ಹ್ಯುಂಡೈ ಗ್ರ್ಯಾಂಡ್ i10 ಭಾರತದಲ್ಲಿ 2007ರಲ್ಲಿ ಬಿಡುಗಡೆಯಾಯಿತು. ಈ ಕಾರು ಒಂದು ಡೀಸೆಲ್ ಎಂಜಿನ್ ಮತ್ತು ಒಂದು ಪೆಟ್ರೋಲ್ ಎಂಜಿನ್ ವೇರಿಯಂಟ್ ಅನ್ನು ಒದಗಿಸುತ್ತದೆ. ಹ್ಯುಂಡೈ ಗ್ರ್ಯಾಂಡ್ i10 ಅಟೋಮ್ಯಾಟಿಕ್ ಮತ್ತು ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಎರಡರಲ್ಲೂ ಲಭ್ಯವಿದೆ. ಫ್ಯುಯಲ್ ವಿಧಾನ ಮತ್ತು ವೇರಿಯಂಟ್ ಆಧರಿಸಿಕೊಂಡು, ಇದು 17.0 kmpl-24.0 kmpl ಆ್ಯವರೇಜ್ ಮೈಲೇಜ್ ಒದಗಿಸುತ್ತದೆ.
ಈ ಕಾರು ಡ್ರೈವರ್ ಮತ್ತು 256 ಲೀಟರ್ಗಳ ಬೂಟ್ ಸ್ಪೇಸ್ ಒಳಗೊಂಡು ಐದು ಜನರ ಸೀಟಿಂಗ್ ಕೆಪಾಸಿಟಿ ಹೊಂದಿದೆ. ಹ್ಯುಂಡೈ ಗ್ರ್ಯಾಂಡ್ i10 3765 ಎಂಎಂ ಉದ್ದ, 1660 ಎಂಎಂ ಅಗಲ ಮತ್ತು 2425 ವೀಲ್ಬೇಸ್ ಅಳತೆಯನ್ನು ಹೊಂದಿದೆ.
ಗ್ರ್ಯಾಂಡ್ i10 81.86bhp@6000rpm ಗರಿಷ್ಠ ಪವರ್ ಮತ್ತು 113.75Nm@4000rpm ಗರಿಷ್ಠ ಟಾರ್ಕ್ ಸಾಮರ್ಥ್ಯದ ಫೋರ್-ಸಿಲಿಂಡರ್ ಎಂಜಿನ್ ಹೊಂದಿದೆ. ಫ್ಯುಯಲ್ ಟ್ಯಾಂಕ್ 43 ಲೀಟರ್ವರೆಗಿನ ಫ್ಯುಯಲ್ ಅನ್ನು ಸ್ಟೋರ್ ಮಾಡಬಲ್ಲು ಮತ್ತು ಕಾರು ಗಂಟೆಗೆ 165 ಕಿಮೀಗಳ ಟಾಪ್ ಸ್ಪೀಡ್ ಒದಗಿಸುತ್ತದೆ.
ಬ್ಲೂ ಇಂಟೀರಿಯರ್ ಇಲ್ಯುಮಿನೇಶನ್, ರೇರ್ ಮತ್ತು ಫ್ರಂಟ್ ಡೋರ್ ಮ್ಯಾಪ್ ಪಾಕೆಟ್ಗಳು, ಎಲೆಕ್ಟ್ರಾನಿಕ್ ಮಲ್ಟಿ-ಟ್ರಿಪ್ಮೀಟರ್ ಇತ್ಯಾದಿಗಳಿಂದ ಈ ಕಾರಿನ ಇಂಟೀರಿಯರ್ ಸುಸಜ್ಜಿತವಾಗಿದೆ. ವೆಹಿಕಲ್ ಬಾಡಿ-ಕಲರ್ಡ್, ಅಡ್ಜಸ್ಟೆಬಲ್ ಹೆಡ್ಲೈಟ್ಸ್, ಪವರ್ ಆ್ಯಂಟೆನಾ ಇತ್ಯಾದಿ ಒಳಗೊಂಡು ಎಕ್ಸ್ಟೀರಿಯರ್ ವೈಶಿಷ್ಟ್ಯಗಳನ್ನು ಹೊಂದಿದೆ.
ಹ್ಯುಂಡೈ ಗ್ರ್ಯಾಂಡ್ i10 ಆ್ಯಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್, ಡ್ರೈವರ್ ಮತ್ತು ಪ್ಯಾಸೆಂಜರ್ ಏರ್ಬ್ಯಾಗ್ಗಳನ್ನು ಒಳಗೊಂಡು ಎರಡು ಏರ್ಬ್ಯಾಗ್ಗಳು ಮತ್ತು ಕ್ರ್ಯಾಶ್ ಸೆನ್ಸರ್ನಂತಹ ಸೇಫ್ಟಿ ಸ್ಪೆಸಿಫಿಕೇಷನ್ಗಳನ್ನು ಹೊಂದಿದೆ. ಇದು ಮಧ್ಯದಲ್ಲಿ ಜೋಡಿಸಲಾದ ಫ್ಯುಯಲ್ ಟ್ಯಾಂಕ್, ಎಂಜಿನ್ ಇಮ್ಮೊಬಿಲೈಸರ್ ಮತ್ತು ಅಡ್ಜಸ್ಟೆಬಲ್ ಸೀಟುಗಳನ್ನೂ ಹೊಂದಿದೆ.
ಅದೇನೇ ಇದ್ದರೂ, ಯಾವುದೇ ಇತರ ಕಾರ್ಗಳಂತೆ ಹ್ಯುಂಡೈ ಗ್ರ್ಯಾಂಡ್ i10 ಕೂಡ ಆನ್-ರೋಡ್ ವ್ಯತ್ಯಾಸಗಳು ಮತ್ತು ಅಪಾಘಾತದ ಡ್ಯಾಮೇಜ್ಗಗಳಿಗೆ ಗುರಿಯಾಗಬಹುದು. ಹಾಗಾಗಿ, ನೀವು ಗ್ರ್ಯಾಂಡ್ i10 ಮಾಲೀಕರಾಗಿದ್ದರೆ ಅಥವಾ ಹೊಸ ಕಾರನ್ನು ಖರೀದಸಲು ಆಲೋಚಿಸುತ್ತಿದ್ದರೆ, ಹ್ಯುಂಡೈ ಗ್ರ್ಯಾಂಡ್ i10 ಕಾರ್ ಇನ್ಶೂರೆನ್ಸ್ ಆರಿಸಿಕೊಳ್ಳುವುದು ಅತ್ಯವಶ್ಯವಾಗಿದೆ.