿದ್ಧ ಪಗ್‌ನಂತಿದೆ. ನೀವು ಎಲ್ಲಿಗೆ ಹೋದರೂ ಅದು ನಿಮ್ಮೊಂದಿಗೆ ಹೋಗುತ್ತದೆ. ಅಂದರೆ, ನೀವು ಹೊಸ ಬೈಕ್ ಖರೀದಿಸಲು ನಿರ್ಧರಿಸಿದರೆ, ನೀವು ಪಾಲಿಸಿದಾರರಾಗಿ ಉಳಿಯುವವರೆಗೆ ಅದನ್ನು ನಿಮ್ಮ ಹಳೆಯ ವಾಹನದಿಂದ ಹೊಸ ವಾಹನಕ್ಕೆ ವರ್ಗಾಯಿಸಬಹುದು. ನಿಮ್ಮ ಎನ್‌.ಸಿ.ಬಿ(NCB),  ಪಾಲಿಸಿದಾರರಾಗಿರುವ ನಿಮಗಾಗಿಯೇ ಹೊರತು, ನಿಮ್ಮ ಬೈಕ್‌ಗಾಗಿ ಅಲ್ಲ.

ಬೈಕ್ ಇನ್ಶೂರೆನ್ಸಿನಲ್ಲಿ ಎನ್‌.ಸಿ.ಬಿ(NCB)ಅನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ

ನಿಮ್ಮ ಕಾಂಪ್ರೆಹೆನ್ಸಿವ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯ (comprehensive two wheeler insurance policy) ಮೊದಲ ನವೀಕರಣದ ನಂತರ ಮಾತ್ರವೇ ನಿಮ್ಮ ನೋ ಕ್ಲೈಮ್  ಬೋನಸ್ ಪ್ರಾರಂಭ ಆಗುತ್ತದೆ. (ಗಮನಿಸಿ, ಎನ್‌.ಸಿ.ಬಿ(NCB)ನಿಮ್ಮ ಪ್ರೀಮಿಯಂನ ಸ್ವಂತ ಡ್ಯಾಮೇಜ್ ಕಾಂಪೊನೆಂಟ್‌ಗೆ  ಅನ್ವಯಿಸುತ್ತದೆ. ಇದು ಐಡಿವಿ(IDV)ಅಥವಾ ಬೈಕ್‌ನ ಇನ್ಶೂರೆನ್ಸ್  ಘೋಷಿತ ಮೌಲ್ಯವನ್ನು ಆಧರಿಸಿ ಲೆಕ್ಕಹಾಕಿದ ಪ್ರೀಮಿಯಂ, ಬೈಕಿನ ಸವೆತ ಮತ್ತು  ವೆಚ್ಚವನ್ನು ಕಡಿಮೆ ಮಾಡುತ್ತದೆ. ಬೋನಸ್,  ಥರ್ಡ್ ಪಾರ್ಟಿ ಕವರ್ ಪ್ರೀಮಿಯಂಗೆ ಅನ್ವಯಿಸುವುದಿಲ್ಲ) 

ನೀವು ಮೊದಲ ಕ್ಲೇಮ್-ಫ್ರೀ ವರ್ಷದ ನಂತರ, ನಿಮ್ಮ ಪ್ರೀಮಿಯಂನಲ್ಲಿ 20% ರಿಯಾಯಿತಿಯನ್ನು ಸ್ವೀಕರಿಸಲು ಪ್ರಾರಂಭಿಸುತ್ತೀರಿ. ಪ್ರತಿ ವರ್ಷ ಪಾಲಿಸಿ ನವೀಕರಣದ ಸಮಯದಲ್ಲಿ, ರಿಯಾಯಿತಿಯು 5-10% ರಷ್ಟು ಹೆಚ್ಚಾಗುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಪ್ರತಿ ವರ್ಷವೂ ನೀವು ಕ್ಲೈಮ್ ಮಾಡದಿದ್ದಲ್ಲಿ, ರಿಯಾಯಿತಿಯು ಸಂಗ್ರಹವಾಗುತ್ತದೆ. ಬಹುತೇಕವಾಗಿ ಪಾಲಿಸಿದಾರರ ಉತ್ತಮ ನಡವಳಿಕೆಯ ಪ್ರತಿಫಲವು ಉತ್ತಮವಾಗುತ್ತಲೇ ಇರುತ್ತದೆ.

ಉದಾಹರಣೆಗೆ, ನೀವು ಮೊದಲ ಪಾಲಿಸಿ ವರ್ಷದ ಕೊನೆಯಲ್ಲಿ 20% ಎನ್‌.ಸಿ.ಬಿ(NCB)ಪಡೆದಿದ್ದರೆ ಮತ್ತು ಎರಡನೇ ವರ್ಷದಲ್ಲಿ ನೀವು ಕ್ಲೈಮ್ ಮಾಡದಿದ್ದರೆ, ನಿಮ್ಮ ಪ್ರೀಮಿಯಂ ಮೇಲಿನ ರಿಯಾಯಿತಿಯು 25-30% ವರೆಗೆ ಹೆಚ್ಚಾಗುತ್ತದೆ,  30-35%ರಷ್ಟು ನಂತರದ ವರ್ಷದಲ್ಲಿ, ಮತ್ತು ಹೀಗೆಯೇ ಸಾಗುತ್ತದೆ. ಈ ರೀತಿಯಾಗಿ, ನೀವು 5 ವರ್ಷಗಳಲ್ಲಿ ನಿಮ್ಮ ಪ್ರೀಮಿಯಂನಲ್ಲಿ 50% ವರೆಗೆ ರಿಯಾಯಿತಿಯನ್ನು ಪಡೆಯಬಹುದು.

ಪರಿಶೀಲಿಸಿ: ಎನ್‌.ಸಿ.ಬಿ(NCB)ರಿಯಾಯಿತಿಯೊಂದಿಗೆ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಪಡೆಯಲು ಬೈಕ್ ಇನ್ಶುರೆನ್ಸ್ ಕ್ಯಾಲ್ಕುಲೇಟರ್ ಬಳಸಿ.

ಕ್ಲೈಮ್ ಫ್ರೀ ವರ್ಷ ನೋ ಕ್ಲೈಮ್ ಬೋನಸ್
ಒಂದು ವರ್ಷದ ನಂತರ 20%
ಎರಡು ವರ್ಷದ ನಂತರ 25%
ಮೂರು ವರ್ಷದ ನಂತರ 35%
ನಾಲ್ಕು ವರ್ಷದ ನಂತರ 45%
ಐದು ವರ್ಷದ ನಂತರ 50%

ದುರಾಸೆ ಬೇಡ, ಏಕೆಂದರೆ ಐದು ವರ್ಷಗಳ ನಂತರ, ಒಂದು ವರ್ಷದಲ್ಲಿ ನೀವು ಕ್ಲೈಮ್ ಮಾಡದಿದ್ದರೂ ಸಹ, ರಿಯಾಯಿತಿಯು ಹೆಚ್ಚಾಗುವುದಿಲ್ಲ.  ಈಗ ಈ ಲೆಕ್ಕಾಚಾರವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಸರಳ ಉದಾಹರಣೆಯೊಂದಿಗೆ ನೋಡೋಣ.

ನೀವು 2010 ರಲ್ಲಿ ಸುವೇವ್ ಹೈ-ಸ್ಪೀಡ್ ಬೈಕನ್ನು ಖರೀದಿಸಿದ್ದೀರಿ. ಜಗತ್ತಿನಲ್ಲಿ ನಿಮ್ಮಂತಹ ಇನ್ನೊಬ್ಬ ಆದರ್ಶ ಬೈಕರ್ ಅಥವಾ ಪಾಲಿಸಿ ಹೊಂದಿರುವವರು ಇರಲು ಸಾಧ್ಯವಿಲ್ಲ. ನಿಮ್ಮ ಪ್ರೀಮಿಯಂ ಅನ್ನು ನೀವು  ಸರಿಯಾದ ಸಮಯಕ್ಕೆ ಪಾವತಿಸಿದ್ದೀರಿ. ನೀವು ಮೊದಲ ವರ್ಷ ಅಥವಾ ಎರಡನೇ ವರ್ಷ ಅಥವಾ ಐದನೇ ವರ್ಷದಲ್ಲಿ ಕ್ಲೈಮ್ ಮಾಡಿಲ್ಲ

ಈಗ ನೀವು, ಈ ಬೈಕ್ ಸಾಕು ಎಂದುಕೊಂಡಿದ್ದೀರಿ. ನೀವು ಈ ಬೈಕ್ ಅನ್ನು ಮಾರಾಟ ಮಾಡಿ, ಅದರ ಬದಲಿಗೆ 2015ರಲ್ಲಿ ಮತ್ತೊಂದು ನುಣುಪಾದ ಮಾಡೆಲ್ ಅನ್ನು ಮನೆಗೆ ತರುತ್ತೀರಿ. ನಿಮ್ಮ ಹೊಸ ಬೈಕ್ ಜೊತೆಗೆ ನಿಮ್ಮ ಬೈಕ್ ಇನ್ಶೂರೆನ್ಸ್ ಅನ್ನು ನೀವು ಪಡೆದುಕೊಂಡಿದ್ದೀರಿ. ಹೊಸ ವಾಹನದ ಸ್ವಂತ ಹಾನಿ ಪ್ರೀಮಿಯಂ  (own damage premium) 3000ರೂಗಳು ಎಂದು ಭಾವಿಸೋಣ. ಆದರೆ ನೀವು 5 ವರ್ಷಗಳ ಕಾಲ ಎನ್‌.ಸಿ.ಬಿ(NCB)ಅನ್ನು ಸಂಗ್ರಹಿಸಿದ್ದೀರಿ. ಆದ್ದರಿಂದ ನಿಮ್ಮ ಹೊಸ ವಾಹನದ ಪ್ರೀಮಿಯಂನಲ್ಲಿ ನೀವು 50% ವರೆಗೆ ರಿಯಾಯಿತಿಯನ್ನು ಪಡೆಯುತ್ತೀರಿ. ಆದರೆ ಸ್ವಂತ ಹಾನಿ ಪ್ರೀಮಿಯಂಗೆ  (own damage premium) ನೀವು ರೂ.1500 ಮಾತ್ರ ಪಾವತಿಸಬೇಕಾಗುತ್ತದೆ!

ನಾನು ಯಾವಾಗ ಎನ್‌.ಸಿ.ಬಿ(NCB)ಕಳೆದುಕೊಳ್ಳುತ್ತೇನೆ ?

ನಿಮ್ಮ ಪಾಲಿಸಿಯ ಯಾವುದೇ ವರ್ಷವನ್ನು ಲೆಕ್ಕಿಸದೆ, ನೀವು ಕ್ಲೈಮ್ ಮಾಡಿದ ನಂತರ ಎನ್‌.ಸಿ.ಬಿ(NCB) ಅನ್ನು ಸೊನ್ನೆಗೆ ಮರುಹೊಂದಿಸಲಾಗುತ್ತದೆ. ಇದಕ್ಕೆ ರಿಯಾಯತಿ ಇದೆಯೇ ? ಖಂಡಿತ ಇದೆ. ನಿಮ್ಮ ಪಾಲಿಸಿಯಲ್ಲಿ ನೀವು ಎನ್‌.ಸಿ.ಬಿ(NCB)ಪ್ರೊಟೆಕ್ಷನ್ ಫೀಚರ್ ಅನ್ನು ಸೇರಿಸಿದ್ದರೆ, ಈ ನಿಯಮವು ಅನ್ವಯಿಸುವುದಿಲ್ಲ.

ನಾನು ಕ್ಲೈಮ್ ಮಾಡಲು ಮತ್ತು ನನ್ನ ಎನ್‌.ಸಿ.ಬಿ(NCB)ಅನ್ನು ಹಾಗೆಯೇ ಉಳಿಸಿಕೊಳ್ಳಲು ಮಾರ್ಗವಿದೆಯೇ?

ಇದು ನಿಮ್ಮ ಇಚ್ಛೆಯ ಇನ್ಶೂರೆನ್ಸ್ ಕಂಪನಿಯು, ಪ್ರಯೋಜನವನ್ನು ನೀಡುತ್ತದೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ಅವಲಂಬಿತವಾಗಿದೆ. ನಿಮ್ಮ ಇನ್ಶೂರೆನ್ಸ್ ಕಂಪನಿಯವರು ಅದನ್ನು ಅನುಮತಿಸಿದರೆ, ನಿಮ್ಮ ಕಾಂಪ್ರೆಹೆನ್ಸಿವ್ ಪಾಲಿಸಿಯ ಭಾಗವಾಗಿ ನೀವು ಎನ್‌.ಸಿ.ಬಿ(NCB)ಪ್ರೊಟೆಕ್ಟ್ ಆಡ್-ಆನ್‌ಗೆ ಹೋಗಬಹುದು. ಈ ವೈಶಿಷ್ಟ್ಯದೊಂದಿಗೆ, ನಿಮ್ಮ ನೋ ಕ್ಲೈಮ್ ಬೋನಸ್ ಅನ್ನು ಕಳೆದುಕೊಳ್ಳದೆ, ನೀವು ಒಂದು ವರ್ಷದಲ್ಲಿ ನಿರ್ದಿಷ್ಟ ಸಂಖ್ಯೆಯ ಇನ್ಶೂರೆನ್ಸ್ ಕ್ಲೇಮ್‌ಗಳನ್ನು (ಹೆಚ್ಚಾಗಿ ಕೇವಲ ಒಂದು) ಮಾಡಬಹುದು. ಕೆಲವು ಇನ್ಶೂರೆನ್ಸ್ ಕಂಪನಿಗಳು,  ಪ್ರೊಟೆಕ್ಷನ್ ಫೀಚರ್ ಪ್ರಾರಂಭವಾಗುವ ಮೊದಲು, ನಿಮ್ಮ ಪಾಲಿಸಿಯ ಮೇಲೆ ಎಷ್ಟು ವರ್ಷಗಳವರೆಗೆ ಕ್ಲೈಮ್ ಮಾಡದೆ ಇರಬಹುದು  ಎಂಬ ಷರತ್ತನ್ನು ಸಹ ಹಾಕಬಹುದು.

ಆದ್ದರಿಂದ, ಮುಂದಿನ ಬಾರಿ ನೀವು ಬೈಕ್ ರೇಸಿಂಗ್‌ ಮೂಡ್‌ನಲ್ಲಿರುವಾಗ, ಸ್ವಯಂ ನಿಯಂತ್ರಣದ ಇನ್ನೊಂದು ಬದಿಯಲ್ಲಿ ನೋ ಕ್ಲೈಮ್ ಬೋನಸ್ ನಿಮಗಾಗಿ ಕಾಯುತ್ತಿದೆ ಎಂಬುದನ್ನು ನೆನಪಿಡಿ. ಈ ರಿವಾರ್ಡ್ ಅನ್ನು ಹೊಸ ವಾಹನಗಳು ಮತ್ತು ಹೊಸ ಇನ್ಶೂರೆನ್ಸ್ ಕಂಪನಿಗಳಿಗೆ ವರ್ಗಾಯಿಸಬಹುದು ಎಂಬ ಅಂಶವನ್ನು ನೆನಪಿನಲ್ಲಿಟ್ಟುಕೊಳ್ಳುವುದು ಯೋಗ್ಯವಾಗಿದೆ. ಆದ್ದರಿಂದ ಬುದ್ಧಿವಂತಿಕೆಯು ಹೇಳುವಂತೆ,  ಸುರಕ್ಷಿತವಾಗಿ ಚಾಲನೆ ಮಾಡಿ, ನಿಮಗೆ ನಿಜವಾಗಿಯೂ ಅಗತ್ಯವಿಲ್ಲದಿದ್ದರೆ, ಯಾವುದೇ ಕ್ಲೈಮ್ ಮಾಡಬೇಡಿ. ಮತ್ತು ನಿಮಗಾಗಿ ಬರುವ ನೋ ಕ್ಲೈಮ್ ಬೋನಸ್‌ಗಳನ್ನು ಪಡೆದುಕೊಳ್ಳಿ!

ಟು ವೀಲರ್ ವೆಹಿಕಲ್ ಇನ್ಶೂರೆನ್ಸಿನಲ್ಲಿ ಎನ್‌.ಸಿ.ಬಿ(NCB)ಕುರಿತು ಇರುವ FAQ ಗಳು

ಒಂದುವೇಳೆ ನಾನು ಹೊಸ ವಾಹನವನ್ನು ಖರೀದಿಸಿದಾಗ, ನನ್ನ ಇನ್ಶೂರೆನ್ಸ್ ಪೂರೈಕೆದಾರರನ್ನು ಬದಲಾಯಿಸಿದರೆ ಏನಾಗುತ್ತದೆ?

ನಿಜ ಹೇಳಬೇಕೆಂದರೆ, ನೀವು ಬದಲಾಯಿಸುವುದನ್ನು ನಾವು ದ್ವೇಷಿಸುತ್ತೇವೆ. ಆದರೆ  ಹೋಗಲೇ ಬೇಕಾದರೆ ಹೋಗಿ, ನೀವು ಪಾಲಿಸಿದಾರರಾಗಿ ಮುಂದುವರಿದರೆ ಎನ್‌.ಸಿ.ಬಿ(NCB)ಅನ್ನು ಹೊಸ ವಾಹನಗಳಿಗೆ ಮತ್ತು ಹೊಸ ಇನ್ಶೂರೆನ್ಸ್ ಕಂಪನಿಗೆ ವರ್ಗಾಯಿಸಬಹುದಾಗಿದೆ. ಇನ್ನೊಂದು ಇನ್ಶೂರೆನ್ಸ್ ಕಂಪನಿಗೆ ಎನ್‌.ಸಿ.ಬಿ(NCB)ವರ್ಗಾವಣೆಯನ್ನು ಅನುಮತಿಸಲು ನೀವು ನಿಮ್ಮ ಹಿಂದಿನ ಇನ್ಶೂರೆನ್ಸ್ ಕಂಪನಿಯಿಂದ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ಮಾತ್ರ ಪಡೆಯಬೇಕಾಗುತ್ತದೆ.

ನಾನು ಕುಟುಂಬದ ಸದಸ್ಯ ಅಥವಾ ಸ್ನೇಹಿತರಿಗೆ ಎನ್‌.ಸಿ.ಬಿ(NCB)ಅನ್ನು ರವಾನಿಸಬಹುದೇ?

ನೋ ಡಿಯರ್! ನೀವು ವರ್ಗಾಯಿಸಲು ಸಾಧ್ಯವಿಲ್ಲ. ಎನ್‌.ಸಿ.ಬಿ(NCB)ಗಳನ್ನು ನಿಮಗೆ ಪಾಲಿಸಿದಾರರೆಂದು ನೀಡಲಾಗುತ್ತದೆ ಮತ್ತು ನಿಮ್ಮ ಬೈಕ್ ಮಾರಾಟ ಮಾಡುವಾಗಲೂ ಸಹ ಅವುಗಳನ್ನು ಇನ್ನೊಬ್ಬ ವ್ಯಕ್ತಿಗೆ ವರ್ಗಾಯಿಸಲಾಗುವುದಿಲ್ಲ.  ಪಾಲಿಸಿದಾರರ ಸಾವು ಈ ನಿಯಮಕ್ಕೆ ಹೊರತಾಗಿರುತ್ತದೆ.  ಈ ಸಂದರ್ಭದಲ್ಲಿ ಮಾತ್ರ, ಎನ್‌.ಸಿ.ಬಿ(NCB)ಅನ್ನು ಪಾಲಿಸಿದಾರರ ನಾಮಿನಿಗೆ ವರ್ಗಾಯಿಸಲಾಗುತ್ತದೆ.

ಪ್ರೊ ಟಿಪ್! ನಿಮ್ಮ ಎನ್‌.ಸಿ.ಬಿ(NCB)ಅನ್ನು ಇರಿಸಿ. ಸಣ್ಣ ಬದಲಾವಣೆಗಳನ್ನು ಬಿಡಿ. ಬೇರೆ ರೀತಿಯಲ್ಲಿ ಹೇಳುವುದಾದರೆ, ದೀರ್ಘಾವಧಿಯಲ್ಲಿ  ವಾಹನಕ್ಕೆ ಆಗುವ ಸಣ್ಣ ಹಾನಿಗಳಿಗೆ ಕ್ಲೈಮ್ ಮಾಡುವುದನ್ನು ನಾವು ನೋಡಿದ್ದೇವೆ, ಅದು ಸಂಪೂರ್ಣವಾಗಿ ಕೈಗೆಟುಕುತ್ತದೆ. ಆದರೆ ನಿಮ್ಮ ಪ್ರೀಮಿಯಂನಲ್ಲಿ ಗಣನೀಯ ಪ್ರಮಾಣದ ರಿಯಾಯಿತಿಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ, ಏಕೆಂದರೆ ಎನ್‌.ಸಿ.ಬಿ(NCB)ಯು ಒಂದೇ  ಕ್ಲೈಮ್ ಮಾಡಿದರೂ ಮತ್ತೆ ಸೊನ್ನೆಗೆ ಬದಲಾಗುತ್ತದೆ, ಇದು ದೊಡ್ಡ ಚಿತ್ರವನ್ನು ನೋಡುವಾಗ, ಹೆಚ್ಚಿನ ಆರ್ಥಿಕ ನಷ್ಟವಾಗುತ್ತದೆ. ಆದ್ದರಿಂದ ನಿಮ್ಮ ಎನ್‌.ಸಿ.ಬಿ(NCB)ಅನ್ನು ಇರಿಸಿಕೊಳ್ಳುವುದು ಹಾಗೂ ಕ್ಲೈಮ್ ಅನ್ನು ಹೆಚ್ಚಿಸದೆ ಸಣ್ಣ ಹಾನಿಗಳನ್ನು ಇತ್ಯರ್ಥಪಡಿಸಿಕೊಳ್ಳುವುದು ಉತ್ತಮ.