ಹೋಂಡಾ ಆಕ್ಟಿವಾ ಖರೀದಿಸಲು ಬಯಸುತ್ತಿರುವಿರಾ? ಮಾಡೆಲ್ ವೇರಿಯಂಟ್ಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ. ಯಾವ ವಿಷಯಗಳು ಇವನ್ನು ಅಪೇಕ್ಷಿತಗೊಳಿಸುತ್ತದೆ ಮತ್ತು ಹೋಂಡಾ ಆಕ್ಟಿವಾ ಇನ್ಶೂರೆನ್ಸ್ ಪಾಲಿಸಿಯಲ್ಲಿ ನೀವು ಗಮನಿಸಬೇಕಾದ ವಿಷಯಗಳು ಇಲ್ಲಿವೆ!
ಹೋಂಡಾ ಆಕ್ಟಿವಾ ವಾಹನವು, ಹೋಂಡಾ ಮೋಟಾರ್ ಕಂಪನಿಯ ಬೈಕ್/ಸ್ಕೂಟರ್ ವಲಯದಲ್ಲಿ ಅತಿ ಹೆಚ್ಚು ಮಾರಾಟವಾಗುವ ವಾಹನವಾಗಿದ್ದು, ಭಾರತೀಯ ಟು ವೀಲರ್ ವಾಹನಗಳ ಮಾರಾಟದಲ್ಲಿ 14% ಕ್ಕಿಂತ ಹೆಚ್ಚು ಪಾಲು ಹೊಂದಿದೆ. ಕೈಗೆಟುಕುವ, ಸೊಗಸಾದ ಮತ್ತು ತಾಂತ್ರಿಕತೆಯ ಅದ್ಭುತಗಳ ಕಾರಣಕ್ಕೆ, ಆಕ್ಟಿವಾ ವಾಹನವು ಸರಾಸರಿ ಭಾರತೀಯ ಗ್ರಾಹಕರಿಂದ ಎಲ್ಲ ಸರಿಯಾದ ಬಾಕ್ಸ್ಗಳನ್ನು ಟಿಕ್ ಮಾಡಿಸುತ್ತದೆ. (1)
ಈಗ ನೀವು ಈ ಮಾಡೆಲ್ ಅನ್ನು ಖರೀದಿಸಲು ನಿರ್ಧರಿಸಿದ್ದೀರಿ, ಆಕ್ಟಿವಾ ಇನ್ಶೂರೆನ್ಸ್ ಖರೀದಿಸುವುದು ಮುಂದಿನ ತಾರ್ಕಿಕ ಹಂತವಾಗಿದೆ. ಆಕ್ಟಿವಾದ ಪ್ರತಿಯೊಂದು ಮಾಡೆಲ್ ಇನ್ನೂ BS-VI ಕಂಪ್ಲೈಂಟ್ ಆಗಿಲ್ಲ. ಆದಾಗ್ಯೂ, ಈ ವಿಶೇಷತೆಗಳನ್ನು ಒಳಗೊಂಡಂತೆ ಹೆಚ್ಚಿನ ಮಾಡೆಲ್'ಗಳನ್ನು ಬಿಡುಗಡೆ ಮಾಡಲು ಹೋಂಡಾ ಯೋಜಿಸುತ್ತಿದೆ.
ಈಗ, ಹೋಂಡಾ ಆಕ್ಟಿವಾ ವಾಹನವು ಉದ್ಯಮ-ಪ್ರಥಮ ವೈಶಿಷ್ಟ್ಯಗಳನ್ನು ಹೊಂದಿದ್ದರೂ ಸಹ, ಇದು ಯಾವುದೇ ಇತರ ಟು ವೀಲರ್ ವಾಹನಗಳಂತೆ ಅಪಘಾತಗಳು ಮತ್ತಿತರ ಅಪಾಯಗಳಿಗೆ ಗುರಿಯಾಗುತ್ತದೆ. ಇಲ್ಲಿ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು ಮುಖ್ಯವಾಗುತ್ತದೆ.
ಇದಲ್ಲದೆ, ಭಾರತೀಯ ರಸ್ತೆಗಳಲ್ಲಿ ಸಂಚರಿಸುವ ಪ್ರತಿಯೊಂದು ಟು ವೀಲರ್ ಮೋಟಾರ್ ವಾಹನವು, 'ಥರ್ಡ್ ಪಾರ್ಟಿ ಲೈಬಿಲಿಟಿ ಇನ್ಶೂರೆನ್ಸ್ ಪಾಲಿಸಿಯನ್ನು' ಹೊಂದುವುದು ಕಾನೂನುಬದ್ಧವಾಗಿ ಖಡ್ಡಾಯವಾಗಿದೆ. ಈ ಪಾಲಿಸಿ ಇಲ್ಲದಿದ್ದರೆ, ಮೋಟಾರ್ ವೆಹಿಕಲ್ (ತಿದ್ದುಪಡಿ) ಆಕ್ಟ್ 2019 ರ ಪ್ರಕಾರ, ನಿಮಗೆ 2000 ರೂಗಳ ದಂಡ ವಿಧಿಸಬಹುದು. ಮತ್ತು ಪುನರಾವರ್ತಿತ ಅಪರಾಧಕ್ಕಾಗಿ 4000 ರೂಗಳ ದಂಡ ವಿಧಿಸಬಹುದು.
ಆದರೆ, ನಾವು ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಗಳ ಬಗ್ಗೆ ಹೆಚ್ಚು ಪರಿಶೀಲಿಸುವ ಮೊದಲು, ಒಂದು ನಿಮಿಷ ಕಾಯಿರಿ!
ಹೋಂಡಾ ಆಕ್ಟಿವಾ ಕುರಿತು ಕೆಲವು ಆಸಕ್ತಿದಾಯಕ ಸಂಗತಿಗಳನ್ನು ನೋಡೋಣ. ಆಕ್ಟಿವಾ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯಿಂದ ನಿಮ್ಮ ಪ್ರಯೋಜನಗಳನ್ನು ನೀವು ಹೇಗೆ ಗರಿಷ್ಠಗೊಳಿಸಬಹುದು ಮತ್ತು ನೀವು ಪಾಲಿಸಿಯನ್ನು ಪಡೆದುಕೊಳ್ಳಲು ಬಯಸುವ ರೂಪಾಂತರಗಳು.