Corona Rakshak Policy by Digit Insurance

ಕೊರೋನಾ ಕವಚ್ ಪಾಲಿಸಿ ಎಂದರೇನು?

ಕೊರೋನಾ ಕವಚ ಕವರ್‌ನಲ್ಲಿ ಏನನ್ನು ಕವರ್ ಆಗಿದೆ?

ಹಾಸ್ಪಿಟಲೈಸೇಷನ್ ನ ಪೂರ್ವ ಮತ್ತು ನಂತರದ ವೆಚ್ಚಗಳು

ಕೋವಿಡ್-ಪಾಸಿಟಿವ್ ರೋಗಿಯ ಚಿಕಿತ್ಸೆ ಮತ್ತು ಆರೈಕೆಗೆ ಸಂಬಂಧಿಸಿದ 15/30 ದಿನಗಳ ಆಸ್ಪತ್ರೆಯ ಪೂರ್ವ ಮತ್ತು ನಂತರದ ವೆಚ್ಚಗಳನ್ನು ಕವರ್ ಮಾಡಲಾಗುತ್ತದೆ .

ತೀವ್ರ ನಿಗಾ ಘಟಕದ (ಐಸಿಯು) ವೆಚ್ಚಗಳು

ದುರದೃಷ್ಟವಶಾತ್, ಕೆಲವು ಕೋವಿಡ್ ಪಾಸಿಟಿವ್ ರೋಗಿಗಳಿಗೂ ಐಸಿಯು ನ ಚಿಕಿತ್ಸೆಯ ಅಗತ್ಯವಿರುತ್ತದೆ. ಕೊರೋನಾ ಕವಚ್ ಪಾಲಿಸಿಯು ಸಮ್ ಇನ್ಶೂರ್ಡ್ ವರೆಗಿನ ಇಂತಹ ವೆಚ್ಚಗಳನ್ನು ಕವರ್ ಮಾಡಲಾಗುತ್ತದೆ.

ರಸ್ತೆ ಆಂಬ್ಯುಲೆನ್ಸ್ ಶುಲ್ಕಗಳು

ಆಸ್ಪತ್ರೆಗೆ ಸಾಗಿಸುವಾಗ ಉಂಟಾಗುವ ರಸ್ತೆ ಆಂಬ್ಯುಲೆನ್ಸ್ ವೆಚ್ಚಗಳಲ್ಲಿ 2,000 ರೂ.ವರೆಗೆ ಭರಿಸಲಾಗುತ್ತದೆ.

ಆಯುಷ್ ಚಿಕಿತ್ಸೆ

ಯಾವುದೇ ಸರ್ಕಾರಿ ಅಧಿಕೃತ ಆಯುಷ್ ಆಸ್ಪತ್ರೆಯಲ್ಲಿ ಕೋವಿಡ್-ಪಾಸಿಟಿವ್ ರೋಗಿಗಳಿಗೆ ಯಾವುದೇ ಒಳರೋಗಿ ಆರೈಕೆ ಮತ್ತು ಚಿಕಿತ್ಸೆಗಾಗಿ ತಗಲುವ ವೆಚ್ಚವನ್ನು ಕವರ್ ಮಾಡಲಾಗುತ್ತದೆ.

ಹೋಮ್‌ಕೇರ್ ಚಿಕಿತ್ಸೆಯ ವೆಚ್ಚಗಳು

ಇನ್ಶೂರ್ಡ್ ವ್ಯಕ್ತಿಯ ಆರೋಗ್ಯದ ತೀವ್ರತೆಯನ್ನು ಅವಲಂಬಿಸಿ, ಅನೇಕ ಜನರು ಹೋಮ್‌ಕೇರ್ ಚಿಕಿತ್ಸೆಗಳಿಗೆ ಒಳಗಾಗಲು ಸಲಹೆ ನೀಡುತ್ತಾರೆ. ವೈದ್ಯರು ಇದನ್ನೇ ಶಿಫಾರಸು ಮಾಡಿದ್ದರೆ, ಈ ಪಾಲಿಸಿಯು ಅದರಿಂದ ಉಂಟಾಗುವ ವೆಚ್ಚಗಳನ್ನು ಕವರ್ ಮಾಡುತ್ತದೆ. ಉದಾಹರಣೆಗೆ ಔಷಧಿಗಳು, ಸಮಾಲೋಚನೆ ಶುಲ್ಕಗಳು, ನರ್ಸ್ ಶುಲ್ಕಗಳು, ಪಲ್ಸ್ ಆಕ್ಸಿಮೀಟರ್, ಆಮ್ಲಜನಕ ಸಿಲಿಂಡರ್ ನ ವೆಚ್ಚ, ಇತ್ಯಾದಿ.

ಹಾಸ್ಪಿಟಲ್ ಡೈಲಿ ಕ್ಯಾಶ್ (ಆಡ್-ಆನ್ ಆಗಿ ಮಾತ್ರ ಲಭ್ಯವಿದೆ)

ಇದರ ಅಡಿಯಲ್ಲಿ, ಡಿಜಿಟ್ ಸಮ್ ಇನ್ಶೂರ್ಡ್ ನ 0.5% ವರೆಗೆ ಒದಗಿಸುತ್ತದೆ, ಇದನ್ನು ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಕವರ್ ಆಗದ ಹೆಚ್ಚುವರಿ ಖರ್ಚುಗಳಿಗಾಗಿ ಅಥವಾ ಹಾಸ್ಪಿಟಲೈಸೇಷನ್ ಅವಧಿಯ ಆದಾಯದ ನಷ್ಟವನ್ನು ಸರಿದೂಗಿಸಲು ಬಳಸಬಹುದು.

ಕೊರೋನಾ ಕವಚ್ ಅಡಿಯಲ್ಲಿ ಏನೆಲ್ಲಾ ಕವರ್ ಆಗಿರುವುದಿಲ್ಲ?

24 ಗಂಟೆಗಳ ಕೆಳಗಿನ ಯಾವುದೇ ಹಾಸ್ಪಿಟಲೈಸೇಷನ್ ಕವರ್ ಆಗಿರುವುದಿಲ್ಲ.

ಪಾಲಿಸಿಯ ಪ್ರಾರಂಭದ ಮೊದಲು ಮಾಡಲಾದ ರೋಗನಿರ್ಣಯಕ್ಕಾಗಿ ಮಾಡಿದ COVID-19 ಕ್ಲೈಮ್‌ಗಳನ್ನು ಕವರ್ ಮಾಡಲಾಗುವುದಿಲ್ಲ.

ವೈದ್ಯರು ಶಿಫಾರಸು ಮಾಡದ ಯಾವುದೇ ಸಂಬಂಧವಿಲ್ಲದ ಚಿಕಿತ್ಸೆ ಅಥವಾ ಔಷಧಿಗಳನ್ನು ಕವರ್ ಮಾಡಲಾಗುವುದಿಲ್ಲ.

ಭಾರತದ ಹೊರಗಿನ ರೋಗನಿರ್ಣಯ ಮತ್ತು ಚಿಕಿತ್ಸೆಯು ಈ ಪಾಲಿಸಿ ಅಡಿಯಲ್ಲಿ ಕವರ್ ಆಗಿರುವುದಿಲ್ಲ.

ಅಧಿಕೃತ ಸರ್ಕಾರಿ ಪರೀಕ್ಷಾ ಕೇಂದ್ರದಲ್ಲಿ ಮಾಡದ ಪರೀಕ್ಷೆಯು ಕವರ್ ಆಗಿರುವುದಿಲ್ಲ.

ಕೊರೋನಾ ಕವಚ್ ಅಡಿಯಲ್ಲಿ ಒಪಿಡಿ ಮತ್ತು ಡೇಕೇರ್ ಕಾರ್ಯವಿಧಾನಗಳು ಅನ್ವಯಿಸುವುದಿಲ್ಲ.

ಕೊರೋನಾ ಕವಚ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಯಾರು ಖರೀದಿಸಬೇಕು?

ಕೊರೋನಾ ಕವಚ್ ಪಾಲಿಸಿಯ ಅನುಕೂಲಗಳು ಮತ್ತು ಅನಾನುಕೂಲಗಳು

ಕೊರೋನಾ ಕವಚ್ ಪಾಲಿಸಿಯನ್ನು ಖರೀದಿಸುವಾಗ ನೀವು ಯಾವ ಅಂಶಗಳನ್ನು ಪರಿಗಣಿಸಬೇಕು?

ಕೋವಿಡ್-19 ಗಾಗಿ ಇತರ ಹೆಲ್ತ್ ಇನ್ಶೂರೆನ್ಸ್ ಆಯ್ಕೆಗಳು

ಭಾರತದಲ್ಲಿ ಕೊರೋನಾ ಕವಚ್ ಪಾಲಿಸಿಯ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು