ಎಂಜಿ ಹೆಕ್ಟರ್ ಜೂನ್ 27, 2019ರಂದು ಭಾರತಕ್ಕೆ ಪಾದಾರ್ಪಣೆ ಮಾಡಿತು. ಹಿಂದಿನ ಎರಡು ಹಣಕಾಸಿನ ವರ್ಷಗಳನ್ನು ನೋಡುವುದಾದರೆ, ಎಂಜಿ ಮೋಟಾರ್ಸ್ ಆರ್ಥಿಕ ವರ್ಷ 2020ರಲ್ಲಿ 21,954 ಯೂನಿಟ್ ಗಳನ್ನು ಮತ್ತು ಆರ್ಥಿಕ ವರ್ಷ 2021ರಲ್ಲಿ 35,597 ಯೂನಿಟ್ ಗಳನ್ನು ಮಾರಾಟ ಮಾಡಿದೆ. ಅಂತಹ ಭಾರಿ ಜನಪ್ರಿಯತೆಯನ್ನು ಪರಿಗಣಿಸಿ, ಎಂಜಿ ಮೋಟಾರ್ಸ್ ಇಂಡಿಯಾ ಹೊಸ ಏಳು-ಆಸನಗಳ ಹೆಕ್ಟರ್ ಪ್ಲಸ್ ಅನ್ನು ಜನವರಿ 7, 2021ರಂದು ಬಿಡುಗಡೆ ಮಾಡಿತು. ಸಂಪೂರ್ಣ ಹೆಕ್ಟರ್ ಲೈನ್-ಅಪ್ ಈಗ ಐದು, ಆರು ಮತ್ತು ಏಳು-ಸೀಟರ್ ಗಳ ಆಯ್ಕೆಗಳ ಕಾನ್ಫಿಗರೇಷನ್ ಅನ್ನು ನೀಡುತ್ತದೆ.
ಆದ್ದರಿಂದ, ನೀವು ಹೊಚ್ಚ ಹೊಸ ಮಾಡೆಲ್ ಅನ್ನು ಖರೀದಿಸಲು ಪ್ಲಾನ್ ಮಾಡುತ್ತಿದ್ದರೆ, ಅನುಕೂಲಕರ ಎಂಜಿ ಹೆಕ್ಟರ್ ಕಾರ್ ಇನ್ಶೂರೆನ್ಸ್ ಪಾಲಿಸಿ ಆಯ್ಕೆಗಳನ್ನೂ ಹುಡುಕಲು ಪ್ರಾರಂಭಿಸಿ.
ಇದಲ್ಲದೆ, ಮೋಟಾರ್ ವೆಹಿಕಲ್ಸ್ ಆ್ಯಕ್ಟ್ 1988ರ ಪ್ರಕಾರ, ಭಾರತೀಯ ಬೀದಿಗಳಲ್ಲಿ ಸಂಚರಿಸುವ ಎಲ್ಲಾ ಕಾರುಗಳು ಥರ್ಡ್ ಪಾರ್ಟಿ ಕವರೇಜ್ನೊಂದಿಗೆ ಸುರಕ್ಷಿತವಾಗಿರಬೇಕು. ಈ ಕವರ್ ನಿಮ್ಮ ವಾಹನದಿಂದ ಉಂಟಾಗುವ ಯಾವುದೇ ಥರ್ಡ್ ಪಾರ್ಟಿ ಲಯಬಿಲಿಟಿಯನ್ನು ಸರಿದೂಗಿಸುತ್ತದೆ.
ಆದಾಗ್ಯೂ, ಆಕಸ್ಮಿಕ ಡ್ಯಾಮೇಜ್ ಗಳು ಮತ್ತು ಇತರ ಅಪಘಾತಗಳ ವಿರುದ್ಧ ಗರಿಷ್ಠ ಕವರೇಜ್ ಅನ್ನು ಪಡೆದುಕೊಳ್ಳಲು ನೀವು ಕಾಂಪ್ರೆಹೆನ್ಸಿವ್ ಕವರ್ ಅನ್ನು ಸಹ ಆರಿಸಿಕೊಳ್ಳಬಹುದು.
ಗರಿಷ್ಠ ಆರ್ಥಿಕ ಭದ್ರತೆಯನ್ನು ಪಡೆದುಕೊಳ್ಳಲು, ಡಿಜಿಟ್ನಂತಹ ಪ್ರತಿಷ್ಠಿತ ಇನ್ಶೂರೆನ್ಸ್ ಪೂರೈಕೆದಾರರು ಎಂಜಿ ಹೆಕ್ಟರ್ ಇನ್ಶೂರೆನ್ಸ್ ಪಾಲಿಸಿಗಳಲ್ಲಿ ಲಾಭದಾಯಕ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳನ್ನು ಒದಗಿಸುತ್ತಾರೆ.
ಮುಂದಿನ ವಿಭಾಗದಲ್ಲಿ, ನಾವು ಎಂಜಿ ಹೆಕ್ಟರ್ ಮಾಡೆಲ್ ಗಳ ವೈಶಿಷ್ಟ್ಯಗಳು, ಕಾರ್ ಇನ್ಶೂರೆನ್ಸ್ ಪಾಲಿಸಿಯ ಪ್ರಾಮುಖ್ಯತೆ ಮತ್ತು ಡಿಜಿಟ್ ಕೊಡುಗೆಗಳ ಯೋಜನೆಗಳನ್ನು ಚರ್ಚಿಸಲಿದ್ದೇವೆ.
ಎಂಜಿ ಹೆಕ್ಟರ್ ಬಗ್ಗೆ ಮತ್ತಷ್ಟು ತಿಳಿಯಿರಿ
ಎಂಜಿ ಹೆಕ್ಟರ್ ಡೀಸೆಲ್, ಪೆಟ್ರೋಲ್-ಮ್ಯಾನ್ಯುವಲ್, ಪೆಟ್ರೋಲ್-ಆಟೋಮ್ಯಾಟಿಕ್ಸ್ ಮತ್ತು ಪೆಟ್ರೋಲ್ ಹೈಬ್ರಿಡ್ ಆಯ್ಕೆಗಳನ್ನು ಒಳಗೊಂಡಂತೆ 14 ವೇರಿಯಂಟ್ಗಳಲ್ಲಿ ಲಭ್ಯವಿದೆ.