25 ವರ್ಷಗಳ ಹಿಂದೆಯೇ ಪರಿಚಯಿಸಲಾಗಿದ್ದು, ಹೀರೋ ಸ್ಪ್ಲೆಂಡರ್, ಹೀರೋ ನ ಟು ವೀಲರ್ ವಾಹನಗಳ ಆಕರ್ಷಕ ಸಾಲುಗಳಲ್ಲಿ ಒಂದು ಉತ್ತಮ ಸೇರ್ಪಡೆಯಾಗಿ ಹೊರಹೊಮ್ಮಿತ್ತು. ಅದರ ಕೈಗೆಟಕುವ ದರಗಳಿಂದ ಹಾಗೂ ಉತ್ತಮ ಸಾಮರ್ಥ್ಯದಿಂದ, ಸ್ಪ್ಲೆಂಡರ್ ಸ್ವಲ್ಪ ಸಮಯದಲ್ಲೇ ಮನೆಮಾತಾಗಿತ್ತು.
ಇದರ ಜೊತೆ, ಅದು ಲಾಂಚ್ ಆದಾಗ, ಅದರ ವಿನೂತನ ತಂತ್ರಜ್ಞಾವಾದ, ಭಾರತದಲ್ಲಿ ಎಂದೂ ಕೇಳರಿಯದ, ಎಲೆಕ್ಟ್ರಾನಿಕ್ ಇಗ್ನಿಷನ್ ವ್ಯವಸ್ಥೆಯಿಂದ ಈ ಉದ್ಯಮದಲ್ಲಿ ಕ್ರಾಂತಿಯನ್ನೇ ತಂದಿತ್ತು.
- ಇಂದು, ನೀವು ಹಲವು ಸ್ಪ್ಲೆಂಡರ್ ಮಾದರಿಗಳಿಂದ ಆಯ್ಕೆ ಮಾಡಬಹುದು , ಇವೆಲ್ಲವೂ 80 ಕಿಮಿ/ಲಿ ಆಸುಪಾಸಿನ ಮೈಲೇಜ್ ಅನ್ನು ನೀಡುತ್ತದೆ. ಶಕ್ತಿಶಾಲಿ 4-ಸ್ಟ್ರೋಕ್ ಸಿಂಗಲ್-ಸಿಲಿಂಡರ್ 97 ಸಿಸಿ ಎಂಜಿನ್ ದೈನಂದಿನ ಬಳಕೆಗೆ ಉತ್ತಮವಾಗಿದ್ದು, ಪ್ರತಿದಿನದ ಪ್ರಯಾಣಕ್ಕೆ ಸೂಕ್ತ ವಾಹನವಾಗಿದೆ.
- ಹಲವು ಪ್ರಶಸ್ತಿಗಳಿಗೆ ಪಾತ್ರವಾಗಿದ್ದು, ಹೀರೋ ಸ್ಪ್ಲೆಂಡರ್ ಶ್ರೇಣಿಯು ವಿಮರ್ಶಕ ಹಾಗೂ ಅದರ ಬಳಕೆದಾರ ಇಬ್ಬರನ್ನೂ ಪ್ರಭಾವಿತಗೊಳಿಸುವಲ್ಲಿ ಯಶಸ್ವಿಯಾಗಿದೆ.
- 2006 ರಲ್ಲಿ ಇಟಿ ಬ್ರ್ಯಾಂಡ್ ಇಕ್ವಿಟಿ ಸರ್ವೇ ಪ್ರಕಾರ ಸ್ಪ್ಲೆಂಡರ್ ಟು ವೀಲರ್ -ವಾಹನ ವರ್ಗದಲ್ಲಿ ಎರಡು ಟಾಪ್ ಮಾದರಿಗಳಲ್ಲಿ ಒಂದಾಗಿತ್ತು. 2016 ರಲ್ಲಿ ಜೆ.ಡಿ ಪವರ್ ಇಂಡಿಯಾ, ಹೀರೋ ಸೂಪರ್ ಸ್ಪ್ಲೆಂಡರ್ ಅನ್ನು ಉತ್ತಮ ಎಕ್ಸೆಕ್ಯೂಟಿವ್ ಮೋಟರ್ ಸೈಕಲ್ ಎಂದು ಘೋಷಿಸಿತ್ತು. (2)
- ನವೆಂಬರ್ 2019 ರಲ್ಲಿ, ಕಂಪನಿಯು ಈ ಜನಪ್ರಿಯ ಬೈಕಿನ BS-VI ಕಂಪ್ಲಾಯಂಟ್ ರೂಪವನ್ನು ಪರಿಚಯಿಸಿತು. ಸ್ಪ್ಲೆಂಡರ್ ಐಸ್ಮಾರ್ಟ್ ಎಂಬ ಹೆಸರನ್ನು ಪಡೆದ ಇದು, ವಾಹನ ಚಲಿಸುವಾಗ ಹೊರಹೊಮ್ಮುವ ಅಪಾಯಕಾರಿ ಹೊಗೆಗಳನ್ನು ನಿಯಂತ್ರಿಸುತ್ತದೆ. (3)
ಆದ್ದರಿಂದಲೇ, ಸ್ಪ್ಲೆಂಡರ್ ನಿಮ್ಮ ಹೆಮ್ಮೆ ಹಾಗೂ ಸಂರಕ್ಷಣೆಗೆ ಯೋಗ್ಯವಾದ ಬೈಕ್ ಆಗಿದೆ. ನಿಮ್ಮ ವಾಹನಕ್ಕಾಗುವ ಯಾವುದೇ ಹಾನಿಯು ಅದರ ರಿಪೇರಿಗಳಿಂದಾಗಿ ಆರ್ಥಿಕ ಹೊಣೆಗಾರಿಕೆಗಳಿಗೆ ಕಾರಣವಾಗುತ್ತದೆ. ಆದರೆ, ಅಪಘಾತಗಳು ಭಾರತದಲ್ಲಿ ಸಾಮಾನ್ಯವಾಗಿವೆ. ಆದ್ದರಿಂದ, ಒಂದು ಹೀರೋ ಸೂಪರ್ ಸ್ಪ್ಲೆಂಡರ್ ಇನ್ಶೂರೆನ್ಸ್ ಯೋಜನೆಯನ್ನು ಆಯ್ಕೆ ಮಾಡುವುದು ಒಂದು ಉತ್ತಮ ನಿರ್ಧಾರವಾಗಿದೆ.
ನೀವು ನಿಮ್ಮ ಬೈಕಿಗಾಗಿ ಇನ್ಶೂರೆನ್ಸ್ ಕವರ್ ಅನ್ನು ಖರೀದಿಸುವಾಗಲೂ, ಉತ್ತಮ ಇನ್ಶೂರೆನ್ಸ್ ಪ್ರೊವೈಡರ್ ಅನ್ನು ನಿರ್ಧರಿಸುವುದು ಮುಖ್ಯವಾಗುತ್ತದೆ. ಡಿಜಿಟ್ ಗೊಂದಲರಹಿತವಾದ ವಿಶ್ವಾಸಾಹ್ರ, ಕಾಗದರಹಿತ ಇನ್ಶೂರೆನ್ಸ್ ಅನ್ನು ಒದಗಿಸುತ್ತದೆ.
ಆದರೆ, ಡಿಜಿಟ್ ನ ಇನ್ಶೂರೆನ್ಸ್ ಅನ್ನು ಪಡೆದ ನಂತರ ಅದರ ಲಾಭಗಳನ್ನು ಪಡೆಯುವುದು ಹೇಗೆ? ಸರಿ, ನೋಡೋಣ.