ಹೀರೋ ಸ್ಪ್ಲೆಂಡರ್ ಇನ್ಶೂರೆನ್ಸ್

ಹೀರೋ ಸ್ಪ್ಲೆಂಡರ್ ಇನ್ಶೂರೆನ್ಸ್ ಕೇವಲ ₹752 ರಿಂದ ಆರಂಭ

Third-party premium has changed from 1st June. Renew now

ಹೀರೋ ಸ್ಪ್ಲೆಂಡರ್ ಇನ್ಶೂರೆನ್ಸ್ ಅನ್ನು ಆನ್ಲೈನ್ ಆಗಿ ಖರೀದಿಸಿ/ರಿನ್ಯೂ ಮಾಡಿ

source

ಹೀರೋ ಸ್ಪ್ಲೆಂಡರ್ ಬಹುಶಃ ಭಾರತದ ಅತ್ಯಂತ ಜನಪ್ರಿಯ ಬಜೆಟ್ ಬೈಕ್ ಗಳಲ್ಲಿ ಒಂದಾಗಿದೆ. ಆದ್ದರಿಂದ, ನೀವು ಟು ವೀಲರ್ -ವಾಹನ ಖರೀದಿಸುವುದರ ಬಗ್ಗೆ ಯೋಚಿಸುತ್ತಿದ್ದರೆ, ಅದರ ವೈಶಿಷ್ಟ್ಯಗಳ ಬಗ್ಗೆ, ಅದರ ಜನಪ್ರಿಯತೆಯ ಕಾರಣದ ಬಗ್ಗೆ ಹಾಗೂ ಅದಕ್ಕಾಗಿ ಒಂದು ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವ ಮೊದಲು ನೀವು ಏನನ್ನು ಪರಿಶೀಲಿಸಬೇಕು ಎನ್ನುವುದರ ಬಗ್ಗೆ ತಿಳುವಳಿಕೆಯನ್ನು ಪಡೆಯಬೇಕಾಗುತ್ತದೆ.

ಸ್ಪ್ಲೆಂಡರ್ ಉತ್ಪಾದನೆಯ ಹಿಂದಿರುವ ಕಂಪನಿಯಾದ ಹೀರೋ ಮೋಟೋಕಾರ್ಪ್, ಹಲವು ಸಮಯಗಳಿಂದ ದೇಶದೊಳಗಿನ ಟು ವೀಲರ್  ವಾಹನ ಮಾರಾಟದಲ್ಲಿ ಮಾರುಕಟ್ಟೆಯಲ್ಲಿ ಅಗ್ರಸ್ಥಾನವನ್ನು ಪಡೆದಿದೆ.ಜೂನ್ 2019 ರಲ್ಲಿ, ಹೀರೋನ ಸ್ಪ್ಲೆಂಡರ್ ಹಾಗೂ ಎಚ್ ಎಫ್ ಡೀಲಕ್ಸ್ ಆಕರ್ಷಕ ಮರಾಟವನ್ನು ದಾಖಲಿಸಿದ್ದವು ಹಾಗೂ ಹೀರೋ ಸ್ಪ್ಲೆಂಡರ್ 2.42 ಲಕ್ಷ ಬೈಕ್ ಗಳನ್ನು ಮಾರಾಟ ಮಾಡಿತ್ತು. (1)

ನೀವೊಂದು ಬಾಳಿಕೆ ಬರುವಂತಹ ಒಳ್ಳೆಯ ಇಂಧನ- ಸಾಮರ್ಥ್ಯವಿರುವ ಬೈಕ್ ಗಾಗಿ ಹುಡುಕಾಟ ನೆಡೆಸುತ್ತಿದ್ದೀರಾ? ಹಾಗಾದರೆ, ಸ್ಪ್ಲೆಂಡರ್ ಆ ಬೈಕ್ ಆಗಿರಬಹುದು.

ಸ್ಪ್ಲೆಂಡರ್ ನ ವಿನ್ಯಾಸವು ಸ್ವಾಭಾವಿಕ ಸವೆತಗಳನ್ನು ತಡೆದುಕೊಳ್ಳಲು ಆಗಿದೆಯಾದರೂ, ಅದು ಅಪಘಾತಕ್ಕೀಡಾದರೆ ಅದರ ಸಾಮಾರ್ಥ್ಯವು ಕುಗ್ಗಬಹುದು. ಇಂತಹ ಅಪಘಾತಗಳ ಸಂದರ್ಭದಲ್ಲಿ ಒಂದು ಸ್ಪ್ಲೆಂಡರ್ ಬೈಕ್ ಇನ್ಶೂರೆನ್ಸ್ ಅದರ ದುಬಾರಿ ರಿಪೇರಿಗಳಿಗೆ ಬೇಕಾಗುವ ಹಣಕಾಸನ್ನು ನಿಭಾಯಿಸಲು ಸಹಾಯ ಮಾಡಬಹುದು. ಅಪಘಾತದ ಸಮಯದಲ್ಲಿ ಉಂಟಾಗಬಲ್ಲ ಥರ್ಡ್-ಪಾರ್ಟಿ ಹೊಣೆಗಾರಿಕೆಗಳನ್ನು ಕವರ್ ಮಾಡಲೂ ಇನ್ಶೂರೆನ್ಸ್ ಪಾಲಿಸಿ ಆವಶ್ಯಕವಾಗಿದೆ.

ಇದರ ಜೊತೆ, ನಿಮ್ಮ ಟು ವೀಲರ್  ವಾಹನಕ್ಕಾಗಿ ಒಂದು ಇನ್ಶೂರೆನ್ಸ್ ಕವರ್ ಆವಶ್ಯಕ ಮಾತ್ರವಲ್ಲ, ಮೋಟಾರ್ ವಾಹನ ಅಧಿನಿಯಮ 1988 ರ ಪ್ರಕಾರ ಕಡ್ಡಾಯವೂ ಆಗಿದೆ. ಈ ನಿಯಮದ ಪಾಲನೆಯಲ್ಲಿ ನೀವು ವಿಫಲವಾದಲ್ಲಿ ನೀವು ಟ್ರಾಫಿಕ್ ದಂಡಕ್ಕೆ ಪಾತ್ರವಾಗಬಹುದು, ಮೊದಲ ಅಪರಾಧಕ್ಕೆ ರೂ.2000 ಹಾಗೂ ಪುನರಾವರ್ತನೆಗೆ ರೂ. 4,000.

ಹೀರೋ ಸ್ಪ್ಲೆಂಡರ್ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್ ಆಗಿರುತ್ತದೆ

ನೀವು ಡಿಜಿಟ್ ನ ಹೀರೋ ಸ್ಪ್ಲೆಂಡರ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ಹೀರೋ ಸ್ಪ್ಲೆಂಡರ್‌ಗಾಗಿ ವಿಮಾ ಯೋಜನೆಗಳ ವಿಧಗಳು

ಥರ್ಡ್ ಪಾರ್ಟೀ ಕಾಂಪ್ರಹೆನ್ಸಿವ್

ಅಪಘಾತದಿಂದ ಸ್ವಂತ ಟು ವೀಲರ್ ವಾಹನಕ್ಕಾದ ನಷ್ಟ/ಹಾನಿ

×

ಬೆಂಕಿಯಿಂದ ಸ್ವಂತ ಟು ವೀಲರ್ ವಾಹನಕ್ಕಾದ ನಷ್ಟ/ಹಾನಿ

×

ಪ್ರಕೃತಿ ವಿಕೋಪದಿಂದ ಸ್ವಂತ ಟು ವೀಲರ್ ವಾಹನಕ್ಕಾದ ನಷ್ಟ/ಹಾನಿ

×

ಥರ್ಡ್ ಪಾರ್ಟೀ ವಾಹನಕ್ಕಾದ ಹಾನಿ

×

ಥರ್ಡ್ ಪಾರ್ಟೀ ಸ್ವತ್ತಿಗಾದ ಹಾನಿ

×

ವೈಯಕ್ತಿಕ ಅಪಘಾತ ಕವರ್

×

ಥರ್ಡ್ ಪಾರ್ಟೀ ವ್ಯಕ್ತಿಗೆ ಹಾನಿ/ಸಾವು

×

ನಿಮ್ಮ ಸ್ಕೂಟರ್ ಅಥವಾ ಬೈಕ್ ನ ಕಳವು

×

ನಿಮ್ಮ ಐಡಿವಿ ಅನ್ನು ಕಸ್ಟಮೈಜ್ ಮಾಡುವುದು

×

ಕಸ್ಟಮೈಜ್ ಮಾಡಲಾದ ಆಡ್-ಆನ್ ಗಳೊಂದಿಗೆ ಹೆಚ್ಚುವರಿ ಸಂರಕ್ಷಣೆ

×
Get Quote Get Quote

ಕಾಂಪ್ರಹೆನ್ಸಿವ್  ಹಾಗೂ ಥರ್ಡ್ ಪಾರ್ಟೀ ಟು ವೀಲರ್  ವಾಹನ ಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಇನ್ನಷ್ಟು ತಿಳಿಯಿರಿ.

ಕ್ಲೈಮ್ ಫೈಲ್ ಮಾಡುವುದು ಹೇಗೆ?

ನಮ್ಮ ಟು ವೀಲರ್ ವಾಹನ ಇನ್ಶೂರೆನ್ಸ್ ಯೋಜನೆಯನ್ನು ಖರೀದಿಸಿದ ಅಥವಾ ರಿನ್ಯೂ ಮಾಡಿದ ನಂತರ ನೀವು ನೆಮ್ಮದಿಯ ಜೀವನವನ್ನು ನಡೆಸುತ್ತೀರಿ, ಕಾರಣ ನಮ್ಮ ಬಳಿ ಇರುವ 3 ಹಂತಗಳ ಸಂಪೂರ್ಣ ಡಿಜಿಟಲ್ ಆದ ಕ್ಲೈಮ್ ಗಳ ಪ್ರಕ್ರಿಯೆ!

ಹಂತ 1

ಕೇವಲ 1800-258-5956 ಗೆ ಕರೆ ನೀಡಿ. ಯಾವುದೇ ಫಾರ್ಮ್ ತುಂಬಿಸಬೇಕಾಗಿಲ್ಲ.

ಹಂತ 2

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವ ಪರಿಶೀಲನೆಯ ಲಿಂಕ್ ಅನ್ನು ಪಡೆಯಿರಿ.ನಮ್ಮ ಹಂತ ಹಂತದ ಮಾರ್ಗದರ್ಶನದೊಂದಿಗೆ ನಿಮ್ಮ ಸ್ಮಾರ್ಟ್ ಫೋನಿನಿಂದ ನಿಮ್ಮ ವಾಹನದ ಹಾನಿಗಳನ್ನು ಸೆರೆಹಿಡಿಯಿರಿ.

ಹಂತ 3

ನೀವು ಆಯ್ಕೆ ಮಾಡಲು ಬಯಸುವ ಪಾವತಿಯ ವಿಧಾನವನ್ನು ನಿರ್ಧರಿಸಿ ಅಂದರೆ ಮರುಪಾವತಿ ಅಥವಾ ನಮ್ಮ ನೆಟ್ವರ್ಕ್ ಗ್ಯಾರೇಜ್ ಗಳಲ್ಲಿ ಕ್ಯಾಶ್ ಲೆಸ್.

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್ ಅನ್ನು ಎಷ್ಟು ಬೇಗ ಸೆಟ್ಲ್ ಮಾಡಬೇಕಾಗುತ್ತದೆ? ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುತ್ತಿರುವಾಗ ಇದು ನಿಮ್ಮ ಯೋಚನೆಗೆ ಬರಬೇಕಾದ ಮೊದಲ ಪ್ರಶ್ನೆಯಾಗಿದೆ. ಒಳ್ಳೆಯದು, ನೀವು ಅದನ್ನೇ ಮಾಡುತ್ತಿದ್ದೀರಿ! ಡಿಜಿಟ್ ನ ಕ್ಲೈಮ್ಸ್ ರಿಪೋರ್ಟ್ ಕಾರ್ಡ್ ಅನ್ನು ಓದಿ

ಹೀರೋ ಸ್ಪ್ಲೆಂಡರ್ ನ ಪರಿಚಯ

25 ವರ್ಷಗಳ ಹಿಂದೆಯೇ ಪರಿಚಯಿಸಲಾಗಿದ್ದು, ಹೀರೋ ಸ್ಪ್ಲೆಂಡರ್, ಹೀರೋ ನ ಟು ವೀಲರ್ ವಾಹನಗಳ ಆಕರ್ಷಕ ಸಾಲುಗಳಲ್ಲಿ ಒಂದು ಉತ್ತಮ ಸೇರ್ಪಡೆಯಾಗಿ ಹೊರಹೊಮ್ಮಿತ್ತು. ಅದರ ಕೈಗೆಟಕುವ ದರಗಳಿಂದ ಹಾಗೂ ಉತ್ತಮ ಸಾಮರ್ಥ್ಯದಿಂದ, ಸ್ಪ್ಲೆಂಡರ್ ಸ್ವಲ್ಪ ಸಮಯದಲ್ಲೇ ಮನೆಮಾತಾಗಿತ್ತು.

ಇದರ ಜೊತೆ, ಅದು ಲಾಂಚ್ ಆದಾಗ, ಅದರ ವಿನೂತನ ತಂತ್ರಜ್ಞಾವಾದ, ಭಾರತದಲ್ಲಿ ಎಂದೂ ಕೇಳರಿಯದ, ಎಲೆಕ್ಟ್ರಾನಿಕ್ ಇಗ್ನಿಷನ್ ವ್ಯವಸ್ಥೆಯಿಂದ ಈ ಉದ್ಯಮದಲ್ಲಿ ಕ್ರಾಂತಿಯನ್ನೇ ತಂದಿತ್ತು.

  • ಇಂದು, ನೀವು ಹಲವು ಸ್ಪ್ಲೆಂಡರ್ ಮಾದರಿಗಳಿಂದ ಆಯ್ಕೆ ಮಾಡಬಹುದು , ಇವೆಲ್ಲವೂ 80 ಕಿಮಿ/ಲಿ ಆಸುಪಾಸಿನ ಮೈಲೇಜ್ ಅನ್ನು ನೀಡುತ್ತದೆ. ಶಕ್ತಿಶಾಲಿ 4-ಸ್ಟ್ರೋಕ್ ಸಿಂಗಲ್-ಸಿಲಿಂಡರ್ 97 ಸಿಸಿ ಎಂಜಿನ್ ದೈನಂದಿನ ಬಳಕೆಗೆ ಉತ್ತಮವಾಗಿದ್ದು, ಪ್ರತಿದಿನದ ಪ್ರಯಾಣಕ್ಕೆ  ಸೂಕ್ತ ವಾಹನವಾಗಿದೆ.
  • ಹಲವು ಪ್ರಶಸ್ತಿಗಳಿಗೆ ಪಾತ್ರವಾಗಿದ್ದು, ಹೀರೋ ಸ್ಪ್ಲೆಂಡರ್ ಶ್ರೇಣಿಯು ವಿಮರ್ಶಕ ಹಾಗೂ ಅದರ ಬಳಕೆದಾರ ಇಬ್ಬರನ್ನೂ ಪ್ರಭಾವಿತಗೊಳಿಸುವಲ್ಲಿ ಯಶಸ್ವಿಯಾಗಿದೆ.
  • 2006 ರಲ್ಲಿ ಇಟಿ ಬ್ರ್ಯಾಂಡ್ ಇಕ್ವಿಟಿ ಸರ್ವೇ ಪ್ರಕಾರ ಸ್ಪ್ಲೆಂಡರ್ ಟು ವೀಲರ್ -ವಾಹನ ವರ್ಗದಲ್ಲಿ ಎರಡು ಟಾಪ್ ಮಾದರಿಗಳಲ್ಲಿ ಒಂದಾಗಿತ್ತು. 2016 ರಲ್ಲಿ ಜೆ.ಡಿ ಪವರ್ ಇಂಡಿಯಾ, ಹೀರೋ ಸೂಪರ್ ಸ್ಪ್ಲೆಂಡರ್ ಅನ್ನು ಉತ್ತಮ ಎಕ್ಸೆಕ್ಯೂಟಿವ್ ಮೋಟರ್ ಸೈಕಲ್ ಎಂದು ಘೋಷಿಸಿತ್ತು. (2)
  • ನವೆಂಬರ್ 2019 ರಲ್ಲಿ, ಕಂಪನಿಯು ಈ ಜನಪ್ರಿಯ ಬೈಕಿನ BS-VI ಕಂಪ್ಲಾಯಂಟ್ ರೂಪವನ್ನು ಪರಿಚಯಿಸಿತು. ಸ್ಪ್ಲೆಂಡರ್ ಐಸ್ಮಾರ್ಟ್ ಎಂಬ ಹೆಸರನ್ನು ಪಡೆದ ಇದು, ವಾಹನ ಚಲಿಸುವಾಗ ಹೊರಹೊಮ್ಮುವ ಅಪಾಯಕಾರಿ ಹೊಗೆಗಳನ್ನು ನಿಯಂತ್ರಿಸುತ್ತದೆ. (3)

ಆದ್ದರಿಂದಲೇ, ಸ್ಪ್ಲೆಂಡರ್ ನಿಮ್ಮ ಹೆಮ್ಮೆ ಹಾಗೂ ಸಂರಕ್ಷಣೆಗೆ ಯೋಗ್ಯವಾದ ಬೈಕ್ ಆಗಿದೆ. ನಿಮ್ಮ ವಾಹನಕ್ಕಾಗುವ ಯಾವುದೇ ಹಾನಿಯು ಅದರ ರಿಪೇರಿಗಳಿಂದಾಗಿ ಆರ್ಥಿಕ ಹೊಣೆಗಾರಿಕೆಗಳಿಗೆ ಕಾರಣವಾಗುತ್ತದೆ. ಆದರೆ, ಅಪಘಾತಗಳು ಭಾರತದಲ್ಲಿ ಸಾಮಾನ್ಯವಾಗಿವೆ. ಆದ್ದರಿಂದ, ಒಂದು ಹೀರೋ ಸೂಪರ್ ಸ್ಪ್ಲೆಂಡರ್ ಇನ್ಶೂರೆನ್ಸ್ ಯೋಜನೆಯನ್ನು ಆಯ್ಕೆ ಮಾಡುವುದು ಒಂದು ಉತ್ತಮ ನಿರ್ಧಾರವಾಗಿದೆ.

ನೀವು ನಿಮ್ಮ ಬೈಕಿಗಾಗಿ ಇನ್ಶೂರೆನ್ಸ್ ಕವರ್ ಅನ್ನು ಖರೀದಿಸುವಾಗಲೂ, ಉತ್ತಮ ಇನ್ಶೂರೆನ್ಸ್ ಪ್ರೊವೈಡರ್ ಅನ್ನು ನಿರ್ಧರಿಸುವುದು ಮುಖ್ಯವಾಗುತ್ತದೆ. ಡಿಜಿಟ್ ಗೊಂದಲರಹಿತವಾದ ವಿಶ್ವಾಸಾಹ್ರ, ಕಾಗದರಹಿತ ಇನ್ಶೂರೆನ್ಸ್ ಅನ್ನು ಒದಗಿಸುತ್ತದೆ.

ಆದರೆ, ಡಿಜಿಟ್ ನ ಇನ್ಶೂರೆನ್ಸ್ ಅನ್ನು ಪಡೆದ ನಂತರ ಅದರ ಲಾಭಗಳನ್ನು ಪಡೆಯುವುದು ಹೇಗೆ? ಸರಿ, ನೋಡೋಣ.

ನಿಮ್ಮ ಹೀರೋ ಸ್ಪ್ಲೆಂಡರ್ ಬೈಕ್ ಇನ್ಶೂರೆನ್ಸ್ ಗಾಗಿ ಡಿಜಿಟ್ ಅನ್ನು ಏಕೆ ಆಯ್ಕೆ ಮಾಡಬೇಕು?

ಮಾರುಕಟ್ಟೆಯಲ್ಲಿ ಲಭ್ಯವಿರುವ ಅಸಂಖ್ಯ ಆಯ್ಕೆಗಳಿಂದಾಗಿ, ಡಿಜಿಟ್ ಇತರರಿಗಿಂತ ಭಿನ್ನ ಹೇಗಿದೆ ಎಂದು ನೀವು ಸ್ವಾಭಾವಿಕವಾಗಿ ಯೋಚಿಸುತ್ತಿರಬಹುದು. ನೀವು ನಮ್ಮಿಂದ ಸ್ಪ್ಲೆಂಡರ್ ಬೈಕ್ ಇನ್ಶೂರೆನ್ಸ್ ಖರೀದಿಸುವಾಗ ನೀವು ಪಡೆಯಬಹುದಾದ ಲಾಭಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ:

  • ಆನ್ಲೈನ್ ಕ್ಲೈಮ್ ಪ್ರಕ್ರಿಯೆ : ಡಿಜಿಟ್ ನಿಮ್ಮ ಸಮಯದ ಮಹತ್ವವನ್ನು ಗೌರವಿಸುತ್ತದೆ. ಆದ್ದರಿಂದಲೇ, ಅವರು ಕ್ಲೈಮ್ ಪಾಲಿಸಿಗಳನ್ನು ಪಡೆಯುವುದಕ್ಕಾಗಿ ಡಿಜಿಟಲ್ ಪ್ರಕ್ರಿಯೆಯೊಂದನ್ನು ತಯಾರಿಸಿದ್ದಾರೆ. ಇನ್ನು ಮುಂದೆ ನೀವು ಇನ್ಶೂರೆನ್ಸ್ ಪಾಲಿಸಿಯ ವಿರುದ್ಧ ಕ್ಲೈಮ್ ರೈಸ್ ಮಾಡುವಾಗ ಇನ್ಶೂರರ್ ನ ಮುಂದೆ ಕಾಗದಗಳ ರಾಶಿ ತಂದುಹಾಕಬೇಕಾಗಿಲ್ಲ. ಇದರ ಜೊತೆ, ಡಿಜಿಟ್ ನೀಡುವ ಸ್ಮಾರ್ಟ್ಫೋನ್ ಅಳವಡಿಕೆಯ ಸ್ವ-ಪರಿಶೀಲನಾ ಪ್ರಕ್ರಿಯೆಯು ಕ್ಲೈಮ್ ಪ್ರಕ್ರಿಯೆಯನ್ನು ಇನ್ನಷ್ಟು ವ್ಯವಸ್ಥಿತಗೊಳಿಸುತ್ತದೆ. ಹಾಗೂ, ಡಿಜಿಟ್ ನ ಹೆಚ್ಚಿನ ಕ್ಲೈಮ್ ಇತ್ಯರ್ಥದ ರೇಷಿಯೋ ಒಂದು ಬೋನಸ್ ಆಗಿದ್ದು, ನಿಮ್ಮ ಕ್ಲೈಮ್ ತಿರಸ್ಕೃತವಾಗುವ ಸಂಭಾವನೆಯನ್ನು ಕಡಿಮೆಗೊಳಿಸುತ್ತದೆ.
  • ಹೆಚ್ಚಿನ ಸಂಖ್ಯೆಯ ನೆಟ್ವರ್ಕ್ ಗ್ಯಾರೇಜ್ ಗಳು ನಗದುರಹಿತ ಕ್ಲೈಮ್ ಗಳನ್ನು ಸರಳವಾಗಿಸಿವೆ - ಡಿಜಿಟ್, ಅವರ ದೇಶಾದ್ಯಂತ ಹೊಂದಿರುವ 1,000 ಕ್ಕಿಂತಲೂ ಹೆಚ್ಚು ನೆಟ್ವರ್ಕ್ ಗ್ಯಾರೇಜ್ ಗಳೊಂದಿಗೆ,  ನಗದುರಹಿತ ಅಪಘಾತ ಸಂಬಂಧೀ ರಿಪೇರಿಗಳನ್ನು ಪಡೆಯಲು ನಿಮಗೆ ಅರ್ಹತೆಯನ್ನು ನೀಡುತ್ತದೆ. ನಿಮ್ಮ ಬೈಕ್ ಅಪಘಾತಕ್ಕೀಡಾಗಿದ್ದ ಕಾರಣ ಅದಕ್ಕೆ ರಿಪೇರಿಯ ಆವಶ್ಯಕತೆಯಿದ್ದರೆ, ನೀವು ನಿಮ್ಮ ಹತ್ತಿರದ ನೆಟ್ವರ್ಕ್ ಗ್ಯಾರೇಜ್ ಅನ್ನು ಹುಡುಕಿ ನಗದುರಹಿತ ರಿಪೇರಿ ಗಳನ್ನು ಪಡೆಯಬಹುದಾಗಿದೆ. ಈ ಸ್ಥಳಗಳಲ್ಲಿ, ನೀವು ನಿಮ್ಮ ಡಿಜಿಟ್ ಪಾಲಿಸಿಯನ್ನು ತಕ್ಷಣವೇ ಬಳಸಬಹುದಾಗಿರುವುದರಿಂದ ನಿಮ್ಮ ಜೇಬಿನಿಂದ ಹಣ ಖರ್ಚು ಮಾಡುವ ಸಂಭಾವನೆಯನ್ನು ಇದು ತಪ್ಪಿಸುತ್ತದೆ.
  • ಸಮರ್ಥ 24x7 ಗ್ರಾಹಕ ಬೆಂಬಲದ ಸೇವೆ - ಅಪಘಾತಗಳು ಯಾವ ಸಮಯದಲ್ಲಿ ಬೇಕಾದರೂ ನಡೆಯಬಹುದು, ಅದು ದಿನದ ಮಧ್ಯ ಅಥವಾ ರಾತ್ರಿಯೇ ಇರಲಿ. ಆದ್ದರಿಂದ ಒಂದು ಇನ್ಶೂರೆನ್ಸ್ ಮಾರಾಟ ಮಾಡುವ ಕಂಪನಿಯು, ಎಲ್ಲಾ ಸಮಯಗಳಲ್ಲಿ ಕ್ಲೈಮ್ ಫೈಲಿಂಗ್ ಹಾಗೂ ಇತರ ಸಮಸ್ಯೆಗಳನ್ನು ಬಗೆಹರಿಸಲು ಸಿದ್ಧವಿರಬೇಕು. ಒಳ್ಳೆಯ ಸುದ್ದಿಯೇನೆಂದರೆ, ಡಿಜಿಟ್ ನ ಕಸ್ಟಮರ್ ಬೆಂಬಲದ ಇಲಾಖೆಯು ದಿನದ 24 ಘಂಟೆಯೂ ಗ್ರಾಹಕರಿಗೆ ಲಭ್ಯವಿದೆ, ರಜಾದಿನಗಳಲ್ಲಿ ಕೂಡಾ. ನಿಮ್ಮ ಬಳಿ ಪಾಲಿಸಿಯ ಕುರಿತು ಪ್ರಶ್ನೆಗಳಿದ್ದರೆ, ಅಥವಾ ನೀವು ಕೇವಲ ನಿಮ್ಮ ಅಪಘಾತದ ಬಗ್ಗೆ ತಿಳಿಸಲು ಬಯಸುತ್ತಿದ್ದರೆ, ನಮ್ಮ ಕಂಪನಿಯ ಪ್ರತಿನಿಧಿ ಒಂದು ಕರೆಯ ಅಂತರದಲ್ಲೇ ಇರುತ್ತಾರೆ. 
  • ನಿಮ್ಮ ಆಯ್ಕೆಗಾಗಿ ವಿವಿಧ ರೀತಿಯ ಸ್ಪ್ಲೆಂಡರ್ ಇನ್ಶೂರೆನ್ಸ್ ಪಾಲಿಸಿಗಳು  - ಅವರಿಗೆ ಉತ್ತಮವಾದದ್ದು ಏನಾಗಿದೆ ಎಂಬ ನಿರ್ಧಾರವನ್ನು ಡಿಜಿಟ್ ಗ್ರಾಹಕರಿಗೇ ಬಿಟ್ಟಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಅವರು ವಿವಿಧ ರೀತಿಯ ಸ್ಪ್ಲೆಂಡರ್ ಇನ್ಶೂರೆನ್ಸ್ ಪಾಲಿಸಿಗಳನ್ನು ನೀಡುತ್ತಿದ್ದಾರೆ:
  • 1) ಥರ್ಡ್-ಪಾರ್ಟಿ ಹೊಣೆಗಾರಿಕೆಯ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿ - ಈ ಯೋಜನೆಯಲ್ಲಿ, ನಿಮ್ಮ  ಸ್ಪ್ಲೆಂಡರ್ ಟು ವೀಲರ್  ವಾಹನ ಇನ್ಶೂರೆನ್ಸ್ ಪಾಲಿಸಿಯು, ನಿಮ್ಮ ಬೈಕ್ ಅಪಘಾತಕ್ಕೆ ಸಿಲುಕಿದ ಸಂದರ್ಭದಲ್ಲಿ,  ಕೇವಲ ಥರ್ಡ್-ಪಾರ್ಟಿ ವಾಹನ, ವ್ಯಕ್ತಿ ಅಥವಾ ಸ್ವತ್ತಿಗಾದ ಹಾನಿಯನ್ನು ಕವರ್ ಮಾಡುತ್ತದೆ.
  • 2) ಕಾಂಪ್ರೆಹೆನ್ಸಿವ್ ಟು ವೀಲರ್  ವಾಹನ ಇನ್ಶೂರೆನ್ಸ್ ಪಾಲಿಸಿ - ಈ ಇನ್ಶೂರೆನ್ಸ್ ಯೋಜನೆಗಳು ನಿಮ್ಮ ವಾಹನಕ್ಕಾದ ಹಾನಿಗಳಿಗಾಗಿ ವ್ಯಾಪಕವಾದ ಕವರೇಜ್ ಅನ್ನು ಒದಗಿಸುತ್ತವೆ. ಥರ್ಡ್-ಪಾರ್ಟಿ ಹೊಣೆಗಾರಿಕೆಯ ಜೊತೆ, ನಿಮ್ಮ ಸ್ವಂತ ಬೈಕಿನ ರಿಪೇರಿಗೆ ತಗುಲಿದ ವೆಚ್ಚವನ್ನೂ ಈ ಪಾಲಿಸಿ ಕವರ್ ಮಾಡುತ್ತದೆ. ಹಾಗೂ ಈ ಯೋಜನೆಯು ಬೆಂಕಿ, ಕಳವು, ನೈಸರ್ಗಿಕ ಹಾಗೂ ಮಾನವನಿರ್ಮಿತ ವಿಪಾತುಳಿಂದ ಉಂಟಾಗುವ ಬೈಕ್ ಹಾನಿಗಳನ್ನೂ ಕವರ್ ಮಾಡುತ್ತದೆ.

ಇದರೊಂದಿಗೆ, ನೀವು ನಿಮ್ಮ ಸ್ಪ್ಲೆಂಡರ್ ಟು ವೀಲರ್  ವಾಹನಕ್ಕಾಗಿ ಸ್ವಂತ ಹಾನಿಯ ಕವರ್ ಅನ್ನೂ ಪಡೆಯಬಹುದಾಗಿದೆ. ಇದೊಂದು ಹೊಸ ಇನ್ಶೂರೆನ್ಸ್ ಪಾಲಿಸಿಯಾಗಿದ್ದು, ನೀವು ನಿಮ್ಮ ಸ್ಪ್ಲೆಂಡರ್ ಟು ವೀಲರ್  ವಾಹನವನ್ನು 2018 ಸೆಪ್ಟೆಂಬರ್ ನಂತ ಖರೀದಿಸಿದ್ದರೆ ಮಾತ್ರ ಪಡೆಯಬಹುದಾಗಿದೆ. ಈ ಪಾಲಿಸಿಯು ಥೆರ್ಡ್ ಪಾರ್ಟೀ ಹೊಣೆಗಾರಿಕೆಯ ಕವರೇಜ್ ಅನ್ನು ನೀಡದೆ ಕಾಂಪ್ರಹೆನ್ಸಿವ್ ಇನ್ಶೂರೆನ್ಸ್ ನ ಲಾಭಗಳನ್ನು ಒದಗಿಸುತ್ತದೆ.

ನೀವು ಆಯ್ಕೆ ಮಾಡುವ ಪಾಲಿಸಿ ಯಾವುದೇ ಆಗಿದ್ದರೂ, ಅನಿರೀಕ್ಷ್ತ ಘಟನೆಗಳ ಸಂದರ್ಭದಲ್ಲಿ ಇದು ನಿಮ್ಮ ಆರ್ಥಿಕ ಹೊಣೆಗಾರಿಕೆಗಳನ್ನು ಗಣನೀಯವಾಗಿ ಕಡಿಮೆಗೊಳಿಸುವುದನ್ನು ದೃಢಪಡಿಸಿ.

  • ಕಸ್ಟಮೈಜ್ ಮಾಡಬಹುದಾದ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ - ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ ಅಥವಾ ನಿಮ್ಮ ಪಾಲಿಸಿ ಅಡಿಯಲ್ಲಿ ಒದಗಿಸಲಾಗುವ ಐಡಿವಿ(IDV)ಯು ನಿಮ್ಮ ಬೈಕ್ ಕಳವಾದರ ಅಥವಾ ರಿಪೇರಿಗೂ ಮೀರಿದಷ್ಟು ಹಾನಿಗೊಳಗಾದರೆ ಡಿಜಿಟ್ ನಿಮಗೆ ಪಾವತಿಸುವ ಒಂದು ಪೂರ್ವನಿರ್ಧಾರಿತ ಮೊತ್ತವಾಗಿದೆ. ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ ನ ಮೌಲ್ಯವು ಬೈಕ್ ಮಾದರಿಯ ತಯಾರಿಕರ ದರವಾಗಿದೆ, ಅದರ ಡಿಪ್ರಿಸಿಯೇಷನ್ ಮೌಲ್ಯವನ್ನು ಕಳೆದ ನಂತರ. ಡಿಜಿಟ್ ನಿಮಗೆ ಹೆಚ್ಚಿನ ಐಡಿವಿ ಅನ್ನು ನೀಡುವುದಲ್ಲದೆ ಅದನ್ನು ಕಸ್ಟಮೈಜ್ ಮಾಡುವ ಆಯ್ಕೆಯನ್ನೂ ನೀಡುತ್ತದೆ, ಇದರಿಂದಾಗಿ ನೀವು ನಿಮ್ಮ ಟು ವೀಲರ್  ವಾಹನ ಇನ್ಶೂರೆನ್ಸ್ ಪಾಲಿಸಿಯಿಂದ ಗರಿಷ್ಠ ಲಾಭಗಳನ್ನು ಪಡೆಯಬಹುದು.
  • ನೋ ಕ್ಲೈಮ್ ಬೋನಸ್ - ನೀವು ಒಮ್ಮೆ ಕೂಡಾ ನಿಮ್ಮ ಪಾಲಿಸಿಯನ್ನು ಕ್ಲೈಮ್ ಮಾಡದೆಯೇ ಸಂಪೂರ್ಣ ಇನ್ಶೂರೆನ್ಸ್ ಅವಧಿಯನ್ನು ಕಳೆಯುವಲ್ಲಿ ಯಶಸ್ವಿಯಾದರೆ ನೀವು ಎನ್ ಸಿ ಬಿ(NCB) ಅಥವಾ ನಿಮ್ಮ ಪಾಲಿಸಿ ಪ್ರೀಮಿಯಂ ಮೇಲೆ ನೋ ಕ್ಲೈಮ್ ಬೋನಸ್ ನ ಲಾಭವನ್ನು ಪಡೆಯಬಹುದಾಗಿದೆ. ಪ್ರತೀ ಸತತವಾಗಿರುವ ಕ್ಲೈಮ್ ರಹಿತ ಅವಧಿಗಳೊಂದಿಗೆ, ನೀವು ನಿಮ್ಮ ಎನ್ ಸಿ ಬಿ ಯನ್ನು ಒಟ್ಟುಗೂಡಿಸಬಹುದಾಗಿದೆ( ಇದು 50% ವರೆಗೂ ಹೋಗಬಹುದು), ನಿಮಗೆ ಕಡಿಮೆ ಇನ್ಶೂರೆನ್ಸ್ ಪ್ರೀಮಿಯಂ ಜೊತೆ ಉತ್ತಮ ಸಂರಕ್ಷಣೆಯನ್ನು ಒದಗಿಸುತ್ತಾ. ಕಂಪನಿಯ ಪಾಲಿಸಿಗಳನ್ನು ಆಯ್ಕೆ ಮಾಡಲು, ಡಿಜಿಟ್ ನ ಆಕರ್ಷಕ ಎನ್ ಸಿ ಬಿ ಕೊಡುಗೆಯು ಮತ್ತೊಂದು ಕಾರಣವಾಗಿದೆ.

ನಿಮ್ಮ ಇನ್ಶೂರೆನ್ಸ್ ಪಾಲಿಸಿಯ ಮಾರ್ಪಾಡಿಗಾಗಿ ಆಡ್-ಆನ್ ಕವರ್ ಗಳ ಲಭ್ಯತೆ - ತನ್ನ ಆಡ್-ಆನ್ ಗಳ ಸರಣಿಯೊಂದಿಗೆ ಡಿಜಿಟ್, ನೀವು ಬಯಸಿದಂತೆ ನಿಮ್ಮ ಪಾಲಿಸಿಯನ್ನು ಬದಲಿಸಲು ಅನುಮತಿ ನೀಡುತ್ತದೆ. ಈ ಪ್ರತ್ಯೇಕ ಕವರ್ ಗಳು ನಿಮ್ಮ ಬೈಕ್ ಹಾನಿಗೀಡಾದಾಗ ನಿಮ್ಮ ಆರ್ಥಿಕ ಸಂರಕ್ಷಣೆಯನ್ನು ಹೆಚ್ಚಿಸುತ್ತವೆ. ಡಿಜಿಟ್ ಟು ವೀಲರ್  ವಾಹನ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಲಭ್ಯವಿರುವ ಕೆಲ ಆಡ್-ಆನ್ ಗಳು ಹೀಗಿವೆ:

ಇಂತಹ ಹಾಗೂ ಇನ್ನೂ ಹೆಚ್ಚಿನ ಲಾಭಗಳೊಂದಿಗೆ, ಡಿಜಿಟ್ ನ ಕೈಗೆಟಕುವ ದರದ ಸ್ಪ್ಲೆಂಡರ್ ಟು ವೀಲರ್  ವಾಹನ ಇನ್ಶೂರೆನ್ಸ್ ಪಾಲಿಸಿಗಳು, ವಾಹನದ ವಿಷಯ ಬಂದಾಗ ಸಂಪೂರ್ಣ ಆರ್ಥಿಕ ಸಂರಕ್ಷಣೆಗಳನ್ನು ಒದಗಿಸುತ್ತವೆ.

ಹೀರೋ ಸ್ಪ್ಲೆಂಡರ್ ಇನ್ಶೂರೆನ್ಸ್ : ಮಾದರಿಗೆ ನಿರ್ದಿಷ್ಟವಾದ ಪಾಲಿಸಿಗಳು

ಹೀರೋ ಮೋಟಾರ್ ಕಾರ್ಪ್ ಇಂದಿನವರೆಗೆ ಆರು ಸ್ಪ್ಲೇಂಡರ್ ಮಾದರಿಗಳನ್ನು ಲಾಂಚ್ ಮಾಡಿದೆ; ಸ್ಪ್ಲೆಂಡರ್ ಪ್ಲಸ್,  ಸ್ಪ್ಲೆಂಡರ್ ಪ್ರೋ, ಸ್ಪ್ಲೆಂಡರ್ ಪ್ರೋ ಕ್ಲಾಸಿಕ್, ಸ್ಪ್ಲೆಂಡರ್ ಐಸ್ಮಾರ್ಟ್, ಸೂಪರ್ ಸ್ಪ್ಲೆಂಡರ್ ಹಾಗೂ ಸ್ಪ್ಲೆಂಡರ್ ಐಸ್ಮಾರ್ಟ್ 110.

  • ಸ್ಪ್ಲೆಂಡರ್ ಪ್ಲಸ್ : ಎಲ್ಲಾ ಸ್ಪ್ಲೆಂಡರ್ ರೂಪಾಂತರಗಳಿಗಿಂತ ಹಳೆಯದು ಇದಾಗಿದ್ದು, ಇದರ ವಿನ್ಯಾಸವು 1995 ರಲ್ಲಾದ ಇದರ ಲಾಂಚ್ ನ ಸಮಯದಿಂದ ಬದಲಾಗದೇ ಉಳಿದಿದೆ. ಇದು 97.2ಸಿಸಿ ಫ಼ೋರ್-ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಡಿಜಿಟ್ ನ ಹೀರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ಇನ್ಶೂರೆನ್ಸ್ ಯೋಜನೆಯು ಇದಕ್ಕೆ ಸಮರ್ಪಕವಾಗಿ ಕವರ್ ಅನ್ನು ನೀಡುತ್ತದೆ, ಹಾನಿಯಾದ ಭಾಗಗಳನ್ನು ಬದಲಿಸಿ ನಿಮ್ಮ ವಿಶ್ವಾಸಾಹ್ರ ಬೈಕಿನ ಸ್ವರೂಪವನ್ನು ಕಾಪಾಡಿ.
  • ಹೀರೋ ಸ್ಪ್ಲೆಂಡರ್ ಪ್ಲಸ್ ಐ3ಎಸ್ -  ಸ್ಪ್ಲೆಂಡರ್ ಪ್ಲಸ್ ಐ3ಎಸ್ ಹೀರೋದ ಮತ್ತೊಂದು ಕೈಗೆಟಕುವ ದನಂದಿನ ಪ್ರಯಾಣದ ಮಾದರಿಯಾಗಿದೆ. ಇದು 97.2 ಸಿಸಿ ಎಂಜಿನ್ ಹಾಗೂ 4-ಸ್ಪೀಡ್ ಟ್ರಾನ್ಸ್ಮಿಷನ್ ಅನ್ನು ಹೊಂದಿದೆ. ನೀವು ಈ ಬೈಕನ್ನು ಖರೀದಿಸುವಾಗ ಮೂರು ವಿವಿಧ ಬಣ್ಣಗಳಿಂದ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
  • ಸ್ಪ್ಲೆಂಡರ್ ಐಸ್ಮಾರ್ಟ್ 110 - ಉನ್ನತ ಸ್ವರೂಪ ಹಾಗೂ ಗ್ರಾಫಿಕ್ಸ್ ಅನ್ನು ಇದು ಹೊಂದಿದ್ದು, ಸುಧಾರಿತ, ಫೋರ್-ಸ್ಟ್ರೋಕ್  110cc ಎಂಜಿನ್ ಹಾಗೂ ಸಿಂಗಲ್ ಸಿಲಿಂಡರ್ ನ ಹೆಗ್ಗಳಿಕೆಯನ್ನೂ ಪಡೆದಿದೆ. ನವೀನ ಐ3ಎಸ್ ತಂತ್ರಜ್ಞಾನದ ವೈಶಿಷ್ಟ್ಯದೊಂದಿಗೆ ಇದು, ಬಜೆಟ್ ಸ್ನೇಹಿ ವರ್ಗಕ್ಕೆ ಸೇರಿದ್ದರೂ ಪ್ರೀಮಿಯಂ ಅನುಭವವನ್ನು ನೀಡುತ್ತದೆ. 

ನೀವು ಆರು ಸ್ಪ್ಲೆಂಡರ್ ಮಾದರಿಗಳಲ್ಲಿ ಯಾವುದನ್ನು ಹೊಂದಿದ್ದರೂ, ಡಿಜಿಟ್ ನ ಇನ್ಶೂರೆನ್ಸ್ ಪಾಲಿಸಿ ಪಡೆದ ಮೇಲೆ ನೆಮ್ಮದಿಯನ್ನು ಹೊಂದುತ್ತೀರಿ.

ಬೈಕ್ ನ ಬಗ್ಗೆ ಚಿಂತಿಸುವುದನ್ನು ಬಿಟ್ಟು, ರೈಡ್ ಅನ್ನು ಎಂಜಾಯ್ ಮಾಡಿ!

ಹೀರೋ ಸ್ಪ್ಲೆಂಡರ್ - ರೂಪಾಂತರಗಳು ಹಾಗೂ ಎಕ್ಸ್- ಶೋರೂಂ ದರ

ರೂಪಾಂತರಗಳು ಎಕ್ಸ್- ಶೋರೂಂ ದರ( ನಗರದೊಂದಿಗೆ ಬದಲಾಗಬಹುದು)
ಸ್ಪ್ಲೆಂಡರ್ ಪ್ಲಸ್ ಕಿಕ್ ಎಲಾಯ್, 97.2 ಸಿಸಿ ₹ 51,790
ಸ್ಪ್ಲೆಂಡರ್ ಪ್ಲಸ್ ಸೆಲ್ಫ್ ಎಲಾಯ್, 97.2 ಸಿಸಿ ₹ 53,790
ಸ್ಪ್ಲೆಂಡರ್ ಪ್ಲಸ್ ಐ3ಎಸ್, 97.2 ಸಿಸಿ ₹ 55,200
ಸ್ಪ್ಲೆಂಡರ್ ಪ್ಲಸ್ ಐಬಿಎಸ್ ಐ3ಎಸ್, 97.2 ಸಿಸಿ ₹ 55,600
ಸೂಪರ್ ಸ್ಪ್ಲೆಂಡರ್ ಎಸ್ ಡಿ ಎ, 124.7 ಸಿಸಿ ₹ 59,650
ಸೂಪರ್ ಸ್ಪ್ಲೆಂಡರ್ ಎಸ್ ಡಿ ಎ ಎಸ್ ಎಕ್ಸ್ 124.7 ಸಿಸಿ ₹ 60,250

ಭಾರತದಲ್ಲಿ ಹೀರೋ ಸ್ಪ್ಲೆಂಡರ್ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ನಾನು ನಾನು ನನ್ನ ಸ್ಪ್ಲೆಂಡರ್ ಬೈಕ್ ಇನ್ಶೂರೆನ್ಸ್ ಪಾಲಿಸಿಯ ಐಡಿವಿ(IDV) ಅನ್ನು ಕ್ಯಾಲ್ಕುಲೇಟ್ ಮಾಡಬಹುದೇ?

ಹೌದು. ನೀವು ನಿಮ್ಮ ಇನ್ಶೂರೆನ್ಸ್ ಪಾಲಿಸಿಯ ಅಂದಾಜು ಐಡಿವಿ ಅನ್ನು ಕಂಡುಹಿಡಿಯಬಹುದಾಗಿದೆ. ನಿಮ್ಮ ಬೈಕ್ ನ ಮಾದರಿ, ತಯಾರಕರು ಉಲ್ಲೇಖಿಸಿದ ದರ ಹಾಗೂ ಡಿಪ್ರಿಸಿಯೇಷನ್ ನ ಆಧಾರದ ಮೇಲೆ. ಲೆಕ್ಕವನ್ನು ಸರಳೀಕರಿಸಲು ನೀವು ಆನ್ಲೈನ್ ಐಡಿವು ಕ್ಯಾಲ್ಕುಲೇಟರ್ ಗಳನ್ನೂ ಬಳಸಬಹುದು.

ನಾನು ನನ್ನ ನೋ ಕ್ಲೈಮ್ ಬೋನಸ್ ಅನ್ನು ಹೊಸ ಇನ್ಶೂರೆನ್ಸ್ ಪ್ರೊವೈಡರ್ ಗೆ ವರ್ಗಾಯಿಸಬಹುದೇ?

ನೀವು ಹೊಸ ಪ್ರೊವೈಡರ್ ಅನ್ನು ಹೊಂದಿದ ಮಾತ್ರಕ್ಕೆ ನಿಮ್ಮ ಪ್ರಸ್ತುತ ಎನ್ ಸಿ ಬಿ(NCB) ಲಾಭವನ್ನು ಬಿಡಬೇಕಾಗಿಲ್ಲ. ನಿಮ್ಮ ಸಂಗ್ರಹಿತ  ಎನ್ ಸಿ ಬಿ(NCB) ಯು ನಿಮ್ಮ ಹೊಸ ಯೋಜನೆಯೊಂದಿಗೆ ಹೊಂದಿಕೊಳ್ಳಬೇಕಾದ ಸಲುವಾಗಿ ನೀವು ಕೇವಲ ನಿಮ್ಮ ಹೊಸ ಇನ್ಶೂರೆನ್ಸ್ ಪ್ರೊವೈಡರ್ ಗೆ ಇದರ ಬಗ್ಗೆ ತಿಳಿಸಬೇಕಾಗುತ್ತದೆ.

ಸ್ಪ್ಲೆಂಡರ್ ಟು ವೀಲರ್ ವಾಹನ ಇನ್ಶೂರೆನ್ಸ್ ಪಾಲಿಸಿಯಲ್ಲಿ ಡಿಡಕ್ಟಿಬಲ್ ಗಳು ಎಂದರೇನು?

ಡಿಡಕ್ಟಿಬಲ್ ಎಂದರೆ, ಪಾಲಿಸಿದಾರರು ಅವರ ಇನ್ಶೂರೆನ್ಸ್ ಅನ್ನು ಕ್ಲೈಮ್ ಮಾಡುವ ಮೊದಲು, ಬೈಕ್ ರಿಪೇರಿಗಾಗಿ ಪಾವತಿಸಬೇಕಾದ ಪೂರ್ವನಿರ್ಧಾರಿತ ಮೊತ್ತವಾಗಿದೆ. ಡಿಡಕ್ಟಿಬಲ್ ಗಳು ಪಾಲಿಸಿ ಪ್ರೀಮಿಯಂ ಅನ್ನು ಕಡಿಮೆಗೊಳಿಸಲು ಸಹಾಯ ಮಾಡುತ್ತವೆ, ಆದರೆ ಟು ವೀಲರ್  ವಾಹನ ಅಪಘಾತದ ಸಂದರ್ಭದಲ್ಲಿ ನಿಮ್ಮ ಆರ್ಥಿಕ ಹೊಣೆಗಾರಿಕೆಗಳನ್ನೂ ಹೆಚ್ಚಿಸುತ್ತದೆ.

ನನ್ನ ಸೆಕೆಂಡ್-ಹ್ಯಾಂಡ್ ಸ್ಪ್ಲೆಂಡರ್ ಬೈಕಿಗೆ ಇನ್ಶೂರೆನ್ಸ್ ನ ಅಗತ್ಯವಿದೆಯೇ?

ಹೌದು. ನಿಮ್ಮ ಸೆಕೆಂಡ್-ಹ್ಯಾಂಡ್ ಬೈಕ್ ಅನ್ನು ಇನ್ಶೂರ್ ಮಾಡುವುದು ಜಾಣ್ಮೆಯ ವಿಷಯ ಮಾತ್ರವಲ್ಲದೇ ಕಾನೂನಾತ್ಮಕವಾಗಿ ಕಡ್ಡಾಯವೂ ಆಗಿದೆ. ಮೋಟಾರ್ ವಾಹನ ಅಧಿನಿಯಮ 1988 ರ ಪ್ರಕಾರ, ಸರಿಯಾದ ಇನ್ಶೂರೆನ್ಸ್ ಕವರ್ ಇಲ್ಲದೆಯೇ ನೀವು ನಿಮ್ಮ ಸ್ಪ್ಲೆಂಡರ್ ಬೈಕ್ ಅನ್ನು ಚಲಾಯಿಸಿದರೆ ಕಾನೂನಿನ ಉಲ್ಲಂಘನೆಯಾಗುತ್ತದೆ.