1984 ರಲ್ಲಿ ಡಾ. ಬ್ರಿಜ್ಮೋಹನ್ ಲಾಲ್ ಮುಂಜಲ್ ಜೀ ಅವರಿಂದ ಸ್ಥಾಪಿಸಲಾದ ಹೀರೋ ಮೋಟಾರ್ಕಾರ್ಪ್ ಲಿ.., ಅನ್ನು ಮೊದಲಿಗೆ ಹೀರೋ ಹೋಂಡಾ ಎಂದು ಕರೆಯಲಾಗಿತ್ತು. ಈ ಕಂಪನಿಯು, ದೇಶದಲ್ಲಿ, ಸೈಕಲ್ ಗಳು, ಸ್ಕೂಟರ್ ಗಳು ಮತ್ತು ಮೋಟಾರ್ ಸೈಕಲ್ ಗಳ ಪ್ರಮುಖ ತಯಾರಕರಾಗಿದ್ದು, ಇದರ ಪ್ರಧಾನಕಛೇರಿ ನವದೆಹೆಲಿಯಲ್ಲಿದೆ. ಇಂದು, ಹೀರೋ ಮೋಟೋಕಾರ್ಪ್, ವಿಶ್ವದಲ್ಲೇ ಅತೀ ದೊಡ್ಡ ಟು ವೀಲರ್ ವಾಹನ ತಯಾರಕನಾಗಿದೆ.
ಭಾರತದಲ್ಲಿ, ಈ ಕಂಪನಿಯು 46% ಕ್ಕಿಂತಲೂ ಹೆಚ್ಚಿನ ಟು ವೀಲರ್ ವಾಹನ ಮಾರುಕಟ್ಟೆಯನ್ನು ಹೊಂದಿದೆ. 1980 ರ ದಶಕದಲ್ಲಿ ತನ್ನ ಇಂಧನ ಸಾಮರ್ಥ್ಯದಿಂದಾಗಿ ಇವರು ತಯಾರಿಸಿದ ವಾಹನಗಳು ಅತ್ಯಂತ ಜನಪ್ರಿಯಗೊಂಡವು. ಇದರ ಜೊತೆ ಕೈಗೆಟಕುವ ಬೆಲೆಗಳೂ, ಹೀರೋ ಡೀಲರ್ಶಿಪ್ ನ ಮುಂದೆ ಬೈಕ್ ಅಥವಾ ಸ್ಕೂಟರ್ ಕೊಳ್ಳಲು ಜನರು ಸಾಲುಗಟ್ಟಿ ನಿಲ್ಲಲು ಕಾರಣವಾಯಿತು.
2010 ರಲ್ಲಿ ಹೋಂಡಾ, ಹೀರೋ ಜೊತೆಗಿನ ತನ್ನ ಜಂಟಿ ಉದ್ಯಮದಿಂದ ಹೊರಗುಳಿಯಲು ನಿರ್ಧರಿಸಿತು. ನಂತರ, ಹೀರೋ, ಹೋಂಡಾ ಹೊಂದಿರುವ ಷೇರುಗಳನ್ನು ಖರೀದಿಸಿ ತನ್ನದೇ ಆದ ಉಪಸಂಸ್ಥೆಯನ್ನು ಸ್ಥಾಪಿಸಿತು.
ಹೀಗೆ, ಹೋಂಡಾ ಮೋಟಾರ್ ಸೈಕಲ್ ಹಾಗೂ ಸ್ಕೂಟರ್ ಇಂಡಿಯಾದ ಪ್ರಯಾಣ ಆರಂಭವಾಯಿತು.
ಇಂದು ಹೀರೋ, ಹಲವು ಜನಪ್ರಿಯ ಬೈಕ್ ಗಳನ್ನು ಒಳಗೊಂಡಿದೆ:
ಹೀರೋ ಸ್ಪ್ಲೆಂಡರ್ ಪ್ಲಸ್
ಹೀರೋ ಎಚ್ ಎಫ್ ಡಿಲಕ್ಸ್
ಹೀರೋ ಪ್ಯಾಷನ್ ಪ್ರೋ
ಹೀರೋ ಸೂಪರ್ ಸ್ಪ್ಲೆಂಡರ್
ಹೀರೋ ಎಕ್ಸ್ ಪ್ಲಸ್ 200
ಹೀರೋ ಗ್ಲಾಮರ್
.. ಹಾಗೂ ಇನ್ನೂ ಹಲವಾರು!
ಇಷ್ಟು ವರ್ಷಗಳಲ್ಲಿ, ಹೀರೋ, ಭಾರತೀಯರು ವಿಶ್ವಾಸವಿಡುವಂತಹ ನಂಬಿಕಸ್ಥ ಬ್ರ್ಯಾಂಡ್ ಆಗುವಲ್ಲಿ ಯಶಸ್ವಿಯಾಗಿದೆ. ಕೈಗೆಟಕುವ ಹಾಗೂ ಉತ್ತಮ ಗುಣಮಟ್ಟದ ಕೊಡುಗೆಯೊಂದಿಗೆ, ಹೀರೋ ಬೈಕ್ ಹಾಗೂ ಸ್ಕೂಟರ್ ಗಳು ಎಲ್ಲಾ ಪ್ರದೇಶಗಳ ಜನರಿಗೆ ಒಪ್ಪುವಂತಹ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ.
ಹೀರೋ ಬೈಕ್ ಗಳು ಇಷ್ಟು ಜನಪ್ರಿಯವಾಗಲು ಕಾರಣವೇನು?
ಹೀರೋ ಬೈಕ್ ಗಳು, ಬಳಕೆದಾರರಲ್ಲಿ ನಿರಂತರವಾಗಿ ಇಷ್ಟು ಜನಪ್ರಿಯತೆಯನ್ನು ಕಾಣಲು ಹಲವಾರು ಕಾರಣಗಳಿವೆ. ಇಲ್ಲಿ ಕೆಲವನ್ನು ನೀಡಲಾಗಿದೆ:
ಶ್ರೇಷ್ಟ ಗ್ರಾಹಕ ಸೇವೆಯು ಯಾವುದೇ ಕಂಪನಿಯ ಒಂದು ಆಕರ್ಷಕ ಲಕ್ಷಣವಾಗಿರುತ್ತದೆ. ಹೀರೋ ತನ್ನ ಗ್ರಾಹಕರಿಗೆ ಉತ್ತಮ ಮಾರಾಟನಂತರದ ಸೇವೆಗಳನ್ನು ಒದಗಿಸುವುದು ಮಾತ್ರವಲ್ಲದೆ, ಭಾರತದ ಇತರ ಟು ವೀಲರ್ ವಾಹನ ಕಂಪನಿಗಳಿಗೆ ಒಂದು ಪ್ರೇರಣೆಯೂ ಆಗಿದೆ.
ಇವರ ಅಪಾರ ಬೆಳವಣಿಗೆಗೆ ಇನ್ನೊಂದು ಕಾರಣವೇನೆಂದರೆ ಇವರ ಉತ್ಪನ್ನ ಕ್ಷೇತ್ರದಲ್ಲಿರುವ ವೈವಿಧ್ಯತೆ. ಯಾವುದೇ ರೀತಿಯ ಆರ್ಥಿಕ ಹಿನ್ನಲೆಯಿರುವ ಬಳಕೆದಾರರಿಗೂ, ಅವರ ಅಗತ್ಯ ಹಾಗೂ ಖರ್ಚಿನ ಸಾಮರ್ಥ್ಯಕ್ಕೆ ಹೊಂದುವಂತಹ ಉತ್ಪನ್ನ ದೊರೆಯುತ್ತದೆ.
ಕೊನೆಯದಾಗಿ, ಇಷ್ಟು ವರ್ಷಗಳಿಂದಲೂ ತನ್ನ ಗುಣಮಟ್ಟವನ್ನು ಕಾಯ್ದಿರಿಸಿಕೊಂಡು ಬಂದಿರುವ ಬೆರಳೆಣಿಕೆಯ ಕಂಪನಿಗಳಲ್ಲಿ ಹೀರೋ, ಒಂದಾಗಿದೆ. ನೀವು ಅವರ ಒಂದು ಬೈಕ್ ಅನ್ನು ಖರೀದಿಸಿದಾಗ, ಅದರ ರಸ್ತೆಯಲ್ಲಿಯ ಸಾಮರ್ಥ್ಯ ಹಾಗೂ ಬಾಳಿಕೆಯ ಬಗ್ಗೆ ನೀವು ನಿಶ್ಚಿಂತೆಯಿಂದಿರಬಹುದು.
ಇವುಗಳು ಈ ಬ್ರ್ಯಾಂಡಿನ ಅಪಾರ ಜನಪ್ರಿಯತೆಗೆ ಕಾರಣವಾಗಿದ್ದರೂ, ಹೀರೋ ಗೆ ನಿರಂತರ ಗ್ರಾಹಕ ಬೆಂಬಲವನ್ನು ಹುಟ್ಟುಹಾಕಿರುವುದು, ಅದರ ಶ್ರೇಷ್ಠ ವೈಶಿಷ್ಟ್ಯತೆಗಳಿಂದ ಕೂಡಿರುವ ಉತ್ಪನ್ನಗಳು.
ಹೀರೋ ಟು ವೀಲರ್ ವಾಹನಗಳಿಂದ ನೀವು ನಿರೀಕ್ಷಿಸಬಹುದಾದ ವೈಶಿಷ್ಟ್ಯತೆಗಳು
ನಿಮ್ಮ ಬಜೆಟ್ ಎಷ್ಟೇ ಇರಲಿ, ಹೀರೋ ನಿಮ್ಮ ಅಗತ್ಯಗಳಿಗೆ ಸರಿಹೊಂದುವಂತಹ ವ್ಯಾಪಕ ಶ್ರೇಣಿಯ ವಾಹನಗಳನ್ನು ನೀಡುವುದರಲ್ಲಿ ಸಮರ್ಥವಾಗಿದೆ. ಕಂಪನಿಯು, ತಮ್ಮ ವಾಹನದಲ್ಲಿ ನೀಡುವ ವೈಶಿಷ್ಟ್ಯಗಳಲ್ಲಿ ಯಾವುದೇ ರೀತಿಯ ಕೊರತೆ ಉಂಟುಮಾಡುವುದಿಲ್ಲ.
ಅತ್ಯುತ್ತಮ ವೈಶಿಷ್ಟ್ಯಗಳು ಕೇವಲ ಉನ್ನತ ಮಟ್ಟದ ಸ್ಕೂಟರ್ ಹಾಗೂ ಬೈಕ್ ಗಳಿಗೆ ಮಾತ್ರ ಸೀಮಿತ ಎಂದುಕೊಂಡಿರೇ?
ಹಾಗಾದರೆ, ಮತ್ತೊಮ್ಮೆ ಯೋಚಿಸಿ.
ಎಲ್ಲಾ ಟು ವೀಲರ್ ವಾಹನಗಳ ಸಾಮಾನ್ಯ ವೈಶಿಷ್ಟ್ಯಗಳು ಇಲ್ಲಿವೆ:
ವಿಶ್ವಾಸ - ಭಾರತೀಯ ಮಾರುಕಟ್ಟೆಯ ವಿಷಯ ಬಂದಾಗ, ಬೈಕ್ ನ ಮೈಲೇಜ್ ಹಾಗೂ ಎಂಜಿನ್ ಗುಣಮಟ್ಟ ಅದರ ಎರಡು ಅತೀ ಪ್ರಮುಖ ಅಂಶಗಳಾಗಿವೆ. ಹೀರೋ ನ ಬೈಕ್ ಗಳು, ಜನಪ್ರಿಯ ಸ್ಪ್ಲೆಂಡರ್ ಹಾಗೂ ಪ್ಯಾಷನ್ ಮಾದರಿಗಳನ್ನೂ ಸೇರಿಸಿ, ರಸ್ತೆಯಲ್ಲಿ ಅತ್ಯುತ್ತಮ ಮೈಲೇಜ್ ನೀಡುವುದನ್ನೇ ತಮ್ಮ ಗುರಿಯನ್ನಾಗಿಸಿದ್ದು, ಇದರಿಂದ ಮಾಲೀಕನ ಇಂಧನ ವೆಚ್ಚವು ಕಡಿಮೆಯಾಗುತ್ತದೆ.
ಬಾಳಿಕೆ - ಶ್ರೀಸಾಮಾನ್ಯರಿಗೆ ಬೈಕ್ ಖರೀದಿಸಲು ಹೆಚ್ಚು ಹಣದ ಉಳಿತಾಯ ಮಾಡಬೇಕಾಗುತ್ತದೆ. ಆದ್ದರಿಂದಲೇ, ಖರೀದಿಯ ನಂತರ ವಾಹನಕ್ಕೆ ಯಾವುದೇ ಹಾನಿಯಾದರೆ, ಹೆಚ್ಚಿನ ಗ್ರಾಹಕರು ತೀವ್ರ ಹೊಡೆತಕ್ಕೊಳಗಾಗುತ್ತಾರೆ. ಹೀರೋ ತನ್ನ ಬೆಲೆಗಳನ್ನು ಕಡಿಮೆಗೊಳಿಸಲು ತನ್ನ ಬೈಕ್ ಭಾಗಗಳ ಗುಣಮಟ್ಟದಲ್ಲಿ ಯಾವುದೇ ರೀತಿಯ ರಾಜಿ ಮಾಡುವುದಿಲ್ಲ. ಇದರಿಂದಾಗಿ ಅದರ ರಚನೆ ಗಟ್ಟಿಮುಟ್ಟಾಗಿದ್ದು, ಇದು ಸರಳವಾಗಿ ಸಣ್ಣಪುಟ್ಟ ಹೊಡೆತ ಅಥವಾ ಢಿಕ್ಕಿಗಳನ್ನು ಯಾವುದೇ ಗಂಭೀರ ಹಾನಿಗೊಳಗಾಗದೆಯೇ ಸಹಿಸಿಕೊಳ್ಳುತ್ತದೆ.
ಉತ್ಪನ್ನಗಳಲ್ಲಿ ವೈವಿಧ್ಯತೆ - ಹೀರೋ ತನ್ನ ಉತ್ಪನ್ನಗಳಿಂದ ಯಾವುದೇ ನಿರ್ದಿಷ್ಟ ಆರ್ಥಿಕ ವರ್ಗಕ್ಕೆ ಮಾತ್ರ ಒದಗಿಸುವುದಿಲ್ಲ. ಬದಲಾಗಿ, ಹುಟ್ಟಿನಿಂದಲೇ, ಅದರ ಗಮನ ಕೈಗೆಟಕುವ ದರದ ಬೈಕ್ ಹಾಗೂ ಸ್ಕೂಟರ್ ಶ್ರೇಣಿಯನ್ನು ತಯಾರಿಸುವ ದಿಕ್ಕಿನಲ್ಲಿದೆ. ಅವರು, ವಾಹನಗಳ ಪ್ರೀಮಿಯಂ ಅಥವಾ ಐಷಾರಾಮಿ ರೂಪಾಂತರಗಳನ್ನು ಒದಗಿಸಿತ್ತಿದ್ದರೂ, ಕಂಪನಿಯೂ ತನ್ನ ‘ಎಲ್ಲರಿಗೂ ಕೈಗೆಟಕುವಂತಹ’ ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತದೆ.
ತಾಂತ್ರಿಕ ವಿಸ್ಮಯಗಳು - ತನ್ನ ವಾಹನಗಳಲ್ಲಿ ಹೊಸ ತಾಂತ್ರಿಕತೆಯನ್ನು ಅಳವಡಿಸುವ ವಿಷಯದಲ್ಲಿ ಕಂಪನಿಯು ಎಂದಿಗೂ ಹಿಂದೆ ಉಳಿದಿಲ್ಲ. ಉದಾಹರಣೆಗೆ, ಹೀರೋ ಇತ್ತೀಚೆಗಷ್ಟೇ ತನ್ನ ಪ್ರೀಮಿಯಂ ಶ್ರೇಣಿಯ ಸ್ಪೋರ್ಟ್ಸ್ ಬೈಕ್ ಆದ ಎಕ್ಸ್ಟ್ರೀಮ್ 200 ಎಸ್ ಅನ್ನು ಪರಿಚಯಿಸಿತು. ಇನ್ನೊಂದು ರೋಚಕ ಉತ್ಪನ್ನ ಎಕ್ಸ್ ಎಫ್3ಆರ್ ಆಗಿದ್ದು, ಇದರ ರಚನೆಯು ಜನಪ್ರಿಯ ವೀಡೀಯೋ ಗೇಮ್ ಆದ ಸ್ಟ್ರೀಟ್ ಫೈಟರ್ ಅನ್ನು ಆಧರಿಸಿದೆ.
ಆದಾಗ್ಯೂ, ಭಾರತೀಯ ರಸ್ತೆಗಳು ಅಪಘಾತ ಹಾಗೂ ಇತರ ಅಪಾಯಗಳಿಗಾಗಿ ಕುಖ್ಯಾತಿಯನ್ನು ಪಡೆದಿವೆ. ಈ ಮೇಲೆ ವಿವರಿಸಲಾದ ಯಾವುದೇ ವಿಶಿಷ್ಟ್ಯಗಳು, ದುರಾದೃಷ್ಟವೆಂಬಂತೆ, ಇಂತಹ ರಸ್ತೆ ಅಪಾಯಗಳಿಂದ ನಿಮ್ಮ ನೆಚ್ಚಿನ ಹೀರೋ ವಾಹನವನ್ನು ಸಂರಕ್ಷಿಸಲು ಅಸಮರ್ಥವಾಗಿವೆ.
ಇಂತಹ ಅಕಸ್ಮಾತಾದ ಹೊಣೆಗಾರಿಕೆಗಳಿಂದ ತಪ್ಪಿಸಿಕೊಳ್ಳಲು ಹೀರೋ ಬೈಕ್ ಇನ್ಶೂರೆನ್ಸ್ ಪಾಲಿಸಿ ಯೋಜನೆಯನ್ನು ಆಯ್ಕೆ ಮಾಡುವುದು ಕಡ್ಡಾಯವಾಗುತ್ತದೆ.