ಹೀರೋ ಪ್ಯಷನ್ ಪ್ರೋ ಇನ್ಶೂರೆನ್ಸ್

ಹೀರೋ ಪ್ಯಾಷನ್ ಪ್ರೋ ಬೈಕ್ ಇನ್ಶೂರೆನ್ಸ್ ಪಾಲಿಸಿ ಕೇವಲ ₹714 ರಿಂದ ಆರಂಭ

Third-party premium has changed from 1st June. Renew now

source

ಪ್ಯಾಷನ್ ಪ್ರೋ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ಬಲಿಷ್ಠ ಬೈಕುಗಳಲ್ಲಿ ಒಂದಾಗಿದೆ. ಆದರೆ, ಒಂದು ಅತೀ ಬಲಿಷ್ಠ ಬೈಕಿಗೂ ಸೂಕ್ತ ಇನ್ಶೂರೆನ್ಸ್ ಕವರೇಜ್ ನ ಅಗತ್ಯವಿರುತ್ತದೆ. ಪ್ಯಾಷನ್ ಪ್ರೋ ಇನ್ಶೂರೆನ್ ಪಾಲಿಸಿಯನ್ನು ಖರೀದಿಸುವ ಮೊದಲು ನೀವು ಪರಿಶೀಲಿಸಬೇಕಾದ ವೈಶಿಷ್ಟ್ಯಗಳ ಬಗ್ಗೆ ಓದಿ!

ಸುಮಾರು 35 ವರ್ಷಗಳ ಹಿಂದೆ ಸ್ಥಾಪಿಸಲಾಗಿದ್ದು, ಭಾರತದಲ್ಲಿ ಪ್ರಯಾಣಿಕ ಬೈಕನ್ನು ವಿನ್ಯಾಸಗೊಳಿಸಿ ಮಾರಾಟಮಾಡುವ ಅದರ ಸಾಮರ್ಥ್ಯದಿಂದಾಗಿ ಹೀರೋ ಮೋಟೋಕಾರ್ಪ್ ಅತ್ಯಂತ ಜನಪ್ರಿಯತೆ ಹಾಗೂ ಏಳಿಗೆಯನ್ನು ಹೊಂದಿದೆ.

ಉದಾಹರಣೆಗಾಗಿ ಪ್ಯಾಷನ್ ಶ್ರೇಣಿಯ ಬೈಕುಗಳು, ಅತೀ ವಿಶ್ವಾಸಾಹ್ರ ಹಾಗೂ ನಂಬಿಕಸ್ಥವಾಗಿ ಕಂಡುಬರುತ್ತವೆ.

ಇದರ ಉತ್ಪಾದನೆ 2001 ರಿಂದ ಆರಂಭವಾಗಿದೆ ಹಾಗೂ ಮುಂದುವರಿದಿದೆ. ಅದರ ಜನಪ್ರಿಯತೆಯನ್ನು ಆಧರಿಸಿ, ಅದರ  ಪ್ಯಾಷನ್ ಸಾಲುಗಳನ್ನು ವೃದ್ಧಿಸಲು ಪ್ಯಾಷನ್ ಪ್ರೋ ಬೈಕ್ ಅನ್ನು ಪರಿಚಯಿಸಲಾಯಿತು. ಇದರಲ್ಲಿ ಇದು ತನ್ನ ವಿಶ್ವಾಸದೊಂದಿಗೆ ಆಕರ್ಷಕ ಹೊಸ ವಿನ್ಯಾಸವನ್ನು ಸಂಯೋಜಿಸಿದೆ. ಇದರ ಮಾರ್ಪಾಡಾದ ಆಕಾರ ಹಾಗೂ ಆಕರ್ಷಕ ವಿನ್ಯಾಸದಿಂದ ಯುವ ಬಳಕೆದಾರರನ್ನೂ ಇದು ತನ್ನ ದ್ವಿಚಕ್ರ ವಾಹನಗಳ ಕಡೆ ಸೆಳೆದಿದೆ.

ಇದರ ಜೊತೆಯಲ್ಲಿಯೇ, ಈ ಬೈಕುಗಳ ಮಾಲೀಕರಿಗೆ ಪ್ಯಾಷನ್ ಪ್ರೋ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದೂ ಅಷ್ಟೇ ಆವಶ್ಯಕವಾಗಿದೆ. ಒಂದು ಇನ್ಶೂರೆನ್ ಪಾಲಿಸಿಯನ್ನು ಹೊಂದಿರುವುದು, ನಿಮ್ಮ ಆರ್ಥಿಕ ಆಸಕ್ತಿಗಳನ್ನು ಕಾಪಾಡಲು, ಹಾಗೂ ಅಪಘಾತದ ಸಮಯದಲ್ಲಿ ನಿಮ್ಮ ವಾಹನದ ಸಮರ್ಪಕ ರಿಪೇರಿಗಳಿಗಾಗಿ ಅಗತ್ಯವಾಗಿದೆ. ಇಂತಹ ಅಪಘಾತಗಳಿಂದ ಉಂಟಾಗುವ ಆರ್ಥಿಕ ಹಾಗೂ ಕಾನೂನಾತ್ಮಕತ ಹೊಣೆಗಾರಿಕೆಗಳಿಂದ ಕೂಡಾ ಇನ್ಶುರೆನ್ಸ್ ಪಾಲಿಸಿಗಳು ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತವೆ.

ಹಾಗೂ, ಮೋಟಾರ್ ವಾಹನ ಅಧಿನಿಯಮ 1988 ರ ಪ್ರಕಾರ ಇಂತಹ ಒಂದು ಇನ್ಶೂರೆನ್ಸ್ ಕಡ್ಡಾಯವಾಗಿದೆ. ಇದನ್ನು ಪಾಲಿಸುವಲ್ಲಿ ವಿಫಲರಾದರೆ ನಿಮಗೆ ಭಾರೀ ದಂಡಗಳನ್ನು ವಿಧಿಸಲಾಗುವುದು. ಮೊದಲ ಅಪರಾಧಕ್ಕೆ ನಿಮಗೆ ರೂ.  2000 ದಂಡವನ್ನು ವಿಧಿಸಲಾಗುತ್ತದೆ. ಅಪರಾಧ ಪುನಾರವರ್ತನೆಯಾದರೆ ನೀವು ರೂ. 4000 ರಷ್ಟು ದಂಡವನ್ನು ತೆರಬೇಕಾಗಬಹುದು.

ಆದರೆ, ನಿಮ್ಮ ಪ್ಯಾಷನ್ ಪ್ರೋ ಗಾಗಿ ಇನ್ಶೂರೆನ್ಸ್ ಪಾಲಿಸಿಗಳನ್ನು ಪರಿಶೀಲಿಸುವ ಮೊದಲು, ಈ ಬೈಕಿನ ಕೆಲವು ಅದ್ಭುತ ವೈಶಿಷ್ಟ್ಯಗಳ ಕಡೆ ಗಮನ ಹಾಯಿಸಿರಿ.

ಹೀರೋ ಪ್ಯಾಷನ್ ಪ್ರೋ ಬೈಕ್ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್ ಆಗಿದೆ

ನೀವು ಡಿಜಿಟ್‌ನ ಹೀರೋ ಪ್ಯಾಶನ್ ಪ್ರೊ ವಿಮೆಯನ್ನು ಏಕೆ ಖರೀದಿಸಬೇಕು?

ಹೀರೋ ಪ್ಯಾಶನ್ ಪ್ರೊಗಾಗಿ ವಿಮಾ ಯೋಜನೆಗಳ ವಿಧಗಳು

ಥರ್ಡ್ ಪಾರ್ಟೀ ಕಾಂಪ್ರೆಹೆನ್ಸಿವ್

ಅಪಘಾತದಿಂದ ಸ್ವಂತ ದ್ವಿಚಕ್ರ ವಾಹನಕ್ಕಾದ ನಷ್ಟ/ಹಾನಿ

×

ಬೆಂಕಿಯಿಂದ ಸ್ವಂತ ದ್ವಿಚಕ್ರ ವಾಹನಕ್ಕಾದ ನಷ್ಟ/ಹಾನಿ

×

ಪ್ರಕೃತಿ ವಿಕೋಪದಿಂದ ಸ್ವಂತ ದ್ವಿಚಕ್ರ ವಾಹನಕ್ಕಾದ ನಷ್ಟ/ಹಾನಿ

×

ಥರ್ಡ್ ಪಾರ್ಟೀ ವಾಹನಕ್ಕಾದ ಹಾನಿ

×

ಥರ್ಡ್ ಪಾರ್ಟೀ ಸ್ವತ್ತಿಗಾದ ಹಾನಿ

×

ವೈಯಕ್ತಿಕ ಅಪಘಾತ ಕವರ್

×

ಥರ್ಡ್ ಪಾರ್ಟೀ ವ್ಯಕ್ತಿಗೆ ಹಾನಿ/ಸಾವು

×

ನಿಮ್ಮ ಸ್ಕೂಟರ್ ಅಥವಾ ಬೈಕ್ ನ ಕಳವು

×

ನಿಮ್ಮ ಐಡಿವಿ ಅನ್ನು ಕಸ್ಟಮೈಜ್ ಮಾಡುವುದು

×

ಕಸ್ಟಮೈಜ್ ಮಾಡಲಾದ ಆಡ್-ಆನ್ ಗಳೊಂದಿಗೆ ಹೆಚ್ಚುವರಿ ಸಂರಕ್ಷಣೆ

×
Get Quote Get Quote

ಕಾಂಪ್ರೆಹೆನ್ಸಿವ್ ಹಾಗೂ ಥರ್ಡ್ ಪಾರ್ಟೀ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಇನ್ನಷ್ಟು ತಿಳಿಯಿರಿ.

ಕ್ಲೈಮ್ ಫೈಲ್ ಮಾಡುವುದು ಹೇಗೆ?

ನಮ್ಮ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಯೋಜನೆಯನ್ನು ಖರೀದಿಸಿದ ಅಥವಾ ರಿನ್ಯೂ ಮಾಡಿದ ನಂತರ ನೀವು ನೆಮ್ಮದಿಯ ಜೀವನವನ್ನು ನಡೆಸುತ್ತೀರಿ, ಕಾರಣ ನಮ್ಮ ಬಳಿ ಇರುವ 3 ಹೆಜ್ಜೆಗಳ ಸಂಪೂರ್ಣ ಡಿಜಿಟಲ್ ಆದ ಕ್ಲೈಮ್ ಗಳ ಪ್ರಕ್ರಿಯೆ!

ಹಂತ 1

ಕೇವಲ 1800-258-5956 ಗೆ ಕರೆ ನೀಡಿ. ಯಾವುದೇ ಫಾರ್ಮ್ ತುಂಬಿಸಬೇಕಾಗಿಲ್ಲ.

ಹಂತ 2

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವ ಪರಿಶೀಲನೆಯ ಲಿಂಕ್ ಅನ್ನು ಪಡೆಯಿರಿ.ನಮ್ಮ ಹಂತ ಹಂತದ ಮಾರ್ಗದರ್ಶನದೊಂದಿಗೆ ನಿಮ್ಮ ಸ್ಮಾರ್ಟ್ ಫೋನಿನಿಂದ ನಿಮ್ಮ ವಾಹನದ ಹಾನಿಗಳನ್ನು ಸೆರೆಹಿಡಿಯಿರಿ.

ಹಂತ 3

ನೀವು ಆಯ್ಕೆ ಮಾಡಲು ಬಯಸುವ ಪಾವತಿಯ ವಿಧಾನವನ್ನು ನಿರ್ಧರಿಸಿ ಅಂದರೆ ಮರುಪಾವತಿ ಅಥವಾ ನಮ್ಮ ನೆಟ್ವರ್ಕ್ ಗ್ಯಾರೇಜ್ ಗಳಲ್ಲಿ ಕ್ಯಾಷ್ಲೆಸ್.

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್ ಅನ್ನು ಎಷ್ಟು ಬೇಗ ಸೆಟ್ಲ್ ಮಾಡಬೇಕಾಗುತ್ತದೆ? ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುತ್ತಿರುವಾಗ ಇದು ನಿಮ್ಮ ಯೋಚನೆಗೆ ಬರಬೇಕಾದ ಮೊದಲ ಪ್ರಶ್ನೆಯಾಗಿದೆ. ಒಳ್ಳೆಯದು, ನೀವು ಅದನ್ನೇ ಮಾಡುತ್ತಿದ್ದೀರಿ! ಡಿಜಿಟ್ ನ ಕ್ಲೈಮ್ಸ್ ರಿಪೋರ್ಟ್ ಕಾರ್ಡ್ ಅನ್ನು ಓದಿ

ಹೀರೋ ಪ್ಯಾಷನ್ ಪ್ರೋ : ಒಂದು ಶಕ್ತಿಯುತ ಬೈಕ್

ಪ್ಯಾಷನ್ ಪ್ರೋ ಒಂದು ಪ್ರಯಾಣಿಕರ ಬೈಕ್ ಆಗಿದ್ದರೂ, ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ನೀವು ಒಂದು ಆಧುನಿಕ ದ್ವಿಚಕ್ರ ವಾಹನದಿಂದ ನಿರೀಕ್ಷಿಸಬಹುದಾದ ಎಲ್ಲಾ ವೈಶಿಷ್ಟ್ಯಗಳು ಇದು ಒಳಗೊಂಡಿದೆ.

  • ಇದರ ಬೇಸ್ ಮಾದರಿಯು 97.2cc ಎಂಜಿನ್ ಇದಕ್ಕೊಂದು ಪ್ರಭಾವಶಾಲಿ 8.05 ಟಾರ್ಕ್ ಅನ್ನು ನೀಡುತ್ತದೆ. ಇದರ ಜೊತೆ, ಇದರ ಸಿಂಗಲ್ ಸಿಲಿಂಡರ್ 4-ಸ್ಟ್ರೋಕ್ ಎಂಜಿನ್ 8000 ಆರ್ ಪಿ ಎಂ ನಲ್ಲಿ  8.36 ಪಿ ಎಸ್ ನಷ್ಟು ಶಕ್ತಿಯನ್ನು ಉತ್ಪಾದಿಸಬಲ್ಲದಾಗಿದೆ.
  • ಆದರೆ, ಬಹುಶಃ ಅದರ ಬಲು ದೊಡ್ಡ ವಿಶೇಷತೆಯು, 84 ಕಿಮಿ/ಲಿ ಮೈಲೇಜ್ ನ ಆಶ್ವಾಸನೆಯನ್ನು ನೀಡುವ ಇದರ 12.5 ಲೀಟರ್ ನ ಸಾಮರ್ಥ್ಯವಾಗಿದೆ.
  • ನೀವು ಆತುರದಲ್ಲಿರುವಾಗ, 87 ಕಿಮಿ/ಘಂಟೆಯ ಗರಿಷ್ಠ ವೇಗದೊಂದಿಗೆ, ಈ ಬೈಕ್ ನ ಪಿಕ್ ಅಪ್ ಕೂಡಾ ಅದ್ಭುತವಾಗಿದೆ.

ಇಂತಹ ಒಂದು ದಕ್ಷ ಬೈಕಿಗೆ, ರಸ್ತೆಯಲ್ಲಿ ಓಡಾಡುವಾಗ ಉಂಟಾಗಬಲ್ಲ ದುರ್ಘಟನೆಗಳನ್ನು ಅಥವಾ ಅಪಘಾತಗಳನ್ನು ಎದುರಿಸಲು ಒಂದು ಕಾಂಪ್ರೆಹೆನ್ಸಿವ್ ಆರ್ಥಿಕ ಸಂರಕ್ಷಣೆಯ ಅಗತ್ಯವಿದೆ.

ಒಂದು ಉತ್ತಮ ವೈಶಿಷ್ಟ್ಯ ಗಳಿಂದ ಕೂಡಿದ  ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುವುದು, ಇಂತಹ ಹೊಣೆಗಾರಿಕೆಗಳಿಂದ ಸಂರಕ್ಷಯನ್ನು ದೃಢಪಡಿಸಿಕೊಳ್ಳಲು ಅತ್ಯುತ್ತಮ ವಿಧಾನವಾಗಿದೆ.

ಒಂದು ಪರಿಪೂರ್ಣ ಪ್ಯಾಷನ್ ಪ್ರೋ ಬೈಕ್ ಇನ್ಶೂರೆನ್ಸ್ ಪಾಲಿಸಿಗಾಗಿ ಹುಡುಕಾಡುತ್ತಿರುವಾಗ, ನೀವು ಡಿಜಿಟ್ ನ ಪ್ರಭಾವಶಾಲಿ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ನ ಕೊಡುಗೆಗಳನ್ನು ಪರಿಗಣಿಸಬಹುದು.

ಹೀರೋ ಪ್ಯಾಷನ್ ಪ್ರೋ ಬೈಕ್ ಇನ್ಶೂರೆನ್ಸ್ ಅನ್ನು ಏಕೆ ಆಯ್ಕೆ ಮಾಡಬೇಕು?

ಹಲವಾರು ಕಂಪನಿಗಳು ದ್ವಿಚಕ್ರ ವಾಹನಗಳಿಗೆ ಇನ್ಶೂರೆನ್ ಒದಗಿಸುತ್ತಿರುವುದರಿಂದ, ಹೊಸ ಬೈಕ್ ಮಾಲೀಕರಿಗೆ ಒಂದು ಪ್ರೊವೈಡರ್ ಅನ್ನು ಆರಿಸುವುದು ಅತ್ಯಂತ ಗೊಂದಲಮಯವಾಗಿ ಎನಿಸಬಹುದು. ಡಿಜಿಟ್, ಬಳಕೆದಾರರಿಗಾಗಿ ಒಂದು ಜಾಣ್ಮೆಯ ಆಯ್ಕೆಯಾಗಿ ಪರಿಣಮಿಸುತ್ತದೆ, ಇದಕ್ಕೆ ಕಾರಣಗಳು ಇಲ್ಲಿವೆ:

ಪಾಲಿಸಿದಾರರ ಲಾಭಕ್ಕಾಗಿ ಎನ್.ಸಿ.ಬಿ(NCB) ಕೊಡುಗೆಗಳು - ಒಂದು ಕ್ಲೈಮ್ ರಹಿತ ವರ್ಷವನ್ನು ಹೊಂದುವುದರಲ್ಲಿ ಯಶಸ್ವಿಯಾದವರು, ಅವರ ಇನ್ಶೂರೆನ್ಸ್ ಕವರ್ ನ ಲಾಭಗಳನ್ನು ಹೆಚ್ಚಿಸಲು ಆಕರ್ಷಕ ನೋ ಕ್ಲೈಮ್ ಬೋನಸ್ ಕೊಡುಗೆಗಳನ್ನು ಪಡೆಯಬಹುದು. ಬಹುತೇಕ ಸಂದರ್ಭಗಳಲ್ಲಿ, ಎನ್.ಸಿ.ಬಿ(NCB) ಯ ಸಂಗ್ರಹಣೆಯು, ರಿನ್ಯೂವಲ್ ಸಮಯದಲ್ಲಿ, ಒಂದು ಕಾಂಪ್ರೆಹೆನ್ಸಿವ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಕಡಿಮೆಯಾದ ದರಕ್ಕೆ ಕಾರಣವಾಗುತ್ತದೆ.

ನೀವು ಉಳಿಸಿದ ಹಣದಲ್ಲಿ, ನೀವು ಆಡ್-ಆನ್ ಗಳ ಅಥವಾ ರೈಡರ್ ಗಳ ರೂಪದಲ್ಲಿ ನಿಮ್ಮ ಬೈಕಿಗಾಗಿ ಹೆಚ್ಚುವರಿ ಸಂರಕ್ಷಣೆಯ ಆಯ್ಕೆಯನ್ನೂ ಮಾಡಬಹುದು!

ಲಾಭದಾಯಕ ಆಡ್-ಆನ್ ಗಳ ಸಾಲುಗಳು -  ಹೀರೋ ಪ್ಯಾಷನ್ ಪ್ರೋ ಇನ್ಶೂರೆನ್ಸ್ ನ ಆಡ್- ಆನ್ ಗಳ ಬಗ್ಗೆ ಹೇಳುವುದಾದರೆ, ಡಿಜಿಟ್, ಮೂಲ ಪಾಲಿಸಿಗಳಲ್ಲಿ ಲಭ್ಯವಿರದ ಹೆಚ್ಚುವರಿ ಕವರೇಜ್ ಗಾಗಿ ಸಾಕಷ್ಟು ಆಯ್ಕೆಗಳನ್ನು ನೀಡುತ್ತದೆ. ಈ ಪೂರಕ ಸಂರಕ್ಷಣೆಗಳನ್ನು ಆಯ್ಕೆ ಮಾಡುವ ನಿರ್ಧಾರ ನಿಮಗೆ ಬಿಟ್ಟಿದ್ದು. ಡಿಜಿಟ್ ನಲ್ಲಿ ಲಭ್ಯವಿರುವ ದ್ವಿಚಕ್ರ ವಾಹನ ಆಡ್-ಆನ್ ಗಳ ಸಂಪೂರ್ಣ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ:

  • ಶೂನ್ಯ ಡಿಪ್ರಿಸಿಯೇಷನ್ ಕವರ್
  • ಎಂಜಿನ್ ಹಾಗೂ ಗೇರ್ ಸಂರಕ್ಷಣಾ ಕವರ್
  • ರಿಟರ್ನ್ ಟು ಇನ್ವಾಯ್ಸ್ ಕವರ್
  • ಬ್ರೇಕ್ಡೌನ್ ಗಾಗಿ ನೆರವು
  • ಬಳಕೆಯ ವಸ್ತುಗಳ ಕವರ್

ನಿಮಗೆ ಪ್ರತಿಯೊಂದು ರೈಡರ್ ನ ಅಗತ್ಯವಿಲ್ಲದೇ ಇದ್ದರೂ, ನಿಮ್ಮ ವೈಯಕ್ತಿಕ ಸಂದರ್ಭ ಮತ್ತು ಪ್ರಯಾಣಿಸುವ ಪ್ರದೇಶಗಳು ನೀವು ನಿಮ್ಮ ಪ್ಯಾಷನ್ ಪ್ರೋ ಗಾಗಿ ಯಾವ ರೀತಿಯ ಹೆಚ್ಚುವರಿ ಸಂರಕ್ಷಣೆಯನ್ನು ಬಯಸುತ್ತೀರಿ ಎಂದು ನಿರ್ಧರಿಸುತ್ತವೆ.

ನಿಮ್ಮ ಆಯ್ಕೆಗಾಗಿ ವೈವಿಧ್ಯಮಯ ಇನ್ಶೂರೆನ್ಸ್ ಪ್ರಕಾರಗಳು -  ಡಿಜಿಟ್ ನಲ್ಲಿ ನೀವು ವಿವಿಧ ಪ್ರಕಾರದ ಇನ್ಶೂರೆನ್ಸ್ ಪ್ರಕಾರಗಳನ್ನು ಆಯ್ಕೆ ಮಾಡಬಹುದು, ಹಾಗೂ ಅವುಗಳು ಈ ವರ್ಗಗಳನ್ನು ಒಳಗೊಂಡಿವೆ:

  • ಥರ್ಡ್ ಪಾರ್ಟೀ ಹೊಣೆಗಾರಿಕೆಯ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿ - ಇದರಲ್ಲಿ, ಪಾಲಿಸಿದಾರರು ತಮ್ಮ ಸ್ವಂತ ವಾಹನಕ್ಕಾದ ಹಾನಿಗಾಗಿ ಕ್ಲೈಮ್ ಮಾಡಲು ಸಾಧ್ಯವಿಲ್ಲ. ಆದರೆ ಈ ಪಾಲಿಸಿಯನ್ನು, ಅವರು ಒಂದು ಅಪಘಾತದಲ್ಲಿ ಇನ್ನೊಂದು ಪಾರ್ಟೀ(ವ್ಯಕ್ತಿ, ಸ್ವತ್ತು ಅಥವಾ ವಾಹನ) ಗಾಗಿ ಇರುವ ಹೊಣೆಗಾರಿಕೆಯನ್ನು ಪಾಲಿಸಲು, ಕ್ಲೈಮ್ ಗಾಗಿ ಬಳಸಬಹುದಾಗಿದೆ.
  • ಕಾಂಪ್ರೆಹೆನ್ಸಿವ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿ - ಈ ಪಾಲಿಸಿಯಲ್ಲಿ ಥರ್ಡ್ ಪಾರ್ಟೀ ಹೊಣೆಗಾರಿಕೆಯ ಕವರ್ ಜೊತೆ ಸ್ವಂತ ಹಾನಿ ಕವರ್ ಕೂಡಾ ಸೇರಿದೆ. ಇದರ ಜೊತೆ ಬೈಕ್ ಕಳವು, ಪ್ರವಾಹ, ಬಿರುಗಾಳಿ ಭೂಕಂಪ , ನೈಸರ್ಗಿಕ ಹಾಗೂ ಮಾನವ ನಿರ್ಮಿತ ವಿಪತ್ತುಗಳಿಂದ ಆಗುವ ಹಾನಿಗಳಿಗೂ ನೀವು ಕ್ಲೈಮ್ ಮಾಡಬಹುದು.

ಇದರ ಜೊತೆ ನೀವು ಸ್ವಂತ ಹಾನಿ ಕವರ್ ನ ಆಯ್ಕೆಯನ್ನೂ ಮಾಡಬಹುದು. ಇದರಲ್ಲಿ ಥರ್ಡ್ ಪಾರ್ಟೀ ಹೊಣೆಗಾರಿಕೆಯ ಲಾಭವನ್ನು ಹೊರತುಪಡಿಸಿ ಕಾಂಪ್ರೆಹೆನ್ಸಿವ್ ಪಾಲಿಸಿಯ ಲಾಭಗಳನ್ನು ಆನಂದಿಸಬಹುದು. ಆದರೆ, ಈ ಪಾಲಿಸಿಯನ್ನು ಪಡೆಯಲು ನಿಮ್ಮ ಪ್ಯಾಷನ್ ಪ್ರೋ ಸೆಪ್ಟೆಂಬರ್ 2018 ಕ್ಕಿಂತ ಹಳೆಯದಾಗಿರಬಾರದು. ಇದರ ಜೊತೆ, ಒಂದು ಸ್ವಂತ ಹಾನಿ ಕವರ್ ಅನ್ನು ಪಡೆಯಲು ನೀವು ಮೊದಲೇ ಒಂದು ಥರ್ಡ್ ಪಾರ್ಟೀ ಹೊಣೆಗಾರಿಕೆ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರಬೇಕು. 

ನಿಮಗೆ ಅಗತ್ಯವಿರುವಂತಹ ಪ್ಯಾಷನ್ ಪ್ರೋ ಇನ್ಶೂರೆನ್ಸ್ ಯೋಜನೆಯನ್ನು ಪರಿಗಣಿಸಿ. ನೀವು ಅಪಘಾತಕ್ಕೆ ತುತ್ತಾಗುವ ಸಂಭಾವನೆ ಹೆಚ್ಚಿದ್ದರೆ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡುವುದು ಉತ್ತಮ ಉಪಾಯವಾಗಿದೆ.

24-ಘಂಟೆ ಗ್ರಾಹಕ ಸೇವೆಯ ಲಭ್ಯತೆ - ಡಿಜಿಟ್ ನ ಮತ್ತೊಂದು ಧನಾತ್ಮಕ ಅಂಶ ಎಂದರೆ ಈ ಕಂಪನಿಯು ತನ್ನ ಗ್ರಾಹಕ ಸೇವೆಯನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತದೆ. ವಾಸ್ತವದಲ್ಲಿ, ಎಲ್ಲಾ ಸಮಯದಲ್ಲೂ ಗ್ರಾಹಕರಿಂದ ಕರೆಗಳನ್ನು ಸ್ವೀಕರಿಸಲು ನಮ್ಮ ಬಳಿ ಒಂದು ತಂಡವೇ ಇದೆ. ನಮ್ಮ ತಜ್ಞರು ನೀವು ಎದುರಿಸುತ್ತಿರುವ ಪ್ರತೀ ಸಮಸ್ಯೆಯನ್ನೂ ಬಗೆಹರಿಸಬಲ್ಲರು. ಹಾಗೂ ನಮ್ಮ ಸರಳ ಕ್ಲೈಮ್ ಪ್ರಕ್ರಿಯೆ ಬಗ್ಗೆ ನಿಮಗೆ ಹಂತ ಹಂತದ ಮಾರ್ಗದರ್ಶನವನ್ನು ನೀಡಬಲ್ಲರು.  ಅಪಘಾತಗಳು ಯಾವುದೇ ಸಮಾಯದಲ್ಲಿ ಸಂಭವಿಸಬಹುದಾದರಿಂದ, ಡಿಜಿಟ್ ಇಂತಹ ತುರ್ತು ಪರಿಸ್ಥಿತಿಗಳನ್ನು ತಡಮಾಡದೆಯೇ ನಿಭಾಯಿಸುತ್ತದೆ.

ಸರಳ ಆನ್ಲೈನ್ ಕ್ಲೈಮ್ ಇತ್ಯರ್ಥದ ಪ್ರಕ್ರಿಯೆ - ಡಿಜಿಟ್ ತನ್ನ ಪಾಲಿಸಿದಾರರನ್ನು ಕ್ಲೈಮ್ ಸಮಯದಲ್ಲಿ, ಜಟಿಲ ಹಾಗೂ ಗೊಂದಲಮಯ ಪ್ರಕ್ರಿಯೆಯಿಂದ ಕಾಪಾಡುತ್ತದೆ. ವಿಶೇಷವಾಗಿ, ತನ್ನ ಸ್ಮಾರ್ಟ್ ಫೋನ್ ಅಳವಡಿಕೆಯ ಸ್ವಪರಿಶೀಲನಾ ಪ್ರಕ್ರಿಯೆಯಿಂದ, ಕ್ಲೈಮ್ ಫೈಲ್ ಮಾಡುವ ಪ್ರಕ್ರಿಯೆಯು ಹೆಚ್ಚು ವ್ಯವಸ್ಥಿತ ಹಾಗೂ ಗೊಂದಲರಹಿತವಾಗಿದೆ, ಸುದೀರ್ಘ ಪತ್ರವ್ಯವಹಾರಗಳು ಇರದ ಕಾರಣ.

ಸ್ವತಂತ್ರವಾಗಿ ಐಡಿವಿ( IDV) ಯನ್ನು ಹೆಚ್ಚಿಸಿ ಅಥವಾ ಕಡಿಮೆಗೊಳಿಸಿ - ನೀವು ನಿಮಗೆ ನೀಡಲಾದ ಐಡಿವಿಯಿಂದ ಸಂತುಷ್ಟರಾಗಿರದಿದ್ದರೆ, ಡಿಜಿಟ್ ನಲ್ಲಿ, ನೀವು ಇದನ್ನು ನಿಮಗೆ ಬೇಕಾದ ಹಾಗೆ ಬದಲಿಸಬಹುದು. ಬೈಕಿನ ಸಂಪೂರ್ಣ ಹಾನಿಯಾದ ಪಕ್ಷದಲ್ಲಿ, ಹೆಚ್ಚಿನ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ ಅತ್ಯಂತ ಪ್ರಯೋಜನಕಾರಿಯಾಗಿ ಪರಿಣಮಿಸುವುದು. ಈ ಮೊತ್ತದಿಂದ ನೀವು ನಿಮ್ಮ ಹಳೆಯ ವಾಹನವನ್ನು ಹೊಸ ಮಾದರಿಯೊಂದಿಗೆ ಬದಲಿಸಿ ನಿಮಗಾಗಬಲ್ಲ ಆರ್ಥಿಕ ನಷ್ಟವನ್ನು ತಪ್ಪಿಸಬಹುದು. ಹೆಚ್ಚಿದ ಐಡಿವಿ ಯಿಂದಾಗಿ ನಿಮ್ಮ ಪ್ರೀಮಿಯಂ ಕೂಡಾ ಹೆಚ್ಚಿದರೂ, ನಿಮ್ಮ ವಾಹನದ ಮೇಲಿನ ನಿಮ್ಮ ಹೂಡಿಕೆಯನ್ನು ಸಂಪೂರ್ಣವಾಗಿ ಸಂರಕ್ಷಿಸಲು ಇದೊಂದು ಸೂಕ್ತ ಕ್ರಮವಾಗಿದೆ.

ಖರೀದಿ ಹಾಗೂ ಮಾರಾಟಗಳ ನೀತಿಗಳು ಸರಳವಾಗಿವೆ - ನೀವು ಡಿಜಿಟ್ ನಿಂದ ಪ್ಯಾಷನ್ ಪ್ರೋ ಇನ್ಶೂರೆನ್ಸ್ ಪಾಲಿಸಿ ಖರೀದಿಯನ್ನು ಆಯ್ಕೆ ಮಾಡಿದರೆ ಈ ಖರೀದಿಯು ಅತ್ಯಂತ ಸರಳವಾಗಿರುತ್ತದೆ. ಇದರ ಪ್ರಾಥಮಿಕ ಕಾರಣ, ಹಳೆಯ ಹಾಗೂ ಹೊಸ ಗ್ರಾಹಕರಿಬ್ಬರಿಗೂ ನಮ್ಮ ಆನ್ಲೈನ್ ಪೋರ್ಟಲ್ ಸಮರ್ಪಕವಾಗಿ ಅದರ ಲಾಭಗಳನ್ನು ಪಡೆಯುವಂತೆ ಮಾಡುತ್ತದೆ. ಕೇವಲ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ, ಬೇಕಾದ ಯೋಜನೆಯನ್ನು ಆಯ್ಕೆ ಮಾಡಿ, ಬೈಕ್ ನ ಅಗತ್ಯ ವಿವರಗಳನ್ನು ಭರ್ತಿ ಮಾಡಿ, ವಾರ್ಷಿಕ ಪ್ರೀಮಿಯಂ ಅನ್ನು ಪಾವತಿಸಿ, ಅಷ್ಟೇ.

ನೀವು ನಮ್ಮ ಪೋರ್ಟಲ್ ಮೂಲಕ ಯೋಜನೆಯನ್ನು ರಿನ್ಯೂ ಮಾಡಲೂ ಇದೇ ರೀತಿಯ ಪ್ರಕ್ರಿಯೆಯನ್ನು ಅನುಸರಿಸಬಹುದು.

ನಗದುರಹಿತ ರಿಪೇರಿಗಳಿಗಾಗಿ ಡಿಜಿಟ್ ನ ನೆಟ್ವರ್ಕ್ ಗ್ಯಾರೇಜ್ ಗಳಿಗೆ ಭೇಟಿ ನೀಡಿ - ಡಿಜಿಟ್ ಭಾರತದಾದ್ಯಂತ 4400+ ಕ್ಕೂ ಹೆಚ್ಚು ನೆಟ್ವರ್ಕ್ ಗ್ಯಾರೇಜ್ ಗಳೊಂದಿಗೆ ಸಂಪರ್ಕವನ್ನು ಹೊಂದಿದೆ.  ನೀವು ನಮ್ಮ ಪಾಲಿಸಿದಾರರಾಗಿದ್ದು, ಇಂತಹ ಕೇಂದ್ರವೊಂದಲ್ಲಿ ನಿಮ್ಮ ಬೈಕ್ ರಿಪೇರಿ ಮಾಡಿಸಲು ಬಯಸುತ್ತಿದ್ದರೆ. ನೀವು ನಿಮ್ಮ ಜೇಬಿನಿಂದ ಯಾವುದೇ ಕ್ಯಾಷ್ ಅನ್ನು ಪಾವತಿಸದೆಯೇ ಹಾನಿಗಳ ರಿಪೇರಿಯನ್ನು ಮಾಡಿಸಬಹುದು. ಕಾರಣ, ನೀವು ನಿಮ್ಮ ಜೇಬಿನಿಂದ ಬಿಡಿಗಾಸನ್ನೂ ಖರ್ಚು ಮಾಡದೇ ಇರುವ ಹಾಗೆ ಡಿಜಿಟ್ , ನೇರವಾಗಿ ಗ್ಯಾರೇಜ್ ಗಳಿಗೆ ಮರುಪಾವತಿಯನ್ನು ಮಾಡುತ್ತದೆ. 

ಇಂತಹ ಇನ್ನೂ ಹಲವು ವೈಶಿಷ್ಟ್ಯಗಳೊಂದಿಗೆ, ಡಿಜಿಟ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಗಳು ಮಾರುಕಟ್ಟೆಯಲ್ಲಿ ಲಭ್ಯವಿರುವಂತಹ ಪಾಲಿಸಿಗಳಲ್ಲಿ ಹೆಚ್ಚು ಲಾಭದಾಯಕವಾಗಿರುವಂತದ್ದಾಗಿದೆ.

ಭಾರತಲ್ಲಿಯ ಜನಪ್ರಿಯ ಹೀರೋ ಪ್ಯಾಷನ್ ಬೈಕ್ ಮಾದರಿಗಳು

ಸಿಹಿ ಸುದ್ದಿಯೇನೆಂದರೆ, ಡಿಜಿಟ್, ಬೈಕ್ ಮಾಲೀಕರಿಗೆ ಮಾದರಿಗೆ ನಿರ್ದಿಷ್ಟವಾದ ಇನ್ಶೂರೆನ್ಸ್ ಯೋಜನೆಗಳನ್ನು ಒದಗಿಸುತ್ತದೆ. ಆದ್ದರಿಂದ, ನಿಮ್ಮ ಬಳಿ ಯಾವುದೇ ಹೀರೋ ಪ್ಯಾಷನ್ ಮಾದರಿ ಇದ್ದರೂ, ನಿಮಗೆ ನಮ್ಮಿಂದ ಸಮರ್ಪಕವಾದ ಕವರ್ ದೊರೆಯುವುದು. ಈ ಕೆಳಗೆ, ಡಿಜಿಟ್ ಕವರ್ ಮಾಡುವ ಕೆಲ ಜನಪ್ರಿಯ ಪ್ಯಾಷನ್ ಮಾದರಿಗಳನ್ನು ಕವರ್ ಮಾಡಲಾಗಿದೆ:

  • ಪ್ಯಾಷನ್ ಪ್ರೋ ಐ3ಎಸ್ - ಇದು ಪ್ಯಾಷನ್ ಪ್ರೋ ಶ್ರೇಣಿಯ ಬೇಸ್ ಮಾದರಿಯಾಗಿದ್ದು ತನ್ನ ಆರಂಭಿಕ ಲಾಂಚ್ ನಂತರ ಹಲವು ನವೀಕರಣಗಳನ್ನು ಕಂಡಿದೆ. ಹೆಚ್ಚಿನ ಆರಾಮ ಹಾಗೂ ಉನ್ನತ ಇಂಧನ ಸಾಮರ್ಥವನ್ನು ಹೊಂದಿದ ಇದು ಖಂಡಿತವಾಗಿಯೂ ಪ್ರಯಾಣಿಕರಿಗೆ ಮೆಚ್ಚಿಗೆಯಾಗುವಂತಹ  ದ್ವಿಚಕ್ರ ವಾಹನವಾಗಿದೆ. ಆದರೆ ಈ ಬೈಕ್ ನ 100 ಸಿಸಿ ಎಂಜಿನ್ ಎಲ್ಲಾ ಬೈಕ್ ಸವಾರರಿಗೆ ಹೊಂದದೇ ಇರಬಹುದು.
  • ಪ್ಯಾಷನ್ ಪ್ರೋ 110 - ಹೆಚ್ಚಿನ ತೀಕ್ಷ್ಣತೆಯನ್ನು ಬಯಸುವವರಿಗಾಗಿ,  ಪ್ಯಾಷನ್ ಪ್ರೋ 110 ಉತ್ತಮ ಆಯ್ಕೆಯಾಗಿದೆ. ಇದು ನವೀಕರಿಸಲಾದ 113.2cc ಅನ್ನು ಹೊಂದಿದ್ದು ಬೇಸ್ ಮಾದರಿಯ ಅದೇ ಆರಾಮ ಹಾಗೂ ಉತ್ತಮ  ರೈಡ್ ಅನುಭವವನ್ನು ನೀಡುತ್ತದೆ. ಹೀರೋನ ಪ್ರಕಾರ ಈ ಬೈಕ್ ಒಂದು ಲೀಟರ್ ಇಂಧನದಲ್ಲಿ ಸರಾಸರಿ 75 ಕಿಮಿ ಓಡಬಲ್ಲದು. ಇದು ಹೆಚ್ಚುವರಿ ವೈಶಿಷ್ಟ್ಯಗಳನ್ನೂ ಹೊಂದಿದೆ; ಟ್ಯೂಬ್ ರಹಿತ ಟಯರ್, ನಿರ್ವಹಣೆ ರಹಿತ ಬ್ಯಾಟರಿ ಇತ್ಯಾದಿ.
  • ಪ್ಯಾಷನ್ ಎಕ್ಸ್ಪ್ರೋ  - ಮೇಲಿನ ಎರಡು ಮಾದರಿಗಳಿಗಿಂತ ಸ್ವಲ್ಪ ಹೆಚ್ಚಿನ ದರವನ್ನು ಹೊಂದಿದ್ದರೂ, ಇದು 110ಸಿಸಿ ಫೋರ್-ಸ್ಟ್ರೋಕ್ ಎಂಜಿನ್ ಅನ್ನು ಹೊಂದಿದೆ. ಇದನ್ನು ಹೊರತು ಪಡಿಸಿ, ಬೈಕಿನ ಮುಖ್ಯ ವೈಶಿಷ್ಟ್ಯಗಳು ಅದೇ ಆಗಿವೆ, 75 ಕಿಮಿ/ಲಿ ನ ಇಂಧನ ಸಾಮರ್ಥ್ಯದೊಂದಿಗೆ. 

ನೀವು ಯಾವುದೇ ಮಾದರಿಯನ್ನು ಯಾವುದೇ ದರದಲ್ಲಿ ಪಡೆದಿದ್ದರೂ, ಪ್ಯಾಷನ್ ಪ್ರೋ ಇನ್ಶೂರೆನ್ಸ್ ಯೋಜನೆಯು ಮುಖ್ಯವಾಗಿದೆ. ಡಿಜಿಟ್ ನ ಉನ್ನತ ಆಯ್ಕೆಗಳು ನಿಮಗೆ ಉತ್ತಮ ಸಂರಕ್ಷಣೆ ಪಡೆಯುವಲ್ಲಿ ಸಹಾಯ ಮಾಡಿ, ಎಲ್ಲಾ ಸಂದರ್ಭದಲ್ಲೂ ನಿಮ್ಮ ಆರ್ಥಿಕತೆಯನ್ನು ಭದ್ರವಾಗಿರಿಸುತ್ತದೆ.

ಹೀರೋ ಪ್ಯಾಷನ್ ಪ್ರೋ- ರೂಪಾಂತರಗಳು ಹಾಗೂ ಎಕ್ಸ್-ಶೋರೂಂ ದರ

ರೂಪಾಂತರಗಳು ಎಕ್ಸ್-ಶೋರೂಂ ದರ( ನಿಮ್ಮ ನಗರದ ಪ್ರಕಾರ ಬದಲಾಗಬಹುದು)
ಪ್ಯಾಷನ್ ಪ್ರೋ ಐ3ಎಸ್ ಎ ಡಬ್ಲ್ಯೂ ಡ್ರಮ್, 84 ಕಿಮಿ/ಲಿ, 97.2 ಸಿಸಿ ₹ 54,475
ಪ್ಯಾಷನ್ ಪ್ರೋ ಐ3ಎಸ್ ಡಬ್ಲ್ಯೂ ಡ್ರಮ್, 84 ಕಿಮಿ/ಲಿ, 97.2 ಸಿಸಿ ₹ 54,925
ಪ್ಯಾಷನ್ ಪ್ರೋ ಐ3ಎಸ್ ಡಬ್ಲ್ಯೂ ಡಿಸ್ಕ್, 84 ಕಿಮಿ/ಲಿ, 97.2 ಸಿಸಿ ₹ 56,425

ಭಾರತದಲ್ಲಿ ಹೀರೋ ಪ್ಯಾಷನ್ ಪ್ರೋ ಬೈಕ್ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ನಾನು ನನ್ನ ಸೆಕೆಂಡ್-ಹ್ಯಾಂಡ್ ಬೈಕಿಗಾಗಿ ಇನ್ಶೂರೆನ್ಸ್ ಯೋಜನೆ ಖರೀದಿಸಬಹುದೇ?

ಹೌದು. ಇನ್ಶೂರೆನ್ಸ್ ಖರೀದಿಸಬಹುದು ಮಾತ್ರವಲ್ಲದೇ ಇದು ಕಡ್ಡಾಯವೂ ಆಗಿದೆ. ಈ ನಿಯಮವನ್ನು ನೀವು ಪಾಲಿಸದೇ ಇದ್ದರೆ, ನಿಮಗೆ ಭಾರೀ ದಂಡ ವಿಧಿಸಲಾಗಬಹುದು ಅಥವಾ ನಿಮ್ಮ ಲೈಸನ್ಸ್ ಅನ್ನು ರದ್ದು ಮಾಡಲಾಗಬಹುದು.

ನನ್ನ ಬೈಕ್ ಒಂದು ಬೆಂಕಿ ಅವಘಡದಲ್ಲಿ ಹಾನಿಗೊಳಗಾಗಿತ್ತು. ನನ್ನ ಇನ್ಶೂರೆನ್ಸ್ ಪಾಲಿಸಿಯು ರಿಪೇರಿ ವೆಚ್ಚಗಳನ್ನು ಕವರ್ ಮಾಡುತ್ತದೆಯೇ?

ನಿಖರವಾದ ಕವರೇಜ್ ಒಂದು ಇನ್ಶೂರೆನ್ಸ್ ಪ್ರೊವೈಡರ್ ನಿಂದ ಇನ್ನೊಬರಿಗೆ ಬದಲಾಗುತ್ತದೆಯಾದರೂ, ಡಿಜಿಟ್ ನಿಮಗೆ ಇಂತಹ ಬೆಂಕಿ ಸಂಬಂಧಿತ ಹಾನಿಗಳಿಗಾಗಿ ಆರ್ಥಿಕ ನೆರೆವನ್ನು ಒದಗಿಸುತ್ತದೆ.

ಡಿಪ್ರಿಸಿಯೇಷನ್ ನನ್ನ ಬೈಕ್ ಇನ್ಶೂರೆನ್ಸ್ ಕ್ಲೈಮ್ ಗಳ ಮೇಲೆ ಪರಿಣಾಮ ಬೀರದಂತೆ ನಾನು ಹೇಗೆ ಖಚಿತಪಡಿಸಬಹುದು?

ನೀವು ನಿಮ್ಮ ಪಾಲಿಸಿಯಲ್ಲಿ ನೋ ಡಿಪ್ರಿಸಿಯೇಷನ್ ಆಡ್-ಆನ್ ಅನ್ನು ಆಯ್ಕೆ ಮಾಡಬಹುದು. ಇದರಿಂದ ನೀವು, ನಿಮ್ಮ ಪಾಲಿಸಿ ಪ್ರೊವೈಡರ್ ಕೇವಲ ನಿಮ್ಮ ಬೈಕ್ ನ ಮಾರುಕಟ್ಟೆ ಮೌಲ್ಯವನ್ನು ಪರಿಗಣಿಸಿ ಇನ್ಶೂರೆನ್ಸ್ ಕ್ಲೈಮ್ ಅನು ಸ್ವೀಕರಿಸುವುದನ್ನು ದೃಢಪಡಿಸಬಹುದು.