ನೀವು ಹೋಂಡಾ ಶೈನ್ ಅನ್ನು ಖರೀದಿಸಿದ್ದರೆ, ಅದಕ್ಕಾಗಿ ನೀವು ಟು-ವೀಲರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವ ಬಗ್ಗೆ ಎಲ್ಲವನ್ನೂ ಕಲಿಯಬೇಕಾಗುತ್ತದೆ. ನಿಮ್ಮ ಬೈಕ್ಗೆ ಆಗುವ ಎಲ್ಲಾ ಹಾನಿಗಳಿಂದ ನೀವು ಆರ್ಥಿಕವಾಗಿ ರಕ್ಷಿಸಲ್ಪಟ್ಟಿದ್ದೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಲು, ಹೋಂಡಾ ಶೈನ್ ಟು-ವೀಲರ್ ಇನ್ಶೂರೆನ್ಸ್ ಪಾಲಿಸಿಯ ಕುರಿತು ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ನಾವು ಸಂಕ್ಷಿಪ್ತವಾಗಿ ತಿಳಿಸಿದ್ದೇವೆ!
ಹೋಂಡಾ ಶೈನ್ ಭಾರತದಲ್ಲಿ ಹೊಂಡಾ ಮೋಟಾರ್ ಕಂಪನಿ ತಯಾರಿಸಿದ ಅತ್ಯಂತ ಜನಪ್ರಿಯ ಟು-ವೀಲರ್ಗಳಲ್ಲಿ ಒಂದಾಗಿದೆ. ದೈನಂದಿನ ಓಡಾಟಕ್ಕಾಗಿ ತಮ್ಮ ಬೈಕನ್ನು ಬಳಸುವ ಜನರಿಗೆ ಹಾರ್ಡಿ ವಾಹನವು ಪರಿಪೂರ್ಣ ಆಯ್ಕೆಯಾಗಿದೆ. ಬಾಂಗ್ಲಾದೇಶ್ ಹೋಂಡಾ ಪ್ರೈವೇಟ್ ಲಿಮಿಟೆಡ್ ಮತ್ತು ಹೋಂಡಾ ಮೋಟಾರ್ಸೈಕಲ್ ಅಂಡ್ ಸ್ಕೂಟರ್, ಇಂಡಿಯಾ ದ ಸಹಯೋಗದಲ್ಲಿ ವಿನ್ಯಾಸಗೊಳಿಸಿದ ಹೋಂಡಾ ಶೈನ್ ಭಾರತೀಯ ಮಾರುಕಟ್ಟೆಗಳಿಗೆ 2006 ರಲ್ಲಿ ಕಾಲಿಟ್ಟಿತು.
ಈಗ, ನೀವು ಹೋಂಡಾ ಶೈನ್ ಖರೀದಿಸಲು ಯೋಚಿಸುತ್ತಿದ್ದರೆ, ಅದಕ್ಕೆ ಸಂಬಂಧಪಟ್ಟ ಪ್ರಮುಖ ಅಂಶಗಳಲ್ಲಿ ಒಂದನ್ನು ನೀವು ಕಲಿಯಬೇಕಾಗುತ್ತದೆ - ಟು-ವೀಲರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು.
ಹೋಂಡಾ ಶೈನ್ ಟು-ವೀಲರ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಬೈಕ್ ಅಪಘಾತಕ್ಕೀಡಾದರೆ, ಕಳ್ಳತನವಾದರೆ ಅಥವಾ ಇನ್ನಾವುದೇ ಹಾನಿಗೊಳಗಾದರೆ, ಅದರಿಂದ ಉಂಟಾಗಬಹುದಾದ ಆರ್ಥಿಕ ಹೊಣೆಗಾರಿಕೆಗಳ ವಿರುದ್ಧ ರಕ್ಷಣೆ ನೀಡಲು ಇದು ಅಗತ್ಯವಾಗಿದೆ.
ಇದಲ್ಲದೆ, ಮೋಟಾರ್ ವೆಹಿಕಲ್ ಆಕ್ಟ್ 1988 ರ ಅಡಿಯಲ್ಲಿ, ಕನಿಷ್ಠ ಥರ್ಡ್ ಪಾರ್ಟಿ ಲೈಬಿಲಿಟಿ ಇನ್ಶೂರೆನ್ಸ್ ಪಾಲಿಸಿಯ ಪಡೆಯುವುದು ಕಡ್ಡಾಯವಾಗಿದೆ. ನಿಮ್ಮ ಹೋಂಡಾ ಅನ್ನು ಓಡಿಸುವಾಗ ನೀವು ವ್ಯಾಲಿಡ್ ಆಗಿರುವ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿಲ್ಲದಿದ್ದರೆ, ನೀವು ₹2000 ಗಳ ಟ್ರಾಫಿಕ್ ದಂಡ ಪಾವತಿಸಬೇಕಾಗುತ್ತದೆ. (ಪುನರಾವರ್ತಿತ ಅಪರಾಧಕ್ಕೆ ₹ 4000).