ಮಾರುತಿ ಅನ್ನು ಭಾರತೀಯ ಆಟೋಮೊಬೈಲ್ ಉದ್ಯಮದ ಮನೆಮಾತಾಗಿ ಪರಿಗಣಿಸಲಾಗಿದೆ. ವರ್ಷಗಳಲ್ಲಿ, ಇದು ತನ್ನ ಕೈಗೆಟುಕುವ ಉತ್ಪನ್ನಗಳೊಂದಿಗೆ ಒಂದು ಲಾಯಲ್ ಟಾರ್ಗೆಟ್ ಆಡಿಯನ್ಸ್ ಅನ್ನು ಯಶಸ್ವಿಯಾಗಿ ಸೃಷ್ಟಿಸಿದೆ. ಈ ನಿಟ್ಟಿನಲ್ಲಿ, ಮಾರುತಿ ಸುಜುಕಿ ಡಿಜೈರ್ ಒಂದು ಕಡಿಮೆ ಮೆಂಟೇನೆನ್ಸ್ ಕಾರ್ ಆಗಿದ್ದು ಅದರ ಆರಾಮದಾಯಕ ವೈಶಿಷ್ಟ್ಯಗಳು ಮತ್ತು ಸ್ಥಿರವಾದ ಮೈಲೇಜ್ಗೆ ಹೆಸರುವಾಸಿಯಾಗಿದೆ. ಐದು ವಯಸ್ಕರ ಸೀಟಿಂಗ್ ಸ್ಥಳ ಮತ್ತು ಪರಿಸರ ಸ್ನೇಹಿ BS6 ಕಂಪ್ಲೈಂಟ್ ಎಂಜಿನ್ ಹೊಂದಿರುವ ಒಂದು ಕೈಗೆಟುಕುವ ವಾಹನವನ್ನು ಹುಡುಕುತ್ತಿರುವವರ ಮಧ್ಯಮ ವರ್ಗದ ಕುಟುಂಬಗಳಿಗೆ ಇದು ಅತ್ಯಂತ ಸೂಕ್ತವಾಗಿದೆ.
ಮಾರುತಿ ಸುಜುಕಿ ಡಿಜೈರ್ ಮಾಡೆಲ್, 19.05 ಕಿಮೀ/ಲೀ ಸಿಟಿ ಮೈಲೇಜ್ನೊಂದಿಗೆ ಬರುತ್ತದೆ, ಹಾಗೂ ಇದು ಅದರ ಅತ್ಯುತ್ತಮ ವೈಶಿಷ್ಟ್ಯಗಳಲ್ಲಿ ಒಂದಾಗಿರಬಹುದು. ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಮತ್ತು 378 ಲೀಟರ್ಗಳಷ್ಟು ಬೂಟ್ ಸ್ಪೇಸ್ ನೊಂದಿಗೆ, ಕಾರು ಗ್ರಾಹಕರ ನಿರೀಕ್ಷೆಗಳನ್ನು ಪೂರೈಸಲು ಸಮರ್ಥವಾಗಿದೆ. ಇದಲ್ಲದೆ, ಈ ಮಾಡೆಲ್ 1197 ಸಿಸಿ ಪೆಟ್ರೋಲ್ ಎಂಜಿನ್ 6000 ಆರ್ ಪಿ ಎಂ ನಲ್ಲಿ 88.50 ಬಿ ಎಚ್ ಪಿ ಪವರ್ ಅನ್ನು ಮತ್ತು 4400 ಆರ್ ಪಿ ಎಂ ನಲ್ಲಿ 113 ಎನ್ ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ಹೊರತಾಗಿ, ಈ ಮಾಡೆಲ್ 7-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಸಂಪರ್ಕದ ಜೊತೆ ಹೊಂದಿದೆ.
ಮಾರುತಿ ಸುಜುಕಿ ಡಿಜೈರ್ನ ಗ್ರಾಹಕರನ್ನು ಆಕರ್ಷಿಸುವ ಇತರೆ ವೈಶಿಷ್ಟ್ಯಗಳೆಂದರೆ ಅದರ ಸುರಕ್ಷತಾ ಕ್ರಮಗಳಾದ ಡ್ಯುಯಲ್ ಫ್ರಂಟ್ ಏರ್ಬ್ಯಾಗ್ಗಳು, ಹಿಂಭಾಗದ ಪಾರ್ಕಿಂಗ್ ಸೆನ್ಸರ್ಗಳು ಮತ್ತು ISOFIX ಚೈಲ್ಡ್ ಸೀಟ್ ಆಂಕರ್ಗಳು. ಇದಲ್ಲದೆ, ಈ ಮಾದರಿಯ AMT ವೇರಿಯಂಟ್ ಗಳು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಹಿಲ್ ಹೋಲ್ಡ್ ಅಸಿಸ್ಟೆನ್ಸ್ ನೊಂದಿಗೆ ಬರುತ್ತವೆ. ರಿಯರ್ ವ್ಯೂ ಕ್ಯಾಮೆರಾ ಮತ್ತು ರಿಯರ್ ಡಿಫಾಗರ್ ಹೆಚ್ಚಿನ ವೇರಿಯಂಟ್ ಗಳಲ್ಲಿ ಲಭ್ಯವಿರುವ ವೈಶಿಷ್ಟ್ಯಗಳಾಗಿವೆ. ಅದರ ಹೊರತಾಗಿ, ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ ಮತ್ತು ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಈ ಮಾದರಿಯ ಇತರ ಆಕರ್ಷಕ ವೈಶಿಷ್ಟ್ಯಗಳಾಗಿರಬಹುದು.
ಮಾರುತಿ ಸುಜುಕಿ ಡಿಜೈರ್ ಕಾರು ಅನೇಕ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳೊಂದಿಗೆ ಬರಬಹುದಾದರೂ, ಅನಿರೀಕ್ಷಿತ ರಸ್ತೆ ಅಪಘಾತಗಳಲ್ಲಿ ಮಾರಣಾಂತಿಕ ಹಾನಿಗಳನ್ನು ಎದುರಿಸುವುದರಿಂದ ಇದು ಯಾವುದೇ ವಿನಾಯಿತಿಯನ್ನು ಹೊಂದಿಲ್ಲ. ಆದ್ದರಿಂದ, ಈ ಕಾರಿನ ಭವಿಷ್ಯವನ್ನು ಮಾರುತಿ ಸುಜುಕಿ ಡಿಜೈರ್ ಕಾರ್ ಇನ್ಶೂರೆನ್ಸ್ ನೊಂದಿಗೆ ಸುರಕ್ಷಿತಗೊಳಿಸುವುದು ಅತ್ಯಗತ್ಯವಾಗಿದೆ. ಈ ಇನ್ಶೂರೆನ್ಸ್ ನೊಂದಿಗೆ ಮಾರುತಿ ಸುಜುಕಿ ಡಿಜೈರ್ನ ಮಾಲೀಕರು ಅದರ ಪ್ರಯೋಜನಗಳನ್ನು ಮತ್ತಷ್ಟು ಬಳಸಿಕೊಳ್ಳಬಹುದು ಮತ್ತು ಕಾನೂನು ಪಾಲಿಸುವ ನಾಗರಿಕರಾಗಬಹುದು.